ಹೈದರಾಬಾದ್ ಕರ್ನಾಟಕ ಪ್ರದೇಶ

ಹೈದರಾಬಾದ್ ಕರ್ನಾಟಕ ಪ್ರದೇಶ
Hyderabad Karnataka

ಗುರುವಾರ, ಅಕ್ಟೋಬರ್ 2, 2025

ರಾಜ್ಯದಲ್ಲಿ ಇಂದಿನಿಂದ `ಜ್ಯೋತಿ ಸಂಜೀವಿನಿ ಯೋಜನೆ' ಸ್ಥಗಿತ : ಸರ್ಕಾರದಿಂದ ಮಹತ್ವದ ಆದೇಶ

ಅದರಂತೆ ನೊಂದಾಯಿತ ಆಸ್ಪತ್ರೆಗಳಿಗೆ ಈ ಕೆಳಕಂಡಂತೆ ಕ್ರಮವಹಿಸಲು ತಿಳಿಸಲಾಗಿದೆ.

1. ಆಸ್ಪತ್ರೆಗಳು ಈಗಾಗಲೇ ಒಡಂಬಡಿಕೆ (MoU) ಸಲ್ಲಿಸಿರುವ ಹಾಗೂ ಅನುಮೋದನೆಗೊಂಡಿರುವ ಆಸ್ಪತ್ರೆಗಳಲ್ಲಿ KASS ಫಲಾನುಭವಿಗಳಿಗೆ ನಗದು ರಹಿತ ಚಿಕಿತ್ಸೆಯನ್ನು ನೀಡುವುದು.

2. KASS ಯೋಜನೆಯಡಿಯಲ್ಲಿ ನೊಂದಾಯಿಸಲ್ಪಟ್ಟ ಫಲಾನುಭವಿಗಳಿಗೆ ಮಾತ್ರ ತುರ್ತು ಚಿಕಿತ್ಸೆಯ ಸಂದರ್ಭದಲ್ಲಿ ರೋಗಿಗೆ ಚಿಕಿತ್ಸೆಯನ್ನು ನೀಡಿ KASS ಯೋಜನೆಯಡಿಯಲ್ಲಿ ನೊಂದಾವಣೆ ಮಾಡಿಕೊಳ್ಳಲು 48 ಗಂಟೆಗಳ ಕಾಲಾವಕಾಶ ಕಲ್ಪಿಸಿಕೊಡುವುದು. ಒಂದು ವೇಳೆ 48 ಗಂಟೆಗಳಲ್ಲಿ ನೊಂದಣಿ ದಾಖಲಾತಿಗಳನ್ನು ಸಲ್ಲಿಸದಿದ್ದಲ್ಲಿ ಯೋಜನೆಯಡಿಯಲ್ಲಿ ಪರಿಗಣಿಸದೇ ಇರುವುದು.

3. ಸು.ಆ.ಸು.ಟ ತಂತ್ರಾಂಶ ಹಾಗೂ Workflow ಕರ್ನಾಟಕ ಆರೋಗ್ಯ ಸಂಜೀವಿನಿ तं . (https://sast.karnataka.gov.in)

4. ದಿನಾಂಕ: 01.10.2025 ರಿಂದ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ನಗದು ರಹಿತ ಚಿಕಿತ್ಸೆಗೆ ಸಂಬಂಧಿಸಿದಂತೆ Pre-authorization ಸಲ್ಲಿಸಲು ಅನುಮತಿಸಲಾಗಿದೆ. ಅದರಂತೆ ಚಿಕಿತ್ಸೆ ಪಡೆದಂತಹ (Discharge) ಕ್ರೈಮ್ ಗಳನ್ನು 15 ದಿನಗಳೊಳಗಾಗಿ ನಿಗದಿತ ನಮೂನೆಯಲ್ಲಿ ಸಲ್ಲಿಸುವುದು.

5. Pre-authorization ಸಲ್ಲಿಕೆಯನ್ನು ಫಲಾನುಭವಿಯು ದಾಖಲಾದ 24 ಗಂಟೆಗಳೊಳಗಾಗಿ ಸಲ್ಲಿಸುವುದು ಹಾಗೂ ಯಾವುದೇ ಹೆಚ್ಚಿನ ಮಾಹಿತಿ ನಿರೀಕ್ಷಿದಲ್ಲಿ (NMI) 48 ಗಂಟೆಗಳೊಳಗಾಗಿ ನೀಡುವುದು.

6. KASS ಫಲಾನುಭವಿಗಳಿಗೆ ಯಾವುದೇ ನಿರ್ದೇಶನ ಪತ್ರವಿಲ್ಲದೇ (Referral) ಹಾಗೂ ಪ್ಯಾಕೇಜ್ ದರದಲ್ಲಿ ಯಾವುದೇ ಹೊರಮಿತಿ ಇಲ್ಲದೇ ಚಿಕಿತ್ಸೆಯನ್ನು ನೀಡಲು ಅನುಮತಿಸಲಾಗಿದೆ.

7. ಯೋಜನೆಯಡಿಯಲ್ಲಿ ಸುಮಾರು 2000 ಚಿಕಿತ್ಸಾ ವಿಧಾನಗಳನ್ನು ನಿಗದಿಪಡಿಸಿದ್ದು ಚಿಕಿತ್ಸಾ ವಿಧಾನಗಳ ದರಗಳ ಜೊತೆಯಲ್ಲಿ ನಿಗದಿಪಡಿಸಿದ Implant ದರಗಳನ್ನು ಮರುಪಾವತಿಸಲಾಗುವುದು.

8. ಪ್ಯಾಕೇಜ್‌ನಲ್ಲಿ ಒಳಪಡದ Un-specified surgical procedure ಗಳನ್ನು ಪೂರ್ವಾನುಮತಿಯೊಂದಿಗೆ ಚಿಕಿತ್ಸೆ ನೀಡಲು ಅನುಮತಿಸಲಾಗಿದೆ. Un-specified ಪ್ಯಾಕೇಜ್ ದರಗಳನ್ನು ವೈದ್ಯಕೀಯ ಪರಿಣಿತರ ತಂಡ ನಿರ್ಧರಿಸಲಾಗುವುದು.

9. ಫಲಾನುಭವಿಗಳಿಗೆ ಚಿಕಿತ್ಸಾ ದರಗಳನ್ನು ನೌಕರರ ವರ್ಗದ ಅನುಸಾರವಾಗಿ ನಿಗದಿಪಡಿಸಲಾಗಿದ್ದು ಅದರಂತೆ ಅನುಸರಿಸುವುದು.

10. NABH, JCI ನಿಂದ ಮಾನ್ಯತೆ ಪಡೆದ ಆಸ್ಪತ್ರೆಗಳಿಗೆ ಶೇ.15 % ರಷ್ಟು ಹೆಚ್ಚಿನ ಪ್ರೋತ್ಸಾಹಧನ ನೀಡಲಾಗುವುದು.

11. ಯೋಜನೆಗೆ ಒಳಪಡದ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಸದಸ್ಯರಿಗೆ ವೈದ್ಯಕೀಯ ಹಾಜರಾತಿ ನಿಯಮಗಳನ್ವಯ ವೈದ್ಯಕೀಯ ವೆಚ್ಚದ ಮರುಪಾವತಿ ನಿಯಮ ಆರು ತಿಂಗಳು ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ನಿಯಮಾನುಸಾರ ಚಾಲ್ತಿಯಲ್ಲಿರುತ್ತದೆ.

12. ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೆ ಬಂದ ದಿನಾಂಕ: ಅಕ್ಟೋಬರ್ 01,2025 ರಿಂದ ಪ್ರಸ್ತುತ ಜಾರಿಯಲ್ಲಿರುವ 'ಜ್ಯೋತಿ ಸಂಜೀವಿನಿ" ಯೋಜನೆಯು ಸ್ಥಗಿತಗೊಳಿಸಲಾಗುವುದು. ಅದರಂತೆ ಜ್ಯೋತಿ ಸಂಜೀವಿನಿ ಯೋಜನೆಯಡಿಯಲ್ಲಿ ದಾಖಲಾದ. ಫಲಾನುಭವಿಗಳಿಗೆ ಚಿಕಿತ್ಸೆಯನ್ನು ಪೂರ್ಣಗೊಳಿಸುವುದು ಹಾಗೂ ಯಾವುದೇ ಹೊಸ ದಾಖಲೆಗಳನ್ನು ನೊಂದಾಯಿಸಿಕೊಳ್ಳಬಾರದು.


ಕಾಮೆಂಟ್‌ಗಳಿಲ್ಲ:

ರಾಜ್ಯ `ಸರ್ಕಾರಿ ನೌಕರರೇ' ಗಮನಿಸಿ : `ಆರೋಗ್ಯ ಸಂಜೀವಿನಿ ಯೋಜನೆ' ನೋಂದಣಿ ಕುರಿತು ಸರ್ಕಾರದಿಂದ ಮಹತ್ವದ ಆದೇಶ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಸದಸ್ಯರಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸೆಗಳನ್ನು ಒದಗಿಸಲು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ...