NEW BANKING RULES: ಎಟಿಎಂನಲ್ಲಿ ಕ್ಯಾಶ್ ವಿತ್ಡ್ರಾ ಶುಲ್ಕ ಹೆಚ್ಚಳ- ಶೀಘ್ರವೇ ಹೊಸ ಬ್ಯಾಂಕಿಂಗ್ ನಿಯಮಗಳು ಜಾರಿಗೆ
ನಿಮ್ಮ ಬ್ಯಾಂಕ್ನದ್ದಲ್ಲದ ಎಟಿಎಂಗಳಲ್ಲಿ ನೀವು ತಿಂಗಳಿಗೆ 3 ರಿಂದ 5 ವಹಿವಾಟುಗಳನ್ನು ಮಾಡಬಹುದು. ಹಣ ವಿತ್ಡ್ರಾ ಆಗಬಹುದು ಅಥವಾ ಬೇರೆ ಟ್ರಾನ್ಸಾಕ್ಷನ್ ಕೂಡ ಆಗಿರಬಹುದು. ಈ ನಿಗದಿತ ಮಿತಿಯನ್ನು ಮೀರಿದರೆ ಶುಲ್ಕ ವಿಧಿಸಲಾಗುತ್ತದೆ. ಕ್ಯಾಷ್ ವಿತ್ಡ್ರಾ ಮಾಡಿದರೆ ವಿಧಿಸುವ ಶುಲ್ಕವನ್ನು 17 ರೂನಿಂದ 19 ರೂಗೆ ಹೆಚ್ಚಿಸಲಾಗುತ್ತಿದೆ. ಅಕೌಂಟ್ ಬ್ಯಾಲೆನ್ಸ್ ಪರಿಶೀಲನೆ ಸೇರಿದಂತೆ ನಾನ್-ಟ್ರಾನ್ಸಾಕ್ಷನ್ ಶುಲ್ಕ 6 ರೂ ಇಂದ 7 ರೂ ಆಗುತ್ತದೆ.
ಎಸ್ಬಿಐ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಕೆನರಾ ಬ್ಯಾಂಕ್ ಮೊದಲಾದ ಪ್ರಮುಖ ಬ್ಯಾಂಕುಗಳು ತಮ್ಮ ಮಿನಿಮಮ್ ಬ್ಯಾಲನ್ಸ್ ನಿಯಮಗಳನ್ನು ಪರಿಷ್ಕರಿಸುತ್ತಿವೆ. ನಗರ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಬೇರೆ ಬೇರೆ ಮಿನಿಮಮ್ ಬ್ಯಾಲನ್ಸ್ ನಿಯಮಗಳನ್ನು ಅಳವಡಿಸಲಾಗುತ್ತಿದೆ.
ಇದಲ್ಲದೆ ಸೇವಿಂಗ್ಸ್ ಬ್ಯಾಂಕ್ ಅಕೌಂಟ್ಗಳಲ್ಲಿ ಹೆಚ್ಚು ಹಣ ಇದ್ದರೆ ಹೆಚ್ಚು ಬಡ್ಡಿದರ, ಕಡಿಮೆ ಹಣ ಇದ್ದರೆ ಕಡಿಮೆ ಬಡ್ಡಿದರ ನಿಗದಿ ಮಾಡಲಾಗುತ್ತಿದೆ. ಇನ್ನು ಎಸ್ಬಿಐ, ಐಡಿಎಫ್ಸಿ ಫಸ್ಟ್ ಬ್ಯಾಂಕ್ ಸೇಕಿ ಕೆಲ ಪ್ರಮುಖ ಬ್ಯಾಂಕುಗಳು ತಮ್ಮ ವಿಸ್ತಾರ ಕ್ರೆಡಿಟ್ ಕಾರ್ಡ್ಗಳ ನಿಯಮದಲ್ಲಿ ಬದಲಾವಣೆ ಮಾಡುತ್ತಿವೆ. ಟಿಕೆಟ್ ವೋಚರ್, ರಿನಿವಲ್ ಲಾಭ, ಮೈಲ್ಸ್ಟೋನ್ ರಿವಾರ್ಡ್ ಸೇರಿ ಇತರೆ ಉತ್ತೇಜಕ ಪ್ಲಾನ್ಗಳನ್ನು ಕೈಬಿಡಲಾಗುತ್ತಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