ಹೈದರಾಬಾದ್ ಕರ್ನಾಟಕ ಪ್ರದೇಶ

ಹೈದರಾಬಾದ್ ಕರ್ನಾಟಕ ಪ್ರದೇಶ
Hyderabad Karnataka

ಮಂಗಳವಾರ, ಅಕ್ಟೋಬರ್ 21, 2025

ಎಲ್ಲಾ ವರ್ಗಗಳ ವಿದ್ಯಾರ್ಥಿಗಳಿಗೂ ಸಿಗಲಿದೆ ಭರ್ಜರಿ ವಿದ್ಯಾರ್ಥಿ ವೇತನ, ಇಲ್ಲಿದೆ ಕಂಪ್ಲೀಟ್ ಮಾಹಿತಿ

ಈ ವಿದ್ಯಾರ್ಥಿ ವೇತನ ಪಡೆಯಲು ಯಾವ ರೀತಿ ಅರ್ಜಿ ಹಾಕಬೇಕು? ಇದಕ್ಕೆ ಏನೆಲ್ಲಾ ನಿಯಮ ಇದೆ? ಇಲ್ಲಿದೆ ಸಂಪೂರ್ಣ ಮಾಹಿತಿ.

7 ಯೋಜನೆ ಅಡಿಯಲ್ಲಿ ವಿದ್ಯಾರ್ಥಿ ವೇತನ
ಸದ್ಯ ಎಸ್.ಬಿ.ಐ ಫೌಂಡೇಶನ್ ತರಗತಿವಾರು ಒಟ್ಟು 7 ಯೋಜನೆ ಅಡಿಯಲ್ಲಿ ವಿವಿಧ ವಿದ್ಯಾರ್ಥಿವೇತನವನ್ನ ನೀಡುತ್ತಿದ್ದು, ಅವುಗಳಿಗೆ ಸುಲಭವಾಗಿ ಅರ್ಜಿ ಹಾಕಬಹುದಾಗಿದೆ. ಇನ್ನು ಈ ಎಲ್ಲಾ ಯೋಜನೆ ಅಡಿಯಲ್ಲಿ ಅರ್ಜಿ ಹಾಕಲು ನವೆಂಬರ್‌ 15 ಕೊನೆಯ ದಿನವಾಗಿದೆ.

ಯಾವೆಲ್ಲಾ ಯೋಜನೆಯಡಿ ಅರ್ಜಿ ಹಾಕಬಹುದು?

ವೈದ್ಯಕೀಯ ವಿದ್ಯಾರ್ಥಿಗಳಿಗೆ SBI ಪ್ಲಾಟಿನಂ ಜುಬಿಲಿ ಆಶಾ ವಿದ್ಯಾರ್ಥಿವೇತನ.

ಸಾಗರೋತ್ತರ ವಿದ್ಯಾರ್ಥಿಗಳಿಗೆ SBI ಪ್ಲಾಟಿನಂ ಜುಬಿಲಿ ಆಶಾ ವಿದ್ಯಾರ್ಥಿವೇತನ.

ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಎಸ್‌ಬಿಐ ಪ್ಲಾಟಿನಂ ಜುಬಿಲಿ ಆಶಾ ವಿದ್ಯಾರ್ಥಿವೇತನ.

ವಿದ್ಯಾರ್ಥಿಗಳಿಗೆ SBI ಪ್ಲಾಟಿನಂ ಜುಬಿಲಿ ಆಶಾ ವಿದ್ಯಾರ್ಥಿವೇತನ.

ಶಾಲಾ ವಿದ್ಯಾರ್ಥಿಗಳಿಗೆ SBI ಪ್ಲಾಟಿನಂ ಜುಬಿಲಿ ಆಶಾ ವಿದ್ಯಾರ್ಥಿವೇತನ 2025-26.

ಐಐಎಂ ವಿದ್ಯಾರ್ಥಿಗಳಿಗೆ ಎಸ್‌ಬಿಐ ಪ್ಲಾಟಿನಂ ಜುಬಿಲಿ ಆಶಾ ವಿದ್ಯಾರ್ಥಿವೇತನ.

ಅರ್ಜಿ ಸಲ್ಲಿಸಲು ಅರ್ಹತೆಗಳೇನು?

ಇನ್ನು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಹಾಕಲು ಕೆಲವೊಂದು ಅರ್ಹತಾ ಮಾನದಂಡಗಳನ್ನ ನಿಗದಿ ಮಾಡಲಾಗಿದೆ. ಅವುಗಳ ಆಧಾರದಲ್ಲಿ ಮಾತ್ರ ಅರ್ಜಿ ಹಾಕಲು ಅವಕಾಶ ನೀಡಲಾಗಿದೆ.

