ಹೈದರಾಬಾದ್ ಕರ್ನಾಟಕ ಪ್ರದೇಶ

ಹೈದರಾಬಾದ್ ಕರ್ನಾಟಕ ಪ್ರದೇಶ
Hyderabad Karnataka

ಸೋಮವಾರ, ಸೆಪ್ಟೆಂಬರ್ 16, 2024

7th Pay Commission: ಸರ್ಕಾರಿ ನೌಕರರ ಸಾಮೂಹಿಕ ವಿಮಾ ಯೋಜನೆ ಎಷ್ಟು ಏರಿಕೆ

ಆಯೋಗ ತನ್ನ ವರದಿಯಲ್ಲಿ ನೌಕರರಿಗೆ ಸಾಮೂಹಿಕ ವಿಮಾ ಯೋಜನೆ (ಜಿಐಎಸ್) ಎಂದು ಉಲ್ಲೇಖಿಸಿ ವಿವರಣೆ ನೀಡಿದೆ. ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ (ಕೆಜಿಐಡಿ) ಮೂಲಕ ಕರ್ನಾಟಕ ಸರ್ಕಾರವು, ತನ್ನ ನೌಕರರಿಗೆ ಸಾಮೂಹಿಕ ವಿಮಾ ಯೋಜನೆಯನ್ನು ನಿರ್ವಹಿಸುತ್ತಿದೆ. ಈ ಯೋಜನೆಯು ಉಳಿತಾಯಗಳು ಮತ್ತು ವಿಮಾ ಸೌಲಭ್ಯಗಳೆರಡನ್ನೂ ಹೊಂದಿದ್ದು, ಗ್ರೂಪ್-ಡಿ, ಗ್ರೂಪ್-ಸಿ ಮತ್ತು ಗ್ರೂಪ್-ಬಿ ಮತ್ತು ಗ್ರೂಪ್-ಎ ನೌಕರರು ಪ್ರತಿ ತಿಂಗಳು ಕ್ರಮವಾಗಿ ರೂ.120, ರೂ. 240, ರೂ. 360 ಮತ್ತು ರೂ. 480ಗಳ ವಂತಿಗೆ ನೀಡುವ ಅಗತ್ಯವಿದೆ ಎಂದು ಹೇಳಿದೆ.

ವಿಮಾ ರಕ್ಷಣೆಯ ಅಡಿಯಲ್ಲಿ ವಂತಿಗೆಯ ಒಂದು ಭಾಗವನ್ನು (ಪ್ರಸ್ತುತ ಶೇ.25ರಷ್ಟು) ವಿಮಾ ನಿಧಿಯಾಗಿ ತೆಗೆದುಕೊಳ್ಳಲಾಗುತ್ತದೆ. ಸೇವೆ ಸಲ್ಲಿಸುತ್ತಿರುವ ನೌಕರನು ನಿಧನ ಹೊಂದಿದ ಪಕ್ಷದಲ್ಲಿ ರೂ. 1,20,000, ರೂ. 2,40,000, ರೂ. 3,60,000 ಮತ್ತು ರೂ. 4,80,000 ಗಳ ಮೊತ್ತವನ್ನು ಕ್ರಮವಾಗಿ ಗ್ರೂಪ್-ಡಿ, ಗ್ರೂಪ್-ಸಿ ಗ್ರೂಪ್-ಬಿ ಮತ್ತು ಗ್ರೂಪ್-ಎ ನೌಕರರ ನಾಮ ನಿರ್ದೇಶಿತರಿಗೆ ಸಂದಾಯ ಮಾಡಲಾಗುತ್ತದೆ. ಉಳಿದ ವಂತಿಗೆಯನ್ನು (ಶೇ.75 ರಷ್ಟು) ಕಾಲ ಕಾಲಕ್ಕೆ ವಿಧಿಸಲಾಗುವ ಬಡ್ಡಿಯನ್ನು ಗಳಿಸುವ ಉಳಿತಾಯ ನಿಧಿ ಯಾಗಿ ಪರಿಗಣಿಸಲಾಗುತ್ತದೆ.

ಸಂಗ್ರಹವಾದ ಈ ಉಳಿತಾಯ ನಿಧಿಯ ಜೊತೆಗೆ ಬಡ್ಡಿಯನ್ನು ಸೇರಿಸಿ ನೌಕರನು ಸೇವೆಯಲ್ಲಿದ್ದಾಗ ನಿಧನ ಹೊಂದಿದಲ್ಲಿ ಅಥವಾ ನಿವೃತ್ತಿ ಸಂದರ್ಭದಲ್ಲಿ ಇದನ್ನು ಆತ ಅಥವಾ ಆಕೆಗೆ ಸಂದಾಯ ಮಾಡಲಾಗುತ್ತದೆ. ಕೆಎಸ್‌ಜಿಇಎ, ನೌಕರರ ವಂತಿಗೆಯಲ್ಲಿ ಹತ್ತು ಪಟ್ಟು ಪರಿಷ್ಕರಣೆಯನ್ನು (ಪ್ರಸ್ತುತ ವಂತಿಗೆಯ 10 ರಷ್ಟು) ಕೋರಿದ್ದು, ಇದರ ಪರಿಣಾಮವಾಗಿ ಸೇವೆಯಲ್ಲಿರುವಾಗ ನಿಧನ ಹೊಂದಿದ ಸಂದರ್ಭದಲ್ಲಿ ಪಾವತಿಸಬಹುದಾದ ವಿಮೆ ಹಣವು ಹತ್ತು ಪಟ್ಟು ಹೆಚ್ಚಾಗುವುದಕ್ಕೆ ಕಾರಣವಾಗುತ್ತದೆ.


ನೌಕರರ ಉಳಿತಾಯ ನಿಧಿಗಳ ಮೇಲೆ ಪ್ರಸ್ತುತ ವಾರ್ಷಿಕ ಶೇ.7.10 ರಷ್ಟು ಬಡ್ಡಿಯನ್ನು ಗಳಿಸಲಾಗುತ್ತಿದೆ ಎಂದು ಆಯೋಗಕ್ಕೆ ಮಾಹಿತಿ ನೀಡಲಾಗಿದೆ. ಈ ಯೋಜನೆಯು ಸರ್ಕಾರಿ ನೌಕರರಲ್ಲಿ ಉಳಿತಾಯವನ್ನು ಪ್ರೋತ್ಸಾಹಿಸುವುದಲ್ಲದೆ, ಸೇವೆಯನ್ನು ಸಲ್ಲಿಸುವ ನೌಕರರ ಜೀವಕ್ಕೆ ಪರಿಣಾಮಕಾರಿ ರಕ್ಷಣೆಯನ್ನು ಒದಗಿಸುತ್ತದೆ ಎಂದು ಆಯೋಗವು ಅಭಿಪ್ರಾಯ ಪಡುತ್ತದೆ. ಹಾಗೆಯೇ, ಇದು ವಂತಿಗೆ ಆಧಾರಿತ ಯೋಜನೆಯಾಗಿರುವುದರಿಂದ, ರಾಜ್ಯ ಸರ್ಕಾರವು ಅದರ ಬಡ್ಡಿ ಬಾಧ್ಯತೆಯನ್ನು ನೀಗಿಸಲು ಗಮನಾರ್ಹ ಆಯವ್ಯಯ ಅವಕಾಶ ಕಲ್ಪಿಸುವ ಅವಶ್ಯಕತೆ ಇರುವುದಿಲ್ಲ.


ಆಯೋಗ ಮಾಡಿರುವ ಶಿಫಾರಸುಗಳು: ಅದರಂತೆ, ಆಯೋಗವು, ಪ್ರತಿ ತಿಂಗಳ ವಂತಿಗೆಯಲ್ಲಿ ಪರಿಷ್ಕರಣೆಯನ್ನು ಶಿಫಾರಸು ಮಾಡುತ್ತದೆ ಎಂದು ಹೇಳಿದೆ. ಸಾಮೂಹಿಕ ವಿಮಾ ಯೋಜನೆಯ ಮಾಸಿಕ ವಂತಿಗೆಯಲ್ಲಿ ಪರಿಷ್ಕರಣೆಯನ್ನು ಹೇಗೆ ಮಾಡಬೇಕು ಎಂದು ಶಿಫಾರಸು ಮಾಡಿದೆ.


* ಗ್ರೂಪ್-ಎ ಜಾರಿಯಲ್ಲಿರುವ ಮಾಸಿಕ ವಂತಿಗೆ ರೂ. 480, ಪಾವತಿಸಬೇಕಾದ ವಿಮಾ ಹಣ 4.80 ಲಕ್ಷ. ಹೊಸದಾಗಿ ಶಿಫಾರಸು ಮಾಡಲಾದ ಮಾಸಿಕ ವಂತಿಗೆ ರೂ. 720. ಪಾವತಿಸಬೇಕಾದ ವಿಮಾ ಹಣ 7.20 ಲಕ್ಷ. ಶೇಕಡಾವಾರು ಏರಿಕೆ 50.


* ಗ್ರೂಪ್-ಬಿ ಜಾರಿಯಲ್ಲಿರುವ ಮಾಸಿಕ ವಂತಿಗೆ ರೂ. 360, ಪಾವತಿಸಬೇಕಾದ ವಿಮಾ ಹಣ 3.60 ಲಕ್ಷ. ಹೊಸದಾಗಿ ಶಿಫಾರಸು ಮಾಡಲಾದ ಮಾಸಿಕ ವಂತಿಗೆ ರೂ. 540. ಪಾವತಿಸಬೇಕಾದ ವಿಮಾ ಹಣ 5.40 ಲಕ್ಷ. ಶೇಕಡಾವಾರು ಏರಿಕೆ 50.


* ಗ್ರೂಪ್-ಸಿ ಜಾರಿಯಲ್ಲಿರುವ ಮಾಸಿಕ ವಂತಿಗೆ ರೂ. 240, ಪಾವತಿಸಬೇಕಾದ ವಿಮಾ ಹಣ 2.40 ಲಕ್ಷ. ಹೊಸದಾಗಿ ಶಿಫಾರಸು ಮಾಡಲಾದ ಮಾಸಿಕ ವಂತಿಗೆ ರೂ. 480. ಪಾವತಿಸಬೇಕಾದ ವಿಮಾ ಹಣ 4.80 ಲಕ್ಷ. ಶೇಕಡಾವಾರು ಏರಿಕೆ 100.


* ಗ್ರೂಪ್-ಡಿ ಜಾರಿಯಲ್ಲಿರುವ ಮಾಸಿಕ ವಂತಿಗೆ ರೂ. 120, ಪಾವತಿಸಬೇಕಾದ ವಿಮಾ ಹಣ 1.20 ಲಕ್ಷ. ಹೊಸದಾಗಿ ಶಿಫಾರಸು ಮಾಡಲಾದ ಮಾಸಿಕ ವಂತಿಗೆ ರೂ. 240. ಪಾವತಿಸಬೇಕಾದ ವಿಮಾ ಹಣ 2.40 ಲಕ್ಷ. ಶೇಕಡಾವಾರು ಏರಿಕೆ 100.


ಕಾಮೆಂಟ್‌ಗಳಿಲ್ಲ:

Pension Scheme: 210 ರೂ. ಹೂಡಿಕೆ ಮಾಡಿ ತಿಂಗಳಿಗೆ 5000 ಪಡೆಯಿರಿ! 8 ಕೋಟಿ ಜನರು ನೋಂದಾಯಿಸಿಕೊಂಡಿರುವ ಬೆಸ್ಟ್‌ ಯೋಜನೆ

ಇನ್ನು ಈ ಅಟಲ್‌ ಪಿಂಚಣಿ ಯೋಜನೆಯನ್ನು (Atal Pension Yojana) ಭಾರತೀಯ ಪಿಂಚಣಿ ನಿಧಿಗಳ ನಿಯಂತ್ರಣ ಪ್ರಾಧಿಕಾರವು (PFRDA) ನಿಯಂತ್ರಿಸುತ್ತದೆ. ನಿವೃತ್ತಿ ಸಮಯದಲ್ಲಿ ಉ...