ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಸದಸ್ಯರಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸೆಗಳನ್ನು ಒದಗಿಸಲು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಅ.01 ರಿಂದ ಜಾರಿಗೊಳಿಸಿ ಸರ್ಕಾರ ಆದೇಶ ಹೊರಡಿಸಲಾಗಿದೆ.
ಪತಿ-ಪತ್ನಿ ಸರ್ಕಾರಿ ನೌಕರರಾಗಿದ್ದಲ್ಲಿ ಒಬ್ಬರು ಮಾತ್ರ ವೇತನದಲ್ಲಿ ವಂತಿಕೆಯನ್ನು ನೀಡುವುದು, ರಾಜ್ಯ ಸರ್ಕಾರದ ಅಧಿಕಾರಿ/ನೌಕರರ ತಂದೆ-ತಾಯಿ ಪಿಂಚಣಿದಾರರಾಗಿದ್ದಲ್ಲಿ ಅವರ ಮಾಸಿಕ ಆದಾಯ ಮಿತಿಯನ್ನು ರೂ.17000 ಗಳಿಂದ ರೂ.
27000 ಸಾವಿರಗಳಿಗೆ ಹೆಚ್ಚಳ ಮಾಡಿದೆ. ವಿವಾಹಿತ ಮಹಿಳಾ ನೌಕರರ ತಂದೆ-ತಾಯಿಯೂ ಸಹ ಈ ಯೋಜನೆಯ ವ್ಯಾಪ್ತಿಗೆ ಒಳಪಡಲಿದ್ದಾರೆ.
ಮಾಸಿಕ ವಂತಿಕೆಯನ್ನು ನೀಡಲು ಇಚ್ಛಿಸದೇ ಇರುವ ನೌಕರರು ಲಿಖಿತವಾಗಿ ಅ.18 ರೊಳಗೆ ಸಂಬಂಧಿಸಿದ ಡಿ.ಡಿ.ಓ.ಗಳಿಗೆ ನೀಡುವುದು. ಈ ಯೋಜನೆಯ ಸೌಲಭ್ಯ ಪಡೆಯಲು ರಾಜ್ಯ ಸರ್ಕಾರದ ಅಧಿಕಾರಿ/ನೌಕರರು ಪ್ರತಿ ತಿಂಗಳು ಸರ್ಕಾರ ನಿರ್ದಿಷ್ಟಪಡಿಸಿರುವ ವಂತಿಕೆಯನ್ನು ಅಕ್ಟೋಬರ್-2025ನೇ ಮಾಹೆಯಿಂದ ನೀಡುವುದು.
ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 5.25 ಲಕ್ಷ ಸರ್ಕಾರಿ ನೌಕರರು ಹಾಗೂ 25 ಲಕ್ಷ ಕುಟುಂಬ ಸದಸ್ಯರು ಈ ಯೋಜನೆಯ ಲಾಭ ಪಡೆಯಲಿದ್ದಾರೆ. ಈ ಯೋಜನೆಗೆ ರಾಜ್ಯ ಸಕಾರದ ಎಲ್ಲಾ ಅಧಿಕಾರಿ/ನೌಕರರು ನೋಂದಣಿ ಮಾಡಿಕೊಳ್ಳಲು ಕ್ರಮವಹಿಸುವುದು.
ಈ ದಾಖಲೆಗಳು ಕಡ್ಡಾಯ
1. ಸರ್ಕಾರಿ ನೌಕರನ ಹಾಗು ಕುಟುಂಬದ ಅರ್ಹ ಸದಸ್ಯರ ಭಾವಚಿತ್ರಗಳು( ಪ್ರತಿಯೊಬ್ಬರ ಭಾವ ಚಿತ್ರವನ್ನು ಪ್ರತ್ಯೇಕವಾಗಿ ನೀಡತಕ್ಕದ್ದು, ಭಾವ ಚಿತ್ರದ ಮೇಲೆ ಸರ್ಕಾರಿ ನೌಕರ ತನ್ನ ಸಹಿ ಮತ್ತು ದಿನಾಂಕವನ್ನು ನಮೂದಿಸುವುದು ಮತ್ತು ಪ್ರತಿ ಐದು ವರ್ಷಗಳಿಗೆ ಒಮ್ಮೆ ಹೊಸ ಭಾವ ಚಿತ್ರವನ್ನು ಒದಗಿಸತಕ್ಕದ್ದು)
2. ಜನ್ಮ ದಿನಾಂಕ ದಾಖಲೆಗಳು,
3. ಆಧಾರ್ ಕಾರ್ಡ್ ಗಳು
4. ವೇತನ ಚೀಟಿ
5. ಕಾನೂನು ದಾಖಲೆಗಳು (ದತ್ತು ವಿವಾಹ ಇತ್ಯಾದಿ ಸಂದರ್ಭಗಳಲ್ಲಿ)










ಜ್ಯೋತಿ ಸಂಜೀವಿನಿ ಯೋಜನೆಗೆ ಒಳಪಡುವ ಸರ್ಕಾರಿ ನೌಕರರಿಗೆ ಅರ್ಜಿ ತುಂಬಲು ವಿಶೇಷ ಸೂಚನೆಗಳು :
1. ಅನುಬಂಭ 1 ನ್ನು ಕಛೇರಿಗೆ 2 ಪ್ರತಿಗಳಲ್ಲಿ ಸಲ್ಲಿಸುವುದು.
2. ಅರ್ಜಿಯಲ್ಲಿನ ವಿವರಗಳನ್ನು ಕನ್ನಡ ಮತ್ತು ಆಂಗ್ಲ (CAPITAL LETTERS)ಭಾಷೆಯಲ್ಲಿ ತುಂಬುವುದು.
3.0 ನೌಕರರ ಮತ್ತು ಎಲ್ಲಾ ಅವಲಂಬಿತರ ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ ಲಗತ್ತಿಸುವುದು.
4. ಎಲ್ಲಾ ಅವಲಂಬಿತರ ಪ್ರತಿಯೊಬ್ಬರ ಭಾವಚಿತ್ರಗಳ ಹಿಂದೆ ಬಿಳಿಬಣ್ಣದ ಸೀನ್‌ನಲ್ಲಿರಬೇಕು ( Colour Photo With Wight BackGruond) ដោះ ជួយ
5. ನೌಕರರು ಅವಲಂಬಿತರ ಭಾವಚಿತ್ರದ ಮೇಲೆ ಸಹಿ ಮಾಡಿ ಮತ್ತು ದಿನಾಂಕವನ್ನು ನಮೂದಿಸಿ.
6.ಅನುಬಂಧ-1 ರಲ್ಲಿ ತೋರಿಸಿದ ಅವಲಂಬಿತರ ವಿವರಗಳನ್ನು FORM-C ನಲ್ಲಿಯೂ ತುಂಬಿ BEO ರವರ ಸಹಿಗಾಗಿ ಸಲ್ಲಿಸುವುದು.
7. ನೌಕರರ ಮತ್ತು ಅವಲಂಬಿತರ ಭಾವಚಿತ್ರಗಳು ಒಂದುಸಾರಿ ಅಪ್ ಲೋಡ್ ಆದಮೇಲೆ ಪುನಃ ಎಲ್ಲರ ಭಾವಚಿತ್ರಗಳನ್ನು 5ವರ್ಷಗಳ ನಂತರವೇ ಬದಲಾಯಿಸಲು ಅವಕಾಶವಿರುತ್ತದೆ.
8. ನೌಕರರಿಗೆ ಅನುಬಂಧ-1 ಸಲ್ಲಿಸಿದ ನಂತರದಲ್ಲಿ ಹೊಸಸೇರ್ಪಡೆ ಮತ್ತು ತೆಗೆದು ಹಾಕುವಿಕೆಗೆ ಅವಕಾಶವಿದೆ.(ವಿವಾಹ, ಮಗುಜನನ, ಮರಣ ಇತ್ಯಾದಿ)ಇದಕ್ಕಾಗಿ FORM-A4 ಇರುತ್ತದೆ..
9. ಎಲ್ಲಾ ಅವಲಂಬಿತರ ಹೆಸರುಗಳನ್ನು ಆಧಾರ್ ಕಾರ್ಡ್‌ನಲ್ಲಿರುವಂತೆಯೇ ತುಂಬಬೇಕು. ವ್ಯತ್ಯಾಸವಾದಲ್ಲಿ ಇಂದೀಕರಿಸಲು ಬರುವುದಿಲ್ಲ.
10.ನೌಕರ ಮತ್ತು ಎಲ್ಲಾ ಅವಲಂಬಿತರ ಭಾವಚಿತ್ರಗಳನ್ನು 5ವರ್ಷಗಳಿಗೊಮ್ಮೆ ಕಡ್ಡಾಯವಾಗಿ ಬದಲಾಯಿಸಬೇಕು.
11.ಪುರುಷ ನೌಕರರಿಗೆ : ಹೆಂಡತಿ, ಮಕ್ಕಳು, ಮತ್ತು ತಂದೆತಾಯಿಗಳು ಹಾಗೂ ಮಲತಾಯಿ ಮಾತ್ರ ಅವಲಂಬಿತರಾಗಿರುತ್ತಾರೆ.( ಹೆಂಡತಿಯ ತಂದೆ,ತಾಯಿಗಳು ಬರುವುದಿಲ್ಲ)
12.ಮಹಿಳಾ ನೌಕರರಿಗೆ : ಗಂಡ,ಮಕ್ಕಳು ಮತ್ತು ತಮ್ಮಗಳ ತಂದೆ,ತಾಯಿಗಳು ಹಾಗೂ ಮಲತಾಯಿ ಮಾತ್ರ (ಗಂಡನ ತಂದೆ,ತಾಯಿ ಅಂದರೆ ಅತ್ತೆ,ಮಾವ ಬರುವುದಿಲ್ಲ.)
13. ಸರ್ಕಾರಿ ವಿವಾಹಿತ ನೌಕರರು ಎರಡು ಮದುವೆಯಾಗಿದ್ದರೆ ಮೊದಲನೇ ಹೆಂಡತಿ ಮತ್ತು ಮಕ್ಕಳು ಮಾತ್ರ ಈ ಯೋಜನೆ ಅನ್ವಯ ಎರಡನೇ ಹೆಂಡತಿ ಮತ್ತು ಮಕ್ಕಳಿಗೆ ಈ ಯೋಜನೆಗೆ ಅವಕಾಸವಿರುವುದಿಲ್ಲ.
ವಿಶೇಷ ಸೂಚನೆ : ಸರ್ಕಾರಿ ನೌಕರರು ಚಿಕಿತ್ಸೆ ಪಡೆಯಲು ಯೋಜನೆಗೆ ಒಳಪಟ್ಟ ಆಸ್ಪತ್ರೆಗೆ ಹೋದಾಗ ಜ್ಯೋತಿ ಸಂಜೀವಿನಿ ಯೋಜನೆಯಲ್ಲಿ ನಮೂದಾಗಿರುವ ಎಲ್ಲಾ ಅವಲಂಬಿತರ ಹೆಸರು ಮತ್ತು ಭಾವಚಿತ್ರಗಳು ಗೋಚರಿಸುತ್ತವೆ. ಈ ಯೋಜನೆಗೆ ಒಳಪಡದಿದ್ದರೆ ಬರೀ ನೌಕರರ ಹೆಸರು ಮಾತ್ರ ಆಸ್ಪತ್ರೆಯ ವೆಬ್‌ಸೈಟ್‌ನಲ್ಲಿ ಗೋಚರಿಸುವುದರಿಂದ ಅವಲಂಬಿತರಿಗೆ ಚಿಕಿತ್ಸೆ ಕೊಡಿಸಲು ತೊಂದರೆಯಾಗುತ್ತದೆ.
ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ (KASS) ನೊಂದಾಯಿಸಿಕೊಳ್ಳಲು ತಮ್ಮ ಕುಟುಂಬದ ಎಲ್ಲಾ ಸದಸ್ಯರುಗಳ ಪಾಸ್ ಪೋರ್ಟ್ ಅಳತೆಯ ಪೋಟೋ ಗಳನ್ನು ಸ್ವಯಂ ದೃಡೀಕರಿಸಿ ನಿಗಧಿತ ನಮೂನೆಗಳನ್ನು ಭರ್ತಿ ಮಾಡಿ ಮೇಲಾಧಿಕಾರಿಗಳ ಮೂಲಕ ವೇತನ ಬಟವಾಡೆ ಅಧಿಕಾರಿಗಳಿಗೆ ಕೂಡಲೇ ಸಲ್ಲಿಸುವಂತೆ ಕೋರಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