ಹೈದರಾಬಾದ್ ಕರ್ನಾಟಕ ಪ್ರದೇಶ

ಹೈದರಾಬಾದ್ ಕರ್ನಾಟಕ ಪ್ರದೇಶ
Hyderabad Karnataka

ಗುರುವಾರ, ಮಾರ್ಚ್ 13, 2025

NPS Calculator: ನಿವೃತ್ತಿ ನಂತರ ನೀವೆಷ್ಟು ಪೆನ್ಷನ್ ಪಡೆಯುತ್ತೀರಿ ಎಂದು ತಿಳಿಯಬೇಕೆ? ಈ ರೀತಿ ಲೆಕ್ಕ ಹಾಕಿ..!

NPS Calculator: ನಿವೃತ್ತಿ ನಂತರ ನೀವೆಷ್ಟು ಪೆನ್ಷನ್ ಪಡೆಯುತ್ತೀರಿ ಎಂದು ತಿಳಿಯಬೇಕೆ? ಈ ರೀತಿ ಲೆಕ್ಕ ಹಾಕಿ..!

ನ್ಯಾಷನಲ್ ಪೆನ್ಷನ್ ಸಿಸ್ಟಮ್‌ ಒಂದು ಮಹತ್ವದ ಯೋಜನೆಯಾಗಿದೆ. ಭಾರತ ಸರ್ಕಾರದಿಂದ ಪ್ರಾಯೋಜಿತವಾದ ಈ ಯೋಜನೆ, ನಿವೃತ್ತಿ ಹೂಡಿಕೆಯನ್ನು ಪ್ರತಿನಿಧಿಸುತ್ತದೆ. ನಿವೃತ್ತಿ ನಂತರದ ಬದುಕಿಗೆ ಇದೊಂದು ಉಪಯೋಗಕರ ಯೋಜನೆಯಾಗಿದ್ದು, ಇದರ ಮುಖ್ಯ ಉದ್ದೇಶ ನಿವೃತ್ತಿ ಬಳಿಕ ಹಣಕಾಸು ಭದ್ರತೆ ಒದಗಿಸುವುದಾಗಿದೆ.

ಅಲ್ಲದೇ ಇದೊಂದು ಕಾಂಟ್ರಿಬ್ಯೂಷನ್‌ ಆಧಾತಿತ ಯೋಜನೆಯಾಗಿದೆ. ಈಗ ಇಂತಿಷ್ಟು ಮೊತ್ತವನ್ನು ಹೂಡಿಕೆ ಮಾಡಿದರೆ, ಈ ಹೂಡಿಕೆಗೆ ಲಭ್ಯವಾಗುವ ಲಾಭದ ಆಧಾರದಲ್ಲಿ ನಿವೃತ್ತಿ ವೇಳೆಗೆ ಪೆನ್ಷನ್‌ ಲಭಿಸುವ ಒಂದು ಯೋಜನೆಯಾಗಿದೆ.

ನಿವೃತ್ತಿ ನಂತರದ ಬದುಕಿಗೆ ಆರ್ಥಿಕ ಭದ್ರತೆ ಒದಗಿಸುವ ಈ ಯೋಜನೆಯನ್ನು ಕ್ಯಾಲ್ಕುಲೇಟ್‌ ಮಾಡುವುದು ಉತ್ತಮ..ಅಂದರೆ ಎನ್‌ಪಿಎಸ್‌ ಕ್ಯಾಲ್ಕುಲೇಟರ್‍‌ ಮೂಲಕ ನಿಮ್ಮ ನಿವೃತ್ತಿ ನಂತರದ ಪೆನ್ಷನ್‌ ಲೆಕ್ಕಹಾಕುವುದು. ನೀವು ನಿವೃತ್ತಿ ಸಮಯದಲ್ಲಿ ಸಂಗ್ರಹಿಸಿಕೊಳ್ಳುವ ಒಟ್ಟು ಮೊತ್ತ, ಹಾಗೂ ಪ್ರ್‍ತಿ ಪ್ರತಿ ತಿಂಗಳ ಪೆನ್ಷನ್ ಎಷ್ಟು ಸಿಗಬಹುದು ಎಂಬುದರ ಅಂದಾಜು ಲಭಿಸುತ್ತದೆ. ನಿಮ್ಮ ನಿವೃತ್ತಿಯ ವೇಳೆಗೆ ಸಂಗ್ರಹಿಸಲಾದ ಮೊತ್ತವು ನಿಮ್ಮ ಹೂಡಿಕೆಯ ಮೊತ್ತ, ನಿಮ್ಮ ಹೂಡಿಕೆಯ ಅವಧಿ, ಯೋಜನೆಯಿಂದ ಲಭ್ಯವಿರುವ ವಾರ್ಷಿಕ ಲಾಭದ ಶೇಕಡ ಪ್ರಮಾಣದ ಮೇಲೆ ಅವಲಂಬಿತವಾಗಿರುತ್ತದೆ.

