ಹೈದರಾಬಾದ್ ಕರ್ನಾಟಕ ಪ್ರದೇಶ

ಹೈದರಾಬಾದ್ ಕರ್ನಾಟಕ ಪ್ರದೇಶ
Hyderabad Karnataka

ಭಾನುವಾರ, ಅಕ್ಟೋಬರ್ 26, 2025

ರಾಜ್ಯ `ಸರ್ಕಾರಿ ನೌಕರರೇ' ಗಮನಿಸಿ : `ಆರೋಗ್ಯ ಸಂಜೀವಿನಿ ಯೋಜನೆ' ನೋಂದಣಿ ಕುರಿತು ಸರ್ಕಾರದಿಂದ ಮಹತ್ವದ ಆದೇಶ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಸದಸ್ಯರಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸೆಗಳನ್ನು ಒದಗಿಸಲು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಅ.01 ರಿಂದ ಜಾರಿಗೊಳಿಸಿ ಸರ್ಕಾರ ಆದೇಶ ಹೊರಡಿಸಲಾಗಿದೆ.

ಪತಿ-ಪತ್ನಿ ಸರ್ಕಾರಿ ನೌಕರರಾಗಿದ್ದಲ್ಲಿ ಒಬ್ಬರು ಮಾತ್ರ ವೇತನದಲ್ಲಿ ವಂತಿಕೆಯನ್ನು ನೀಡುವುದು, ರಾಜ್ಯ ಸರ್ಕಾರದ ಅಧಿಕಾರಿ/ನೌಕರರ ತಂದೆ-ತಾಯಿ ಪಿಂಚಣಿದಾರರಾಗಿದ್ದಲ್ಲಿ ಅವರ ಮಾಸಿಕ ಆದಾಯ ಮಿತಿಯನ್ನು ರೂ.17000 ಗಳಿಂದ ರೂ.

27000 ಸಾವಿರಗಳಿಗೆ ಹೆಚ್ಚಳ ಮಾಡಿದೆ. ವಿವಾಹಿತ ಮಹಿಳಾ ನೌಕರರ ತಂದೆ-ತಾಯಿಯೂ ಸಹ ಈ ಯೋಜನೆಯ ವ್ಯಾಪ್ತಿಗೆ ಒಳಪಡಲಿದ್ದಾರೆ.

ಮಾಸಿಕ ವಂತಿಕೆಯನ್ನು ನೀಡಲು ಇಚ್ಛಿಸದೇ ಇರುವ ನೌಕರರು ಲಿಖಿತವಾಗಿ ಅ.18 ರೊಳಗೆ ಸಂಬಂಧಿಸಿದ ಡಿ.ಡಿ.ಓ.ಗಳಿಗೆ ನೀಡುವುದು. ಈ ಯೋಜನೆಯ ಸೌಲಭ್ಯ ಪಡೆಯಲು ರಾಜ್ಯ ಸರ್ಕಾರದ ಅಧಿಕಾರಿ/ನೌಕರರು ಪ್ರತಿ ತಿಂಗಳು ಸರ್ಕಾರ ನಿರ್ದಿಷ್ಟಪಡಿಸಿರುವ ವಂತಿಕೆಯನ್ನು ಅಕ್ಟೋಬರ್-2025ನೇ ಮಾಹೆಯಿಂದ ನೀಡುವುದು.

ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 5.25 ಲಕ್ಷ ಸರ್ಕಾರಿ ನೌಕರರು ಹಾಗೂ 25 ಲಕ್ಷ ಕುಟುಂಬ ಸದಸ್ಯರು ಈ ಯೋಜನೆಯ ಲಾಭ ಪಡೆಯಲಿದ್ದಾರೆ. ಈ ಯೋಜನೆಗೆ ರಾಜ್ಯ ಸಕಾರದ ಎಲ್ಲಾ ಅಧಿಕಾರಿ/ನೌಕರರು ನೋಂದಣಿ ಮಾಡಿಕೊಳ್ಳಲು ಕ್ರಮವಹಿಸುವುದು.

ಈ ದಾಖಲೆಗಳು ಕಡ್ಡಾಯ

1. ಸರ್ಕಾರಿ ನೌಕರನ ಹಾಗು ಕುಟುಂಬದ ಅರ್ಹ ಸದಸ್ಯರ ಭಾವಚಿತ್ರಗಳು( ಪ್ರತಿಯೊಬ್ಬರ ಭಾವ ಚಿತ್ರವನ್ನು ಪ್ರತ್ಯೇಕವಾಗಿ ನೀಡತಕ್ಕದ್ದು, ಭಾವ ಚಿತ್ರದ ಮೇಲೆ ಸರ್ಕಾರಿ ನೌಕರ ತನ್ನ ಸಹಿ ಮತ್ತು ದಿನಾಂಕವನ್ನು ನಮೂದಿಸುವುದು ಮತ್ತು ಪ್ರತಿ ಐದು ವರ್ಷಗಳಿಗೆ ಒಮ್ಮೆ ಹೊಸ ಭಾವ ಚಿತ್ರವನ್ನು ಒದಗಿಸತಕ್ಕದ್ದು)

2. ಜನ್ಮ ದಿನಾಂಕ ದಾಖಲೆಗಳು,

3. ಆಧಾರ್ ಕಾರ್ಡ್ ಗಳು

4. ವೇತನ ಚೀಟಿ

5. ಕಾನೂನು ದಾಖಲೆಗಳು (ದತ್ತು ವಿವಾಹ ಇತ್ಯಾದಿ ಸಂದರ್ಭಗಳಲ್ಲಿ)

ರಾಜ್ಯದ ಸರ್ಕಾರಿ ಪ್ರೌಢಶಾಲಾ ಶಿಕ್ಷಕರಿಗೆ 'ಹೆಚ್ಚುವರಿ ವೇತನ ಬಡ್ತಿ' ಗೊಂದಲದ ಕುರಿತು ಸರ್ಕಾರದಿಂದ ಮಹತ್ವದ ಮಾಹಿತಿ

ರಾಜ್ಯದ ಸರ್ಕಾರಿ, ಅನುದಾನಿತ ಪ್ರೌಢಶಾಲಾ ಸಹ ಶಿಕ್ಷಕರು, ಮುಖ್ಯ ಶಿಕ್ಷಕರುಗಳಿಗೆ ದಿನಾಂಕ 01-06-2016ರಿಂದ ಅನ್ವಯವಾಗುವಂತೆ ಮಂಜೂರು ಮಾಡಲಾದ ಒಂದು ಹೆಚ್ಚುವರಿ ವೇತನ ಬಡ್ತಿಯನ್ನು ದಿನಾಂಕ 01-11-2018ಕ್ಕೆ ಮೂಲವೇತನದೊಂದಿಗೆ ವಿಲೀನಗೊಳಿಸುವಾಗ ಉಂಟಾದ ಗೊಂದಲದ ಬಗ್ಗೆ ಮಹತ್ವದ ಮಾಹಿತಿಯನ್ನು ಶಾಲಾ ಶಿಕ್ಷಣ ಇಲಾಖೆ ಹಂಚಿಕೊಂಡಿದೆ.

ಸರ್ಕಾರಿ/ಅನುದಾನಿತ ಪ್ರೌಢಶಾಲಾ ಸಹ ಶಿಕ್ಷಕರು/ಮುಖ್ಯ ಶಿಕ್ಷಕರುಗಳಿಗೆ ಉಲ್ಲೇಖ(2)ರ ಅನ್ವಯ ದಿನಾಂಕ: 01-06-2016 ರಿಂದ ಮಂಜೂರು ಮಾಡಲಾದ ಒಂದು ಹೆಚ್ಚುವರಿ ವೇತನ ಬಡ್ತಿಯನ್ನು ದಿನಾಂಕ: 01-11-2018 ಲವೇತನದೊಂದಿಗೆ ವಿಲೀನಗೊಳಿಸುವಾಗ ಉಂಟಾದ ಗೊಂದಲಗಳ ಬಗ್ಗೆ ಸ್ಪಷ್ಟಿಕರಣ ನೀಡುವಂತೆ ಉಲ್ಲೇಖ(1)ರ ಉಡುಪಿ ಜಿಲ್ಲಾ ಉಪನಿರ್ದೇಶಕರು ಕೋರಿರುತ್ತಾರೆ. ಈ ಸಂಬಂಧ ಉಲ್ಲೇಖ(3)ರ ಅನ್ವಯ ಈ ಕಛೇರಿಯಿಂದ ಅಗತ್ಯ ಸ್ಪಷ್ಟಿಕರಣ ನೀಡಲಾಗಿರುತ್ತದೆ. ಉಲ್ಲೇಖ(3)ರ ಸ್ಪಷ್ಟಿಕರಣದ ನಂತರದಲ್ಲಿ ಇತರೆ ಜಿಲ್ಲೆಗಳಿಂದಲೂ ಸಹ ನೀಡಲಾದ ಸ್ಪಷ್ಟಿಕರಣಕ್ಕೆ ವಿರುದ್ಧವಾಗಿ ವೇತನ ನಿಗದಿಗೊಳಿಸಲಾಗಿದ್ದು, ಈ ಹಿನ್ನಲೆಯಲ್ಲಿ ಉಲ್ಲೇಖ(3)ರಂತೆ ಕ್ರಮವಹಿಸುವ ಬಗ್ಗೆ ಸ್ಪಷ್ಠಿಕರಿಸುವಂತೆ ದೂರವಾಣಿ ಕರೆಗಳು ಸ್ವೀಕೃತವಾಗುತ್ತಿದೆ. ಈ ಹಿನ್ನಲೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಸಹ ಅನ್ವಯಿಸುವಂತೆ ಸಮಗ್ರ ಸುತ್ತೋಲೆಯನ್ನು ಹೊರಡಿಸುವುದು ಸೂಕ್ತವೆಂದು ಪರಿಗಣಿಸಿ ಈ ಕೆಳಕಂಡಂತೆ ಸ್ಪಷ್ಟಿಕರಿಸಿದೆ ಎಂದಿದ್ದಾರೆ.

ಸರ್ಕಾರಿ/ಅನುದಾನಿತ ಪ್ರೌಢಶಾಲಾ ಸಹ ಶಿಕ್ಷಕರು/ಮುಖ್ಯ ಶಿಕ್ಷಕರುಗಳಿಗೆ ದಿನಾಂಕ:01-06-2016 ಅನ್ವಯವಾಗುವಂತೆ ಮಂಜೂರು ಮಾಡಲಾದ ಒಂದು ಹೆಚ್ಚುವರಿ ವೇತನ ಬಡ್ತಿಯನ್ನು ದಿನಾಂಕ: 01-11-2018 ಕ್ಕೆ ಮೂಲವೇತನದೊಂದಿಗೆ ವಿಲೀನಗೊಳಿಸುವಾಗ ದಿ:20.10.2018 ರ ಸರ್ಕಾರ ಆದೇಶ ಸಂಖ್ಯೆ: ಆಇ 28 ಎಸ್.ಆರ್.ಪಿ 2018ರ ಆದೇಶದನ್ವಯ ವೇತನವನ್ನು ನಿಗದಿಪಡಿಸಬೇಕಾಗಿರುತ್ತದೆ ಎಂದು ಹೇಳಿದ್ದಾರೆ.

ಈ ರೀತಿ ವೇತನ ನಿಗದಿಪಡಿಸುವಾಗ ದಿ:01.06.2016 ಕ್ಕೆ ಮಂಜೂರು ಮಾಡಿರುವ ಹೆಚ್ಚುವರಿ ವೇತನ ಬಡ್ತಿಯು ನಿಶ್ಚಿತವಾಗಿದ್ದು, ಕಾಲಕಾಲಕ್ಕೆ ಸದರಿ ಮೊತ್ತ ಪರಿಷ್ಕರಣೆಗೆ ಅವಕಾಶವಿರುವುದಿಲ್ಲ. ಈ ಹಿನ್ನಲೆಯಲ್ಲಿ ದಿ:20.10.2018 ರ ಆದೇಶದಂತೆ ವೇತನ ನಿಗದಿಪಡಿಸುವಾಗ ಈ ಕೆಳಕಂಡಂತೆ ಕ್ರಮವಹಿಸಬೇಕಾಗಿರುತ್ತದೆ.

1. ದಿನಾಂಕ: 01.11.2018 ರಲ್ಲಿ ಇದ್ದ ಮೂಲವೇತನ : (ದಿ:01.11.2018 ರಲ್ಲಿದ್ದ ಮೂಲವೇತನ) + (2016 ರಲ್ಲಿ ಮಂಜೂರಾದ ಹೆಚ್ಚುವರಿ ವೇತನ ಬಡ್ತಿ ಮೊತ್ತ)
2. ದಿನಾಂಕ: 01.11.2018 ಕ್ಕೆ ವಿಲೀನಗೊಳಿಸಿದ ನಂತರ ಮೂಲವೇತನ: (ಕ್ರಸಂ.(1)ರ ಒಟ್ಟಾರೆ ಮೊತ್ತ
3. ದಿನಾಂಕ: 01.11.2018 ಕ್ಕೆ ಪರಿಷ್ಕೃತ ವೇತನ ಶ್ರೇಣಿಯ ಅನ್ವಯಿಸುವ ವೇತನ ಹಂತದಲ್ಲಿ ವೇತನ ನಿಗದಿಹುದ್ದೆಯ ವೇತನ ಶ್ರೇಣಿಯಲ್ಲಿನ ವಾರ್ಷಿಕ ವೇತನ ಬಡ್ತಿಯ ಮುಂದಿನ ಹಂತ]
4. ಮುಂದಿನ ವಾರ್ಷಿಕ ಬಡ್ತಿ ದಿನಾಂಕಯಥಾಸ್ಥಿತಿ]

ಇದನ್ನು ಉದಾಹರಣೆ ರೂಪವಾಗಿ ಈ ಕೆಳಕಂಡಂತೆ ವಿವರಿಸಿದೆ.

1. ದಿನಾಂಕ: 31.10.2018 ಕ್ಕೆ ಲಭ್ಯವಿದ್ದ, ಮೂಲವೇತನ: ರೂ.37900+600(ಹೆ.ವೇ.ಬಡ್ತಿ)/-
2. ದಿನಾಂಕ: 01.11.2018 ಕ್ಕೆ ಹೆಚ್ಚುವರಿ ವೇತನ ಬಡ್ತಿ:.38500/-
ವಿಲೀನಗೊಳಿಸಿದ ನಂತರದ ಮೂಲ ವೇತನ:.38850/-
3. ದಿನಾಂಕ: 01.11.2018 ಕ್ಕೆ 2018ರ ಪರಿಷ್ಕೃತ ವೇತನ ಶ್ರೇಣಿ ಯಲ್ಲಿನ ವಾರ್ಷಿಕ ವೇತನ ಬಡ್ತಿಯ ಮುಂದಿನ ವೇತನ ಹಂತ 4. ಮುಂದಿನ ವಾರ್ಷಿಕ ವೇತನ ಬಡ್ತಿ ದಿನಾಂಕ : ಸಂದರ್ಭಾನುಸಾರ ಮೊದಲನೇ ಜನವರಿ- 2019 ಅಥವಾ ಮೊದಲನೇ ಜುಲೈ-2019

"ದಿ:20.10.2018 ರ ಆದೇಶದಲ್ಲಿ ಪರಿಷ್ಕೃತ ವೇತನ ಶ್ರೇಣಿಯಲ್ಲಿ ವೇತನ ಪುನರ್ ನಿಗದಿಗೆ ಅವಕಾಶ ನೀಡಿರುವುದಿಲ್ಲ".

2018ರ ಪರಿಷ್ಕೃತ ವೇತನ ಶ್ರೇಣಿಯಲ್ಲಿ ದಿ:01.07.2017 ರಿಂದ ದಿ:30.06.2018 ರ ಅವಧಿಯಲ್ಲಿ ಮಾತ್ರ ವೇತನ ಪುನರ್ ನಿಗದಿಗೆ ಅವಕಾಶ ಕಲ್ಪಿಸಲಾಗಿದೆ.

ಪ್ರಸ್ತಾಪಿತ ವೇತನ ನಿಗದಿಯು ದಿ:30.06.2018 ರ ನಂತರದ ಅವಧಿಗೆ ಸಂಬಂಧಿಸಿರುವುದರಿಂದ ಮತ್ತೊಮ್ಮೆ ಪರಿಷ್ಕೃತ ವೇತನ ಶ್ರೇಣಿಯಲ್ಲಿ ವೇತನ ಪುನ‌ ನಿಗದಿಗೆ ಅವಕಾಶವಿರುವುದಿಲ್ಲ. ಸರ್ಕಾರಿ/ಅನುದಾನಿತ ಪ್ರೌಢಶಾಲಾ ಸಹ ಶಿಕ್ಷಕರು/ಮುಖ್ಯ ಶಿಕ್ಷಕರುಗಳಿಗೆ ದಿನಾಂಕ:01-06-2016 ಅನ್ವಯವಾಗುವಂತೆ ಮಂಜೂರು ಮಾಡಲಾದ ಒಂದು ಹೆಚ್ಚುವರಿ ವೇತನ ಬಡ್ತಿಯನ್ನು ದಿನಾಂಕ: 01-II-2018 ವೇತನದೊಂದಿಗೆ ವಿಲೀನಗೊಳಿಸಿ ವೇತನ ನಿಗದಿಪಡಿಸುವುದಕ್ಕೆ ಸಂಬಂಧಿಸಿದಂತೆ ಮೇಲಿನಂತೆ ಸ್ಪಷ್ಠಿಕರಿಸುತ್ತಾ ಅದರಂತೆ ಮುಖ್ಯೋಪಾಧ್ಯಾಯರುಗಳಿಗೆ ಸೂಚಿಸಿದೆ. ಒಂದು ವೇಳೆ ಇದಕ್ಕೆ ವ್ಯತಿರಿಕ್ತವಾಗಿ ವೇತನ ನಿಗದಿಪಡಿಸಿದ್ದಲ್ಲಿ ಅಂತಹ ಪ್ರಕರಣಗಳನ್ನು ಪುನರ್ ಪರಿಶೀಲಿಸಿ ಮರು ವೇತನ ನಿಗದಿಪಡಿಸುವುದು ಹಾಗೂ ಈ ಮುಂಚೆ ನೀಡಲಾದ ಹೆಚ್ಚುವರಿ ವೇತನ/ ಭತ್ಯೆಗಳನ್ನು ಸಂಬಂಧಿಸಿದವರಿಂದ ಕಟಾಯಿಸಿ ಸರ್ಕಾರದ ಲೆಕ್ಕ-ಶೀರ್ಷಿಕೆ ಸಂಖ್ಯೆ "0202-01-102-9-00 -LED-BBB"(K-2_Challan_Ref:-Purpose: Deduct-Refund) ಜಮಾ ಮಾಡಿ ನಿರ್ದೇಶಕರು(ಪ್ರೌಢಶಿಕ್ಷಣ) ರವರಿಗೆ ವರದಿ ಮಾಡುವುದು. ವೇತನವನ್ನು ಮೇಲ್ಕಂಡಂತೆ ನಿಗದಿಪಡಿಸಿದ ನಂತರವೇ ನವೆಂಬರ್-2020 ರ ಮಾಹೆಯ ವೇತನವನ್ನು ಸೆಳೆಯತಕ್ಕದ್ದು.

