ಹೈದರಾಬಾದ್ ಕರ್ನಾಟಕ ಪ್ರದೇಶ

ಹೈದರಾಬಾದ್ ಕರ್ನಾಟಕ ಪ್ರದೇಶ
Hyderabad Karnataka

ಗುರುವಾರ, ಸೆಪ್ಟೆಂಬರ್ 19, 2024

7th Pay Commission: ಸರ್ಕಾರಿ ನೌಕರರ ರಜೆ ಸೌಲಭ್ಯಗಳ ಶಿಫಾರಸುಗಳು

7th Pay Commission: ಸರ್ಕಾರಿ ನೌಕರರ ರಜೆ ಸೌಲಭ್ಯಗಳ ಶಿಫಾರಸುಗಳು


ರಾಜ್ಯ ಸರ್ಕಾರಿ ನೌಕರರಿಗೆ ಪ್ರತಿ ವರ್ಷ 30 ದಿನಗಳ ಗಳಿಕೆ ರಜೆಯನ್ನು ಮಂಜೂರು ಮಾಡಲಾಗುತ್ತದೆ. ಅವರು ಪ್ರತಿ ವರ್ಷವೂ 15 ದಿನಗಳ ಗಳಿಕೆ ರಜೆ ನಗದೀಕರಣವನ್ನು ಪಡೆಯಬಹುದು ಮತ್ತು ನಿವೃತ್ತಿಯವರೆಗೆ 300 ದಿನಗಳ ಗಳಿಕೆ ರಜೆಯನ್ನು ಸಂಗ್ರಹಿಸಿಕೊಳ್ಳಬಹುದು. ಪ್ರಸಕ್ತದಲ್ಲಿರುವ, ವರ್ಷಕ್ಕೆ 15 ದಿನಗಳ ಗಳಿಕೆ ರಜೆ ನಗದೀಕರಣ ಸೌಲಭ್ಯದ ಬದಲಾಗಿ 30 ದಿನಗಳಿಗೆ ಮತ್ತು 300 ದಿನಗಳ ಗಳಿಕೆ ರಜೆಯ ಸಂಗ್ರಹಣೆಯನ್ನು 400 ದಿನಗಳಿಗೆ ಹೆಚ್ಚಿಸುವಂತೆ ಹಲವು ನೌಕರರ ಸಂಘಗಳು ಮತ್ತು ವೈಯಕ್ತಿಕವಾಗಿ ನೌಕರರಿಂದ ಮನವಿಗಳನ್ನು ಆಯೋಗವು ಸ್ವೀಕರಿಸಿರುತ್ತದೆ.


ಗಳಿಕೆ ರಜೆ ನಗದೀಕರಣ ಮಾಡಬಹುದಾದ ಭಾಗದಲ್ಲಿ ಮತ್ತಷ್ಟು ಕಡಿತಗೊಳಿಸುವುದರಿಂದ, ಗಳಿಕೆ ರಜೆಯ ಉದ್ದೇಶಕ್ಕೆ ವಿರುದ್ಧವಾಗಲಿದೆ ಎಂಬುದು ಆಯೋಗದ ಅಭಿಪ್ರಾಯವಾಗಿದೆ. ಆದ್ದರಿಂದ, ಪ್ರಸ್ತುತ ಜಾರಿಯಲ್ಲಿರುವ ಗಳಿಕೆ ರಜೆ ನಗದೀಕರಣದಲ್ಲಿ ಮತ್ತು ಗಳಿಕೆ ರಜೆ ಸಂಗ್ರಹಣೆ ಮಿತಿಯಲ್ಲಿ ಯಾವುದೇ ಬದಲಾವಣೆಯನ್ನು ಆಯೋಗವು ಶಿಫಾರಸು, ಮಾಡುವುದಿಲ್ಲ, 300 ದಿನಗಳ ಸಂಗ್ರಹಣೆಯ ಮಿತಿ ಮತ್ತು ವರ್ಷಕ್ಕೊಮ್ಮೆ 15 ದಿನಗಳ ಗಳಿಕೆ ರಜೆ ನಗದೀಕರಣ ಪದ್ಧತಿಯು ಇತರೆ ಬಹುತೇಕ ನರೆ ರಾಜ್ಯಗಳಲ್ಲಿ ಜಾರಿಯಲ್ಲಿರುವ ಮಾದರಿಯಲ್ಲಿಯೇ ಇದೆ ಎಂಬುದನ್ನು ಇಲ್ಲಿ ಗಮನಿಸಬಹುದು ಎಂದು ಆಯೋಗ ಹೇಳಿದೆ.


ಬಿಡುವಿನ ರಜೆ ಇರುವ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಾಜ್ಯ ಸರ್ಕಾರದ ಶಿಕ್ಷಕರು ಮತ್ತು ಉಪನ್ಯಾಸಕರು ತಮ್ಮನ್ನು ಬಿಡುವಿನ ರಜೆ ಇಲ್ಲದ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಸಮವಾಗಿ ಪರಿಗಣಿಸುವಂತೆ ಮತ್ತು ತಾವು ಬಿಡುವಿನ ರಜೆಯಲ್ಲಿಯೂ ಸಂವೀಕ್ಷಣೆ ಮತ್ತು ಪರೀಕ್ಷಾ ಪತ್ರಿಕೆಗಳ ಮೌಲ್ಯಮಾಪನ ಒಳಗೊಂಡಂತೆ ವಿವಿಧ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದು, ಬಿಡುವಿನ ರಜೆಯ ಸೌಲಭ್ಯಗಳಿಂದ ವಂಚಿತರಾಗುವುದರಿಂದ ಬಿಡುವಿನ ರಜೆ ಇಲ್ಲದ ಸಿಬ್ಬಂದಿಗೆ ಲಭ್ಯವಿರುವ ಎಲ್ಲಾ ರಜೆ ಸೌಲಭ್ಯಗಳನ್ನು ನೀಡುವಂತೆ ಕೋರಿರುತ್ತಾರೆ. ಆಯೋಗವು ಈ ಬೇಡಿಕೆಯನ್ನು ಪರಿಶೀಲಿಸಿದ್ದು, ಬಿಡುವಿನ ರಜೆ ಪ್ರವರ್ಗದ ನೌಕರರಿಗೆ ಬಿಡುವಿನ ರಜೆ ಅವಧಿಯಲ್ಲಿ ಮಾಡುವ ಹೆಚ್ಚಿನ ಕೆಲಸಗಳಿಗೆ ಸೂಕ್ತ ಪರಿಹಾರ ದೊರೆಯುತ್ತಿರುವುದರಿಂದ ಅವರ ಈ ಬೇಡಿಕೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಡುತ್ತದೆ.

ರಜಾ ಪ್ರಯಾಣ ರಿಯಾಯಿತಿ (ಎ‍ಟಿಸಿ): ಪ್ರಸ್ತುತ ಸರ್ಕಾರಿ ನೌಕರರಿಗೆ ತಮ್ಮ ಸೇವಾವಧಿಯಲ್ಲಿ ಎರಡು ಬಾರಿ, ಭಾರತದಲ್ಲಿನ ಯಾವುದೇ ಸ್ಥಳಕ್ಕೆ ಪ್ರವಾಸವನ್ನು ಕೈಗೊಳ್ಳಲು ರಜಾ ಪ್ರಯಾಣ ರಿಯಾಯಿತಿ ಸೌಲಭ್ಯವು ಲಭ್ಯವಿರುತ್ತದೆ. ಇದರ ಮೊದಲ ಬ್ಲಾಕ್ 1ನೇ ವರ್ಷದಿಂದ 15 ವರ್ಷಗಳ ಸೇವಾವಧಿಯವರೆಗೆ ಮತ್ತು ಎರಡನೇ ಬ್ಲಾಕ್ 16ನೇ ವರ್ಷದ ಸೇವೆಯಿಂದ ವಯೋನಿವೃತ್ತಿ ಅಥವಾ ಸೇವೆ ಕೊನೆಗೊಳ್ಳುವ ದಿನಾಂಕದವರೆಗೆ ಇರುತ್ತದೆ.


ರಜಾ ಪ್ರಯಾಣ ರಿಯಾಯಿತಿ ಸೌಲಭ್ಯವನ್ನು ಇಡೀ ಸೇವಾವಧಿಯಲ್ಲಿ ಎರಡು ಬಾರಿಗೆ ಬದಲು ನಾಲ್ಕು ವರ್ಷಗಳಲ್ಲಿ ಒಂದು ಬಾರಿಗೆ ಹೆಚ್ಚಿಸಲು ಮತ್ತು ಪ್ರವಾಸದ ಮೇಲೆ ಹೋಗುವ ನೌಕರರಿಗೆ ಮಂಜೂರು ಮಾಡುವ ರೀತಿಯಲ್ಲಿ ದಿನಭತ್ಯೆಯನ್ನು ಸಹ ನೀಡಬೇಕೆಂದು ಹಲವು ನೌಕರರ ಸಂಘಗಳು ಮತ್ತು ನೌಕರರಿಂದ ಮನವಿಗಳನ್ನು ಆಯೋಗಕ್ಕೆ ಬಂದಿದೆ


ನೌಕರರು ರಜಾ ಪ್ರಯಾಣ ರಿಯಾಯಿತಿ ಸೌಲಭ್ಯವನ್ನು ಬಳಸಿಕೊಳ್ಳುವುದನ್ನು ಪ್ರೋತ್ಸಾಹಿಸಬೇಕು ಎಂಬುದನ್ನು ಆಯೋಗವು ಒಪ್ಪುತ್ತದೆ. ಆದ್ದರಿಂದ, ರಜಾ ಪ್ರಯಾಣ ರಿಯಾಯಿತಿ ಸೌಲಭ್ಯವನ್ನು ಸೇವೆಯಲ್ಲಿ 2 ಬಾರಿಯಿಂದ 3 ಬಾರಿಗೆ ಹೆಚ್ಚಿಸಲು, ಮೊದಲನೇ ಬ್ಲಾಕ್ ಅವಧಿಯು 1ನೇ ವರ್ಷದಿಂದ 10ನೇ ವರ್ಷದ ಸೇವಾವಧಿಯವರೆಗೆ, ಎರಡನೇ ಬ್ಲಾಕ್ ಅವಧಿಯು 11ನೇ ವರ್ಷದ ಸೇವೆಯಿಂದ 20ನೇ ವರ್ಷದ ಸೇವಾವಧಿಯವರೆಗೆ ಮತ್ತು ಮೂರನೇ ಬ್ಲಾಕ್ ಅವಧಿಯು 21ನೇ ವರ್ಷದ ಸೇವೆಯಿಂದ ಅವರ ನಿವೃತ್ತಿ ಅಥವಾ ಸೇವೆ ಕೊನೆಗೊಳ್ಳುವ ದಿನಾಂಕದವರೆಗೆ ಹೆಚ್ಚಿಸಲು ಆಯೋಗವು ಶಿಫಾರಸು ಮಾಡಿದೆ.


ನೌಕರರು ಕರ್ತವ್ಯ ನಿರ್ವಹಣೆಯ ಅವಧಿಯಲ್ಲಿ ಕೆಲಸದ ಸ್ಥಳದಿಂದ ಹೊರಗೆ ಕರ್ತವ್ಯ ನಿರ್ವಹಿಸುವ ಅವಧಿಗೆ ಮಾತ್ರ ದಿನ ಭತ್ಯೆಯನ್ನು ನೀಡಲಾಗುತ್ತಿದ್ದು, ರಜಾ ಪ್ರಯಾಣ ರಿಯಾಯಿತಿ (LTC) ಅವಧಿಯನ್ನು ಕರ್ತವ್ಯದ ಅವಧಿಗೆ ಸಮವಾಗಿ ಪರಿಗಣಿಸಲು ಸಾಧ್ಯವಿಲ್ಲದಿರುವುದರಿಂದ, ದಿನಭತ್ಯೆ ನೀಡಬೇಕೆಂಬ ಬೇಡಿಕೆಯಲ್ಲಿ ಯಾವುದೇ ಸಮರ್ಥನೆಯು ಕಂಡುಬರುತ್ತಿಲ್ಲ. ಇಂತಹ ಭತ್ಯೆಯು ಭಾರತ ಸರ್ಕಾರದಲ್ಲಾಗಲಿ ಅಥವಾ ಇತರೆ ಯಾವುದೇ ರಾಜ್ಯಗಳಲ್ಲಾಗಲಿ ಜಾರಿಯಲ್ಲಿರುವುದಿಲ್ಲ ಎಂದು ಆಯೋಗ ಹೇಳಿದೆ.


ರಾಜ್ಯದ ಆರೋಗ್ಯ ಇಲಾಖೆಯ 'NHM ನೌಕರ'ರಿಗೆ ಮಹತ್ವದ ಮಾಹಿತಿ: ಹೀಗಿವೆ ನಿಮಗೆ ಸಿಗುವ 'ರಜಾ ಸೌಲಭ್ಯ'ಗಳು

ಈ ಬಗ್ಗೆ ರಾಷ್ಟ್ರೀಯ ಆರೋಗ್ಯ ಅಭಿಯಾನದ ಮುಖ್ಯ ಆಡಳಿತಾಧಿಕಾರಿಗಳು ದಿನಾಂಕ 10-02-2023ರಲ್ಲೇ ಸುತ್ತೋಲೆಯನ್ನು ಹೊರಡಿಸಿದ್ದಾರ...