ಹೈದರಾಬಾದ್ ಕರ್ನಾಟಕ ಪ್ರದೇಶ

ಹೈದರಾಬಾದ್ ಕರ್ನಾಟಕ ಪ್ರದೇಶ
Hyderabad Karnataka

ಸೋಮವಾರ, ಸೆಪ್ಟೆಂಬರ್ 16, 2024

7th Pay Commission: ಸರ್ಕಾರಿ ನೌಕರರ ಸಾಮೂಹಿಕ ವಿಮಾ ಯೋಜನೆ ಎಷ್ಟು ಏರಿಕೆ

ಆಯೋಗ ತನ್ನ ವರದಿಯಲ್ಲಿ ನೌಕರರಿಗೆ ಸಾಮೂಹಿಕ ವಿಮಾ ಯೋಜನೆ (ಜಿಐಎಸ್) ಎಂದು ಉಲ್ಲೇಖಿಸಿ ವಿವರಣೆ ನೀಡಿದೆ. ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ (ಕೆಜಿಐಡಿ) ಮೂಲಕ ಕರ್ನಾಟಕ ಸರ್ಕಾರವು, ತನ್ನ ನೌಕರರಿಗೆ ಸಾಮೂಹಿಕ ವಿಮಾ ಯೋಜನೆಯನ್ನು ನಿರ್ವಹಿಸುತ್ತಿದೆ. ಈ ಯೋಜನೆಯು ಉಳಿತಾಯಗಳು ಮತ್ತು ವಿಮಾ ಸೌಲಭ್ಯಗಳೆರಡನ್ನೂ ಹೊಂದಿದ್ದು, ಗ್ರೂಪ್-ಡಿ, ಗ್ರೂಪ್-ಸಿ ಮತ್ತು ಗ್ರೂಪ್-ಬಿ ಮತ್ತು ಗ್ರೂಪ್-ಎ ನೌಕರರು ಪ್ರತಿ ತಿಂಗಳು ಕ್ರಮವಾಗಿ ರೂ.120, ರೂ. 240, ರೂ. 360 ಮತ್ತು ರೂ. 480ಗಳ ವಂತಿಗೆ ನೀಡುವ ಅಗತ್ಯವಿದೆ ಎಂದು ಹೇಳಿದೆ.

ವಿಮಾ ರಕ್ಷಣೆಯ ಅಡಿಯಲ್ಲಿ ವಂತಿಗೆಯ ಒಂದು ಭಾಗವನ್ನು (ಪ್ರಸ್ತುತ ಶೇ.25ರಷ್ಟು) ವಿಮಾ ನಿಧಿಯಾಗಿ ತೆಗೆದುಕೊಳ್ಳಲಾಗುತ್ತದೆ. ಸೇವೆ ಸಲ್ಲಿಸುತ್ತಿರುವ ನೌಕರನು ನಿಧನ ಹೊಂದಿದ ಪಕ್ಷದಲ್ಲಿ ರೂ. 1,20,000, ರೂ. 2,40,000, ರೂ. 3,60,000 ಮತ್ತು ರೂ. 4,80,000 ಗಳ ಮೊತ್ತವನ್ನು ಕ್ರಮವಾಗಿ ಗ್ರೂಪ್-ಡಿ, ಗ್ರೂಪ್-ಸಿ ಗ್ರೂಪ್-ಬಿ ಮತ್ತು ಗ್ರೂಪ್-ಎ ನೌಕರರ ನಾಮ ನಿರ್ದೇಶಿತರಿಗೆ ಸಂದಾಯ ಮಾಡಲಾಗುತ್ತದೆ. ಉಳಿದ ವಂತಿಗೆಯನ್ನು (ಶೇ.75 ರಷ್ಟು) ಕಾಲ ಕಾಲಕ್ಕೆ ವಿಧಿಸಲಾಗುವ ಬಡ್ಡಿಯನ್ನು ಗಳಿಸುವ ಉಳಿತಾಯ ನಿಧಿ ಯಾಗಿ ಪರಿಗಣಿಸಲಾಗುತ್ತದೆ.

ಸಂಗ್ರಹವಾದ ಈ ಉಳಿತಾಯ ನಿಧಿಯ ಜೊತೆಗೆ ಬಡ್ಡಿಯನ್ನು ಸೇರಿಸಿ ನೌಕರನು ಸೇವೆಯಲ್ಲಿದ್ದಾಗ ನಿಧನ ಹೊಂದಿದಲ್ಲಿ ಅಥವಾ ನಿವೃತ್ತಿ ಸಂದರ್ಭದಲ್ಲಿ ಇದನ್ನು ಆತ ಅಥವಾ ಆಕೆಗೆ ಸಂದಾಯ ಮಾಡಲಾಗುತ್ತದೆ. ಕೆಎಸ್‌ಜಿಇಎ, ನೌಕರರ ವಂತಿಗೆಯಲ್ಲಿ ಹತ್ತು ಪಟ್ಟು ಪರಿಷ್ಕರಣೆಯನ್ನು (ಪ್ರಸ್ತುತ ವಂತಿಗೆಯ 10 ರಷ್ಟು) ಕೋರಿದ್ದು, ಇದರ ಪರಿಣಾಮವಾಗಿ ಸೇವೆಯಲ್ಲಿರುವಾಗ ನಿಧನ ಹೊಂದಿದ ಸಂದರ್ಭದಲ್ಲಿ ಪಾವತಿಸಬಹುದಾದ ವಿಮೆ ಹಣವು ಹತ್ತು ಪಟ್ಟು ಹೆಚ್ಚಾಗುವುದಕ್ಕೆ ಕಾರಣವಾಗುತ್ತದೆ.


ನೌಕರರ ಉಳಿತಾಯ ನಿಧಿಗಳ ಮೇಲೆ ಪ್ರಸ್ತುತ ವಾರ್ಷಿಕ ಶೇ.7.10 ರಷ್ಟು ಬಡ್ಡಿಯನ್ನು ಗಳಿಸಲಾಗುತ್ತಿದೆ ಎಂದು ಆಯೋಗಕ್ಕೆ ಮಾಹಿತಿ ನೀಡಲಾಗಿದೆ. ಈ ಯೋಜನೆಯು ಸರ್ಕಾರಿ ನೌಕರರಲ್ಲಿ ಉಳಿತಾಯವನ್ನು ಪ್ರೋತ್ಸಾಹಿಸುವುದಲ್ಲದೆ, ಸೇವೆಯನ್ನು ಸಲ್ಲಿಸುವ ನೌಕರರ ಜೀವಕ್ಕೆ ಪರಿಣಾಮಕಾರಿ ರಕ್ಷಣೆಯನ್ನು ಒದಗಿಸುತ್ತದೆ ಎಂದು ಆಯೋಗವು ಅಭಿಪ್ರಾಯ ಪಡುತ್ತದೆ. ಹಾಗೆಯೇ, ಇದು ವಂತಿಗೆ ಆಧಾರಿತ ಯೋಜನೆಯಾಗಿರುವುದರಿಂದ, ರಾಜ್ಯ ಸರ್ಕಾರವು ಅದರ ಬಡ್ಡಿ ಬಾಧ್ಯತೆಯನ್ನು ನೀಗಿಸಲು ಗಮನಾರ್ಹ ಆಯವ್ಯಯ ಅವಕಾಶ ಕಲ್ಪಿಸುವ ಅವಶ್ಯಕತೆ ಇರುವುದಿಲ್ಲ.


ಆಯೋಗ ಮಾಡಿರುವ ಶಿಫಾರಸುಗಳು: ಅದರಂತೆ, ಆಯೋಗವು, ಪ್ರತಿ ತಿಂಗಳ ವಂತಿಗೆಯಲ್ಲಿ ಪರಿಷ್ಕರಣೆಯನ್ನು ಶಿಫಾರಸು ಮಾಡುತ್ತದೆ ಎಂದು ಹೇಳಿದೆ. ಸಾಮೂಹಿಕ ವಿಮಾ ಯೋಜನೆಯ ಮಾಸಿಕ ವಂತಿಗೆಯಲ್ಲಿ ಪರಿಷ್ಕರಣೆಯನ್ನು ಹೇಗೆ ಮಾಡಬೇಕು ಎಂದು ಶಿಫಾರಸು ಮಾಡಿದೆ.


* ಗ್ರೂಪ್-ಎ ಜಾರಿಯಲ್ಲಿರುವ ಮಾಸಿಕ ವಂತಿಗೆ ರೂ. 480, ಪಾವತಿಸಬೇಕಾದ ವಿಮಾ ಹಣ 4.80 ಲಕ್ಷ. ಹೊಸದಾಗಿ ಶಿಫಾರಸು ಮಾಡಲಾದ ಮಾಸಿಕ ವಂತಿಗೆ ರೂ. 720. ಪಾವತಿಸಬೇಕಾದ ವಿಮಾ ಹಣ 7.20 ಲಕ್ಷ. ಶೇಕಡಾವಾರು ಏರಿಕೆ 50.


* ಗ್ರೂಪ್-ಬಿ ಜಾರಿಯಲ್ಲಿರುವ ಮಾಸಿಕ ವಂತಿಗೆ ರೂ. 360, ಪಾವತಿಸಬೇಕಾದ ವಿಮಾ ಹಣ 3.60 ಲಕ್ಷ. ಹೊಸದಾಗಿ ಶಿಫಾರಸು ಮಾಡಲಾದ ಮಾಸಿಕ ವಂತಿಗೆ ರೂ. 540. ಪಾವತಿಸಬೇಕಾದ ವಿಮಾ ಹಣ 5.40 ಲಕ್ಷ. ಶೇಕಡಾವಾರು ಏರಿಕೆ 50.


* ಗ್ರೂಪ್-ಸಿ ಜಾರಿಯಲ್ಲಿರುವ ಮಾಸಿಕ ವಂತಿಗೆ ರೂ. 240, ಪಾವತಿಸಬೇಕಾದ ವಿಮಾ ಹಣ 2.40 ಲಕ್ಷ. ಹೊಸದಾಗಿ ಶಿಫಾರಸು ಮಾಡಲಾದ ಮಾಸಿಕ ವಂತಿಗೆ ರೂ. 480. ಪಾವತಿಸಬೇಕಾದ ವಿಮಾ ಹಣ 4.80 ಲಕ್ಷ. ಶೇಕಡಾವಾರು ಏರಿಕೆ 100.


* ಗ್ರೂಪ್-ಡಿ ಜಾರಿಯಲ್ಲಿರುವ ಮಾಸಿಕ ವಂತಿಗೆ ರೂ. 120, ಪಾವತಿಸಬೇಕಾದ ವಿಮಾ ಹಣ 1.20 ಲಕ್ಷ. ಹೊಸದಾಗಿ ಶಿಫಾರಸು ಮಾಡಲಾದ ಮಾಸಿಕ ವಂತಿಗೆ ರೂ. 240. ಪಾವತಿಸಬೇಕಾದ ವಿಮಾ ಹಣ 2.40 ಲಕ್ಷ. ಶೇಕಡಾವಾರು ಏರಿಕೆ 100.


ರಾಜ್ಯ ಸರ್ಕಾರಿ ನೌಕರರ ಗಮನಕ್ಕೆ : `ಪರಿಷ್ಕೃತ ಮೂಲ ವೇತನ' ಮತ್ತು `ಮನೆ ಬಾಡಿಗೆ ಭತ್ಯೆ' ಕುರಿತು ಇಲ್ಲಿದೆ ಮಾಹಿತಿ

ಶನಿವಾರ, ಸೆಪ್ಟೆಂಬರ್ 14, 2024

ರಾಜ್ಯ ಸರ್ಕಾರಿ ನೌಕರರೇ ಗಮನಿಸಿ : ಇಲ್ಲಿದೆ ʻNOCʼ ಪಡೆಯುವ ಕುರಿತು ಮುಖ್ಯ ಮಾಹಿತಿ

ರಾಜ್ಯ ಸರಕಾರಿ ನೌಕರರು ಸೇವೆ ಸಲ್ಲಿಸುತ್ತಲೇ ಬೇರೆ ಹುದ್ದೆಗೆ ನೇಮಕಾತಿ ಹೊಂದಲು ಮತ್ತು ಸದರಿ ಹುದ್ದೆಗೆ ಅರ್ಜಿ ಸಲ್ಲಿಸಲು ಮೊದಲೇ ಸೇವೆ ಸಲ್ಲಿಸುತ್ತಿರುವ ಇಲಾಖೆಯ ಮುಖ್ಯಸ್ಥರಿಂದ NOC (No objection Certificate) ನಿರಾಕ್ಷೇಪಣಾ ಪತ್ರ ಪಡೆಯಬೇಕಾಗಿತ್ತು.ಆದರೆ ಇದೀಗ ಆ ನಿಯಮವನ್ನು ತಿದ್ದುಪಡಿ ಮಾಡಿ ಆಯ್ಕೆಯಾದ ನಂತರವೂ ಇಲಾಖೆಯಿಂದ NOC ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಯಾವುದೇ ಸೇವೆ ಅಥವಾ ಹುದ್ದೆಗೆ ಆಯ್ಕೆಯಾಗಲು ಅರ್ಜಿ ಸಲ್ಲಿಸುವ ಒಬ್ಬ ಸರ್ಕಾರಿ ನೌಕರನು ತನ್ನ ಅರ್ಜಿಯನ್ನು ನೇರವಾಗಿ ಆಯ್ಕೆ ಪ್ರಾಧಿಕಾರಕ್ಕೆ ಸಲ್ಲಿಸತಕ್ಕದ್ದು. ಆತನ ಆಯ್ಕೆಯನ್ನು ಅಧಿಸೂಚಿತಗೊಳಿಸಿದ ಕೂಡಲೇ, ಆತನು ಆಯ್ಕೆಯಾದ ವಾಸ್ತವಾಂಶವನ್ನು ತಾನು ಕರ್ತವ್ಯ ನಿರ್ವಹಿಸುತ್ತಿರುವ ಇಲಾಖೆಯ ಇಲಾಖಾ ಮುಖ್ಯಸ್ಥರಿಗೆ ತಿಳಿಸತಕ್ಕದ್ದು ಹಾಗೂ ಆತನು ಆಯ್ಕೆಯಾದ ಹುದ್ದೆಯ ನೇಮಕಾತಿಯನ್ನು ಒಪ್ಪಿಕೊಳ್ಳಲು ಅನುವಾಗುವಂತೆ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ನೀಡುವಂತೆ ಕೋರತಕ್ಕದ್ದು.


ಸರ್ಕಾರಿ ನೌಕರನು ಶಿಸ್ತುಕ್ರಮಕ್ಕೆ ಒಳಗೊಂಡಿದ್ದಲ್ಲಿ ಅಥವಾ ಆತ ಇಲಾಖಾ ವಿಚಾರಣೆ ಅಥವಾ ಕ್ರಿಮಿನಲ್‌ ನಡವಳಿಗಳನ್ನು ಎದುರಿಸುತ್ತಿದ್ದಲ್ಲಿ ಮತ್ತು ಸಾರ್ವಜನಿಕ ಹಿತಾಸಕ್ತಿಯ ಕಾರಣ ಅಥವಾ ಸರ್ಕಾರಿ ನೌಕರ ಮತ್ತು ಸರ್ಕಾರದ ನಡುವೆ ಮಾಡಿಕೊಳ್ಳಲಾದ ಯಾವುದೇ ನಿರ್ದಿಷ್ಟ ಒಪ್ಪಂದಕ್ಕೆ ಅಸಂಗತವಾದಂತಹ ಸಂದರ್ಭದಲ್ಲಿ ಲಿಖಿತ ರೂಪದಲ್ಲಿ ಕಾರಣಗಳನ್ನು ದಾಖಲಿಸಿ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ನೀಡಬಾರದೆಂದು ಇಲಾಖಾ ಮುಖ್ಯಸ್ಥರು ಪರಿಗಣಿಸಿದ ಹೊರತು, ಸಾಮಾನ್ಯವಾಗಿ ಇಲಾಖಾ ಮುಖ್ಯಸ್ಥರು ನಿರಾಕ್ಷೇಪಣಾ ಪ್ರಮಾಣಪತ್ರವನ್ನು ನೀಡತಕ್ಕದ್ದು, ಸಾಧ್ಯವಾದಷ್ಟು ಬೇಗನೆ ಆದರೆ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ಕೋರಿ ಇಲಾಖಾ ಮುಖ್ಯಸ್ಥರಿಗೆ ಸಲ್ಲಿಸಿದ ಅರ್ಜಿಯ ದಿನಾಂಕದ ಮೂವತ್ತು ದಿನಗಳ ಅವಧಿಯ ಒಳಗಾಗಿ ಇಲಾಖಾ ಮುಖ್ಯಸ್ಥರು ಈ ಬಗ್ಗೆ ನಿರ್ಣಯವನ್ನು ತೆಗೆದುಕೊಳ್ಳತಕ್ಕದ್ದು ಹಾಗೂ ಅದನ್ನು ಸಂಬಂಧಿತ ಸರ್ಕಾರಿ ನೌಕರ ಮತ್ತು ಆಯ್ಕೆ ಪ್ರಾಧಿಕಾರ ಮತ್ತು ಉಪ-ನಿಯಮ (1)ರಲ್ಲಿ ಉಲ್ಲೇಖಿಸಲಾದ ಹುದ್ದೆಗೆ ನೇಮಕಾತಿ ಮಾಡುವ ಸಕ್ಷಮ ಪ್ರಾಧಿಕಾರಕ್ಕೆ ತಿಳಿಸತಕ್ಕದ್ದು ಹಾಗೂ ಆ ರೀತಿ ಮಾಡಲು ವಿಫಲವಾದಲ್ಲಿ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ನೀಡಲಾಗಿದೆ ಎಂದು ಪರಿಗಣಿತಗೊಳ್ಳತಕ್ಕದ್ದು.

ಬುಧವಾರ, ಸೆಪ್ಟೆಂಬರ್ 11, 2024

ಹೆಚ್ಚು ವೇತನ ಸಿಗುವ ಟಾಪ್ 5 ಸರ್ಕಾರಿ ನೌಕರಿಗಳಿವು; ಈ ಉದ್ಯೋಗ ಪಡೆಯಲು ಏನು ಮಾಡಬೇಕು ಗೊತ್ತಾ?

ಆರ್‌ಬಿಐ ಗ್ರೇಡ್ ಬಿ ಅಧಿಕಾರಿ

ಆರ್‌ಬಿಐ ಗ್ರೇಡ್ ಬಿ ಅಧಿಕಾರಿಗಳು ವಿತ್ತೀಯ ನೀತಿಗಳ ರಚನೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ. ಹಣಕಾಸಿನ ರಚನೆಯನ್ನು ನಿಯಂತ್ರಿಸುತ್ತಾರೆ ಮತ್ತು ಬ್ಯಾಂಕಿಂಗ್ ಕಾರ್ಯಾಚರಣೆಗಳನ್ನು ನಡೆಸುತ್ತಾರೆ. ಅವರು ಆರ್ಥಿಕ ಮಾಹಿತಿಯನ್ನು ಅರ್ಥೈಸುತ್ತಾರೆ, ಕರೆನ್ಸಿಗಳ ಕಾರ್ಯಾಚರಣೆಗಳನ್ನು ನಿರ್ವಹಿಸುತ್ತಾರೆ ಮತ್ತು ಸಾರ್ವಜನಿಕ ಸಂಬಂಧಗಳ ಉಸ್ತುವಾರಿ ವಹಿಸುತ್ತಾರೆ. ಈ ಹುದ್ದೆಗೆ ಅಭ್ಯರ್ಥಿಯು 60% ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ ಅಥವಾ SC/ ST/ PwBD ಅಭ್ಯರ್ಥಿಗಳಿಗೆ 50% ಮತ್ತು ಅರ್ಥಶಾಸ್ತ್ರ ಅಥವಾ ಹಣಕಾಸು ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು. ಆಯ್ಕೆಯ ಸಂದರ್ಭದಲ್ಲಿ, ಪರೀಕ್ಷೆ ಮತ್ತು ಸಂದರ್ಶನವಿದೆ. ಆರ್‌ಬಿಐ ಗ್ರೇಡ್ ಬಿ ಅಧಿಕಾರಿಗಳಿಗೆ ತಿಂಗಳಿಗೆ 55,200 ರಿಂದ 85,550 ರೂ. ವರೆಗೆ ವೇತನ ನೀಡಲಾಗುತ್ತದೆ ಮತ್ತು ಉನ್ನತ ಶ್ರೇಣಿಗೆ ಬಡ್ತಿಯೊಂದಿಗೆ, 16 ವರ್ಷಗಳ ಸೇವೆಯ ನಂತರ ವೇತನವು 99,750 ರೂ. ತಲುಪಬಹುದು. ಕೆಲವು ಸಂದರ್ಭಗಳಲ್ಲಿ, ವಾರ್ಷಿಕ ವೇತನವು 25 ಲಕ್ಷಗಳನ್ನು ತಲುಪಬಹುದು.

ಭಾರತೀಯ ವಿದೇಶಾಂಗ ಸೇವಾ ಅಧಿಕಾರಿ

IFS ಅಧಿಕಾರಿಗಳು ಸಾಗರೋತ್ತರ ಭಾರತದ ರಾಜತಾಂತ್ರಿಕ ಪ್ರಾತಿನಿಧ್ಯ, ರಾಜತಾಂತ್ರಿಕ ಸಂಬಂಧಗಳು, ಆರ್ಥಿಕ ವಿನಿಮಯ ಮತ್ತು ಸಾಂಸ್ಕೃತಿಕ ಸಂಬಂಧಗಳಿಗೆ ಜವಾಬ್ದಾರರಾಗಿರುತ್ತಾರೆ. ಅವರು ಒಪ್ಪಂದಗಳನ್ನು ತೀರ್ಮಾನಿಸುತ್ತಾರೆ ಮತ್ತು ಅನುಮೋದಿಸುತ್ತಾರೆ, ವಿದೇಶದಲ್ಲಿ ನಾಗರಿಕರನ್ನು ರಕ್ಷಿಸುತ್ತಾರೆ ಮತ್ತು ವಿದೇಶದಲ್ಲಿ ಸಂಸ್ಕೃತಿ ಮತ್ತು ನೀತಿಯನ್ನು ಉತ್ತೇಜಿಸುತ್ತಾರೆ. ಈ ಹುದ್ದೆಗೆ ಬ್ಯಾಚುಲರ್ ಪದವಿಯನ್ನು ಹೊಂದಿರುವುದು ಮತ್ತು CSE ಅನ್ನು ಪಾಸ್ ಮಾಡುವುದು ಕಡ್ಡಾಯವಾಗಿದೆ. ವಿದೇಶಿ ಭಾಷೆಗಳ ಜ್ಞಾನ ಮತ್ತು ಉತ್ತಮ ವಿಶ್ಲೇಷಣಾತ್ಮಕ ಸಂವಹನ ಸಾಮರ್ಥ್ಯಗಳನ್ನು ಪ್ಲಸ್ ಎಂದು ಪರಿಗಣಿಸಲಾಗುತ್ತದೆ. IFS ಅಧಿಕಾರಿಗಳಿಗೆ 56,100 ರಿಂದ 2,25,000 ರೂ. ವರೆಗೆ ಅಧಿಕಾರಿಯ ಶ್ರೇಣಿ ಮತ್ತು ಸೇವೆಯ ವರ್ಷಗಳ ಆಧಾರದ ಮೇಲೆ ವೇತನ ಪಾವತಿಸಲಾಗುತ್ತದೆ.

ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿ

ಬೃಹತ್ ಅರಣ್ಯವನ್ನು ಹೊಂದಿರುವ ವಿಶಾಲವಾದ ದೇಶವಾದ ಭಾರತದಲ್ಲಿ ಅರಣ್ಯಗಳ ರಕ್ಷಣೆ ಮತ್ತು ಸಂರಕ್ಷಣೆಯ ಜವಾಬ್ದಾರಿಯನ್ನು IFS ಅಧಿಕಾರಿಗಳು ಹೊಂದಿದ್ದಾರೆ. ಅರಣ್ಯ, ವನ್ಯಜೀವಿ ಮತ್ತು ಸಂರಕ್ಷಣೆ, ವನ್ಯಜೀವಿಗಳ ಆವಾಸಸ್ಥಾನದ ರಕ್ಷಣೆ, ಮರ ಕಡಿಯುವ ಅಕ್ರಮ ತಡೆಗಟ್ಟುವಿಕೆ ಮತ್ತು ಅರಣ್ಯೀಕರಣದ ನೀತಿ ಅನುಷ್ಠಾನ ಅವರ ಕೆಲವು ಜವಾಬ್ದಾರಿಗಳಾಗಿವೆ. ಈ ಹುದ್ದೆಗಾಗಿ ಅವರು ಅರಣ್ಯ, ಕೃಷಿ ಅಥವಾ ಎಂಜಿನಿಯರಿಂಗ್‌ನಂತಹ ವಿಷಯಗಳಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು ಮತ್ತು ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ನಡೆಸುವ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು. ಇದರೊಂದಿಗೆ ದೈಹಿಕ ಸಾಮರ್ಥ್ಯದ ಅಗತ್ಯತೆಗಳು ಮತ್ತು ಡೆಹ್ರಾಡೂನ್‌ನಲ್ಲಿರುವ ಇಂದಿರಾ ಗಾಂಧಿ ರಾಷ್ಟ್ರೀಯ ಅರಣ್ಯ ಅಕಾಡೆಮಿಯಲ್ಲಿ ಎರಡು ವರ್ಷಗಳ ತರಬೇತಿ ಇರುತ್ತದೆ. IFS ಅಧಿಕಾರಿಗಳಿಗೆ ಪ್ರತಿ ತಿಂಗಳು 56,000 ದಿಂದ 2 ಲಕ್ಷದವರೆಗೆ ವೇತನ ನೀಡಲಾಗುತ್ತದೆ, ಹೀಗಾಗಿ ಇದು ಅತಿ ಹೆಚ್ಚು ಸಂಭಾವನೆ ಪಡೆಯುವ ಸರ್ಕಾರಿ ಹುದ್ದೆಗಳಲ್ಲಿ ಒಂದಾಗಿದೆ.

ಭಾರತೀಯ ಆಡಳಿತ ಸೇವೆಗಳ ಅಧಿಕಾರಿ

ಐಎಎಸ್ ಅಧಿಕಾರಿಗಳು ದೇಶದ ಆಡಳಿತದ ಬೆನ್ನೆಲುಬು. ಅವರು ನೀತಿಗಳನ್ನು ರೂಪಿಸುತ್ತಾರೆ, ಅವುಗಳನ್ನು ಕಾರ್ಯಗತಗೊಳಿಸುತ್ತಾರೆ, ಸಾರ್ವಜನಿಕರಿಂದ ದೂರುಗಳನ್ನು ನಿರ್ವಹಿಸುತ್ತಾರೆ ಮತ್ತು ವಿಪತ್ತು ಪ್ರತಿಕ್ರಿಯೆ ಮತ್ತು ನಿರ್ವಹಣೆಯನ್ನು ಆಯೋಜಿಸುತ್ತಾರೆ. ಈ ಹುದ್ದೆ ಪಡೆಯಲು ಅಭ್ಯರ್ಥಿಗಳು ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು ಮತ್ತು UPSC ನಡೆಸುವ CSE ಅಲ್ಲಿ ತೇರ್ಗಡೆ ಹೊಂದಿರಬೇಕು. ಐಎಎಸ್ ಅಧಿಕಾರಿಗಳು ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್‌ನಲ್ಲಿ ತರಬೇತಿ ಪಡೆಯಲಿದ್ದಾರೆ. ಮೂಲ ವೇತನವು ತಿಂಗಳಿಗೆ ಸರಿಸುಮಾರು 1 ಲಕ್ಷ ರೂಪಾಯಿಗಳಾಗಿದ್ದು, ಇದು ಶ್ರೇಣಿ ಮತ್ತು ಸೇವೆಯ ವರ್ಷಗಳ ಜೊತೆಗೆ ಇತರ ಸೌಲಭ್ಯಗಳು ಮತ್ತು ಭತ್ಯೆಗಳಾದ ವಸತಿ, ಕಾರು ಮತ್ತು ವೈದ್ಯಕೀಯ ಸೌಲಭ್ಯಗಳು ಇತ್ಯಾದಿಗಳನ್ನು ಒಳಗೊಂಡಿದೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಜ್ಞಾನಿ

