ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಯುವಕ, ಯುವತಿಯರಿಗೆ ಇದೊಂದು ಉತ್ತಮ ಅವಕಾಶವಾಗಿದೆ.
ರಾಜ್ಯ ಆದಾಯ ತೆರಿಗೆ ಇಲಾಖೆ ಸ್ಟೆನೋಗ್ರಾಫರ್ ಗ್ರೇಡ್ II, ತೆರಿಗೆ ಸಹಾಯಕ, ಮತ್ತು ಮಲ್ಟಿ-ಟಾಸ್ಕಿಂಗ್ ಸ್ಟಾಫ್ (ಎಂಟಿಎಸ್) ಹುದ್ದೆಗಳ ಭರ್ತಿಗೆ ಪ್ರಕ್ರಿಯೆ ಆರಂಭಿಸಿದೆ. ಒಟ್ಟು ವಿವಿಧ 56 ಹುದ್ದೆಗಳಿಗಾಗಿ ನೇಮಕಾತಿ ನಡೆಸಲಾಗುತ್ತಿದೆ. ಆಸಕ್ತರು ಆನಲೈನ್ ಮೂಲಕ (incometax.gov.in) ಏಪ್ರಿಲ್ 5ರೊಳಗೆ ಅರ್ಜಿ ಸಲ್ಲಿಸಬೇಕಿದೆ. ನಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದು ಎಂದಿಲ್ಲ ತಿಳಿಸಲಾಗಿದೆ.
ನೇಮಕಾತಿ ಪೂರ್ಣ ವಿವರ
ನೇಮಕಾತಿ ಸಂಸ್ಥೆ: ಆದಾಯ ತೆರಿಗೆ ಇಲಾಖೆ
ಗರಿಷ್ಠ ವಯೋಮಿತಿ: 27 ವರ್ಷ
ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್
ಅರ್ಜಿ ಸಲ್ಲಿಕೆ ಅಂತಿಮ ದಿನ: ಏಪ್ರಿಲ್ 05
ಸ್ಟೆನೋಗ್ರಾಫರ್ ಗ್ರೇಡ್ II: 2
ತೆರಿಗೆ ಸಹಾಯಕ: 28
ಮಲ್ಟಿ-ಟಾಸ್ಕಿಂಗ್ ಸ್ಟಾಫ್: 26 ಹುದ್ದೆ
ಒಟ್ಟು ಹುದ್ದೆಗಳು: 56
ವಿದ್ಯಾರ್ಹತೆ ಏನಿರಬೇಕು?
ಅರ್ಜಿ ಸಲ್ಲಿಸಬಯಸುವ ಯಾವುದೇ ಅಭ್ಯರ್ಥಿಗಳು ಕನಿಷ್ಠ ಪದವಿ ಪಡೆದಿರಬೇಕು. ಅವರು ಕನಿಷ್ಠ 18 ರಿಂದ ಗರಿಷ್ಠ 27 ವರ್ಷದವರಾಗಿರಬೇಕು. ಎಸ್‌ಎಸ್‌ಎಲ್‌ಸಿ ಉತ್ತೀರ್ಣ ಆದವರಿಗೂ ಇಲ್ಲಿ ಪೋಸ್ಟ್ ಖಾಲಿ ಇದೆ. ಆ ಅಭ್ಯರ್ಥಿಗೆ ಗರಿಷ್ಠ 25 ವರ್ಷ ವಯಸ್ಸಿನ ಮಿತಿ ನಿಗದಿಪಡಿಸಲಾಗಿದೆ. ಎಲ್ಲ ಹುದ್ದೆಗಳ ಆಯ್ಕೆಗೂ ಪ್ರತ್ಯೇಕ ವಿದ್ಯಾರ್ಹತೆ ಪರಿಗಣಿಸಲಾಗುತ್ತದೆ.
ಮಾಸಿಕ ವೇತನ ಎಷ್ಟು?
ಅಭ್ಯರ್ಥಿಗಳು ಸರ್ಕಾರಿ ಮಟ್ಟದಲ್ಲಿ ಉದ್ಯೋಗ ಹೊಂದಲು ಬಯಸಿದಲ್ಲಿ ಕೂಡಲೇ ಅರ್ಜಿ ಸಲ್ಲಿಸಬೇಕು. ಆಯ್ಕೆಯಾದವರಿಗೆ ಗರಿಷ್ಠ 81,100 ರೂಪಾಯಿ ಮಾಸಿಕ ವೇತನ ಇರಲಿದೆ. ಸ್ಟೆನೋಗ್ರಾಫರ್ ಗ್ರೇಡ್ II ಹಾಗೂ ತೆರಿಗೆ ಸಹಾಯಕ ಅಭ್ಯರ್ಥಿಗಳಿಗೆ ಮಾಸಿಕ 25,500 ರಿಂದ 81,100 ರೂಪಾಯಿ. ಮಲ್ಟಿ-ಟಾಸ್ಕಿಂಗ್ ಸ್ಟಾಫ್ ಹುದ್ದೆಗೆ ಆಯ್ಕೆ ಆದರೆ ಮಾಸಿಕ 18,000 ರಿಂದ ರೂ 56,900 ರೂಪಾಯಿ ವಿಧಿಸಲಾಗಿದೆ.
ಅರ್ಜಿ ಸಲ್ಲಿಕೆ ಹೇಗೆ?
ಅರ್ಹ ಅಭ್ಯರ್ಥಿಗಳು ಕೂಡಲೇ ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್ incometax.gov.in ಗೆ ಭೇಟಿ ನೀಡಬೇಕು. ಅಲ್ಲಿನ ಅರ್ಜಿ ವಿಭಾಗಕ್ಕೆ ತೆರಳಿ ಅರ್ಜಿ ಡೌಲ್‌ಲೋಡ್ ಮಡಿಕೊಂಡು ಏಪ್ರಿಲ್ 5ರ ರಾತ್ರಿ 12ರ ಒಳಗೆ ಸೂಕ್ತ ದಾಖಲೆಗಳ ಸಮೇತ ಅರ್ಜಿ ಸಲ್ಲಿಸುವಂತೆ ಕೋರಲಾಗಿದೆ. ಲಿಖಿತ ಪರೀಕ್ಷೆ ಇಲ್ಲದೇ ಆಯ್ಕೆ ಮಾಡಲಾಗುತ್ತದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