NPS ಕ್ಯಾಲ್ಕುಲೇಟರ್ ಹೇಗೆ ಕಾರ್ಯನಿರ್ವಹಿಸುತ್ತದೆ?

NPS ಕ್ಯಾಲ್ಕುಲೇಟರ್ ಚಕ್ರಬಡ್ಡಿ ಲೆಕ್ಕಾಚಾರದ ಆಧಾರದಲ್ಲಿ ನಿಮ್ಮ ಹೂಡಿಕೆ ಮೊತ್ತವನ್ನು ಲೆಕ್ಕ ಹಾಕುತ್ತದೆ. ಉದಾಹರಣೆಗೆ ಒಬ್ಬ ವ್ಯಕ್ತಿಯ ವಯಸ್ಸು 30 ವರ್ಷ ಆಗಿದ್ದರೆ, ನಿವೃತ್ತಿ ವಯಸ್ಸು 60 ವರ್ಷಕ್ಕೆ ಲೆಕ್ಕ ಹಾಕಬೇಕಾಗುತ್ತದೆ. ಆ ವ್ಯಕ್ತಿಯ ಮಾಸಿಕ ಹೂಡಿಕೆ ₹5,000 ಎಂದರೆ, ನಿರೀಕ್ಷಿತ ಲಾಭದ ಶೇಕಡ ಪ್ರಮಾಣ ವರ್ಷಕ್ಕೆ 10% ಆಗಿರುತ್ತದೆ. ಹಾಗೆಯೇ ಪೆನ್ಷನ್‌ ಪ್ಲಾನ್‌ಗೆ ಹೂಡಿಕೆ ಮಾಡಬೇಕಾದ ಶೇಕಡ ಪ್ರಮಾಣ 40% ಆಗಿರುತ್ತದೆ. ನಿರೀಕ್ಷಿತ ಆನುಯಿಟಿ ಲಾಭದ ಶೇಕಡ ಪ್ರಮಾಣ 6% ಆಗಿರುತ್ತದೆ. ನಿವೃತ್ತಿ ಸಮಯದಲ್ಲಿ ಸಿಗುವ ಒಟ್ಟು ಮೊತ್ತ ಸುಮಾರು ₹1.14 ಕೋಟಿಗಳಾಗಿದ್ದರೆ, ಪ್ರತಿ ತಿಂಗಳ ನಿರೀಕ್ಷಿತ ಪೆನ್ಷನ್ ಮೊತ್ತ ಸುಮಾರು ₹22,800 ಆಗಿರಬಹುದು ಎಂದು ಅಂದಾಜಿಸಬಹುದಾಗಿದೆ.

NPS ಕ್ಯಾಲ್ಕುಲೇಟರ್ ಬಳಸಲು ಏನು ಅರ್ಹತೆ ಇರಬೇಕು..?

ಎನ್‌ಪಿಎಸ್‌ ಕ್ಯಾಲ್ಕುಲೇಟರ್‍‌ನ ಯಾರು ಬೇಕಾದರೂ ಬಳಸಬಹುದು. ಆದರೆ ಈ ಯೋಜನೆಯಲ್ಲಿ ಹೂಡಿಕೆ ಮಾಡಬೇಕೆಂದರೆ ಒಂದಷ್ಟು ಅರ್ಹತೆಗಳಿರಬೇಕು. ಅಂದರೆ ಇಲ್ಲಿ ಹೂಡಿಕೆ ಮಾಡುವ ವ್ಯಕ್ತಿಯು ಭಾರತೀಯ ನಾಗರಿಕರಾಗಿರಬೇಕು. ಆ ವ್ಯಕ್ತಿಗೆ 18 ರಿಂದ 60 ವರ್ಷಗಳ ನಡುವೆ ವಯಸ್ಸು ಇರಬೇಕು. KYC ದಾಖಲೆಗಳ ಮಾನ್ಯತೆ ಇರಬೇಕು.

ಈ ಅರ್ಹತೆಗಳಿದ್ದರೆ ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ನಿಮ್ಮ ಭವಿಷ್ಯದ ನಿವೃತ್ತಿ ಭದ್ರತೆಯನ್ನು ಸುಸ್ಥಿರಗೊಳಿಸಬಹುದು. ಹಾಗೂ ಎನ್‌ಪಿಎಸ್‌ ಉತ್ತಮ ಆಯ್ಕೆಯಾಗಿದ್ದು ಇದು ಉದ್ದೀರ್ಘ ಅವಧಿಯ ವೃದ್ಧಿಗೆ ಸಹಕಾರಿಯಾಗುತ್ತದೆ.

NPS ಕ್ಯಾಲ್ಕುಲೇಟರ್ ಬಳಸುವ ವಿಧಾನ:

ಎನ್‌ಪಿಎಸ್‌ ಕ್ಯಾಲ್ಕುಲೇಟರ್‍‌ ಬಳಸಲು ಒಂದಷ್ಟು ವಿವರಗಳನ್ನು ಒದಗಿಸಬೇಕಾಗುತ್ತದೆ. ಅವುಗಳಲ್ಲಿ ಪ್ರಮುಖವಾಗಿ..

- ನಿಮ್ಮ ಪ್ರಸ್ತುತ ವಯಸ್ಸು ಮತ್ತು ನಿವೃತ್ತಿ ವಯಸ್ಸು

- ನೀವು ಪ್ರತಿ ತಿಂಗಳು ಹೂಡಿಸುವ ಮೊತ್ತ

- NPS ಹೂಡಿಕೆಯಿಂದ ನೀವು ನಿರೀಕ್ಷಿಸುವ ವಾರ್ಷಿಕ ಲಾಭದ ಶೇಕಡ ಪ್ರಮಾಣ

- ನಿವೃತ್ತಿಯ ನಂತರ ನೀವು ಎಷ್ಟು ವರ್ಷ ಪೆನ್ಷನ್ ಪಡೆಯಲು ಬಯಸುತ್ತೀರಿ

- ನಿವೃತ್ತಿಯ ನಂತರ ನೀವು ಪೆನ್ಷನ್ ಯೋಜನೆಗೆ ಮರುಹೂಡಿಕೆ ಮಾಡುವ ಮೊತ್ತ

NPS ಕ್ಯಾಲ್ಕುಲೇಟರ್ ನಿಮಗೆ ಏನು ತೋರಿಸುತ್ತದೆ?

- ನೀವು ಹೂಡಿಕೆ ಮಾಡಿದ ಮೊತ್ತ ಮತ್ತು ಅದರಿಂದ ಬಂದ ಲಾಭ

- ನಿವೃತ್ತಿ ಸಮಯದಲ್ಲಿ ಒಟ್ಟು ಸಂಗ್ರಹಿಸಿದ ಮೊತ್ತ

- ಪೆನ್ಷನ್ ಪಡೆಯಲು ಮರುಹೂಡಿಕೆ ಮಾಡಿದ ಮೊತ್ತ

- ನೀವು ಪ್ರತಿಮಾಸ ಪಡೆಯುವ ಪೆನ್ಷನ್ ಮೊತ್ತ

ಹೀಗೆ ನಿವೃತ್ತಿ ಬಳಿಕ ನಿಮಗೆ ಸಿಗುವ ಮೊತ್ತ ಎಷ್ಟು ಎಂಬುದನ್ನು, ಈಗಿನಿಂದಲೇ ಲೆಕ್ಕ ಹಾಕಿ ಹೂಡಿಕೆ ಮಾಡಿದರೆ ಉತ್ತಮ. ಎಲ್ಲೋ ಹಣ ಪೋಲಾಗುವ ಬದಲು ಮುಂದೊಂದು ದಿನ ಒಟ್ಟು ದೊಡ್ಡ ಮೊತ್ತ ಸಿಗುತ್ತದೆ ಎಂದಾದರೂ, ಸ್ವಲ್ಪ ಹೆಚ್ಚು ಪ್ರಮಾಣದ ಹಣ ಹೂಡಿಕೆ ಮಾಡಬಹುದು. ಇಂದಿನ ಲೆಕ್ಕಾಚಾರ ಮುಂದಿನ ಭದ್ರತೆಯಾಗಿರುತ್ತದೆ.


ಕಾಮೆಂಟ್‌ಗಳಿಲ್ಲ:

ರಾಜ್ಯ ಸರ್ಕಾರಿ ನೌಕರ'ರಿಗೆ ಮತ್ತೊಂದು ಸಿಹಿಸುದ್ದಿ ನೀಡಲು ಮುಂದಾದ ಸರ್ಕಾರ

ಈ ಸಂಬಂಧ ರಾಜ್ಯ ಸರ್ಕಾರದಿಂದ ಸಭಾ ಸೂಚನಾ ಪತ್ರವನ್ನು ಹೊರಡಿಸಲಾಗಿದ್ದು, ರಾಜ್ಯ ಸಚಿವ ಸಂಪುಟದ ತೀರ್ಮಾನಿಸಿದಂತೆ ಅಧಿಕಾರಿ, ನೌಕರರು ಮತ್ತು ಅವಲಂಬಿತ ಕುಟುಂಬದ ಸದಸ್ಯರ ಹ...