ಇಸ್ರೋ ವಿಜ್ಞಾನಿಗಳು ಭಾರತದ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನದ ತುದಿಯಲ್ಲಿದ್ದಾರೆ. ಅವರು ಸಂಶೋಧನೆ, ಬಾಹ್ಯಾಕಾಶ ನೌಕೆಗಳು, ಉಪಗ್ರಹಗಳು ಮತ್ತು ಉಡಾವಣಾ ವಾಹನಗಳನ್ನು ವಿನ್ಯಾಸಗೊಳಿಸುತ್ತಾರೆ ಮತ್ತು ಬಾಹ್ಯಾಕಾಶ ಕಾರ್ಯಾಚರಣೆಗಳ ನಿರ್ವಹಣೆಗೆ ಸಹ ಜವಾಬ್ದಾರರಾಗಿರುತ್ತಾರೆ. ಈ ಹುದ್ದೆಗಾಗಿ ಅಭ್ಯರ್ಥಿಗಳು ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕಲ್ ಅಥವಾ ಏರೋಸ್ಪೇಸ್ ಎಂಜಿನಿಯರಿಂಗ್‌ನಲ್ಲಿ ವಿಶೇಷತೆಯೊಂದಿಗೆ ಎಂಜಿನಿಯರಿಂಗ್ ಅಥವಾ ತಂತ್ರಜ್ಞಾನದಲ್ಲಿ ವಿಶ್ವವಿದ್ಯಾಲಯ ಪದವಿಯನ್ನು ಹೊಂದಿರಬೇಕು. ಸ್ನಾತಕೋತ್ತರ ಪದವಿ ಅಥವಾ ಪಿಎಚ್‌ಡಿ ಹೊಂದಿದ್ದರೆ ಹೆಚ್ಚುವರಿ ಪ್ರಯೋಜನವಾಗಲಿದೆ. ಅಭ್ಯರ್ಥಿಗಳು ಲಿಖಿತ ಪರೀಕ್ಷೆ ಮತ್ತು ಸಂದರ್ಶನವನ್ನು ಪಾಸ್ ಮಾಡಬೇಕಿದೆ. ಹೀಗಾಗಿ, ಇಸ್ರೋ ವಿಜ್ಞಾನಿಗಳು ಉದ್ಯೋಗಿಯ ಸ್ಥಾನ ಮತ್ತು ಅನುಭವದ ಆಧಾರದ ಮೇಲೆ ಸುಮಾರು 2.5 ಲಕ್ಷದಿಂದ 5 ಲಕ್ಷದವರೆಗೆ ವೇತನ ಗಳಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ.

7th Pay Commission: ಸರ್ಕಾರಿ ನೌಕರರ ಮನೆ ಖರೀದಿ, ಇತರ ಮುಂಗಡ ಹೆಚ್ಚಳಕ್ಕೆ ಶಿಫಾರಸು

ಕೆ. ಸುಧಾಕರ್‌ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗ ಕರ್ನಾಟಕಸರ್ಕಾರಕ್ಕೆ ಸಲ್ಲಿಕೆ ಮಾಡಿರುವ 558 ಪುಟಗಳ ಸಂಪುಟ-1ರ ವರದಿಯ ಭಾಗ-5ರಲ್ಲಿ ಸರ್ಕಾರಿ ನೌಕರರ ಸಾಲಗಳು ಮತ್ತು ಮುಂಗಡಗಳು ಎಂದು ಹಲವು ಶಿಫಾರಸುಗಳನ್ನು ಮಾಡಿದೆ. ಇವುಗಳಲ್ಲಿ ಮನೆ ನಿರ್ಮಾಣ ಮುಂಗಡ, ಹಬ್ಬದ ಮುಂಗಡ, ಮೋಟಾರು ವಾಹನ ಮುಂಗಡ, ಮುಂತಾದವು ಸೇರಿವೆ.

ಮನೆ ನಿರ್ಮಾಣ/ ಮನೆ ಖರೀದಿಗಾಗಿ ಮುಂಗಡ: ಪ್ರಸ್ತುತದಲ್ಲಿ ಮನೆ ನಿರ್ಮಾಣ/ ಮನೆ ಖರೀದಿಗಾಗಿ 70 ತಿಂಗಳ ಮೂಲ ವೇತನವನ್ನು ಗ್ರೂಪ್ 'ಎ' ಪ್ರವರ್ಗ ದವರಿಗಾಗಿ ಗರಿಷ್ಟ ರೂ. 40 ಲಕ್ಷಗಳವರೆಗೆ ಮತ್ತು ಇತರೆ ಪ್ರವರ್ಗದವರಿಗಾಗಿ ರೂ. 25 ಲಕ್ಷಗಳವರೆಗೆ ಶೇ. 8.50 ಬಡ್ಡಿ ದರದಲ್ಲಿನ ಮುಂಗಡಕ್ಕೆ ನೌಕರರು ಅರ್ಹರಾಗಿರುತ್ತಾರೆ. ಅಸಲನ್ನು 180 ತಿಂಗಳಲ್ಲಿ (ಗರಿಷ್ಠ) ಮತ್ತು ಬಡ್ಡಿಯನ್ನು 60 ತಿಂಗಳಲ್ಲಿ (ಗರಿಷ್ಠ) ಮರು ಪಾವತಿಸಬೇಕಾಗುತ್ತದೆ. ಮನೆ ನಿರ್ಮಾಣ/ ಖರೀದಿಗಾಗಿ 70 ತಿಂಗಳ ಪರಿಷ್ಕೃತ ಮೂಲ ವೇತನವನ್ನು ಉಳಿಸಿಕೊಂಡು ಗ್ರೂಪ್ 'ಎ' ಪ್ರವರ್ಗಕ್ಕೆ ಗರಿಷ್ಟ ರೂ. 55 ಲಕ್ಷ ಮತ್ತು ಇತರೆ ಪ್ರವರ್ಗಗಳಿಗೆ ರೂ. 40 ಲಕ್ಷಗಳ ಮಿತಿಗೊಳಪಟ್ಟು ಜಾರಿಯಲ್ಲಿರುವ ಷರತ್ತನ್ನು ಮತ್ತು ನಿಬಂಧನೆಗಳೊಂದಿಗೆ ಮುಂಗಡದ ಪ್ರಮಾಣವನ್ನು ಹೆಚ್ಚಿಸಲು ಆಯೋಗ ಶಿಫಾರಸು ಮಾಡಿದೆ.

ಹಬ್ಬದ ಮುಂಗಡ: ಸರ್ಕಾರವು ಇತ್ತೀಚಿಗೆ ಹಬ್ಬದ ಮುಂಗಡವನ್ನು ರೂ. 10,000 ಗಳಿಂದ ರೂ. 25,000 ಗಳಿಗೆ ಹೆಚ್ಚಿಸಿರುವುದನ್ನು ಆಯೋಗವು ಗಮನಿಸಿದೆ. ಈ ಮುಂಗಡವು ಬಡ್ಡಿ ರಹಿತವಾಗಿದ್ದು, 10 ತಿಂಗಳ ಕಂತುಗಳಲ್ಲಿ ಮರುಪಾವತಿಸಬೇಕಾಗುತ್ತದೆ. ಮುಂಗಡವನ್ನು ಇತ್ತೀಚೆಗಷ್ಟೆ ಪರಿಷ್ಕರಿಸಿರುವ ಅಂಶವನ್ನು ಪರಿಗಣಿಸಿ ಇದರಲ್ಲಿ ಯಾವುದೇ ಬದಲಾವಣೆಯ ಅಗತ್ಯವಿಲ್ಲವೆಂದು ಆಯೋಗವು ಅಭಿಪ್ರಾಯಪಡುತ್ತದೆ ಎಂದು ಹೇಳಿದೆ.

ಮೋಟಾರು ಕಾರು ಖರೀದಿಗಾಗಿ ಮುಂಗಡ: ಪ್ರಸ್ತುತದಲ್ಲಿ, ರೂ. 67,550 ಅಥವಾ ಮೇಲ್ಪಟ್ಟ ಮೂಲ ವೇತನ ಪಡೆಯುತ್ತಿರುವ ಸಿಬ್ಬಂದಿಯು ಕಾರು ಖರೀದಿಗಾಗಿ ಗರಿಷ್ಠ ರೂ. 3 ಲಕ್ಷಗಳ ಮಿತಿಗೊಳಪಟ್ಟು 16 ತಿಂಗಳ ಮೂಲ ವೇತನದಷ್ಟು ಮುಂಗಡವನ್ನು ಪಡೆಯಲು ಅರ್ಹರಾಗಿರುತ್ತಾರೆ. ಈ ಮುಂಗಡವನ್ನು ವಾರ್ಷಿಕ ಶೇ. 12.50ರ ಬಡ್ಡಿ ದರದಲ್ಲಿ ನೀಡಲಾಗುತ್ತದೆ. ಅಸಲನ್ನು 100 ತಿಂಗಳುಗಳು ಮತ್ತು ಬಡ್ತಿಯನ್ನು 20 ತಿಂಗಳುಗಳಲ್ಲಿ ಮರು ಪಾವತಿಸಲು ಅವಕಾಶವಿರುತ್ತದೆ.

ಪ್ರಸ್ತುತ ಜಾರಿಯಲ್ಲಿರುವ ಷರತ್ತು ಮತ್ತು ನಿಬಂಧನೆಗಳಿಗೆ ಒಳಪಟ್ಟು internal combustion (ಐಸಿ) ಇಂಜಿನ್‌ಗಳುಳ್ಳ ವಾಹನಗಳಿಗೆ ಗರಿಷ್ಠ ಮಿತಿಯನ್ನು ರೂ. 6 ಲಕ್ಷಗಳಿಗೆ ಪರಿಷ್ಕರಣೆಯೊಂದಿಗೆ ಈಗಿರುವಂತೆ 16 ತಿಂಗಳ ಪರಿಷ್ಕೃತ ಮೂಲ ವೇತನದಷ್ಟು ಮುಂಗಡವನ್ನು ಮಂಜೂರು ಮಾಡಲು ಆಯೋಗವು ಶಿಫಾರಸು ಮಾಡುತ್ತದೆ.

ವಿದ್ಯುತ್‌ ವಾಹನಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ, ಐಸಿ ಇಂಜಿನ್‌ಗಳಿಗೆ ಅನ್ವಯವಾಗುವ ಅರ್ಹತೆ ಮತ್ತು ಮರುಪಾವತಿ ಷರತ್ತುಗಳೊಂದಿಗೆ ಗರಿಷ್ಠ ರೂ. 10 ಲಕ್ಷಗಳ ಮಿತಿಗೊಳಪಟ್ಟು, ವಿದ್ಯುತ್ ವಾಹನ ಖರೀದಿಗಾಗಿ ಮುಂಗಡ ಹಣವನ್ನು ಹೆಚ್ಚಿಸಲು ಆಯೋಗವು ಶಿಫಾರಸ್ಸು ಮಾಡುತ್ತದೆ ಎಂದು ವರದಿ ಹೇಳಿದೆ.

ಮಂಗಳವಾರ, ಸೆಪ್ಟೆಂಬರ್ 10, 2024

7th & 8th Pay Commssion: ಈವರೆಗೆ ಸರ್ಕಾರಿ ನೌಕರರ ವೇತನದಲ್ಲಿ ಆದ ಬದಲಾವಣೆ ವಿವರ

ದೇಶದಲ್ಲಿ ಸದ್ಯ 7ನೇ ವೇತನ ಆಯೋಗದಡಿ ವೇತನ ಪರಿಷ್ಕರಣೆ ಲಾಭ ಪಡೆದುಕೊಳ್ಳುತ್ತಿರುವ ಕೇಂದ್ರ ಸರ್ಕಾರಿ ನೌಕರರು, 8ನೇ ವೇತನ ಆಯೋಗದತ್ತ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅಗತ್ಯ ಆರ್ಥಿಕ ಸೌಲಭ್ಯ, ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ತನ್ನ ನೌಕರರಿಗೆ ಮತ್ತು ಪಿಂಚಣಿದಾರರಿಗೆ 1947 ರಲ್ಲಿ ಮೊದಲ ವೇತನ ಆಯೋಗ ಜಾರಿಗೆ ಮಾಡಿತು.

ಇಂದಿನ ವೇತನ ಆಯೋಗದ ಕುರಿತು ಮಾತನಾಡುವ ನಾವೆಲ್ಲರು, ಸ್ವಾತಂತ್ರ್ಯ ಕಾಲದಲ್ಲಿ ಮೊದಲ ಬಾರಿಗೆ ಅನುಷ್ಠಾನಕ್ಕೆ ಬಂದ ವೇತನ ಆಯೋಗದಡಿ ವೇತನ ಪರಿಷ್ಕರಣೆ ಹೇಗೆ ಎಲ್ಲ ಆಗಿತ್ತು. ಅಂದು ಯಾವೆಲ್ಲ ಅಂಶಗಳು ಮಾನದಂಡಗಳಾದವು ಎಂಬುದನ್ನು ನೌಕರರು ತಿಳಿಯಲೇಬೇಕು.

1947ರಿಂದ ಕೇಂದ್ರೀಯ ವೇತನ ಆಯೋಗಗಳಡಿ ಕೇಂದ್ರ ಉದ್ಯೋಗಿಗಳು ವೇತನ ಪರಿಷ್ಕರಣೆ, ಪಿಂಚಣಿ ಹೆಚ್ಚಳ, ತುಟ್ಟಿಭತ್ಯೆ ಏರಿಕೆ ಕಂಡಿದ್ದಾರೆ. ಇದರಿಂದ ಕಾಲ ಕಾಲಕ್ಕೆ ಹಣದುಬ್ಬರ ಸರಿದೂಗಿಸಿಕೊಂಡು ಬಂದಿದ್ದಾರೆ. ಅಂದಿನಿಂದ ಏಳನೇ ವೇತನ ಆಯೋಗದವರೆಗೆ ಜಾರಿಯಾದ ಆಯೋಗಗಳು ನ್ಯಾಯಯುತ ಪರಿಹಾರ ಖಾತ್ರಿಪಡಿಸಿವೆ ಎಂದು 'ಫೈನಾನ್ಷಿಯಲ್ ಎಕ್ಸ್‌ಪ್ರೆಸ್' ವರದಿ ಮಾಡಿದೆ.

ಇಂದು 8ನೇ ವೇತನ ಆಯೋಗದಡಿ ಕನಿಷ್ಠ, ಗರಿಷ್ಠ ವೇತನ ಹೆಚ್ಚಳ, ಪಿಂಚಣಿ ಮತ್ತು ತುಟ್ಟಿಭತ್ಯೆ ಪರಿಷ್ಕರಣೆ ಬಗ್ಗೆ ಚರ್ಚಿಸುತ್ತಿದ್ದೇವೆ. ಇದಕ್ಕು ಮೊದಲು 5ನೇ, 6ನೇ ಮತ್ತು 7ನೇ ವೇತನ ಆಯೋಗಗಳು ಪರಿಚಯಿಸಿದ ಮಹತ್ವದ ಬದಲಾವಣೆಗಳು ಏನು? ವೇತನ, ಪಿಂಚಣಿ ಹೆಚ್ಚಳದಲ್ಲಿ ಹಿಂದಿನ ಪ್ರವೃತ್ತಿಗಳು ಹೇಗಿದ್ದವು. ಮುಖ್ಯವಾಗಿ ವೇತನ ಆಯೋಗ ಎಂದರೇನು? ಎಂಬುದರ ಪೂರ್ಣ ಮಾಹಿತಿ ಇಲ್ಲಿದೆ.

ವೇತನ ಆಯೋಗ ಎಂದರೇನು? ಸ್ಥಾಪಿಸದ್ದೇಕೆ?

ಕೇಂದ್ರ ಸರ್ಕಾರವೇ ಸರ್ಕಾರಿ ನೌಕರರ ವೇತನ, ಪಿಂಚಣಿಗಳಲ್ಲಿನ ಹೊಂದಾಣಿಕೆ ಪರಿಶೀಲಿಸಿ ಶಿಫಾರಸು ಮಾಡಲು ನಿಯಮಿತ ಮಧ್ಯಂತರಗಳಲ್ಲಿ ವೇತನ ಆಯೋಗಗಳನ್ನು ಸ್ಥಾಪಿಸಲಾಗಿದೆ. ಹಣದುಬ್ಬರ, ಆರ್ಥಿಕ ಸ್ಥಿತಿಗತಿಗಳಿಗೆ ತಕ್ಕಹಾಗೇ ನೌಕರರ ವೇತನ ಹೊಂದಣಿಕೆಗಾಗಿ, ಪರಿಷ್ಕರಣೆಗಾಗಿ ಈ ಆಯೋಗಗಳನ್ನು ಸ್ಥಾಪಿಸಲಾಗಿದೆ.

5, 6 ಮತ್ತು 7 ವೇತನ ಆಯೋಗ: ವೇತನ, ಪಿಂಚಣಿ ಬದಲಾವಣೆ

5 ನೇ ವೇತನ ಆಯೋಗ

ಸರ್ಕಾರಿ ನೌಕರರಿಗಾಗಿ ಐದನೇ ವೇತನ ಆಯೋಗವನ್ನು 1994ರ ಏಪ್ರಿಲ್ ನಲ್ಲಿ ಸ್ಥಾಪಿಸಲಾಗಿದ್ದು, ಅದರ ಶಿಫಾರಸುಗಳನ್ನು ಜನವರಿ 1996 ರಿಂದ ಅನುಷ್ಠಾನಕ್ಕೆ ತರಲಾಯಿತು.

* ಕನಿಷ್ಠ ಮೂಲ ವೇತನ ರೂ. 2,750

* ವೇತನ ಶ್ರೇಣಿ 51 ರಿಂದ 34ಕ್ಕೆ ಇಳಿಕೆಗೆ ಶಿಫಾರಸು

* ಸರ್ಕಾರಿ ನೌಕರರಲ್ಲಿ ಶೇಕಡಾ 30ರಷ್ಟು ಕಡಿತ

* ಗ್ರಾಚ್ಯುಟಿ ಸೀಲಿಂಗ್‌ನಲ್ಲಿ 2.5 ಲಕ್ಷದಿಂದ 3.5 ಲಕ್ಷಕ್ಕೆ ಹೆಚ್ಚಳ
6ನೇ ವೇತನ ಆಯೋಗದ ಪರಿಷ್ಕರಣೆ, ಬದಲಾವಣೆ

ಈ ಆರನೇ 6ನೇ ವೇತನ ಆಯೋಗವನ್ನು 2006ರ ಜುಲೈ ತಿಂಗಳಲ್ಲಿ ಸರ್ಕಾರ ಸ್ಥಾಪಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಅಂದಿನ ನೌಕರರ ವೇತನಕ್ಕೆ ಅನುಗುಣವಾಗಿ ಸಲ್ಲಿಕೆಯಾಗಿದ್ದ ಶಿಫಾರಸುಗಳನ್ನು 2008ರ ಆಗಸ್ಟ್‌ನಲ್ಲಿ ಜಾರಿಗೆ ತರಲಾಯಿತು.

* ಕನಿಷ್ಠ ಮೂಲ ವೇತನ: ರೂ 7,000.

