Government Employee: ಸರ್ಕಾರಿ ನೌಕರರ KGID ನಿಯಮಗಳನ್ನು ತಿಳಿಯಿರಿ
ಸೆಪ್ಟೆಂಬರ್ 02: ರಾಜ್ಯ ಸರ್ಕಾರಿ ನೌಕರರಿಗೆ ಅನೇಕ ಸೌಲಭ್ಯಗಳಿವೆ. ಅದರಲ್ಲೂ ಕಡ್ಡಾಯ ಜೀವ ವಿಮಾ ಯೋಜನೆಗೆ ನೌಕರರು ಒಳಪಡುತ್ತಾರೆ. ಆದರೆ ಇದಕ್ಕೆ ಸಹ ಅನೇಕ ನಿಯಮಗಳಿವೆ. ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಯೊಂದನ್ನು ಹಾಕಲಾಗಿದೆ. ಕಡ್ಡಾಯ ಜೀವ ವಿಮಾ ಯೋಜನೆಗೆ ಒಳಪಡುವ ವಿಧಾನವು ಈ ಕೆಳಕಂಡಂತಿದೆ ಎಂದು ನೌಕರರಿಗೆ ಮಾಹಿತಿ ನೀಡಲಾಗಿದೆ.
ಕರ್ನಾಟಕ ಸರ್ಕಾರದ ಸೇವೆಗೆ ಸೇರ್ಪಡೆಯಾಗುವ ಎಲ್ಲಾ ಶ್ರೇಣಿಯ ಅಧಿಕಾರಿ/ ನೌಕರರು ಕಡ್ಡಾಯವಾಗಿ ಹಾಗೂ ಭಾರತೀಯ ಆಡಳಿತ ಸೇವೆ, ಭಾರತೀಯ ಪೊಲೀಸ್ ಸೇವೆ ಮತ್ತು ಭಾರತೀಯ ಅರಣ್ಯ ಸೇವೆಯಲ್ಲಿನ ಕರ್ನಾಟಕ ವೃಂದಕ್ಕೆ ಸೇರಿದವರು ಐಚ್ಛಿಕವಾಗಿ ಕಡ್ಡಾಯ ಜೀವ ವಿಮಾ ಯೋಜನೆಗೆ ಒಳಪಡಲು ಅರ್ಹರಾಗಿರುತ್ತಾರೆ.
ಯೋಜನೆಗೆ ಒಳಪಡುವವರಿಗೆ 18 ವರ್ಷ ವಯಸ್ಸಾಗಿರಬೇಕು. 50 ವರ್ಷ ಮೀರಿರಬಾರದು. ಪ್ರಥಮ ಮಾಸಿಕ ವೇತನ ಪಡೆಯುವ ಮುನ್ನ ವಿಮೆಗೆ ಒಳಪಡಬೇಕು. ಧಾರಣ ಮಾಡಿದ ಹುದ್ದೆಗೆ ಅನ್ವಯವಾಗುವ ವೇತನ ಶ್ರೇಣಿಯ ಸರಾಸರಿ ವೇತನದ ಶೇ. 6.25 ಭಾಗಕ್ಕಿಂತ ಕಡಿಮೆ ಇಲ್ಲದಂತೆ ಮಾಸಿಕ ದರದ ವಿಮಾ ಕಂತನ್ನು ಪಾವತಿಸಬೇಕು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