ಹೈದರಾಬಾದ್ ಕರ್ನಾಟಕ ಪ್ರದೇಶ

ಹೈದರಾಬಾದ್ ಕರ್ನಾಟಕ ಪ್ರದೇಶ
Hyderabad Karnataka

ಮಂಗಳವಾರ, ಮಾರ್ಚ್ 24, 2026

ರಾಜ್ಯ ಸರ್ಕಾರಿ' ನೌಕರರು ಮುಂಬಡ್ತಿ ಪಡೆಯಲು ಇನ್ಮುಂದೆ ತರಬೇತಿ ಕಡ್ಡಾಯ ; ಸರ್ಕಾರದಿಂದ ಗೆಜೆಟ್ ಅಧಿಸೂಚನೆ ಪ್ರಕಟ


ಈ ನಿಯಮಗಳನ್ನು “ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ (ಮುಂಬಡ್ತಿಗಾಗಿ ತರಬೇತಿ ಕಡ್ಡಾಯ) ನಿಯಮಗಳು, 2026” ಎಂದು ಕರೆಯಲಾಗುತ್ತದೆ.

ಯಾರಿಗೆ ಅನ್ವಯ? ಇದು ಗ್ರೂಪ್-ಎ, ಗ್ರೂಪ್-ಬಿ ಮತ್ತು ಗ್ರೂಪ್-ಸಿ ಹುದ್ದೆಗಳಲ್ಲಿರುವ ಎಲ್ಲಾ ಸರ್ಕಾರಿ ನೌಕರರಿಗೆ ಅನ್ವಯಿಸುತ್ತದೆ. ಗ್ರೂಪ್-ಸಿ ನಲ್ಲಿರುವ ಚಾಲಕರು ಮತ್ತು ಗ್ರೂಪ್-ಡಿ ನೌಕರರಿಗೆ ಇದು ಅನ್ವಯಿಸುವುದಿಲ್ಲ.

ತರಬೇತಿ ವಿಧಾನ: ಅಧಿಸೂಚನೆಯಲ್ಲಿ ತಿಳಿಸಿದಂತೆ ಆಫ್‌ಲೈನ್, ಆನ್‌ಲೈನ್ ಅಥವಾ ಹೈಬ್ರಿಡ್ ಮಾದರಿಯಲ್ಲಿ ತರಬೇತಿ ಇರಲಿದೆ.

ಮುಂಬಡ್ತಿಗೆ ಲಿಂಕ್ : ಯಾವುದೇ ಹುದ್ದೆಗೆ ಮುಂಬಡ್ತಿ ಪಡೆಯಲು ಈ ನಿರ್ದಿಷ್ಟ ತರಬೇತಿಯನ್ನು ಪೂರ್ಣಗೊಳಿಸುವುದು ಈಗ ಹೆಚ್ಚುವರಿ ಅರ್ಹತೆಯಾಗಿರುತ್ತದೆ. ತರಬೇತಿ ಘೋಷಣೆಯಾದ 6 ತಿಂಗಳೊಳಗೆ ಅದನ್ನು ಪೂರ್ಣಗೊಳಿಸದಿದ್ದರೆ ಮುಂಬಡ್ತಿಗೆ ಅರ್ಹರಾಗುವುದಿಲ್ಲ.ನಿವೃತ್ತಿಗೆ ಕೇವಲ ಎರಡು ವರ್ಷ ಬಾಕಿ ಇರುವ ನೌಕರರಿಗೆ ಈ ತರಬೇತಿಯಿಂದ ವಿನಾಯಿತಿ ನೀಡಲಾಗಿದೆ.

ಏನಿದೆ ಆದೇಶದಲ್ಲಿ..?

ಶಾಸನಗಳು, ನಿಯಮಗಳು, ವಿನಿಯಮಗಳು, ಕಾರ್ಯಕಾರಿ ಆದೇಶಗಳು, ಇತ್ಯಾದಿಗಳು ಮತ್ತು ಪ್ರತಿಯೊಂದು ವೃಂದದಲ್ಲಿನ ಹುದ್ದೆಗಳಿಗೆ ಅನ್ವಯಿಸಲಾದ ಕರ್ತವ್ಯಗಳನ್ನು ನಿರ್ವಹಿಸಲು ಅಗತ್ಯವಿರುವ ಕ್ಷೇತ್ರ ಜ್ಞಾನವನ್ನು ಗಮನದಲ್ಲಿಟ್ಟುಕೊಂಡು, ಅಧಿಸೂಚನೆಯ ಮೂಲಕ, ಅಂತಹ ಪ್ರತಿಯೊಂದು ಗ್ರೂಪ್-ಎ, ಬಿ ಮತ್ತು ಸಿ ವೃಂದಕ್ಕೂ ಕ್ರಮವಾಗಿ ತರಬೇತಿ ಕೋರ್ಸ್‌ಗಳನ್ನು ನಿಗದಿಪಡಿಸತಕ್ಕದ್ದು. ಈ ಉದ್ದೇಶಕ್ಕಾಗಿ, ಇಲಾಖೆಯ ಮುಖ್ಯಸ್ಥರು ಅಗತ್ಯವೆಂದು ಭಾವಿಸುವ ವ್ಯಕ್ತಿಗಳನ್ನು ಒಳಗೊಂಡ ಸಲಹಾ ಸಮಿತಿಗಳನ್ನು ರಚಿಸಬಹುದು ಮತ್ತು ತರಬೇತಿಗಾಗಿ ಕೋರ್ಸ್‌ಗಳ ಪಟ್ಟಿಯನ್ನು ರೂಪಿಸತಕ್ಕದ್ದು. ಸಂಪನ್ಮೂಲ ವ್ಯಕ್ತಿಗಳನ್ನು ಗುರುತಿಸಲು ಮತ್ತು ಆ ಇಲಾಖೆಗೆ ನಿರ್ದಿಷ್ಟವಾದ ಕ್ಷೇತ್ರಗಳಿಗೆ ಆನ್‌ಲೈನ್ ತರಬೇತಿ ಕೋರ್ಸ್‌ಗಳನ್ನು ರಚಿಸಲು ಮತ್ತು ಅಗತ್ಯವಿರುವಂತೆ ಆಫ್‌ಲೈನ್ ತರಬೇತಿಯನ್ನು ನಡೆಸಲು ಅಗತ್ಯವಾದ ವ್ಯವಸ್ಥೆಗಳನ್ನು ಮಾಡಲು ಇಲಾಖೆಗಳ ಮುಖ್ಯಸ್ಥರು ಜವಾಬ್ದಾರರಾಗಿರುತ್ತಾರೆ. ಬಡ್ತಿಯ ಹಿಂದಿನ ವರ್ಷದಲ್ಲಿ, ಅಧಿಸೂಚನೆಯಂತೆ ಕನಿಷ್ಠ ಹತ್ತು ದಿನಗಳ ಆಫ್‌ಲೈನ್ ತರಬೇತಿಯನ್ನು ಪಡೆದಿಲ್ಲದಿದ್ದರೆ, ಯಾವುದೇ ಸರ್ಕಾರಿ ಉದ್ಯೋಗಿ ಮುಂದಿನ ವೃಂದಕ್ಕೆ ಬಡ್ತಿ ಪಡೆಯಲು ಅರ್ಹನಾಗತಕ್ಕದ್ದಲ್ಲ.

ಆಫ್‌ಲೈನ್ ತರಬೇತಿಯೊಂದಿಗೆ, ಪ್ರತಿಯೊಬ್ಬ ಸರ್ಕಾರಿ ಉದ್ಯೋಗಿಯು ಅಧಿಸೂಚಿತ ಆನ್‌ಲೈನ್ ತರಬೇತಿ ಕೋರ್ಸ್‌ ಗಳನ್ನು ಕಡ್ಡಾಯವಾಗಿ ಪೂರ್ಣಗೊಳಿಸಬೇಕು ಮತ್ತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಆಡಳಿತ ಸುಧಾರಣೆ) ಸೂಚಿಸಿದಂತೆ ಆನ್‌ಲೈನ್ ಕಲಿಕಾ ವೇದಿಕೆಯಲ್ಲಿ ಪ್ರತಿ ವರ್ಷ ಕನಿಷ್ಠ ಸಂಖ್ಯೆಯ ಅಂಕಗಳನ್ನು ಗಳಿಸಬೇಕು.

ತರಬೇತಿಯ ಆದ್ಯತೆ.- ಪ್ರತಿಯೊಬ್ಬ ಸರ್ಕಾರಿ ಉದ್ಯೋಗಿಯು ನಿಯಮ 4 ಮತ್ತು ನಿಯಮ5ರ ಪ್ರಕಾರ ತರಬೇತಿ ಪಡೆಯಬೇಕಾದ ಸಂಸ್ಥೆಗೆ Integrated Government Online Training (iGOT) (In person) ತರಬೇತಿಗಾಗಿ ಅರ್ಜಿ ಸಲ್ಲಿಸಬೇಕು. ಸಂಬಂಧಪಟ್ಟ ಸರ್ಕಾರಿ ನೌಕರರು ನಿಯಮ 4ರಲ್ಲಿ ಸೂಚಿಸಿದಂತೆ ಆಫ್‌ಲೈನ್ ತರಬೇತಿಗಾಗಿ ಅರ್ಜಿ ಸಲ್ಲಿಸಿದ್ದರೆ, ಅವರನ್ನು ಅವರ ವೃಂದದ ಜೇಷ್ಟತೆಯ ಕ್ರಮದಲ್ಲಿ ತರಬೇತಿಗಾಗಿ ಕಳುಹಿಸತಕ್ಕದ್ದು.

   

ಕಾಮೆಂಟ್‌ಗಳಿಲ್ಲ:

ರಾಜ್ಯ ಸರ್ಕಾರಿ' ನೌಕರರು ಮುಂಬಡ್ತಿ ಪಡೆಯಲು ಇನ್ಮುಂದೆ ತರಬೇತಿ ಕಡ್ಡಾಯ ; ಸರ್ಕಾರದಿಂದ ಗೆಜೆಟ್ ಅಧಿಸೂಚನೆ ಪ್ರಕಟ

ಈ ನಿಯಮಗಳನ್ನು “ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ (ಮುಂಬಡ್ತಿಗಾಗಿ ತರಬೇತಿ ಕಡ್ಡಾಯ) ನಿಯಮಗಳು, 2026” ಎಂದು ಕರೆಯಲಾಗುತ್ತದೆ...