ಹೈದರಾಬಾದ್ ಕರ್ನಾಟಕ ಪ್ರದೇಶ

ಹೈದರಾಬಾದ್ ಕರ್ನಾಟಕ ಪ್ರದೇಶ
Hyderabad Karnataka

ಬುಧವಾರ, ಸೆಪ್ಟೆಂಬರ್ 11, 2024

7th Pay Commission: ಸರ್ಕಾರಿ ನೌಕರರ ಮನೆ ಖರೀದಿ, ಇತರ ಮುಂಗಡ ಹೆಚ್ಚಳಕ್ಕೆ ಶಿಫಾರಸು

ಕೆ. ಸುಧಾಕರ್‌ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗ ಕರ್ನಾಟಕಸರ್ಕಾರಕ್ಕೆ ಸಲ್ಲಿಕೆ ಮಾಡಿರುವ 558 ಪುಟಗಳ ಸಂಪುಟ-1ರ ವರದಿಯ ಭಾಗ-5ರಲ್ಲಿ ಸರ್ಕಾರಿ ನೌಕರರ ಸಾಲಗಳು ಮತ್ತು ಮುಂಗಡಗಳು ಎಂದು ಹಲವು ಶಿಫಾರಸುಗಳನ್ನು ಮಾಡಿದೆ. ಇವುಗಳಲ್ಲಿ ಮನೆ ನಿರ್ಮಾಣ ಮುಂಗಡ, ಹಬ್ಬದ ಮುಂಗಡ, ಮೋಟಾರು ವಾಹನ ಮುಂಗಡ, ಮುಂತಾದವು ಸೇರಿವೆ.

ಮನೆ ನಿರ್ಮಾಣ/ ಮನೆ ಖರೀದಿಗಾಗಿ ಮುಂಗಡ: ಪ್ರಸ್ತುತದಲ್ಲಿ ಮನೆ ನಿರ್ಮಾಣ/ ಮನೆ ಖರೀದಿಗಾಗಿ 70 ತಿಂಗಳ ಮೂಲ ವೇತನವನ್ನು ಗ್ರೂಪ್ 'ಎ' ಪ್ರವರ್ಗ ದವರಿಗಾಗಿ ಗರಿಷ್ಟ ರೂ. 40 ಲಕ್ಷಗಳವರೆಗೆ ಮತ್ತು ಇತರೆ ಪ್ರವರ್ಗದವರಿಗಾಗಿ ರೂ. 25 ಲಕ್ಷಗಳವರೆಗೆ ಶೇ. 8.50 ಬಡ್ಡಿ ದರದಲ್ಲಿನ ಮುಂಗಡಕ್ಕೆ ನೌಕರರು ಅರ್ಹರಾಗಿರುತ್ತಾರೆ. ಅಸಲನ್ನು 180 ತಿಂಗಳಲ್ಲಿ (ಗರಿಷ್ಠ) ಮತ್ತು ಬಡ್ಡಿಯನ್ನು 60 ತಿಂಗಳಲ್ಲಿ (ಗರಿಷ್ಠ) ಮರು ಪಾವತಿಸಬೇಕಾಗುತ್ತದೆ. ಮನೆ ನಿರ್ಮಾಣ/ ಖರೀದಿಗಾಗಿ 70 ತಿಂಗಳ ಪರಿಷ್ಕೃತ ಮೂಲ ವೇತನವನ್ನು ಉಳಿಸಿಕೊಂಡು ಗ್ರೂಪ್ 'ಎ' ಪ್ರವರ್ಗಕ್ಕೆ ಗರಿಷ್ಟ ರೂ. 55 ಲಕ್ಷ ಮತ್ತು ಇತರೆ ಪ್ರವರ್ಗಗಳಿಗೆ ರೂ. 40 ಲಕ್ಷಗಳ ಮಿತಿಗೊಳಪಟ್ಟು ಜಾರಿಯಲ್ಲಿರುವ ಷರತ್ತನ್ನು ಮತ್ತು ನಿಬಂಧನೆಗಳೊಂದಿಗೆ ಮುಂಗಡದ ಪ್ರಮಾಣವನ್ನು ಹೆಚ್ಚಿಸಲು ಆಯೋಗ ಶಿಫಾರಸು ಮಾಡಿದೆ.

ಹಬ್ಬದ ಮುಂಗಡ: ಸರ್ಕಾರವು ಇತ್ತೀಚಿಗೆ ಹಬ್ಬದ ಮುಂಗಡವನ್ನು ರೂ. 10,000 ಗಳಿಂದ ರೂ. 25,000 ಗಳಿಗೆ ಹೆಚ್ಚಿಸಿರುವುದನ್ನು ಆಯೋಗವು ಗಮನಿಸಿದೆ. ಈ ಮುಂಗಡವು ಬಡ್ಡಿ ರಹಿತವಾಗಿದ್ದು, 10 ತಿಂಗಳ ಕಂತುಗಳಲ್ಲಿ ಮರುಪಾವತಿಸಬೇಕಾಗುತ್ತದೆ. ಮುಂಗಡವನ್ನು ಇತ್ತೀಚೆಗಷ್ಟೆ ಪರಿಷ್ಕರಿಸಿರುವ ಅಂಶವನ್ನು ಪರಿಗಣಿಸಿ ಇದರಲ್ಲಿ ಯಾವುದೇ ಬದಲಾವಣೆಯ ಅಗತ್ಯವಿಲ್ಲವೆಂದು ಆಯೋಗವು ಅಭಿಪ್ರಾಯಪಡುತ್ತದೆ ಎಂದು ಹೇಳಿದೆ.

ಮೋಟಾರು ಕಾರು ಖರೀದಿಗಾಗಿ ಮುಂಗಡ: ಪ್ರಸ್ತುತದಲ್ಲಿ, ರೂ. 67,550 ಅಥವಾ ಮೇಲ್ಪಟ್ಟ ಮೂಲ ವೇತನ ಪಡೆಯುತ್ತಿರುವ ಸಿಬ್ಬಂದಿಯು ಕಾರು ಖರೀದಿಗಾಗಿ ಗರಿಷ್ಠ ರೂ. 3 ಲಕ್ಷಗಳ ಮಿತಿಗೊಳಪಟ್ಟು 16 ತಿಂಗಳ ಮೂಲ ವೇತನದಷ್ಟು ಮುಂಗಡವನ್ನು ಪಡೆಯಲು ಅರ್ಹರಾಗಿರುತ್ತಾರೆ. ಈ ಮುಂಗಡವನ್ನು ವಾರ್ಷಿಕ ಶೇ. 12.50ರ ಬಡ್ಡಿ ದರದಲ್ಲಿ ನೀಡಲಾಗುತ್ತದೆ. ಅಸಲನ್ನು 100 ತಿಂಗಳುಗಳು ಮತ್ತು ಬಡ್ತಿಯನ್ನು 20 ತಿಂಗಳುಗಳಲ್ಲಿ ಮರು ಪಾವತಿಸಲು ಅವಕಾಶವಿರುತ್ತದೆ.

ಪ್ರಸ್ತುತ ಜಾರಿಯಲ್ಲಿರುವ ಷರತ್ತು ಮತ್ತು ನಿಬಂಧನೆಗಳಿಗೆ ಒಳಪಟ್ಟು internal combustion (ಐಸಿ) ಇಂಜಿನ್‌ಗಳುಳ್ಳ ವಾಹನಗಳಿಗೆ ಗರಿಷ್ಠ ಮಿತಿಯನ್ನು ರೂ. 6 ಲಕ್ಷಗಳಿಗೆ ಪರಿಷ್ಕರಣೆಯೊಂದಿಗೆ ಈಗಿರುವಂತೆ 16 ತಿಂಗಳ ಪರಿಷ್ಕೃತ ಮೂಲ ವೇತನದಷ್ಟು ಮುಂಗಡವನ್ನು ಮಂಜೂರು ಮಾಡಲು ಆಯೋಗವು ಶಿಫಾರಸು ಮಾಡುತ್ತದೆ.

ವಿದ್ಯುತ್‌ ವಾಹನಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ, ಐಸಿ ಇಂಜಿನ್‌ಗಳಿಗೆ ಅನ್ವಯವಾಗುವ ಅರ್ಹತೆ ಮತ್ತು ಮರುಪಾವತಿ ಷರತ್ತುಗಳೊಂದಿಗೆ ಗರಿಷ್ಠ ರೂ. 10 ಲಕ್ಷಗಳ ಮಿತಿಗೊಳಪಟ್ಟು, ವಿದ್ಯುತ್ ವಾಹನ ಖರೀದಿಗಾಗಿ ಮುಂಗಡ ಹಣವನ್ನು ಹೆಚ್ಚಿಸಲು ಆಯೋಗವು ಶಿಫಾರಸ್ಸು ಮಾಡುತ್ತದೆ ಎಂದು ವರದಿ ಹೇಳಿದೆ.

PPF Calculator: ಪ್ರತಿ ತಿಂಗಳು 2000, 3000, 4000 ಮತ್ತು 5000 ರೂ. ಹೂಡಿಕೆ ಮಾಡಿದ್ರೆ 15 ವರ್ಷಕ್ಕೆ ಎಷ್ಟು ಹಣ ನಿಮ್ಮ ಕೈ ಸೇರುತ್ತೆ ನೋಡಿ..

PPF Calculator: ಪ್ರತಿ ತಿಂಗಳು 2000, 3000, 4000 ಮತ್ತು 5000 ರೂ. ಹೂಡಿಕೆ ಮಾಡಿದ್ರೆ 15 ವರ್ಷಕ್ಕೆ ಎಷ್ಟು ಹಣ ನಿಮ್ಮ ಕೈ ಸೇರುತ್ತೆ ನೋಡಿ.. ಈ ಪೈಕಿ ಸಾರ್ವಜನಿಕ ...