ಹೈದರಾಬಾದ್ ಕರ್ನಾಟಕ ಪ್ರದೇಶ

ಹೈದರಾಬಾದ್ ಕರ್ನಾಟಕ ಪ್ರದೇಶ
Hyderabad Karnataka

ಗುರುವಾರ, ಮಾರ್ಚ್ 13, 2025

state government employees insurance

ಮುಂದಿನ ಮೂರು ತಿಂಗಳ ಅವಧಿಯಲ್ಲಿ ಎಲ್ಲಾ ಸರ್ಕಾರಿ ನೌಕರರು ಈ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ ಎಂದು ಹೇಳಿದ್ದಾರೆ.

ವಿಧಾನಸಭೆಯಲ್ಲಿ ಕಾಗವಾಡ ಶಾಸಕ ಭರಮಗೌಡ ಅಲಗೌಡ ಕಾಗೆ ಕೇಳಿದ್ದ ಪ್ರಶ್ನೆಗೆ ಮುಖ್ಯಮಂತ್ರಿಗಳು ಉತ್ತರ ಕೊಟ್ಟಿದ್ದಾರೆ. ಶಾಸಕರು ರಾಜ್ಯದ ಸರ್ಕಾರಿ ನೌಕರರಿಗೆ ರೂ. 1 ಕೋಟಿಗಳ ಅಪಘಾತ ವಿಮೆಯನ್ನು ಮಾಡಲು ಸರ್ಕಾರ ಯೋಚಿಸಿದೆಯೇ?, ಹಾಗಿದ್ದಲ್ಲಿ, ಎಂದಿನಿಂದ ಜಾರಿಗೆ ತರಲಾಗುವುದು? ಎಂದು ಪ್ರಶ್ನಿಸಿದ್ದರು.

ಸಿದ್ದರಾಮಯ್ಯ ಉತ್ತರ: ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಉತ್ತರದಲ್ಲಿ ರಾಜ್ಯ ಸರ್ಕಾರಿ ನೌಕರರ ಸಾಮಾಜಿಕ ಭದ್ರತೆಯು ಸರ್ಕಾರದ ಪ್ರಮುಖ ವಿಷಯವಾಗಿರುವುದರಿಂದ ಸಾಮಾಜಿಕ ಭದ್ರತೆ ಇದ್ದಲ್ಲಿ, ನೌಕರರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ, ಕಾರ್ಯನಿರ್ವಹಿಸುತ್ತಾರೆ ಎಂದು ಹೇಳಿದ್ದಾರೆ.

ಈಗಾಗಲೇ ಜಾರಿಯಲ್ಲಿರುವ ಸಾಮಾಜಿಕ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಮತ್ತು ಸುಗಮಗೊಳಿಸಲು, ಈ ಕೆಳಕಂಡ ಅಂಶಗಳನ್ನು ಒಳಗೊಂಡ ಪ್ರಸ್ತಾವನೆಗೆ ಸಚಿವ ಸಂಪುಟ ಸಭೆಯು ದಿನಾಂಕ 30.01.2025ರಂದು ಈ ಕೆಳಗಿನಂತೆ ಆದೇಶಿಸಿದೆ ಎಂದು ಹೇಳಿದ್ದಾರೆ.

* ವಿವಿಧ ಬ್ಯಾಂಕುಗಳು ಒದಗಿಸುವ ಸಂಬಳ ಪ್ಯಾಕೇಜ್‌ಗಳ ಅಡಿಯಲ್ಲಿ ಎಲ್ಲಾ ನೌಕರರು. (ಖಾಯಂ/ ಗುತ್ತಿಗೆ/ ಹೊರಗುತ್ತಿಗೆ ಇತ್ಯಾದಿ) ಖಾತೆಗಳನ್ನು ತೆರೆಯಲು/ ಆಯ್ಕೆ ಮಾಡಿಕೊಳ್ಳಲು ಕಡ್ಡಾಯಗೊಳಿಸುವುದು.

* ಬ್ಯಾಂಕ್‌ಗಳು/ ಅಂಚೆ ಕಚೇರಿಗಳು ನೀಡುವ PMJJBY ಮತ್ತು PMSBY ಯೋಜನೆಗಳ ಅಡಿಯಲ್ಲಿ ಸ್ವಯಂಪ್ರೇರಿತವಾಗಿ ವಿಮಾ ರಕ್ಷಣೆಯನ್ನು ಪಡೆಯಲು ಉದ್ಯೋಗಿಗಳನ್ನು ಪ್ರೋತ್ಸಾಹಿಸುವುದು.

* ಬ್ಯಾಂಕ್‌ಗಳು ನೀಡುವ ವಿವಿಧ ಯೋಜನೆಗಳ ಅಡಿಯಲ್ಲಿ ಸ್ವಯಂ ಪ್ರೇರಿತವಾಗಿ ವೈಯಕ್ತಿಕ ಅಪಘಾತ ವಿಮಾ ರಕ್ಷಣೆಯನ್ನು ಪಡೆಯಲು ಉದ್ಯೋಗಿಗಳನ್ನು ಪ್ರೋತ್ಸಾಹಿಸುವುದು.

ಭಾರತೀಯ ಸ್ಟೇಟ್ ಬ್ಯಾಂಕ್‌ ರಾಜ್ಯ ಸರ್ಕಾರಿ ನೌಕರರಿಗೆ ಸಂಬಳ ಪ್ಯಾಕೇಜ್‌ನಲ್ಲಿ ರೂ. 10 ಸಾವಿರಕ್ಕಿಂತ ಮೇಲ್ಪಟ್ಟು ನಿವ್ವಳ ಸಂಬಳ ಪಡೆಯುತ್ತಿರುವ ಅಧಿಕಾರಿ/ ನೌಕರರಿಗೆ ರೂ. 1 ಕೋಟಿ ವೈಯಕ್ತಿಕ ಅಪಘಾತ ವಿಮೆಯನ್ನು ನೀಡುತ್ತದೆ ಹಾಗೂ ರೂ. 1,60 ಕೋಟಿ ವರೆಗೆ ವಿಮಾನ ಅಪಘಾತ ವಿಮೆ ರಕ್ಷಣೆಯನ್ನು ಪೂರಕ ಕೊಡುಗೆಯಾಗಿ ನೀಡುತ್ತದೆ.

ಅದೇ ರೀತಿ ಕೆನರಾ ಬ್ಯಾಂಕ್‌, ರಾಜ್ಯ ಸರ್ಕಾರಿ ನೌಕರರಿಗೆ ಸಂಬಳ ಪ್ಯಾಕೇಜ್‌ನಲ್ಲಿ ರೂ. 50 ಸಾವಿರದ ವರೆಗೆ ನಿವ್ವಳ ಸಂಬಳ ಪಡೆಯುತ್ತಿರುವ ಅಧಿಕಾರಿ/ ನೌಕರರಿಗೆ ರೂ. 50 ಲಕ್ಷಗಳ ವೈಯಕ್ತಿಕ ಅಪಘಾತ ವಿಮೆ ರಕ್ಷಣೆಯನ್ನು ಪೂರಕ ಕೊಡುಗೆಯಾಗಿ ನೀಡುತ್ತದೆ.

ಅಲ್ಲದೆ, ರೂ. 50 ಸಾವಿರಕ್ಕೆ ಮೆಲ್ಪಟ್ಟು ನಿವ್ವಳ ಸಂಬಳ ಪಡೆಯುತ್ತಿರುವ ಅಧಿಕಾರಿ/ ನೌಕರರಿಗೆ ರೂ. 1 ಕೋಟಿ ವೈಯಕ್ತಿಕ ಅಪಘಾತ ವಿಮೆ ರಕ್ಷಣೆಯನ್ನು ಪೂರಕ ಕೊಡುಗೆಯಾಗಿ ನೀಡುತ್ತದೆ.

ಅದೇ ರೀತಿ ವಿವಿಧ ಬ್ಯಾಂಕುಗಳು ತಮ್ಮ ಸಂಬಳ ಪ್ಯಾಕೇಜ್‌ಗಳಲ್ಲಿ ವಿವಿಧ ಮೊತ್ತದ ವೈಯಕ್ತಿಕ ಅಪಘಾತ ವಿಮೆ ರಕ್ಷಣೆಯ ಕೊಡುಗೆಯಾಗಿ ನೀಡುತ್ತಿವೆ. ಮುಂದಿನ ಮೂರು ತಿಂಗಳ ಅವಧಿಯಲ್ಲಿ ಅಧಿಕಾರಿಗಳು/ ನೌಕರರು ತಮ್ಮ ಇಚ್ಛಾನುಸಾರ ಯಾವುದೇ ಬ್ಯಾಂಕಿನ ಸಂಬಳ ಪ್ಯಾಕೇಜಿನಲ್ಲಿ ನೋಂದಾಯಿಸಿಕೊಳ್ಳಲು ಸರ್ಕಾರದ ಆದೇಶ ದಿನಾಂಕ 21/2/2025ರಲ್ಲಿ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.

ಶಾಸಕರು ಈ ಅಪಘಾತ ವಿಮೆ ಯೋಜನೆಯು ನಿಗಮ/ ಮಂಡಳಿಯ ನೌಕರರಿಗೂ ಅನ್ವವಾಗುವುದೇ? ಮತ್ತು ಈ ಯೋಜನೆಯು ಸರ್ಕಾರಿ ನೌಕರರು ಹಾಗೂ ಅಧಿಕಾರಿಗಳಿಗೂ ಅನ್ವಯವಾಗುತ್ತದೆಯೇ?, ವಿಮೆ ಯೋಜನೆಗೆ ಇರುವ ನಿಯಮಗಳೇನು? ಎಂದು ಪ್ರಶ್ನೆ ಮಾಡಿದ್ದರು.

ಸಿದ್ದರಾಮಯ್ಯ ಉತ್ತರದಲ್ಲಿ ವಿವಿಧ ಬ್ಯಾಂಕುಗಳು ತಮ್ಮ ಸಂಬಳ ಪ್ಯಾಕೇಜ್‌ಗಳಲ್ಲಿ ಪೂರಕ ಕೊಡುಗೆಯಾಗಿ ನೀಡುತ್ತಿರುವ ವೈಯಕ್ತಿಕ ಅಪಘಾತ ವಿಮೆ ರಕ್ಷಣೆ ಯೋಜನೆಗಳು ನಿಗಮ/ ಮಂಡಳಿ ನೌಕರರಿಗೂ ಅನ್ವಯವಾಗುತ್ತದೆ.

ವಿವಿಧ ಬ್ಯಾಂಕುಗಳು ತಮ್ಮ ಸಂಬಳ ಪ್ಯಾಕೇಜ್‌ಗಳಲ್ಲಿ ಪೂರಕವಾಗಿ ಕೊಡುಗೆಯಾಗಿ ನೀಡುತ್ತಿರುವ ವೈಯಕ್ತಿಕ ಅಪಘಾತ ವಿಮೆ ಯೋಜನೆಗಳು ಸರ್ಕಾರಿ ನೌಕರರು ಹಾಗೂ ಅಧಿಕಾರಿಗಳಿಗೂ ಅನ್ವಯವಾಗುತ್ತದೆ. ವಿಮೆ ಯೋಜನೆಗೆ ಇರುವ ನಿಯಮಗಳು ಬ್ಯಾಂಕಿನಿಂದ ಬ್ಯಾಂಕಿಗೆ ಭಿನ್ನವಾಗಿರುತ್ತವೆ. ಸದರಿ ವಿಮೆ ಯೋಜನೆಯ ನಿಯಮಗಳನ್ನು ಅಧಿಕಾರಿ/ ನೌಕರರು ಸಂಬಂಧಪಟ್ಟ ಬ್ಯಾಂಕಿನಿಂದ ಪಡೆಯಬಹುದಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ

ಕಾಮೆಂಟ್‌ಗಳಿಲ್ಲ:

ರಾಜ್ಯ ಸರ್ಕಾರಿ ನೌಕರ'ರಿಗೆ ಮತ್ತೊಂದು ಸಿಹಿಸುದ್ದಿ ನೀಡಲು ಮುಂದಾದ ಸರ್ಕಾರ

ಈ ಸಂಬಂಧ ರಾಜ್ಯ ಸರ್ಕಾರದಿಂದ ಸಭಾ ಸೂಚನಾ ಪತ್ರವನ್ನು ಹೊರಡಿಸಲಾಗಿದ್ದು, ರಾಜ್ಯ ಸಚಿವ ಸಂಪುಟದ ತೀರ್ಮಾನಿಸಿದಂತೆ ಅಧಿಕಾರಿ, ನೌಕರರು ಮತ್ತು ಅವಲಂಬಿತ ಕುಟುಂಬದ ಸದಸ್ಯರ ಹ...