ಹೈದರಾಬಾದ್ ಕರ್ನಾಟಕ ಪ್ರದೇಶ

ಹೈದರಾಬಾದ್ ಕರ್ನಾಟಕ ಪ್ರದೇಶ
Hyderabad Karnataka

ಮಂಗಳವಾರ, ಸೆಪ್ಟೆಂಬರ್ 10, 2024

7th & 8th Pay Commssion: ಈವರೆಗೆ ಸರ್ಕಾರಿ ನೌಕರರ ವೇತನದಲ್ಲಿ ಆದ ಬದಲಾವಣೆ ವಿವರ

ದೇಶದಲ್ಲಿ ಸದ್ಯ 7ನೇ ವೇತನ ಆಯೋಗದಡಿ ವೇತನ ಪರಿಷ್ಕರಣೆ ಲಾಭ ಪಡೆದುಕೊಳ್ಳುತ್ತಿರುವ ಕೇಂದ್ರ ಸರ್ಕಾರಿ ನೌಕರರು, 8ನೇ ವೇತನ ಆಯೋಗದತ್ತ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅಗತ್ಯ ಆರ್ಥಿಕ ಸೌಲಭ್ಯ, ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ತನ್ನ ನೌಕರರಿಗೆ ಮತ್ತು ಪಿಂಚಣಿದಾರರಿಗೆ 1947 ರಲ್ಲಿ ಮೊದಲ ವೇತನ ಆಯೋಗ ಜಾರಿಗೆ ಮಾಡಿತು.

ಇಂದಿನ ವೇತನ ಆಯೋಗದ ಕುರಿತು ಮಾತನಾಡುವ ನಾವೆಲ್ಲರು, ಸ್ವಾತಂತ್ರ್ಯ ಕಾಲದಲ್ಲಿ ಮೊದಲ ಬಾರಿಗೆ ಅನುಷ್ಠಾನಕ್ಕೆ ಬಂದ ವೇತನ ಆಯೋಗದಡಿ ವೇತನ ಪರಿಷ್ಕರಣೆ ಹೇಗೆ ಎಲ್ಲ ಆಗಿತ್ತು. ಅಂದು ಯಾವೆಲ್ಲ ಅಂಶಗಳು ಮಾನದಂಡಗಳಾದವು ಎಂಬುದನ್ನು ನೌಕರರು ತಿಳಿಯಲೇಬೇಕು.

1947ರಿಂದ ಕೇಂದ್ರೀಯ ವೇತನ ಆಯೋಗಗಳಡಿ ಕೇಂದ್ರ ಉದ್ಯೋಗಿಗಳು ವೇತನ ಪರಿಷ್ಕರಣೆ, ಪಿಂಚಣಿ ಹೆಚ್ಚಳ, ತುಟ್ಟಿಭತ್ಯೆ ಏರಿಕೆ ಕಂಡಿದ್ದಾರೆ. ಇದರಿಂದ ಕಾಲ ಕಾಲಕ್ಕೆ ಹಣದುಬ್ಬರ ಸರಿದೂಗಿಸಿಕೊಂಡು ಬಂದಿದ್ದಾರೆ. ಅಂದಿನಿಂದ ಏಳನೇ ವೇತನ ಆಯೋಗದವರೆಗೆ ಜಾರಿಯಾದ ಆಯೋಗಗಳು ನ್ಯಾಯಯುತ ಪರಿಹಾರ ಖಾತ್ರಿಪಡಿಸಿವೆ ಎಂದು 'ಫೈನಾನ್ಷಿಯಲ್ ಎಕ್ಸ್‌ಪ್ರೆಸ್' ವರದಿ ಮಾಡಿದೆ.

ಇಂದು 8ನೇ ವೇತನ ಆಯೋಗದಡಿ ಕನಿಷ್ಠ, ಗರಿಷ್ಠ ವೇತನ ಹೆಚ್ಚಳ, ಪಿಂಚಣಿ ಮತ್ತು ತುಟ್ಟಿಭತ್ಯೆ ಪರಿಷ್ಕರಣೆ ಬಗ್ಗೆ ಚರ್ಚಿಸುತ್ತಿದ್ದೇವೆ. ಇದಕ್ಕು ಮೊದಲು 5ನೇ, 6ನೇ ಮತ್ತು 7ನೇ ವೇತನ ಆಯೋಗಗಳು ಪರಿಚಯಿಸಿದ ಮಹತ್ವದ ಬದಲಾವಣೆಗಳು ಏನು? ವೇತನ, ಪಿಂಚಣಿ ಹೆಚ್ಚಳದಲ್ಲಿ ಹಿಂದಿನ ಪ್ರವೃತ್ತಿಗಳು ಹೇಗಿದ್ದವು. ಮುಖ್ಯವಾಗಿ ವೇತನ ಆಯೋಗ ಎಂದರೇನು? ಎಂಬುದರ ಪೂರ್ಣ ಮಾಹಿತಿ ಇಲ್ಲಿದೆ.

ವೇತನ ಆಯೋಗ ಎಂದರೇನು? ಸ್ಥಾಪಿಸದ್ದೇಕೆ?

ಕೇಂದ್ರ ಸರ್ಕಾರವೇ ಸರ್ಕಾರಿ ನೌಕರರ ವೇತನ, ಪಿಂಚಣಿಗಳಲ್ಲಿನ ಹೊಂದಾಣಿಕೆ ಪರಿಶೀಲಿಸಿ ಶಿಫಾರಸು ಮಾಡಲು ನಿಯಮಿತ ಮಧ್ಯಂತರಗಳಲ್ಲಿ ವೇತನ ಆಯೋಗಗಳನ್ನು ಸ್ಥಾಪಿಸಲಾಗಿದೆ. ಹಣದುಬ್ಬರ, ಆರ್ಥಿಕ ಸ್ಥಿತಿಗತಿಗಳಿಗೆ ತಕ್ಕಹಾಗೇ ನೌಕರರ ವೇತನ ಹೊಂದಣಿಕೆಗಾಗಿ, ಪರಿಷ್ಕರಣೆಗಾಗಿ ಈ ಆಯೋಗಗಳನ್ನು ಸ್ಥಾಪಿಸಲಾಗಿದೆ.

5, 6 ಮತ್ತು 7 ವೇತನ ಆಯೋಗ: ವೇತನ, ಪಿಂಚಣಿ ಬದಲಾವಣೆ

5 ನೇ ವೇತನ ಆಯೋಗ

ಸರ್ಕಾರಿ ನೌಕರರಿಗಾಗಿ ಐದನೇ ವೇತನ ಆಯೋಗವನ್ನು 1994ರ ಏಪ್ರಿಲ್ ನಲ್ಲಿ ಸ್ಥಾಪಿಸಲಾಗಿದ್ದು, ಅದರ ಶಿಫಾರಸುಗಳನ್ನು ಜನವರಿ 1996 ರಿಂದ ಅನುಷ್ಠಾನಕ್ಕೆ ತರಲಾಯಿತು.

* ಕನಿಷ್ಠ ಮೂಲ ವೇತನ ರೂ. 2,750

* ವೇತನ ಶ್ರೇಣಿ 51 ರಿಂದ 34ಕ್ಕೆ ಇಳಿಕೆಗೆ ಶಿಫಾರಸು

* ಸರ್ಕಾರಿ ನೌಕರರಲ್ಲಿ ಶೇಕಡಾ 30ರಷ್ಟು ಕಡಿತ

* ಗ್ರಾಚ್ಯುಟಿ ಸೀಲಿಂಗ್‌ನಲ್ಲಿ 2.5 ಲಕ್ಷದಿಂದ 3.5 ಲಕ್ಷಕ್ಕೆ ಹೆಚ್ಚಳ
6ನೇ ವೇತನ ಆಯೋಗದ ಪರಿಷ್ಕರಣೆ, ಬದಲಾವಣೆ

ಈ ಆರನೇ 6ನೇ ವೇತನ ಆಯೋಗವನ್ನು 2006ರ ಜುಲೈ ತಿಂಗಳಲ್ಲಿ ಸರ್ಕಾರ ಸ್ಥಾಪಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಅಂದಿನ ನೌಕರರ ವೇತನಕ್ಕೆ ಅನುಗುಣವಾಗಿ ಸಲ್ಲಿಕೆಯಾಗಿದ್ದ ಶಿಫಾರಸುಗಳನ್ನು 2008ರ ಆಗಸ್ಟ್‌ನಲ್ಲಿ ಜಾರಿಗೆ ತರಲಾಯಿತು.

* ಕನಿಷ್ಠ ಮೂಲ ವೇತನ: ರೂ 7,000.

* ಫಿಟ್‌ಮೆಂಟ್ ಅಂಶ: ಮೊದಲು 1.74ಕ್ಕೆ ಶಿಫಾರಸು, ಸರ್ಕಾರವು 1.86ಕ್ಕೆ ಏರಿಕೆ ಮಾಡಿತ್ತು

* 2006ರ ಜನವರಿ 1ರಿಂದ ಅನ್ವಯ

* 2008 ಸೆಪ್ಟೆಂಬರ್ 1ರಿಂದ ಭತ್ಯೆಗಳು ಅನ್ವಯ

* ಜೀವನ ವೆಚ್ಚ ಭತ್ಯೆ ಶೇಕಡಾ 16 ರಿಂದ 22ಕ್ಕೆ ಪರಿಷ್ಕರಣೆ

7ನೇ ವೇತನ ಆಯೋಗ ಜಾರಿ, ಬದಲಾವಣೆ

ಹಾಲಿ ಚಾಲ್ತಿಯಲ್ಲಿರುವ ಹಾಗೂ ಮುಂದಿನ ಒಂದೂವರೆ ವರ್ಷದ ನಂತರ ಅಂತ್ಯಗೊಳ್ಳಲಿರುವ 7 ನೇ ವೇತನ ಆಯೋಗವನ್ನು 2014ರ ಫೆಬ್ರವರಿ ಅಂತ್ಯದಲ್ಲಿ ರಚಿಸಲಾಯಿತು. ಅದಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಶಿಫಾರಸುಗಳನ್ನು 2016 ರಿಂದ ಜನವರಿ 1ರಂದು ಜಾರಿಗೊಳಿಸಲಾಯಿತು.

* ಕನಿಷ್ಠ ಮೂಲ ವೇತನ: 18000 ರೂ.

* ಫಿಟ್‌ಮೆಂಟ್ ಅಂಶ: 2.57

* ಕನಿಷ್ಠ ಮೂಲ ವೇತನ 7,000 ರೂ.ನಿಂದ 18,000 ರೂ.

* ನೌಕರರು ಮತ್ತು ಪಿಂಚಣಿದಾರರಿಗೆ ಆರೋಗ್ಯ ವಿಮಾ ಯೋಜನೆಯ ಪರಿಚಯ.

* ವೇತನ ರಚನೆ, ಭತ್ಯೆಗಳು ಮತ್ತು ಪಿಂಚಣಿಗಳ ಸಮಗ್ರ ಪರಿಶೀಲನೆ.

* 2016 ರ ಮೊದಲು ನಿವೃತ್ತರಾದವರಿಗೆ ಪಿಂಚಣಿ ಸೂತ್ರೀಕರಣದ ಪರಿಷ್ಕರಣೆ.

8ನೇ ವೇತನ ಆಯೋಗ ಜಾರಿ ಯಾವಾಗ? ಪರಿಷ್ಕರಣೆ ನಿರೀಕ್ಷೆ

ಸದ್ಯ ಇರುವ ಏಳನೇ ವೇತನ ಆಯೋಗ ಜಾರಿಯಾಗಿ ಎಂಟೂವರೆ ವರ್ಷವಾಗಿದೆ. ಇನ್ನೂ 8ನೇ ವೇತನ ಆಯೋಗವು 2026ರ ಜನವರಿಯಲ್ಲಿ ರಚನೆಯಾಗುವ ನಿರೀಕ್ಷೆ ಇದೆ. ಅದಕ್ಕಾಗಿ ಈಗಾಗಲೇ ನೌಕರರ ಸಂಘ, ಒಕ್ಕೂಟಗಳು ಶಿಫರಾಸು ಮಾಡಿವೆ.

* ವೇತನದಲ್ಲಿ ಸಂಭಾವ್ಯ ಶೇ.20ರಿಂದ 35ರಷ್ಟು ಹೆಚ್ಚಳ ನಿರೀಕ್ಷೆ

* ಹಂತ 1ರಲ್ಲಿ ವೇತನವು 34,560 ರೂ., ಹಂತ 18ರ ವೇತನವು ರೂ. 4.8 ಲಕ್ಷಕ್ಕೆ ಏರಬಹುದು.

* ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ವರ್ಧಿತ ನಿವೃತ್ತಿ ಪ್ರಯೋಜನಗಳು.

* ಫಿಟ್‌ಮೆಂಟ್ ಅಂಶ 1.92 ಆಗುವ ಸಾಧ್ಯತೆ.

* ಫಿಟ್‌ಮೆಂಟ್ ಆಧರಿಸಿ ಕನಿಷ್ಠ ವೇತನ 34,560 ರೂ.ಗೆ ಪರಿಷ್ಕರಣೆ ಸಾಧ್ಯತೆ

* ಕನಿಷ್ಠ ಪಿಂಚಣಿ ಸುಮಾರು 17,280 ರೂ. ನಿರೀಕ್ಷೆ

PPF Calculator: ಪ್ರತಿ ತಿಂಗಳು 2000, 3000, 4000 ಮತ್ತು 5000 ರೂ. ಹೂಡಿಕೆ ಮಾಡಿದ್ರೆ 15 ವರ್ಷಕ್ಕೆ ಎಷ್ಟು ಹಣ ನಿಮ್ಮ ಕೈ ಸೇರುತ್ತೆ ನೋಡಿ..

PPF Calculator: ಪ್ರತಿ ತಿಂಗಳು 2000, 3000, 4000 ಮತ್ತು 5000 ರೂ. ಹೂಡಿಕೆ ಮಾಡಿದ್ರೆ 15 ವರ್ಷಕ್ಕೆ ಎಷ್ಟು ಹಣ ನಿಮ್ಮ ಕೈ ಸೇರುತ್ತೆ ನೋಡಿ.. ಈ ಪೈಕಿ ಸಾರ್ವಜನಿಕ ...