Government Employee: ಸರ್ಕಾರಿ ನೌಕರರು ಈ ಖಾತೆ ತೆರೆಯುವುದು ಕಡ್ಡಾಯ
ರಾಜ್ಯ ಸರ್ಕಾರಿ ನೌಕರರ ಸಾಮಾಜಿಕ ಭದ್ರತೆಯು ಸರ್ಕಾರದ ಪ್ರಮುಖ ವಿಷಯವಾಗಿದ್ದು, ಸರ್ಕಾರ ಈ ಕುರಿತು ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ. ಇದಕ್ಕಾಗಿ ಈಗ ಆರ್ಥಿಕ ಇಲಾಖೆ ಆದೇಶವೊಂದನ್ನು ಹೊರಡಿಸಿದೆ.
ರಾಜ್ಯ ಸರ್ಕಾರದ ಎಲ್ಲಾ ನೌಕರರು/ ಅಧಿಕಾರಿಗಳು ಬ್ಯಾಂಕ್ ಮತ್ತು ಅಂಚೆ ಕಛೇರಿಗಳಲ್ಲಿ 'ಸಂಬಳ ಪ್ಯಾಕೇಜ್ ಖಾತೆ' ಕಡ್ಡಾಯವಾಗಿ ತೆರೆಯಬೇಕು ಎಂದು ಆರ್ಥಿಕ ಇಲಾಖೆ ಆದೇಶವನ್ನು ಹೊರಡಿಸಿದೆ. ಈ ಖಾತೆ ಹೊಂದಿರುವ ಸರ್ಕಾರಿ ನೌಕರ/ ಅಧಿಕಾರಿಗಳಿಗೆ ಬ್ಯಾಂಕುಗಳು ವಿವಿಧ ಸೌಲಭ್ಯವನ್ನು ನೀಡಲಿವೆ ಎಂದು ಆದೇಶ ತಿಳಿಸಿದೆ.
Government Employee: ಹೊಸ ಪಿಂಚಣಿ ಯೋಜನೆ, ಸರ್ಕಾರಿ ನೌಕರರಿಗೆ ಅಪ್ಡೇಟ್ ಮಾಹಿತಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಸದನದಲ್ಲಿ ವಿವಿಧ ಬ್ಯಾಂಕುಗಳು ಒದಗಿಸುವ ಸಂಬಳ ಪ್ಯಾಕೇಜ್‌ಗಳ ಅಡಿಯಲ್ಲಿ ಎಲ್ಲಾ ನೌಕರರು. (ಖಾಯಂ/ ಗುತ್ತಿಗೆ/ ಹೊರಗುತ್ತಿಗೆ ಇತ್ಯಾದಿ) ಖಾತೆಗಳನ್ನು ತೆರೆಯಲು/ ಆಯ್ಕೆ ಮಾಡಿಕೊಳ್ಳಲು ಕಡ್ಡಾಯಗೊಳಿಸಲಾಗುತ್ತದೆ ಎಂದು ಹೇಳಿದ್ದರು. ಈ ಹೇಳಿಕೆಯ ಬಳಿಕ ಆರ್ಥಿಕ ಇಲಾಖೆ ಸರ್ಕಾರಿ ನೌಕರರಿಗೆ ಸೂಚನೆಯನ್ನು ನೀಡಿದೆ.
Government Employee: ಸರ್ಕಾರಿ ನೌಕರರಿಗೆ ಬ್ಯಾಂಕ್ ಆಫ್ ಬರೋಡ ವಿಶೇಷ ಕೊಡುಗೆ, ವಿವರ
ಅಲ್ಲದೇ ಸರ್ಕಾರಿ ನೌಕರರು ಬ್ಯಾಂಕ್‌ಗಳು/ ಅಂಚೆ ಕಚೇರಿಗಳು ನೀಡುವ PMJJBY ಮತ್ತು PMSBY ಯೋಜನೆಗಳ ಅಡಿಯಲ್ಲಿ ಸ್ವಯಂಪ್ರೇರಿತವಾಗಿ ವಿಮಾ ರಕ್ಷಣೆಯನ್ನು ಪಡೆಯಲು ಉದ್ಯೋಗಿಗಳನ್ನು ಪ್ರೋತ್ಸಾಹಿಸಲಾಗುತ್ತದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದರು.
ಸಂಬಳ ಪ್ಯಾಕೇಜ್ ಖಾತೆ: ಎಲ್ಲಾ ಸರ್ಕಾರಿ ನೌಕರ/ ಅಧಿಕಾರಿ 'ಸಂಬಳ ಪ್ಯಾಕೇಜ್ ಖಾತೆ' ತೆರೆಯುವುದು ಕಡ್ಡಾಯಗೊಳಿಸಲಾಗಿದೆ. ಈ ಖಾತೆ ಹೊಂದಿದ್ದರೆ ಉದ್ಯೋಗಿಗೆ ಬ್ಯಾಂಕ್‌ಗಳು ಕಡಿಮೆ ಬಡ್ಡಿದರದಲ್ಲಿ ಗೃಹ ಸಾಲ ನೀಡುತ್ತವೆ. ಉಚಿತವಾಗಿ ರುಪೇ ಡೆಬಿಟ್ ಕಾರ್ಡ್ ಸೌಲಭ್ಯ ಸಿಗುತ್ತದೆ. ಲಾಕರ್ ಸೇವೆಯಲ್ಲಿ ರಿಯಾಯಿತಿ ಸಿಗಲಿದೆ ಹೀಗೆ ವಿವಿಧ ಸೇವೆ ಸಿಗಲಿದೆ ಎಂದು ಮಾಹಿತಿ ನೀಡಲಾಗಿದೆ.
Government Employee: ಸರ್ಕಾರಿ ನೌಕರರಿಗೆ ಖಡಕ್ ಸೂಚನೆ ಕೊಟ್ಟ ಉಪ ಲೋಕಾಯುಕ್ತರು
'ಸಂಬಳ ಪ್ಯಾಕೇಜ್ ಖಾತೆ' ತೆರೆಯುವಂತೆ ಸೂಚನೆ ನೀಡಿದ್ದರೂ ಸಹ ಹಲವು ಅಧಿಕಾರಿ/ ನೌಕರರು ಇನ್ನೂ ಖಾತೆ ತೆರದಿಲ್ಲ. ಆದ್ದರಿಂದ ವಿವಿಧ ಬ್ಯಾಂಕ್‌ಗಳು, ಅಂಚೆ ಕಛೇರಿಯಲ್ಲಿ ಈ ಮಾದರಿ ಖಾತೆಯನ್ನು ಕಡ್ಡಾಯವಾಗಿ ತೆರೆಯಬೇಕು ಎಂದು ಆರ್ಥಿಕ ಇಲಾಖೆ ತನ್ನ ಆದೇಶದಲ್ಲಿ ತಿಳಿಸಿದೆ.
ಎಲ್ಲಾ ಇಲಾಖೆಗಳ ಮುಖ್ಯಸ್ಥರು ತಮ್ಮ ವ್ಯಾಪ್ತಿಯ ಅಧಿಕಾರಿ/ ನೌಕರರು 'ಸಂಬಳ ಪ್ಯಾಕೇಜ್ ಖಾತೆ' ತೆರೆಯುವಂತೆ ಕ್ರಮ ಕೈಗೊಳ್ಳುವುದು. ಈ ಖಾತೆ ತೆರೆಯುವಂತೆ ಅವರನ್ನು ಪ್ರೋತ್ಸಾಹಿಸಲು ಸಹ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆರ್ಥಿಕ ಇಲಾಖೆ ಸೂಚನೆಯನ್ನು ನೀಡಿದೆ.
30/1/2025ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರಿ ನೌಕರರಿಗೆ ಹಾಲಿ ಜಾರಿಯಲ್ಲಿರುವ ಸಾಮಾಜಿಕ ಭದ್ರತಾ ವ್ಯವಸ್ಥೆಯ ಜೊತೆಗೆ ಇನ್ನಷ್ಟು ಸೌಲಭ್ಯ ಒದಗಿಸಲು ಪ್ರಸ್ತಾವನೆಯನ್ನು ಮಂಡಿಸಿ, ಅನುಮೋದನೆ ನೀಡಲಾಗಿತ್ತು. ಸರ್ಕಾರಿ ನೌಕರರು ಬ್ಯಾಂಕ್‌ಗಳು ನೀಡುವ ವಿವಿಧ ಯೋಜನೆಗಳ ಅಡಿಯಲ್ಲಿ ಸ್ವಯಂಪ್ರೇರಿತವಾಗಿ ವೈಯಕ್ತಿಕ ಅಪಘಾತ ವಿಮಾ ರಕ್ಷಣೆಯನ್ನು ಪಡೆಯಲು ಪ್ರೋತ್ಸಾಹಿಸಲಾಗುತ್ತದೆ ಎಂದು ಸರ್ಕಾರ ಹೇಳಿತ್ತು. ಬ್ಯಾಂಕ್‌ಗಳ ಸಹಯೋಗದಲ್ಲಿ ಸರ್ಕಾರಿ ನೌಕರರಿಗೆ 1 ಕೋಟಿ ರೂ.ಗಳ ಅಪಘಾತ ವಿಮೆಯನ್ನು ಜಾರಿಗೆ ತರುತ್ತಿರುವ ಮೊದಲ ರಾಜ್ಯ ಕರ್ನಾಟಕವಾಗಿದೆ.
ಹಲವು ಬ್ಯಾಂಕುಗಳು ಈಗಾಗಲೇ ಸರ್ಕಾರಿ ನೌಕರರ 'ಸಂಬಳ ಪ್ಯಾಕೇಜ್ ಖಾತೆ' ಅಡಿಯಲ್ಲಿ ಸಿಗುವ ಸೌಲಭ್ಯಗಳ ಕುರಿತು ಮಾಹಿತಿಯನ್ನು ನೀಡಿವೆ. ಎಸ್‌ಬಿಐ ರಾಜ್ಯ ಸರ್ಕಾರಿ ನೌಕರರಿಗೆ ಸಂಬಳ ಪ್ಯಾಕೇಜ್‌ನಲ್ಲಿ ರೂ. 10 ಸಾವಿರಕ್ಕಿಂತ ಮೇಲ್ಪಟ್ಟು ನಿವ್ವಳ ಸಂಬಳ ಪಡೆಯುತ್ತಿರುವ ಅಧಿಕಾರಿ/ ನೌಕರರಿಗೆ ರೂ. 1 ಕೋಟಿ ವೈಯಕ್ತಿಕ ಅಪಘಾತ ವಿಮೆಯನ್ನು ನೀಡುತ್ತದೆ ಹಾಗೂ ರೂ. 1,60 ಕೋಟಿ ವರೆಗೆ ವಿಮಾನ ಅಪಘಾತ ವಿಮೆ ರಕ್ಷಣೆಯನ್ನು ಪೂರಕ ಕೊಡುಗೆಯಾಗಿ ನೀಡಲಿದೆ.
ಕೆನರಾ ಬ್ಯಾಂಕ್ ಸರ್ಕಾರಿ ನೌಕರರಿಗೆ ಸಂಬಳ ಪ್ಯಾಕೇಜ್‌ನಲ್ಲಿ ರೂ. 50 ಸಾವಿರದ ವರೆಗೆ ನಿವ್ವಳ ಸಂಬಳ ಪಡೆಯುತ್ತಿರುವ ಅಧಿಕಾರಿ/ ನೌಕರರಿಗೆ ರೂ. 50 ಲಕ್ಷಗಳ ವೈಯಕ್ತಿಕ ಅಪಘಾತ ವಿಮೆ ರಕ್ಷಣೆಯನ್ನು ಪೂರಕ ಕೊಡುಗೆಯಾಗಿ ನೀಡಲಿದೆ. ರೂ. 50 ಸಾವಿರಕ್ಕೆ ಮೆಲ್ಪಟ್ಟು ನಿವ್ವಳ ಸಂಬಳ ಪಡೆಯುತ್ತಿರುವ ಅಧಿಕಾರಿ/ ನೌಕರರಿಗೆ ರೂ. 1 ಕೋಟಿ ವೈಯಕ್ತಿಕ ಅಪಘಾತ ವಿಮೆ ರಕ್ಷಣೆ ನೀಡುತ್ತದೆ.
ಸರ್ಕಾರಿ ನೌಕರ ಮೂರು ತಿಂಗಳ ಅವಧಿಯಲ್ಲಿ ಅಧಿಕಾರಿಗಳು/ ನೌಕರರು ತಮ್ಮ ಇಚ್ಛಾನುಸಾರ ಯಾವುದೇ ಬ್ಯಾಂಕಿನ ಸಂಬಳ ಪ್ಯಾಕೇಜಿನಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ಸರ್ಕಾರ ದಿನಾಂಕ 21/2/2025ರಲ್ಲಿ ಆದೇಶಿಸಿತ್ತು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