ರಾಜ್ಯದ ಸರ್ಕಾರಿ, ಅನುದಾನಿತ ಪ್ರೌಢಶಾಲಾ ಸಹ ಶಿಕ್ಷಕರು, ಮುಖ್ಯ ಶಿಕ್ಷಕರುಗಳಿಗೆ ದಿನಾಂಕ 01-06-2016ರಿಂದ ಅನ್ವಯವಾಗುವಂತೆ ಮಂಜೂರು ಮಾಡಲಾದ ಒಂದು ಹೆಚ್ಚುವರಿ ವೇತನ ಬಡ್ತಿಯನ್ನು ದಿನಾಂಕ 01-11-2018ಕ್ಕೆ ಮೂಲವೇತನದೊಂದಿಗೆ ವಿಲೀನಗೊಳಿಸುವಾಗ ಉಂಟಾದ ಗೊಂದಲದ ಬಗ್ಗೆ ಮಹತ್ವದ ಮಾಹಿತಿಯನ್ನು ಶಾಲಾ ಶಿಕ್ಷಣ ಇಲಾಖೆ ಹಂಚಿಕೊಂಡಿದೆ.
ಸರ್ಕಾರಿ/ಅನುದಾನಿತ ಪ್ರೌಢಶಾಲಾ ಸಹ ಶಿಕ್ಷಕರು/ಮುಖ್ಯ ಶಿಕ್ಷಕರುಗಳಿಗೆ ಉಲ್ಲೇಖ(2)ರ ಅನ್ವಯ ದಿನಾಂಕ: 01-06-2016 ರಿಂದ ಮಂಜೂರು ಮಾಡಲಾದ ಒಂದು ಹೆಚ್ಚುವರಿ ವೇತನ ಬಡ್ತಿಯನ್ನು ದಿನಾಂಕ: 01-11-2018 ಲವೇತನದೊಂದಿಗೆ ವಿಲೀನಗೊಳಿಸುವಾಗ ಉಂಟಾದ ಗೊಂದಲಗಳ ಬಗ್ಗೆ ಸ್ಪಷ್ಟಿಕರಣ ನೀಡುವಂತೆ ಉಲ್ಲೇಖ(1)ರ ಉಡುಪಿ ಜಿಲ್ಲಾ ಉಪನಿರ್ದೇಶಕರು ಕೋರಿರುತ್ತಾರೆ. ಈ ಸಂಬಂಧ ಉಲ್ಲೇಖ(3)ರ ಅನ್ವಯ ಈ ಕಛೇರಿಯಿಂದ ಅಗತ್ಯ ಸ್ಪಷ್ಟಿಕರಣ ನೀಡಲಾಗಿರುತ್ತದೆ. ಉಲ್ಲೇಖ(3)ರ ಸ್ಪಷ್ಟಿಕರಣದ ನಂತರದಲ್ಲಿ ಇತರೆ ಜಿಲ್ಲೆಗಳಿಂದಲೂ ಸಹ ನೀಡಲಾದ ಸ್ಪಷ್ಟಿಕರಣಕ್ಕೆ ವಿರುದ್ಧವಾಗಿ ವೇತನ ನಿಗದಿಗೊಳಿಸಲಾಗಿದ್ದು, ಈ ಹಿನ್ನಲೆಯಲ್ಲಿ ಉಲ್ಲೇಖ(3)ರಂತೆ ಕ್ರಮವಹಿಸುವ ಬಗ್ಗೆ ಸ್ಪಷ್ಠಿಕರಿಸುವಂತೆ ದೂರವಾಣಿ ಕರೆಗಳು ಸ್ವೀಕೃತವಾಗುತ್ತಿದೆ. ಈ ಹಿನ್ನಲೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಸಹ ಅನ್ವಯಿಸುವಂತೆ ಸಮಗ್ರ ಸುತ್ತೋಲೆಯನ್ನು ಹೊರಡಿಸುವುದು ಸೂಕ್ತವೆಂದು ಪರಿಗಣಿಸಿ ಈ ಕೆಳಕಂಡಂತೆ ಸ್ಪಷ್ಟಿಕರಿಸಿದೆ ಎಂದಿದ್ದಾರೆ.
