ಹೈದರಾಬಾದ್ ಕರ್ನಾಟಕ ಪ್ರದೇಶ

ಹೈದರಾಬಾದ್ ಕರ್ನಾಟಕ ಪ್ರದೇಶ
Hyderabad Karnataka

ಶುಕ್ರವಾರ, ಮಾರ್ಚ್ 14, 2025

retirement plan

ನಿವೃತ್ತಿಯ ನಂತರ ನೆಮ್ಮದಿಯ ಜೀವನವನ್ನ ನಡೆಸಲು ನಮಗೆ ಹಣದ ಅಗತ್ಯ ಹೆಚ್ಚಿರುತ್ತದೆ. ನಿವೃತ್ತಿಯ ನಂತರ ಯಾವುದೇ ಸ್ಥಿರ ಆದಾಯವಿಲ್ಲದೇ ಹಣಕಾಸು ನಿರ್ವಹಣೆ ಮಾಡುವುದು ಕಷ್ಟವಾಗಬಹುದು.

ಹೀಗಾಗಿ ನೀವು ನಿಮ್ಮ ನಿವೃತ್ತಿಗಾಗಿ ಈಗಲೇ ಹಣವನ್ನ ಉಳಿತಾಯ ಮಾಡಲು ಆರಂಭ ಮಾಡುವುದು ಉತ್ತಮ. ಆದ್ರೆ ಹೇಗೆ ಆರಂಭ ಮಾಡುವುದು ಎಂಬ ಗೊಂದಲ ನಮಗೆ ಹೆಚ್ಚಿರುತ್ತದೆ. ಅದಕ್ಕಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ ಅವುಗಳು ಯಾವುವು ಎಂಬ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ...

ಅನೇಕ ಜನರು ಈಗಾಗಲೇ ನಿವೃತ್ತಿಗಾಗಿ ಹಣವನ್ನು ಕೂಡಿಡಲು ಆರಂಭ ಮಾಡುತ್ತಿದ್ದಾರೆ. ಜೊತೆಗೆ ನಿವೃತ್ತಿಗಾಗಿ ತಯಾರಿಗಳನ್ನ ಕೂಡ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಬ್ಯಾಂಕ್‌ಬಜಾರ್ ಮನಿಮೂಡ್ 2025ರ ಸಮೀಕ್ಷೆಯ ವರದಿ ಪ್ರಕಾರ ಈಗಾಗಲೇ ಶೇಕಡಾ 58 ರಷ್ಟು ಜನರು ನಿವೃತ್ತಿ ಕಾರ್ಪಸ್‌ ಅನ್ನು ಈಗಾಗಲೇ ಸಿದ್ಧಪಡಿಸಿದ್ದಾರೆ ಎಂದು ವರದಿ ತಿಳಿಸಿದೆ. ಅಲ್ಲದೆ ಇದು ಉತ್ತಮ ಸಭ್ಯಸವನ್ನ ಸೂಚಿಸುತ್ತದೆ. ಹಾಗೆ ಭಾರತದಲ್ಲಿ ಮೂರನೇ ಎರಡು ಭಾಗದಷ್ಟು ಜನರು ಸಧ್ಯದಲ್ಲೇ ನಿವೃತ್ತಯನ್ನ ಹೊಂದಲಿದ್ದಾರೆ ಎಂದು ವರದಿ ತಿಳಿಸಿದೆ. ಸಮಯ ಮತ್ತು ಹಣ ಮುಖ್ಯವಾಗುತ್ತದೆ ಈ ನಿವೃತ್ತಿ ಯೋಜನೆ ಎರಡು ಪ್ರಮುಖ ಅಂಶಗಳ ಮೇಲೆ ನಿಂತಿದೆ. ಒಂದು ಸಮಯ ಮತ್ತೊಂದು ಹಣ. ನಿವೃತ್ತಯ ವೇಳೆ ಉತ್ತಮ ಆಯೋಗ್ಯದ ಜೊತೆಜೊತೆಗೆ ಉತ್ತಮ ಆರ್ಥಿಕ ಸ್ಥಿರತೆಯನ್ನ ಕೂಡ ಕಾಪಾಡಿಕೊಳ್ಳಬೇಕು. ನಿವೃತ್ತಿಯ ಸಮಯದಲ್ಲಿ ನೆಮ್ಮದಿಯ ಜೀವನ ನಡೆಸಲು ನೀವು ನಿಮ್ಮ ಹಣವನ್ನ ಉಳಿತಾಯ ಮಾಡಲು ಬೇಗನೇ ಆರಂಭಿಸುವುದು ಮುಖ್ಯ.

