ಹೈದರಾಬಾದ್ ಕರ್ನಾಟಕ ಪ್ರದೇಶ

ಹೈದರಾಬಾದ್ ಕರ್ನಾಟಕ ಪ್ರದೇಶ
Hyderabad Karnataka

ಸೋಮವಾರ, ಮಾರ್ಚ್ 24, 2025

Government Employee: ಸರ್ಕಾರಿ ನೌಕರರು ಈ ಖಾತೆ ತೆರೆಯುವುದು ಕಡ್ಡಾಯ

Government Employee: ಸರ್ಕಾರಿ ನೌಕರರು ಈ ಖಾತೆ ತೆರೆಯುವುದು ಕಡ್ಡಾಯ

ರಾಜ್ಯ ಸರ್ಕಾರಿ ನೌಕರರ ಸಾಮಾಜಿಕ ಭದ್ರತೆಯು ಸರ್ಕಾರದ ಪ್ರಮುಖ ವಿಷಯವಾಗಿದ್ದು, ಸರ್ಕಾರ ಈ ಕುರಿತು ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ. ಇದಕ್ಕಾಗಿ ಈಗ ಆರ್ಥಿಕ ಇಲಾಖೆ ಆದೇಶವೊಂದನ್ನು ಹೊರಡಿಸಿದೆ.

ರಾಜ್ಯ ಸರ್ಕಾರದ ಎಲ್ಲಾ ನೌಕರರು/ ಅಧಿಕಾರಿಗಳು ಬ್ಯಾಂಕ್ ಮತ್ತು ಅಂಚೆ ಕಛೇರಿಗಳಲ್ಲಿ 'ಸಂಬಳ ಪ್ಯಾಕೇಜ್ ಖಾತೆ' ಕಡ್ಡಾಯವಾಗಿ ತೆರೆಯಬೇಕು ಎಂದು ಆರ್ಥಿಕ ಇಲಾಖೆ ಆದೇಶವನ್ನು ಹೊರಡಿಸಿದೆ. ಈ ಖಾತೆ ಹೊಂದಿರುವ ಸರ್ಕಾರಿ ನೌಕರ/ ಅಧಿಕಾರಿಗಳಿಗೆ ಬ್ಯಾಂಕುಗಳು ವಿವಿಧ ಸೌಲಭ್ಯವನ್ನು ನೀಡಲಿವೆ ಎಂದು ಆದೇಶ ತಿಳಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಸದನದಲ್ಲಿ ವಿವಿಧ ಬ್ಯಾಂಕುಗಳು ಒದಗಿಸುವ ಸಂಬಳ ಪ್ಯಾಕೇಜ್‌ಗಳ ಅಡಿಯಲ್ಲಿ ಎಲ್ಲಾ ನೌಕರರು. (ಖಾಯಂ/ ಗುತ್ತಿಗೆ/ ಹೊರಗುತ್ತಿಗೆ ಇತ್ಯಾದಿ) ಖಾತೆಗಳನ್ನು ತೆರೆಯಲು/ ಆಯ್ಕೆ ಮಾಡಿಕೊಳ್ಳಲು ಕಡ್ಡಾಯಗೊಳಿಸಲಾಗುತ್ತದೆ ಎಂದು ಹೇಳಿದ್ದರು. ಈ ಹೇಳಿಕೆಯ ಬಳಿಕ ಆರ್ಥಿಕ ಇಲಾಖೆ ಸರ್ಕಾರಿ ನೌಕರರಿಗೆ ಸೂಚನೆಯನ್ನು ನೀಡಿದೆ.

ಅಲ್ಲದೇ ಸರ್ಕಾರಿ ನೌಕರರು ಬ್ಯಾಂಕ್‌ಗಳು/ ಅಂಚೆ ಕಚೇರಿಗಳು ನೀಡುವ PMJJBY ಮತ್ತು PMSBY ಯೋಜನೆಗಳ ಅಡಿಯಲ್ಲಿ ಸ್ವಯಂಪ್ರೇರಿತವಾಗಿ ವಿಮಾ ರಕ್ಷಣೆಯನ್ನು ಪಡೆಯಲು ಉದ್ಯೋಗಿಗಳನ್ನು ಪ್ರೋತ್ಸಾಹಿಸಲಾಗುತ್ತದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದರು.

ಸಂಬಳ ಪ್ಯಾಕೇಜ್ ಖಾತೆ: ಎಲ್ಲಾ ಸರ್ಕಾರಿ ನೌಕರ/ ಅಧಿಕಾರಿ 'ಸಂಬಳ ಪ್ಯಾಕೇಜ್ ಖಾತೆ' ತೆರೆಯುವುದು ಕಡ್ಡಾಯಗೊಳಿಸಲಾಗಿದೆ. ಈ ಖಾತೆ ಹೊಂದಿದ್ದರೆ ಉದ್ಯೋಗಿಗೆ ಬ್ಯಾಂಕ್‌ಗಳು ಕಡಿಮೆ ಬಡ್ಡಿದರದಲ್ಲಿ ಗೃಹ ಸಾಲ ನೀಡುತ್ತವೆ. ಉಚಿತವಾಗಿ ರುಪೇ ಡೆಬಿಟ್ ಕಾರ್ಡ್ ಸೌಲಭ್ಯ ಸಿಗುತ್ತದೆ. ಲಾಕರ್ ಸೇವೆಯಲ್ಲಿ ರಿಯಾಯಿತಿ ಸಿಗಲಿದೆ ಹೀಗೆ ವಿವಿಧ ಸೇವೆ ಸಿಗಲಿದೆ ಎಂದು ಮಾಹಿತಿ ನೀಡಲಾಗಿದೆ.

'ಸಂಬಳ ಪ್ಯಾಕೇಜ್ ಖಾತೆ' ತೆರೆಯುವಂತೆ ಸೂಚನೆ ನೀಡಿದ್ದರೂ ಸಹ ಹಲವು ಅಧಿಕಾರಿ/ ನೌಕರರು ಇನ್ನೂ ಖಾತೆ ತೆರದಿಲ್ಲ. ಆದ್ದರಿಂದ ವಿವಿಧ ಬ್ಯಾಂಕ್‌ಗಳು, ಅಂಚೆ ಕಛೇರಿಯಲ್ಲಿ ಈ ಮಾದರಿ ಖಾತೆಯನ್ನು ಕಡ್ಡಾಯವಾಗಿ ತೆರೆಯಬೇಕು ಎಂದು ಆರ್ಥಿಕ ಇಲಾಖೆ ತನ್ನ ಆದೇಶದಲ್ಲಿ ತಿಳಿಸಿದೆ.

ಎಲ್ಲಾ ಇಲಾಖೆಗಳ ಮುಖ್ಯಸ್ಥರು ತಮ್ಮ ವ್ಯಾಪ್ತಿಯ ಅಧಿಕಾರಿ/ ನೌಕರರು 'ಸಂಬಳ ಪ್ಯಾಕೇಜ್ ಖಾತೆ' ತೆರೆಯುವಂತೆ ಕ್ರಮ ಕೈಗೊಳ್ಳುವುದು. ಈ ಖಾತೆ ತೆರೆಯುವಂತೆ ಅವರನ್ನು ಪ್ರೋತ್ಸಾಹಿಸಲು ಸಹ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆರ್ಥಿಕ ಇಲಾಖೆ ಸೂಚನೆಯನ್ನು ನೀಡಿದೆ.

30/1/2025ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರಿ ನೌಕರರಿಗೆ ಹಾಲಿ ಜಾರಿಯಲ್ಲಿರುವ ಸಾಮಾಜಿಕ ಭದ್ರತಾ ವ್ಯವಸ್ಥೆಯ ಜೊತೆಗೆ ಇನ್ನಷ್ಟು ಸೌಲಭ್ಯ ಒದಗಿಸಲು ಪ್ರಸ್ತಾವನೆಯನ್ನು ಮಂಡಿಸಿ, ಅನುಮೋದನೆ ನೀಡಲಾಗಿತ್ತು. ಸರ್ಕಾರಿ ನೌಕರರು ಬ್ಯಾಂಕ್‌ಗಳು ನೀಡುವ ವಿವಿಧ ಯೋಜನೆಗಳ ಅಡಿಯಲ್ಲಿ ಸ್ವಯಂಪ್ರೇರಿತವಾಗಿ ವೈಯಕ್ತಿಕ ಅಪಘಾತ ವಿಮಾ ರಕ್ಷಣೆಯನ್ನು ಪಡೆಯಲು ಪ್ರೋತ್ಸಾಹಿಸಲಾಗುತ್ತದೆ ಎಂದು ಸರ್ಕಾರ ಹೇಳಿತ್ತು. ಬ್ಯಾಂಕ್‌ಗಳ ಸಹಯೋಗದಲ್ಲಿ ಸರ್ಕಾರಿ ನೌಕರರಿಗೆ 1 ಕೋಟಿ ರೂ.ಗಳ ಅಪಘಾತ ವಿಮೆಯನ್ನು ಜಾರಿಗೆ ತರುತ್ತಿರುವ ಮೊದಲ ರಾಜ್ಯ ಕರ್ನಾಟಕವಾಗಿದೆ.

ಹಲವು ಬ್ಯಾಂಕುಗಳು ಈಗಾಗಲೇ ಸರ್ಕಾರಿ ನೌಕರರ 'ಸಂಬಳ ಪ್ಯಾಕೇಜ್ ಖಾತೆ' ಅಡಿಯಲ್ಲಿ ಸಿಗುವ ಸೌಲಭ್ಯಗಳ ಕುರಿತು ಮಾಹಿತಿಯನ್ನು ನೀಡಿವೆ. ಎಸ್‌ಬಿಐ ರಾಜ್ಯ ಸರ್ಕಾರಿ ನೌಕರರಿಗೆ ಸಂಬಳ ಪ್ಯಾಕೇಜ್‌ನಲ್ಲಿ ರೂ. 10 ಸಾವಿರಕ್ಕಿಂತ ಮೇಲ್ಪಟ್ಟು ನಿವ್ವಳ ಸಂಬಳ ಪಡೆಯುತ್ತಿರುವ ಅಧಿಕಾರಿ/ ನೌಕರರಿಗೆ ರೂ. 1 ಕೋಟಿ ವೈಯಕ್ತಿಕ ಅಪಘಾತ ವಿಮೆಯನ್ನು ನೀಡುತ್ತದೆ ಹಾಗೂ ರೂ. 1,60 ಕೋಟಿ ವರೆಗೆ ವಿಮಾನ ಅಪಘಾತ ವಿಮೆ ರಕ್ಷಣೆಯನ್ನು ಪೂರಕ ಕೊಡುಗೆಯಾಗಿ ನೀಡಲಿದೆ.

ಕೆನರಾ ಬ್ಯಾಂಕ್‌ ಸರ್ಕಾರಿ ನೌಕರರಿಗೆ ಸಂಬಳ ಪ್ಯಾಕೇಜ್‌ನಲ್ಲಿ ರೂ. 50 ಸಾವಿರದ ವರೆಗೆ ನಿವ್ವಳ ಸಂಬಳ ಪಡೆಯುತ್ತಿರುವ ಅಧಿಕಾರಿ/ ನೌಕರರಿಗೆ ರೂ. 50 ಲಕ್ಷಗಳ ವೈಯಕ್ತಿಕ ಅಪಘಾತ ವಿಮೆ ರಕ್ಷಣೆಯನ್ನು ಪೂರಕ ಕೊಡುಗೆಯಾಗಿ ನೀಡಲಿದೆ. ರೂ. 50 ಸಾವಿರಕ್ಕೆ ಮೆಲ್ಪಟ್ಟು ನಿವ್ವಳ ಸಂಬಳ ಪಡೆಯುತ್ತಿರುವ ಅಧಿಕಾರಿ/ ನೌಕರರಿಗೆ ರೂ. 1 ಕೋಟಿ ವೈಯಕ್ತಿಕ ಅಪಘಾತ ವಿಮೆ ರಕ್ಷಣೆ ನೀಡುತ್ತದೆ.

ಸರ್ಕಾರಿ ನೌಕರ ಮೂರು ತಿಂಗಳ ಅವಧಿಯಲ್ಲಿ ಅಧಿಕಾರಿಗಳು/ ನೌಕರರು ತಮ್ಮ ಇಚ್ಛಾನುಸಾರ ಯಾವುದೇ ಬ್ಯಾಂಕಿನ ಸಂಬಳ ಪ್ಯಾಕೇಜಿನಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ಸರ್ಕಾರ ದಿನಾಂಕ 21/2/2025ರಲ್ಲಿ ಆದೇಶಿಸಿತ್ತು.


ಶನಿವಾರ, ಮಾರ್ಚ್ 22, 2025

ಸಿಎಂ, ಶಾಸಕರಿಗೆ ಗರಿಷ್ಠ ವೇತನ ಹೊಂದಿರುವ ದೇಶದ ಐದು ರಾಜ್ಯಗಳು, ಕರ್ನಾಟಕಕ್ಕೆ ಎಷ್ಟನೇ ಸ್ಥಾನ

ರ್ನಾಟಕದ ಶಾಸಕರ ವೇತನವನ್ನು ಶೇ. 100ರಷ್ಟು ಹೆಚ್ಚಿಸಲಾಗಿದೆ. ಇತರ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಶಾಸಕರು ಎಷ್ಟು ವೇತನ ಪಡೆಯುತ್ತಾರೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ. ತೆಲಂಗಾಣದಲ್ಲಿ ಅತಿ ಹೆಚ್ಚು ವೇತನ ನೀಡಲಾಗುತ್ತಿದೆ.

ಕರ್ನಾಟಕದ ಚುನಾಯಿತ ಪ್ರತಿನಿಧಿಗಳಿಗೆ ಶೇ.100ರಷ್ಟು ವೇತನ ಹೆಚ್ಚಳವಾಗಿದೆ.ಈ ವಿಧೇಯಕಕ್ಕೆ ಶುಕ್ರವಾರ ಅನುಮತಿಯೂ ಸಿಕ್ಕಿದೆ. ವೇತನ ದ್ವಿಗುಣಗೊಳಿಸಿದ್ದನ್ನು ಸಮರ್ಥನೆ ಮಾಡಿಕೊಂಡಿರುವ ಗೃಹ ಸಚಿವ ಜಿ ಪರಮೇಶ್ವರ ಅವರು ಹೆಚ್ಚುತ್ತಿರುವ ವೆಚ್ಚಗಳ ಸಮಸ್ಯೆ ಶಾಸಕರಿಗೂ ಬಾಧಿಸುತ್ತಿದೆ ಎಂದಿದ್ದಾರೆ.

ಹೊಸ ಪ್ರಸ್ತಾವನೆಯಡಿಯಲ್ಲಿ, ಮುಖ್ಯಮಂತ್ರಿಗಳ ಮಾಸಿಕ ವೇತನವು ಹಿಂದಿನ 75,000 ರೂ.ಗಳಿಂದ 1.5 ಲಕ್ಷ ರೂ.ಗಳಿಗೆ ಏರಿಕೆಯಾಗಲಿದ್ದು, ಶಾಸಕರ ವೇತನವು 40,000 ರೂ.ಗಳಿಂದ 80,000 ರೂ.ಗಳಿಗೆ ದ್ವಿಗುಣಗೊಳ್ಳಲಿದೆ. ಈ ವೇತನ ಹೆಚ್ಚಳವು ಹೆಚ್ಚುವರಿ ಭತ್ಯೆಗಳು ಮತ್ತು ಸವಲತ್ತುಗಳನ್ನು ಹೊರತುಪಡಿಸಿ ಸಿಗುವುದಾಗಿದೆ.

ಯಾವ ರಾಜ್ಯಗಳು ಮುಖ್ಯಮಂತ್ರಿ ಮತ್ತು ಶಾಸಕರಿಗೆ ಅತಿ ಹೆಚ್ಚು ಸಂಬಳ ನೀಡುತ್ತಿದೆ ಅನ್ನೋದನ್ನು ನೋಡೋದಾದರೆ,ವೇತನ ಹೆಚ್ಚಳದ ಹೊರತಾಗಿಯೂ, ಕರ್ನಾಟಕದ ಚುನಾಯಿತ ಪ್ರತಿನಿಧಿಗಳು ಇತರ ರಾಜ್ಯಗಳಲ್ಲಿನ ಪ್ರತಿನಿಧಿಗಳಿಗೆ ಹೋಲಿಸಿದರೆ ಕಡಿಮೆ ವೇತನ ಪಡೆಯುತ್ತಿದ್ದಾರೆ. 

ತೆಲಂಗಾಣ ರಾಜ್ಯದ ಚುನಾಯಿತ ಪ್ರತಿನಿಧಿಗಳು ಇಡೀ ದೇಶದಲ್ಲಿಯೇ ಹೆಚ್ಚಿನ ವೇತನ ಪಡೆಯುತ್ತಾರ. ಇಲ್ಲಿನ ಮುಖ್ಯಮಂತ್ರಿ ತಿಂಗಳಿಗೆ 4.10 ಲಕ್ಷ ರೂಪಾಯಿ ವೇತನ ಪಡೆಯಲಿದ್ದರೆ, ಸಚಿವರು 3ರಿಂದ 3.5 ಲಕ್ಷ ವೇತನ ಪಡೆಯುತ್ತಾರೆ. ಶಾಸಕರು 2.5 ಲಕ್ಷ ವೇತನ ಪಡೆಯುತ್ತಾರೆ. ಈ ಸಂಭಾವನೆಯು ಪ್ರಯಾಣ, ವಸತಿ ಮತ್ತು ಭದ್ರತೆಯ ಭತ್ಯೆಗಳನ್ನು ಒಳಗೊಂಡಿದೆ.

2ನೇ ಸ್ಥಾನದಲ್ಲಿ ದೆಹಲಿ ರಾಜ್ಯವಿದೆ. ಇಲ್ಲಿನ ಮುಖ್ಯಮಂತ್ರಿ ತಿಂಗಳಿಗೆ 3.90 ಲಕ್ಷ ವೇತನ ಪಡೆಯಲಿದ್ದರೆ, ಸಚಿವರು 3 ಲಕ್ಷ ಹಾಗೂ ಶಾಸಕರು 90 ಸಾವಿರ ವೇತನ ಪಡೆಯುತ್ತಾರೆ.

ದೇಶದ ಅತಿದೊಡ್ಡ ರಾಜ್ಯವಾಗಿರುವ ಉತ್ತರ ಪ್ರದೇಶದ ಮುಖ್ಯಮಂತ್ರ 3.65 ಲಕ್ಷ ಮಾಸಿಕ ವೇತನ ಪಡೆಯಲಿದ್ದು, ಸಚಿವರು 2 ರಿಂದ 2.5 ಲಕ್ಷ ವೇತನ ಪಡೆಯತ್ತಾರೆ. ಶಾಸಕರು 1.87 ಲಕ್ಷ ರೂಪಾಯಿ ವೇತನ ಪಡೆಯುತ್ತಾರೆ.

ದೇಶದ ಅತ್ಯಂತ ಶ್ರೀಮಂತ ರಾಜ್ಯವಾಗಿರುವ ಮಹಾರಾಷ್ಟ್ರದ ಮುಖ್ಯಮಂತ್ರಿ ಪ್ರತಿ ತಿಂಗಳು 3.40 ಲಕ್ಷ ವೇತನ ಪಡೆಯಲಿದ್ದರೆ, ಸಚಿವರು 2.5 ರಿಂದ 3 ಲಕ್ಷ ವೇತನ ಪಡೆಯುತ್ತಾರೆ. ಶಾಸಕರು 1.60 ಲಕ್ಷ ವೇತನ ಪಡೆಯುತ್ತಿದ್ದಾರೆ.

ಕರ್ನಾಟಕದಲ್ಲಿ ವೇತನ ಏರಿಕೆಯ ಬಳಿಕ ಸಿಎಂ 3 ಲಕ್ಷ ರೂಪಾಯಿ ವೇತನ ಪಡೆಯಲಿದ್ದರೆ, ಸಚಿವರು 2 ರಿಂದ 2.5 ಲಕ್ಷ ವೇತನ ಪಡೆಯುತ್ತಾರೆ. ಶಾಸಕರು 1.60 ಲಕ್ಷ ರೂಪಾಯಿ ಸಂಬಳ ಪಡೆಯಲಿದ್ದಾರೆ.

ರಾಜ್ಯ ಆರ್ಥಿಕ ಸಂಕಷ್ಟ ನಡುವೆಯೂ ಇಂದೇ ಮಸೂದೆ : ಮಂತ್ರಿ, ಶಾಸಕರಿಗೆ ಭರ್ಜರಿ ವೇತನ ಏರಿಕೆ ಭಾಗ್ಯ! ಯಾರಿಗೆ ಎಷ್ಟು?

ಸಂಬಳವನ್ನು ಹೇಗೆ ನಿರ್ಧರಿಸಲಾಗುತ್ತದೆ?: ಪ್ರತಿಯೊಂದು ರಾಜ್ಯ ಸರ್ಕಾರವು ತನ್ನ ಶಾಸಕರ ಸಂಬಳ ಮತ್ತು ಭತ್ಯೆಗಳನ್ನು ನಿರ್ಧರಿಸುತ್ತದೆ. ಮುಖ್ಯಮಂತ್ರಿಗಳು, ಸಂಪುಟ ಸಚಿವರು ಮತ್ತು ವಿರೋಧ ಪಕ್ಷದ ನಾಯಕರು ಸಾಮಾನ್ಯವಾಗಿ ಶಾಸಕರಿಗಿಂತ ಹೆಚ್ಚು ಗಳಿಸುತ್ತಾರೆ. ಹಣದುಬ್ಬರವನ್ನು ಲೆಕ್ಕಹಾಕಲು ಸಂಬಳ ಹೊಂದಾಣಿಕೆಗಳನ್ನು ರಾಜ್ಯದ ಸಂಬಳ ಮತ್ತು ಭತ್ಯೆ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ಮಾಡಲಾಗುತ್ತದೆ, ಆಗಾಗ್ಗೆ ಪರಿಶೀಲನಾ ಸಮಿತಿಯ ಸಲಹೆಯನ್ನು ಅನುಸರಿಸಲಾಗುತ್ತದೆ.

ರಾಜ್ಯದ ಸಿಎಂ, ಸಚಿವರು, ಶಾಸಕರ ವೇತನ ಹೆಚ್ಚಳಕ್ಕೆ ಗ್ರೀನ್ ಸಿಗ್ನಲ್: ಭಾರೀ ಪ್ರಮಾಣದಲ್ಲಿ ಏರಿಕೆ, ಎಷ್ಟು ಗೊತ್ತಾ?

ರಾಜ್ಯ ಸರ್ಕಾರಿ' ನೌಕರರೇ ಗಮನಿಸಿ : ವಿವಿಧ ರಜೆಗಳು ಮತ್ತು ನಿಯಮಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ |GOVT EMPLOYEE

ಸತತವಾಗಿ 4 ತಿಂಗಳಿಗಿಂತಲೂ ಹೆಚ್ಚಾಗಿ ಅನಧಿಕೃತ ಗೈರು ಹಾಜರಾದಲ್ಲಿ ಅಂತಹ ಸರ್ಕಾರಿ ನೌಕರನನ್ನು ವಿಚಾರಣೆಗೆ ಒಳಪಡಿಸಿ (ಸಿಸಿಎ) ಪ್ರಕಾರ ಸೇವೆಯಿಂದ ವಜಾ ಮಾಡಬಹುದು.

ಅನುಮತಿ ಇಲ್ಲದೆ ಗೈರು ಹಾಜರಾದಲ್ಲಿ ‘ಅನಧಿಕೃತ ಗೈರು ಹಾಜರಿ’ ಎಂದು ಪರಿಗಣಿಸಿ ಸಂಬಳವನ್ನು ಕಟಾವು ಮಾಡಲಾಗುವುದು.106ಬಿ ಮುಷ್ಕರದಲ್ಲಿ ಭಾಗವಹಿಸಿದರೆ – ಹಿಂದಿನ ಸೇವಾ ಸೌಲಭ್ಯಗಳು
ದೊರೆಯುವುದಿಲ್ಲ.

`ರಾಜ್ಯ ಸರ್ಕಾರಿ ನೌಕರರೇ' ಗಮನಿಸಿ : `NPS' ಖಾತೆಯಲ್ಲಿನ ಮೊತ್ತ ಹಿಂಪಡೆಯುವ ಬಗ್ಗೆ ಇಲ್ಲಿದೆ ಮಾಹಿತಿ

ಓದಲಾದ ಕ್ರಮ ಸಂಖ್ಯೆ (2)ರ ಸರ್ಕಾರಿ ಆದೇಶದಲ್ಲಿನ ಸೂಚನೆಗಳನ್ವಯ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಮಾರ್ಗಸೂಚಿಯನ್ನು ರೂಪಿಸುವುದರೊಂದಿಗೆ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗಿದೆ ಎಂದಿದೆ.

ಓದಲಾದ ಕ್ರಮ ಸಂಖ್ಯೆ (3)ರ ಸರ್ಕಾರಿ ಆದೇಶದನ್ವಯ ದಿನಾಂಕ: 01.04.2006ರ ಪೂರ್ವದಲ್ಲಿನ ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆ ಹೊಂದಿ ಆ ದಿನಾಂಕದಂದು ಅಥವಾ ತದನಂತರದಲ್ಲಿ ರಾಜ್ಯ ಸರ್ಕಾರದ ಸೇವೆಗೆ ಸೇರಿದ ನೌಕರರನ್ನು ಒಂದು ಬಾರಿಯ ಕ್ರಮವಾಗಿ ಡಿಫೈನ್ಸ್ ಪಿಂಚಣಿ ಯೋಜನೆ ವ್ಯಾಪ್ತಿಗೆ ಒಳಪಡಿಸಲು ಸರ್ಕಾರವು ಒಪ್ಪಿಗೆಯನ್ನು ನೀಡಿರುತ್ತದೆ.

ಪ್ರಸ್ತುತ ಮೇಲಿನ ದಿನಾಂಕ: 24.01.2024ರ ಸರ್ಕಾರಿ ಆದೇಶದನ್ವಯ ರಾಷ್ಟ್ರೀಯ ಪಿಂಚಣಿ ಯೋಜನೆಯಿಂದ ಡಿಫೈನ್ ಪಿಂಚಿಣಿ ಯೋಜನೆಯ ವ್ಯಾಪ್ತಿಗೊಳಪಡುವ ಸರ್ಕಾರಿ ಅಧಿಕಾರಿ/ನೌಕರರ ಎನ್.ಪಿ.ಎಸ್. ಪ್ರಾನ್ ಖಾತೆಯಲ್ಲಿನ ನೌಕರರ ಮತ್ತು ಸರ್ಕಾರದ ವಂತಿಗೆಯನ್ನು ಹಿಂಪಡೆಯುವ ಕುರಿತು ಹಾಗೂ ಸಂಬಂಧಿತ ಸರ್ಕಾರಿ ನೌಕರರಿಗೆ ಜಿ.ಪಿ.ಎಫ್.ಖಾತೆಯನ್ನು ತೆರೆಯುವುದು ಮುಂತಾದ ವಿಷಯಗಳ ಬಗ್ಗೆ ಮಾರ್ಗಸೂಚಿಯನ್ನು ಹೊರಡಿಸಲು ಸರ್ಕಾರ ತೀರ್ಮಾನಿಸಿದೆ. ಅದರಂತೆ ಈ ಆದೇಶ.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ದಿನಾಂಕ: 24.01.2024ರ ಸರ್ಕಾರಿ ಆದೇಶ ಸಂಖ್ಯೆ: ಆಇ-ಪಿಇಎನ್/99/2023ರನ್ವಯ ರಾಷ್ಟ್ರೀಯ ಪಿಂಚಣಿ ಯೋಜನೆಯಿಂದ ಡಿಫೈನ್ ಪಿಂಚಣಿ ಯೋಜನೆಯ ವ್ಯಾಪ್ತಿಗೊಳಪಡುವ ಸೇವೆಯಲ್ಲಿರುವ/ನಿವೃತ್ತಿ ಹೊಂದಿದ/ಮರಣ ಹೊಂದಿದ ಅರ್ಹ ಸರ್ಕಾರಿ ಅಧಿಕಾರಿ/ನೌಕರರ ಪ್ರಾನ್ ಖಾತೆಯಲ್ಲಿರುವ ಮೊತ್ತವನ್ನು ಹಿಂಪಡೆಯಬೇಕಾಗಿರುವುದರಿಂದ ಈ ಕುರಿತು ವಿವಿಧ ಹಂತಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳು ಮತ್ತು ಸಂಬಂಧಪಟ್ಟವರ ಜವಾಬ್ದಾರಿಗಳನ್ನು ಈ ಕೆಳಕಂಡಂತೆ ನಿಗಧಿಪಡಿಸಿದೆ.

1. ಇಲಾಖಾ ಮುಖ್ಯಸ್ಥರುಗಳ ಜವಾಬ್ದಾರಿಗಳು

a. ಸರ್ಕಾರಿ ಅಧಿಕಾರಿ/ನೌಕರರು ಎನ್.ಪಿ.ಎಸ್. ಯೋಜನೆಗೆ ಒಳಪಡುವುದಿಲ್ಲ ಎಂದು ಅನುಬಂಧದಲ್ಲಿನ ನಮೂನೆ-1ರಲ್ಲಿ ದೃಢೀಕರಣವನ್ನು ನೀಡುವುದು ಮತ್ತು ಅದರ ಪ್ರತಿಯನ್ನು ಸಂಬಂಧಪಟ್ಟ ಡಿಡಿಒಗೆ ಕಳುಹಿಸುವುದು.
b. ಸೇವೆಯಲ್ಲಿರುವ ಸರ್ಕಾರಿ ಅಧಿಕಾರಿ/ನೌಕರರ ವೇತನದಿಂದ ಕಟಾವಣೆಯಾಗುವ ಎನ್.ಪಿ.ಎಸ್. ವಂತಿಗೆಯನ್ನು ಹೆಚ್.ಆರ್.ಎಂ.ಎಸ್. ನಲ್ಲಿ ಸ್ಥಗಿತಗೂಳಿಸುವುದು ಮತ್ತು ಅದರ ಮಾಹಿತಿಯನ್ನು ಖಜಾನ ಆಯುಕ್ತಾಲಯದ ರಾಷ್ಟ್ರೀಯ ಪಿಂಚಣಿ ಯೋಜನೆ ಘಟಕಕ್ಕೆ ನೀಡುವುದು.
C. ಸೇವೆಯಲ್ಲಿರುವ ಸರ್ಕಾರಿ ಅಧಿಕಾರಿ/ನೌಕರರ ಭವಿಷ್ಯ ನಿಧಿ ಖಾತೆಯನ್ನು ತೆರೆಯಲು ಸಾಮಾನ್ಯ ಭವಿಷ್ಯ ನಿಧಿ ಯೋಜನೆಯಡಿಯಲ್ಲಿನ ನಮೂನೆ-1 ಹಾಗೂ ನಾಮನಿರ್ದೇಶನವನ್ನು ನಮೂನೆ-2 ರಲ್ಲಿ ಪಡೆದು ಮಹಾಲೇಖಪಾಲರಿಗೆ ಕಳುಹಿಸಿಕೊಡುವುದು.
2. ಹಣ ಸೆಳೆಯುವ ಮತ್ತು ಬಟವಾಡೆ ಅಧಿಕಾರಿಗಳ (ಡಿಡಿಒ) ಜವಾಬ್ದಾರಿಗಳು
ಡಿಡಿಒಗಳು ಈ ಕೆಳಕಂಡ ಪ್ರಕರಣಗಳಲ್ಲಿ ನಿರ್ದಿಷ್ಟವಡಿಸಿದ ದಾಖಲೆಗಳನ್ನು ಸಂಬಂಧಪಟ್ಟ, ಖಜಾನೆಯ ಮೂಲಕ ಎನ್.ಪಿ.ಎಸ್. ಘಟಕಕ್ಕೆ ನೀಡುವುದು:-
೩. ಸೇವೆಯಲ್ಲಿರುವ ಸರ್ಕಾರಿ ಅಧಿಕಾರಿ/ನೌಕರರ ಪ್ರಕರಣಗಳು
i. ಇಲಾಖಾ ಮುಖ್ಯಸ್ಥರು ದೃಢೀಕರಿಸಿರುವ ನಮೂನೆ-1.
i. ಪ್ರಾನ್ ಖಾತೆಗೆ ಸಂಬಂಧಿಸಿದಂತೆ ವೇತನದಿಂದ ಕಡಿತಗೊಳಿಸಿದ ಎನ್.ಪಿ.ಎಸ್ .ಮೊತ್ತದ ವಿವರಗಳ ತಃಖ (Statementof Trensactions) ಹಾಗೂ ತಃಖೆಯಲ್ಲಿ ನಮೂದಿಸಿರುವುದಲ್ಲದೇ ಇನ್ಯಾವುದೇ ಮತ್ತು ಎನ್.ಪಿ.ಎಸ್. ಸಂಬಂಧ ಕಟಾವಣೆಯಾಗಿರುವುದಿಲ್ಲ ಮತ್ತು ಕಟಾವಣೆ ಮಾಡುವುದು ಬಾಕಿ ಇರುವುದಿಲ್ಲ ಎಂದು ಸಂಬಂಧಪಟ್ಟ ಅಧಿಕಾರಿ/ನೌಕರರು ಮತ್ತು ಡಿಡಿಓರವರಿಂದ ದೃಢೀಕರಣ.
iii. ಮೂಲ ಪಾನ್ ಕಾರ್ಡ್ ಪ್ರತಿ ಅಥವಾ ಡಿಡಿಓ ರವರಿಂದ ದೃಢೀಕೃತ ಇ-ಪ್ರಾನ್ ಪ್ರತಿ
iv. ಸರ್ಕಾರಿ ಅಧಿಕಾರಿ/ನೌಕರರ ಜಿ.ಪಿ.ಎಫ್. ಖಾತೆ ವಿವರ.
b. ನಿವೃತ್ತಿ ಹೊಂದಿರುವ ಸರ್ಕಾರಿ ಅಧಿಕಾರಿ/ನೌಕರರ ಪ್ರಕರಣಗಳು
i. ಮೇಲಿನ ಕ್ರಮ ಸಂ. 2 (a) - (i), (ii), (iii) ರಲ್ಲಿನ ದಾಖಲೆಗಳು.
ii. ನಿವೃತ್ತಿ ಹೊಂದಿದ ನೌಕರರು ಪಿಂಚಣಿಗಾಗಿ (ನಿವೃತ್ತಿ ಉಪದಾನ ಒಳಗೊಂಡಂತೆ) ಅನುಬಂಧದಲ್ಲಿನ ನಮೂನೆ-2ರಲ್ಲಿ ಮನವಿ.
iii, ಅನುಬಂಧದಲ್ಲಿನ ನಮೂನ-3ರಲ್ಲಿ ಈಗಾಗಲೇ CRA ಯಿಂದ ಇತ್ಯರ್ಥಪಡಿಸಿರುವ ಪ್ರಾನ್ ಖಾತೆಯಲ್ಲಿನ ಮೊತ್ತದ ವಿವರ.
iv. ಈಗಾಗಲೇ ASP ಯಲ್ಲಿ ಹೂಡಿಕೆ ಮಾಡಿರುವ ಮೊತ್ತವನ್ನು ASP ಯಿಂದ ಹಿಂಪಡೆದು ಸರ್ಕಾರಕ್ಕೆ ಹಿಂತಿರುಗಿಸಲು ನಮೂನೆ-4 ರಲ್ಲಿ ಒಪ್ಪಿಗೆ ಪತ್ರ
v. ಡಿಡಿಓ ರವರಿಂದ Annuity Policy Cancellation ಮಾಡಲು ಸಂಬಂಪಟ್ಟ ASP ರವರಿಗೆ ಬರೆದಿರುವ ಪತ್ರ (ನಮೂನೆ-5).
vi. ASP ರವರಿಂದ ನೀಡಿರುವ ಬಾಂಡ್ (ಹೂಡಿಕೆ/ಬಾಂಡ್) ಜೆರಾಕ್ಸ್ ಪ್ರತಿಯನ್ನು ಮತ್ತು ಮಾಸಿಕ ಪಿಂಚಿಣಿ ವಿವರವನ್ನು ನಿವೃತ್ತ ನೌಕರರು ಹಾಗೂ ಡಿಡಿಓ ರವರು ದೃಢೀಕರಿಸಿದ ಪ್ರತಿ‍
vii, ಡಿಡಿಓ ರವರಿಂದ ದೃಢೀಕರಿಸಿರುವ ನಿವೃತ್ತ ಅಧಿಕಾರಿ/ನೌಕರರ_ ಖಜಾನ-2 recipient ID ವಿವರ.

C. ಮರಣ ಹೊಂದಿರುವ ಸರ್ಕಾರಿ ಅಧಿಕಾರಿ/ನೌಕರರ ಪ್ರಕರಣಗಳು

i. ಕ್ರಮ ಸಂ. 2 (a) - (i), (ii), (i) ರಲ್ಲಿನ ದಾಖಲೆಗಳು.
ii. ಮೃತರ ನಾಮ ನಿರ್ದೇಶಿತರಿಂದ ಕುಟುಂಬ ಪಿಂಚಣಿ ಹಾಗೂ ಮರಣ ಉಪದಾನಕ್ಕೆ ನಮೂನೆ-6ರಲ್ಲಿ ಮನವಿ.
ii. ನಮೂನೆ-7 ಮತ್ತು 7(A) ರಲ್ಲಿ ನೋಡಲ್ ಕಚೇರಿಯಿಂದ (ಡಿಡಿಒ ಮತ್ತು ಖಜಾನ) ದೃಡೀಕರಣ
iv. ಮರಣ ಪ್ರಮಾಣ ಪತ್ರ (ಮೂಲ ಪ್ರತಿ), ಸಂಬಂಧಪಟ್ಟ ಡಿಡಿಓರವರಿಂದ ಹಾಗೂ ಮೃತರ ನಾಮನಿರ್ದೇಶಿತರಿಂದ ದೃಢೀಕರಣ.
v. ಜೀವಂತ ಸದಸ್ಯರ ಪ್ರಮಾಣ ಪತ್ರ (ಮೂಲ ಪ್ರತಿ), ಸಂಬಂಧಪಟ್ಟ ಡಿಡಿಓರವರಿಂದ ಹಾಗೂ ಮೃತರ ನಾಮನಿರ್ದೇಶಿತರಿಂದ ದೃಢೀಕರಣ. vi. ಈಗಾಗಲೇ ಪಾವತಿಯಾಗಿರುವ ಇಡಿಗಂಟಿನ ಪರಿಹಾರದ ಮೊತ್ತವನ್ನು ಲೆಕ್ಕ ಶೀರ್ಷಿಕೆ 2071-01-911-0-06 ಗೆ ಜಮೆ ಮಾಡಿರುವ ಚಲನ್ ಪ್ರತಿ ಮತ್ತು KTC 25 ಅನ್ನು ಡಿಡಿಓರವರಿಂದ ದೃಢೀಕರಣ.
vii, ನಮೂನೆ-8 ರಲ್ಲಿ ಈಗಾಗಲೇ CRA ಯಿಂದ ಇತ್ಯರ್ಥಪಡಿಸಿರುವ ಪ್ರಾನ್ ಖಾತೆಯಲ್ಲಿನ ಮೊತ್ತದ ವಿವರ.
viii. ಈಗಾಗಲೇ ASP ಯಲ್ಲಿ ಹೂಡಿಕೆ ಮಾಡಿರುವ ಮೊತ್ತವನ್ನು ASP ಯಿಂದ ಹಿಂಪಡೆದು ಸರ್ಕಾರಕ್ಕೆ ಹಿಂತಿರುಗಿಸಲು ಮೃತರ ನಾಮನಿರ್ದೇಶಿತರಿಂದ ನಮೂನೆ-4 ರಲ್ಲಿ ಒಪ್ಪಿಗೆ ಪತ್ರ.
ix, ಡಿಡಿಓ ರವರಿಂದ Annuity Policy Cancellation ಮಾಡಲು ಸಂಬಂಪಟ್ಟ ASP ರವರಿಗೆ ಬರೆದಿರುವ ಪತ್ರ(ನಮೂನೆ-5)
x. ASP ರವರಿಂದ ನೀಡಿರುವ ಬಾಂಡ್ (ಹೂಡಿಕೆ/ಬಾಂಡ್) ಜೆರಾಕ್ಸ್ ಪ್ರತಿಯನ್ನು ಮತ್ತು ಮಾಸಿಕ ಪಿಂಚಿಣಿ ವಿವರವನ್ನು ನಾಮನಿರ್ದೇಶಿತರು ಹಾಗೂ ಡಿಡಿಓ ರವರು ದೃಢೀಕರಿಸಿದ ಪತಿ.
xi, ಡಿಡಿಓ ರವರಿಂದ ದೃಢೀಕರಿಸಿರುವ ಮೃತರನಾಮನಿರ್ದೇಶಿತರ ಖಜಾನ-2 recipient ID ವಿವರ.
d. ಡಿಡಿಓ ರವರು ನೌಕರರು/ಅಧಿಕಾರಿಗಳು ಕೇಂದ್ರ ಅಥವಾ ರಾಜ್ಯ/ಇತರೆ ಸ್ವಾಯತ್ತ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿರುವ ಬಗ್ಗೆ ಅಧಿಕಾರಿ/ನೌಕರರಿಂದ ನಮೂನೆ-9 ರಲ್ಲಿ ದೃಢೀಕರಣ, ಸ್ವಾಯತ್ತ ಸಂಸ್ಥೆಯಿಂದ ನಮೂನೆ-94 ರಲ್ಲಿ ದೃಢೀಕರಣ ಹಾಗೂ ಸಂಬಂಧಪಟ್ಟ, ಮೊತ್ತವನ್ನು ಸ್ವಾಯತ್ತ ಸಂಸ್ಥೆಗೆ ಜಮೆ ಮಾಡಲು ಖಜಾನೆ-2 recipient ID ವಿವರಗಳನ್ನು ಪಡೆದು ಕಡ್ಡಾಯವಾಗಿ ದೃಢೀಕರಣದೊಂದಿಗೆ ಸಲ್ಲಿಸುವುದು.
e. Central Record keeping Agency (CRA) do Error Rectification Module (ERM) ನಲ್ಲಿ ಪ್ರಕಿಯೆಯನ್ನು ಕೈಗೊಳ್ಳಲು ಡಿಡಿಓರವರು ಯುಕ್ತದ್ವಾರದ ಮೂಲಕ ಸಂಬಂಧಪಟ್ಟ ವೇತನ ಪಡೆಯುವ ಖಜಾನೆಗೆ ಪ್ರಸ್ತಾವನೆಯನ್ನು ಸಲ್ಲಿಸುವುದು.
3. ಖಜಾನೆಗಳ ಜವಾಬ್ದಾರಿಗಳು:
a. ಸೇವೆಯಲ್ಲಿರುವ/ನಿವೃತ್ತಿ/ಮರಣ ಹೊಂದಿ CRA ರವರಿಂದ ಇತ್ಯರ್ಥಪಡಿಸಿರದ ಪಕರಣಗಳಿಗೆ ಖಜಾನೆಯವರು ಪ್ರಸ್ತಾವನೆಯನ್ನು ನಿಯಮಾನುಸಾರ ಪರಿಶೀಲಿಸಿ CRA website ನಲ್ಲಿ ERM Claim ಅನ್ನು initiate ಮತ್ತು verify ಮಾಡಿದ ದೃಢೀಕೃತ ಪ್ರತಿಯನ್ನು Authorise ಮಾಡಲು ಎನ್.ಪಿ.ಎಸ್. ಘಟಕಕ್ಕೆ ಸಲ್ಲಿಸುವುದು. b. ನಿವೃತ್ತಿ/ಮರಣ ಹೊಂದಿ CRA ರವರಿಂದ ಇತ್ಯರ್ಥಪಡಿಸಿರುವ ಪ್ರಕರಣಗಳಿಗೆ - CRA ರವರಿಂದ ಪ್ರಾನ್ ಖಾತೆಯಲ್ಲಿರುವ ಮೊತ್ತವನ್ನು ಇತ್ಯರ್ಥಪಡಿಸಿರುವ ಮೊತ್ತದ ವಿವರ ಮತ್ತು ಈಗಾಗಲೇ ಇಡಿಗಂಟು ಪಾವತಿ ಮಾಡಿರುವ ಮೊತ್ತದ ವಿವರವನ್ನು ಪರಿಶೀಲಿಸಿ, ಖಚಿತಪಡಿಸಿಕೊಂಡು ಹಾಗೂ ಡಿಡಿಓ ರವರು ನೀಡಿರುವ Annuity Policy Cancellation ಪತ್ರವನ್ನು ದೃಢೀಕರಿಸಿ ಮುಂದಿನ ಕ್ರಮಕ್ಕಾಗಿ ಎಲ್ಲಾ ದಾಖಲೆಗಳೊಂದಿಗೆ ಪ್ರಸ್ತಾವನೆಯನ್ನು ಎನ್.ಪಿ.ಎಸ್. ಘಟಕಕ್ಕೆ ಸಲ್ಲಿಸುವುದು.

4. ಎನ್.ಪಿ.ಎಸ್.ಘಟಕದ ಜವಾಬ್ದಾರಿಗಳು:

1. ಸೇವೆಯಲ್ಲಿರುವ ಮತ್ತು ನಿವೃತ್ತಿ/ಮರಣ ಹೊಂದಿ CRA ರವರಿಂದ ಇತ್ಯರ್ಥಪಡಿಸಿರದ ಪ್ರಕರಣಗಳಿಗೆ - ಎನ್.ಪಿ.ಎಸ್. ಘಟಕದಲ್ಲಿ ಖಜಾನೆಯಿಂದ ಅಧಿಕಾರಿಗಳ ERM ಪುಸ್ತಾವನ ಸ್ವೀಕರಿಸಿದ ನಂತರ ಸದರಿ ಪುಸ್ತಾವನೆಯನ್ನು ಪರಿಶೀಲಿಸಿ CFA ರವರಲ್ಲಿ Claim authorize ಮಾಡುವುದು.
2. ಪಾನ್ ಖಾತೆಯಲ್ಲಿ ಶೇಖರಣೆಗೊಂಡಿರುವ ಸಂಪೂರ್ಣ ಮೊತ್ತವನ್ನು ಖಜಾನ ಆಯುಕ್ತರ ಪದನಾಮದಲ್ಲಿ SBI, ಶಿವಾಜಿನಗರ ಶಾಖೆಯಲ್ಲಿ ತೆರೆದಿರುವ proxy pool ಖಾತೆಗೆ CRA ಯಿಂದ ಜಮೆ ಮಾಡಲಾಗುತ್ತದೆ.
3. ನಿವೃತ್ತಿ ಅಧಿಕಾರಿ/ನೌಕರರಿಗೆ ಅಥವಾ ಮೃತರ ನಾಮನಿರ್ದೇಶಿತರಿಗೆ ಪ್ರಾನ್ ಖಾತೆಯ ಸಂಪೂರ್ಣ ಮೊತ್ತವನ್ನು ಇತ್ಯರ್ಥಪಡಿಸಿದ ಪ್ರಕರಣಗಳಿಗೆ CRA ರವರಿಂದ ವಂತಿಗೆಯ ವರ್ಗೀಕರಣದ ವಿವರಗಳನ್ನು ಮಿಂಚಂಚೆ ಹಾಗೂ ಪತ್ರದ ಮುಖಾಂತರ ಪಡೆಯುವುದು. 4. ನಿವೃತ್ತಿ ಅಧಿಕಾರಿ/ನೌಕರರಿಗೆ ಅಥವಾ ಮೃತರ ನಾಮನಿರ್ದೇಶಿತರಿಗೆ CRA ರವರಿಂದ ಪ್ರತಿಶತವಾರು ಮೊತ್ತವನ್ನು ಇತ್ಯರ್ಥಪಡಿಸಿ ASP ರವರಲ್ಲಿ ಹೂಡಿಕೆ ಮಾಡಿರುವ ಪ್ರಕರಣಗಳಿಗೆ
a. ನೊಡಲ್ ಕಚೇರಿಯಿಂದ ಸ್ವೀಕೃತವಾಗಿರುವ Annuity Cancellation ಪತ್ರವನ್ನು ಅಗತ್ಯ ದಾಖಲೆಗಳೊಂದಿಗೆ ASP ರವರಿಗೆ ಕಳುಹಿಸುವುದು ಮತ್ತು CRA ರವರಿಗೆ ಅನುಸರಣೆ ಮಾಡಲು ತಿಳಿಸುವುದು.
b. Annuity cancellation ಮಾಡಿಸಿದ ನಂತರ CRA ರವರು ಮೊತ್ತವನ್ನು proxy pool ಖಾತೆಗೆ ಜಮೆ ಮಾಡುವುದು.
C. ಇತ್ಯರ್ಥಪಡಿಸಿರುವ ಪ್ರತಿಶತವಾರು ಮೊತ್ತ ಮತ್ತು ASE ಹೂಡಿಕೆ ಮೊತ್ತಕ್ಕೆ ವಂತಿಗೆಯ ವರ್ಗೀಕರಣದ ವಿವರಗಳನ್ನು CRA ರವರಿಂದ ಮಿಂಚಂಚೆ ಹಾಗೂ ಪತ್ರದ ಮುಖಾಂತರ ಪಡೆಯುವುದು.
5. ನಿವೃತ್ತಿ ಅಧಿಕಾರಿ/ನೌಕರರಿಗೆ ಅಥವಾ ಮೃತರ ನಾಮನಿರ್ದೇಶಿತರಿಗೆ ಪ್ರತಿಶತವಾರು ಮೊತ್ತವನ್ನು ಇತ್ಯರ್ಥಪಡಿಸಿರುವ ಮತ್ತು ASP ರವರಲ್ಲಿ ಹೂಡಿಕೆ ಮಾಡಿಲ್ಲದ ಪಕರಣಗಳಿಗೆ ಇತ್ಯರ್ಥಪಡಿಸಿರುವ ಪ್ರತಿಶತವಾರು ಮೊತ್ತ ಮತ್ತು ASF ಹೂಡಿಕೆ ಮಾಡಿರದ ಮೊತ್ತಕ್ಕೆ ವಂತಿಗೆಯ ವರ್ಗೀಕರಣದ ವಿವರಗಳನ್ನು (RA ರವರಿಂದ ಮಿಂಚಂಚೆ ಹಾಗೂ ಪತ್ರದ ಮುಖಾಂತರ ಪಡೆಯುವುದು.
6. ಜಮೆಯಾದ ಮೊತ್ತದ ವಿವರವನ್ನು CRA ರವರು ಎನ್.ಪಿ.ಎಸ್. ಘಟಕಕ್ಕೆ ಮಿಂಚಂಚೆ ಹಾಗೂ ಪತ್ರದ ಮುಖಾಂತರ ಮಾಹಿತಿ ನೀಡುತ್ತಾರೆ.
7. Proxy pool ಬ್ಯಾಂಕ್ ಖಾತೆಗೆ ಜಮೆಯಾಗಿರುವ ಮೊತ್ತವನ್ನು ಖಜಾನೆ-2 ಚಲನ್ ಮುಖಾಂತರ ಲೆಕ್ಕ ಶೀರ್ಷಿಕ 8342-00-117-0-18-701ರ ಠೇವಣಿ ಖಾತ 27572A190 ಗೆ ಜಮ ಮಾಡಲಾಗುತ್ತದೆ.
8. CTS-8 ಮುಖಾಂತರ ಪ್ರಾನ್ ಖಾತೆಯ ಮೊತ್ತವನ್ನು ಇತ್ಯರ್ಥಪಡಿಸಲು ನಗರ ಜಿಲ್ಲಾ ಖಜಾನ, ಬೆಂಗಳೂರು ಇವರಿಗೆ ಅಧಿಕೃತ ಜ್ಞಾಪನವನ್ನು ಕೆಳಕಂಡ ವಿವರಗಳೊಂದಿಗೆ ಕಳುಹಿಸಲಾಗುವುದು ಮತ್ತು ಜಿ.ಪಿ.ಎಫ್. ಖಾತೆಗೆ ವರ್ಗಾಯಿಸುವ ಚಲನ್‌ಗಳನ್ನು ಎನ್.ಪಿ.ಎಸ್. ಘಟಕದಲ್ಲಿ ನೇರವಾಗಿ ಬ್ಯಾಂಕ್‌ ಖಾತೆ ಮುಖಾಂತರ ವರ್ಗಾವಣೆ ಮಾಡಲು ಸೃಜಿಸುವುದು.

ಶುಕ್ರವಾರ, ಮಾರ್ಚ್ 21, 2025

Income Tax Recruitment 2025: ಆದಾಯ ತೆರಿಗೆ ಇಲಾಖೆಯಲ್ಲಿ ಕೆಲಸ ಪಡೆಯಲು ಬಂಪರ್​ ಆಫರ್​; ಲಿಖಿತ ಪರೀಕ್ಷೆ ಇಲ್ಲ, ತಿಂಗಳಿಗೆ 81,000ವರೆಗೆ ಸಂಬಳ

ಈಗಾಗಲೇ ಅರ್ಜಿ (Application) ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಅರ್ಹ (Deserve) ಮತ್ತು ಆಸಕ್ತ ಅಭ್ಯರ್ಥಿಗಳು (Interested Candidates) ಅರ್ಜಿ ಸಲ್ಲಿಸಬಹುದು.

ಆದಾಯ ತೆರಿಗೆ ಇಲಾಖೆಯ ಕ್ರೀಡಾ ಕೋಟದಡಿ ಒಟ್ಟು 56 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಸ್ಟೆನೋಗ್ರಾಫರ್ ಗ್ರೇಡ್ II, ತೆರಿಗೆ ಸಹಾಯಕ ಮತ್ತು ಮಲ್ಟಿ-ಟಾಸ್ಕಿಂಗ್ ಸ್ಟಾಫ್ (MTS) ಹುದ್ದೆಗಳಿಗೆ ಪ್ರತಿಭಾನ್ವಿತ ಕ್ರೀಡಾಪಟುಗಳ ನೇಮಕಾತಿ ಮಾಡಿಕೊಳ್ಳಲಾಗ್ತಿದೆ.

ಏಪ್ರಿಲ್​ 5, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ

ಆದಾಯ ತೆರಿಗೆ ಇಲಾಖೆಯಲ್ಲಿ ಕೆಲಸ ಮಾಡಲು ಬಯಸುವ ಅಭ್ಯರ್ಥಿಗಳು ಏಪ್ರಿಲ್ 5 ಅಥವಾ ಅದಕ್ಕೂ ಮೊದಲು ಅರ್ಜಿ ಸಲ್ಲಿಸಬಹುದು. ಆಸಕ್ತ ಅಭ್ಯರ್ಥಿಗಳು ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್ https://incometaxhyderabad.gov.in/ ಮೂಲಕ ಅರ್ಜಿ ಸಲ್ಲಿಸಬಹುದು.ಅರ್ಜಿ ಸಲ್ಲಿಸಲು ಏಪ್ರಿಲ್​ 5 ಕೊನೆಯ ದಿನವಾಗಿದೆ. ಇನ್ನೂ ಅರ್ಜಿ ಸಲ್ಲಿಸುವ ಮೊದಲು, ಅಭ್ಯರ್ಥಿಗಳು ಕೆಳಗೆ ನೀಡಲಾದ ವಿವರಗಳನ್ನು ಪರಿಶೀಲಿಸಬೇಕು.

ಆದಾಯ ತೆರಿಗೆ ಇಲಾಖೆಯಲ್ಲಿ ಭರ್ತಿ ಮಾಡಿಕೊಳ್ಳುತ್ತಿರುವ ಹುದ್ದೆಗಳು

  • ಸ್ಟೆನೋಗ್ರಾಫರ್ ಗ್ರೇಡ್ II (ಸ್ಟೆನೋ): 2 ಹುದ್ದೆಗಳು

  • ತೆರಿಗೆ ಸಹಾಯಕ (TA): 28 ಹುದ್ದೆಗಳು

  • ಮಲ್ಟಿ-ಟಾಸ್ಕಿಂಗ್ ಸ್ಟಾಫ್ (MTS): 26 ಹುದ್ದೆಗಳು


ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ವಯಸ್ಸಿನ ಮಿತಿ:

  • ಸ್ಟೆನೋಗ್ರಾಫರ್ ಗ್ರೇಡ್ II ಮತ್ತು ತೆರಿಗೆ ಸಹಾಯಕ: 18 ರಿಂದ 27 ವರ್ಷಗಳು

  • ಮಲ್ಟಿ-ಟಾಸ್ಕಿಂಗ್ ಸ್ಟಾಫ್: 18 ರಿಂದ 25 ವರ್ಷಗಳು


ವಯಸ್ಸಿನ ಸಡಿಲಿಕೆ:

  • ಸಾಮಾನ್ಯ / ಒಬಿಸಿ ಅಭ್ಯರ್ಥಿಗಳಿಗೆ : 5 ವರ್ಷಗಳು

  • SC/ST ಅಭ್ಯರ್ಥಿಗಳಿಗೆ : 10 ವರ್ಷಗಳು

  • ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ವಿಶೇಷ ವಿನಾಯಿತಿ ಅನ್ವಯಿಸುತ್ತದೆ.



ಅರ್ಜಿ ಸಲ್ಲಿಸಲು ಅರ್ಹತಾ ಮಾನದಂಡಗಳು:

  • ಸ್ಟೆನೋಗ್ರಾಫರ್ ಗ್ರೇಡ್ II: ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 12 ನೇ ತರಗತಿ ಉತ್ತೀರ್ಣರಾಗಿರಬೇಕು.

  • ತೆರಿಗೆ ಸಹಾಯಕ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು.

  • ಮಲ್ಟಿ-ಟಾಸ್ಕಿಂಗ್ ಸ್ಟಾಫ್: ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.


ಹೆಚ್ಚುವರಿಯಾಗಿ, ಅಭ್ಯರ್ಥಿ ಕ್ರೀಡೆಯಲ್ಲಿ ರಾಜ್ಯ/ದೇಶವನ್ನು ಪ್ರತಿನಿಧಿಸಿರಬೇಕು, ಯಾವುದಾದರೂ ಒಂದು ಪದಕಗಳನ್ನು ಗೆದ್ದಿರಬೇಕು:

ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳು (ಸೀನಿಯರ್/ಜೂನಿಯರ್ ಮಟ್ಟ)
ಖೇಲೋ ಇಂಡಿಯಾ ಯೂತ್ ಗೇಮ್ಸ್
ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟ
ಅಂತರ ವಿಶ್ವವಿದ್ಯಾಲಯ ಪಂದ್ಯಾವಳಿಗಳು
ಭಾರತ ಶಾಲಾ ಕ್ರೀಡಾಕೂಟ (SGFI) ಸ್ಪರ್ಧೆಗಳು
ರಾಷ್ಟ್ರೀಯ ಶಾಲಾ ಕ್ರೀಡಾಕೂಟ
ಅಂತರರಾಷ್ಟ್ರೀಯ ಸ್ಪರ್ಧೆಗಳು (ಭಾರತವನ್ನು ಪ್ರತಿನಿಧಿಸುವುದು)
ರಾಜ್ಯ ಮಟ್ಟದ ಚಾಂಪಿಯನ್‌ಶಿಪ್‌ಗಳು (ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳಿಂದ ಗುರುತಿಸಲ್ಪಟ್ಟಿದೆ)

ಈ ಹುದ್ದೆಗಳಿಗೆ ನೀಡಬಹುದಾದ ಸಂಬಳ:

  • ಸ್ಟೆನೋಗ್ರಾಫರ್ ಗ್ರೇಡ್ II ಮತ್ತು ತೆರಿಗೆ ಸಹಾಯಕ: ರೂ 25,500 - ರೂ 81,100 (ಹಂತ 4, 7ನೇ CPC)

  • ಮಲ್ಟಿ-ಟಾಸ್ಕಿಂಗ್ ಸ್ಟಾಫ್: ರೂ 18,000 - ರೂ 56,900 (ಹಂತ 1, 7ನೇ CPC)



ಆಯ್ಕೆ ಪ್ರಕ್ರಿಯೆ ಹೇಗಿರುತ್ತೆ? 

  • ಸ್ಟೆನೋಗ್ರಾಫರ್ ಗ್ರೇಡ್ II: ಕೌಶಲ್ಯ ಪರೀಕ್ಷೆ (ಡಿಕ್ಟೇಷನ್ ಮತ್ತು ಟ್ರಾನ್ಸ್‌ಕ್ರಿಪ್ಷನ್)

  • ತೆರಿಗೆ ಸಹಾಯಕ: ಡೇಟಾ ಎಂಟ್ರಿ ಕೌಶಲ್ಯ ಪರೀಕ್ಷೆ

  • ಮಲ್ಟಿ-ಟಾಸ್ಕಿಂಗ್ ಸ್ಟಾಫ್: ನೇಮಕಾತಿ ನಿಯಮಗಳ ಪ್ರಕಾರ ಆಯ್ಕೆ ನಡೆಸಲಾಗುತ್ತದೆ. ಜೊತೆಗೆ ಅಂತಿಮ ಆಯ್ಕೆಗೆ ಮೊದಲು ಅಭ್ಯರ್ಥಿಗ ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಫಿಟ್‌ನೆಸ್ ಪರೀಕ್ಷೆಗೆ ಒಳಗಾಗಬೇಕು.


ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಆದಾಯ ತೆರಿಗೆ 2025 ಅಧಿಸೂಚನೆ ಪರಿಶೀಲಿಸಿ, ಅಧಿಕೃತ ವೆಬ್‌ಸೈಟ್ https://incometaxhyderabad.gov.in/ ಮೂಲಕ ಅರ್ಜಿ ಸಲ್ಲಿಸಬಹುದು.

ರಾಜ್ಯ ಸರ್ಕಾರಿ ನೌಕರರಿಗೆ' ಗುಡ್ ನ್ಯೂಸ್ : `ಹಳೆಯ ಡಿಫೈನ್ಸ್ ಪಿಂಚಣಿ ಯೋಜನೆ' (OPS) ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ.

ದಿನಾಂಕ:01.04.2006ರ ಪೂರ್ವದಲ್ಲಿನ ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆ ಹೊಂದಿ ಆ ದಿನಾಂಕದಂದು ಅಥವಾ ತದನಂತರದಲ್ಲಿ ರಾಜ್ಯ ಸರ್ಕಾರದ ಸೇವೆಗೆ ಸೇರಿದ ನೌಕರರನ್ನು ಡಿಫೈನ್ಸ್ ಪಿಂಚಣಿ ಯೋಜನೆ ವ್ಯಾಪ್ತಿಗೆ ಒಳಪಡಿಸಲು ಸರ್ಕಾರವು ಒಪ್ಪಿಗೆಯನ್ನು ನೀಡಿ ಮೇಲೆ ಓದಲಾದ ಕ್ರಮ ಸಂಖ್ಯೆ (1)ರ ಸರ್ಕಾರಿ ಆದೇಶವನ್ನು ಹೊರಡಿಸಲಾಗಿರುತ್ತದೆ. ಈ ಆದೇಶದ ವ್ಯಾಪ್ತಿಗೊಳಪಡುವ ಸರ್ಕಾರಿ ನೌಕರರಿಂದ ದಿನಾಂಕ:30.06.2024ರೊಳಗ ಅಭಿಮತವನ್ನು ಪಡೆದು ಕ್ರೋಢೀಕೃತ ಪ್ರಸ್ತಾವನೆಯನ್ನು ಸರ್ಕಾರದ ಪರಿಶೀಲನೆಗಾಗಿ ಸಲ್ಲಿಸುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ನಿರ್ದೇಶನ ನೀಡಲಾಗಿತ್ತು.

ಮುಂದುವರೆದು, ದಿನಾಂಕ:24.01.2024ರ ಸರ್ಕಾರಿ ಆದೇಶದನ್ವಯ ಡಿಫೈನ್ಸ್ ಪಿಂಚಣಿ ಯೋಜನೆ ವ್ಯಾಪ್ತಿಗೆ ಒಳಪಡುವ ಸರ್ಕಾರಿ ಅಧಿಕಾರಿ/ನೌಕರರ ಎನ್‌.ಪಿ.ಎಸ್. ಪ್ರಾನ್ ಖಾತೆಯಲ್ಲಿ ಜಮೆಯಾಗಿರುವ ಸರ್ಕಾರದ ಹಾಗೂ ನೌಕರರ ವಂತಿಗೆಗಳನ್ನು ಹಿಂಪಡೆದು ಇತ್ಯರ್ಥಪಡಿಸಲು ಮೇಲೆ ಓದಲಾದ ಕ್ರಮ ಸಂಖ್ಯೆ (2)ರ ಸರ್ಕಾರಿ ಆದೇಶದಲ್ಲಿ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.

ಅದರಂತೆ, ದಿನಾಂಕ: 24.01.2024ರ ಸರ್ಕಾರಿ ಆದೇಶದನ್ವಯ ಸಂಬಂಧಿತ ಅಧಿಕಾರಿ/ನೌಕರರು ಚಲಾಯಿಸಿದ ಅಭಿಮತವನ್ನು ಪರಿಶೀಲಿಸಿದ ಸರ್ಕಾರವು ದಿನಾಂಕ:01.04.2006ರ ಪೂರ್ವದಲ್ಲಿನ ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆ ಹೊಂದಿ ಆ ದಿನಾಂಕದಂದು ಅಥವಾ ನಂತರದಲ್ಲಿ ರಾಜ್ಯ ಸರ್ಕಾರದ ಸೇವೆಗೆ ಸೇರಿದ ಕರ್ನಾಟಕ ಸರ್ಕಾರ ಸಚಿವಾಲಯ ಸೇವೆಗೆ ಸೇರಿದ ರಾಷ್ಟ್ರೀಯ ಪಿಂಚಣಿ ಯೋಜನೆಗೊಳಪಟ್ಟ ಅಧಿಕಾರಿ/ನೌಕರರನ್ನು ಹಳೆಯ ಡಿಫೈನ್ಸ್ ಪಿಂಚಣಿ ಯೋಜನೆಗೆ ಒಳಪಡಿಸಲು ತೀರ್ಮಾನಿಸಿ ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 38 ಎಎಬಿ 2024, ಬೆಂಗಳೂರು, ದಿನಾಂಕ:20ನೇ ಮಾರ್ಚ್ 2025.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರ ಸಚಿವಾಲಯದ ಈ ಕೆಳಕಂಡ ಅಧಿಕಾರಿ / ನೌಕರರು ದಿನಾಂಕ:01.04.2006ರ ಪೂರ್ವದಲ್ಲಿನ ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆ ಹೊಂದಿ ಆ ದಿನಾಂಕದಂದು ಅಥವಾ ನಂತರದಲ್ಲಿ ರಾಜ್ಯ ಸರ್ಕಾರದ ಸೇವೆಗೆ ಸೇರಿರುವುದರಿಂದ ದಿನಾಂಕ:24.01.2024ರ ಸರ್ಕಾರಿ ಆದೇಶ ಸಂಖ್ಯೆ: ಆಇ-ಪಿಇಎನ್/99/2023ರನ್ವಯ ಅವರನ್ನು ಡಿಫೈನ್ಸ್ ಪಿಂಚಣಿ ಯೋಜನೆಯ ವ್ಯಾಪ್ತಿಗೊಳಪಡಿಸಿ ಆದೇಶಿಸಿದೆ. ಸದರಿ ಅಧಿಕಾರಿ/ನೌಕರರಿಗೆ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯ ನಿಯಮ 2-C ಅನ್ವಯವಾಗುವುದಿಲ್ಲ ಮತ್ತು ಇವರಿಗೆ ಅದೇ ನಿಯಮಾವಳಿಯ ನಾಲ್ಕನೇಯ ಭಾಗ ಅನ್ವಯವಾಗತಕ್ಕದ್ದು.


ಗುರುವಾರ, ಮಾರ್ಚ್ 20, 2025

ವೇತನ, ಭತ್ಯೆ ಹೆಚ್ಚಳಕ್ಕೆ ತಿದ್ದುಪಡಿ ಮಸೂದೆ ಸಿದ್ಧ: ಸಚಿವರು,ಶಾಸಕರ ವೇತನ ಇಮ್ಮಡಿ

ವೇತನ, ಭತ್ಯೆ ಹೆಚ್ಚಳಕ್ಕೆ ತಿದ್ದುಪಡಿ ಮಸೂದೆ ಸಿದ್ಧ: ಸಚಿವರು,ಶಾಸಕರ ವೇತನ ಇಮ್ಮಡಿ


ಮುಖ್ಯಮಂತ್ರಿ, ಸಚಿವರು, ಶಾಸಕರು ಈಗ ಪಡೆಯುತ್ತಿರುವ ವೇತನ ಮತ್ತು ಭತ್ಯೆಯನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಲು ಸರ್ಕಾರ ಮುಂದಾಗಿದೆ.

ಶಾಸಕರ ವೇತನ ₹ 40 ಸಾವಿರದಿಂದ ₹ 80 ಸಾವಿರ, ವಿಧಾನಸಭಾಧ್ಯಕ್ಷ, ಸಚಿವರ ವೇತನ ₹ 60 ಸಾವಿರದಿಂದ ₹ 1.25 ಲಕ್ಷ, ವಿಧಾನ ಪರಿಷತ್‌ ಸಭಾಪತಿ ವೇತನ ₹ 75 ಸಾವಿರದಿಂದ ₹ 1.25 ಲಕ್ಷ, ಮುಖ್ಯಮಂತ್ರಿಯ ವೇತನ ₹ 75 ಸಾವಿರದಿಂದ ₹ 1.50 ಲಕ್ಷ ಹೆಚ್ಚಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಆ ಮೂಲಕ, ಸಿಎಂ, ಸಚಿವರು, ಶಾಸಕರ ವೇತನ ಇಮ್ಮಡಿಯಷ್ಟು ಹೆಚ್ಚಳ ಆಗಲಿದೆ.

ಶಾಸಕರು, ವಿಧಾನ ಪರಿಷತ್‌ ಸದಸ್ಯರು, ವಿಧಾನಸಭಾಧ್ಯಕ್ಷರು, ಸಭಾಪತಿ, ವಿರೋಧ ಪಕ್ಷದ ನಾಯಕರು, ಮುಖ್ಯ ಸಚೇತಕರ ವೇತನ, ಭತ್ಯೆ ಹೆಚ್ಚಳದಿಂದ ₹ 50 ಕೋಟಿ, ಮುಖ್ಯಮಂತ್ರಿ, ಸಚಿವರುಗಳ ವೇತನ ಭತ್ಯೆ ಹೆಚ್ಚಳದಿಂದ ₹ 10 ಕೋಟಿ ಸೇರಿ ರಾಜ್ಯದ ಬೊಕ್ಕಸಕ್ಕೆ ವಾರ್ಷಿಕ ₹ 62 ಕೋಟಿ ಹೆಚ್ಚುವರಿ ಹೊರೆ ಅಂದಾಜಿಸಲಾಗಿದೆ.

ವೇತನ ಮತ್ತು ವಿವಿಧ ಭತ್ಯೆಗಳನ್ನು ಹೆಚ್ಚಿಸಲು ಅವಕಾಶ ಕಲ್ಪಿಸುವ 'ಕರ್ನಾಟಕ ಮಂತ್ರಿಗಳ ಸಂಬಳಗಳು ಮತ್ತು ಭತ್ಯೆಗಳ (ತಿದ್ದುಪಡಿ) ಮಸೂದೆ 2025' ಮತ್ತು 'ಕರ್ನಾಟಕ ವಿಧಾನಮಂಡಲದವರ ಸಂಬಳಗಳು, ಪಿಂಚಣಿಗಳು ಮತ್ತು ಭತ್ಯೆಗಳ (ತಿದ್ದುಪಡಿ) ಮಸೂದೆ 2025'ರ ಸಿದ್ಧವಾಗಿದ್ದು, ಈ ಅಧಿವೇಶನದಲ್ಲಿಯೇ ಮಂಡಿಸಲು ಸರ್ಕಾರ ತಯಾರಿ ನಡೆಸಿದೆ.

'ಈ ಎರಡೂ ತಿದ್ದುಪಡಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಮೋದನೆ ನೀಡಿದ್ದಾರೆ. ಎರಡೂ ಪ್ರತ್ಯೇಕ ಮಸೂದೆಗಳಲ್ಲಿ ಆರ್ಥಿಕ ವಿಚಾರಗಳಿಗೆ ಸಂಬಂಧಿಸಿದ ಶಿಫಾರಸು‌ ಇರುವುದರಿಂದ ವಿಧಾನಮಂಡಲದಲ್ಲಿ ಮಂಡಿಸುವ ಮೊದಲು ರಾಜ್ಯಪಾಲರಿಂದ ಒಪ್ಪಿಗೆ ಪಡೆಯಬೇಕಿದೆ. ಹೀಗಾಗಿ, ರಾಜ್ಯಪಾಲರ ಒಪ್ಪಿಗೆಗಾಗಿ ಕಡತ ಸಲ್ಲಿಸಲಾಗಿದೆ' ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

'2015ರಲ್ಲಿ ಶಾಸಕರ ವೇತನ ಮತ್ತು ಭತ್ಯೆಗಳ ಪರಿಷ್ಕರಿಸಿದ ಬಳಿಕ ಬಿಜೆಪಿ ಸರ್ಕಾರದ ಅವಧಿಯಲ್ಲಿ (2022) ಮತ್ತೆ ಪರಿಷ್ಕರಿಸಲಾಗಿತ್ತು. ಅಂದು ಮಸೂದೆ ಮಂಡಿಸಿದ್ದ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ. ಮಾಧುಸ್ವಾಮಿ, ಬೆಲೆ ಸೂಚ್ಯಂಕದ ಆಧಾರದಲ್ಲಿ 2023 ಏಪ್ರಿಲ್‌ 1ರಿಂದ ಪ್ರತಿ 5 ವರ್ಷಕ್ಕೊಮ್ಮೆ ಸಂಬಳ ಹೆಚ್ಚಿಸುವ ಬಗ್ಗೆಯೂ ಮಸೂದೆಯಲ್ಲಿಯೇ ಪ್ರಸ್ತಾಪಿಸಿದ್ದರು. ಆದರೆ, ಎರಡು ವರ್ಷ ತುಂಬ ಮೊದಲೇ ಪರಿಷ್ಕರಣೆಗೆ ಶಾಸಕರ ವಲಯದಿಂದ ಬೇಡಿಕೆ ಬಂದಿತ್ತು. ಪ್ರಸಕ್ತ ಅಧಿವೇಶನದ ಮೊದಲ ದಿನ ನಡೆದಿದ್ದ ಕಲಾಪ ವ್ಯವಹಾರಗಳ ಸಮಿತಿ (ಬಿಎಸಿ) ಸಭೆಯಲ್ಲಿ ಈ ಬಗ್ಗೆ ಚರ್ಚೆಯೂ ಆಗಿತ್ತು' ಎಂದೂ ಮೂಲಗಳು ಹೇಳಿವೆ.

ಮುಖ್ಯಮಂತ್ರಿ ವೇತನ;75 ಸಾವಿರ; 1.50 ಲಕ್ಷ

ಸಚಿವರ ವೇತನ;60 ಸಾವಿರ;1.25 ಲಕ್ಷ

ಮುಖ್ಯಮಂತ್ರಿ, ಸಚಿವರಿಗೆ ಆತಿಥ್ಯ ಭತ್ಯೆ; 4.50 ಲಕ್ಷ; 5 ಲಕ್ಷ

ಸಚಿವರಿಗೆ ಮನೆ ಬಾಡಿಗೆ ಭತ್ಯೆ; 1.20 ಲಕ್ಷ;2.50 ಲಕ್ಷ

ರಾಜ್ಯ ಸಚಿವರ ವೇತನ;50 ಸಾವಿರ;75 ಸಾವಿರ

ರಾಜ್ಯ ಸಚಿವರಿಗೆ ಮನೆ ಬಾಡಿಗೆ ಭತ್ಯೆ;1.20ಲಕ್ಷ;2ಲಕ್ಷ


ಇದು ಶಾಸಕರು ಮತ್ತು ವಿಧಾನಸಭೆಗೆ ಸಂಬಂಧಿಸಿದ ಇತರ ಪ್ರಮುಖ ಅಧಿಕಾರಿಗಳಿಗೆ ವೇತನ ಮತ್ತು ಭತ್ಯೆ ಎಷ್ಟು ಹೆಚ್ಚಿಸಲಿದೆ ಎನ್ನುವ ಸಂಪೂರ್ಣ ಮಾಹಿತಿ ಮುಂದಿದೆ ಓದಿ.

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಕರ್ನಾಟಕ ಶಾಸಕಾಂಗದ ವೇತನಗಳು, ಪಿಂಚಣಿಗಳು ಮತ್ತು ಭತ್ಯೆಗಳು (ತಿದ್ದುಪಡಿ) ಮಸೂದೆ, 2025ಕ್ಕೆ ಅಂಕಿತ ಸೂಚಿಸಿದ್ದಾರೆ. ಹೀಗಾಗಿ ಶಾಸಕರು ಮತ್ತು ಎಂಎಲ್‌ಸಿಗಳು ತಮ್ಮ ವೇತನವನ್ನು ದ್ವಿಗುಣಗೊಳ್ಳಲಿದೆ. ಆದರೆ ಮುಖ್ಯಮಂತ್ರಿಯ ವೇತನವು ತಿಂಗಳಿಗೆ ರೂ. 75,000 ರಿಂದ ರೂ. 1.5 ಲಕ್ಷಕ್ಕೆ ಏರುತ್ತದೆ. ಹಣಕಾಸಿನ ನಿರ್ಬಂಧಗಳು ಮತ್ತು 2022 ರಲ್ಲಿ ಕಡ್ಡಾಯವಾಗಿ ಸ್ಥಗಿತಗೊಂಡ ವೇತನ ಹೆಚ್ಚಳವನ್ನು ಉಲ್ಲೇಖಿಸಿ ಶಾಸಕರು ಬಾಕಿ ಇರುವ ಪರಿಷ್ಕರಣೆಗಳಿಗೆ ಒತ್ತಾಯಿಸುತ್ತಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ.

ವಿಭಾಗ 3(1) ರ ಅಡಿಯಲ್ಲಿ, ವಿಧಾನ ಪರಿಷತ್ತಿನ ಅಧ್ಯಕ್ಷರು ಮತ್ತು ವಿಧಾನಸಭೆಯ ಸ್ಪೀಕರ್ ಅವರ ವೇತನವನ್ನು ರೂ. 75,000 ರಿಂದ ರೂ. 1.25 ಲಕ್ಷಕ್ಕೆ ಹೆಚ್ಚಿಸಬೇಕೆಂದು ಕರಡು ಪ್ರಸ್ತಾಪಿಸಿತ್ತು. ಇದು ರೂ. 50,000 ರಷ್ಟು ಪ್ರಸ್ತಾವಿತ ಹೆಚ್ಚಳವಾಗಿದೆ. ಮಸೂದೆಯ ಸೆಕ್ಷನ್ 10(1) ರ ಅಡಿಯಲ್ಲಿ, ಉಪಾಧ್ಯಕ್ಷ ಮತ್ತು ಉಪಸಭಾಪತಿಯ ವೇತನ ಹೆಚ್ಚಳವನ್ನು 60,000 ರೂ.ಗಳಿಂದ 80,000 ರೂ.ಗಳಿಗೆ ಹೆಚ್ಚಿಸಲಾಗಿದೆ. ಸೆಕ್ಷನ್ 10E ವಿರೋಧ ಪಕ್ಷದ ನಾಯಕನಿಗೂ ಅದೇ ಹೆಚ್ಚಳವನ್ನು ಪ್ರಸ್ತಾಪಿಸಿತ್ತು.

ಸರ್ಕಾರದ ಮುಖ್ಯ ಸಚೇತಕರಿಗೆ, ಮಸೂದೆಯಲ್ಲಿ ಪ್ರಸ್ತಾಪಿಸಲಾದ ವೇತನ ಹೆಚ್ಚಳವನ್ನು ಸೆಕ್ಷನ್ 10 ಜೆ ಅಡಿಯಲ್ಲಿ 50,000 ರೂ.ಗಳಿಂದ 70,000 ರೂ.ಗೆ ಹೆಚ್ಚಿಸಲಾಗಿದೆ. ಸೆಕ್ಷನ್ 10ಕೆ ಅಡಿಯಲ್ಲಿ ವಿರೋಧ ಪಕ್ಷದ ಮುಖ್ಯ ಸಚೇತಕರಿಗೂ ಇದೇ ಹೆಚ್ಚಳವನ್ನು ಪ್ರಸ್ತಾಪಿಸಲಾಗಿತ್ತು.

ಮಸೂದೆಗೆ ಅಂಗೀಕಾರ ದೊರೆತಿದ್ದು, ಶಾಸಕರು ಮತ್ತು ಎಂಎಲ್ಸಿಗಳಿಗೆ ಪರಿಷ್ಕೃತ ಪ್ರಯೋಜನಗಳನ್ನು 40,000 ರೂ.ಗಳಿಂದ 80,000 ರೂ.ಗೆ ದ್ವಿಗುಣಗೊಳ್ಳಲಿದೆ.

ವೇತನ, ಭತ್ಯೆಗಳ ಪ್ರಸ್ತಾವಿತ ಪರಿಷ್ಕರಣೆಗಳು

ಅಧ್ಯಕ್ಷರು ಮತ್ತು ಸ್ಪೀಕರ್

ಸಂಬಳ: ರೂ 75,000 ರಿಂದ ರೂ 1.25 ಲಕ್ಷದವರೆಗೆ [ವಿಭಾಗ 3(1)]
ಸಂಬಳ ಭತ್ಯೆ: ರೂ 4 ಲಕ್ಷದಿಂದ ರೂ 5 ಲಕ್ಷದವರೆಗೆ [ವಿಭಾಗ 3(2)]
ಮನೆ ಬಾಡಿಗೆ ಭತ್ಯೆ: ರೂ 1.6 ಲಕ್ಷದಿಂದ ರೂ 2 ಲಕ್ಷದವರೆಗೆ [ವಿಭಾಗ 4(1)]
ವಿವಿಧ ಮರುಪಾವತಿ ಭತ್ಯೆ (MRA): ರೂ 20,000 ರಿಂದ ರೂ 25,000 [ವಿಭಾಗ 4(2)]
ದಿನನಿತ್ಯ ಭತ್ಯೆ (ಹೊರ ರಾಜ್ಯ): ರೂ 3,500 ರಿಂದ ರೂ 5,000 [ವಿಭಾಗ 8(2)(d) ಮೊದಲ ನಿಬಂಧನೆ]
ವಸತಿ ಭತ್ಯೆ: ರೂ 7,000 ರಿಂದ ರೂ 10,000 [ವಿಭಾಗ 8(2)(d) ಮೊದಲ ನಿಬಂಧನೆ]

ಉಪ ಅಧ್ಯಕ್ಷರು ಮತ್ತು ಉಪಸಭಾಪತಿ

ಸಂಬಳ: 60,000 ರೂ.ಗಳಿಂದ 80,000 ರೂ.ಗಳವರೆಗೆ [ವಿಭಾಗ 10(1)]
ಸಂಬಳ ಭತ್ಯೆ: 2.5 ಲಕ್ಷ ರೂ.ಗಳಿಂದ 3 ಲಕ್ಷ ರೂ.ಗಳವರೆಗೆ [ವಿಭಾಗ 11C(2)]

ವಿರೋಧ ಪಕ್ಷದ ನಾಯಕ

ಸಂಬಳ: 60,000 ರೂ.ಗಳಿಂದ 80,000 ರೂ.ಗಳವರೆಗೆ [ವಿಭಾಗ 10E]
ಸಂಬಳ ಭತ್ಯೆ: 2.5 ಲಕ್ಷ ರೂ.ಗಳಿಂದ 3 ಲಕ್ಷ ರೂ.ಗಳವರೆಗೆ [ವಿಭಾಗ 11C(1)]

ಸರ್ಕಾರದ ಮುಖ್ಯ ಸಚೇತಕ

ಸಂಬಳ: 50,000 ರೂ.ಗಳಿಂದ 70,000 ರೂ.ಗಳವರೆಗೆ [ವಿಭಾಗ 10J]
ಸಂಬಳ ಭತ್ಯೆ: 2.5 ಲಕ್ಷ ರೂ.ಗಳಿಂದ 3 ಲಕ್ಷ ರೂ.ಗಳವರೆಗೆ [ವಿಭಾಗ 11C(2)]

ವಿರೋಧ ಪಕ್ಷದ ಮುಖ್ಯ ಸಚೇತಕ

ಸಂಬಳ: 50,000 ರೂ.ಗಳಿಂದ 70,000 ರೂ.ಗಳವರೆಗೆ [ವಿಭಾಗ 10K]
ಸಂಬಳ ಭತ್ಯೆ: 2.5 ಲಕ್ಷ ರೂ.ಗಳಿಂದ 3 ಲಕ್ಷ ರೂ.ಗಳವರೆಗೆ [ವಿಭಾಗ 11C(2)]

ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರಿಗೆ ಸೌಲಭ್ಯಗಳು

ಸಂಬಳ: 40,000 ರೂ.ಗಳಿಂದ 80,000 ರೂ.ಗಳವರೆಗೆ
ಪಿಂಚಣಿ: 50,000 ರೂ.ಗಳಿಂದ 75,000 ರೂ.ಗಳವರೆಗೆ [ವಿಭಾಗ 11A(1)]
ಹೆಚ್ಚುವರಿ ಪಿಂಚಣಿ: 5,000 ರೂ.ಗಳಿಂದ 20,000 ರೂ.ಗಳವರೆಗೆ [ವಿಭಾಗ 11A(1) ಎಂಟನೇ ನಿಬಂಧನೆ]
ಹೆಚ್ಚುವರಿ ಪ್ರಯಾಣ ಭತ್ಯೆ (ಸಹಚರರೊಂದಿಗೆ): 1 ಲಕ್ಷ ರೂ.ಗಳಿಂದ 2 ಲಕ್ಷ ರೂ.ಗಳವರೆಗೆ [ವಿಭಾಗ 11A(1) ಷರತ್ತು (ii)]
ಮಾಜಿ ಸದಸ್ಯರ ವೈದ್ಯಕೀಯ ಭತ್ಯೆ: 5,000 ರೂ.ಗಳಿಂದ 20,000 ರೂ.ಗಳವರೆಗೆ [ವಿಭಾಗ 12(c)(iii)]
ಸ್ಥಿರ ವೈದ್ಯಕೀಯ ಭತ್ಯೆ: 2,500 ರೂ.ಗಳಿಂದ 10,000 ರೂ.ಗಳವರೆಗೆ [ವಿಭಾಗ 12(ಸಿ)(iv)]
ಕ್ಷೇತ್ರ ಪ್ರಯಾಣ ಭತ್ಯೆ: ರೂ 60,000 ರಿಂದ ರೂ 80,000 ವರೆಗೆ [ವಿಭಾಗ 12(ಸಿಸಿ)]
ರೈಲ್ವೆ / ವಿಮಾನ ದರ (ವಾರ್ಷಿಕ): ರೂ 2.5 ಲಕ್ಷದಿಂದ ರೂ 3.5 ಲಕ್ಷ ವರೆಗೆ [ವಿಭಾಗ 12(ಸಿಸಿಸಿ)]
ದೂರವಾಣಿ ಶುಲ್ಕಗಳು: ರೂ 20,000 ರಿಂದ ರೂ 35,000 ವರೆಗೆ [ವಿಭಾಗ 12(ಎಚ್)(ಐ)]
ಕ್ಷೇತ್ರ ಭತ್ಯೆ: ರೂ 60,000 ರಿಂದ ರೂ 1.1 ಲಕ್ಷ ವರೆಗೆ [ವಿಭಾಗ 12(ಎಚ್)(ii)]

ಅಂಚೆ ಶುಲ್ಕಗಳು: ರೂ 5,000 ರಿಂದ ರೂ 10,000 ವರೆಗೆ [ವಿಭಾಗ 12(ಎಚ್)(iii)]

ವೈಯಕ್ತಿಕ ಸಹಾಯಕ ಮತ್ತು ರೂಮ್ ಬಾಯ್ ಸಂಬಳ: ರೂ 20,000 ರಿಂದ ರೂ 25,000 ವರೆಗೆ [ವಿಭಾಗ 12(h)(iv)]

ಸಚಿವರ ವೇತನಗಳಿಗೆ ಪ್ರಸ್ತಾವಿತ ತಿದ್ದುಪಡಿ

ಶಾಸಕರ ವೇತನದ ಜೊತೆಗೆ, ಕರ್ನಾಟಕ ಸಚಿವರ ವೇತನ ಮತ್ತು ಭತ್ಯೆ ಕಾಯ್ದೆ, 1956 ರ ಅಸ್ತಿತ್ವದಲ್ಲಿರುವ ನಿಬಂಧನೆಗಳಿಗೆ ತಿದ್ದುಪಡಿ ಮಾಡುವ ಪ್ರಸ್ತಾವನೆಯೂ ಇತ್ತು.

ವಿಭಾಗ 3 ಮುಖ್ಯಮಂತ್ರಿ ಮತ್ತು ಸಚಿವರ ವೇತನ ಮತ್ತು ಭತ್ಯೆಗಳಲ್ಲಿ ವಿವಿಧ ಹೆಚ್ಚಳಗಳನ್ನು ಪ್ರಸ್ತಾಪಿಸಿತ್ತು. ಇದು ಮುಖ್ಯಮಂತ್ರಿಗಳ ವೇತನವನ್ನು 75,000 ರೂ.ಗಳಿಂದ 1.5 ಲಕ್ಷ ರೂ.ಗಳಿಗೆ ದ್ವಿಗುಣಗೊಳಿಸಲು; ಸಚಿವರ ವೇತನವನ್ನು 60,000 ರೂ.ಗಳಿಂದ 1.25 ಲಕ್ಷ ರೂ.ಗಳಿಗೆ ಹೆಚ್ಚಿಸಿ ಮತ್ತು ಅವರ ಸಂಪ್ಚುರಿ ಭತ್ಯೆಗಳನ್ನು 4.5 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗಳಿಗೆ ಹೆಚ್ಚಿಸಲು ಪ್ರಸ್ತಾಪಿಸಿತ್ತು.

ತಿದ್ದುಪಡಿಯ ಸೆಕ್ಷನ್ 4 ಸಚಿವರ ಎಚ್‌ಆರ್‌ಎ ಅನ್ನು 1.2 ಲಕ್ಷ ರೂ.ಗಳಿಂದ 2 ಲಕ್ಷ ರೂ.ಗಳಿಗೆ ಹೆಚ್ಚಿಸಬೇಕೆಂದು ಪ್ರಸ್ತಾಪಿಸುತ್ತದೆ.

ಪ್ರಸ್ತಾವಿತ ತಿದ್ದುಪಡಿ ಈಗ ಅಂಗೀಕಾರವಾಗಿದ್ದು, ಕರ್ನಾಟಕದ ಶಾಸಕರು, ಸಚಿವರು ಮತ್ತು ವಿಧಾನಸಭಾ ನಾಯಕರ ಆರ್ಥಿಕ ಪ್ರಯೋಜನಗಳಲ್ಲಿ ಗಮನಾರ್ಹ ಹೆಚ್ಚಳವಾಗುವಂತೆ ಆಗಿದೆ.

ಇದರಿಂದಾಗಿ, ಸಿಎಂ, ಸಚಿವರು, ಶಾಸಕರು, ಸಭಾಪತಿ, ಸಭಾಧ್ಯಕ್ಷರಿಗೆ ಭರ್ಜರಿ ವೇತನ ಹೆಚ್ಚಳ ಸಂಬಂಧಿತ ತಿದ್ದುಪಡಿ ಮಸೂದೆ ವಿಧಾನಸಭೆಯಲ್ಲಿ ಮಂಡನೆಯಾಗಲಿದ್ದು, ಜನ ಪ್ರತಿನಿಧಿಗಳ ಸಂಬಳ ಭರ್ಜರಿಯಾಗಿ ಹೆಚ್ಚಾಗಲಿದೆ.

ಕರ್ನಾಟಕ ಸರ್ಕಾರವು ಮುಖ್ಯಮಂತ್ರಿ, ಸಚಿವರು ಮತ್ತು ಶಾಸಕರ ವೇತನವನ್ನು ಶೇ 100 ರಷ್ಟು ಹೆಚ್ಚಿಸಲು ಮುಂದಾಗಿದ್ದು, ಈ ಪ್ರಸ್ತಾವಕ್ಕೆ ರಾಜ್ಯಪಾಲರಿಂದ ಅನುತಿಯೂ ದೊರೆತಿದೆ. ಕಲಾಪ ವ್ಯವಹಾರಗಳ ಸಲಹಾ ಸಮಿತಿಯ ನಿರ್ಣಯದಂತೆ 'ಕರ್ನಾಟಕ ಸಚಿವರ ವೇತನ ಮತ್ತು ಭತ್ಯೆ (ತಿದ್ದುಪಡಿ) ಮಸೂದೆ 2025' ಮತ್ತು 'ಕರ್ನಾಟಕ ಶಾಸಕಾಂಗ ಸದಸ್ಯರ ವೇತನ, ಪಿಂಚಣಿ ಮತ್ತು ಭತ್ಯೆ (ತಿದ್ದುಪಡಿ) ಮಸೂದೆ 2025' ಕ್ಕೆ ರಾಜ್ಯಪಾಲರ ಅನುಮತಿ ಪಡೆಯುವಲ್ಲಿ ಸರ್ಕಾರ ಯಶಸ್ವಿಯಾಗಿದೆ. ತಿದ್ದುಪಡಿ ಮಸೂದೆಯನ್ನು ವಿಧಾನಸಭೆ ಹಾಗೂ ಪರಿಷತ್ನಲ್ಲಿ ಸರ್ಕಾರ ಮಂಡಿಸಲಿದ್ದು ಅನುಮೋದನೆ ಪಡೆಯಲಿದೆ. ಪರಿಣಾಮವಾಗಿ ಮುಖ್ಯಮಂತ್ರಿಗಳು, ಸಚಿವರು ಹಾಗೂ ಶಾಸಕರ ವೇತನ ಮತ್ತು ಭತ್ಯೆಗಳಲ್ಲಿ ಹೆಚ್ಚಳವಾಗಲಿದೆ.

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಕರ್ನಾಟಕ ಶಾಸಕಾಂಗದ ವೇತನಗಳು, ಪಿಂಚಣಿಗಳು ಮತ್ತು ಭತ್ಯೆಗಳು (ತಿದ್ದುಪಡಿ) ಮಸೂದೆ, 2025ಕ್ಕೆ ಅಂಕಿತ ಸೂಚಿಸಿದ್ದಾರೆ. ಹೀಗಾಗಿ ಶಾಸಕರು ಮತ್ತು ಎಂಎಲ್‌ಸಿಗಳ ವೇತನ ದ್ವಿಗುಣಗೊಳ್ಳಲಿದೆ. ಆದರೆ ಮುಖ್ಯಮಂತ್ರಿಯ ವೇತನವು ತಿಂಗಳಿಗೆ ರೂ. 75,000 ರಿಂದ ರೂ. 1.5 ಲಕ್ಷಕ್ಕೆ ಏರುತ್ತದೆ. ವಿಧಾನ ಪರಿಷತ್ತಿನ ಅಧ್ಯಕ್ಷರು ಮತ್ತು ವಿಧಾನಸಭೆಯ ಸ್ಪೀಕರ್ ಅವರ ವೇತನವನ್ನು ರೂ. 75,000 ರಿಂದ ರೂ. 1.25 ಲಕ್ಷಕ್ಕೆ ಹೆಚ್ಚಿಸಬೇಕೆಂದು ಕರಡು ಪ್ರಸ್ತಾಪಿಸಿತ್ತು. ಇದು ರೂ. 50,000 ರಷ್ಟು ಪ್ರಸ್ತಾವಿತ ಹೆಚ್ಚಳವಾಗಿದೆ. ಮಸೂದೆಯ ಸೆಕ್ಷನ್ 10(1) ರ ಅಡಿಯಲ್ಲಿ, ಉಪಾಧ್ಯಕ್ಷ ಮತ್ತು ಉಪಸಭಾಪತಿಯ ವೇತನ ಹೆಚ್ಚಳವನ್ನು 60,000 ರೂ.ಗಳಿಂದ 80,000 ರೂ.ಗಳಿಗೆ ಹೆಚ್ಚಿಸಲಾಗಿದೆ.

ಕರ್ನಾಟಕ ಜನಪ್ರತಿನಿಧಿಗಳ ವೇತನ, ಭತ್ಯೆ ಎಷ್ಟು ಹೆಚ್ಚಳ?

ಸಿಎಂ - 75,000 ದಿಂದ 1,50,000

ಸಚಿವರು - 60,000 ದಿಂದ 1.25 ಲಕ್ಷ

ಶಾಸಕರು - 40,000 ದಿಂದ 80,000

ಸ್ಪೀಕರ್ - 75,000 ದಿಂದ 1.25 ಲಕ್ಷ

ಸಭಾಪತಿ - 75,000 ದಿಂದ 1.25 ಲಕ್ಷ

ಸಿಎಂ, ಸಚಿವರ ಆತಿಥ್ಯ ಭತ್ಯೆ - 4.50 ಲಕ್ಷದಿಂದ 5 ಲಕ್ಷ

ಸಚಿವರ ಮನೆ ಬಾಡಿಗೆ ಭತ್ಯೆ - 1.20 ಲಕ್ಷದಿಂದ 2.50 ಲಕ್ಷ

ಪಿಂಚಣಿ - 50,000 ದಿಂದ 75,000

ಹೆಚ್ಚುವರಿ ಪಿಂಚಣಿ - 5,000 ರಿಂದ 20,000 ರೂ

ಅಧ್ಯಕ್ಷರು ಮತ್ತು ಸ್ಪೀಕರ್

ಸಂಬಳ: ರೂ 75,000 ರಿಂದ ರೂ 1.25 ಲಕ್ಷದವರೆಗೆ

ಸಂಬಳ ಭತ್ಯೆ: ರೂ 4 ಲಕ್ಷದಿಂದ ರೂ 5 ಲಕ್ಷದವರೆಗೆ

ಮನೆ ಬಾಡಿಗೆ ಭತ್ಯೆ: ರೂ 1.6 ಲಕ್ಷದಿಂದ ರೂ 2 ಲಕ್ಷದವರೆಗೆ

ವಿವಿಧ ಮರುಪಾವತಿ ಭತ್ಯೆ (MRA): ರೂ 20,000 ರಿಂದ ರೂ 25,000

ದಿನನಿತ್ಯ ಭತ್ಯೆ (ಹೊರ ರಾಜ್ಯ): ರೂ 3,500 ರಿಂದ ರೂ 5,000

ವಸತಿ ಭತ್ಯೆ: ರೂ 7,000 ರಿಂದ ರೂ 10,000

ಉಪ ಅಧ್ಯಕ್ಷರು ಮತ್ತು ಉಪಸಭಾಪತಿ

ಸಂಬಳ: 60,000 ರೂ.ಗಳಿಂದ 80,000 ರೂ.ಗಳವರೆ

ಸಂಬಳ ಭತ್ಯೆ: 2.5 ಲಕ್ಷ ರೂ.ಗಳಿಂದ 3 ಲಕ್ಷ ರೂ.ಗಳವರೆಗೆ

ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರಿಗೆ ಸೌಲಭ್ಯಗಳು

ಸಂಬಳ: 40,000 ರೂ.ಗಳಿಂದ 80,000 ರೂ.ಗಳವರೆಗೆ

ಪಿಂಚಣಿ: 50,000 ರೂ.ಗಳಿಂದ 75,000 ರೂ.ಗಳವರೆಗೆ

ಹೆಚ್ಚುವರಿ ಪಿಂಚಣಿ: 5,000 ರೂ.ಗಳಿಂದ 20,000 ರೂ.ಗಳವರೆಗೆ

ಹೆಚ್ಚುವರಿ ಪ್ರಯಾಣ ಭತ್ಯೆ (ಸಹಚರರೊಂದಿಗೆ): 1 ಲಕ್ಷ ರೂ.ಗಳಿಂದ 2 ಲಕ್ಷ ರೂ.ಗಳವರೆಗೆ

ಮಾಜಿ ಸದಸ್ಯರ ವೈದ್ಯಕೀಯ ಭತ್ಯೆ: 5,000 ರೂ.ಗಳಿಂದ 20,000 ರೂ.ಗಳವರೆಗೆ

ಸ್ಥಿರ ವೈದ್ಯಕೀಯ ಭತ್ಯೆ: 2,500 ರೂ.ಗಳಿಂದ 10,000 ರೂ.ಗಳವರೆಗೆ

ಕ್ಷೇತ್ರ ಪ್ರಯಾಣ ಭತ್ಯೆ: ರೂ 60,000 ರಿಂದ ರೂ 80,000 ವರೆಗೆ

ರೈಲ್ವೆ / ವಿಮಾನ ದರ (ವಾರ್ಷಿಕ): ರೂ 2.5 ಲಕ್ಷದಿಂದ ರೂ 3.5 ಲಕ್ಷ ವರೆಗೆ

ದೂರವಾಣಿ ಶುಲ್ಕಗಳು: ರೂ 20,000 ರಿಂದ ರೂ 35,000 ವರೆಗೆ

ಕ್ಷೇತ್ರ ಭತ್ಯೆ: ರೂ 60,000 ರಿಂದ ರೂ 1.1 ಲಕ್ಷ ವರೆಗೆ

ಅಂಚೆ ಶುಲ್ಕಗಳು: ರೂ 5,000 ರಿಂದ ರೂ 10,000 ವರೆಗೆ


ಬುಧವಾರ, ಮಾರ್ಚ್ 19, 2025

ನಿವೃತ್ತಿ ಹೊಂದುವ `ರಾಜ್ಯ ಸರ್ಕಾರಿ ನೌಕರರ ಪಿಂಚಣಿ ಅರ್ಜಿ' : ಅಧಿಕಾರಿಗಳು ಅನುಸರಿಸಬೇಕಾದ ಕ್ರಮಗಳ ಕುರಿತು ಇಲ್ಲಿದೆ ಮಾಹಿತಿ

ಡಿಡಿಓ ರವರು ನಿವೃತ್ರ/ಸ್ವ-ಇಚ್ಛಾ ನಿವೃತ್ತಿ ಹೊಂದುವ ನೌಕರರ ಪಿಂಚಣಿ ಅರ್ಜಿಗಳನ್ನು ಖಜಾನೆ-2 ರ ತಂತ್ರಾಂಶದ ಮುಖಾಂತರ ಮಂಜೂರು ಮಾಡುವುದು ಮತ್ತು ನಿಯಮಗಳ ಅನುಸಾರ ಭೌತಿಕ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ಮಹಾಲೇಖಪಾಲರಿಗೆ ಸಲ್ಲಿಸುವುದು. ಭೌತಿಕ ಅರ್ಜಿಗಳನ್ನು ಸಲ್ಲಿಸುವ ಮುಖ ಪುಟದಲ್ಲಿ ಖಜಾನೆ-2 ರಲ್ಲಿ ಸೃಜನೆಗೊಳ್ಳುವ Case Number ನಮೂದಿಸಿ ಹಾಗೂ Form-7 ಮತ್ತು Form 7A ಅನ್ನು ಕಡ್ಡಾಯವಾಗಿ ಲಗತ್ತಿಸಿ ಸಲ್ಲಿಸಬೇಕಾಗಿರುತ್ತದೆ.

b. ಡಿಡಿಓ ರವರು ಮೇಲಿನ ಕ್ರ.ಸಂ 1(a) ಪಿಂಚಣಿ ಅರ್ಜಿಗಳನ್ನು ಹೊರತುಪಡಿಸಿ ಇತರೆ ಪಿಂಚಣಿ ಅರ್ಜಿಗಳನ್ನು (ಉದಾ: ಕುಟುಂಬ ಪಿಂಚಣಿ) ನಿಯಮಾನುಸಾರ ಈ ಹಿಂದಿನಂತೆ ಮಹಾಲೇಖಪಾಲರಿಗೆ ಸಲ್ಲಿಸುವುದು.

c. ಡಿಡಿಓ ರವರಿಗೆ ಖಜಾನೆ-2 ರ ತಂತ್ರಾಂಶದ ಮುಖಾಂತರ ಅರ್ಜಿ ಸಲ್ಲಿಸಲು ಯಾವುದೇ ಸಮಸ್ಯೆ ಎದುರಾದಲ್ಲಿ ಸರಿಪಡಿಸಿಕೊಳ್ಳುವುದು. ಸಂಬಂದಪಟ್ಟ ಖಜಾನೆಯನ್ನು ಸಂಪರ್ಕಿಸಿ

d. ಡಿಡಿಓ ರವರು ಖಜಾನೆ-2 ರ ತಂತ್ರಾಂಶದಲ್ಲಿ ಅರ್ಜಿಗಳನ್ನು ಸಿದ್ಧಪಡಿಸುವಾಗ HRMS ಅನುಕಲನದ ಮುಖಾಂತರ ಸ್ವೀಕೃತವಾಗುವ ದತ್ತಾಂಶದಲ್ಲಿ ಯಾವುದೇ ತಪ್ಪಿದ್ದಲ್ಲಿ HRMS ನಲ್ಲಿ ಸರಿಪಡಿಸಿಕೊಂಡು ಮತ್ತೊಮ್ಮೆ ದತ್ತಾಂಶವನ್ನು ಸೆಳೆಯಬಹುದಾಗಿದೆ.

2. ಮಹಾಲೇಖಪಾಲರು

a. ಡಿಡಿಓ ರವರು ಖಜಾನೆ-2ರ ಆನ್‌ಲೈನ್ ಮುಖಾಂತರ ಸಲ್ಲಿಸುವ ಅರ್ಜಿಯನ್ನು ಭೌತಿಕವಾಗಿ ಸ್ವೀಕರಿಸುವ ಅರ್ಜಿಯೊಂದಿಗೆ ಪರಿಶೀಲಿಸಿ ಪಿಂಚಣಿ ಪ್ರಾಧೀಕರಿಸುವುದು.

b. ಪಿಂಚಣಿ ಪಾವತಿ ಆದೇಶ, ನಿವೃತ್ತಿ ಉಪದಾನ ಮತ್ತು ಪರಿವರ್ತಿತ ಪಿಂಚಣಿ ಆದೇಶಗಳನ್ನು (CVP) XML ಮತ್ತು PDF ಮಾದರಿಯಲ್ಲಿ ಖಜಾನೆಯ SFTP ನಲ್ಲಿ place ಮಾಡುವುದು.

3. ಖಜಾನೆ

a. ಮಹಾಲೇಖಪಾಲರಿಂದ ಸ್ವೀಕೃತವಾದ ಪಿಂಚಣಿ ಪಾವತಿ ಆದೇಶದನ್ವಯ ನಿಯಮಾನುಸಾರ ಕ್ರಮವಹಿಸಿ ಪ್ರಥಮ ಪಿಂಚಣಿ ಪಾವತಿಸುವುದು ಮತ್ತು ಮಾಹೆಯಾನ ಪಾವತಿಗಾಗಿ ಸಂಬಂಧಪಟ್ಟ Agency Bank ಮುಖಾಂತರ ಸಿ.ಪಿ.ಪಿ.ಸಿ. ರವರಿಗೆ ಹಿಂದಿನಂತೆ ವರ್ಗಾಯಿಸುವುದು.

4. ಸಿ.ಪಿ.ಪಿ.ಸಿ (ಸಾರ್ವಜನಿಕ ಕ್ಷೇತ್ರ ಬ್ಯಾಂಕುಗಳು)

a. ಯಾವುದೇ ಬದಲಾವಣೆ ಇರುವುದಿಲ್ಲ. ಸರ್ಕಾರಿ ಆದೇಶ ಸಂಖ್ಯೆ: ಆಇ 8 ಟಿಟಿಸಿ 1984, ದಿನಾಂಕ: 26.3.1986 ಮತ್ತು ತದನಂತರದ ತಿದ್ದುಪಡಿ ಕ್ರಮವಹಿಸುವುದು.

ತಂತ್ರಾಂಶದ ಮುಖಾಂತರ ಪಿಂಚಣಿ ಅರ್ಜಿಗಳನ್ನು ಮಹಾಲೇಖಪಾಲರಿಗೆ ಸಲ್ಲಿಸಲು ಮುಂದುವರೆಸುವುದು.

ಖಜಾನೆ-2ರ ತಂತ್ರಾಂಶದ ಮುಖಾಂತರ ವಯೋ ನಿವೃತ್ತಿ/ಸ್ವ-ಇಚ್ಛಾ ನಿವೃತ್ತಿ ಹೊಂದುವ ನೌಕರರ ಪಿಂಚಣಿ ಅರ್ಜಿಗಳನ್ನು ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿ ವಿವಿಧ ಪಾತ್ರದಾರಿಗಳು ಅನುಸರಿಸಬೇಕಾದ ಕ್ರಮಗಳನ್ನು ಈ ಆದೇಶದ ಅನುಬಂಧದಲ್ಲಿ ಲಗತ್ತಿಸಿದೆ.

ರಾಜ್ಯ ಸರ್ಕಾರದಿಂದ ಮಹತ್ವದ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ 2025 ಮಂಡನೆ.!

ಇಲ್ಲಿ ಇನ್ನು ಮುಂದೆ ಕಂಡುಬರುವ ಉದ್ದೇಶಗಳಿಗಾಗಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ನ್ನು (1993ರ ಕರ್ನಾಟಕ ಅಧಿನಿಯಮ ಸಂಖ್ಯೆ 14) ಮತ್ತಷ್ಟು ತಿದ್ದುಪಡಿ ಮಾಡುವುದು ಯುಕ್ತವಾಗಿರುವುದರಿಂದ;
ಇದು ಭಾರತ ಗಣರಾಜ್ಯದ ಎಪ್ಪತ್ತಾರನೇ ವರ್ಷದಲ್ಲಿ ಕರ್ನಾಟಕ ರಾಜ್ಯ ವಿಧಾನ ಮಂಡಲದಿಂದ ಈ ಮುಂದಿನಂತೆ ಅಧಿನಿಯಮಿತವಾಗಲಿ,-
1. ಸಂಕ್ಷಿಪ್ತ ಹೆಸರು ಮತ್ತು ಪ್ರಾರಂಭ.- (1) ಈ ಅಧಿನಿಯಮವನ್ನು ಕರ್ನಾಟಕ ಗ್ರಾಮ ಸ್ವರಾಜ್
ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ಅಧಿನಿಯಮ, 2025 ಎಂದು ಕರೆಯತಕ್ಕದ್ದು.
(2) ಇದು ಈ ಕೂಡಲೇ ಜಾರಿಗೆ ಬರತಕ್ಕದ್ದು.
2. 199ಬಿ ಮತ್ತು 199ಸಿ ಹೊಸ ಪ್ರಕರಣಗಳ ಸೇರ್ಪಡೆ.- ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 (1993ರ ಕರ್ನಾಟಕ ಅಧಿನಿಯಮ 14)ರ 199ಎ ಪ್ರಕರಣದ ತರುವಾಐ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-
“199ಬಿ. ಸ್ವತ್ತುಗಳಿಗಾಗಿ ಹೊಸ ಖಾತಾ ಅಥವಾ ಪಿಐಡಿ-ಯನ್ನು ನೀಡುವುದು. (1) ಈ
ಅಧಿನಿಯಮದಲ್ಲಿ ಏನೇ ಒಳಗೊಂಡಿದ್ದರೂ, ಕಟ್ಟಡ ನಿರ್ಮಾಣದ ಉದ್ದೇಶಗಳಿಗಾಗಿ ಇರುವ ಕಟ್ಟಡ ನಿವೇಶನಗಳಿಗಾಗಿ ಹೊಸ ಖಾತಾ ಅಥವಾ ಪಿಐಡಿ-ಯನ್ನು ನೀಡಲು, ಗ್ರಾಮ ಪಂಚಾಯತಿ ಅಥವಾ ಸರ್ಕಾರವು ಅಧಿಸೂಚನೆಯ ಮೂಲಕ ಗೊತ್ತುಪಡಿಸಲಾದ ಪ್ರಾಧಿಕಾರಿಗಳು, ಅಧಿಕಾರವ್ಯಾಪ್ತಿಯ ಯೋಜನಾ ಪ್ರಾಧಿಕಾರದ ಮೂಲಕ ಲೇಔಟ್ ಪ್ಲಾನಿಗಾಗಿ ಪೂರ್ವಾನುಮೋದನೆಯನ್ನು ಪಡೆದುಕೊಳ್ಳತಕ್ಕದ್ದು.
(2) ಗ್ರಾಮ ಪಂಚಾಯತಿ ಪ್ರದೇಶಗಳು ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಅಧಿನಿಯಮ, 1961 (1963ರ ಕರ್ನಾಟಕ ಅಧಿನಿಯಮ 11)ರ ಉಪಬಂಧಗಳ ಮೇರೆಗೆ ಅಧಿಸೂಚಿಸಲಾದ ಸ್ಥಳೀಯ ಯೋಜನಾ ಪ್ರದೇಶದ ಅಧಿಕಾರವ್ಯಾಪ್ತಿಯಡಿ ಬರುವ ಸಂದರ್ಭದಲ್ಲಿ, ಅನುಮೋದಿತ ಲೇಔಟ್ ಪ್ಲಾನನ್ನು ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಅಧಿನಿಯಮ, 1961 (1963ರ ಕರ್ನಾಟಕ ಅಧಿನಿಯಮ 11)ರ 17ನೇ ಪ್ರಕರಣದಡಿ ಅಧಿಕಾರ ವ್ಯಾಪ್ತಿಯ ಯೋಜನಾ ಪ್ರಾಧಿಕಾರದಿಂದ ಪಡೆಯತಕ್ಕದ್ದು ಮತ್ತು ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಅಧಿನಿಯಮ, 1961 (1963ರ ಕರ್ನಾಟಕ
ಅಧಿನಿಯಮ 11)ರ 17ನೇ ಪ್ರಕರಣ ಮತ್ತು 17ನೇ ಪ್ರಕರಣದ 2(ಇ) ಉಪ-ಪ್ರಕರಣದ ಉಪಬಂಧಗಳನ್ನು ಪಾಲಿಸದೇ ಯಾವುದೇ ಹೊಸ ಪಿಐಡಿ ಅಥವಾ ಖಾತಾವನ್ನು ನೀಡತಕ್ಕದ್ದಲ್ಲ.
(3) ಗ್ರಾಮ ಪಂಚಾಯತಿ ಪ್ರದೇಶಗಳು ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಅಧಿನಿಯಮ, 1961 (1963ರ ಕರ್ನಾಟಕ ಅಧಿನಿಯಮ11)ರ ಉಪಬಂಧಗಳ ಮೇರೆಗೆ ರಚಿಸಲಾದ ಸ್ಥಳೀಯ ಯೋಜನಾ ಪ್ರದೇಶದ ಅಧಿಕಾರವ್ಯಾಪ್ತಿಯಡಿ ಒಳಗೊಳ್ಳದಿರುವ ಸಂದರ್ಭದಲ್ಲಿ ಅನುಮೋದಿತ ಲೇಔಟ್ ಪ್ಲಾನನ್ನು ಪಟ್ಟಣ ಮತ್ತು ನಗರ ಯೋಜನೆ ನಿರ್ದೇಶಕ ಅಥವಾ ನಿರ್ದೇಶಕನು, ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಅಧಿನಿಯಮ, 1961 (1963ರ ಕರ್ನಾಟಕ ಅಧಿನಿಯಮ 11)ರ 4 ಕೆ ಪ್ರಕರಣದ (2) ಉಪ-ಪ್ರಕರಣದಡಿ ಅಧಿಕೃತಗೊಳಿಸಿದ ಸಹಾಯಕ ನಿರ್ದೇಶಕ, ಪಟ್ಟಣ ಮತ್ತು ನಗರ ಯೋಜನೆ ದರ್ಜೆಗೆ ಕಡಿಮೆಯಲ್ಲದ ಅಧಿಕಾರಿಯಿಂದ ಪಡೆದುಕೊಳ್ಳತಕ್ಕದ್ದು, ಮತ್ತು ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನ ಅಧಿನಿಯಮ, 1961 (1963ರ ಕರ್ನಾಟಕ ಅಧಿನಿಯಮ 11)ರ ಉಪಬಂಧಗಳನ್ನು ಪಾಲಿಸದೇ ಯಾವುದೇ ಹೊಸ ಪಿಐಡಿ ಅಥವಾ ಖಾತಾವನ್ನು ನೀಡತಕ್ಕದ್ದಲ್ಲ:

ಪರಂತು ಗ್ರಾಮ ಪಂಚಾಯಿತಿಯ ಯಾರೇ ಅಧಿಕಾರಿ ಅಥವಾ ಪ್ರಾಧಿಕಾರಿಯು ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಅಧಿನಿಯಮ, 1961 (1963ರ ಕರ್ನಾಟಕ ಅಧಿನಿಯಮ11)ರ ಸದರಿ ಉಪಬಂಧಗಳನ್ನು ಪಾಲಿಸಲು ವಿಫಲನಾದರೆ ಮತ್ತು ಕಾನೂನುಬದ್ದವಾಗಿಲ್ಲದೆ ರಚಿತವಾದ ನಿವೇಶನಕ್ಕೆ ಹೊಸ ಪಿಐಡಿ ಅಥವಾ ಖಾತಾವನ್ನು ನೀಡಿದರೆ, ಸಂಬಂಧಪಟ್ಟ ಅಧಿಕಾರಿ ಅಥವಾ ಸಿಬ್ಬಂದಿ ಅಥವಾ ಪ್ರಾಧಿಕಾರಿಯು ನಿಯಮಿಸಬಹುದಾದಂಥ ದಂಡನೆ ಅಥವಾ ಶಿಕ್ಷೆಗೆ ಹೊಣೆಗಾರನಾಗಿರತಕ್ಕದ್ದು.

199ಸಿ. ಕಟ್ಟಡ ಮತ್ತು ಪರಿವರ್ತನೆಯಾಗದಿರುವ ಭೂಮಿ ಅಥವಾ ಪರಿವರ್ತನೆಯಾದ ಭೂಮಿ ಆದರೆ ಕಂದಾಯ ಭೂಮಿಯಲ್ಲಿನ ಅನುಮೋದಿತವಲ್ಲದ ಬಡಾವಣೆಯ ಮೇಲಿನ ತೆರಿಗೆಗಳು. (1) ಗ್ರಾಮ ಪಂಚಾಯಿತಿಯು ಮಾದರಿ ಕಟ್ಟಡ ಉಪವಿಧಿಗಳ ಉಪಬಂಧಗಳನ್ನು ಉಲ್ಲಂಘಿಸಿ ನಿರ್ಮಿಸಲಾದ ಕಟ್ಟಡ ಅಥವಾ ಪರಿವರ್ತನೆಯಾಗದಿರುವ ಭೂಮಿ ಅಥವಾ ಪರಿವರ್ತನೆಯಾದ ಭೂಮಿ ಆದರೆ ಕಂದಾಯ ಭೂಮಿಯ ಮೇಲಿನ ಅನುಮೋದಿತವಲ್ಲದ ಲೇಔಟ್ ಅಥವಾ ಅದಿಭೋಗ ಅಥವಾ ಪೂರ್ಣಗೊಳಿಸಿದ ಪ್ರಮಾಣ ಪತ್ರವನ್ನು ಪಡೆಯದೆ ಸ್ವಾಧೀನ ಪಡಿಸಿಕೊಂಡ ಕಟ್ಟಡವನ್ನು ಒಳಗೊಂಡು ಪ್ರತಿಯೊಂದು ಕಟ್ಟಡ, ಖಾಲಿ ಭೂಮಿ ಅಥವಾ ಅವೆರಡರಿಂದಲೂ, ಈ ಉಪಬಂಧವನ್ನು ಸೇರಿಸಲಾದ ದಿನಾಂಕಕ್ಕೆ ಮೊದಲು ಸೃಜಿಸಲಾದ ಸ್ವತ್ತುಗಳಿಗೆ ಮಾತ್ರ ಸರ್ಕಾರಿ ಭೂಮಿ, ಅರಣ್ಯ ಭೂಮಿ, ಸರ್ಕಾರದ ಒಡೆತನದಲ್ಲಿರುವ ಅಥವಾ ನಿಯಂತ್ರಣದಲ್ಲಿರುವ ಯಾವುದೇ ಸ್ಥಳೀಯ ನಿಕಾಯ, ಯಾವುದೇ ಶಾಸನಬದ್ಧ ನಿಕಾಯ ಅಥವಾ ಸಂಸ್ಥೆಗೆ ಸೇರಿದ ಭೂಮಿಯನ್ನು ಹೊರತುಪಡಿಸಿ ಸ್ವತ್ತು ತೆರಿಗೆಯನ್ನು ವಿಧಿಸಬಹುದು ಮತ್ತು ಸಂಗ್ರಹಿಸಬಹುದು.ಅಂಥ ಕಟ್ಟಡ ಅಥವಾ ನಿವೇಶನಕ್ಕಾಗಿ ವಿಧಿಸಿದ ಸ್ವತ್ತು ತೆರಿಗೆಯು ಮೊದಲ ವರ್ಷಕ್ಕಾಗಿ ಪಾವತಿಸಬೇಕಾದ ತೆರಿಗೆಯು ಎರಡು ಪಟ್ಟಾಗಿರತಕ್ಕದ್ದು:

ಮತ್ತು ತರುವಾಯ ವರ್ಷಗಳಿಗಾಗಿ ಸ್ವತ್ತು ತೆರಿಗೆಯನ್ನು ಮಾತ್ರ ವಿಧಿಸತಕ್ಕದ್ದು, ಅದನ್ನು ಪ್ರತ್ಯೇಕ ರಿಜಿಸ್ಟರಿನಲ್ಲಿ ನಿರ್ವಹಿಸತಕ್ಕದ್ದು, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ)
ಅಧಿನಿಯಮ, 2025ರ ಪ್ರಾರಂಭದ ದಿನಾಂಕದ ತರುವಾಯ ರಿಜಿಸ್ಟರ್ ನಲ್ಲಿ ಯಾವುದೇ ಹೊಸ ಸ್ವತ್ತನ್ನು
ನಮೂದಿಸತಕ್ಕದ್ದಲ್ಲ;

ಪರಂತು ಅಂಥ ಕಟ್ಟಡ ಅಥವಾ ಖಾಲಿ ಭೂಮಿಯಿಂದ ಈ ಉಪ-ಪ್ರಕರಣದಡಿ ವಿಧಿಸಲಾದ ಮತ್ತು ಸಂಗ್ರಹಿಸಲಾದ ಸ್ವತ್ತು ತೆರಿಗೆಯ, ಅಂಥ ಕಟ್ಟಡ ಅಥವಾ ಖಾಲಿ ಭೂಮಿಗೆ ಮಾಡಿದ ಉಲ್ಲಂಘನೆಯನ್ನು ಸಕ್ರಮಗೊಳಿಸುವ ಯಾವುದೇ ಹಕ್ಕು, ಅಥವಾ ಹಕ್ಕುಸ್ವಾಮ್ಯ ಮಾಲೀಕತ್ವ ಅಥವಾ ಕಾನೂನುಬದ್ಧ ಸ್ನಾನಮಾನವನ್ನು ಪ್ರದತ್ತಗೊಳಿಸುವುದಿಲ್ಲ ಅಂಥ ಕಟ್ಟಡ ಅಥವಾ ಖಾಲಿ ಭೂಮಿಯನ್ನು ಹೊಂದಿರುವ ವ್ಯಕ್ತಿಗಳನ್ನು ಕಾನೂನು ಉಲ್ಲಂಘನೆಗಾಗಿ ಈ ಅಧಿನಿಯಮ ಅಥವಾ ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನ ಉಪಬಂಧಗಳಿಗೆ ಅನುಸಾರವಾಗಿ ಕಾನೂನುಬದ್ಧ ಕ್ರಮಕ್ಕೆ ಯಾವಾಗಲೂ ಹೊಣೆಗಾರರಾಗಿರತಕ್ಕದ್ದು.
(2) ಹಿರಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಅಥವಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯು (1)ನೇ ಉಪ-ಪ್ರಕರಣದಲ್ಲಿ ನಿರ್ಧಿಷ್ಟಪಡಿಸಿದಂತೆ ದಾಖಲೆಗಳನ್ನು ನಿರ್ವಹಿಸತಕ್ಕದ್ದು, ಅದು ಈ ಪ್ರಕರಣದಡಿ ತೆರಿಗೆಗೊಳಗಾದ ಕಾನೂನುಬದ್ಧ ಕಟ್ಟಡಗಳ, ಅಥವಾ ಖಾಲಿ ಭೂಮಿಗಳ ಹಾಗೂ ಕಾನೂನುಬದ್ಧವಲ್ಲದ ಕಟ್ಟಡಗಳ, ಅಥವಾ ಖಾಲಿ ಭೂಮಿಗಳ ವಿವರಗಳನ್ನು ಒಳಗೊಂಡಿರತಕ್ಕದ್ದು.

3. ತೊಂದರೆಗಳನ್ನು ನಿವಾರಿಸುವ ಅಧಿಕಾರ.- ಈ ಅಧಿನಿಯಮದ ಉಪಬಂಧಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಯಾವುದೇ ತೊಂದರೆ ಉದ್ಭವಿಸಿದಲ್ಲಿ, ರಾಜ್ಯ ಸರ್ಕಾರವು ಸರ್ಕಾರಿ ರಾಜಪತ್ರದಲ್ಲಿ ಪ್ರಕಟಿಸಿದ ಆದೇಶದ ಮೂಲಕ, ತೊಂದರೆಗಳನ್ನು ನಿವಾರಿಸಲು ತನಗೆ ಅವಶ್ಯಕ ಅಥವಾ ಯುಕ್ತವೆಂದು ಕಂಡುಬರುವ ಮತ್ತು ಈ ಅಧಿನಿಯಮದ ಉದ್ದೇಶಗಳಿಗೆ ಅಸಂಗತವಾಗಿದಂಥ ಉಪಬಂಧಗಳನ್ನು ರಚಿಸಬಹುದು:
ಪರಂತು, ಅಂಥ ಯಾವ ಆದೇಶವನ್ನು, ಈ ಅಧಿನಿಯಮವು ಪ್ರಾರಂಭವಾದ ದಿನಾಂಕದಿಂದ ಎರಡು ವರ್ಷಗಳ ಅವಧಿಯು ಮುಕ್ತಾಯಗೊಂಡ ತರುವಾಯ ಮಾಡತಕ್ಕದ್ದಲ್ಲ.
(2) ಉಪಪ್ರಕರಣ(1)ರಡಿ ಮಾಡಲಾದ ಪ್ರತಿಯೊಂದು ಆದೇಶವನ್ನು ವಿಧಾನಮಂಡಲದ ಪ್ರತಿಯೊಂದು ಸದನದ ಮುಂದೆ ಸಾಧ್ಯವಾದಷ್ಟು ಬೇಗನೇ ಮಂಡಿಸತಕ್ಕದ್ದು.

      \\

'ರಾಜ್ಯ ಸರ್ಕಾರಿ' ನೌಕರರೇ ಗಮನಿಸಿ : 'ಆರೋಗ್ಯ ಸಂಜೀವಿನಿ' ಯೋಜನೆಗೆ ಕುಟುಂಬದ ಯಾರೆಲ್ಲಾ ಅರ್ಹ? ಇಲ್ಲಿದೆ ಮಾಹಿತಿ

ಯೋಜನೆಗೆ ಅರ್ಹ ಅವಲಂಬಿತರು ಯಾರು?

ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು 1963 ರ ನಿಯಮ 2ರಲ್ಲಿನ "ಕುಟುಂಬ" (Family) ಅಂದರೆ,

ಸರ್ಕಾರಿ ನೌಕರರ ಪತಿ ಅಥವಾ ಪತ್ನಿ

b. ತಂದೆ ಮತ್ತು ತಾಯಿ (ಮಲತಾಯಿಯನ್ನೊಳಗೊಂಡಂತೆ) ಅವರು ಸರ್ಕಾರಿ ನೌಕರನೊಂದಿಗೆ ಸಾಮನ್ಯವಾಗಿ ವಾಸವಾಗಿದ್ದಲ್ಲಿ ಮತ್ತು ಅವರ ಒಟ್ಟು ಮಾಸಿಕ ಆದಾಯ -ಕುಟುಂಬ ಪಿಂಚಣಿ ರೂ. 8,500/- ಹಾಗೂ ಚಾಲ್ತಿಯಲ್ಲಿದ್ದ ತುಟ್ಟಿಭತ್ಯೆಯನ್ನು ಒಳಗೊಂಡ ಮೊತ್ತವನ್ನು ಮೀರಬಾರದು.

C. ಸರ್ಕಾರಿ ನೌಕರನ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿರಬೇಕು ಮಕ್ಕಳು (ದತ್ತು ಪಡೆದ ಮಕ್ಕಳು ಮತ್ತು ಮಲ ಮಕ್ಕಳನ್ನೊಳಗೊಂಡತೆ)

3. KASS ಯೋಜನೆಗೆ ಒಳಪಡದ ನೌಕರರ ವರ್ಗ

ಸಾರ್ವಜನಿಕ ವಲಯದ (public sector establishment) ಇತರೇ ನೌಕರರು ಅಂದರೆ, ಸ್ಥಳಿಯ ಸಂಸ್ಥೆ, ಸ್ನಾಯತ್ತ ಸಂಸ್ಥೆಗಳು, ಅನುದಾನಿತ ಸಂಸ್ಥೆ, ವಿಶ್ವವಿದ್ಯಾಲಯಗಳು, ಶಾಸನಬದ್ಧ ಸಂಸ್ಥೆಗಳು, ಗುತ್ತಿಗೆ/ಹೊರಗುತ್ತಿಗೆ ನೌಕರರು, ಅರೆಕಾಲಿಕ ನೌಕರರು, ದಿನಗೂಲಿ ನೌಕರರು ಈ ಯೋಜನೆಗೆ ಒಳಪಡುವುದಿಲ್ಲ.

ಈಗಾಗಲೇ ಬೇರೆ ಆರೋಗ್ಯ ಯೋಜನೆಯಡಿ ಒಳಪಟ್ಟ ಸರ್ಕಾರಿ ನೌಕರರು (ಉದಾ: ಪೊಲೀಸ್ ಇಲಾಖೆಯಲ್ಲಿನ 'ಆರೋಗ್ಯ ಭಾಗ್ಯ' ಯೋಜನೆಗೆ ಒಳಪಟ್ಟ ಸರ್ಕಾರಿ ನೌಕರರು) ಈ ಯೋಜನೆಗೆ ಒಳಪಡುವುದಿಲ್ಲ.

ರಾಜ್ಯ ಸೇವೆಯಲ್ಲಿ ನಿಯೋಜನೆ/ ಎರವಲು ಸೇವೆಯ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿರುವ ಕೇಂದ್ರ ಸರ್ಕಾರಿ ನೌಕರರು, ಸಾರ್ವಜನಿಕ ವಲಯದ ಸ್ಥಾಪನೆಯ (Establishment in public sector) ನೌಕರರು ಈ ಯೋಜನೆಗೆ ಒಳಪಡುವುದಿಲ್ಲ.

ಸಾರ್ವಜನಿಕ ವಲಯದ ಸ್ಥಾಪನೆ ಎಂದರೇ "ಕರ್ನಾಟಕ ನಾಗರೀಕ ಸೇವೆಗಳು (ಸಾಮಾನ್ಯ ನೇಮಕಾತಿ) ನಿಯಮಗಳು 1977 ರ ನಿಯಮ 5 ರಲ್ಲಿ ನಿರ್ಧಿಷ್ಟಪಡಿಸಲಾದ ಸ್ಥಾಪನೆಗಳ ನೌಕರರು".

ವೈದ್ಯಕೀಯ ಚಿಕಿತ್ಸೆ ನೀಡುವ ಸಂಬಂಧ ರಾಜ್ಯ ಸರ್ಕಾರವು ರೂಪಿಸಿರುವ ಪ್ರತ್ಯೇಕ ನಿಯಮಗಳು ಅನ್ವಯವಾಗುವ ಇತರೇ ಯಾವುದೇ ವರ್ಗದ ವ್ಯಕ್ತಿಗಳಿಗೆ ಈ ಯೋಜನೆ ಅನ್ವಯಿಸುವುದಿಲ್ಲ.

ನ್ಯಾಯಾಂಗ ಸೇವೆಯ ಅಧಿಕಾರಿಗಳು ಮತ್ತು ರಾಜ್ಯ ಉಚ್ಚ ನ್ಯಾಯಲಯದ ನೌಕರರು ಈ ಯೋಜನೆ ಒಳಪಡುವುದಿಲ್ಲ.

ಅಖಿಲ ಭಾರತ ಸೇವೆಗೆ ಸೇರಿದ ಅಧಿಕಾರಿಗಳು.

ರಾಜ್ಯ ವಿಧಾನಮಂಡಲದ ನೌಕರರು.

4. KASS ಅಡಿಯಲ್ಲಿ "ಕುಟುಂಬ" ಪದದ ವ್ಯಾಖ್ಯಾನವೇನು?

ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು 1963 ರ ನಿಯಮ 2ರಲ್ಲಿನ "ಕುಟುಂಬ" ಎಂದರೆ ಸರ್ಕಾರಿ ನೌಕರನ ಪತಿ ಅಥವಾ ಪತ್ನಿ, ತಂದೆ ಮತ್ತು ತಾಯಿ (ಮಲತಾಯಿಯನ್ನೊಳಗೊಂಡಂತೆ) ಹಾಗೂ ಸಂಪೂರ್ಣವಾಗಿ ಅವಲಂಬಿತವಾಗಿರುವ ಮಕ್ಕಳು (ದತ್ತು ಪಡದ ಮಕ್ಕಳು ಮತ್ತು ಮಲ ಮಕ್ಕಳನ್ನೊಳಗೊಂಡಂತೆ) ಎಂದು ವ್ಯಾಖ್ಯಾನಿಸಲಾಗಿದೆ.

5. ಸರ್ಕಾರಿ ನೌಕರನು ವೃತ್ತಿಪರ (Probationary period) ಅವಧಿಯಲ್ಲಿದ್ದರೆ KASS ಯೋಜನೆಗೆ ಫಲಾನುಭವಿ ಆಗಬಹುದೇ?

ಹೌದು. ವೃತ್ತಿಪರ (Probationary period) ಅವಧಿಯಲ್ಲಿರುವ ಸರ್ಕಾರಿ ನೌಕರನು KASS ಯೋಜನೆಗೆ ಅರ್ಹನಾಗಿರುತ್ತಾನೆ.

6. ದಂಪತಿಗಳಿಬ್ಬರು ರಾಜ್ಯ ಸರ್ಕಾರಿ ಉದ್ಯೋಗಿಗಳಾಗಿದ್ದರೆ, ಇಬ್ಬರೂ ವಂತಿಗೆಯನ್ನು ಸಲ್ಲಿಸಬೇಕಾ?

ದಂಪತಿಗಳಿಬ್ಬರು ರಾಜ್ಯ ಸರ್ಕಾರಿ ಉದ್ಯೋಗಿಗಳಾಗಿದ್ದರೆ, ಹೆಚ್ಚಿನ ಮೂಲ ವೇತನವನ್ನು ಪಡೆಯುವ ಉದ್ಯೋಗಿ ಮುಖ್ಯ ಕಾರ್ಡ್ ಹೋಲ್ಡರ್ ಆಗಿ ನೋಂದಾಯಿಸಿಕೊಳ್ಳುತ್ತಾರೆ. ಆದರೆ ಇಬ್ಬರೂ ಉದ್ಯೋಗಿಗಳು ತಮ್ಮ ಪೋಷಕರನ್ನು ಅವಲಂಬಿತರನ್ನಾಗಿ ಸೇರಿಸಲು ಬಯಸಿದರೆ, ಇಬ್ಬರೂ ಪ್ರತ್ಯೇಕವಾಗಿ ಯೋಜನೆಗೆ ನೋಂದಾಯಿಸಿಕೊಳ್ಳತಕ್ಕದ್ದು.

7. ಮಲಮಕ್ಕಳಿಗೆ KASS ಸೌಲಭ್ಯಗಳನ್ನು ಅನುಮತಿಸಲಾಗಿದೆಯೇ?

ಹೌದು,

8. KASS ಸೌಲಭ್ಯಗಳಿಗಾಗಿ ಕುಟುಂಬದ ಸದಸ್ಯರ ಅಡಿಯಲ್ಲಿ ಅವಲಂಬಿತ ಅತ್ತೆಯನ್ನು ಸೇರಿಸಬಹುದೇ?

ಒಬ್ಬ ಮಹಿಳಾ ಸರ್ಕಾರಿ ನೌಕರನು ತನ್ನ ತಂದೆ-ತಾಯಿಯನ್ನು ಅಥವಾ ಅತ್ತೆ-ಮಾವರನ್ನು ಸೇರಿಸಿಕೊಳ್ಳುವ ಆಯ್ಕೆಯನ್ನು ಹೊಂದಿದ್ದು, ಕೆ.ಎ.ಎಸ್.ಎಸ್ ಅಡಿಯಲ್ಲಿ KASS ನಿಯಮದಂತೆ ಸರ್ಕಾರಿ ನೌಕರರನೊಂದಿಗೆ ವಾಸವಾಗಿದ್ದು ಕನಿಷ್ಠ ಮಾಸಿಕ ಆದಾಯ -ಕುಟುಂಬ ಪಿಂಚಣಿ ರೂ. 8,500/- ಹಾಗೂ ಚಾಲ್ತಿಯಲ್ಲಿದ್ದ ತುಟ್ಟಿಭತ್ಯೆಯನ್ನು ಒಳಗೊಂಡ ಮೊತ್ತವನ್ನು ಮೀರಬಾರದು.

9. KASS ಯೋಜನೆಯಲ್ಲಿ ಅವಲಂಬಿತರಾಗಿರುವ ಪುತ್ರರು / ಹೆಣ್ಣುಮಕ್ಕಳಿಗೆ ಯಾವುದೇ ವಯಸ್ಸಿನ ಮಿತಿ ಇದೆಯೇ?

ಹೆಣ್ಣು ಅಥವಾ ಗಂಡು ಮಕ್ಕಳು ಗಳಿಸಲು ಪ್ರಾರಂಭಿಸುವವರೆಗೆ (ಉದ್ಯೋಗ) ಅಥವಾ 30ವರ್ಷ ವಯಸ್ಸನ್ನು ತಲುಪುವವರೆಗೆ ಅಥವಾ ಮದುವೆಯಾಗುವವರೆಗೆ ಅರ್ಹನಾಗಿರುತ್ತಾರೆ. ಆದಾಗ್ಯೂ ಮಕ್ಕಳು ಯಾವುದೇ ರೀತಿಯ (ದೈಹಿಕ ಅಥವಾ ಮಾನಸಿಕ) ಶಾಶ್ವತ ಅಂಗವೈಕಲ್ಯದಿಂದ ಬಳಲುತ್ತಿದ್ದರೆ ಅವರು KASS ಪ್ರಯೋಜನಗಳಿಗೆ ಅರ್ಹನಾಗಿರುತ್ತಾರೆ.

10. KASS ನೊಂದಾಯಿತ (Empaneled) ಆಸ್ಪತ್ರೆಗಳಲ್ಲಿ ಅನುಮೋದಿಸಲಾದ ವಾರ್ಡ್‌ ಅರ್ಹತೆಯ ಮಾನದಂಡಗಳು ಯಾವುವು?

Group A & B - "Private Ward"

Group C - "Semi Private Ward"

Group D - "General Ward"

11. ಫಲಾನುಭವಿಯು ನಿಗದಿಪಡಿಸಿರುವ ವಾರ್ಡ್ ಮಾನದಂಡಕ್ಕಿಂತ ಉನ್ನತ ಮಟ್ಟದ ವಾರ್ಡ್ ಪಡೆಯಲು (Ward Up gradation) ಯೋಜನೆಯಲ್ಲಿ ಅವಕಾಶವಿದೆಯೇ?

ಇಲ್ಲ, ವಾರ್ಡ್ ಮಾನದಂಡಕ್ಕಿಂತ ಉನ್ನತ ಮಟ್ಟದ (Ward Up gradation) ಪಡೆಯಲು ಫಲಾನುಭವಿಯು ವ್ಯತ್ಯಾಸದ ಹಣವನ್ನು ಪಾವತಿಮಾಡಿ ರಶೀದಿಯನ್ನು ಪಡೆಯಬಹುದಾಗಿದೆ.

12. ನೊಂದಾಯಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಪಡೆಯಲು ಫಲಾನುಭವಿಗೆ ಯಾವ ದಾಖಲೆಯ ಅಗತ್ಯವಿದೆ?

ಫಲಾನುಭವಿಯ ನೊಂದಾಯಿತ ಸಮಯದಲ್ಲಿ ನೀಡುವ ಡಿ.ಡಿ.ಓ ಇ-ಸಹಿ ಹೊಂದಿರುವ ಧೃಡಿಕರಣ ಪತ್ರ ಅಥವಾ KASS ಕಾರ್ಡ್‌ ಅವಶ್ಯಕತೆ ಇರುತ್ತದೆ.

13. ರೆಫರಲ್ ಅಗತ್ಯವಿದೆಯೇ? ರೆಫರಲ್ ಉದ್ದೇಶಕ್ಕಾಗಿ ತಜ್ಞರು ನೋಂದಾಯಿತ (Empaneled) ಮಾಡಲಾದ ಆಸ್ಪತ್ರೆಯ ಹೆಸರನ್ನು ಸೂಚಿಸಬೇಕೇ?

ಸರ್ಕಾರಿ ವೈದ್ಯರಿಂದ ಯಾವುದೇ ನಿರ್ದೇಶನದ (ರೆಫರಲ್) ಅಗತ್ಯವಿಲ್ಲ. ಕೆಲವೊಂದು ಚಿಕಿತ್ಸೆಗೆ (IVF, Replacement, Transplant) ಚಿಕಿತ್ಸೆಗಳಿಗೆ ನಿಗದಿ ಪಡಿಸಿದ ಅನುಮೋದನೆಯೊಂದಿಗೆ ಮಂಜೂರಾತಿ ಕ್ರಮ ಕೈಗೊಳ್ಳಲಾಗುವುದು.

14. KASS ನ ಅಡಿಯಲ್ಲಿ ಪಾವತಿಸಲಾಗುವ ಚಿಕಿತ್ಸಾ ವೆಚ್ಚದ ಅರ್ಹತದಾಯಕ ಮೊತ್ತ ಎಷ್ಟು?

CGHS ಆಧಾರದಲ್ಲಿ ವೈದ್ಯಕೀಯ ಚಿಕಿತ್ಸೆ ಆಧಾರದ ಮಿತಿಯಲ್ಲಿ ಯಾವುದೇ ಹೊರಮಿತಿ ಇಲ್ಲದೆ ಪಾವತಿಸಲಾಗುವುದು.

15. KASS ಫಲಾನುಭವಿಗಳು ಆರೋಗ್ಯ ಸೇವೆಗಳನ್ನು ಎಲ್ಲಿ ಪಡೆಯಬಹುದು?

KASS ಫಲಾನುಭವಿಗಳು ಆರೋಗ್ಯ ಸೇವೆಗಳನ್ನು ಸರ್ಕಾರಿ ಆಸ್ಪತ್ರೆಗಳು ಮತ್ತು ಕೆಎಎಸ್‌ಎಸ್ ನೊಂದಾಯಿತ ಖಾಸಗಿ ಆಸ್ಪತ್ರೆಗಳು ಫಲಾನುಭವಿಗಳು ಸೇವೆ ಪಡೆಯಬಹುದು. ತುರ್ತು ಸಂದರ್ಭದಲ್ಲಿ ನೋಂದಾವಣೆ ಮಾಡದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು ಮತ್ತು ನಿಯಮಾನುಸಾರ ಹಿಂಬರಿಸಿಕೊಳ್ಳಲು ಅರ್ಹರಿರುತ್ತಾರೆ.

16. ಮೊದಲ ಹಂತದಲ್ಲಿ KASS ನಲ್ಲಿ ನೀಡುವ ಸೌಲಭ್ಯಗಳೇನು?

ಮೊದಲ ಹಂತದಲ್ಲಿ KASS ನ ಅಡಿಯಲ್ಲಿ ಒಳರೋಗಿ ಚಿಕಿತ್ಸೆ, ಹಗಲು ಚಿಕಿತ್ಸಾ ಕೇಂದ್ರ (Day Care), ಕಣ್ಣಿನ ಚಿಕಿತ್ಸಾ ಆಸ್ಪತ್ರೆ ಮತ್ತು ದಂತ ಚಿಕಿತ್ಸಾ ಆಸ್ಪತ್ರೆಗಳು.

17. ಮೊದಲ ಹಂತದಲ್ಲಿ KASS ನಡಿಯಲ್ಲಿ ಹೊರ ರೋಗಿ ಚಿಕಿತ್ಸೆಗೆ ಸೌಲಭ್ಯವಿದೆಯೇ?

ಇಲ್ಲ, KASS ಫಲಾನುಭವಿಗಳು ಮುಂದಿನ ಆದೇಶದವರೆಗೆ ಹೋರರೋಗಿ ಚಿಕಿತ್ಸಾ ಸೌಲಭ್ಯವನ್ನು ಹಿಂಬರಿಸಿಕೊಳ್ಳಲು ಅರ್ಹರಾಗಿರುತ್ತಾರೆ.

18. KASS ಅಡಿಯಲ್ಲಿ ಲಸಿಕೆಗಳ ಮಾರ್ಗಸೂಚಿಗಳು ಯಾವುವು?

ಯುನಿವರ್ಸಲ್ ಇಮ್ಯುನೈಸೇಶನ್ ಪ್ರೋಗ್ರಾಂ (UIP) ಅಡಿಯಲ್ಲಿ ಆವರಿಸಿರುವ ಲಸಿಕೆಗಳು ಹಾಗೂ KASS ನಡಿಯಲ್ಲಿ ನಿರ್ಧಿಷ್ಟ ಪಡಿಸಿದ ಲಸಿಕೆಗಳಿಗೆ ಮಾತ್ರ ಅರ್ಹರಿರುತ್ತಾರೆ.

19. KASS ಫಲಾನುಭವಿಗಳು KASS ನಿಂದ ನೋಂದಾಯಿತ ಖಾಸಗಿ ಆಸ್ಪತ್ರೆಯಲ್ಲಿ ಎಷ್ಟು ಬಾರಿ ತಜ್ಞರನ್ನು ಸಂಪರ್ಕಿಸಬಹುದು?

ಕೆ.ಎ.ಎಸ್.ಎಸ್ ಫಲಾನುಭವಿಯು ಒಂದೇ ನೋಂದಾಯಿತ ಆಸ್ಪತ್ರೆಗೆ ಒಂದು ತಿಂಗಳ ಅವಧಿಯಲ್ಲಿ ಮೂರು ಬಾರಿ ಭೇಟಿ ನೀಡಬಹುದು. ಪ್ರತಿ ಭೇಟಿಯ ಸಮಯದಲ್ಲಿ ಫಲಾನುಭವಿಯು ಒಂದೇ ಆಸ್ಪತ್ರೆಯಲ್ಲಿ ಮೂರು ವಿಭಿನ್ನ ತಜ್ಞರನ್ನು ಸಂಪರ್ಕಿಸಬಹುದು.

20

. KASS ಯೋಜನೆ ಅಡಿಯಲ್ಲಿ ನೋಂದಾವಣೆ ಮಾಡದ ಖಾಸಗಿ ಆಸ್ಪತ್ರೆಗಳಲ್ಲಿ ತುರ್ತು ಸಂದರ್ಭದಲ್ಲಿ ತೆಗೆದುಕೊಂಡ ಚಿಕಿತ್ಸೆಯನ್ನು ಹಿಂಬರಿಸಿಕೊಳ್ಳಬಹುದೇ? ಹಾಗಿದ್ದರೆ ಕಾರ್ಯವಿಧಾನ ಏನು?

ಖಾಸಗಿ ನೋಂದಾವಣೆ ಮಾಡದ ಆಸ್ಪತ್ರೆಗಳಿಂದ ಸರ್ಕಾರದ ಆದೇಶದ ಪ್ರಕಾರ ತುರ್ತು ಸಂದರ್ಭದಲ್ಲಿ ತೆಗೆದುಕೊಳ್ಳಲಾದ ಚಿಕಿತ್ಸೆಯನ್ನು KASS ದರಗಳಲ್ಲಿ ಹಿಂಬರಿಸಿಕೊಳ್ಳಲು KASS ಪರಿಗಣಿಸುತ್ತದೆ. ಹಿಂಬರಿಸಿಕೊಳ್ಳುವಿಕೆಯನ್ನು KASS ಪ್ಯಾಕೇಜ್ ದರ ಅಥವಾ ನಿಜವಾದ ವೆಚ್ಚದಲ್ಲಿ ಯಾವುದು ಕಡಿಮೆಯೋ ಅದನ್ನು ಪರಿಗಣಿಸಿ ಆಯಾ ಇಲಾಖಾ ಮುಖ್ಯಸ್ಥರಿಂದ ಹಿಂಬರಿಸಿಕೊಳ್ಳುವಿಕೆಗೆ ಅರ್ಹರಿರುತ್ತಾರೆ.

21. ಅನುಮೋದಿತ KASS ದರಗಳಿಗಿಂತ ಹೆಚ್ಚಿನ ಮರುಪಾವತಿಯನ್ನು ಪರಿಗಣಿಸಲು ಮಾರ್ಗಸೂಚಿಗಳು ಯಾವುವು?

ವ್ಯಾಖ್ಯಾನಿಸಲಾದ ಮಾನದಂಡಗಳ ಅಡಿಯಲ್ಲಿ ಬರುವ ಮರುಪಾವತಿಯ ವಿನಂತಿಗಳನ್ನು ವೈದ್ಯಕೀಯ ತಜ್ಞರ ಸಮಿತಿಯು ಪರಿಶೀಲಿಸುತ್ತದೆ.

22. ನೋಂದಾಯಿತ ಆಸ್ಪತ್ರೆಗಳಲ್ಲಿ ವೈದ್ಯಕೀಯ ನಿರ್ಲಕ್ಷ್ಯದ ಬಗ್ಗೆ ಎಲ್ಲಿ ದೂರು ನೀಡಬೇಕು?

ಫಲಾನುಭವಿಯು ನೋಂದಾಯಿತ ಆಸ್ಪತ್ರೆಗಳ ವೈದ್ಯಕೀಯ ನಿರ್ಲಕ್ಷ್ಯದ ಎಲ್ಲಾ ಪುರಾವೆಗಳೊಂದಿಗೆ ಜಿಲ್ಲಾಧಿಕಾರಿಗಳು ಹಾಗೂ ಕುಂದುಕೊರತೆಯ ಅಧಿಕಾರಿಗಳಿಗೆ ಅಥವಾ ಸ್ಟೇಟ್ ಮೆಡಿಕಲ್ ಕೌನ್ಸಿಲ್/ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾವನ್ನು ಸಂಪರ್ಕಿಸಬಹುದು.

23

. ನೌಕರನು ಪ್ರವಾಸ ನಿಮಿತ್ತ ಹೊರ ರಾಜ್ಯದಲ್ಲಿ ಪಡೆಯುವ ಸಂಧರ್ಭದಲ್ಲಿ ನೊಂದಾಯಿತವಲ್ಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರೆ ಹಿಂಬರಿಸಿಕೊಳ್ಳುವಿಕೆ ಪಡೆಯಲು ಅರ್ಹತೆ ಇದೆಯೇ?

ವೈದ್ಯಕೀಯ ತುರ್ತು ಪರಿಸ್ಥಿತಿಯ ಅಡಿಯಲ್ಲಿ ನೊಂದಾಯಿತವಲ್ಲದ ಖಾಸಗಿ ಆಸ್ಪತ್ರೆಯಲ್ಲಿ ತೆಗೆದುಕೊಂಡ ಚಿಕಿತ್ಸೆಗೆ ಹಿಂಬರಿಸಿಕೊಳ್ಳುವಿಕೆಯನ್ನು ತುರ್ತು ಪರಿಸ್ಥಿತಿಯ ವ್ಯಾಖ್ಯಾನದ ಮೇಲೆ ಸರ್ಕಾರದ ಆದೇಶದ ಪ್ರಕಾರ KASS ದರಗಳ ಪ್ರಕಾರ ಪರಿಗಣಿಸಲಾಗುತ್ತದೆ. ಸದರಿ ಹಿಂಬರಿಸಿಕೊಳ್ಳುವಿಕೆಯನ್ನು ಆಯಾ ಇಲಾಖೆಯ ಮುಖ್ಯಸ್ಥರಿಂದ ನಿಯಮಾನುಸಾರ ಪಡೆಯಲು ಅರ್ಹರಿರುತ್ತಾರೆ.

24. IVF ಗಾಗಿ ಮಾರ್ಗಸೂಚಿಗಳು ಯಾವುವು?

IVF ಚಿಕಿತ್ಸೆಯನ್ನು ಜಿಲ್ಲಾ ಸರ್ಕಾರಿ ಸ್ತ್ರೀ ರೋಗ ತಜ್ಞರಿಂದ (ವೈದ್ಯಕೀಯ ಶಿಕ್ಷಣ ಮಹಾವಿದ್ಯಾಲಯ / ಜಿಲ್ಲಾ ಆಸ್ಪತ್ರೆ) ಅವರ ಶಿಫಾರಸ್ಸಿನ್ನಯ KASS ನಡಿಯಲ್ಲಿ IVF ಚಿಕಿತ್ಸೆಗೆ ಅನುಮತಿಸಲಾಗುವುದು.

25. ಆಂಬ್ಯುಲೆನ್ಸ್ ಶುಲ್ಕಗಳನ್ನು ಹಿಂಬರಿಸಿಕೊಳ್ಳಬಹುದೇ?

ಹೌದು. ಆಂಬ್ಯುಲೆನ್ಸ್ ಶುಲ್ಕಗಳು ನಗರದೊಳಗೆ ಹಿಂಬರಿಸಿಕೊಳ್ಳಲ್ಪಡುತ್ತವೆ, ವೈದ್ಯರಿಂದ ಪ್ರಮಾಣಪತ್ರವಿದ್ದರೆ, ಯಾವುದೇ ಇತರ ವಿಧಾನದ ಮೂಲಕ ಸಾಗಿಸುವಿಕೆಯು ರೋಗಿಯ ಜೀವಕ್ಕೆ ಖಂಡಿತವಾಗಿಯೂ ಅಪಾಯವನ್ನುಂಟು ಮಾಡುತ್ತದ ಅಥವಾ ಅವನ/ಅವಳ ಸ್ಥಿತಿಯನ್ನು ತೀವ್ರವಾಗಿ ಉಲ್ಬಣಗೊಳಿಸುತ್ತದೆ.

26 . ನನ್ನ ಚಿಕಿತ್ಸೆಗೆ ಅನೇಕ ಸಿಟ್ಟಿಂಗ್‌ಗಳು/ಸೈಕಲ್‌ಗಳ ಅಗತ್ಯವಿದ್ದಲ್ಲಿ, ಪ್ರತಿ ಸೈಕಲ್‌ಗೆ/ಅದೇ ಚಿಕಿತ್ಸೆಯ ಕುಳಿತುಕೊಳ್ಳುವಿಕೆಗೆ ಪ್ರತ್ಯೇಕ ಪ್ರಿ-ಆಥ್ ಬೇಕೇ? ಹೌದು, ಮಾನ್ಯತೆಯ ಅವಧಿಯು ಸಕ್ರಿಯವಾಗಿದ್ದರೆ.

27. ಫಲಾನುಭವಿಯು ದೀರ್ಘಕಾಲದ ಖಾಯಿಲೆಗಳಿಗೆ ಔಷದೋಪಚಾರ ಪಡೆಯುತ್ತಿದ್ದಲ್ಲಿ ನಗದು ರಹಿತವಾಗಿ ಔಷದ ಪಡೆಯಲು KASS ಯೋಜನೆಯಲ್ಲಿ ಅವಕಾಶವಿದೆಯೇ?
KASS ಯೋಜನೆಯಲ್ಲಿ ಹೊರರೋಗಿಯ ಚಿಕಿತ್ಸೆಗೆ ಭರಿಸುವ ಔಷದ ನಗದು ರಹಿತವಾಗಿರುವುದಿಲ್ಲ. ಔಷದೋಪಚಾರಕ್ಕೆ ಸರ್ಕಾರಿ ನೌಕರನು ಭರಿಸಿದ ವೆಚ್ಚವನ್ನು ಪ್ರಸ್ತುತ ಅನುಸರಿಸಲಾಗುತ್ತಿರುವ ಕ್ರಮದಲ್ಲಿ ನಿಯಂತ್ರಾಣಾಧಿಕಾರಿಗಳು ಸರ್ಕಾರಿ ನೌಕರರಿಗೆ ಹಿಂಬರಿಸಿಕೊಳ್ಳಬಹುದಾಗಿದೆ.

28. ಫಲಾನುಭವಿಯಾಗಿ ನೋಂದಾಯಿಸಲ್ಪಡಲು ಯಾವ ಕ್ರಮ ವಹಿಸಬೇಕು?

ಫಲಾನುಭವಿಯು ಖಡ್ಡಾಯವಾಗಿ HRMS ತಂತ್ರಾಂಶದಲ್ಲಿ ನೋಂದಾಯಿಸಿ, ಬಟವಾಡೆ ಅಧಿಕಾರಿಗಳು ಅನುಮೋದಿಸಬೇಕಾಗಿರುತ್ತದೆ. ನೋಂದಾಯಿತ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುವ ಸಮಯದಲ್ಲಿ ಖಡ್ಡಾಯವಾಗಿ unique ID ಯುಳ್ಳ DDO E-Sign ಹೊಂದಿರುವ ಪ್ರತಿಯನ್ನು ಪ್ರಸ್ತುತಪಡಿಸಬೇಕಾಗಿರುತ್ತದೆ

29. ತುರ್ತು ಸಂಧರ್ಭದಲ್ಲಿ ಯಾವುದೇ ದಾಖಲಾತಿ ಇಲ್ಲದಿದ್ದಲ್ಲಿ ಯಾವ ಕ್ರಮ ವಹಿಸಬೇಕು?

ಸರ್ಕಾರದ ಆದೇಶದ ಪ್ರಕಾರ ತುರ್ತು ಪ್ರಕರಣಗಳಿದ್ದಲ್ಲಿ ಚಿಕಿತ್ಸೆಯನ್ನು ಯಾವುದೇ ದಾಖಲಾತಿ ಇಲ್ಲದ ಪಡೆಯಬಹುದಾಗಿದೆ ಆದರೆ 24 ಗಂಟೆಗಳೊಳಗೆ ದಾಖಲಾತಿಗಳನ್ನು ಆಸ್ಪತ್ರೆಗೆ ಪ್ರಸ್ತುತ ಪಡಿಸಬೇಕಾಗಿರುತ್ತದೆ.

ಆಯ್ಕೆ 1:ಫಲಾನುಭವಿಗಳು ಯೋಜನೆಯಡಿಯಲ್ಲಿ ಸರ್ಕಾರಿ ನೌಕರರು ನೋಂದಾಯಿಸಿಕೊಳ್ಳಲು ಲಿಖಿತ ಮನವಿಯನ್ನು ಸಲ್ಲಿಸುವ ಬಗ್ಗೆ.

ಫಲಾನುಭವಿಗಳು ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 16 ಎಸ್‌ಎಂಆರ್ 2020 ಭಾಗ 5 ದಿ: 09.03.2023 ರ ಅನುಬಂಧ ೧ ರಲ್ಲಿ ಸೂಚಿಸಿರುವ ಫಾರಂ 'ಎ' ರಲ್ಲಿ ಲಭ್ಯವಿರುವ ಎಲ್ಲಾ ಕಾಲಂಗಳನ್ನು ಭರ್ತಿ ಮಾಡಿ ದ್ವಿಪ್ರತಿಯಲ್ಲಿ ತನ್ನ ಕಛೇರಿಯ ಮುಖ್ಯಸ್ಥರ (ನೌಕರನ ಸೇವಾ ವಹಿಯನ್ನು ನಿರ್ವಹಿಸುವ ಕಛೇರಿ) / ವರದಿ ಮಾಡಿಕೊಳ್ಳುವ ಅಧಿಕಾರಿ ಮುಖಾಂತರ ಡಿಡಿಒ ಗೆ ಸಲ್ಲಿಸತಕ್ಕದ್ದು ಹಾಗೂ ಫಾರಂ ಎ ಜೊತೆಗೆ ಕೆಳಕಂಡ ಲಗತ್ತುಗಳನ್ನು ಸಲ್ಲಿಸತಕ್ಕದ್ದು. (ಯೋಜನೆಯಡಿಯಲ್ಲಿ ನೋಂದಾಯಿಸಿಕೊಳ್ಳಲು ನಿಗಧಿಪಡಿಸಲಾದ ಫಾರಂ ಎ ಡೌನ್‌ಲೋಡ್ನ ನಲ್ಲಿ ಲಭ್ಯವಿದೆ)

1. ಸರ್ಕಾರಿ ನೌಕರನ ಹಾಗೂ ಕುಟುಂಬದ ಅರ್ಹ ಸದಸ್ಯರ ಮುಖದ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, 50 ಕೆ.ಬಿ ಒಳಗಿರುವ (ಪ್ರತಿಯೊಬ್ಬರ ಭಾವಚಿತ್ರವನ್ನು ಪ್ರತ್ಯೇಕವಾಗಿ) ಭಾವಚಿತ್ರದ ಮೇಲೆ ಸರ್ಕಾರಿ ನೌಕರರ ಸಹಿ ಮತ್ತು ದಿನಾಂಕವನ್ನು ನಮೂದಿಸತಕ್ಕದ್ದು ಮತ್ತು ಪ್ರತಿ 5 ವರ್ಷಕ್ಕೊಮ್ಮೆ ಹೊಸ ಭಾವಚಿತ್ರವನ್ನು ಒದಗಿಸತಕ್ಕದ್ದು.

2. ಜನ್ಮ ದಿನಾಂಕದ ದಾಖಲೆಗಳು (ಅವಲಂಬಿತ ಮಕ್ಕಳು)

3. ಆಧಾರ್ ಕಾರ್ಡ್ (ಪ್ರತಿಯೊಬ್ಬ ಫಲಾನುಭವಿ)

4. ವೇತನ ಚೀಟಿ (ಸರ್ಕಾರಿ ನೌಕರನ)

5. ಕಾನೂನು ದಾಖಲೆಗಳು (ದತ್ತು, ವಿವಾಹ, ಇತ್ಯಾದಿ ಸಂದರ್ಭಗಳಲ್ಲಿ)

6. ಸಂಬಂಧಪಟ್ಟ ಫಾರಂ ಎ(1), ಫಾರಂ ಎ(2), ಫಾರಂ ಎ(3) ನಲ್ಲಿ ಇರುವ ಸ್ವಯಂ ಘೋಷಣಾ

ಪತ್ರ

ಆಯ್ಕೆ 2:ಯೋಜನೆಯಡಿಯಲ್ಲಿ ಸರ್ಕಾರಿ ನೌಕರರು ನೋಂದಾಯಿಸಿಕೊಳ್ಳಲು ಮೊಬೈಲ್ ಮೂಲಕ ಮನವಿಯನ್ನು ಸಲ್ಲಿಸುವ ಬಗ್ಗೆ.

ಫಲಾನುಭವಿಗಳು

ជ https://hrms.karnataka.gov.in ಸೈಟ್‌ನಲ್ಲಿ ಲಾಗಿನ್ ಆಗಿ, Download KASS Mobile App ಲಿಂಕನ್ನು ಸೆಲೆಕ್ಟ್ ಮಾಡಿ ಅಪ್ಲಿಕೇಷನ್‌ನ್ನು ನಿಮ್ಮ ಮೊಬೈಲ್‌ಗೆ ಡೌನ್‌ಲೋಡ್ ಮಾಡಿಕೊಳ್ಳತಕ್ಕದ್ದು.

ಹೊಸ ಬಳಕೆದಾರರು : ಮೊದಲು ಆಪ್ ನಲ್ಲಿ ರಿಜಿಸ್ಟರ್ ಮಾಡಿಕೊಂಡು, ಪಾಸ್ವರ್ಡ್‌ನ್ನು ನೊಂದಾಯಿಸಿಕೊಳ್ಳಬೇಕು. ಹೊಸ ಪಾಸ್ವರ್ಡ್ ಬಳಸಿಕೊಂಡು ಪುನಃ ಲಾಗಿನ್ ಆಗಬೇಕು. ನಂತರ ಅವಲಂಬಿತ ಸದಸ್ಯರ ವಿವರಗಳನ್ನು ತುಂಬತಕ್ಕದ್ದು. ಅವಶ್ಯಕತೆ ಇದ್ದಲ್ಲಿ ಅವಲಂಬಿತರ ವಿವರಗಳನ್ನು ತಿದ್ದಬಹುದು ಮತ್ತು ಪಟ್ಟಿಗೆ ಸೇರಿಸಬಹುದು ಅಥವಾ ಪಟ್ಟಿಯಿಂದ ತೆಗೆಯಬಹುದು. ನಂತರ ಸರ್ಕಾರಿ ನೌಕರನ ಸ್ವಯಂ ಘೋಷಣಾ ಪತ್ರವನ್ನು Mobile Application ನಲ್ಲಿ ಅಪ್‌ಲೋಡ್ ಮಾಡತಕ್ಕದ್ದು ಹಾಗೂ ಅನುಬಂಧ 1 ರಲ್ಲಿ ವಿವರಗಳನ್ನು ಭರ್ತಿ ಮಾಡಿ, ದ್ವಿಪ್ರತಿಯಲ್ಲಿ ವರದಿ ಮಾಡಿಕೊಳ್ಳುವ ಅಧಿಕಾರಿ ಮುಖಾಂತರ ತಮ್ಮ ಡಿಡಿಓಗಳಿಗೆ ಸಲ್ಲಿಸತಕ್ಕದ್ದು.

ಆ. ನೋಂದಾಯಿತ ಆರೋಗ್ಯ ಸೇವಾ ಕೇಂದ್ರಗಳಿಗೆ ಸಂಬಂಧಿಸಿದ ಪ್ರಶ್ನೆಗಳು

1. ಆಸ್ಪತ್ರೆಗಳನ್ನು KASS ಯೋಜನೆಯಡಿಯಲ್ಲಿ ನೋಂದಾಯಿಸಿಕೊಳ್ಳುವುದು ಹೇಗೆ?

https://hospitals.pmjay.gov.in/empApplicationHome.htm

URL

ಆಸ್ಪತ್ರೆಗಳ ಖಾತೆಯನ್ನು ತೆಗೆದು, ಅಗತ್ಯ ಮಾಹಿತಿಗಳನ್ನು ಭರ್ತಿಮಾಡಿ ನೋಂದಾಯಿಸಿಕೊಳ್ಳತಕ್ಕದು.

2. ಆಸ್ಪತ್ರೆಗಳ ನೋಂದಾವಣೆಗೆ ಬೇಕಾಗಿರುವ ಮುಖ್ಯ ಅರ್ಹತೆಗಳು?

ಆಸ್ಪತ್ರೆಗಳು ಖಡ್ಡಾಯವಾಗಿ KPME ಅಡಿಯಲ್ಲಿ ನೋಂದಾಯಿಸಿಕೊಂಡಿರಬೇಕು.

3. ಆಸ್ಪತ್ರೆಗಳ ನೋಂದಾವಣೆಗೆ ಬೇಕಾಗಿರುವ ದಾಖಲಾತಿಗಳು

KPME Certificate

Financial details like Bank account number, cancelled cheque copy, Hospital PAN card

number

Man power details-Doctor KMC registration certificate, for paramedical staff required

paramedical related certificate.

HFR number of the Hospital

4. ಆಸ್ಪತ್ರೆಗಳ ನೋಂದಾವಣೆ ಸಮಯಲ್ಲಿ ಯಾವ PAN Number ನೀಡಬೇಕಾಗಿರುತ್ತದೆ?

ಆಸ್ಪತ್ರೆಗಳ ನೊಂದಾವಣೆ ಸಮಯಲ್ಲಿ ಆಸ್ಪತ್ರೆಯ ಹೆಸರಿನಲ್ಲಿರುವ PAN Number ನೀಡಬೇಕು.

5. ಆಸ್ಪತ್ರೆಯು KPME ಅಡಿಯಲ್ಲಿ ನೊಂದಣಿಯಾಗದಿದ್ದಲ್ಲಿ ಏನು ಮಾಡಬೇಕು?

KPME ಅಡಿಯಲ್ಲಿ ನೋಂದಣಿ ಮಾಡಿಕೊಳ್ಳಲು ತಮ್ಮ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯನ್ನು ಸಂಪರ್ಕಿಸುವುದು.

6. KASS ಯೋಜನೆಯಡಿಯಲ್ಲಿ ಯಾವ ಪ್ಯಾಕೇಜ್ ದರವನ್ನು ಅಳವಡಿಸಿಕೊಳ್ಳಲಾಗಿದೆ?

KASS ಯೋಜನೆಯಡಿಯಲ್ಲಿ CGHS ಪ್ಯಾಕೇಜ್ ದರ ಹಾಗೂ ಕರ್ನಾಟಕ ಸರ್ಕಾರದ ಕೆಲವು ದರಗಳನ್ನು ಅಳವಡಿಸಿಕೊಳ್ಳಲಾಗಿದೆ.

7. ಆಸ್ಪತ್ರೆಗಳಲ್ಲಿ ಉದಾ: 10 ವಿಶೇಷತೆಗಳಿದ್ದಲ್ಲಿ (specialities) ಕೇವಲ 5 ವಿಶೇಷತೆಗಳನ್ನು ಮಾತ್ರ KASS ಯೋಜನೆಯಡಿಯಲ್ಲಿ ನೊಂದಾಯಿಸಿಕೊಳ್ಳಬಹುದೇ?

ಇಲ್ಲ. ನಿಮ್ಮ ಆಸ್ಪತ್ರೆಗಳಲ್ಲಿ ಇರುವ ಎಲ್ಲಾ 10 ವಿಶೇಷತೆಗಳಿದ್ದಲ್ಲಿ (specialities) ಗಳನ್ನು KASS ಯೋಜನೆಯಡಿಯಲ್ಲಿ ನೋಂದಾಯಿಸಿಕೊಳ್ಳತಕ್ಕದ್ದು.

8. ಆಸ್ಪತ್ರೆಗಳಲ್ಲಿ ಹಲವು ಶಾಖೆಗಳಿದ್ದಲ್ಲಿ (branches), ಮುಖ್ಯ ಶಾಖೆಯನ್ನು ನೋಂದಾಯಿಸಿದಲ್ಲಿ, ಇತರೇ ಶಾಖೆಗಳಿಗೂ ಅದೇ ನೋಂದಣಿ ಅನ್ವಯಿಸುತ್ತದೆಯೇ?

ಇಲ್ಲ. ಆಸ್ಪತ್ರೆಯ ಎಲ್ಲಾ ನೋಂದಾಯಿಸಿಕೊಳ್ಳತಕ್ಕದ್ದು. ಶಾಖೆಗಳನ್ನು ಪ್ರತ್ಯೇಕವಾಗಿ KASS ಯೋಜನೆಯಡಿಯಲ್ಲಿ

9. KASS ಯೋಜನೆಯಡಿಯಲ್ಲಿ ನೊಂದಾಯಿಸಿಕೊಳ್ಳಲು ಶುಲ್ಕದ ಮೊತ್ತ ಎಷ್ಟು?

ಈಗಾಗಲೇ SAST ನೋಂದಾಯಿಸಲ್ಪಟ್ಟಿರುವ ಆಸ್ಪತ್ರೆಗಳಿಗೆ ಶುಲ್ಕ ವಿನಾಯಿ ಇರುತ್ತದೆ. ಹೊಸದಾಗಿ ನೋಂದಾಯಿಸಲ್ಪಡುವ ಆಸ್ಪತ್ರೆಗಳಿಗೆ ಶುಲ್ಕ ಈ ಕೆಳಗಿನಂತಿರುತ್ತದೆ.

General speciality/Multi/Eye/Dental - Rs.20,000/-

Diagnostics/Imaging(standalone) - Rs.10,000/-

Hospitals with in-house diagnostics - Rs.30,000/-

10. ಆಸ್ಪತ್ರೆಗಳ ಮತ್ತು KASS ನಡುವಿನ ಒಡಂಬಡಿಕೆಯನ್ನು online ನಲ್ಲಿ upload ಮಾಡಿದರೆ ಸಾಕೆ?

ಆಸ್ಪತ್ರೆಗಳ ಮತ್ತು KASS ನಡುವಿನ ಒಡಂಬಡಿಕೆಯನ್ನು online ನಲ್ಲಿ upload ಮಾಡುವುದರ ಜೊತೆಗೆ Hard copy ಯನ್ನು KASS ಕಛೇರಿಗೆ ತಲುಪಿಸಬೇಕು.

11. HFR create ಮಾಡುವುದು ಹೇಗೆ?

https://facility.ndhm.gov.in HFR create ៨.

12. HFR & OTP ಯಾವ ಮೊಬೈಲ್ ಸಂಖ್ಯೆಗೆ ಹೋಗುತ್ತದೆ? HFR create ಮಾಡುವ ಸಂದರ್ಭದಲ್ಲಿ ಕೊಟ್ಟಿರುವ ಮೊಬೈಲ್ ಸಂಖ್ಯೆಗೆ OTP ಹೋಗುತ್ತದೆ.

13. ಆಸ್ಪತ್ರೆಗಳು AB-ArK ಅಡಿಯಲ್ಲಿ ನೋಂದಾವಣೆ ಆಗಿದ್ದರೆ, KASS ಯೋಜನೆಯಡಿಯಲ್ಲಿ ಪುನಃ ನೋಂದಾಯಿಸಿಕೊಳ್ಳಬೇಕೆ?

, https://hospitals.pmjay.gov.in/empApplicationHome.htm KASS ಯೋಜನೆಯಡಿಯಲ್ಲಿ ನೋಂದಾಯಿಸಿಕೊಳ್ಳಬೇಕು.

ಮಂಗಳವಾರ, ಮಾರ್ಚ್ 18, 2025

health department

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಇಲಾಖೆಯ ಅಧಿಕಾರಿ ಮತ್ತು ನೌಕರರುಗಳ ವರ್ಗಾವಣೆಯನ್ನು ಕರ್ನಾಟಕ ರಾಜ್ಯ ನಾಗರೀಕ ಸೇವಾ (ವೈದ್ಯಾಧಿಕಾರಿಗಳ ಹಾಗೂ ಇತರೆ ಸಿಬ್ಬಂದಿಯ ವರ್ಗಾವಣೆ) ಕಾಯ್ದೆ 2011 ಹಾಗೂ ಕಾಲಕಾಲಕ್ಕೆ ಹೊರಡಿಸಲಾದ ತಿದ್ದುಪಡಿ ಕಾಯ್ದೆಯಡಿ ರಚಿಸಲಾಗಿರುವ ಸಮಾಲೋಚನಾ ನಿಯಮಗಳನ್ವಯ ಆಯಾ ವರ್ಷದ ಎಪ್ರಿಲ್ ಮತ್ತು ಮೇ ಮಾಹೆಯಲ್ಲಿ ನಡೆಸಬೇಕಾಗಿರುತ್ತದೆ.

ಅದರಂತೆ 2025-26ನೇ ಸಾಲಿನಲ್ಲಿ ಸಾರ್ವಜನಿಕ ಹಿತದೃಷ್ಟಿಯ ವರ್ಗಾವಣೆ ನಡೆಸಲು ವರ್ಗಾವಣೆ ಕಾಯ್ದೆ ಮತ್ತು ನಿಯಮ 6 ರಲ್ಲಿ ನಿಗದಿಪಡಿಸಿರುವ ಕನಿಷ್ಠ ಸೇವಾವಧಿಯನ್ನು ದಿನಾಂಕ 31-03-2025 ರ ಅಂತಿಮ ದಿನಾಂಕಕ್ಕೆ ಲೆಕ್ಕಹಾಕಿದಾಗ ಪೂರೈಸಿರುವ ವೃಂದ ಬಿ.ಸಿ & ಡಿ ಅಧಿಕಾರಿಗಳ/ಸಿಬ್ಬಂದಿಗಳ ಮಾಹಿತಿಯನ್ನು ಇದರೊಂದಿಗೆ ಲಗತ್ತಿಸಿರುವ ಅನುಬಂಧದಲ್ಲಿರುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು/ಶಸ್ತ್ರ ಚಿಕಿತ್ಸಕರುಗಳು/ನಿಯಂತ್ರಣಾಧಿಕಾರಿಗಳು ತಮ್ಮ ಜಿಲ್ಲೆ/ವ್ಯಾಪ್ತಿಯಲ್ಲಿನ ಅಧಿಕಾರಿ/ನೌಕರರ ಎಲ್ಲಾ ವೃಂದವಾರು ಹುದ್ದೆಗಳ ಮಾಹಿತಿಯನ್ನು ತಮ್ಮ ಹಂತದಲ್ಲಿ ಹುದ್ದೆವಾರು ಪ್ರತ್ಯೇಕವಾಗಿ ವರ್ಗಾವಣೆ ಕಾಯ್ದೆ ಮತ್ತು ನಿಯಮ-2011 ರನ್ವಯ ಪರಿಶೀಲಿಸಿ ಕ್ರೂಢೀಕರಿಸಿ 10 ದಿನಗಳೊಳಗಾಗಿ ಅದರ ಸಾಪ್ಟ್ ಕಾಫಿ ಹಾಗೂ ಹಾರ್ಡ್ ಕಾಫಿಯನ್ನು ಮಾಹಿತಿಗಳನ್ನು ಸಲ್ಲಿಸುವುದು, ತಪ್ಪಿದಲ್ಲಿ, ಮಾಹಿತಿ ಸಲ್ಲಿಸದಿರುವ ಹಾಗೂ ತಪ್ಪಾದ ಮಾಹಿತಿ ನೀಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಹಾಗೂ ಜಿಲ್ಲಾ ಶಸ್ತ್ರ ಚಿಕಿತ್ಸಕರುಗಳು/ನಿಯಂತ್ರಣಾಧಿಕಾರಿರವರುಗಳನ್ನೇ ನೇರ ಹೊಣೆಗಾರರನ್ನಾಗಿಸಲಾಗುವುದು. ಇದನ್ನು ಅತೀ ಜರೂರೆಂದು ಭಾವಿಸುವುದು. (ಆಯುಕ್ತಾಲಯದಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಗಳ ವಿಷಯ ನಿರ್ವಹಿಸುವ ಸಂಕಲನಗಳಿಗೆ ಸಂಬಂಧಪಟ್ಟ ಸಿಬ್ಬಂದಿಗಳು ವರ್ಗಾವಣೆಗೆ ಸಂಬಂಧಿಸಿದ ಮಾಹಿತಿಗಳನ್ನು ಸಂಬಂಧಪಟ್ಟ ಸಂಸ್ಥೆಗಳಿಂದ ಕ್ರೋಢೀಕರಿಸುವುದು ).

'SSLC' ಪರೀಕ್ಷೆ ಕಾರ್ಯಕ್ಕೆ ಹಾಜರಾಗುವ ಸಿಬ್ಬಂದಿಗಳಿಗೆ ಗುಡ್ ನ್ಯೂಸ್ : ಸಂಭಾವನೆ ಪರಿಷ್ಕರಿಸಿ ರಾಜ್ಯ ಸರ್ಕಾರ ಆದೇಶ.

'ರಾಜ್ಯ ಸರ್ಕಾರಿ' ನೌಕರರೇ ಗಮನಿಸಿ : 'ಆರೋಗ್ಯ ಸಂಜೀವಿನಿ' ಯೋಜನೆಯಡಿ ನೋಂದಣಿ ಕುರಿತು ಇಲ್ಲಿದೆ ಮಹತ್ವದ ಮಾಹಿತಿ

ಈ ಯೋಜನೆಯನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ ಎಂದಿದ್ದಾರೆ. ಈ ಯೋಜನೆಯ ಕಾರ್ಯನೀತಿ ಸೂಚನೆಗಳನ್ನು ಸರ್ಕಾರದ ಆದೇಶ ಸಂಖ್ಯೆ:ಸಿಆಸು...