ಹೈದರಾಬಾದ್ ಕರ್ನಾಟಕ ಪ್ರದೇಶ

ಹೈದರಾಬಾದ್ ಕರ್ನಾಟಕ ಪ್ರದೇಶ
Hyderabad Karnataka

ಭಾನುವಾರ, ಸೆಪ್ಟೆಂಬರ್ 8, 2024

ರಾಜ್ಯ `ನಿವೃತ್ತ ಸರ್ಕಾರಿ ನೌಕರ'ರ ಗಮನಕ್ಕೆ : `ನಿವೃತ್ತಿ ವೇತನ', `ತುಟ್ಟಿ ಭತ್ಯೆ' ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ!

1. ಕನಿಷ್ಠ ನಿವೃತ್ತಿ ವೇತನ:

ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳು ಮತ್ತು ಕರ್ನಾಟಕ ನಾಗರೀಕ ಸೇವಾ (ಅಸಾಧಾರಣ ನಿವೃತ್ತಿ ವೇತನ) ನಿಯಮಾವಳಿಗಳು, 2003ರ ಅವಕಾಶಗಳನ್ವಯ ಸಂದರ್ಭಾನುಸಾರ ಲಭ್ಯವಿರುವ ಈ ಕೆಳಕಂಡ ವಿವಿಧ ರೀತಿಯ ನಿವೃತ್ತಿ ವೇತನಗಳ ಕನಿಷ್ಠ ಮೊತ್ತವನ್ನು ಪ್ರಸ್ತುತ ಮಾಹೆಯಾನ ರೂ. 8,500/- ಗಳಿಂದ ಮಾಹೆಯಾನ ರೂ.13,500/-ಗಳಿಗೆ ಪರಿಷ್ಕರಿಸತಕ್ಕದ್ದು.

ಅ) ವಯೋ ನಿವೃತ್ತಿ ವೇತನ
ಆ) ವಿಶ್ರಾಂತಿ ನಿವೃತ್ತಿ ವೇತನ
ಇ) ಅಶಕ್ತತಾ ನಿವೃತ್ತಿ ವೇತನ
ಈ) ಪರಿಹಾರ ನಿವೃತ್ತಿ ವೇತನ
ಉ) ಅನುಕಂಪ ಭತ್ಯೆ

2. ಗರಿಷ್ಠ ನಿವೃತ್ತಿ ವೇತನ:

2.1 ಮೇಲಿನ ಕಂಡಿಕೆ-1 ರಲ್ಲಿ ನಿರ್ಧಿಷ್ಟಪಡಿಸಿರುವ ವಿವಿಧ ರೀತಿಯ ನಿವೃತ್ತಿ ವೇತನಗಳ ಗರಿಷ್ಠ ಮೊತ್ತದ ಪರಿಮಿತಿಯನ್ನು ಪ್ರಸ್ತುತ ಮಾಹೆಯಾನ ರೂ. 75,300/- ಗಳಿಂದ ಮಾಹೆಯಾನ ರೂ.1,20,600/-ಗಳಿಗೆ ಪರಿಷ್ಕರಿಸತಕ್ಕದ್ದು.

2.2 ಕೆಲವು ಅತ್ಯಂತ ಅಸಾಧಾರಣ ಸಂದರ್ಭಗಳನ್ನು ಹೊರತುಪಡಿಸಿ ಕರ್ನಾಟಕ ನಾಗರೀಕ ಸೇವಾ ನಿಯಮಗಳ ನಿಯಮ 210 ರಡಿ ಮಂಜೂರು ಮಾಡಲಾಗುವ ತಾರ್ತಿಕ (ಅಡ್ ಹಾಕ್) ನಿವೃತ್ತಿ ವೇತನದ ಪರಿಮಿತಿಯು ಮಾಹೆಯಾನ ರೂ.13,500/-ಗಳನ್ನು ಮೀರತಕ್ಕದ್ದಲ್ಲ.

3. ಕುಟುಂಬ ನಿವೃತ್ತಿ ವೇತನ:

3.1 ಸರ್ಕಾರಿ ನೌಕರರ ಅವಲಂಬಿತರಿಗೆ ಲಭ್ಯವಿರುವ ಕುಟುಂಬ ನಿವೃತ್ತಿ ವೇತನದ ಕನಿಷ್ಠ ಮೊತ್ತವು ಪ್ರಸ್ತುತ ಮಾಹೆಯಾನ ರೂ. 8,500/- ಗಳಿಂದ ಮಾಹೆಯಾನ ರೂ. 13,500/- ಗಳಿಗೆ ಪರಿಷ್ಕರಿಸತಕ್ಕದ್ದು.

3.2 ಕುಟುಂಬ ನಿವೃತ್ತಿ ವೇತನದ ಗರಿಷ್ಠ ಪರಿಮಿತಿಯು ಪ್ರಸ್ತುತ ಮಾಹೆಯಾನ ರೂ. 45,180/- ರಿಂದ ಮಾಹೆಯಾನ ರೂ. 80,400/-ಗಳಿಗೆ ಪರಿಷ್ಕರಿಸತಕ್ಕದ್ದು.

3.3 ಈ ಮೇಲಿನ ಪರಿಮಿತಿಯ ಮಿತಿಗೊಳಪಟ್ಟು ಲಭ್ಯವಿರುವ ಕುಟುಂಬ ನಿವೃತ್ತಿ ವೇತನದ ಮೊತ್ತವು ಕರ್ನಾಟಕ ಸರ್ಕಾರಿ ನೌಕರರ (ಕುಟುಂಬ ನಿವೃತ್ತಿ ವೇತನ) ನಿಯಮಗಳು, 2002ರಡಿ ಲಭ್ಯವಾಗುವ ಕುಟುಂಬ ನಿವೃತ್ತಿ ವೇತನದ ಉಪಲಬ್ದಗಳ ಶೇ. 30ರಷ್ಟು ಇರತಕ್ಕದ್ದು.

3.4 ಕರ್ನಾಟಕ ಸರ್ಕಾರಿ ನೌಕರರ (ಕುಟುಂಬ ನಿವೃತ್ತಿ ವೇತನ) ನಿಯಮಗಳು, 2002ರ ಅವಕಾಶಗಳಂತೆ, ದಿನಾಂಕ: 01.07.2022 ರಂದು ಮತ್ತು ತದನಂತರ ಸೇವೆಯಲ್ಲಿರುವಾಗಲೇ ಮರಣ ಹೊಂದಿದ ಸರ್ಕಾರಿ ನೌಕರರ ಪ್ರಕರಣಗಳಲ್ಲಿ, ಮೃತ ಸರ್ಕಾರಿ ನೌಕರನ ಅವಲಂಬಿತರು ಕುಟುಂಬ ನಿವೃತ್ತಿ ವೇತನದ ಪರಿಷ್ಕೃತ ಮೊತ್ತವನ್ನು ದಿನಾಂಕ: 01.08.2024ರಿಂದ ಪಡೆಯಲು ಅರ್ಹರಿರುತ್ತಾರೆ.

3.5 ದಿನಾಂಕ: 01.07.2022ರ ಪೂರ್ವದಲ್ಲಿ ಕುಟುಂಬ ನಿವೃತ್ತಿ ವೇತನ ಪಡೆಯುತ್ತಿದ್ದ ಮೃತ ಸರ್ಕಾರಿ ನೌಕರನ ಅವಲಂಬಿತರಿಗೆ ಈ ಆದೇಶದ ಅನುಬಂಧದಲ್ಲಿ ತೋರಿಸಿರುವಂತೆ ಪರಿಷ್ಕೃತ ಕುಟುಂಬ ನಿವೃತ್ತಿ ವೇತನವು ಲಭ್ಯವಿರುತ್ತದೆ.

4. ತುಟ್ಟಿ ಭತ್ಯೆ:

4.1 ಅಖಿಲ ಭಾರತ ಸರಾಸರಿ ಗ್ರಾಹಕ ಬೆಲೆ ಸೂಚ್ಯಂಕ (ಸಾಮಾನ್ಯ) 361.704 ಅಂಶಗಳವರೆಗಿನ (ಆಧಾರ ವರ್ಷ 2001=100) ತುಟ್ಟಿ ಭತ್ಯೆಯನ್ನು ದಿನಾಂಕ: 1ನೇ ಜುಲೈ 2022 ರಂದು ಲಭ್ಯವಿದ್ದ ಪ್ರಸ್ತುತ ಮೂಲ ಪಿಂಚಣಿ/ಕುಟುಂಬ ಪಿಂಚಣಿಯೊಂದಿಗೆ ವಿಲೀನಗೊಳಿಸಿ ರಾಜ್ಯ ಸರ್ಕಾರಿ ನೌಕರರ ಪರಿಷ್ಕೃತ ಪಿಂಚಣಿ/ಕುಟುಂಬ ಪಿಂಚಣಿ ಮೊತ್ತವನ್ನು ನಿರ್ಧರಿಸಲಾಗಿರುತ್ತದೆ. ಆದುದರಿಂದ, ಪರಿಷ್ಕೃತ ನಿವೃತ್ತಿ ವೇತನ / ಕುಟುಂಬ ನಿವೃತ್ತಿ ವೇತನ ಮೇಲಿನ ತುಟ್ಟಿ ಭತ್ಯೆಯ ಮೊದಲನೇ ಕಂತನ್ನು ದಿನಾಂಕ: 1ನೇ ಜನವರಿ 2023ರಿಂದ ಲೆಕ್ಕಹಾಕಿ ಈ ಕೆಳಗೆ ತಿಳಿಸಿರುವ ದಿನಾಂಕದಿಂದ ಮಂಜೂರು ಮಾಡತಕ್ಕದ್ದು.

4.2 ಕಾರ್ಯನಿರತ ಸರ್ಕಾರಿ ನೌಕರರಿಗೆ ಕಾಲ ಕಾಲಕ್ಕೆ ಮಂಜೂರು ಮಾಡುವ ತುಟ್ಟಿ ಭತ್ಯೆ ಆದೇಶಗಳನ್ನು ಅನ್ವಯಿಸಿ ನಿವೃತ್ತಿ ವೇತನದಾರರು ಮತ್ತು ಕುಟುಂಬ ನಿವೃತ್ತಿ ವೇತನದಾರರಿಗೆ ತುಟ್ಟಿ ಭತ್ಯೆಯನ್ನು ಕ್ರಮಬದ್ಧಗೊಳಿಸಿ ಮಂಜೂರು ಮಾಡುವುದನ್ನು ಮುಂದುವರೆಸತಕ್ಕದ್ದು. ಅದರಂತೆ, ಪರಿಷ್ಕೃತ ನಿವೃತ್ತಿ ವೇತನ/ ಪರಿಷ್ಕೃತ ಕುಟುಂಬ ನಿವೃತ್ತಿ ವೇತನದ ಮೇಲೆ ತುಟ್ಟಿ ಭತ್ಯೆಯನ್ನು ಈ ಕೆಳಕಂಡಂತೆ ಕಾಲ್ಪನಿಕವಾಗಿ ಕ್ರಮಬದ್ಧಗೊಳಿಸತಕ್ಕದ್ದು:

ಪರಿಷ್ಕೃತ ಮೂಲ ನಿವೃತ್ತಿ ವೇತನ/ಕುಟುಂಬ ನಿವೃತ್ತಿ ವೇತನ 01.07.2023 - 5.5% ಪರಿಷ್ಕೃತ ಮೂಲ ನಿವೃತ್ತಿ ವೇತನ/ಕುಟುಂಬ ನಿವೃತ್ತಿ ವೇತನ 01.01.2024 8.5% ಪರಿಷ್ಕೃತ ಮೂಲ ನಿವೃತ್ತಿ ವೇತನ/ಕುಟುಂಬ ನಿವೃತ್ತಿ ವೇತನ 4.3 ಮುಂದಿನ ತುಟ್ಟಿ ಭತ್ಯೆಯ ಮಂಜೂರಾತಿಯು ಈ ಸಂಬಂಧ ರಾಜ್ಯ ಸರ್ಕಾರವು ಹೊರಡಿಸುವ ಆದೇಶಗಳಲ್ಲಿ ಕ್ರಮಬದ್ಧಗೊಳಿಸಿದಂತೆ ಇರತಕ್ಕದ್ದು. 4.4 ತುಟ್ಟಿ ಭತ್ಯೆಯನ್ನು 1ನೇ ಜನವರಿ ಮತ್ತು 1ನೇ ಜುಲೈರಿಂದ ಅನ್ವಯಿಸುವಂತೆ ವರ್ಷಕ್ಕೆ ಎರಡು ಬಾರಿ ಪಾವತಿಸುವುದು.

5. ನಿವೃತ್ತಿ ಉಪದಾನ / ಮರಣ ಉಪದಾನ :

5.1 ದಿನಾಂಕ: 01.07.2022ರಂದು ಮತ್ತು ನಂತರದಲ್ಲಿ ಹಾಗೂ ದಿನಾಂಕ: 01.08.2024ಕ್ಕೂ ಮುಂಚಿತವಾಗಿ ಸೇವೆಯಿಂದ ನಿವೃತ್ತನಾದ ಕಾರಣದಿಂದ ಸೇವೆಯಲ್ಲಿರುವುದು ಕೊನೆಗೊಂಡ ಸರ್ಕಾರಿ ನೌಕರನ ಪ್ರಕರಣದಲ್ಲಿ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ಅವಕಾಶಗಳನ್ವಯ ಪಾವತಿಸಲಾಗುವ ನಿವೃತ್ತಿ ಉಪದಾನವು ಪೂರ್ಣಗೊಳಿಸಲಾದ ಪ್ರತಿ ಆರು ಮಾಸಿಕ ಅರ್ಹತಾ ಸೇವೆಗೆ ಪ್ರಸ್ತುತ ಉಪಲಬ್ದಗಳ ಗರಿಷ್ಠ ಮಿತಿ 16 1/2 ಕ್ಕೆ ಸೀಮಿತಗೊಳಿಸಿ, ಪ್ರಸ್ತುತ ಉಪಲಬ್ಬಗಳ 1/4 ನೇ ಭಾಗಕ್ಕೆ ಸಮನಾಗತಕ್ಕದು. ಈ ರೀತಿ ಲೆಕ್ಕ ಹಾಕಲಾದ ನಿವೃತ್ತಿ ಉಪದಾನದ ಗರಿಷ್ಠ ಮಿತಿಯು ರೂ.20.00 ಲಕ್ಷಗಳಾಗಿರುತ್ತದೆ.

5.2 ದಿನಾಂಕ: 01.07.2022 ರಂದು ಅಥವಾ ತದನಂತರ ಆದರೆ ದಿನಾಂಕ: 01.08.2024ರೊಳಗೆ ಸೇವೆಯಲ್ಲಿರುವಾಗಲೇ ಮರಣ ಹೊಂದಿದ ಸರ್ಕಾರಿ ನೌಕರನ ಪ್ರಕರಣದಲ್ಲಿ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳಡಿ ಲಭ್ಯವಿರುವ ಮರಣ ಉಪದಾನವು ಈ ಕೆಳಕಂಡ ದರಗಳಲ್ಲಿ ಲಭ್ಯವಾಗುತ್ತದೆ.

PPF Calculator: ಪ್ರತಿ ತಿಂಗಳು 2000, 3000, 4000 ಮತ್ತು 5000 ರೂ. ಹೂಡಿಕೆ ಮಾಡಿದ್ರೆ 15 ವರ್ಷಕ್ಕೆ ಎಷ್ಟು ಹಣ ನಿಮ್ಮ ಕೈ ಸೇರುತ್ತೆ ನೋಡಿ..

PPF Calculator: ಪ್ರತಿ ತಿಂಗಳು 2000, 3000, 4000 ಮತ್ತು 5000 ರೂ. ಹೂಡಿಕೆ ಮಾಡಿದ್ರೆ 15 ವರ್ಷಕ್ಕೆ ಎಷ್ಟು ಹಣ ನಿಮ್ಮ ಕೈ ಸೇರುತ್ತೆ ನೋಡಿ.. ಈ ಪೈಕಿ ಸಾರ್ವಜನಿಕ ...