ನಿಮ್ಮ ದಿನನಿತ್ಯದ ಜೀವನದಲ್ಲಿ ಸಾಕಷ್ಟು ತೊಂದರೆಗಳು ಎದುರಾಗಬಹುದು. ಅಲ್ಲದೆ ನಿಮ್ಮ ಖರ್ಚುಗಳು ಕೂಡ ಹೆಚ್ಚಾಗಬಹುದು. ಇದರಿಂದಾಗಿ ನೀವು ಹಣದುಬ್ಬರಕ್ಕೆ ತುತ್ತಾಗಬಹುದು. ಅಂತಹ ಸಮಯದಲ್ಲಿ ಜನರು ಸಾಲದ ಮೊರೆ ಹೋಗಬಹುದು. ಅಂತಹ ಪರಿಸ್ಥಿತಿಗಳನ್ನ ತಪ್ಪಿಸಲು ಸುರಕ್ಷಿತ ಭವಿಷ್ಯಕ್ಕಾಗಿ ಸರಿಯಾದ ಕ್ರಮಗಳನ್ನ ತೆಗೆದುಕೊಳ್ಳುವುದು ಬಹಳ ಮುಖ್ಯ. ಹೆಚ್ಚಿನ ಪ್ರಯೋಜನಗಳಿಗಾಗಿ ಬೇಗ ಆರಂಭಿಸಿ ನೀವು ನಿಮ್ಮ 20 ಮತ್ತು 30ರ ದಶಕದಲ್ಲಿ ನಿಮ್ಮ ನಿವೃತ್ತಿ ದೂರವಿದೆ ಎನ್ನಿಸಬಹುದು ಆದ್ರೂ ಕೂಡ ನೀವು ಆವಾಗ್ಲೆ ಆರಂಭ ಮಾಡುವುದು ಉತ್ತಮ. ಕೆಲವರು ನಿವೃತ್ತಿ ಉಳಿತಾಯವನ್ನ ವಿಳಂಬಗೊಳಿಸುತ್ತಾರೆ. ಆದ್ರೆ ನೀವು ಎಷ್ಟು ಬೇಗ ಆರಂಭ ಮಡುತ್ತೀರೋ ಅಷ್ಟು ಪ್ರಯೋಜನಗಳನ್ನ ಗಳಿಸಬಹುದು. ಬೇಗ ಆರಂಭ ಮಾಡುವ ಮೂಲಕ ನೀವು ಹೆಚ್ಚಿನ ಆದಾಯವನ್ನ ಕೂಡ ಗಳಿಸಬಹುದು.

ನಿವೃತ್ತಿಯ ಅಗತ್ಯಗಳನ್ನ ಅಂದಾಜಿಸಿ ನೀವು ನಿಮ್ಮ ನಿವೃತ್ತಿ ಹಣವನ್ನ ಉಳಿತಾಯ ಮಾಡುವ ಮೊದಲು ನಿಮ್ಮ ನಿವೃತ್ತಿಯ ಅಗತ್ಯಗಳ ಬಗ್ಗೆ ತಿಳಿಯಿರಿ. ಉತ್ತಮ ಜೀವನಶೈಲಿಗಾಗಿ ಬೇಕಾಗುವ ಕಾರ್ಪಸ್‌ ಅನ್ನು ಅಂದಾಜು ಮಾಡಿ. ನಂತರ ಹಣವನ್ನ ಉಳಿತಾಯ ಮಾಡಲು ಆರಂಭಿಸಿ. ವೈದ್ಯಕೀಯ ವೆಚ್ಚಗಳು, ಸಾಲಗಳು, ಹಣದುಬ್ಬರ ಸೇರಿದಂತೆ ಎಲ್ಲಾ ಅಂಶಗಳನ್ನ ಗಮನದಲ್ಲಿಟ್ಟುಕೊಂಡು ನಿವೃತ್ತಿಯ ಅಗತ್ಯಗಳನ್ನ ಅಂದಾಜಿಸಬೇಕು. ನಿಮಗೆ ಈಗ 30 ವರ್ಷ ಆಗಿದ್ದರೆ ನೀವು ಈಗ 50,000ಗಳನ್ನ ಖರ್ಚು ಮಾಡುತ್ತಿದ್ದರೆ, ನಿಮಗೆ 60 ವರ್ಷಗಳಾದ ಮೇಲೆ ಆ ಖರ್ಚು 2.22 ಲಕ್ಷಕ್ಕೆ ಏರಿಕೆಯಾಗಬಹುದು. ಅಲ್ಲದೆ ನಿಮ್ಮ ನಿವೃತ್ತಿಯ ನಂತರ ನಿಮ್ಮ ಅಗತ್ಯಗಳು ಹೆಚ್ಚಾಗಬಹುದು. ಹೀಗಾಗಿ ಸರಿಯಾಗಿ ಅಂದಾಜಿಸಿ ಉಳಿತಾಯವನ್ನ ಮಾಡಬೇಕು.

ಸರಿಯಾದ ಹೂಡಿಕೆ ಆಯ್ಕೆಯನ್ನ ಆರಿಸಿ ನಿವೃತ್ತಿಗಾಗಿ ನಿಧಿಯನ್ನ ನಿರ್ಮಿಸುವಾಗ ಹೂಡಿಕೆಗಳನ್ನ ಆಯ್ಕೆ ಮಾಡುವುದು ಉತ್ತಮ ಅದರಲ್ಲೂ ನೀವು ಎಲ್ಲಿ ಹೂಡಿಕೆ ಮಾಡುತ್ತೀರಿ ಎನ್ನುವುದು ಕೂಡ ಮುಖ್ಯವಾಗುತ್ತದೆ. ಭವಿಷ್ಯ ನಿಧಿ(PF): ಇದು ವಿಶ್ವಾಸಾರ್ಹ ಹೂಡಿಕೆ ಯೋಜನೆ ಇದಾಗಿದೆ. ಅಲ್ಲದೆ ದಿರ್ಘಕಾಲದ ಉಳಿತಾಯವನ್ನ ನೀಡುತ್ತದೆ. ಇಕ್ವಿಟಿ ಹೂಡಿಕೆಗಳು (ಸ್ಟಾಕ್‌ಗಳು ಅಥವಾ SIPಗಳು): ಇದು ಕೂಡ ಹೂಡಿಕೆಗೆ ಉತ್ತಮ ಆಯ್ಕೆಯಾಗಿದೆ. ಅಲ್ಲದೆ ಇದು ಸಮಯಕಳೆದಂತೆ ಉತ್ತಮ ಆದಾಯವನ್ನ ನೀಡುತ್ತದೆ.

ರಾಷ್ಟ್ರೀಯ ಪಿಂಚಣಿ ಯೋಜನೆ (NPS): ಇದು ಸುರಕ್ಷಿತ ಹೂಡಿಕೆ ಯೋಜನೆಗಳಲ್ಲಿ ಒಂದಾಗಿದೆ. ತೆರಿಗೆ ಪ್ರಯೋಜನಗಳ ಜೊತೆಗೆ ಸರ್ಕಾರ ಬೆಂಬಲಿತ ಆಯ್ಕೆ ಇದಾಗಿದೆ. ಸಾರ್ವಜನಿಕ ಭವಿಷ್ಯ ನಿಧಿ (PPF): ಸುರಕ್ಷಿತ ಹೂಡಿಕೆ ಆಯ್ಕೆ ಇದಾಗಿದೆ. ನಿವೃತ್ತಿಗಾಗಿ ಉಳಿತಾಯ ಮಾಡುವವರಿಗೆ ಉತ್ತಮ ಆಯ್ಕೆಯಾಗಿದೆ. ನೀವು ಹೂಡಿಕೆ ಮಾಡುವ ಮೂನ್ನ ತಿಳಿದ ತಜ್ಞರ ಸಲಹೆ ಪಡೆಯುವುದು ಉತ್ತಮ. ನಿಮ್ಮ ಹಣಕಾಸಿನ ಗುರಿಗಳಿಗೆ ತಕ್ಕಂತೆ ನಿಮಗೆ ಹೂಡಿಕೆ ಮಾಡಲು ಸಹಾಯವಾಗುತ್ತದೆ. ನಿಯಮಿತ ಮತ್ತು ಸ್ಥಿರವಾದ ಹೂಡಿಕೆ ಯೋಜನೆಗಳನ್ನ ಆಯ್ಕೆ ಮಾಡಿಕೊಂಡು ಹೂಡಿಕೆಯನ್ನ ಆರಂಭಿಸಬೇಕು.

ಇದು ನಿಮಗೆ ಸಮಯ ಕಳೆದಂತೆ ಗಣನೀಯ ಕಾರ್ಪಸ್‌ ಅನ್ನು ಗಳಿಸಲು ಸಹಾಯ ಮಾಡುತ್ತದೆ. ಉತ್ತಮ ಯೋಜನೆಯೊಂದಿಗೆ ನೀವು ನಿಮ್ಮ ನಿವೃತ್ತಿಗಾಗಿ ಹಣವನ್ನ ಕೂಡಿಡುವ ಮೂಲಕ ನೀವು ನಿವೃತ್ತಿ ಸಮಯದಲ್ಲಿ ನೆಮ್ಮದಿಯ ಜೀವನವನ್ನ ಕಟ್ಟಿಕೊಳ್ಳಬಹುದು.

ಈಗ ಜಾರಿಯಲ್ಲಿ ಇರುವ ಪಿಂಚಣಿ ಯೋಜನೆಗಳು

ಭಾರತದಲ್ಲಿ ಎನ್ ಪಿಎಸ್ ಯೋಜನೆ ಜಾರಿಯಲ್ಲಿದೆ. ಇದಲ್ಲದೆ ಅಸಂಘಟಿತ ವಲಯಕ್ಕಾಗಿ ಸರ್ಕಾರಿ ಪಿಂಚಣಿ ಯೋಜನೆ ಜಾರಿಯಲ್ಲಿವೆ. ಇವುಗಳಲ್ಲಿ ಒಂದು ಅಟಲ್ ಪಿಂಚಣಿ ಯೋಜನೆಯಾಗಿದೆ.

ಅಟಲ್ ಪಿಂಚಣಿ ಯೋಜನೆ ಎಂದರೇನು?

ಅಟಲ್ ಪಿಂಚಣಿ ಯೋಜನೆ (Atal Pension Yojana) ಅತ್ಯಂತ ಉತ್ತಮ ಆಯ್ಕೆ. ಅದರಲ್ಲೂ ವಿಶೇಷವಾಗಿ ನಿವೃತ್ತಿಯ ನಂತರ ಪಿಂಚಣಿ ಆವಶ್ಯಕತೆ ಇರುವವರಿಗೆ ಹೆಚ್ಚಿನ ಅನುಕೂಲವಿದೆ.60 ವರ್ಷ ತುಂಬಿದ ವ್ಯಕ್ತಿಗೆ ಪ್ರತಿ ತಿಂಗಳು 1,000 ರಿಂದ 5,000 ರೂ.ಗಳವರೆಗೆ ಪಿಂಚಣಿ ಸಿಗುತ್ತದೆ.ಆದರೆ ಈ ಯೋಜನೆಯಲ್ಲಿ ಪ್ರತಿ ತಿಂಗಳು 210 ರೂಪಾಯಿ ಠೇವಣಿ ಇಡಬೇಕಾಗುತ್ತದೆ.

ಶ್ರಮ ಯೋಗಿ ಮಾನ್ ಧನ್ ಯೋಜನೆ

ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆ (SYM) ದೇಶದ ಬೀದಿ ಬದಿ ವ್ಯಾಪಾರಿಗಳು, ಮನೆ ಕೆಲಸಗಾರರು ಮತ್ತು ಕಾರ್ಮಿಕರಿಗೆ ಆರ್ಥಿಕ ಸುರಕ್ಷತೆ ಒದಗಿಸಲು ಇರುವಂತಹ ಯೋಜನೆ. ಈ ಯೋಜನೆಯು ದೇಶದ ಅಸಂಗತಿತ ಕ್ಷೇತ್ರದ ಕಾರ್ಮಿಕರಿಗೆ, ವಿಶೇಷವಾಗಿ ಅವಶ್ಯಕತೆಯಲ್ಲಿರುವವರಿಗೆ ನಿವೃತ್ತಿ ನಂತರದ ಪಿಂಚಣಿಯನ್ನು ನೀಡುತ್ತದೆ.

ಕಿಸಾನ್ ಮಾನ್ ಧನ್ ಯೋಜನೆ

ಕಿಸಾನ್ ಮಾನ್ ಧನ್ ಯೋಜನೆ (Kisan Mandhan Yojana) ಕರ್ನಾಟಕ ಸೇರಿದಂತೆ ದೇಶಾದ್ಯಾಂತ ಕೃಷಿಕರಿಗೆ ಆರ್ಥಿಕತೆಯನ್ನು ಒದಗಿಸಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯೋಜನೆ. ಈ ಯೋಜನೆಯು ಕೃಷಿಕರ ನಿವೃತ್ತಿ ನಂತರದ ಆರ್ಥಿಕ ಬೆಂಬಲ ನೀಡಿದ ಸಾಲದ ಭಾರವನ್ನು ಕಡಿಮೆ ಮಾಡಲು ಸಹಾಯಗವಾಗುತ್ತದೆ.

ಇದರಲ್ಲಿ, ಹೂಡಿಕೆದಾರರಿಗೆ 60 ವರ್ಷ ತುಂಬಿದ ನಂತರ, ಸರ್ಕಾರ ಪ್ರತಿ ತಿಂಗಳು 3000 ರೂಪಾಯಿ ಪಿಂಚಣಿ ನೀಡುತ್ತದೆ.

ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್)

ಏಕೀಕೃತ ಪಿಂಚಣಿ ಯೋಜನೆ (Unified Pension Scheme)ಯು ಏಪ್ರಿಲ್ 1, 2025 ರಿಂದ ಜಾರಿಗೆ ಬರಲಿರುವಂತಿದ್ದು, ಇದು ದೇಶಾದ್ಯಾಂತ ಉದ್ಯೋಗಿಗಳಿಗೆ ಪಿಂಚಣಿಯ ವ್ಯವಸ್ಥೆಯನ್ನು ಸುಧಾರಿಸಲು ಮತ್ತು ನಿವೃತ್ತಿ ನಂತರವೂ ಆರ್ಥಿಕ ಸುರಕ್ಷತೆ ಒದಗಿಸಲು ಮಹತ್ವದ ಯೋಜನೆ ಆಗಿದೆ. ಈ ಯೋಜನೆಯಡಿಯಲ್ಲಿ, ಒಬ್ಬ ಉದ್ಯೋಗಿ 25 ವರ್ಷಗಳ ಕಾಲ ಕೆಲಸ ಮಾಡಿದ್ದರೆ, ನಿವೃತ್ತಿಯ ಮೊದಲು, ಕೆಲಸದ ಕೊನೆಯ 12 ತಿಂಗಳ ಮೂಲ ವೇತನದ ಶೇಕಡಾ 50ರಷ್ಟು ಹಣ ಪಿಂಚಣಿ ರೂಪದಲ್ಲಿ ಅವರಿಗೆ ಸಿಗುತ್ತದೆ.

ಹೀಗೆ ಹಲವಾರು ಸರ್ಕಾರಿ ಪಿಂಚಣಿ ವ್ಯವಸ್ಥೆ ನಮ್ಮ ದೇಶದಲ್ಲಿ ಜಾರಿಯಲ್ಲಿ ಇವೆ. ಇದರಿಂದ ಕೋಟ್ಯಾಂತರ ಜನ ಇದರ ಅನುಕೂಲ ಪಡೆದುಕೊಂಡ ಆರ್ಥಿಕವಾಗಿ ಸಬಲರಾಗಿದ್ದಾರೆ.


ಕಾಮೆಂಟ್‌ಗಳಿಲ್ಲ:

ರಾಜ್ಯ ಸರ್ಕಾರಿ ನೌಕರ'ರಿಗೆ ಮತ್ತೊಂದು ಸಿಹಿಸುದ್ದಿ ನೀಡಲು ಮುಂದಾದ ಸರ್ಕಾರ

ಈ ಸಂಬಂಧ ರಾಜ್ಯ ಸರ್ಕಾರದಿಂದ ಸಭಾ ಸೂಚನಾ ಪತ್ರವನ್ನು ಹೊರಡಿಸಲಾಗಿದ್ದು, ರಾಜ್ಯ ಸಚಿವ ಸಂಪುಟದ ತೀರ್ಮಾನಿಸಿದಂತೆ ಅಧಿಕಾರಿ, ನೌಕರರು ಮತ್ತು ಅವಲಂಬಿತ ಕುಟುಂಬದ ಸದಸ್ಯರ ಹ...