* ಫಿಟ್‌ಮೆಂಟ್ ಅಂಶ: ಮೊದಲು 1.74ಕ್ಕೆ ಶಿಫಾರಸು, ಸರ್ಕಾರವು 1.86ಕ್ಕೆ ಏರಿಕೆ ಮಾಡಿತ್ತು

* 2006ರ ಜನವರಿ 1ರಿಂದ ಅನ್ವಯ

* 2008 ಸೆಪ್ಟೆಂಬರ್ 1ರಿಂದ ಭತ್ಯೆಗಳು ಅನ್ವಯ

* ಜೀವನ ವೆಚ್ಚ ಭತ್ಯೆ ಶೇಕಡಾ 16 ರಿಂದ 22ಕ್ಕೆ ಪರಿಷ್ಕರಣೆ

7ನೇ ವೇತನ ಆಯೋಗ ಜಾರಿ, ಬದಲಾವಣೆ

ಹಾಲಿ ಚಾಲ್ತಿಯಲ್ಲಿರುವ ಹಾಗೂ ಮುಂದಿನ ಒಂದೂವರೆ ವರ್ಷದ ನಂತರ ಅಂತ್ಯಗೊಳ್ಳಲಿರುವ 7 ನೇ ವೇತನ ಆಯೋಗವನ್ನು 2014ರ ಫೆಬ್ರವರಿ ಅಂತ್ಯದಲ್ಲಿ ರಚಿಸಲಾಯಿತು. ಅದಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಶಿಫಾರಸುಗಳನ್ನು 2016 ರಿಂದ ಜನವರಿ 1ರಂದು ಜಾರಿಗೊಳಿಸಲಾಯಿತು.

* ಕನಿಷ್ಠ ಮೂಲ ವೇತನ: 18000 ರೂ.

* ಫಿಟ್‌ಮೆಂಟ್ ಅಂಶ: 2.57

* ಕನಿಷ್ಠ ಮೂಲ ವೇತನ 7,000 ರೂ.ನಿಂದ 18,000 ರೂ.

* ನೌಕರರು ಮತ್ತು ಪಿಂಚಣಿದಾರರಿಗೆ ಆರೋಗ್ಯ ವಿಮಾ ಯೋಜನೆಯ ಪರಿಚಯ.

* ವೇತನ ರಚನೆ, ಭತ್ಯೆಗಳು ಮತ್ತು ಪಿಂಚಣಿಗಳ ಸಮಗ್ರ ಪರಿಶೀಲನೆ.

* 2016 ರ ಮೊದಲು ನಿವೃತ್ತರಾದವರಿಗೆ ಪಿಂಚಣಿ ಸೂತ್ರೀಕರಣದ ಪರಿಷ್ಕರಣೆ.

8ನೇ ವೇತನ ಆಯೋಗ ಜಾರಿ ಯಾವಾಗ? ಪರಿಷ್ಕರಣೆ ನಿರೀಕ್ಷೆ

ಸದ್ಯ ಇರುವ ಏಳನೇ ವೇತನ ಆಯೋಗ ಜಾರಿಯಾಗಿ ಎಂಟೂವರೆ ವರ್ಷವಾಗಿದೆ. ಇನ್ನೂ 8ನೇ ವೇತನ ಆಯೋಗವು 2026ರ ಜನವರಿಯಲ್ಲಿ ರಚನೆಯಾಗುವ ನಿರೀಕ್ಷೆ ಇದೆ. ಅದಕ್ಕಾಗಿ ಈಗಾಗಲೇ ನೌಕರರ ಸಂಘ, ಒಕ್ಕೂಟಗಳು ಶಿಫರಾಸು ಮಾಡಿವೆ.

* ವೇತನದಲ್ಲಿ ಸಂಭಾವ್ಯ ಶೇ.20ರಿಂದ 35ರಷ್ಟು ಹೆಚ್ಚಳ ನಿರೀಕ್ಷೆ

* ಹಂತ 1ರಲ್ಲಿ ವೇತನವು 34,560 ರೂ., ಹಂತ 18ರ ವೇತನವು ರೂ. 4.8 ಲಕ್ಷಕ್ಕೆ ಏರಬಹುದು.

* ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ವರ್ಧಿತ ನಿವೃತ್ತಿ ಪ್ರಯೋಜನಗಳು.

* ಫಿಟ್‌ಮೆಂಟ್ ಅಂಶ 1.92 ಆಗುವ ಸಾಧ್ಯತೆ.

* ಫಿಟ್‌ಮೆಂಟ್ ಆಧರಿಸಿ ಕನಿಷ್ಠ ವೇತನ 34,560 ರೂ.ಗೆ ಪರಿಷ್ಕರಣೆ ಸಾಧ್ಯತೆ

* ಕನಿಷ್ಠ ಪಿಂಚಣಿ ಸುಮಾರು 17,280 ರೂ. ನಿರೀಕ್ಷೆ

7th Pay Commission: ಸಹಾಯಕ ನಿರ್ದೇಶಕ, ಅಧೀನ ಕಾರ್ಯದರ್ಶಿ ವೇತನ ಏರಿಕೆ ಮಾಹಿತಿ

ಕರ್ನಾಟಕ ಸರ್ಕಾರ ಕೆ. ಸುಧಾಕರ್‌ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗ ನೀಡಿರುವ ವರದಿಯನ್ನು ಜಾರಿಗೊಳಿಸಿದೆ. ವೇತನ ಆಯೋಗದ ಶಿಫಾರಸುಗಳ ಅನ್ವಯ ಆಗಸ್ಟ್ ತಿಂಗಳಿನಿಂದಲೇ ಸರ್ಕಾರಿ ನೌಕರರ ವೇತನದಲ್ಲಿ ಏರಿಕೆಯಾಗಿದೆ. ಯಾವ ನೌಕರರಿಗೆ ಎಷ್ಟು ವೇತನ ಏರಿಕೆ?

ಎಂಬ ಕುರಿತು ಸರ್ಕಾರ ವಿವರವಾದ ಆದೇಶವನ್ನು ಹೊರಡಿಸಿದೆ.

ಆರ್ಥಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ (ವೆಚ್ಚ) ಡಾ. ರೇಜು ಎಂ. ಟಿ. ವಿವಿಧ ನೌಕರರ ವೇತನ ಎಷ್ಟು ಹೆಚ್ಚಳವಾಗಿದೆ? ಎಂದು ಆದೇಶದಲ್ಲಿ ವಿವರಿಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ, ಅಧೀನ ಕಾರ್ಯದರ್ಶಿ ಹುದ್ದೆಯ ವೇತನ ಎಷ್ಟು ಏರಿಕೆ? ಎಂದು ವಿವರಣೆ ನೀಡಿದ್ದಾರೆ.

7th Pay Commission: ತಾಲೂಕು ಕಛೇರಿ ಉಪ ತಹಶೀಲ್ದಾರ್ ವೇತನ ಎಷ್ಟು ಏರಿಕೆ? 

ಸಹಾಯಕ ನಿರ್ದೇಶಕ: 'A' ಎಂಬ ವ್ಯಕ್ತಿಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ದಿನಾಂಕ 10.02.2023ರಂದು ಸಹಾಯಕ ನಿರ್ದೇಶಕರ ಹುದ್ದೆಗೆ ನೇಮಕಗೊಂಡಿರುತ್ತಾರೆ. 2018ರ ಪ್ರಸಕ್ತ ವೇತನ ಶ್ರೇಣಿಯಲ್ಲಿ ಅವರ ವೇತನ ವಿವರ ಈ ಕೆಳಕಂಡಂತಿದೆ.

ದಿನಾಂಕ 10.02.2023ರಂದು ಧಾರಣೆ ಮಾಡಿದ ಹುದ್ದೆಯ ಪದನಾಮ. ಸಹಾಯಕ ನಿರ್ದೇಶಕರು. ಹುದ್ದೆಗೆ ಅನ್ವಯಿಸುವ ಪ್ರಸಕ್ತ ವೇತನ ಶ್ರೇಣಿ ರೂ. 43100-1100-46400-1250-53900-1450-62600-1650-72500-1900-83900.

ದಿನಾಂಕ 10.02.2023ರಿಂದ ಅನ್ವಯವಾಗುವಂತೆ ಕಾಲ್ಪನಿಕವಾಗಿ ನಿಗದಿಪಡಿಸಬೇಕಾದ ಪರಿಷ್ಕೃತ ಮೂಲ ವೇತನ. ರೂ. 69,250. ದಿನಾಂಕ 01.01.2024 ರಂದು ಲಭ್ಯವಿರುವ ವಾರ್ಷಿಕ ವೇತನ ಬಡ್ತಿಯನ್ನು ಬಿಡುಗಡೆ ಮಾಡಿ ಕಾಲ್ಪನಿಕವಾಗಿ ವೇತನ ನಿಗದಿ. ರೂ.70,900 ಆರ್ಥಿಕ ಸೌಲಭ್ಯವು 01.08.2024 ರಿಂದ ಪ್ರಾಪ್ತವಾಗುತ್ತದೆ. ಪರಿಷ್ಕೃತ ವೇತನ ಶ್ರೇಣಿಯಲ್ಲಿ ಮುಂದಿನ ವೇತನ ಬಡ್ತಿಯ ದಿನಾಂಕ. 1ನೇ ಜನವರಿ 2025.

ಅಧೀನ ಕಾರ್ಯದರ್ಶಿ ವೇತನ: 2018ರ ಪ್ರಸಕ್ತ ವೇತನ ಶ್ರೇಣಿ ರೂ.52850-97100ಯ ಅಧೀನ ಕಾರ್ಯದರ್ಶಿ ಹುದ್ದೆಯನ್ನು ಧಾರಣೆ ಮಾಡಿರುವ 'G' ಎಂಬ ಅಧಿಕಾರಿಯು ಪ್ರಸಕ್ತ ವೇತನ ಶ್ರೇಣಿ ರೂ.74400-109600ರ ಉಪಕಾರ್ಯದರ್ಶಿ ಹುದ್ದೆಗೆ ದಿನಾಂಕ 21.0.262ರಂದು ಪದೋನ್ನತಿ ಹೊಂದಿರುತ್ತಾರೆ. ಅವರ ವೇತನದ ವಿವರ ಈ ಕೆಳಗಿನಂತಿದೆ.

1ನೇ ಜುಲೈ 2022ರಂದು ಧಾರಣೆ ಮಾಡಿದ ಹುದ್ದೆಯ ಪದನಾಮ. ಅಧೀನ ಕಾರ್ಯದರ್ಶಿ. ಹುದ್ದೆಗೆ ಅನ್ವಯಿಸುವ ಪ್ರಸಕ್ತ ವೇತನ ಶ್ರೇಣಿ. ರೂ.52650-1250-53900-1450-62600-1650-72500-1900-83900-2200-97100.

1ನೇ ಜುಲೈ 2022ರಂದು ಇದ್ದಂತೆ ಪ್ರಸಕ್ತ ವೇತನ ಶ್ರೇಣಿಯಲ್ಲಿ ಮೂಲ ವೇತನ. ರೂ. 67,550. ದಿನಾಂಕ 01.07.2023ರಂದು ವಾರ್ಷಿಕ ವೇತನ ಬಡ್ತಿ ಮಂಜೂರು ಮಾಡಿ ವೇತನ ನಿಗದಿ. ರೂ. 69,200.

ಉಪ ಕಾರ್ಯದರ್ಶಿ ಹುದ್ದೆಯ ಪ್ರಸಕ್ತ ವೇತನ ಶ್ರೇಣಿ. ರೂ. 74400-1900-83900-2200-97100-2500-109600. ದಿನಾಂಕ 21.07.2024ರಿಂದ ಅನ್ವಯಿಸುವಂತೆ ಪದೋನ್ನತಿ ಹೊಂದಿದ ಉಪಕಾರ್ಯದರ್ಶಿ ಹುದ್ದೆಯಲ್ಲಿ ನಿಗದಿಪಡಿಸಿದ ವೇತನ. 74,400 ರೂ.ಗಳು. ಪ್ರಸಕ್ತ ವೇತನ ಶ್ರೇಣಿಯಲ್ಲಿ ಮುಂದಿನ ವೇತನ ಬಡ್ತಿಯ ದಿನಾಂಕ 1ನೇ ಜುಲೈ 2024.

2024ನೇ ಪರಿಷ್ಕೃತ ವೇತನ ಶ್ರೇಣಿಯಲ್ಲಿ ಸರ್ಕಾರಿ ನೌಕರನ ವೇತನವನ್ನು ಈ ಕೆಳಕಂಡಂತೆ ಪುನ‌ರ್ ನಿಗದಿಪಡಿಸಿದೆ. ಅಧೀನ ಕಾರ್ಯದರ್ಶಿ ಹುದ್ದೆಗೆ ಅನ್ವಯಿಸುವ ಪರಿಷ್ಕೃತ ವೇತನ ಶ್ರೇಣಿ. ರೂ. 83700-1900-85600-2300-99400-115600-3100-134200-3500-155200.

2024ನೇ ಪರಿಷ್ಕೃತ ವೇತನ ಶ್ರೇಣಿಯಲ್ಲಿ ಸರ್ಕಾರಿ ನೌಕರನ ವೇತನವನ್ನು ಈ ಕೆಳಕಂಡಂತೆ ಪುನ‌ರ್ ನಿಗದಿಪಡಿಸಿದೆ. ಅಧೀನ ಕಾರ್ಯದರ್ಶಿ ಹುದ್ದೆಗೆ ಅನ್ವಯಿಸುವ ಪರಿಷ್ಕೃತ ವೇತನ ಶ್ರೇಣಿ. ರೂ. 83700-1900-85600-2300-99400-115600-3100-134200-3500-155200.

ದಿನಾಂಕ 01.07.2022ರಂದು ರಿಂದ ಜಾರಿಗೆ ಬರುವಂತೆ ಪರಿಷ್ಕೃತ ವೇತನ ಶ್ರೇಣಿಯಲ್ಲಿ ಕಾಲ್ಪನಿಕವಾಗಿ ನಿಗದಿಪಡಿಸಿದ ಮೂಲ ವೇತನ ರೂ. 1,07,500. ಪರಿಷ್ಕೃತ ವೇತನ ಶ್ರೇಣಿಯಲ್ಲಿ ದಿನಾಂಕ 01.07.2023ರಂದು ಲಭ್ಯವಿದ್ದ ವಾರ್ಷಿಕ ವೇತನ ಬಡ್ತಿ ಮಂಜೂರು ಮಾಡಿ ಕಾಲ್ಪನಿಕವಾಗಿ ವೇತನ ನಿಗದಿ ರೂ.1,10,200.

ಉಪ ಕಾರ್ಯದರ್ಶಿ ಹುದ್ದೆಗೆ ಅನ್ವಯಿಸುವ ಪರಿಷ್ಕೃತ ವೇತನ ಶ್ರೇಣಿ. ರೂ.118700-3100-134200-3500-155200-4000-175200. ದಿನಾಂಕ 21.7.2023ರಿಂದ ಅನ್ವಯಿಸುವಂತೆ ಪದೋನ್ನತಿ ವೃಂದದ ಹುದ್ದೆಯಲ್ಲಿ ಕಾಲ್ಪನಿಕವಾಗಿ ಪುನರ್ ನಿಗದಿಪಡಿಸಲಾದ ವೇತನ. ರೂ.1,18,700. ದಿನಾಂಕ 01.07.2024ರಂದು ಲಭ್ಯವಿದ್ದ ವಾರ್ಷಿಕ ವೇತನ ಬಡ್ತಿ ಮಂಜೂರು ಮಾಡಿ ಕಾಲ್ಪನಿಕವಾಗಿ ವೇತನ ನಿಗದಿ ರೂ. 1,21,800. ಆರ್ಥಿಕ ಸೌಲಭ್ಯವು 01.08.2024 ರಿಂದ ಪ್ರಾಪ್ತವಾಗುತ್ತದೆ. ಮುಂದಿನ ವಾರ್ಷಿಕ ವೇತನ ಬಡ್ತಿ. 1ನೇ ಜುಲೈ 2025.



ಸೋಮವಾರ, ಸೆಪ್ಟೆಂಬರ್ 9, 2024

7ನೇ ವೇತನ ಆಯೋಗ: ಸರ್ಕಾರಿ ನೌಕರರ ಮೂಲ ವೇತನ ಶೇ.18.5ರಷ್ಟು ಹೆಚ್ಚಳ

ಒಂದಷ್ಟು ವಿಶೇಷತೆ ಇರುವ ಈ ಯುಪಿಎಸ್ ನಡಿ ಸರ್ಕಾರ ಕೊಡುಗೆ ನೀಡಲಿದೆ.

ಸರ್ಕಾರ ಏಕೀಕೃತ ಪಿಂಚಣಿ ಯೋಜನೆಯಡಿ ನೌಕರರ ಸೇವಾ ಕೊಡುಗೆಯ ಆಧಾರದಲ್ಲಿ ಮೂಲ ವೇತನ ಮತ್ತು ತುಟ್ಟಿಭತ್ಯೆಯ ಶೇಕಡಾ 10 ದೊರೆಯಲಿದೆ. ಈ ವೇಳೆ ಸರ್ಕಾರ ಹಾಲಿ ಸರ್ಕಾರವು ಮೂಲ ವೇತನ 14 ಪ್ರತಿಶತವನ್ನು 18.5 ರಷ್ಟು ಹೆಚ್ಚಿಸಿ ಕೊಡುಗೆ ನೀಡಲಿದೆ ಎಂದು ವರದಿ ಆಗಿದೆ.

ಯೋಜನೆಯಡಿ ಕುಟುಂಬ ಪಿಂಚಣಿ, ನಿವೃತ್ತಿಯ ನಂತರ ಕನಿಷ್ಠ ಖಾತರಿ ಪಿಂಚಣಿ ಮತ್ತು ಒಟ್ಟು ಮೊತ್ತ ಪಾವತಿಗೆ ಸಹ ನಿಬಂಧನೆಗಳು ಇದೆ. ಆದ್ದರಿಂದ ನೌಕರರು ಉದ್ಯೋಗಿಗಳಿಗೆ NPS ನಿಂದ UPS ಎರಡದಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಇದೆ.

ಒಬ್ಬ ನೌಕರರನ 10 ವರ್ಷಗಳ ಕನಿಷ್ಠ ಸೇವಾ ಅವಧಿ ಆಧಾರದಲ್ಲಿ ಪಿಂಚಣಿ ನೀಡಲಾಗುತ್ತದೆ. ಹೊಸ ಪಿಂಚಣಿ ಯೋಜನೆ ಕನಿಷ್ಠ 10 ವರ್ಷಗಳ ಸೇವೆಯ ನಂತರ ನಿವೃತ್ತ ವ್ಯಕ್ತಿಗೆ ಮಾಸಿಕವಾಗಿ 10,000 ರೂ. ಪಿಂಚಣಿ ಸಿಗುವ ಖಾತೆ ನೀಡುತ್ತದೆ. ಇದರೊಂದಿಗೆ ನಿವೃತ್ತಿ ಬಳಿಕ ಗ್ರಾಚ್ಯುಟಿ ಸೇರಿ ದೊಡ್ಡ ಮೊತ್ತವು ಪಿಂಚಣಿದಾರನ ಕೈಗೆ ಸೇರುತ್ತದೆ.