ಮೊದಲು ಭಾರತೀಯ ಪ್ರಜೆಯಾಗಿರಬೇಕು, ಬೇರೆ ದೇಶದ ಪ್ರಜೆಗಳು ಅರ್ಜಿ ಹಾಕಲು ಬರುವುದಿಲ್.‌ ಮುಖ್ಯವಾಗಿ
2025-26 ನೇ ಸಾಲಿನಲ್ಲಿ ವಿಧ್ಯಾಭ್ಯಾಸಕ್ಕೆ ಪ್ರವೇಶ ಪಡೆದಿರುವವರು ಮಾತ್ರ ಅರ್ಜಿ ಹಾಕಬಹುದಾಗಿದೆ.
ಅರ್ಜಿ ಹಾಕುವ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯವು ₹3.0 ಲಕ್ಷದ ಒಳಗೆ ಇರಬೇಕು ಎನ್ನುವ ನಿಯಮ ಇದ್ದು, ಅದರ ಜೊತೆಗೆ ಅರ್ಜಿ ಹಾಕುವವರು ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ 75% ಅಂಕಗಳನ್ನು ಪಡೆದಿರಬೇಕು ಎಂದು ರೂಲ್ಸ್‌ ಮಾಡಲಾಗಿದೆ.

ಎಷ್ಟು ಹಣವನ್ನ ವಿದ್ಯಾರ್ಥಿ ವೇತನವನ್ನ ನೀಡಲಾಗುತ್ತೆ?

ಶಾಲಾ ವಿದ್ಯಾರ್ಥಿಗಳಿಗೆ - 15,000 ರೂಪಾಯಿ

ಪದವಿ ಪೂರ್ವ ವಿದ್ಯಾರ್ಥಿಗಳಿಗೆ - 75,000 ರೂಪಾಯಿ

ಐಐಟಿ ವಿದ್ಯಾರ್ಥಿಗಳಿಗೆ - 2,00,000 ರೂಪಾಯಿ

ಐಐಎಂ ವಿದ್ಯಾರ್ಥಿಗಳಿಗೆ - 5,00,000 ರೂಪಾಯಿ

ವೈದ್ಯಕೀಯ ವಿದ್ಯಾರ್ಥಿಗಳಿಗೆ - 4,50,000 ರೂಪಾಯಿ

ಸಾಗರೋತ್ತರ ವಿದ್ಯಾರ್ಥಿಗಳಿಗೆ - 20,00,000 ರೂಪಾಯಿ

ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ - 6,00,000 ರೂಪಾಯಿ

ಅರ್ಜಿ ಹಾಕುವುದು ಹೇಗೆ?

ಮೊದಲು https://www.buddy4study.com/page/sbi-asha-scholarship-program ಲಿಂಕ್‌ ಕ್ಲಿಕ್‌ ಮಾಡಿ. ಅದರಲ್ಲಿ ಅಪ್ಲೈ ನೌ ಎಂದು ಇರುತ್ತದೆ. ಅದಕ್ಕೆ ಕ್ಲಿಕ್‌ ಮಾಡಿ. ಅದರಲ್ಲಿ ಪೊಂದು ಪೇಜ್‌ ಓಪನ್‌ ಆಗುತ್ತದೆ. ಅದರಲ್ಲಿ ಯೋಜನೆವಾರು ಅರ್ಜಿ ಸಲ್ಲಿಸಲು ಲಿಂಕ್‌ ಕಾಣಿಸುತ್ತದೆ. ಅದರ ಅಡಿಯಲ್ಲಿ ನಿಮ್ಮದೇ ಐಡಿ ಕ್ರಿಯೇಟ್‌ ಮಾಡಿ ಲಾಗಿನ್‌ ಆಗಬೇಕು. ಲಾಗಿನ್‌ ಆದ ನಂತರ ಎಲ್ಲಾ ವಿವರಗಳನ್ನ ಹಾಕಿ, ಸಬ್‌ಮಿಟ್‌ ಮಾಡಿ.

ಕಾಮೆಂಟ್‌ಗಳಿಲ್ಲ:

ರಾಜ್ಯ `ಸರ್ಕಾರಿ ನೌಕರರೇ' ಗಮನಿಸಿ : `ಆರೋಗ್ಯ ಸಂಜೀವಿನಿ ಯೋಜನೆ' ನೋಂದಣಿ ಕುರಿತು ಸರ್ಕಾರದಿಂದ ಮಹತ್ವದ ಆದೇಶ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಸದಸ್ಯರಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸೆಗಳನ್ನು ಒದಗಿಸಲು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ...