ಆದಾಯ ತೆರಿಗೆ ಇಲಾಖೆಯ ಕ್ರೀಡಾ ಕೋಟದಡಿ ಒಟ್ಟು 56 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಸ್ಟೆನೋಗ್ರಾಫರ್ ಗ್ರೇಡ್ II, ತೆರಿಗೆ ಸಹಾಯಕ ಮತ್ತು ಮಲ್ಟಿ-ಟಾಸ್ಕಿಂಗ್ ಸ್ಟಾಫ್ (MTS) ಹುದ್ದೆಗಳಿಗೆ ಪ್ರತಿಭಾನ್ವಿತ ಕ್ರೀಡಾಪಟುಗಳ ನೇಮಕಾತಿ ಮಾಡಿಕೊಳ್ಳಲಾಗ್ತಿದೆ.
ಏಪ್ರಿಲ್ 5, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
ಆದಾಯ ತೆರಿಗೆ ಇಲಾಖೆಯಲ್ಲಿ ಕೆಲಸ ಮಾಡಲು ಬಯಸುವ ಅಭ್ಯರ್ಥಿಗಳು ಏಪ್ರಿಲ್ 5 ಅಥವಾ ಅದಕ್ಕೂ ಮೊದಲು ಅರ್ಜಿ ಸಲ್ಲಿಸಬಹುದು. ಆಸಕ್ತ ಅಭ್ಯರ್ಥಿಗಳು ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್ https://incometaxhyderabad.gov.in/ ಮೂಲಕ ಅರ್ಜಿ ಸಲ್ಲಿಸಬಹುದು.ಅರ್ಜಿ ಸಲ್ಲಿಸಲು ಏಪ್ರಿಲ್ 5 ಕೊನೆಯ ದಿನವಾಗಿದೆ. ಇನ್ನೂ ಅರ್ಜಿ ಸಲ್ಲಿಸುವ ಮೊದಲು, ಅಭ್ಯರ್ಥಿಗಳು ಕೆಳಗೆ ನೀಡಲಾದ ವಿವರಗಳನ್ನು ಪರಿಶೀಲಿಸಬೇಕು.
ಆದಾಯ ತೆರಿಗೆ ಇಲಾಖೆಯಲ್ಲಿ ಭರ್ತಿ ಮಾಡಿಕೊಳ್ಳುತ್ತಿರುವ ಹುದ್ದೆಗಳು
- ಸ್ಟೆನೋಗ್ರಾಫರ್ ಗ್ರೇಡ್ II (ಸ್ಟೆನೋ): 2 ಹುದ್ದೆಗಳು
- ತೆರಿಗೆ ಸಹಾಯಕ (TA): 28 ಹುದ್ದೆಗಳು
- ಮಲ್ಟಿ-ಟಾಸ್ಕಿಂಗ್ ಸ್ಟಾಫ್ (MTS): 26 ಹುದ್ದೆಗಳು
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ವಯಸ್ಸಿನ ಮಿತಿ:
- ಸ್ಟೆನೋಗ್ರಾಫರ್ ಗ್ರೇಡ್ II ಮತ್ತು ತೆರಿಗೆ ಸಹಾಯಕ: 18 ರಿಂದ 27 ವರ್ಷಗಳು
- ಮಲ್ಟಿ-ಟಾಸ್ಕಿಂಗ್ ಸ್ಟಾಫ್: 18 ರಿಂದ 25 ವರ್ಷಗಳು
ವಯಸ್ಸಿನ ಸಡಿಲಿಕೆ:
- ಸಾಮಾನ್ಯ / ಒಬಿಸಿ ಅಭ್ಯರ್ಥಿಗಳಿಗೆ : 5 ವರ್ಷಗಳು
- SC/ST ಅಭ್ಯರ್ಥಿಗಳಿಗೆ : 10 ವರ್ಷಗಳು
- ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ವಿಶೇಷ ವಿನಾಯಿತಿ ಅನ್ವಯಿಸುತ್ತದೆ.
ಅರ್ಜಿ ಸಲ್ಲಿಸಲು ಅರ್ಹತಾ ಮಾನದಂಡಗಳು:
- ಸ್ಟೆನೋಗ್ರಾಫರ್ ಗ್ರೇಡ್ II: ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 12 ನೇ ತರಗತಿ ಉತ್ತೀರ್ಣರಾಗಿರಬೇಕು.
- ತೆರಿಗೆ ಸಹಾಯಕ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು.
- ಮಲ್ಟಿ-ಟಾಸ್ಕಿಂಗ್ ಸ್ಟಾಫ್: ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ಹೆಚ್ಚುವರಿಯಾಗಿ, ಅಭ್ಯರ್ಥಿ ಕ್ರೀಡೆಯಲ್ಲಿ ರಾಜ್ಯ/ದೇಶವನ್ನು ಪ್ರತಿನಿಧಿಸಿರಬೇಕು, ಯಾವುದಾದರೂ ಒಂದು ಪದಕಗಳನ್ನು ಗೆದ್ದಿರಬೇಕು:
ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳು (ಸೀನಿಯರ್/ಜೂನಿಯರ್ ಮಟ್ಟ)
ಖೇಲೋ ಇಂಡಿಯಾ ಯೂತ್ ಗೇಮ್ಸ್
ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟ
ಅಂತರ ವಿಶ್ವವಿದ್ಯಾಲಯ ಪಂದ್ಯಾವಳಿಗಳು
ಭಾರತ ಶಾಲಾ ಕ್ರೀಡಾಕೂಟ (SGFI) ಸ್ಪರ್ಧೆಗಳು
ರಾಷ್ಟ್ರೀಯ ಶಾಲಾ ಕ್ರೀಡಾಕೂಟ
ಅಂತರರಾಷ್ಟ್ರೀಯ ಸ್ಪರ್ಧೆಗಳು (ಭಾರತವನ್ನು ಪ್ರತಿನಿಧಿಸುವುದು)
ರಾಜ್ಯ ಮಟ್ಟದ ಚಾಂಪಿಯನ್‌ಶಿಪ್‌ಗಳು (ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳಿಂದ ಗುರುತಿಸಲ್ಪಟ್ಟಿದೆ)
ಈ ಹುದ್ದೆಗಳಿಗೆ ನೀಡಬಹುದಾದ ಸಂಬಳ:
- ಸ್ಟೆನೋಗ್ರಾಫರ್ ಗ್ರೇಡ್ II ಮತ್ತು ತೆರಿಗೆ ಸಹಾಯಕ: ರೂ 25,500 - ರೂ 81,100 (ಹಂತ 4, 7ನೇ CPC)
- ಮಲ್ಟಿ-ಟಾಸ್ಕಿಂಗ್ ಸ್ಟಾಫ್: ರೂ 18,000 - ರೂ 56,900 (ಹಂತ 1, 7ನೇ CPC)
ಆಯ್ಕೆ ಪ್ರಕ್ರಿಯೆ ಹೇಗಿರುತ್ತೆ?
- ಸ್ಟೆನೋಗ್ರಾಫರ್ ಗ್ರೇಡ್ II: ಕೌಶಲ್ಯ ಪರೀಕ್ಷೆ (ಡಿಕ್ಟೇಷನ್ ಮತ್ತು ಟ್ರಾನ್ಸ್‌ಕ್ರಿಪ್ಷನ್)
- ತೆರಿಗೆ ಸಹಾಯಕ: ಡೇಟಾ ಎಂಟ್ರಿ ಕೌಶಲ್ಯ ಪರೀಕ್ಷೆ
- ಮಲ್ಟಿ-ಟಾಸ್ಕಿಂಗ್ ಸ್ಟಾಫ್: ನೇಮಕಾತಿ ನಿಯಮಗಳ ಪ್ರಕಾರ ಆಯ್ಕೆ ನಡೆಸಲಾಗುತ್ತದೆ. ಜೊತೆಗೆ ಅಂತಿಮ ಆಯ್ಕೆಗೆ ಮೊದಲು ಅಭ್ಯರ್ಥಿಗ ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಫಿಟ್‌ನೆಸ್ ಪರೀಕ್ಷೆಗೆ ಒಳಗಾಗಬೇಕು.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಆದಾಯ ತೆರಿಗೆ 2025 ಅಧಿಸೂಚನೆ ಪರಿಶೀಲಿಸಿ, ಅಧಿಕೃತ ವೆಬ್‌ಸೈಟ್ https://incometaxhyderabad.gov.in/ ಮೂಲಕ ಅರ್ಜಿ ಸಲ್ಲಿಸಬಹುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