ರಾಜ್ಯದ ಎಲ್ಲಾ ಜಿಲ್ಲಾ ಉಪನಿರ್ದೇಶಕರುಗಳು ಈ ಬಗ್ಗೆ ವೈಯಕ್ತಿಕ ಗಮನಹರಿಸಿ ತಮ್ಮ ಜಿಲ್ಲೆಗಳಲ್ಲಿನ ಸರ್ಕಾರಿ/ಅನುದಾನಿತ ಪ್ರೌಢಶಾಲಾ ಸಹ ಶಿಕ್ಷಕರು/ಮುಖ್ಯ ಶಿಕ್ಷಕರುಗಳಿಗೆ ವೇತನ ನಿಗದಿಯನ್ನು ಪುನರ್ ಪರಿಶೀಲಿಸಿ ಮೇಲಿನಂತೆ ವೇತನ ನಿಗದಿಯಾಗಿರುವುದನ್ನು ಖಚಿತ ಪಡಿಸಿಕೊಳ್ಳುವುದು. ವ್ಯತಿರಿಕ್ತವಾಗಿ ವೇತನ ನಿಗದಿಪಡಿಸಲಾದ ಪ್ರಕರಣಗಳಲ್ಲಿ ಹೆಚ್ಚುವರಿ ವೇತನ ಪಾವತಿಯಾಗಿರುವ ಮೊತ್ತವನ್ನು ಕಟಾವಣೆ ಮಾಡಿ ಸರ್ಕಾರದ ಲೆಕ್ಕಶೀರ್ಷಿಕೆಗೆ ಜಮಾ ಆಗಿರುವ ಬಗ್ಗೆ ಖಾತರಿ ಪಡಿಸಿಕೊಳ್ಳುವುದು ಸಂಬಂಧಿಸಿದ ಜಿಲ್ಲಾ ಉಪನಿರ್ದೇಶಕರುಗಳ ಜವಾಬ್ದಾರಿಯಾಗಿರುತ್ತದೆ.

ಪಿಎಫ್ ಖಾತೆದಾರರಿಗೆ ಶುಭ ಸುದ್ದಿ ನೀಡಿದ ನೌಕರರ ಭವಿಷ್ಯ ನಿಧಿ ಸಂಸ್ಥೆ, ವಿವಾದಗಳ ಪರಿಹಾರಕ್ಕಾಗಿ 'ವಿಶ್ವಾ ಯೋಜನೆ' ಜಾರಿ, ಅವಧಿ ವಿಸ್ತರಣೆ

ಪಿಎಫ್ ಖಾತೆದಾರರಿಗೆ ಶುಭ ಸುದ್ದಿ ನೀಡಿದ ನೌಕರರ ಭವಿಷ್ಯ ನಿಧಿ ಸಂಸ್ಥೆ, ವಿವಾದಗಳ ಪರಿಹಾರಕ್ಕಾಗಿ 'ವಿಶ್ವಾ ಯೋಜನೆ' ಜಾರಿ, ಅವಧಿ ವಿಸ್ತರಣೆ

ಈ ಹಿನ್ನೆಲೆಯಲ್ಲಿ ನೌಕರರ ಭವಿಷ್ಯ ನಿಧಿ ಸಂಸ್ಥೆ ಹೊಸ ಯೋಜನೆಯನ್ನು ಪ್ರಾರಂಭಿಸಿದೆ. ವಿಶ್ವಾಸ್ ಯೋಜನೆಯಡಿಯಲ್ಲಿ ನೌಕರರ ಸಮಸ್ಯೆಗಳ ನಿವಾರಣೆಗೆ ಕ್ರಮಗಳನ್ನು ಕೈಗೊಂಡಿದೆ. ಈ ಕ್ರಮದಿಂದ ನೌಕರರಿಗೆ ಸಾಕಷ್ಟು ಅನುಕೂಲ ಕಲ್ಪಿಸಲಾಗಿದೆ.

ವಿಶ್ವಾಸ್ ಯೋಜನೆ

ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಈಗ ಪಿಎಫ್ ವಿವಾದಗಳ ಪರಿಹಾರಕ್ಕಾಗಿ 'ವಿಶ್ವಾಸ್ ಯೋಜನೆ'ಯನ್ನು ಪ್ರಾರಂಭಿಸಿದೆ. ಪಿಎಫ್ ಬಾಕಿ ಪಾವತಿ ವಿಳಂಬದಂತಹ ಸಮಸ್ಯೆಗಳಿಗೆ ಈ ಯೋಜನೆಯಿಂದ ಪರಿಹಾರವನ್ನು ಒದಗಿಸುತ್ತದೆ ಎಂದು ಹೇಳಲಾಗಿದೆ. ಈ ಯೋಜನೆಯನ್ನು 6 ತಿಂಗಳವರೆಗೆ ಜಾರಿಗೆ ತರಲಾಗಿತ್ತು. ಅದರೆ, ಇದನ್ನು ಇನ್ನೂ 6 ತಿಂಗಳವರೆಗೆ ವಿಸ್ತರಿಸಲಾಗಿದೆ.

ಮೊಕದ್ದಮೆಗಳನ್ನು ಕಡಿಮೆ ಮಾಡುವ ಮತ್ತು ಕ್ರಮಗಳು ಸರಾಗಗೊಳಿಸುವ ನಿಟ್ಟಿನಲ್ಲಿ, ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ವಿಶ್ವಾಸ್ ಯೋಜನೆಯನ್ನು ಪರಿಚಯಿಸಿದೆ, ಇದು ಭವಿಷ್ಯ ನಿಧಿ (ಪಿಎಫ್) ಬಾಕಿಗಳನ್ನು ವಿಳಂಬವಾಗಿ ರವಾನಿಸುವುದಕ್ಕೆ ದಂಡದ ಹಾನಿಗೆ ಸಂಬಂಧಿಸಿದ ದೀರ್ಘಕಾಲದಿಂದ ಬಾಕಿ ಇರುವ ವಿವಾದಗಳನ್ನು ಪರಿಹರಿಸುವ ಗುರಿಯನ್ನು ಹೊಂದಿದೆ.

