ಹೈದರಾಬಾದ್ ಕರ್ನಾಟಕ ಪ್ರದೇಶ

ಹೈದರಾಬಾದ್ ಕರ್ನಾಟಕ ಪ್ರದೇಶ
Hyderabad Karnataka

ಸೋಮವಾರ, ಸೆಪ್ಟೆಂಬರ್ 30, 2024

ಮುಂಬಡ್ತಿಯ ನಿಯಮ

ಕನಿಷ್ಠ 3 ವರ್ಷ ಸೇವೆ ಸಲ್ಲಿಸಿರುವ ಅರ್ಹ ಅಭ್ಯರ್ಥಿಗಳನ್ನು ಮುಂಬಡ್ತಿಗೆ ಪರಿಗಣಿಸಲು ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ತಿದ್ದುಪಡಿ ಮಾಡುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಏನಿದೆ ಸುತ್ತೋಲೆಯಲ್ಲಿ..?


ಮುಂಬಡ್ತಿಯಲ್ಲಿ 5 ವರ್ಷಗಳ ಸೇವೆ ಸಲ್ಲಿಸಿದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ ಕನಿಷ್ಠ 3 ವರ್ಷ ಸೇವೆ ಸಲ್ಲಿಸಿರುವ ಅರ್ಹ ಅಭ್ಯರ್ಥಿಗಳನ್ನು ಮುಂಬಡ್ತಿಗೆ ಪರಿಗಣಿಸಲು ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ತಿದ್ದುಪಡಿ ಮಾಡುವ ಬಗ್ಗೆ ಆದೇಶ ಹೊರಡಿಸಿದೆ.


ಕರ್ನಾಟಕ ವಿಧಾನಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಗಳ ಕಲ್ಯಾಣ ಸಮಿತಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕೆಲವು ಸರ್ಕಾರಿ ಅಧಿಕಾರಿ/ ನೌಕರರುಗಳು ನಿಯಮಾನುಸಾರ ಮೀಸಲಾತಿಗೆ ನಿಗಧಿಪಡಿಸಿರುವ ಪ್ರಾತಿನಿಧ್ಯ ಮುಂಬಡ್ತಿಯಲ್ಲಿ ದೊರೆಯುವಂತೆ ಸದರಿ ಸಮಿತಿಗೆ ಮನವಿಗಳನ್ನು ಸಲ್ಲಿಸಿರುತ್ತಾರೆ.


ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ ಕನಿಷ್ಠ 3 ವರ್ಷ ಸೇವೆ ಸಲ್ಲಿಸಿರುವ ಅರ್ಹ ಅಭ್ಯರ್ಥಿಗಳನ್ನು ಮುಂಬಡ್ತಿಗೆ ಪರಿಗಣಿಸಲು ಎಲ್ಲಾ ಇಲಾಖೆಗಳ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ತಿದ್ದುಪಡಿ ಮಾಡುವ ಬಗ್ಗೆ ಸೂಚಿಸಲಾಗಿದೆ.


ಅದರಂತೆ, ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ ಸಚಿವಾಲಯ ಇವರು ಸರ್ಕಾರದ ಪ್ರಧಾನ ಕಾರ್ಯದರ್ಶಿ, ಸಮಾಜ ಕಲ್ಯಾಣ ಇಲಾಖೆಗೆ ತಮ್ಮ ಅರೆ ಸರ್ಕಾರಿ ಪತ್ರ ಸಂಖ್ಯೆ: ಕವಿಸಸ/ ಅಜಾ-ಅಪ/04/ಅರ್ಜಿ/2024, ದಿನಾಂಕ:12-08-2024ರಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಅಧಿಕೃತ ಜ್ಞಾಪನ ಸಂಖ್ಯೆ: ಡಿಪಿಎಆರ್/126/ಎಸಿಆರ್/82, ದಿನಾಂಕ:26.11.1982 ರನ್ವಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮುಂಬಡ್ತಿಯಲ್ಲಿ 5 ಅರ್ಹತಾದಾಯಕ ಸೇವೆ ಸಲ್ಲಿಸಿದ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ ಕನಿಷ್ಟ 3 ವರ್ಷ ಸೇವೆ ಸಲ್ಲಿಸಿರುವ ಅರ್ಹ ಅಭ್ಯರ್ಥಿಗಳನ್ನು ಮುಂಬಡ್ತಿಗೆ ಪರಿಗಣಿಸುವ ಬಗ್ಗೆ ಯಾವ ಯಾವ ಇಲಾಖೆಗಳು ತಮ್ಮ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಈವರೆವಿಗೂ ಅಳವಡಿಸಿಕೊಂಡಿರುವುದಿಲ್ಲವೋ ಆ ಇಲಾಖೆಗಳಿಗೆ ಕಡ್ಡಾಯವಾಗಿ ಅಳವಡಿಸಿಕೊಳ್ಳಲು ಸಮಿತಿಯ ನಿರ್ದೇಶನಮೇರೆಗೆ ಕ್ರಮವಹಿಸಲು ತಿಳಿಸಿರುತ್ತಾರೆ. ಅದರಂತೆ, ಎಲ್ಲಾ ಸರ್ಕಾರಿ ಇಲಾಖೆಗಳು ಮತ್ತು ಅದರ ಅಧೀನದಲ್ಲಿರುವ ಸರ್ಕಾರಿ ಸಂಸ್ಥೆಗಳು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಧಿಕೃತ ಜ್ಞಾಪನ ಸಂಖ್ಯೆ: ಡಿಪಿಎಆರ್/126/ಎಸಿಆರ್/82, 2:26.11.1982 ರನ್ವಯ ಕ್ರಮವಹಿಸಬೇಕಾಗಿದೆ. ಸದರಿ ಜ್ಞಾಪನದ ವಿವರಗಳು ಈ ಕೆಳಕಂಡಂತೆ ಇದೆ.




ಭಾನುವಾರ, ಸೆಪ್ಟೆಂಬರ್ 29, 2024

(MCA/MBA/M.E/M.Tech/M.Arch)

 

Common Online Application for PGCET(MCA/MBA/M.E/M.Tech/M.Arch)

ಅರ್ಜಿಯನ್ನು ಭರ್ತಿ ಮಾಡುವ ಮೊದಲು, ಕೆಳಗಿನ ಪ್ರಮಾಣಪತ್ರಗಳೊಂದಿಗೆ ಸಿದ್ಧರಾಗಿರಿ.


  • SSLC / 10 ನೇ ಮಾರ್ಕ್ಸ್ ಕಾರ್ಡ್ - ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಲು.
  • 12 ನೇ / 2 ನೇ ಪಿಯುಸಿ ಮಾರ್ಕ್ಸ್ ಕಾರ್ಡ್ - (ಹಿಂದಿನ ವರ್ಷದ ವಿದ್ಯಾರ್ಥಿಗಳ ಸಂದರ್ಭದಲ್ಲಿ).
  • ಆರ್‌ಡಿ ಸಂಖ್ಯೆ/ಜಾತಿ (ವರ್ಗ, ಆದಾಯ, ಹೈದ್ರಾಬಾದ್-ಕರ್ನಾಟಕ (ಎಚ್‌ಕೆ) ಪ್ರಮಾಣಪತ್ರಗಳನ್ನು ನಮೂದಿಸಲು ಎಲ್ಲಾ ಮೀಸಲಾತಿ ಪ್ರಮಾಣಪತ್ರಗಳು.
  • ಕರ್ನಾಟಕದಲ್ಲಿ ಅಧ್ಯಯನ ಮಾಡಿದ ವಿವರಗಳು.
  • ಪದವಿ ಮಾರ್ಕ್ಸ್ ಕಾರ್ಡ್
  • ಪದವಿ ಪೂರ್ಣಗೊಂಡ ಪ್ರಮಾಣಪತ್ರ
  • .jpg ಸ್ವರೂಪದಲ್ಲಿ ಅಭ್ಯರ್ಥಿಯ ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಛಾಯಾಚಿತ್ರ (ಗರಿಷ್ಠ 50 KB ಗಾತ್ರ).
  • .jpg ಸ್ವರೂಪದಲ್ಲಿ ಅಭ್ಯರ್ಥಿಯ ಸಹಿ (ಗರಿಷ್ಠ 50 KB ಗಾತ್ರ).
  • .jpg ಸ್ವರೂಪದಲ್ಲಿ ಅಭ್ಯರ್ಥಿ ಎಡಗೈ ಹೆಬ್ಬೆರಳು (ಗರಿಷ್ಠ 50 KB ಗಾತ್ರ).

Before Filling Application, Please be ready with following Certificates.


  • SSLC / 10th MARKS CARD to Enter Register Number and Date of Birth.
  • 12th / 2nd PUC MARKS CARD ( In case of Previous year students).
  • All the Reservation Certificates to enter RD Number /Caste (Category, Income, Hyderabad-Karnataka(HK) Certificates.) which ever if you want to claim.
  • Details of studied in Karnataka.
  • Degree Marks Card
  • Degree Completion Certificate
  • Candidate Latest Passport size photograph in .jpg format (Max 50 KB Size)
  • Candidate Signature in .jpg format (Max 50 KB Size).
  • Candidate Left hand thumb in .jpg format (Max 50 KB Size).

7th Pay Commission: ಸರ್ಕಾರಿ ನೌಕರರ ಕನಿಷ್ಠ ವೇತನ ಹೆಚ್ಚಳದ ಮಾಹಿತಿ

 ಕೆ. ಸುಧಾಕರ್‌ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗ ಕರ್ನಾಟಕ ಸರ್ಕಾರಕ್ಕೆ 558 ಪುಟಗಳ ಸಂಪುಟ-1ರ ವರದಿಯನ್ನು ಸಲ್ಲಿಕೆ ಮಾಡಿದೆ. ಸರ್ಕಾರ ವರದಿಯನ್ನು ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸಿದೆ. ವರದಿಯಲ್ಲಿ ಸರ್ಕಾರಿ ನೌಕರರ ಕನಿಷ್ಠ ಮೂಲ ವೇತನವನ್ನು 17,000 ರಿಂದ 27,000ಕ್ಕೆ ಮತ್ತು ಗರಿಷ್ಠ ಮೂಲ ವೇತನವನ್ನು 1,04,600 ಇಂದ 2,41,200ಕ್ಕೆ ಹೆಚ್ಚಳ ಮಾಡಲು ಶಿಫಾರಸು ಮಾಡಲಾಗಿದೆ.

ಹಾಗಾದರೆ ಉಳಿದ ವೇತನ ಆಯೋಗಗಳು ಮೂಲ ವೇತನದ ಕುರಿತು ಮಾಡಿದ್ದ ಶಿಫಾರಸುಗಳು ಹೇಗಿದ್ದವು? ಎಂಬ ವಿವರಗಳು ಇಲ್ಲಿವೆ.

ಮೊದಲ ರಾಜ್ಯ ವೇತನ ಆಯೋಗ 1966: ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಟಿ. ಕೆ. ತುಕೋಳ್ ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಸರ್ಕಾರವು ಮೊದಲ ರಾಜ್ಯ ವೇತನ ಆಯೋಗವನ್ನು ದಿನಾಂಕ 17.11.1966 ರಂದು ರಚಿಸಿತು. ಈ ಆಯೋಗದ ವರದಿಯನ್ನು ದಿನಾಂಕ 02.12.1968ರಂದು ಸಲ್ಲಿಸಿತು. ಸರ್ಕಾರವು ಕೆಲವು ಮಾರ್ಪಾಡುಗಳೊಂದಿಗೆ ಶಿಫಾರಸುಗಳಿಗೆ ಒಪ್ಪಿಗೆ ನೀಡಿ ಅವುಗಳನ್ನು ದಿನಾಂಕ 01.01.1970 ರಂದು ಜಾರಿಗೊಳಿಸಿತು.

ಆಯೋಗದ ಪ್ರಮುಖ ಶಿಫಾರಸುಗಳು ವೇತನ ಶ್ರೇಣಿಗಳ ಸಂಖ್ಯೆಯನ್ನು 108 ರಿಂದ 27ಕ್ಕೆ ಇಳಿಸುವುದು. ಕನಿಷ್ಠ ವೇತನವನ್ನು ಮಾಸಿಕ ರೂ. 65ಕ್ಕೆ ನಿಗದಿಪಡಿಸುವುದು. ಕೇಂದ್ರ ಸರ್ಕಾರಿ ನೌಕರರಿಗೆ ಅನ್ವಯಿಸುವ ದರಗಳಂತೆ ರಾಜ್ಯ ಸರ್ಕಾರಿ ನೌಕರರಿಗೂ ತುಟ್ಟಿ ಭತ್ಯೆ ದರಗಳನ್ನು ಅನ್ವಯಿಸುವುದು ಆಗಿತ್ತು.

ಎರಡನೇ ರಾಜ್ಯ ವೇತನ ಆಯೋಗ 1974. ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ. ನಾರಾಯಣ ಪೈ ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಸರ್ಕಾರವು ಎರಡನೇ ರಾಜ್ಯ ವೇತನ ಆಯೋಗವನ್ನು ದಿನಾಂಕ 13.08.1974 ರಂದು ರಚಿಸಿತು. ಆಯೋಗವು ದಿನಾಂಕ 08.03.197 ರಂದು ವರದಿ ಸಲ್ಲಿಸಿತು ಹಾಗೂ ಶಿಫಾರಸುಗಳನ್ನು ದಿನಾಂಕ 01.01.1977 ರಿಂದ ಜಾರಿಗೊಳಿಸಲಾಯಿತು. (ಅಧಿಕಾರಿ ವೇತನ ಸಮಿತಿಯಿಂದ ಆನಂತರದಲ್ಲಿ ಮಾಡಲಾದ ಕೆಲವು ಸಲಹೆಗಳ ಮಾರ್ಪಾಡುಗಳೊಂದಿಗೆ).

ಆಯೋಗದ ಪ್ರಮುಖ ಶಿಫಾರಸುಗಳು. ವೇತನ ಶ್ರೇಣಿಗಳ ಸಂಖ್ಯೆಯನ್ನು 27 ರಿಂದ 15ಕ್ಕೆ ಇಳಿಸುವುದು. ಕನಿಷ್ಠ ವೇತನವನ್ನು ರೂ. 250ಕ್ಕೆ ಮತ್ತು ಗರಿಷ್ಠ ವೇತನವನ್ನು ರೂ. 2,750ಕ್ಕೆ ನಿಗದಿಪಡಿಸುವುದು. ಸರ್ಕಾರದಲ್ಲಿನ ಎಲ್ಲಾ ಹುದ್ದೆಗಳನ್ನು ಎಂಟು ಪ್ರವರ್ಗಗಳಾಗಿ ವರ್ಗೀಕರಿಸುವುದು. ಪ್ರತಿ ವರ್ಗಕ್ಕೆ ಪ್ರಾರಂಭಿಕ ಹಂತದಲ್ಲಿ ಏಕರೂಪದ ವೇತನ ರಚನೆ. ವೇತನ ಶ್ರೇಣಿಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸುವುದು (ಮೂಲವೇತನ ಮತ್ತು ಸಾಮಾನ್ಯ

ಉದ್ದೇಶದ ವೇತನ).

ಸಚಿವ ಸಂಪುಟ ಉಪ-ಸಮಿತಿ 1981: ವೇತನ ಪರಿಷ್ಕರಣೆ ಕುರಿತು ಸರ್ಕಾರಿ ನೌಕರರಿಂದ ಸ್ವೀಕರಿಸಲಾದ ಮನವಿಗಳನ್ನು ಪರಿಶೀಲಿಸಲು, ಅಂದಿನ ಹಣಕಾಸು ಸಚಿವರಾದ ಎಂ. ವೀರಪ್ಪ ಮೊಯ್ಲಿ ಅಧ್ಯಕ್ಷತೆಯಲ್ಲಿ ಕರ್ನಾಟಕ ಸರ್ಕಾರವು ಸಚಿವ ಸಂಪುಟ ಉಪ-ಸಮಿತಿಯನ್ನು ದಿನಾಂಕ 31.03.1981ರಂದು ರಚಿಸಿತು. ಸರ್ಕಾರವು ಸಮಿತಿಯ ಶಿಫಾರಸುಗಳನ್ನು ಅಂಗೀಕರಿಸಿ. ಅವುಗಳನ್ನು ದಿನಾಂಕ 01.01.1982ರಿಂದ ಅನ್ವಯವಾಗುವಂತೆ ಜಾರಿಗೊಳಿಸಿತು.

ಉಪ-ಸಮಿತಿಯ ಪ್ರಮುಖ ಶಿಫಾರಸುಗಳು. ಕನಿಷ್ಟ ವೇತನವನ್ನು ರೂ. 390 ಮತ್ತು ಗರಿಷ್ಠ ವೇತನವನ್ನು ರೂ. 3,200 ಗಳಿಗೆ ಪರಿಷ್ಕರಿಸುವುದು. ಅಖಿಲ ಭಾರತ ಸರಾಸರಿ ಗ್ರಾಹಕ ಬೆಲೆ ಸೂಚ್ಯಂಕ (ಎಐಎಸಿಪಿಐ) 400 ರಂತೆ ಮೂಲ ವೇತನದ ಮೇಲೆ ಅರ್ಹವಾದ ತುಟ್ಟಿ ಭತ್ಯೆ. ರೂ.20 ರಿಂದ ರೂ.50 ಗಳವರೆಗೆ ವೇತನ ಹೆಚ್ಚಿಸುವುದು. ಕೆಳ ಹಂತದ ರಾಜ್ಯ ಸರ್ಕಾರಿ ನೌಕರರ ವೇತನವನ್ನು ಕೇಂದ್ರ ಸರ್ಕಾರಿ ನೌಕರರ ವೇತನಕ್ಕೆ ಸಮನಾಗಿಸುವುದು.

ಮೂರನೇ ರಾಜ್ಯ ವೇತನ ಆಯೋಗ 1986: ಮೂರನೇ ರಾಜ್ಯ ವೇತನ ಆಯೋಗವನ್ನು ನ್ಯಾಯಮೂರ್ತಿ ಬಿ. ವೆಂಕಟಸ್ವಾಮಿ ಅಧ್ಯಕ್ಷತೆಯಲ್ಲಿ ದಿನಾಂಕ 23.01.1986 ರಲ್ಲಿ ರಚಿಸಲಾಯಿತು. ಆಯೋಗವು ತನ್ನ ವರದಿಯನ್ನು ಡಿಸೆಂಬರ್ 1986 ರಲ್ಲಿ ಸಲ್ಲಿಸಿತು. ಆಯೋಗದ ವರದಿಯಲ್ಲಿನ ಶಿಫಾರಸುಗಳನ್ನು ದಿನಾಂಕ 01.07.1986 ರಿಂದ ಅನ್ವಯವಾಗುವಂತೆ ಜಾರಿಗೊಳಿಸಲಾಯಿತು.

ಈ ಆಯೋಗದ ಪ್ರಮುಖ ಶಿಫಾರಸುಗಳು. ವೇತನ ಶ್ರೇಣಿಗಳ ಸಂಖ್ಯೆಯನ್ನು 21ಕ್ಕೆ ಹೆಚ್ಚಿಸುವುದು. ತುಟ್ಟಿ ಭತ್ಯೆಯನ್ನು ಮೂಲ ವೇತನದೊಂದಿಗೆ ವಿಲೀನಗೊಳಿಸುವುದು, ಕನಿಷ್ಠ ವೇತನವನ್ನು ರೂ. 750ಕ್ಕೆ ಮತ್ತು ಗರಿಷ್ಟ ವೇತನವನ್ನು ರೂ. 6,300 ಗಳಿಗೆ ಪರಿಷ್ಕರಿಸಲಾಯಿತು. ವೇತನವನ್ನು ರೂ. 75 ರಿಂದ ರೂ.350 ಗಳವರೆಗೆ ಹೆಚ್ಚಿಸುವುದು. ವೇತನ ಪರಿಷ್ಕರಣೆಯಿಂದ, ಆರ್ಥಿಕ ವರ್ಷ 1986ರ ಉಳಿದ ಅವಧಿಗೆ ಸುಮಾರು ರೂ.329ಕೋಟೆಗಳ ಹಚ್ಚುವರಿ ವೆಚ್ಚವು ಉಂಟಾಯಿತು.

ಸರಕಾರಕ್ಕೆ ತೆರಿಗೆ ಕಟ್ಟಬೇಕಿಲ್ಲದಿದ್ದರೂ ನೀವು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿ: ಯಾಕೆ ಗೊತ್ತಾ..? ಇಲ್ಲಿದೆ ವಿವರ..

2024-25ರ ಹಣಕಾಸು ವರ್ಷ (FY) ಗಾಗಿ ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಸುವ ಗಡುವು (ವಿಸ್ತರಣೆ ನಂತರ ಸೆಪ್ಟೆಂಬರ್ 15) ಸಮೀಪಿಸುತ್ತಿದ್ದಂತೆ, ತೆರಿಗೆ ವಿಧಿಸಬಹುದಾ...