ಹೈದರಾಬಾದ್ ಕರ್ನಾಟಕ ಪ್ರದೇಶ

ಹೈದರಾಬಾದ್ ಕರ್ನಾಟಕ ಪ್ರದೇಶ
Hyderabad Karnataka

ಶನಿವಾರ, ಮಾರ್ಚ್ 22, 2025

ಸಿಎಂ, ಶಾಸಕರಿಗೆ ಗರಿಷ್ಠ ವೇತನ ಹೊಂದಿರುವ ದೇಶದ ಐದು ರಾಜ್ಯಗಳು, ಕರ್ನಾಟಕಕ್ಕೆ ಎಷ್ಟನೇ ಸ್ಥಾನ

ರ್ನಾಟಕದ ಶಾಸಕರ ವೇತನವನ್ನು ಶೇ. 100ರಷ್ಟು ಹೆಚ್ಚಿಸಲಾಗಿದೆ. ಇತರ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಶಾಸಕರು ಎಷ್ಟು ವೇತನ ಪಡೆಯುತ್ತಾರೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ. ತೆಲಂಗಾಣದಲ್ಲಿ ಅತಿ ಹೆಚ್ಚು ವೇತನ ನೀಡಲಾಗುತ್ತಿದೆ.

ಕರ್ನಾಟಕದ ಚುನಾಯಿತ ಪ್ರತಿನಿಧಿಗಳಿಗೆ ಶೇ.100ರಷ್ಟು ವೇತನ ಹೆಚ್ಚಳವಾಗಿದೆ.ಈ ವಿಧೇಯಕಕ್ಕೆ ಶುಕ್ರವಾರ ಅನುಮತಿಯೂ ಸಿಕ್ಕಿದೆ. ವೇತನ ದ್ವಿಗುಣಗೊಳಿಸಿದ್ದನ್ನು ಸಮರ್ಥನೆ ಮಾಡಿಕೊಂಡಿರುವ ಗೃಹ ಸಚಿವ ಜಿ ಪರಮೇಶ್ವರ ಅವರು ಹೆಚ್ಚುತ್ತಿರುವ ವೆಚ್ಚಗಳ ಸಮಸ್ಯೆ ಶಾಸಕರಿಗೂ ಬಾಧಿಸುತ್ತಿದೆ ಎಂದಿದ್ದಾರೆ.

ಹೊಸ ಪ್ರಸ್ತಾವನೆಯಡಿಯಲ್ಲಿ, ಮುಖ್ಯಮಂತ್ರಿಗಳ ಮಾಸಿಕ ವೇತನವು ಹಿಂದಿನ 75,000 ರೂ.ಗಳಿಂದ 1.5 ಲಕ್ಷ ರೂ.ಗಳಿಗೆ ಏರಿಕೆಯಾಗಲಿದ್ದು, ಶಾಸಕರ ವೇತನವು 40,000 ರೂ.ಗಳಿಂದ 80,000 ರೂ.ಗಳಿಗೆ ದ್ವಿಗುಣಗೊಳ್ಳಲಿದೆ. ಈ ವೇತನ ಹೆಚ್ಚಳವು ಹೆಚ್ಚುವರಿ ಭತ್ಯೆಗಳು ಮತ್ತು ಸವಲತ್ತುಗಳನ್ನು ಹೊರತುಪಡಿಸಿ ಸಿಗುವುದಾಗಿದೆ.

ಯಾವ ರಾಜ್ಯಗಳು ಮುಖ್ಯಮಂತ್ರಿ ಮತ್ತು ಶಾಸಕರಿಗೆ ಅತಿ ಹೆಚ್ಚು ಸಂಬಳ ನೀಡುತ್ತಿದೆ ಅನ್ನೋದನ್ನು ನೋಡೋದಾದರೆ,ವೇತನ ಹೆಚ್ಚಳದ ಹೊರತಾಗಿಯೂ, ಕರ್ನಾಟಕದ ಚುನಾಯಿತ ಪ್ರತಿನಿಧಿಗಳು ಇತರ ರಾಜ್ಯಗಳಲ್ಲಿನ ಪ್ರತಿನಿಧಿಗಳಿಗೆ ಹೋಲಿಸಿದರೆ ಕಡಿಮೆ ವೇತನ ಪಡೆಯುತ್ತಿದ್ದಾರೆ. 

ತೆಲಂಗಾಣ ರಾಜ್ಯದ ಚುನಾಯಿತ ಪ್ರತಿನಿಧಿಗಳು ಇಡೀ ದೇಶದಲ್ಲಿಯೇ ಹೆಚ್ಚಿನ ವೇತನ ಪಡೆಯುತ್ತಾರ. ಇಲ್ಲಿನ ಮುಖ್ಯಮಂತ್ರಿ ತಿಂಗಳಿಗೆ 4.10 ಲಕ್ಷ ರೂಪಾಯಿ ವೇತನ ಪಡೆಯಲಿದ್ದರೆ, ಸಚಿವರು 3ರಿಂದ 3.5 ಲಕ್ಷ ವೇತನ ಪಡೆಯುತ್ತಾರೆ. ಶಾಸಕರು 2.5 ಲಕ್ಷ ವೇತನ ಪಡೆಯುತ್ತಾರೆ. ಈ ಸಂಭಾವನೆಯು ಪ್ರಯಾಣ, ವಸತಿ ಮತ್ತು ಭದ್ರತೆಯ ಭತ್ಯೆಗಳನ್ನು ಒಳಗೊಂಡಿದೆ.

2ನೇ ಸ್ಥಾನದಲ್ಲಿ ದೆಹಲಿ ರಾಜ್ಯವಿದೆ. ಇಲ್ಲಿನ ಮುಖ್ಯಮಂತ್ರಿ ತಿಂಗಳಿಗೆ 3.90 ಲಕ್ಷ ವೇತನ ಪಡೆಯಲಿದ್ದರೆ, ಸಚಿವರು 3 ಲಕ್ಷ ಹಾಗೂ ಶಾಸಕರು 90 ಸಾವಿರ ವೇತನ ಪಡೆಯುತ್ತಾರೆ.

ದೇಶದ ಅತಿದೊಡ್ಡ ರಾಜ್ಯವಾಗಿರುವ ಉತ್ತರ ಪ್ರದೇಶದ ಮುಖ್ಯಮಂತ್ರ 3.65 ಲಕ್ಷ ಮಾಸಿಕ ವೇತನ ಪಡೆಯಲಿದ್ದು, ಸಚಿವರು 2 ರಿಂದ 2.5 ಲಕ್ಷ ವೇತನ ಪಡೆಯತ್ತಾರೆ. ಶಾಸಕರು 1.87 ಲಕ್ಷ ರೂಪಾಯಿ ವೇತನ ಪಡೆಯುತ್ತಾರೆ.

ದೇಶದ ಅತ್ಯಂತ ಶ್ರೀಮಂತ ರಾಜ್ಯವಾಗಿರುವ ಮಹಾರಾಷ್ಟ್ರದ ಮುಖ್ಯಮಂತ್ರಿ ಪ್ರತಿ ತಿಂಗಳು 3.40 ಲಕ್ಷ ವೇತನ ಪಡೆಯಲಿದ್ದರೆ, ಸಚಿವರು 2.5 ರಿಂದ 3 ಲಕ್ಷ ವೇತನ ಪಡೆಯುತ್ತಾರೆ. ಶಾಸಕರು 1.60 ಲಕ್ಷ ವೇತನ ಪಡೆಯುತ್ತಿದ್ದಾರೆ.

ಕರ್ನಾಟಕದಲ್ಲಿ ವೇತನ ಏರಿಕೆಯ ಬಳಿಕ ಸಿಎಂ 3 ಲಕ್ಷ ರೂಪಾಯಿ ವೇತನ ಪಡೆಯಲಿದ್ದರೆ, ಸಚಿವರು 2 ರಿಂದ 2.5 ಲಕ್ಷ ವೇತನ ಪಡೆಯುತ್ತಾರೆ. ಶಾಸಕರು 1.60 ಲಕ್ಷ ರೂಪಾಯಿ ಸಂಬಳ ಪಡೆಯಲಿದ್ದಾರೆ.

ರಾಜ್ಯ ಆರ್ಥಿಕ ಸಂಕಷ್ಟ ನಡುವೆಯೂ ಇಂದೇ ಮಸೂದೆ : ಮಂತ್ರಿ, ಶಾಸಕರಿಗೆ ಭರ್ಜರಿ ವೇತನ ಏರಿಕೆ ಭಾಗ್ಯ! ಯಾರಿಗೆ ಎಷ್ಟು?

ಸಂಬಳವನ್ನು ಹೇಗೆ ನಿರ್ಧರಿಸಲಾಗುತ್ತದೆ?: ಪ್ರತಿಯೊಂದು ರಾಜ್ಯ ಸರ್ಕಾರವು ತನ್ನ ಶಾಸಕರ ಸಂಬಳ ಮತ್ತು ಭತ್ಯೆಗಳನ್ನು ನಿರ್ಧರಿಸುತ್ತದೆ. ಮುಖ್ಯಮಂತ್ರಿಗಳು, ಸಂಪುಟ ಸಚಿವರು ಮತ್ತು ವಿರೋಧ ಪಕ್ಷದ ನಾಯಕರು ಸಾಮಾನ್ಯವಾಗಿ ಶಾಸಕರಿಗಿಂತ ಹೆಚ್ಚು ಗಳಿಸುತ್ತಾರೆ. ಹಣದುಬ್ಬರವನ್ನು ಲೆಕ್ಕಹಾಕಲು ಸಂಬಳ ಹೊಂದಾಣಿಕೆಗಳನ್ನು ರಾಜ್ಯದ ಸಂಬಳ ಮತ್ತು ಭತ್ಯೆ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ಮಾಡಲಾಗುತ್ತದೆ, ಆಗಾಗ್ಗೆ ಪರಿಶೀಲನಾ ಸಮಿತಿಯ ಸಲಹೆಯನ್ನು ಅನುಸರಿಸಲಾಗುತ್ತದೆ.

ರಾಜ್ಯದ ಸಿಎಂ, ಸಚಿವರು, ಶಾಸಕರ ವೇತನ ಹೆಚ್ಚಳಕ್ಕೆ ಗ್ರೀನ್ ಸಿಗ್ನಲ್: ಭಾರೀ ಪ್ರಮಾಣದಲ್ಲಿ ಏರಿಕೆ, ಎಷ್ಟು ಗೊತ್ತಾ?

ಕಾಮೆಂಟ್‌ಗಳಿಲ್ಲ:

ರಾಜ್ಯ `ಸರ್ಕಾರಿ ನೌಕರರೇ' ಗಮನಿಸಿ : `ಆರೋಗ್ಯ ಸಂಜೀವಿನಿ ಯೋಜನೆ' ನೋಂದಣಿ ಕುರಿತು ಸರ್ಕಾರದಿಂದ ಮಹತ್ವದ ಆದೇಶ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಸದಸ್ಯರಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸೆಗಳನ್ನು ಒದಗಿಸಲು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ...