ಹೈದರಾಬಾದ್ ಕರ್ನಾಟಕ ಪ್ರದೇಶ

ಹೈದರಾಬಾದ್ ಕರ್ನಾಟಕ ಪ್ರದೇಶ
Hyderabad Karnataka

ಮಂಗಳವಾರ, ಮಾರ್ಚ್ 25, 2025

ಸರ್ಕಾರಿ ನೌಕರರಿಗೆ 'ಸಂಬಳ ಪ್ಯಾಕೇಜ್‌' ಖಾತೆ ಕಡ್ಡಾಯ

ಸರ್ಕಾರಿ ನೌಕರರಿಗೆ 'ಸಂಬಳ ಪ್ಯಾಕೇಜ್‌' ಖಾತೆ ಕಡ್ಡಾಯ

ರಾಜ್ಯ ಸರ್ಕಾರದ ಎಲ್ಲ ನೌಕರರು, ಅಧಿಕಾರಿಗಳು ವಿವಿಧ ಬ್ಯಾಂಕ್‌ ಮತ್ತು ಅಂಚೆ ಕಚೇರಿಗಳಲ್ಲಿ 'ಸಂಬಳ ಪ್ಯಾಕೇಜ್‌' ಖಾತೆ ತೆರೆಯುವುದನ್ನು ಕಡ್ಡಾಯ ಮಾಡಿ ಆರ್ಥಿಕ ಇಲಾಖೆ ಆದೇಶ ಹೊರಡಿಸಿದೆ.


ಸಂಬಳ ಪ್ಯಾಕೇಜ್‌ನ ಅಡಿಯಲ್ಲಿ ಖಾತೆ ಹೊಂದಿದ್ದರೆ ಅಂತಹ ನೌಕರರಿಗೆ ಬ್ಯಾಂಕ್‌ಗಳು ಕಡಿಮೆ ಬಡ್ಡಿ ದರದಲ್ಲಿ ವಸತಿ ಸಾಲ, ಉಚಿತ ರುಪೇ ಡೆಬಿಟ್‌-ಕ್ರೆಡಿಟ್‌ ಕಾರ್ಡ್‌, ಉಚಿತ ಡಿಮ್ಯಾಂಡ್‌ ಡ್ರಾಫ್ಟ್‌, ರಿಯಾಯತಿ ದರದಲ್ಲಿ ಲಾಕರ್‌ ಸೇವೆ ಒದಗಿಸುತ್ತಿವೆ.

ಈ ಅನುಕೂಲಗಳನ್ನು ಸರ್ಕಾರಿ ನೌಕರರು ಪಡೆದುಕೊಳ್ಳಬೇಕು ಎಂದು ಸೂಚಿಸಿದ್ದರೂ ಅನೇಕರು ಖಾತೆ ಆರಂಭಿಸದಿರುವುದು ಗಮನಕ್ಕೆ ಬಂದಿದೆ ಎಂದು ಇಲಾಖೆ ತಿಳಿಸಿದೆ.

ಜತೆಗೆ ಅತ್ಯಂತ ಕಡಿಮೆ ಮೊತ್ತಕ್ಕೆ ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (ಟರ್ಮ್‌ ಇನ್ಸುರೆನ್ಸ್‌), ₹456ಕ್ಕೆ ₹2 ಲಕ್ಷ ಮೊತ್ತದ ಅಪಘಾತ ವಿಮೆ ಒದಗಿಸುತ್ತಿದೆ. ಇನ್ನಷ್ಟು ಅನುಕೂಲಗಳು ಈ ಖಾತೆಗಳಿಗೆ ಲಭ್ಯವಿದೆ. ಹೀಗಾಗಿ ಎಲ್ಲ ನೌಕರರು ಮೂರು ತಿಂಗಳ ಒಳಗೆ ಸಂಬಳ ಪ್ಯಾಕೇಜ್ ಖಾತೆ ತೆರೆಯಬೇಕು ಎಂದು ಸೂಚಿಸಿದೆ.

'ಎಲ್ಲ ನೌಕರರು ಈ ಸ್ವರೂಪದ ಬ್ಯಾಂಕ್‌ ಅಥವಾ ಅಂಚೆ ಕಚೇರಿಗಳಲ್ಲಿ ಖಾತೆ ಆಯ್ಕೆ ಮಾಡಿಕೊಳ್ಳುವಂತೆ ಕ್ರಮವಹಿಸುವುದು ಆಯಾ ಇಲಾಖೆಯ ಮುಖ್ಯಸ್ಥರ ಹೊಣೆಗಾರಿಕೆ ಆಗಿರುತ್ತದೆ. ಈ ಸಂಬಂಧ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಮತ್ತು ನೌಕರರನ್ನು ಪ್ರೋತ್ಸಾಹಿಸಬೇಕು' ಎಂದು ಆರ್ಥಿಕ ಇಲಾಖೆ ಸೂಚಿಸಿದೆ.

ಅದರಲ್ಲಿ ಹೆಸರು, ಹುದ್ದೆ, ಶಾಖೆಯ ಹೆಸರು, ಬ್ಯಾಂಕ್ ಖಾತೆಯ ವಿವರವನ್ನು ನಮೂದಿಸಬೇಕು.

ಇದಲ್ಲದೇ ನಾನು ಉಳಿತಾಯ ಖಾತೆಯನ್ನು ಈ ಬ್ಯಾಂಕ್ ನಲ್ಲಿ ಹೊಂದಿದ್ದೇನೆ. ಈ ಖಾತೆಯನ್ನು ವೇತನ ಖಾತೆಯಾಗಿ ಬದಲಾಯಿಸೋದಕ್ಕೆ, ತಮ್ಮ ಬ್ಯಾಂಕಿನ ಮೂಲಕ ಸಿಗುವ ವಿವಿಧ ಪ್ರಯೋಜನ ಪಡೆಯಲು ಇಚ್ಚಿಸುತ್ತೇನೆ ಎಂಬುದಾಗಿಯೂ ತಿಳಿಸಬೇಕು.

ಪ್ರಸ್ತುತ ರಾಜ್ಯ ಸರ್ಕಾರಿ ನೌಕರರೆಲ್ಲರೂ ತಮ್ಮ ಉಳಿತಾಯ ಖಾತೆಯನ್ನು ವೇತನ ಖಾತೆಯಾಗಿ ಬದಲಾಯಿಸಿಕೊಂಡು, ಸಂಬಂಳ ಪ್ಯಾಕೇಜ್ ಗಳ ಅಡಿಯಲ್ಲಿನ ಸೌಲಭ್ಯ ಪಡೆಯಲು ರಾಜ್ಯ ಸರ್ಕಾರ ಆದೇಶಿಸಿರುತ್ತದೆ. ಹೀಗಾಗಿ ನನ್ನ ವೇತನ ಖಾತೆಯಾಗಿ ಬದಲಾಯಿಸೋದಕ್ಕೆ ಮನವಿಯನ್ನು ಮಾಡಬೇಕು.

ಉಳಿತಾಯ ಖಾತೆ, ವೇತನ ಖಾತೆಯಾಗಿ ಬದಲಾಯಿಸಲು ಈ ದಾಖಲೆ ಕಡ್ಡಾಯ

  1. ಇತ್ತೀಚಿನ ವೇತನ ಪಾವತಿ ಪ್ರತಿ
  2. ಬ್ಯಾಂಕ್ ಪಾಸ್ ಬುಕ್ ಮುಖ ಪುಟದ ಜೆರಾಕ್ಸ್ ಪ್ರತಿ
  3. ಸರ್ಕಾರಿ ನೌಕರರ ಆಧಾರ್ ಕಾರ್ಜ್ ನಕಲು ಪ್ರತಿ
  4. ಪ್ಯಾನ್ ಕಾರ್ಡ್ ನಕಲು ಪ್ರತಿ

ಈ ಮೇಲ್ಕಂಡ ದಾಖಲೆಗಳನ್ನು ಅರ್ಜಿಯ ಜೊತೆಗೆ ಸರ್ಕಾರಿ ನೌಕರರು ಹೊಂದಿರುವಂತ ಉಳಿತಾಯ ಖಾತೆಯ ಬ್ಯಾಂಕ್ ಗೆ ತೆರಳಿ ನೀಡಿದರೇ, ಅದನ್ನು ವೇತನ ಖಾತೆಯಾಗಿ ಅಂದರೇ ಸ್ಯಾಲರಿ ಅಕೌಂಟ್ ಆಗಿ ಬ್ಯಾಂಕ್ ಸಿಬ್ಬಂದಿ ಬದಲಾವಣೆ ಮಾಡಲಿದ್ದಾರೆ. ಆ ಮೂಲಕ ವೇತನ ಖಾತೆಯ ಅಡಿಯಲ್ಲಿ ಸಿಗುವಂತ ಕೆಲ ಪ್ರಯೋಜನಗಳು ಲಭ್ಯವಾಗುವಂತೆ ಆಗಲಿದೆ.


ರಾಜ್ಯದ ಸರ್ಕಾರಿ ನೌಕರರಿಗೆ 'ಸಂಬಳ ಪ್ಯಾಕೇಜ್ ಖಾತೆ' ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ.!



ಈ ಹಿನ್ನೆಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಕಾಯ೯ ನಿವ೯ಹಿಸುತ್ತಿರುವ ಎಲ್ಲಾ ವೃಂದದ ಅಧಿಕಾರಿ/ಸಿಬ್ಬಂದಿಗಳು ಕಡ್ಡಾಯವಾಗಿ ಸಂಬಳ ಪ್ಯಾಕೇಜ್ ನೋಂದಾಯಿಸಲು ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ವೃಂದದ ಅಧಿಕಾರಿ/ಸಿಬ್ಬಂದಿಗಳು ಕಡ್ಡಾಯವಾಗಿ ಸಂಬಳ ಖಾತೆಯನ್ನು ಸಂಬಳ ಪ್ಯಾಕೇಜ್ ಖಾತೆಯನ್ನಾಗಿ ಪರಿವರ್ತಿಸಲು/ನೋಂದಾಯಿಸಲು ಸೂಚಿಸಲಾಗಿದೆ.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖಿತ (01) ರ ಸರ್ಕಾರಿ ಆದೇಶದನ್ವಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ವೃಂದದ ಅಧಿಕಾರಿ/ಸಿಬ್ಬಂದಿಗಳು ತಪ್ಪದೇ ತಮ್ಮ ಸಂಬಳ ಖಾತೆಯನ್ನು ಕಡ್ಡಾಯವಾಗಿ ಸಂಬಳ ಪ್ಯಾಕೇಜ್ ಖಾತೆಯನ್ನಾಗಿ ಬ್ಯಾಂಕ್ಗಳ ಮೂಲಕ ಪರಿವರ್ತಿಸಿಕೊಳ್ಳಲು/ನೋಂದಾಯಿಸಿಕೊಳ್ಳಲು ಸೂಚಿಸಲಾಗಿರುತ್ತದೆ. ಅದರಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವ್ಯಾಪ್ತಿಯಡಿಯಲ್ಲಿ ಬರುವ ಎಲ್ಲಾ ಹಂತದ ವೇತನ ಸೆಳೆಯುವ ಬಟಾವಡೆ ಅಧಿಕಾರಿಗಳು (ಡಿ ಡಿ ಒ) ತಕ್ಷಣದಿಂದಲೇ ಜಾರಿಗೆ ಬರುವಂತೆ ತಮ್ಮ ಅಧೀನದಲ್ಲಿ ಬರುವ ಕಛೇರಿ/ಆಸ್ಪತ್ರೆ (ಪ್ರಾ.ಆ.ಕೇಂದ್ರ /ಸ.ಆ.ಕೇಂದ್ರ/ ಸಾರ್ವಜನಿಕ ಆಸ್ಪತ್ರೆ/ ಎಂ.ಸಿ.ಹೆಚ್ /ಡಿ.ಹೆಚ್.ಒ/ ಟಿ.ಹೆಚ್.ಓ ಕಛೇರಿಗಳನ್ನೊಳಗೊಂಡಂತೆ) ಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿ/ಸಿಬ್ಬಂದಿಗಳ ಪ್ರಸ್ತುತ ಚಾಲ್ತಿಯಲ್ಲಿರುವ ಸಂಬಳ ಖಾತೆಗಳನ್ನು ಬ್ಯಾಂಕ್ಗಳ ಮೂಲಕ ಸಂಬಳ ಪ್ಯಾಕೇಜ್ ಖಾತೆಗಳನ್ನಾಗಿ ಕಡ್ಡಾಯವಾಗಿ ಪರಿವರ್ತಿಸಿಕೊಳ್ಳಲು ಈ ಮೂಲಕ ಸೂಚಿಸಲಾಗಿದೆ.

a) PMJJBY – ಪ್ರಧಾನಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆಯಡಿಯಲ್ಲಿ ವಾರ್ಷಿಕ ರೂ 436 ಪ್ರೀಮಿಯಂ ನಲ್ಲಿ ಅವಧಿ ವಿಮಾ (Term Insurance) ಯೋಜನ ಸೌಲಭ್ಯವಿರುತ್ತದೆ.
b) PMSBY ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆಯಡಿಯಲ್ಲಿ ವಾರ್ಷಿಕ ರೂ 20
ಪ್ರೀಮಿಯಂನಲ್ಲಿ ಅಪಘಾತ ವಿಮಾ (Accidental Insurance) ಯೋಜನೆ ಸೌಲಭ್ಯವಿರುತ್ತದೆ.
ಎಲ್ಲಾ ಡಿ.ಡಿ.ಒ ಅಧಿಕಾರಿಗಳು ಈ ಮೇಲ್ಕಂಡ ಸೌಲಭ್ಯಗಳ ಯೋಜನೆಗಳಡಿಯಲ್ಲಿ ತಮ್ಮ ಅಧೀನದಲ್ಲಿ ಬರುವ ಅಧಿಕಾರಿ/ಸಿಬ್ಬಂದಿಗಳು ಅರ್ಹತೆಗನುಸಾರ ನೋಂದಾಯಿಸಿಕೊಳ್ಳಲು ಕ್ರಮವಹಿಸುವಂತೆ ಈ ಮೂಲಕ ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಉಲ್ಲೇಖ (1) ರ ಸರ್ಕಾರಿ ಆದೇಶವನ್ನು ಗಮನಿಸಬಹುದಾಗಿರುತ್ತದೆ. ಮುಂದುವರೆದು ಸದರಿ ಸರ್ಕಾರಿ ಆದೇಶವನ್ನು ಜಾರಿಗೊಳಿಸುವಲ್ಲಿ ವಿಳಂಬವಾದಲ್ಲಿ ಸಂಬಂಧಪಟ್ಟ ವೇತನ ಸೆಳೆಯುವ ಬಟಾವಡೆ ಅಧಿಕಾರಿಗಳು (ಡಿ ಡಿ ಒ) ಗಳನ್ನೇ ನೇರ ಹೊಣೆಗಾರರನ್ನಾಗಿಸಲಾಗುವುದೆಂದು ಈ ಮೂಲಕ ತಿಳಿಸಿದೆ.

ಕಾಮೆಂಟ್‌ಗಳಿಲ್ಲ:

ರಾಜ್ಯ ಸರ್ಕಾರಿ ನೌಕರ'ರಿಗೆ ಮತ್ತೊಂದು ಸಿಹಿಸುದ್ದಿ ನೀಡಲು ಮುಂದಾದ ಸರ್ಕಾರ

ಈ ಸಂಬಂಧ ರಾಜ್ಯ ಸರ್ಕಾರದಿಂದ ಸಭಾ ಸೂಚನಾ ಪತ್ರವನ್ನು ಹೊರಡಿಸಲಾಗಿದ್ದು, ರಾಜ್ಯ ಸಚಿವ ಸಂಪುಟದ ತೀರ್ಮಾನಿಸಿದಂತೆ ಅಧಿಕಾರಿ, ನೌಕರರು ಮತ್ತು ಅವಲಂಬಿತ ಕುಟುಂಬದ ಸದಸ್ಯರ ಹ...