ಇಪಿಎಫ್ ಕಾಯ್ದೆಯಡಿಯಲ್ಲಿ ದಾವೆ ಹೂಡಲು ಪ್ರಮುಖ ಕಾರಣವೆಂದರೆ ತಡವಾಗಿ ಹಣ ರವಾನೆ ಮಾಡುವುದಕ್ಕೆ ಹೆಚ್ಚಿನ ದಂಡದ ಪರಿಹಾರ ವಿಧಿಸುವುದು. ಮೇ 2025 ರ ಹೊತ್ತಿಗೆ, ಬಾಕಿ ಇರುವ ದಂಡದ ಪರಿಹಾರ 2,406 ಕೋಟಿ ರೂ.ಗಳಾಗಿದ್ದು, ಹೈಕೋರ್ಟ್‌ಗಳು, ಕೇಂದ್ರ ಸರ್ಕಾರಿ ಕೈಗಾರಿಕಾ ನ್ಯಾಯಮಂಡಳಿಗಳು (ಸಿಜಿಐಟಿಗಳು) ಮತ್ತು ಸುಪ್ರೀಂ ಕೋರ್ಟ್ ಸೇರಿದಂತೆ ವಿವಿಧ ವೇದಿಕೆಗಳಲ್ಲಿಹಲವು ಪ್ರಕರಣಗಳು ಬಾಕಿ ಉಳಿದಿವೆ. ಇದರ ಜೊತೆಗೆ, ಇಪಿಎಫ್‌ಒನ ಇ-ಪ್ರೊಸೀಡಿಂಗ್ಸ್ ಪೋರ್ಟಲ್ ಅಡಿಯಲ್ಲಿ ಸುಮಾರು 21,000 ಸಂಭಾವ್ಯ ಪ್ರಕರಣಗಳು ಬಾಕಿ ಉಳಿದಿವೆ ಎಂದು ಮನಿ ಕಂಟೋಲ್ ವರದಿ ಮಾಡಿದೆ.

ಡಿಜಿಟಲ್‌ ಪಾವತಿಯನ್ನ ಇನ್ನಷ್ಟು ಸುಲಭಗೊಳಿಸಲಿದೆ AI ಚಾಲಿತ UPI Help; ಇದು ಹೇಗೆ ಕೆಲಸ ಮಾಡುತ್ತದೆ? ಗ್ರಾಹಕರಿಗೆ ಏನು ಉಪಯೋಗ?

ಇದು ಪಿಎಫ್ ಚಂದಾದಾರರು ಮತ್ತು ಪಿಂಚಣಿದಾರರಿಗೆ ಪ್ರಯೋಜನಕಾರಿಯಾಗಲಿದೆ ಎಂದು ಇಪಿಎಫ್‌ಒ ಹೇಳಿದೆ. ಇದು ದಂಡವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಈ ಪ್ರೊಸೀಡಿಂಗ್ಸ್ ಪೋರ್ಟಲ್ ಅಡಿಯಲ್ಲಿ ಇಪಿಎಫ್‌ಒ ಸುಮಾರು 21 ಸಾವಿರ ಪ್ರಕರಣಗಳು ಬಾಕಿ ಉಳಿದಿವೆ. ವಿಶ್ವಾಸ್ ಯೋಜನೆಯ ನಿಯಮಗಳನ್ನು ಅನುಸರಿಸಿದರೆ, ಬಾಕಿ ಇರುವ ಎಲ್ಲಾ ಪ್ರಕರಣಗಳನ್ನು ರದ್ದುಗೊಳಿಸಲಾಗುತ್ತದೆ.

ಈಗ ಶೇ.100 ರಷ್ಟು ಪಿಎಫ್ ಹಿಂಪಡೆಯಿರಿ!

ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಚಂದಾದಾರರಿಗೆ ಒಳ್ಳೆಯ ಸುದ್ದಿ ನೀಡಿದೆ. ಉದ್ಯೋಗಿ ಮತ್ತು ಉದ್ಯೋಗದಾತರ ಪಾಲು ಸೇರಿದಂತೆ PF ನಿಧಿಯಲ್ಲಿನ ಅರ್ಹ ಬಾಕಿಯ 100% ಹಿಂಪಡೆಯಲು ಇದು ಅವಕಾಶ ನೀಡಿದೆ. PF ಹಣವನ್ನು ಭಾಗಶಃ ಹಿಂಪಡೆಯುವ ಮಿತಿಯನ್ನು ಶಿಕ್ಷಣಕ್ಕಾಗಿ 10 ಪಟ್ಟು ಮತ್ತು ಮದುವೆಗೆ 5 ಪಟ್ಟು ಹೆಚ್ಚಿಸಲಾಗಿದೆ. ಅದೇ ರೀತಿ, ಭಾಗಶಃ ಹಿಂಪಡೆಯುವಿಕೆಗೆ ಕನಿಷ್ಠ ಸೇವಾ ಅಗತ್ಯವನ್ನು 12 ತಿಂಗಳುಗಳಿಗೆ ಇಳಿಸಲಾಗಿದೆ.

ಈ ಹಿಂದೆ, 13 ಸಂಕೀರ್ಣ ಪಿಎಫ್ ಹಿಂಪಡೆಯುವಿಕೆ ನಿಯಮಗಳಿದ್ದವು. ಈಗ ಈ ಮೊತ್ತವನ್ನು ಮೂರು ವರ್ಗಗಳಾಗಿ ವಿಂಗಡಿಸಲಾಗಿದೆ. ಇವುಗಳಲ್ಲಿ ಮೊದಲನೆಯದು ತುರ್ತು ಸಂದರ್ಭಗಳು (ಅನಾರೋಗ್ಯ, ಶಿಕ್ಷಣ, ಮದುವೆ), ಮನೆ ನಿರ್ಮಾಣ ಅಗತ್ಯಗಳು ಮತ್ತು ವಿಶೇಷ ಸಂದರ್ಭಗಳು. ಈ ಮೂರು ವಿಭಾಗಗಳಲ್ಲಿ ಮಾತ್ರ, ಪಿಎಫ್ ಹಣವನ್ನು 100 ಪ್ರತಿಶತ ಹಿಂಪಡೆಯಬಹುದು.

ನಿರ್ದಿಷ್ಟವಾಗಿ ಹೇಳುವುದಾದರೆ, ಪಿಎಫ್ ನಿರಾಕರಣೆ ಹಕ್ಕುಗಳನ್ನು ಕಡಿಮೆ ಮಾಡುವುದರ ಜೊತೆಗೆ, ಸುಲಭ ಜೀವನಕ್ಕೆ ಆದ್ಯತೆ ನೀಡಲಾಯಿತು. ತುರ್ತು ಸಂದರ್ಭಗಳಲ್ಲಿ ನೌಕರರು ಭವಿಷ್ಯ ನಿಧಿಯ ಹಣವನ್ನು ಬಳಸುವಂತೆ ಹಲವಾರು ಬದಲಾವಣೆಗಳನ್ನು ಮಾಡಲು ಸಭೆ ನಿರ್ಧರಿಸಿದೆ ಎಂದು ಹೇಳಲಾಗಿದೆ.

ಮಂಗಳವಾರ, ಅಕ್ಟೋಬರ್ 21, 2025

ಎಲ್ಲಾ ವರ್ಗಗಳ ವಿದ್ಯಾರ್ಥಿಗಳಿಗೂ ಸಿಗಲಿದೆ ಭರ್ಜರಿ ವಿದ್ಯಾರ್ಥಿ ವೇತನ, ಇಲ್ಲಿದೆ ಕಂಪ್ಲೀಟ್ ಮಾಹಿತಿ

ಈ ವಿದ್ಯಾರ್ಥಿ ವೇತನ ಪಡೆಯಲು ಯಾವ ರೀತಿ ಅರ್ಜಿ ಹಾಕಬೇಕು? ಇದಕ್ಕೆ ಏನೆಲ್ಲಾ ನಿಯಮ ಇದೆ? ಇಲ್ಲಿದೆ ಸಂಪೂರ್ಣ ಮಾಹಿತಿ.

7 ಯೋಜನೆ ಅಡಿಯಲ್ಲಿ ವಿದ್ಯಾರ್ಥಿ ವೇತನ
ಸದ್ಯ ಎಸ್.ಬಿ.ಐ ಫೌಂಡೇಶನ್ ತರಗತಿವಾರು ಒಟ್ಟು 7 ಯೋಜನೆ ಅಡಿಯಲ್ಲಿ ವಿವಿಧ ವಿದ್ಯಾರ್ಥಿವೇತನವನ್ನ ನೀಡುತ್ತಿದ್ದು, ಅವುಗಳಿಗೆ ಸುಲಭವಾಗಿ ಅರ್ಜಿ ಹಾಕಬಹುದಾಗಿದೆ. ಇನ್ನು ಈ ಎಲ್ಲಾ ಯೋಜನೆ ಅಡಿಯಲ್ಲಿ ಅರ್ಜಿ ಹಾಕಲು ನವೆಂಬರ್‌ 15 ಕೊನೆಯ ದಿನವಾಗಿದೆ.

ಯಾವೆಲ್ಲಾ ಯೋಜನೆಯಡಿ ಅರ್ಜಿ ಹಾಕಬಹುದು?

ವೈದ್ಯಕೀಯ ವಿದ್ಯಾರ್ಥಿಗಳಿಗೆ SBI ಪ್ಲಾಟಿನಂ ಜುಬಿಲಿ ಆಶಾ ವಿದ್ಯಾರ್ಥಿವೇತನ.

ಸಾಗರೋತ್ತರ ವಿದ್ಯಾರ್ಥಿಗಳಿಗೆ SBI ಪ್ಲಾಟಿನಂ ಜುಬಿಲಿ ಆಶಾ ವಿದ್ಯಾರ್ಥಿವೇತನ.

ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಎಸ್‌ಬಿಐ ಪ್ಲಾಟಿನಂ ಜುಬಿಲಿ ಆಶಾ ವಿದ್ಯಾರ್ಥಿವೇತನ.

ವಿದ್ಯಾರ್ಥಿಗಳಿಗೆ SBI ಪ್ಲಾಟಿನಂ ಜುಬಿಲಿ ಆಶಾ ವಿದ್ಯಾರ್ಥಿವೇತನ.

ಶಾಲಾ ವಿದ್ಯಾರ್ಥಿಗಳಿಗೆ SBI ಪ್ಲಾಟಿನಂ ಜುಬಿಲಿ ಆಶಾ ವಿದ್ಯಾರ್ಥಿವೇತನ 2025-26.

ಐಐಎಂ ವಿದ್ಯಾರ್ಥಿಗಳಿಗೆ ಎಸ್‌ಬಿಐ ಪ್ಲಾಟಿನಂ ಜುಬಿಲಿ ಆಶಾ ವಿದ್ಯಾರ್ಥಿವೇತನ.

ಅರ್ಜಿ ಸಲ್ಲಿಸಲು ಅರ್ಹತೆಗಳೇನು?

ಇನ್ನು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಹಾಕಲು ಕೆಲವೊಂದು ಅರ್ಹತಾ ಮಾನದಂಡಗಳನ್ನ ನಿಗದಿ ಮಾಡಲಾಗಿದೆ. ಅವುಗಳ ಆಧಾರದಲ್ಲಿ ಮಾತ್ರ ಅರ್ಜಿ ಹಾಕಲು ಅವಕಾಶ ನೀಡಲಾಗಿದೆ.

ಮೊದಲು ಭಾರತೀಯ ಪ್ರಜೆಯಾಗಿರಬೇಕು, ಬೇರೆ ದೇಶದ ಪ್ರಜೆಗಳು ಅರ್ಜಿ ಹಾಕಲು ಬರುವುದಿಲ್.‌ ಮುಖ್ಯವಾಗಿ
2025-26 ನೇ ಸಾಲಿನಲ್ಲಿ ವಿಧ್ಯಾಭ್ಯಾಸಕ್ಕೆ ಪ್ರವೇಶ ಪಡೆದಿರುವವರು ಮಾತ್ರ ಅರ್ಜಿ ಹಾಕಬಹುದಾಗಿದೆ.
ಅರ್ಜಿ ಹಾಕುವ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯವು ₹3.0 ಲಕ್ಷದ ಒಳಗೆ ಇರಬೇಕು ಎನ್ನುವ ನಿಯಮ ಇದ್ದು, ಅದರ ಜೊತೆಗೆ ಅರ್ಜಿ ಹಾಕುವವರು ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ 75% ಅಂಕಗಳನ್ನು ಪಡೆದಿರಬೇಕು ಎಂದು ರೂಲ್ಸ್‌ ಮಾಡಲಾಗಿದೆ.

ಎಷ್ಟು ಹಣವನ್ನ ವಿದ್ಯಾರ್ಥಿ ವೇತನವನ್ನ ನೀಡಲಾಗುತ್ತೆ?

ಶಾಲಾ ವಿದ್ಯಾರ್ಥಿಗಳಿಗೆ - 15,000 ರೂಪಾಯಿ

ಪದವಿ ಪೂರ್ವ ವಿದ್ಯಾರ್ಥಿಗಳಿಗೆ - 75,000 ರೂಪಾಯಿ

ಐಐಟಿ ವಿದ್ಯಾರ್ಥಿಗಳಿಗೆ - 2,00,000 ರೂಪಾಯಿ

ಐಐಎಂ ವಿದ್ಯಾರ್ಥಿಗಳಿಗೆ - 5,00,000 ರೂಪಾಯಿ

ವೈದ್ಯಕೀಯ ವಿದ್ಯಾರ್ಥಿಗಳಿಗೆ - 4,50,000 ರೂಪಾಯಿ

ಸಾಗರೋತ್ತರ ವಿದ್ಯಾರ್ಥಿಗಳಿಗೆ - 20,00,000 ರೂಪಾಯಿ

ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ - 6,00,000 ರೂಪಾಯಿ

ಅರ್ಜಿ ಹಾಕುವುದು ಹೇಗೆ?

ಮೊದಲು https://www.buddy4study.com/page/sbi-asha-scholarship-program ಲಿಂಕ್‌ ಕ್ಲಿಕ್‌ ಮಾಡಿ. ಅದರಲ್ಲಿ ಅಪ್ಲೈ ನೌ ಎಂದು ಇರುತ್ತದೆ. ಅದಕ್ಕೆ ಕ್ಲಿಕ್‌ ಮಾಡಿ. ಅದರಲ್ಲಿ ಪೊಂದು ಪೇಜ್‌ ಓಪನ್‌ ಆಗುತ್ತದೆ. ಅದರಲ್ಲಿ ಯೋಜನೆವಾರು ಅರ್ಜಿ ಸಲ್ಲಿಸಲು ಲಿಂಕ್‌ ಕಾಣಿಸುತ್ತದೆ. ಅದರ ಅಡಿಯಲ್ಲಿ ನಿಮ್ಮದೇ ಐಡಿ ಕ್ರಿಯೇಟ್‌ ಮಾಡಿ ಲಾಗಿನ್‌ ಆಗಬೇಕು. ಲಾಗಿನ್‌ ಆದ ನಂತರ ಎಲ್ಲಾ ವಿವರಗಳನ್ನ ಹಾಕಿ, ಸಬ್‌ಮಿಟ್‌ ಮಾಡಿ.

ಕರ್ನಾಟಕದಲ್ಲಿ 'TET' ಪರೀಕ್ಷೆಗೆ ಅರ್ಜಿ ಆಹ್ವಾನ, ಅಭ್ಯರ್ಥಿಗಳಿಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಆರ್.ಟಿ.ಇ ಕಾಯ್ದೆ 2ನೇ ವಿಭಾಗದಲ್ಲಿ ಷರತ್ತು (ಎನ್) ನಲ್ಲಿ ಉಲ್ಲೇಖಿಸಲ್ಪಟ್ಟಿರುವಂತೆ ಯಾವುದೇ ಶಾಲೆಗಳಲ್ಲಿ ಶಿಕ್ಷಕರಾಗಿ ನೇಮಕಾತಿಗೆ ಅರ್ಹತೆ ಪಡೆಯಲು NCTE ಯಿಂದ ರೂಪಿಸಲಾದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಸೂಕ್ತ ಸರ್ಕಾರದ ಮೂಲಕ ನಡೆಸಲಾಗುವ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ (ಟಿ.ಇ.ಟಿ.) ಉತ್ತೀರ್ಣರಾಗಿರಬೇಕು.

ಭಾನುವಾರ, ಅಕ್ಟೋಬರ್ 19, 2025

ರಾಜ್ಯದ 'ಅಗ್ನಿಶಾಮಕ ಇಲಾಖೆ'ಯ ಸಿಬ್ಬಂದಿಗಳಿಗೆ ಅಪಘಾತ ವಿಮಾ ಪರಿಹಾರದ ಮೊತ್ತ '50 ಲಕ್ಷ'ಕ್ಕೆ ಹೆಚ್ಚಿಸಿ ಸರ್ಕಾರ ಅಧಿಕೃತ ಆದೇಶ

 ರಾಜ್ಯದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಸಿಬ್ಬಂದಿಗಳಿಗೆ ಗುಡ್ ನ್ಯೂಸ್ ಎನ್ನುವಂತೆ ಅಪಘಾತ ವಿಮಾ ಪರಿಹಾರ ಮೊತ್ತವನ್ನು 20 ಲಕ್ಷದಿಂದ 50 ಲಕ್ಷಕ್ಕೆ ಹೆಚ್ಚಿಸಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ಈ ಕುರಿತಂತೆ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ರಾಜ್ಯ ಸೇವೆಗಳು ಪೊಲೀಸ್‌ ಮಹಾ ನಿರ್ದೇಶಕರು ಹಾಗೂ ಮಹಾ ನಿರ್ದೇಶಕರು ಅಧಿಕೃತ ಆದೇಶ ಹೊರಡಿಸಿದ್ದು, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಅಗ್ನಿಶಾಮಕ ಹುದ್ದೆಯಿಂದ ನಿರ್ದೇಶಕರ ಹುದ್ದೆಯವರೆಗೆ ಮಾತ್ರ ಕರ್ತವ್ಯದ ಮೇಲಿರುವಾಗ ಮೃತಪಟ್ಟಲ್ಲಿ ಗುಂಪು ವಿಮಾ ಮೊತ್ತವನ್ನು ರೂ, 20.00 ಲಕ್ಷಗಳಿಂದ ರೂ.50,00 ಲಕ್ಷಗಳಿಗೆ ಹೆಚ್ಚಿಸಲಾಗಿದೆ. ಈ ಯೋಜನೆಯನ್ನು ವಿಮಾ ಕಂಪನಿಗೆ ವಹಿಸದೇ ಆಕಸ್ಮಿಕ ಅಪಘಾತದಲ್ಲಿ ಮೃತಪಟ್ಟ ಕರ್ತವ್ಯ ನಿರತ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ನೌಕರರ ಕುಟುಂಬಗಳಿಗೆ ನೀಡುವ ವಿಶೇಷ ಗುಂಪು ವಿಮಾ ಮೊತ್ತವನ್ನು ನೇರವಾಗಿ ಇಲಾಖೆಯ ಸಂಬಂಧಪಟ್ಟ ಲೆಕ್ಕಶೀರ್ಷಿಕೆಯಡಿ ಪಾವತಿ ಮಾಡಲು ಸೂಚಿಸಿ ಆದೇಶಿಸಲಾಗಿದೆ.

