ಹೈದರಾಬಾದ್ ಕರ್ನಾಟಕ ಪ್ರದೇಶ

ಹೈದರಾಬಾದ್ ಕರ್ನಾಟಕ ಪ್ರದೇಶ
Hyderabad Karnataka

ಬುಧವಾರ, ಸೆಪ್ಟೆಂಬರ್ 10, 2025

8th pay commission central government employees

ಇದೀಗ 8ನೇ ಪೇ ಕಮಿಷನ್‌ಗಾಗಿ ಕಾಯುತ್ತಿರೋ ಫಲಾನುಭವಿಗಳಿಗೆ ಸಮಾಧಾನಕರ ಸುದ್ದಿಯೊಂದು ಬಂದಿದೆ. ಆಯೋಗ ರಚನೆಯಲ್ಲಿನ ವಿಳಂಬಕ್ಕೆ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿತ್ತು.

ಎಂಟನೇ ವೇತನ ಆಯೋಗದ ವಿಷಯವನ್ನು ರಾಜ್ಯ ಸರ್ಕಾರಗಳೊಂದಿಗೆ ಗಂಭೀರವಾಗಿ ಚರ್ಚೆ ನಡೆಸಲಾಗುವುದು. ಶೀಘ್ರದಲ್ಲಿಯೇ ವೇತನ ಆಯೋಗ ರಚನೆ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಕಳೆದ ತಿಂಗಳಷ್ಟೇ ಆಯೋಗದ ರಚನೆಯ ಕುರಿತು ಕೇಂದ್ರ ಸಚಿವರೊಂದಿಗೆ ಚರ್ಚೆ ನಡೆಸಲಾಗಿತ್ತು.

ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರನ್ನು ಭೇಟಿಯಾಗಿದ್ದ ಭಾರತೀಯ ಮಜ್ದೂರ್ ಸಂಘದ (BMS) ಸರ್ವೋಚ್ಚ ಸಂಸ್ಥೆಯಾದ ಸರ್ಕಾರಿ ನೌಕರರ ರಾಷ್ಟ್ರೀಯ ಒಕ್ಕೂಟದ (GENC) ನಿಯೋಗ, 8ನೇ ವೇತನ ಆಯೋಗಕ್ಕೆ ಸಂಬಂಧಿಸಿದ ಹಲವು ವಿಷಯಗಳ ಕುರಿತು ಚರ್ಚೆ ನಡೆಸಲಾಗಿತ್ತು. ಈ ವರ್ಷ ಜನವರಿಯಲ್ಲಿಯೇ ಎಂಟನೇ ವೇತನ ಆಯೋಗವನ್ನು ರಚಿಸಲಾಗಿತ್ತು. ನೌಕರರು ವೇತನ ಆಯೋಗದ ಸದಸ್ಯರ ನೇಮಕಾತಿ ಮತ್ತು ಉಲ್ಲೇಖ ಅವಧಿಗಾಗಿ ಕಾಯುತ್ತಿದ್ದಾರೆ.

ವಿವಿಧ ವಿಷಯಗಳ ಕುರಿತು ದೀರ್ಘ ಚರ್ಚೆ

ನಿಯೋಗದ ಭೇಟಿ ಬಳಿಕ ಮಾತನಾಡಿರುವ ಕೇಂದ್ರ ಸಚಿವ ಜಿತೇಂದ್ರ ಸಿಂಗ್, ಎಂಟನೇ ವೇತನ ಆಯೋಗದಲ್ಲಿನ ವಿಳಂಬ, ರಾಷ್ಟ್ರೀಯ ಪಿಂಚಣಿ ಯೋಜನೆ ಮತ್ತು ಏಕೀಕೃತ ಯೋಜನೆಯನ್ನು ತೆಗೆದುಹಾಕುವುದು, ಹಳೆಯ ಪಿಂಚಣಿ ಯೋಜನೆಯ ಮರುಸ್ಥಾಪನೆ ಮತ್ತು ಕೋವಿಡ್ -19 ಸಮಯದಲ್ಲಿ ತಡೆಹಿಡಿಯಲಾದ 18 ತಿಂಗಳ ಬಾಕಿ ಡಿಎ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಕೇಂದ್ರ ಸಚಿವರಿಂದ ಸಿಕ್ತು ಭರವಸೆ

ಜನವರಿಯಲ್ಲಿಯೇ ಎಂಟನೇ ವೇತನ ಆಯೋಗ ರಚನೆಯಾದ್ರೂ ಯಾವುದೇ ಪ್ರಗತಿ ಕಾಣದಿರೋದು ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ಅಸಮಾಧಾನಕ್ಕೆ ಕಾರಣವಾಗಿದೆ. ಇದೀಗ ಕೇಂದ್ರ ಸಚಿವರಿಂದ ಸಮಸ್ಯೆ ಇತ್ಯರ್ಥಪಡಿಸುವ ಭರವಸೆ ಸಿಕ್ಕಿದೆ. ಹಳೆಯ ಪಿಂಚಣಿ ಯೋಜನೆಯ ಪುನಃಸ್ಥಾಪನೆಗಾಗಿ ಪಿಂಚಣಿ ಕಾರ್ಯದರ್ಶಿಯೊಂದಿಗೆ ಶೀಘ್ರದಲ್ಲೇ ಮುಂದಿನ ಸಭೆ ನಡೆಸಲಾಗುವುದು. ಅನುಕಂಪದ ನೇಮಕಾತಿ, ಕೇಡರ್ ವಿಮರ್ಶೆ ಮತ್ತು ನಿಯಮಿತ ಜೆಸಿಎಂ ಸಭೆಗಳಂತಹ ಇತರ ವಿಷಯಗಳನ್ನು ಖಚಿತಪಡಿಸಿಕೊಳ್ಳಲಾಗುವುದು ಎಂದು ಜಿತೇಂದ್ರ ಸಿಂಗ್ ತಮ್ಮನ್ನು ಭೇಟಿಯಾದ ನಿಯೋಗಕ್ಕೆ ಭರವಸೆ ನೀಡಿದ್ದಾರೆ



ಕಾಮೆಂಟ್‌ಗಳಿಲ್ಲ:

ರಾಜ್ಯ `ಸರ್ಕಾರಿ ನೌಕರರೇ' ಗಮನಿಸಿ : `ಆರೋಗ್ಯ ಸಂಜೀವಿನಿ ಯೋಜನೆ' ನೋಂದಣಿ ಕುರಿತು ಸರ್ಕಾರದಿಂದ ಮಹತ್ವದ ಆದೇಶ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಸದಸ್ಯರಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸೆಗಳನ್ನು ಒದಗಿಸಲು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ...