ಹೈದರಾಬಾದ್ ಕರ್ನಾಟಕ ಪ್ರದೇಶ

ಹೈದರಾಬಾದ್ ಕರ್ನಾಟಕ ಪ್ರದೇಶ
Hyderabad Karnataka

ಭಾನುವಾರ, ಸೆಪ್ಟೆಂಬರ್ 29, 2024

7th Pay Commission: ಸರ್ಕಾರಿ ನೌಕರರ ಕನಿಷ್ಠ ವೇತನ ಹೆಚ್ಚಳದ ಮಾಹಿತಿ

 ಕೆ. ಸುಧಾಕರ್‌ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗ ಕರ್ನಾಟಕ ಸರ್ಕಾರಕ್ಕೆ 558 ಪುಟಗಳ ಸಂಪುಟ-1ರ ವರದಿಯನ್ನು ಸಲ್ಲಿಕೆ ಮಾಡಿದೆ. ಸರ್ಕಾರ ವರದಿಯನ್ನು ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸಿದೆ. ವರದಿಯಲ್ಲಿ ಸರ್ಕಾರಿ ನೌಕರರ ಕನಿಷ್ಠ ಮೂಲ ವೇತನವನ್ನು 17,000 ರಿಂದ 27,000ಕ್ಕೆ ಮತ್ತು ಗರಿಷ್ಠ ಮೂಲ ವೇತನವನ್ನು 1,04,600 ಇಂದ 2,41,200ಕ್ಕೆ ಹೆಚ್ಚಳ ಮಾಡಲು ಶಿಫಾರಸು ಮಾಡಲಾಗಿದೆ.

ಹಾಗಾದರೆ ಉಳಿದ ವೇತನ ಆಯೋಗಗಳು ಮೂಲ ವೇತನದ ಕುರಿತು ಮಾಡಿದ್ದ ಶಿಫಾರಸುಗಳು ಹೇಗಿದ್ದವು? ಎಂಬ ವಿವರಗಳು ಇಲ್ಲಿವೆ.

ಮೊದಲ ರಾಜ್ಯ ವೇತನ ಆಯೋಗ 1966: ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಟಿ. ಕೆ. ತುಕೋಳ್ ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಸರ್ಕಾರವು ಮೊದಲ ರಾಜ್ಯ ವೇತನ ಆಯೋಗವನ್ನು ದಿನಾಂಕ 17.11.1966 ರಂದು ರಚಿಸಿತು. ಈ ಆಯೋಗದ ವರದಿಯನ್ನು ದಿನಾಂಕ 02.12.1968ರಂದು ಸಲ್ಲಿಸಿತು. ಸರ್ಕಾರವು ಕೆಲವು ಮಾರ್ಪಾಡುಗಳೊಂದಿಗೆ ಶಿಫಾರಸುಗಳಿಗೆ ಒಪ್ಪಿಗೆ ನೀಡಿ ಅವುಗಳನ್ನು ದಿನಾಂಕ 01.01.1970 ರಂದು ಜಾರಿಗೊಳಿಸಿತು.

ಆಯೋಗದ ಪ್ರಮುಖ ಶಿಫಾರಸುಗಳು ವೇತನ ಶ್ರೇಣಿಗಳ ಸಂಖ್ಯೆಯನ್ನು 108 ರಿಂದ 27ಕ್ಕೆ ಇಳಿಸುವುದು. ಕನಿಷ್ಠ ವೇತನವನ್ನು ಮಾಸಿಕ ರೂ. 65ಕ್ಕೆ ನಿಗದಿಪಡಿಸುವುದು. ಕೇಂದ್ರ ಸರ್ಕಾರಿ ನೌಕರರಿಗೆ ಅನ್ವಯಿಸುವ ದರಗಳಂತೆ ರಾಜ್ಯ ಸರ್ಕಾರಿ ನೌಕರರಿಗೂ ತುಟ್ಟಿ ಭತ್ಯೆ ದರಗಳನ್ನು ಅನ್ವಯಿಸುವುದು ಆಗಿತ್ತು.

ಎರಡನೇ ರಾಜ್ಯ ವೇತನ ಆಯೋಗ 1974. ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ. ನಾರಾಯಣ ಪೈ ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಸರ್ಕಾರವು ಎರಡನೇ ರಾಜ್ಯ ವೇತನ ಆಯೋಗವನ್ನು ದಿನಾಂಕ 13.08.1974 ರಂದು ರಚಿಸಿತು. ಆಯೋಗವು ದಿನಾಂಕ 08.03.197 ರಂದು ವರದಿ ಸಲ್ಲಿಸಿತು ಹಾಗೂ ಶಿಫಾರಸುಗಳನ್ನು ದಿನಾಂಕ 01.01.1977 ರಿಂದ ಜಾರಿಗೊಳಿಸಲಾಯಿತು. (ಅಧಿಕಾರಿ ವೇತನ ಸಮಿತಿಯಿಂದ ಆನಂತರದಲ್ಲಿ ಮಾಡಲಾದ ಕೆಲವು ಸಲಹೆಗಳ ಮಾರ್ಪಾಡುಗಳೊಂದಿಗೆ).

ಆಯೋಗದ ಪ್ರಮುಖ ಶಿಫಾರಸುಗಳು. ವೇತನ ಶ್ರೇಣಿಗಳ ಸಂಖ್ಯೆಯನ್ನು 27 ರಿಂದ 15ಕ್ಕೆ ಇಳಿಸುವುದು. ಕನಿಷ್ಠ ವೇತನವನ್ನು ರೂ. 250ಕ್ಕೆ ಮತ್ತು ಗರಿಷ್ಠ ವೇತನವನ್ನು ರೂ. 2,750ಕ್ಕೆ ನಿಗದಿಪಡಿಸುವುದು. ಸರ್ಕಾರದಲ್ಲಿನ ಎಲ್ಲಾ ಹುದ್ದೆಗಳನ್ನು ಎಂಟು ಪ್ರವರ್ಗಗಳಾಗಿ ವರ್ಗೀಕರಿಸುವುದು. ಪ್ರತಿ ವರ್ಗಕ್ಕೆ ಪ್ರಾರಂಭಿಕ ಹಂತದಲ್ಲಿ ಏಕರೂಪದ ವೇತನ ರಚನೆ. ವೇತನ ಶ್ರೇಣಿಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸುವುದು (ಮೂಲವೇತನ ಮತ್ತು ಸಾಮಾನ್ಯ

ಉದ್ದೇಶದ ವೇತನ).

ಸಚಿವ ಸಂಪುಟ ಉಪ-ಸಮಿತಿ 1981: ವೇತನ ಪರಿಷ್ಕರಣೆ ಕುರಿತು ಸರ್ಕಾರಿ ನೌಕರರಿಂದ ಸ್ವೀಕರಿಸಲಾದ ಮನವಿಗಳನ್ನು ಪರಿಶೀಲಿಸಲು, ಅಂದಿನ ಹಣಕಾಸು ಸಚಿವರಾದ ಎಂ. ವೀರಪ್ಪ ಮೊಯ್ಲಿ ಅಧ್ಯಕ್ಷತೆಯಲ್ಲಿ ಕರ್ನಾಟಕ ಸರ್ಕಾರವು ಸಚಿವ ಸಂಪುಟ ಉಪ-ಸಮಿತಿಯನ್ನು ದಿನಾಂಕ 31.03.1981ರಂದು ರಚಿಸಿತು. ಸರ್ಕಾರವು ಸಮಿತಿಯ ಶಿಫಾರಸುಗಳನ್ನು ಅಂಗೀಕರಿಸಿ. ಅವುಗಳನ್ನು ದಿನಾಂಕ 01.01.1982ರಿಂದ ಅನ್ವಯವಾಗುವಂತೆ ಜಾರಿಗೊಳಿಸಿತು.

ಉಪ-ಸಮಿತಿಯ ಪ್ರಮುಖ ಶಿಫಾರಸುಗಳು. ಕನಿಷ್ಟ ವೇತನವನ್ನು ರೂ. 390 ಮತ್ತು ಗರಿಷ್ಠ ವೇತನವನ್ನು ರೂ. 3,200 ಗಳಿಗೆ ಪರಿಷ್ಕರಿಸುವುದು. ಅಖಿಲ ಭಾರತ ಸರಾಸರಿ ಗ್ರಾಹಕ ಬೆಲೆ ಸೂಚ್ಯಂಕ (ಎಐಎಸಿಪಿಐ) 400 ರಂತೆ ಮೂಲ ವೇತನದ ಮೇಲೆ ಅರ್ಹವಾದ ತುಟ್ಟಿ ಭತ್ಯೆ. ರೂ.20 ರಿಂದ ರೂ.50 ಗಳವರೆಗೆ ವೇತನ ಹೆಚ್ಚಿಸುವುದು. ಕೆಳ ಹಂತದ ರಾಜ್ಯ ಸರ್ಕಾರಿ ನೌಕರರ ವೇತನವನ್ನು ಕೇಂದ್ರ ಸರ್ಕಾರಿ ನೌಕರರ ವೇತನಕ್ಕೆ ಸಮನಾಗಿಸುವುದು.

ಮೂರನೇ ರಾಜ್ಯ ವೇತನ ಆಯೋಗ 1986: ಮೂರನೇ ರಾಜ್ಯ ವೇತನ ಆಯೋಗವನ್ನು ನ್ಯಾಯಮೂರ್ತಿ ಬಿ. ವೆಂಕಟಸ್ವಾಮಿ ಅಧ್ಯಕ್ಷತೆಯಲ್ಲಿ ದಿನಾಂಕ 23.01.1986 ರಲ್ಲಿ ರಚಿಸಲಾಯಿತು. ಆಯೋಗವು ತನ್ನ ವರದಿಯನ್ನು ಡಿಸೆಂಬರ್ 1986 ರಲ್ಲಿ ಸಲ್ಲಿಸಿತು. ಆಯೋಗದ ವರದಿಯಲ್ಲಿನ ಶಿಫಾರಸುಗಳನ್ನು ದಿನಾಂಕ 01.07.1986 ರಿಂದ ಅನ್ವಯವಾಗುವಂತೆ ಜಾರಿಗೊಳಿಸಲಾಯಿತು.

ಈ ಆಯೋಗದ ಪ್ರಮುಖ ಶಿಫಾರಸುಗಳು. ವೇತನ ಶ್ರೇಣಿಗಳ ಸಂಖ್ಯೆಯನ್ನು 21ಕ್ಕೆ ಹೆಚ್ಚಿಸುವುದು. ತುಟ್ಟಿ ಭತ್ಯೆಯನ್ನು ಮೂಲ ವೇತನದೊಂದಿಗೆ ವಿಲೀನಗೊಳಿಸುವುದು, ಕನಿಷ್ಠ ವೇತನವನ್ನು ರೂ. 750ಕ್ಕೆ ಮತ್ತು ಗರಿಷ್ಟ ವೇತನವನ್ನು ರೂ. 6,300 ಗಳಿಗೆ ಪರಿಷ್ಕರಿಸಲಾಯಿತು. ವೇತನವನ್ನು ರೂ. 75 ರಿಂದ ರೂ.350 ಗಳವರೆಗೆ ಹೆಚ್ಚಿಸುವುದು. ವೇತನ ಪರಿಷ್ಕರಣೆಯಿಂದ, ಆರ್ಥಿಕ ವರ್ಷ 1986ರ ಉಳಿದ ಅವಧಿಗೆ ಸುಮಾರು ರೂ.329ಕೋಟೆಗಳ ಹಚ್ಚುವರಿ ವೆಚ್ಚವು ಉಂಟಾಯಿತು.

ಕಾಮೆಂಟ್‌ಗಳಿಲ್ಲ:

'B.Ed' ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ : ಸರ್ಕಾರಿ ಕೋಟಾ ಸೀಟುಗಳಿಗೆ ಅರ್ಜಿ ಆಹ್ವಾನ

'B.Ed' ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ : ಸರ್ಕಾರಿ ಕೋಟಾ ಸೀಟುಗಳಿಗೆ ಅರ್ಜಿ ಆಹ್ವಾನ https://schooleducation.karnataka.gov.in BEd