ಆದ್ದರಿಂದ ಸದರಿ ಸುತ್ತೋಲೆಯಲ್ಲಿ ನಮೂದಿರುವ ಸೇವಾ ಸೌಲಭ್ಯವನ್ನು ಎಲ್ಲಾ ಅಗ್ನಿಶಾಮಕ ಠಾಣಾಧಿಕಾರಿಗಳು ಹಾಜರಾತಿ (ರೋಲ್ ಕಾಲ್) ಸಮಯದಲ್ಲಿ ಕರ್ತವ್ಯ ನಿರತ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳ ಗಮನಕ್ಕೆ ತರಲು ಸೂಚಿಸಲಾಗಿದೆ.

50,00 ಲಕ್ಷಗಳಿಗೆ ಹೆಚ್ಚಿಸಲಾಗಿದೆ. ಈ ಯೋಜನೆಯನ್ನು ವಿಮಾ ಕಂಪನಿಗೆ ವಹಿಸದೇ ಆಕಸ್ಮಿಕ ಅಪಘಾತದಲ್ಲಿ ಮೃತಪಟ್ಟ ಕರ್ತವ್ಯ ನಿರತ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ನೌಕರರ ಕುಟುಂಬಗಳಿಗೆ ನೀಡುವ ವಿಶೇಷ ಗುಂಪು ವಿಮಾ ಮೊತ್ತವನ್ನು ನೇರವಾಗಿ ಇಲಾಖೆಯ ಸಂಬಂಧಪಟ್ಟ ಲೆಕ್ಕಶೀರ್ಷಿಕೆಯಡಿ ಪಾವತಿ ಮಾಡಲು ಸೂಚಿಸಿ ಆದೇಶಿಸಲಾಗಿದೆ.

ಆದ್ದರಿಂದ ಸದರಿ ಸುತ್ತೋಲೆಯಲ್ಲಿ ನಮೂದಿರುವ ಸೇವಾ ಸೌಲಭ್ಯವನ್ನು ಎಲ್ಲಾ ಅಗ್ನಿಶಾಮಕ ಠಾಣಾಧಿಕಾರಿಗಳು ಹಾಜರಾತಿ (ರೋಲ್ ಕಾಲ್) ಸಮಯದಲ್ಲಿ ಕರ್ತವ್ಯ ನಿರತ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳ ಗಮನಕ್ಕೆ ತರಲು ಸೂಚಿಸಲಾಗಿದೆ.

ಶನಿವಾರ, ಅಕ್ಟೋಬರ್ 18, 2025

ರಾಜ್ಯ `ಸರ್ಕಾರಿ ನೌಕರರೇ' ಗಮನಿಸಿ : `ಆರೋಗ್ಯ ಸಂಜೀವಿನಿ'ಯಡಿ ಸಿಗುವ ಚಿಕಿತ್ಸಾ ಸೌಲಭ್ಯಗಳು, ಆಸ್ಪತ್ರೆಗಳ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ

27000 ಸಾವಿರಗಳಿಗೆ ಹೆಚ್ಚಳ ಮಾಡಿದೆ. ವಿವಾಹಿತ ಮಹಿಳಾ ನೌಕರರ ತಂದೆ-ತಾಯಿಯೂ ಸಹ ಈ ಯೋಜನೆಯ ವ್ಯಾಪ್ತಿಗೆ ಒಳಪಡಲಿದ್ದಾರೆ.

ಆರೋಗ್ಯ ಸಂಜೀವಿನಿ ಯೋಜನೆಯಡಿಯಲ್ಲಿ ನೋಂದಾಯಿತವಾಗಿರುವ ಆಸ್ಪತ್ರೆಗಳು, ಚಿಕಿತ್ಸಾ ಸೌಲಭ್ಯಗಳು ಮತ್ತು ಇತರೆ ಉಪಯುಕ್ತ ಮಾಹಿತಿಯ ಕೈಪಿಡಿ

27000 ಸಾವಿರಗಳಿಗೆ ಹೆಚ್ಚಳ ಮಾಡಿದೆ. ವಿವಾಹಿತ ಮಹಿಳಾ ನೌಕರರ ತಂದೆ-ತಾಯಿಯೂ ಸಹ ಈ ಯೋಜನೆಯ ವ್ಯಾಪ್ತಿಗೆ ಒಳಪಡಲಿದ್ದಾರೆ.

ಆರೋಗ್ಯ ಸಂಜೀವಿನಿ ಯೋಜನೆಯಡಿಯಲ್ಲಿ ನೋಂದಾಯಿತವಾಗಿರುವ ಆಸ್ಪತ್ರೆಗಳು, ಚಿಕಿತ್ಸಾ ಸೌಲಭ್ಯಗಳು ಮತ್ತು ಇತರೆ ಉಪಯುಕ್ತ ಮಾಹಿತಿಯ ಕೈಪಿಡಿ

ರಾಜ್ಯ `ಸರ್ಕಾರಿ ನೌಕರರೇ' ಗಮನಿಸಿ : `ಆರೋಗ್ಯ ಸಂಜೀವಿನಿ ಯೋಜನೆ' ನೋಂದಣಿ ಕುರಿತು ಸರ್ಕಾರದಿಂದ ಮಹತ್ವದ ಆದೇಶ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಸದಸ್ಯರಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸೆಗಳನ್ನು ಒದಗಿಸಲು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ...