ಹೈದರಾಬಾದ್ ಕರ್ನಾಟಕ ಪ್ರದೇಶ

ಹೈದರಾಬಾದ್ ಕರ್ನಾಟಕ ಪ್ರದೇಶ
Hyderabad Karnataka

ಮಂಗಳವಾರ, ಅಕ್ಟೋಬರ್ 7, 2025

ರಾಜ್ಯದ 'ಪೊಲೀಸ್ ಸಿಬ್ಬಂದಿ'ಗಳಿಗೆ ಗುಡ್ ನ್ಯೂಸ್: 'ವಾರ್ಷಿಕ ಆರೋಗ್ಯ ತಪಾಸಣೆ ವೆಚ್ಚ' ಹೆಚ್ಚಿಸಿ ಸರ್ಕಾರ ಆದೇಶ

ರಾಜ್ಯದ 'ಪೊಲೀಸ್ ಸಿಬ್ಬಂದಿ'ಗಳಿಗೆ ಗುಡ್ ನ್ಯೂಸ್: 'ವಾರ್ಷಿಕ ಆರೋಗ್ಯ ತಪಾಸಣೆ ವೆಚ್ಚ' ಹೆಚ್ಚಿಸಿ ಸರ್ಕಾರ ಆದೇಶ ಈ ಕುರಿತು ಡೈರೆಕ್ಟರ್ ಜನರಲ್ ಮತ್ತು ಇನ್ಸ್ ಪೆಕ್ಟರ್ ಜರಲ್ ಆಫ್ ಪೊಲೀಸ್ ಅವರ ಕಚೇರಿಯಿಂದ ಸುತ್ತೋಲೆ ಹೊರಡಿಸಲಾಗಿದ್ದು, ಪ್ರತಿಯೊಬ್ಬ ಪೊಲೀಸ್ ಸಿಬ್ಬಂದಿಗೆ ವಾರ್ಷಿಕ ಆರೋಗ್ಯ ತಪಾಸಣೆಗಾಗಿ ವೈದ್ಯಕೀಯ ವೆಚ್ಚ ರೂ.1000/- ಗಳಿಂದ ರೂ. 1500/- (ಒಂದು ಸಾವಿರದ ಐದು ನೂರು ರೂಪಾಯಿಗಳು ಮಾತ್ರ) ಗಳಿಗೆ ಹೆಚ್ಚಿಸಿ ಆದೇಶಿಸಲಾಗಿದ್ದು, ಸದರಿ ಸರ್ಕಾರದ ಆದೇಶವನ್ನು ಸೂಕ್ತ ಕ್ರಮಕ್ಕಾಗಿ ಈಗಾಗಲೇ ಉಲ್ಲೇಖಿತ (4)ರ ಸುತ್ತೋಲೆಯಲ್ಲಿ ತಿಳಿಸಲಾಗಿರುತ್ತದೆ. ಆದರೆ ಇದಕ್ಕೆ ತಗಲುವ ವೆಚ್ಚವನ್ನು ಲೆಕ್ಕ ಶೀರ್ಷಿಕೆ 2055-00-001-0-01-021 (ವೈದ್ಯಕೀಯ ವೆಚ್ಚ ಮರುಪಾವತಿ)ಗಳ ಅಡಿಯಲ್ಲಿ ಭರಿಸತಕ್ಕದ್ದು ಎಂದು ನಮೂದಿಸಲಾಗಿರುತ್ತದೆ. ಆದರೆ ಸದರಿ ಲೆಕ್ಕ ಶೀರ್ಷಿಕೆ Direction & Administration ರಡಿಯಲ್ಲಿರುವ ಘಟಕಗಳಿಗೆ ಮಾತ್ರ ಸಂಬಂಧಿಸಿದ್ದು, ಇತರ ಘಟಕಗಳು ಒಳಗೊಂಡಿರುವುದಿಲ್ಲ.

ಆದ್ದರಿಂದ ಸರ್ಕಾರವು ಉಲ್ಲೇಖಿತ (5)ರ ನಡವಳಿ ಆದೇಶದಲ್ಲಿ ಪೊಲೀಸ್ ಸಿಬ್ಬಂದಿಗಳ ವಾರ್ಷಿಕ ಆರೋಗ್ಯ ತಪಾಸಣೆ ವೆಚ್ಚವನ್ನು ಮುಖ್ಯ ಲೆಕ್ಕ ಶೀರ್ಷಿಕೆ 2055ರ ಉಪಶೀರ್ಷಿಕೆ 021 ವೈದ್ಯಕೀಯ ವೆಚ್ಚ ಮರುಪಾವತಿಯಡಿಯಲ್ಲಿ ಭರಿಸತಕ್ಕದ್ದು, ಎಂದು ಆದೇಶಿಸಲಾಗಿರುತ್ತದೆ. ಆದೇಶದ ಪ್ರತಿಯನ್ನು ಈ ಪತ್ರದೊಂದಿಗೆ ಲಗತ್ತಿಸಿ ಮುಂದಿನ ಸೂಕ್ತ ಕ್ರಮಕ್ಕಾಗಿ ಕಳುಹಿಸಲಾಗಿದೆ. ಘಟಕಾಧಿಕಾರಿಗಳು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಈ ಕೆಳಕಂಡಂತೆ ಸೂಚನೆಗಳನ್ನು ನೀಡಲಾಗಿದೆ.

1. ವಾರ್ಷಿಕ ಆರೋಗ್ಯ ತಪಾಸಣೆಯಲ್ಲಿ ಪೊಲೀಸ್‌ ಸಿಬ್ಬಂದಿಗಳು ಸದರಿ ವೆಚ್ಚದಲ್ಲಿ ಈ ಕೆಳಕಂಡ ಪರೀಕ್ಷೆಗಳನ್ನು ಮಾಡಿಸತಕ್ಕದ್ದು.

1) Blood Pressure (BP)

2) Blood & Urine Sugar Test

3) Kidney Function Test

4) Ultrasound Test

5) ECG

6) Cholestrol Test

7) Liver Function Test

8) Optholmic Investigation 9) CBC

10) Urine Analysis

11) Chest X-ray

12) Echo Cardiogram

13) TMT - Tread Mill Test

14) Physician consultation

2. ಇದಕ್ಕೆ ತಗಲುವ ವೆಚ್ಚವನ್ನು ಲೆಕ್ಕ ಶೀರ್ಷಿಕೆ 2055ರ ಉಪ ಶೀರ್ಷಿಕೆ 021 (ವೈದ್ಯಕೀಯ ವೆಚ್ಚ ಮರುಪಾವತಿ) ಗಳ ಅಡಿಯಲ್ಲಿ ಭರಿಸತಕ್ಕದ್ದು.

3. ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮ 1963ರ ಪ್ರಕಾರ ಸರ್ಕಾರಿ ಮಾನ್ಯತೆ ಹೊಂದಿರುವ ಆಸ್ಪತ್ರೆಗಳಲ್ಲಿ ಅಥವಾ ಎಬಿವೈ ಅಡಿಯಲ್ಲಿ ಗುರುತಿಸಲಾದ ಆಸ್ಪತ್ರೆಗಳಲ್ಲಿ ಮಾತ್ರ ತಪಾಸಣೆ ಮಾಡಿಸುವುದು, ಯಾವುದೇ ಕಾರಣಕ್ಕೂ ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮ 1963ರ ಪ್ರಕಾರ ಸರ್ಕಾರಿ ಮಾನ್ಯತೆ ಹೊಂದಿರದ ಆಸ್ಪತ್ರೆಗಳಲ್ಲಿ ಅಥವಾ ಎಬಿವೈ ಯೋಜನೆಯಡಿ ಗುರುತಿಸದೇ ಇರುವ ಆಸ್ಪತ್ರೆಗಳಲ್ಲಿ ತಪಾಸಣೆ ಮಾಡಿಸತಕ್ಕದ್ದಲ್ಲ.

4. ಘಟಕಾಧಿಕಾರಿಗಳು ಈ ಮೊತ್ತವನ್ನು ಡ್ರಾ ಮಾಡಿ ನೇರವಾಗಿ ವೈದ್ಯಕೀಯ ಆಸ್ಪತ್ರೆಗಳಿಗೆ ನೀಡುವುದು. ಯಾವುದೇ ಕಾರಣಕ್ಕು ಹಣವನ್ನು ಡ್ರಾ ಮಾಡಿ ನಗದಾಗಿ ಸಿಬ್ಬಂದಿಗಳಿಗೆ ನೀಡುವಂತಿಲ್ಲ.

5. ವಾರ್ಷಿಕ ರಹಸ್ಯ ವರದಿಯನ್ನು ಬರೆಯುವಾಗ ವೈದ್ಯಕೀಯ ತಪಾಸಣೆ ವರದಿಯನ್ನು ಗಮನದಲ್ಲಿಟ್ಟುಕೊಂಡು ಆರೋಗ್ಯ ಕಾಲಂ ಅಡಿಯಲ್ಲಿ ತಪಾಸಣೆ ಮಾಡಿಸಿದ ಬಗ್ಗೆ ದಾಖಲಿಸುವುದು.

ಘಟಕಾಧಿಕಾರಿಗಳು ವೈದ್ಯಕೀಯ ತಪಾಸಣೆಯನ್ನು ಮಾಡಿಸಲು ಕ್ರಮ ಕೈಗೊಳ್ಳುವುದು ಹಾಗೂ ಈ ಸರ್ಕಾರಿ ಆದೇಶದ ಬಗ್ಗೆ ಎಲ್ಲಾ ಸಿಬ್ಬಂದಿಗಳಿಗೆ ಮಾಹಿತಿ ನೀಡುವುದು.

1000/- ಗಳಿಂದ ರೂ. 1500/- (ಒಂದು ಸಾವಿರದ ಐದು ನೂರು ರೂಪಾಯಿಗಳು ಮಾತ್ರ) ಗಳಿಗೆ ಹೆಚ್ಚಿಸಿ ಆದೇಶಿಸಲಾಗಿದ್ದು, ಸದರಿ ಸರ್ಕಾರದ ಆದೇಶವನ್ನು ಸೂಕ್ತ ಕ್ರಮಕ್ಕಾಗಿ ಈಗಾಗಲೇ ಉಲ್ಲೇಖಿತ (4)ರ ಸುತ್ತೋಲೆಯಲ್ಲಿ ತಿಳಿಸಲಾಗಿರುತ್ತದೆ. ಆದರೆ ಇದಕ್ಕೆ ತಗಲುವ ವೆಚ್ಚವನ್ನು ಲೆಕ್ಕ ಶೀರ್ಷಿಕೆ 2055-00-001-0-01-021 (ವೈದ್ಯಕೀಯ ವೆಚ್ಚ ಮರುಪಾವತಿ)ಗಳ ಅಡಿಯಲ್ಲಿ ಭರಿಸತಕ್ಕದ್ದು ಎಂದು ನಮೂದಿಸಲಾಗಿರುತ್ತದೆ. ಆದರೆ ಸದರಿ ಲೆಕ್ಕ ಶೀರ್ಷಿಕೆ Direction & Administration ರಡಿಯಲ್ಲಿರುವ ಘಟಕಗಳಿಗೆ ಮಾತ್ರ ಸಂಬಂಧಿಸಿದ್ದು, ಇತರ ಘಟಕಗಳು ಒಳಗೊಂಡಿರುವುದಿಲ್ಲ.

ಆದ್ದರಿಂದ ಸರ್ಕಾರವು ಉಲ್ಲೇಖಿತ (5)ರ ನಡವಳಿ ಆದೇಶದಲ್ಲಿ ಪೊಲೀಸ್ ಸಿಬ್ಬಂದಿಗಳ ವಾರ್ಷಿಕ ಆರೋಗ್ಯ ತಪಾಸಣೆ ವೆಚ್ಚವನ್ನು ಮುಖ್ಯ ಲೆಕ್ಕ ಶೀರ್ಷಿಕೆ 2055ರ ಉಪಶೀರ್ಷಿಕೆ 021 ವೈದ್ಯಕೀಯ ವೆಚ್ಚ ಮರುಪಾವತಿಯಡಿಯಲ್ಲಿ ಭರಿಸತಕ್ಕದ್ದು, ಎಂದು ಆದೇಶಿಸಲಾಗಿರುತ್ತದೆ. ಆದೇಶದ ಪ್ರತಿಯನ್ನು ಈ ಪತ್ರದೊಂದಿಗೆ ಲಗತ್ತಿಸಿ ಮುಂದಿನ ಸೂಕ್ತ ಕ್ರಮಕ್ಕಾಗಿ ಕಳುಹಿಸಲಾಗಿದೆ. ಘಟಕಾಧಿಕಾರಿಗಳು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಈ ಕೆಳಕಂಡಂತೆ ಸೂಚನೆಗಳನ್ನು ನೀಡಲಾಗಿದೆ.

1. ವಾರ್ಷಿಕ ಆರೋಗ್ಯ ತಪಾಸಣೆಯಲ್ಲಿ ಪೊಲೀಸ್‌ ಸಿಬ್ಬಂದಿಗಳು ಸದರಿ ವೆಚ್ಚದಲ್ಲಿ ಈ ಕೆಳಕಂಡ ಪರೀಕ್ಷೆಗಳನ್ನು ಮಾಡಿಸತಕ್ಕದ್ದು.
1) Blood Pressure (BP)
2) Blood & Urine Sugar Test
3) Kidney Function Test
4) Ultrasound Test
5) ECG
6) Cholestrol Test
7) Liver Function Test
8) Optholmic Investigation 9) CBC
10) Urine Analysis

11) Chest X-ray
12) Echo Cardiogram
13) TMT - Tread Mill Test
14) Physician consultation

2. ಇದಕ್ಕೆ ತಗಲುವ ವೆಚ್ಚವನ್ನು ಲೆಕ್ಕ ಶೀರ್ಷಿಕೆ 2055ರ ಉಪ ಶೀರ್ಷಿಕೆ 021 (ವೈದ್ಯಕೀಯ ವೆಚ್ಚ ಮರುಪಾವತಿ) ಗಳ ಅಡಿಯಲ್ಲಿ ಭರಿಸತಕ್ಕದ್ದು.

3. ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮ 1963ರ ಪ್ರಕಾರ ಸರ್ಕಾರಿ ಮಾನ್ಯತೆ ಹೊಂದಿರುವ ಆಸ್ಪತ್ರೆಗಳಲ್ಲಿ ಅಥವಾ ಎಬಿವೈ ಅಡಿಯಲ್ಲಿ ಗುರುತಿಸಲಾದ ಆಸ್ಪತ್ರೆಗಳಲ್ಲಿ ಮಾತ್ರ ತಪಾಸಣೆ ಮಾಡಿಸುವುದು, ಯಾವುದೇ ಕಾರಣಕ್ಕೂ ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮ 1963ರ ಪ್ರಕಾರ ಸರ್ಕಾರಿ ಮಾನ್ಯತೆ ಹೊಂದಿರದ ಆಸ್ಪತ್ರೆಗಳಲ್ಲಿ ಅಥವಾ ಎಬಿವೈ ಯೋಜನೆಯಡಿ ಗುರುತಿಸದೇ ಇರುವ ಆಸ್ಪತ್ರೆಗಳಲ್ಲಿ ತಪಾಸಣೆ ಮಾಡಿಸತಕ್ಕದ್ದಲ್ಲ.

4. ಘಟಕಾಧಿಕಾರಿಗಳು ಈ ಮೊತ್ತವನ್ನು ಡ್ರಾ ಮಾಡಿ ನೇರವಾಗಿ ವೈದ್ಯಕೀಯ ಆಸ್ಪತ್ರೆಗಳಿಗೆ ನೀಡುವುದು. ಯಾವುದೇ ಕಾರಣಕ್ಕು ಹಣವನ್ನು ಡ್ರಾ ಮಾಡಿ ನಗದಾಗಿ ಸಿಬ್ಬಂದಿಗಳಿಗೆ ನೀಡುವಂತಿಲ್ಲ.

5. ವಾರ್ಷಿಕ ರಹಸ್ಯ ವರದಿಯನ್ನು ಬರೆಯುವಾಗ ವೈದ್ಯಕೀಯ ತಪಾಸಣೆ ವರದಿಯನ್ನು ಗಮನದಲ್ಲಿಟ್ಟುಕೊಂಡು ಆರೋಗ್ಯ ಕಾಲಂ ಅಡಿಯಲ್ಲಿ ತಪಾಸಣೆ ಮಾಡಿಸಿದ ಬಗ್ಗೆ ದಾಖಲಿಸುವುದು.

ಘಟಕಾಧಿಕಾರಿಗಳು ವೈದ್ಯಕೀಯ ತಪಾಸಣೆಯನ್ನು ಮಾಡಿಸಲು ಕ್ರಮ ಕೈಗೊಳ್ಳುವುದು ಹಾಗೂ ಈ ಸರ್ಕಾರಿ ಆದೇಶದ ಬಗ್ಗೆ ಎಲ್ಲಾ ಸಿಬ್ಬಂದಿಗಳಿಗೆ ಮಾಹಿತಿ ನೀಡುವುದು.

ಕಾಮೆಂಟ್‌ಗಳಿಲ್ಲ:

ರಾಜ್ಯ `ಸರ್ಕಾರಿ ನೌಕರರೇ' ಗಮನಿಸಿ : `ಆರೋಗ್ಯ ಸಂಜೀವಿನಿ ಯೋಜನೆ' ನೋಂದಣಿ ಕುರಿತು ಸರ್ಕಾರದಿಂದ ಮಹತ್ವದ ಆದೇಶ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಸದಸ್ಯರಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸೆಗಳನ್ನು ಒದಗಿಸಲು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ...