ಹೈದರಾಬಾದ್ ಕರ್ನಾಟಕ ಪ್ರದೇಶ

ಹೈದರಾಬಾದ್ ಕರ್ನಾಟಕ ಪ್ರದೇಶ
Hyderabad Karnataka

ಮಂಗಳವಾರ, ನವೆಂಬರ್ 18, 2025

ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ; ಕೇಂದ್ರ ಸರ್ಕಾರವು ನೌಕರರ ನಿವೃತ್ತಿ ವಯಸ್ಸಿನ ಮಿತಿ 65ಕ್ಕೆ ಏರಿಕೆ

ಸರ್ಕಾರಿ ನೌಕರರ ನಿವೃತ್ತಿ ವಯಸ್ಸು ಮತ್ತು ಪಿಂಚಣಿ ನಿಯಮಗಳಲ್ಲಿ ಇತ್ತೀಚೆಗೆ ಹಲವಾರು ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ. ಈ ಬದಲಾವಣೆಗಳು ಉದ್ಯೋಗಿಗಳು ತಮ್ಮ ವೃತ್ತಿ ಮತ್ತು ನಿವೃತ್ತಿ ಜೀವನಕ್ಕೆ ಸಹಾಯ ಮಾಡಲಿದೆ.ಪ್ರಸ್ತುತ, ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸು 60 ವರ್ಷಗಳು.ಐದನೇ ಕೇಂದ್ರ ವೇತನ ಆಯೋಗದ ಶಿಫಾರಸುಗಳನ್ನು ಅನುಸರಿಸಿ ಈ ನಿಯಮವನ್ನು 1998 ರಲ್ಲಿ ಜಾರಿಗೆ ತರಲಾಯಿತು.

ಸರ್ಕಾರವು ನೌಕರರ ನಿವೃತ್ತಿ ವಯಸ್ಸನ್ನು 62 ಅಥವಾ 65 ಕ್ಕೆ ಹೆಚ್ಚಿಸಬಹುದು ಎನ್ನುವ ಸುದ್ದಿ ಕೇಳಿ ಬಂದಿದೆ. ಕೇಂದ್ರ ಸರ್ಕಾರವು ನೌಕರರ ನಿವೃತ್ತಿ ವಯಸ್ಸನ್ನು 62 ಅಥವಾ 65 ವರ್ಷಗಳಿಗೆ ಏರಿಸಲು ಯೋಜಿಸುತ್ತಿದೆ ಎನ್ನಲಾಗುತ್ತಿದೆ.ಹೊಸ ಪಿಂಚಣಿ ನಿಯಮಗಳ ಮೂಲಕ ನೌಕರರಿಗೆ ಹೆಚ್ಚಿನ ನಮ್ಯತೆ ಮತ್ತು ಆರ್ಥಿಕ ಭದ್ರತೆಯನ್ನು ಒದಗಿಸುವತ್ತ ಸರ್ಕಾರ ಗಮನಹರಿಸಿದೆ. ಈ ಬದಲಾವಣೆಗಳು ಸ್ವಯಂಪ್ರೇರಿತ ನಿವೃತ್ತಿ (ವಿಆರ್‌ಎಸ್) ತೆಗೆದುಕೊಳ್ಳಲು ಬಯಸುವ ಉದ್ಯೋಗಿಗಳಿಗೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ.

ಇದೀಗ ನಿವೃತ್ತಿ ವಯಸ್ಸಿನ ಏರಿಕೆ ಬಗ್ಗೆ ಲೋಕಸಭೆಯಲ್ಲಿ, ಕೇಂದ್ರ ಸಿಬ್ಬಂದಿ ಸಚಿವ ಡಾ. ಜಿತೇಂದ್ರ ಸಿಂಗ್ ಸ್ಪಷ್ಟ ಮಾಹಿತಿ ನೀಡಿದ್ದಾರೆ. ಸರ್ಕಾರವು ಅಂಥಹ ಯಾವುದೇ ಪ್ರಸ್ತಾಪವನ್ನು ಹೊಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.ನಿವೃತ್ತಿಯಲ್ಲಿಯೂ ವಿಭಿನ್ನ ನಿಯಮಗಳನ್ನು ನೀಡಲಾಗಿದೆ. ಉದಾಹರಣೆಗೆ, ವೈದ್ಯರ ನಿವೃತ್ತಿ ವಯಸ್ಸು 62. ಅವರು ತಮ್ಮ ಪರಿಣತಿಯ ಆಧಾರದ ಮೇಲೆ ಬೋಧನೆ, ರೋಗಿಗಳ ಆರೈಕೆ ಅಥವಾ ಆರೋಗ್ಯ ಕಾರ್ಯಕ್ರಮಗಳನ್ನು ಮುಂದುವರಿಸಲು ಬಯಸಿದರೆ, ಅವರು 65 ವರ್ಷಗಳವರೆಗೆ ಸೇವೆ ಸಲ್ಲಿಸುವ ಆಯ್ಕೆಯನ್ನು ಹೊಂದಿರುತ್ತಾರೆ.

ಕಾಮೆಂಟ್‌ಗಳಿಲ್ಲ:

Pension Scheme: 210 ರೂ. ಹೂಡಿಕೆ ಮಾಡಿ ತಿಂಗಳಿಗೆ 5000 ಪಡೆಯಿರಿ! 8 ಕೋಟಿ ಜನರು ನೋಂದಾಯಿಸಿಕೊಂಡಿರುವ ಬೆಸ್ಟ್‌ ಯೋಜನೆ

ಇನ್ನು ಈ ಅಟಲ್‌ ಪಿಂಚಣಿ ಯೋಜನೆಯನ್ನು (Atal Pension Yojana) ಭಾರತೀಯ ಪಿಂಚಣಿ ನಿಧಿಗಳ ನಿಯಂತ್ರಣ ಪ್ರಾಧಿಕಾರವು (PFRDA) ನಿಯಂತ್ರಿಸುತ್ತದೆ. ನಿವೃತ್ತಿ ಸಮಯದಲ್ಲಿ ಉ...