ಕಡಿಮೆ ಸಂಬಳ ಹೊಂದಿರುವವರಿಗೆ ಈ ಅಟಲ್ ಪೆನ್ಷನ್ ಸ್ಕೀಂ ಬಹಳ ಅನುಕೂಲವೆಂದು ಪರಿಗಣಿಸಲಾಗಿದೆ. ಇದೀಗ ಅಟಲ್ ಪಿಂಚಣಿ ಯೋಜನೆಗೆ ಇದುವರೆಗೆ 8.34 ಕೋಟಿ ಜನರು ನೋಂದಾಯಿಸಿಕೊಂಡಿದ್ದಾರೆ ಎಂದು ವರದಿಯಾಘಿದೆ. ಅದರಲ್ಲೂ 4.04 ಕೋಟಿ ಮಹಿಳೆಯರೇ ನೋಂದಾಯಿಸಿಕೊಂಡಿದ್ದಾರೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಕೋಟಿ ಕೋಟಿ ಜನರು ಅಟಲ್ ಪಿಂಚಣಿ ಯೋಜನೆಯಲ್ಲಿ!
ಅಟಲ್ ಪಿಂಚಣಿ ಯೋಜನೆ (APY) 2025ರಲ್ಲಿ ಅಕ್ಟೋಬರ್ ಅಂತ್ಯಕ್ಕೆ 8.34 ಕೋಟಿ ನೋಂದಣಿಗಳನ್ನು ತಲುಪಿದೆ ಎಂದು ವರದಿಯಾಗಿದೆ. ಈ ಪೈಕಿ 4.04 ಕೋಟಿ ಮಹಿಳೆಯರೇ ನೋಂದಾಯಿಸಿಕೊಂಡಿದ್ದು, ಇದು ಒಟ್ಟು ಸದಸ್ಯತ್ವದ ಶೇ. 48ರಷ್ಟಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಬಗ್ಗೆ ಲೋಕಸಭೆಯಲ್ಲಿ ಮಾಹಿತಿ ನೀಡಿ, APYಗೆ ದೇಶಾದ್ಯಂತ ವ್ಯಾಪಕ ಬೇಡಿಕೆಯಿದೆ ಎಂದು ಹೇಳಿದ್ದಾರೆ.
ಕೋಟಿ ಕೋಟಿ ನೋಂದಣಿ
2015ರ ಮೇ 9ರಂದು ಆರಂಭಗೊಂಡ ಈ ಅಟಲ್ ಪಿಂಚಣಿ ಯೋಜನೆ, ಇಂದು ಕೋಟಿ ಕೋಟಿ ಜನರ ಆದಾಯದ ಮೂಲವಾಗಿದೆ. ಇದು ಕಡಿಮೆ ಆದಾಯ ಪಡೆಯುವ ಮತ್ತು ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಆರ್ಥಿಕ ಭದ್ರತೆ ಒದಗಿಸುವ ಗುರಿ ಹೊಂದಿದೆ. 18 ರಿಂದ 40 ವರ್ಷ ವಯಸ್ಸಿನ, ಬ್ಯಾಂಕ್ ಅಥವಾ ಅಂಚೆ ಉಳಿತಾಯ ಖಾತೆ ಹೊಂದಿರುವ ಭಾರತೀಯರಿಗೆ ಇದು ಸೂಕ್ತವಾಗಿದೆ. 60 ವರ್ಷ ತುಂಬಿದ ನಂತರ ಮಾಸಿಕ ಪಿಂಚಣಿ ದೊರೆಯಲಿದ್ದು, ಮೊದಲ ಪಿಂಚಣಿ 2035 ರಿಂದ ಲಭ್ಯವಾಗಲಿದೆ.
ಯೋಜನೆಯ ಅರಿವಿಗಾಗಿ ಹೊಸ ಕ್ರಮ
ಯೋಜನೆಯ ಬಗ್ಗೆ ಮತ್ತಷ್ಟು ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ಹಾಗೂ ವ್ಯಾಪ್ತಿ ಹೆಚ್ಚಿಸಲು ಸರ್ಕಾರ, ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ಹಲವು ಉಪಕ್ರಮಗಳನ್ನು ಕೈಗೊಂಡಿವೆ. ರಾಷ್ಟ್ರವ್ಯಾಪಿ ಜಾಹೀರಾತುಗಳು, 13 ಪ್ರಾದೇಶಿಕ ಭಾಷೆಗಳಲ್ಲಿ ಕಿರುಪುಸ್ತಕಗಳು ಮತ್ತು ಬ್ಯಾಂಕಿಂಗ್ ಪ್ರತಿನಿಧಿಗಳು, SHG ಸದಸ್ಯರು ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ..
ಅಟಲ್ ಪಿಂಚಣಿ ಯೋಜನೆ ಯಾರು ಮಾಡಬಹುದು?
ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸದವರು ಯಾರು ಬೇಕಾದರು ಈ ಯೋಜನೆಯನ್ನು ತೆರಯಬಹುದು.
ಹೂಡಿಕೆ ಮತ್ತು ಪೆನ್ಷನ್:
ಅಟಲ್ ಪಿಂಚಣಿ ಯೋಜನೆ ಮೂಲಕ 5 ರೀತಿಯಲ್ಲಿ ಪಿಂಚಣಿ ಮೊತ್ತ ನೀಡಲಾಗುತ್ತದೆ. ಅಂದರೆ ತಿಂಗಳಿಗೆ 1000, 2000, 3000, 4000, 5000 ರೂ.ಗಳಂತೆ ಪೆನ್ಷನ್ ಸಿಗುತ್ತದೆ. ಇನ್ನು ನೀವು ಕಟ್ಟುವ ಹಣ, ವರ್ಷದ ಮೇಲೆ ಈ ಪಿಂಚಣಿ ಹಣ ನಿರ್ಧರಿಸಲಾಗುತ್ತದೆ.
ನೀವು 5 ಸಾವಿರ ಪಿಂಚಣಿ ಪಡೆಯಬೇಕೆಂದರೆ, 18 ವರ್ಷದಲ್ಲಿ ಆರಂಭಿಸುವುದಾದರೆ ತಿಂಗಳಿಗೆ 210 ರೂ. ಪಾವತಿ ಮಾಡಬೇಕು. ಅಂದರೆ ಇಂದು 42 ವರ್ಷಗಳವರೆಗೆ ಪಾವತಿ ಮಾಡಬೇಕು. ಒಟ್ಟು ಮೊತ್ತ 1.06 ಲಕ್ಷ ಆಗಿರುತ್ತದೆ. 60 ವರ್ಷದಿಂದ ನೀವು ತಿಂಗಳಿಗೆ 5000 ರೂ. ಪಿಂಚಣಿ ಪಡೆಯಬಹುದು. ಅದೇ ರೀತಿ ನಿಮ್ಮ ವಯಸ್ಸಿಗನುಗುಣವಾಗಿ, ನೀವು ಪಡೆಯಲ ಇಚ್ಛಿಸುವ ಪಿಂಚಣಿ ಹಣದ ಮೇಲೆ ನಿಮ್ಮ ಪಾವತಿ ನಿರ್ಧಾರವಾಗುತ್ತದೆ.
Prajwal B Goodreturns
source: goodreturns.in
9000+ ಮ್ಯಾಗಜೀನ್ಸ್ ಎಕ್ಸ್‌ಪ್ಲೋರ್ ಮಾಡಿ


























