ಸರ್ಕಾರಿ/ಅನುದಾನಿತ ಪ್ರೌಢಶಾಲಾ ಸಹ ಶಿಕ್ಷಕರು/ಮುಖ್ಯ ಶಿಕ್ಷಕರುಗಳಿಗೆ ದಿನಾಂಕ:01-06-2016 ಅನ್ವಯವಾಗುವಂತೆ ಮಂಜೂರು ಮಾಡಲಾದ ಒಂದು ಹೆಚ್ಚುವರಿ ವೇತನ ಬಡ್ತಿಯನ್ನು ದಿನಾಂಕ: 01-11-2018 ಕ್ಕೆ ಮೂಲವೇತನದೊಂದಿಗೆ ವಿಲೀನಗೊಳಿಸುವಾಗ ದಿ:20.10.2018 ರ ಸರ್ಕಾರ ಆದೇಶ ಸಂಖ್ಯೆ: ಆಇ 28 ಎಸ್.ಆರ್.ಪಿ 2018ರ ಆದೇಶದನ್ವಯ ವೇತನವನ್ನು ನಿಗದಿಪಡಿಸಬೇಕಾಗಿರುತ್ತದೆ ಎಂದು ಹೇಳಿದ್ದಾರೆ.
ಈ ರೀತಿ ವೇತನ ನಿಗದಿಪಡಿಸುವಾಗ ದಿ:01.06.2016 ಕ್ಕೆ ಮಂಜೂರು ಮಾಡಿರುವ ಹೆಚ್ಚುವರಿ ವೇತನ ಬಡ್ತಿಯು ನಿಶ್ಚಿತವಾಗಿದ್ದು, ಕಾಲಕಾಲಕ್ಕೆ ಸದರಿ ಮೊತ್ತ ಪರಿಷ್ಕರಣೆಗೆ ಅವಕಾಶವಿರುವುದಿಲ್ಲ. ಈ ಹಿನ್ನಲೆಯಲ್ಲಿ ದಿ:20.10.2018 ರ ಆದೇಶದಂತೆ ವೇತನ ನಿಗದಿಪಡಿಸುವಾಗ ಈ ಕೆಳಕಂಡಂತೆ ಕ್ರಮವಹಿಸಬೇಕಾಗಿರುತ್ತದೆ.
1. ದಿನಾಂಕ: 01.11.2018 ರಲ್ಲಿ ಇದ್ದ ಮೂಲವೇತನ : (ದಿ:01.11.2018 ರಲ್ಲಿದ್ದ ಮೂಲವೇತನ) + (2016 ರಲ್ಲಿ ಮಂಜೂರಾದ ಹೆಚ್ಚುವರಿ ವೇತನ ಬಡ್ತಿ ಮೊತ್ತ)
2. ದಿನಾಂಕ: 01.11.2018 ಕ್ಕೆ ವಿಲೀನಗೊಳಿಸಿದ ನಂತರ ಮೂಲವೇತನ: (ಕ್ರಸಂ.(1)ರ ಒಟ್ಟಾರೆ ಮೊತ್ತ
3. ದಿನಾಂಕ: 01.11.2018 ಕ್ಕೆ ಪರಿಷ್ಕೃತ ವೇತನ ಶ್ರೇಣಿಯ ಅನ್ವಯಿಸುವ ವೇತನ ಹಂತದಲ್ಲಿ ವೇತನ ನಿಗದಿಹುದ್ದೆಯ ವೇತನ ಶ್ರೇಣಿಯಲ್ಲಿನ ವಾರ್ಷಿಕ ವೇತನ ಬಡ್ತಿಯ ಮುಂದಿನ ಹಂತ]
4. ಮುಂದಿನ ವಾರ್ಷಿಕ ಬಡ್ತಿ ದಿನಾಂಕಯಥಾಸ್ಥಿತಿ]
ಇದನ್ನು ಉದಾಹರಣೆ ರೂಪವಾಗಿ ಈ ಕೆಳಕಂಡಂತೆ ವಿವರಿಸಿದೆ.
1. ದಿನಾಂಕ: 31.10.2018 ಕ್ಕೆ ಲಭ್ಯವಿದ್ದ, ಮೂಲವೇತನ: ರೂ.37900+600(ಹೆ.ವೇ.ಬಡ್ತಿ)/-
2. ದಿನಾಂಕ: 01.11.2018 ಕ್ಕೆ ಹೆಚ್ಚುವರಿ ವೇತನ ಬಡ್ತಿ:.38500/-
ವಿಲೀನಗೊಳಿಸಿದ ನಂತರದ ಮೂಲ ವೇತನ:.38850/-
3. ದಿನಾಂಕ: 01.11.2018 ಕ್ಕೆ 2018ರ ಪರಿಷ್ಕೃತ ವೇತನ ಶ್ರೇಣಿ ಯಲ್ಲಿನ ವಾರ್ಷಿಕ ವೇತನ ಬಡ್ತಿಯ ಮುಂದಿನ ವೇತನ ಹಂತ 4. ಮುಂದಿನ ವಾರ್ಷಿಕ ವೇತನ ಬಡ್ತಿ ದಿನಾಂಕ : ಸಂದರ್ಭಾನುಸಾರ ಮೊದಲನೇ ಜನವರಿ- 2019 ಅಥವಾ ಮೊದಲನೇ ಜುಲೈ-2019
"ದಿ:20.10.2018 ರ ಆದೇಶದಲ್ಲಿ ಪರಿಷ್ಕೃತ ವೇತನ ಶ್ರೇಣಿಯಲ್ಲಿ ವೇತನ ಪುನರ್ ನಿಗದಿಗೆ ಅವಕಾಶ ನೀಡಿರುವುದಿಲ್ಲ".
2018ರ ಪರಿಷ್ಕೃತ ವೇತನ ಶ್ರೇಣಿಯಲ್ಲಿ ದಿ:01.07.2017 ರಿಂದ ದಿ:30.06.2018 ರ ಅವಧಿಯಲ್ಲಿ ಮಾತ್ರ ವೇತನ ಪುನರ್ ನಿಗದಿಗೆ ಅವಕಾಶ ಕಲ್ಪಿಸಲಾಗಿದೆ.
ಪ್ರಸ್ತಾಪಿತ ವೇತನ ನಿಗದಿಯು ದಿ:30.06.2018 ರ ನಂತರದ ಅವಧಿಗೆ ಸಂಬಂಧಿಸಿರುವುದರಿಂದ ಮತ್ತೊಮ್ಮೆ ಪರಿಷ್ಕೃತ ವೇತನ ಶ್ರೇಣಿಯಲ್ಲಿ ವೇತನ ಪುನ ನಿಗದಿಗೆ ಅವಕಾಶವಿರುವುದಿಲ್ಲ. ಸರ್ಕಾರಿ/ಅನುದಾನಿತ ಪ್ರೌಢಶಾಲಾ ಸಹ ಶಿಕ್ಷಕರು/ಮುಖ್ಯ ಶಿಕ್ಷಕರುಗಳಿಗೆ ದಿನಾಂಕ:01-06-2016 ಅನ್ವಯವಾಗುವಂತೆ ಮಂಜೂರು ಮಾಡಲಾದ ಒಂದು ಹೆಚ್ಚುವರಿ ವೇತನ ಬಡ್ತಿಯನ್ನು ದಿನಾಂಕ: 01-II-2018 ವೇತನದೊಂದಿಗೆ ವಿಲೀನಗೊಳಿಸಿ ವೇತನ ನಿಗದಿಪಡಿಸುವುದಕ್ಕೆ ಸಂಬಂಧಿಸಿದಂತೆ ಮೇಲಿನಂತೆ ಸ್ಪಷ್ಠಿಕರಿಸುತ್ತಾ ಅದರಂತೆ ಮುಖ್ಯೋಪಾಧ್ಯಾಯರುಗಳಿಗೆ ಸೂಚಿಸಿದೆ. ಒಂದು ವೇಳೆ ಇದಕ್ಕೆ ವ್ಯತಿರಿಕ್ತವಾಗಿ ವೇತನ ನಿಗದಿಪಡಿಸಿದ್ದಲ್ಲಿ ಅಂತಹ ಪ್ರಕರಣಗಳನ್ನು ಪುನರ್ ಪರಿಶೀಲಿಸಿ ಮರು ವೇತನ ನಿಗದಿಪಡಿಸುವುದು ಹಾಗೂ ಈ ಮುಂಚೆ ನೀಡಲಾದ ಹೆಚ್ಚುವರಿ ವೇತನ/ ಭತ್ಯೆಗಳನ್ನು ಸಂಬಂಧಿಸಿದವರಿಂದ ಕಟಾಯಿಸಿ ಸರ್ಕಾರದ ಲೆಕ್ಕ-ಶೀರ್ಷಿಕೆ ಸಂಖ್ಯೆ "0202-01-102-9-00 -LED-BBB"(K-2_Challan_Ref:-Purpose: Deduct-Refund) ಜಮಾ ಮಾಡಿ ನಿರ್ದೇಶಕರು(ಪ್ರೌಢಶಿಕ್ಷಣ) ರವರಿಗೆ ವರದಿ ಮಾಡುವುದು. ವೇತನವನ್ನು ಮೇಲ್ಕಂಡಂತೆ ನಿಗದಿಪಡಿಸಿದ ನಂತರವೇ ನವೆಂಬರ್-2020 ರ ಮಾಹೆಯ ವೇತನವನ್ನು ಸೆಳೆಯತಕ್ಕದ್ದು.
ರಾಜ್ಯದ ಎಲ್ಲಾ ಜಿಲ್ಲಾ ಉಪನಿರ್ದೇಶಕರುಗಳು ಈ ಬಗ್ಗೆ ವೈಯಕ್ತಿಕ ಗಮನಹರಿಸಿ ತಮ್ಮ ಜಿಲ್ಲೆಗಳಲ್ಲಿನ ಸರ್ಕಾರಿ/ಅನುದಾನಿತ ಪ್ರೌಢಶಾಲಾ ಸಹ ಶಿಕ್ಷಕರು/ಮುಖ್ಯ ಶಿಕ್ಷಕರುಗಳಿಗೆ ವೇತನ ನಿಗದಿಯನ್ನು ಪುನರ್ ಪರಿಶೀಲಿಸಿ ಮೇಲಿನಂತೆ ವೇತನ ನಿಗದಿಯಾಗಿರುವುದನ್ನು ಖಚಿತ ಪಡಿಸಿಕೊಳ್ಳುವುದು. ವ್ಯತಿರಿಕ್ತವಾಗಿ ವೇತನ ನಿಗದಿಪಡಿಸಲಾದ ಪ್ರಕರಣಗಳಲ್ಲಿ ಹೆಚ್ಚುವರಿ ವೇತನ ಪಾವತಿಯಾಗಿರುವ ಮೊತ್ತವನ್ನು ಕಟಾವಣೆ ಮಾಡಿ ಸರ್ಕಾರದ ಲೆಕ್ಕಶೀರ್ಷಿಕೆಗೆ ಜಮಾ ಆಗಿರುವ ಬಗ್ಗೆ ಖಾತರಿ ಪಡಿಸಿಕೊಳ್ಳುವುದು ಸಂಬಂಧಿಸಿದ ಜಿಲ್ಲಾ ಉಪನಿರ್ದೇಶಕರುಗಳ ಜವಾಬ್ದಾರಿಯಾಗಿರುತ್ತದೆ.