ಕೇಂದ್ರ ಸರ್ಕಾರದ ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್) ಯೋಜನೆ ಅಡಿ ಒಬ್ಬ ಉದ್ಯೋಗ 25 ವರ್ಷಗಳ ಸುದೀರ್ಘ ಸೇವೆ ನೀಡಿದ ಬಳಿಕ ಆ ಉದ್ಯೋಗಿ ಕಳೆದ ವರ್ಷದ ಸರಾಸರಿ ವೇತನದ ಶೇಕಡಾ 50 ರಷ್ಟು ಪಿಂಚಣಿ ಪಡೆಯುತ್ತಾನೆ ಎಂದು ಕೇಂದ್ರ ತಿಳಿಸಿದೆ.

ಇನ್ನೂ 2004ರ ಜನವರಿ ನಂತರ ಕೇಂದ್ರ ಸರ್ಕಾರಿ ವ್ಯಾಪ್ತಿಯಲ್ಲಿ ಉದ್ಯೋಗ ಪಡೆದವರು ಸಹ ಇದ್ದಾರೆ. ಸದ್ಯ ಈ ಪಿಂಚಣಿ ಯೋಜನೆಯಿಂದ ಒಟ್ಟು ಸುಮಾರು 30 ಲಕ್ಷ ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಪ್ರಯೋಜನ ಪಡೆಯಬಹುದು ಎಂದು ಅಂದಾಜಿಸಲಾಗಿದೆ. ಅದೇ ರೀತಿ ವಿವಿಧ ರಾಜ್ಯಗಳಲ್ಲಿ ಈ ಹೊಸ ಪಿಂಚಣಿ ಯೋಜನೆ ಜಾರಿಯಾದರೆ ತಲಾ ಒಟ್ಟು 90 ಲಕ್ಷ ನೌಕರರಿಗೆ ಇದರ ಪ್ರಯೋಜನ ಸಿಗಲಿದೆ ಎಂದು ವಿಶ್ಲೇಷಿಸಲಾಗಿದೆ.

8ನೇ ವೇತನ ಆಯೋಗ: ತುಟ್ಟಿಭತ್ಯೆ ನಿರೀಕ್ಷೆಗಳು

ಈ ಪಿಂಚಣಿ ಯೋಜನೆ ಜಾರಿಯ ಜೊತೆಗೆ ಕೇಂದ್ರ ಸರ್ಕಾರ ಹೊಸ 8ನೇ ವೇತನ ಆಯೋಗ ಜಾರಿ, ಅನುಮೋದನೆ ಕುರಿತು ಕೇಂದ್ರ ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಎಂದು ಕುತೂಹಲದಿಂದ ಕಾಯುತ್ತಿದ್ದಾರೆ. ತುಟ್ಟಿಭತ್ಯೆ, ತುಟ್ಟಿ ಪರಿಹಾರ ಹೆಚ್ಚಳ ನಿರೀಕ್ಷೆಯಲ್ಲಿರುವ ಕೇಂದ್ರ ಸರ್ಕಾರಿ ನೌಕರರು ಇದೇ ಸೆಪ್ಟಂಬರ್ ಅಂತ್ಯಕ್ಕೆ ಸರ್ಕಾರದಿಂದ ಸಿಹಿ ಸುದ್ದಿ ಪಡೆಯಲಿದ್ದಾರೆ.

2024ರ ತುಟ್ಟಿಭತ್ಯೆ ಮತ್ತು ತುಟ್ಟಿ ಪರಿಹಾರವು ಶೇಕಡಾ 4ರಷ್ಟು ಹೆಚ್ಚಳ ಮಾಡಿ ಕೇಂದ್ರ ಸರ್ಕಾರ ಘೋಷಣೆ ಮಾಡುವ ಸಾಧ್ಯತೆ ಇದೆ. ಈಗಾಗಲೇ ಜನವರಿ ಡಿಎ ಏರಿಕೆಯಿಂದ ತುಟ್ಟಿಭತ್ಯೆ ಪ್ರಮಾಣ ಶೇಕಡಾ 50 ರಷ್ಟು ಹೆಚ್ಚಾಗಿದೆ. ಈ ಭಾರಿ ಅದು 54ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

Police ಇಲಾಖೆಯ ಅತ್ಯುನ್ನತ ಹುದ್ದೆ DGP ಆಗೋ ಕನಸು ಇದ್ಯಾ? ಏನೇನು ಸೌಲಭ್ಯ ಸಿಗುತ್ತೆ? ಸಂಬಳವೆಷ್ಟು?

ಡಿಜಿಪಿ ಆಗುವುದು ಹೇಗೆ?

ಡಿಜಿಪಿ ಆಗಬೇಕಾದರೆ ಮೊದಲು ಐಪಿಎಸ್ ಆಗಬೇಕು. ಇದಕ್ಕಾಗಿ, ಪದವಿಯನ್ನು ಪೂರ್ಣಗೊಳಿಸಿದ ನಂತರ, ಅಭ್ಯರ್ಥಿಯು UPSC ಯ ನಾಗರಿಕ ಸೇವೆಗಳ ಪರೀಕ್ಷೆಗೆ ಹಾಜರಾಗಬೇಕಾಗುತ್ತದೆ, ಅದು ಯಶಸ್ವಿಯಾದ ನಂತರ ಅಭ್ಯರ್ಥಿಯು IPS ಹುದ್ದೆಗೆ ನೇಮಕಾತಿಯನ್ನು ಪಡೆಯುತ್ತಾರೆ. ಐಪಿಎಸ್ ಆದ ನಂತರ ಹಲವು ವರ್ಷಗಳ ಸೇವೆ ಮತ್ತು ಬಡ್ತಿಯ ನಂತರವೇ ಡಿಜಿಪಿ ಆಗಲು ಸಾಧ್ಯ. ಇದು ದೀರ್ಘ ಮತ್ತು ಪ್ರಯಾಸಕರ ಪ್ರಕ್ರಿಯೆ. ತಾಳ್ಮೆ ಮತ್ತು ಸಮರ್ಪಣಾ ಭಾವ ಇಲ್ಲಿ ಅತ್ಯಗತ್ಯ. ಹೀಗಾಗಿ ಇದರಲ್ಲಿ ಸತತ ಶ್ರಮ ಮತ್ತು ಕಠಿಣ ಪ್ರಯತ್ನ ಮಾಡುವವರು ಮಾತ್ರ ಯಶಸ್ವಿಯಾಗುತ್ತಾರೆ.

ಡಿಜಿಪಿ ಆಗಲು ಅರ್ಹತೆ

ಮೊದಲನೆಯದಾಗಿ, ಅಭ್ಯರ್ಥಿಯು ಯಾವುದೇ ಸ್ಟ್ರೀಮ್‌ನಿಂದ 12 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
ಇದರ ನಂತರ ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿಯನ್ನು ಪೂರ್ಣಗೊಳಿಸಬೇಕಾಗುತ್ತದೆ.
ಡಿಜಿಪಿ ಆಗಲು ಯುಪಿಎಸ್‌ಸಿ ನಡೆಸುವ ಐಪಿಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯ. ಬಡ್ತಿ ಪಡೆದ ಐಪಿಎಸ್ ಅಧಿಕಾರಿಗಳು ಮಾತ್ರ ಡಿಜಿಪಿ ಆಗಬಹುದು.
ವಯಸ್ಸಿನ ಮಿತಿ ಎಷ್ಟು?

ಡಿಜಿಪಿ ಆಗಲು ಅಗತ್ಯವಿರುವ ಐಪಿಎಸ್ ಪರೀಕ್ಷೆಯ ವಯಸ್ಸಿನ ಮಿತಿ ಹೀಗಿದೆ:
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿ 21 ರಿಂದ 30 ವರ್ಷಗಳು.
OBC ವರ್ಗಕ್ಕೆ 3 ವರ್ಷಗಳ ಸಡಿಲಿಕೆಯನ್ನು ನೀಡಲಾಗುತ್ತದೆ, ಅಂದರೆ ಗರಿಷ್ಠ ವಯಸ್ಸು 33 ವರ್ಷಗಳು.
SC/ST ವರ್ಗಕ್ಕೆ 5 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ, ಅಂದರೆ ಗರಿಷ್ಠ ವಯೋಮಿತಿ 35 ವರ್ಷಗಳು.
ಡಿಜಿಪಿ ವೇತನ ಎಷ್ಟು ಗೊತ್ತಾ?

ಪೊಲೀಸ್ ಇಲಾಖೆಯಲ್ಲಿ ಡಿಜಿಪಿ ಅತ್ಯುನ್ನತ ಹುದ್ದೆಯಾಗಿರುವುದರಿಂದ ಈ ಹುದ್ದೆಗೂ ಅತ್ಯಧಿಕ ವೇತನ ಸಿಗುತ್ತದೆ. ಡಿಜಿಪಿಯ ಮಾಸಿಕ ವೇತನ ಸುಮಾರು 2,25,000 ರೂಪಾಯಿಗಳು. ಇದರೊಂದಿಗೆ ಇನ್ನೂ ಹಲವು ಸೌಲಭ್ಯಗಳನ್ನು ಪಡೆಯುತ್ತಾರೆ. ಇವುಗಳಲ್ಲಿ ಸರ್ಕಾರಿ ವಸತಿ ಮತ್ತು ವಾಚ್‌ಮ್ಯಾನ್ ಮತ್ತು ಅಡುಗೆಯಂತಹ ಸೇವೆಗಳು ಸೇರಿವೆ. ಸರ್ಕಾರಿ ವಾಹನ ಮತ್ತು ಚಾಲಕನ ಸೌಲಭ್ಯ. ವೈದ್ಯಕೀಯ ವಿಮೆಯಂತಹ ಸೌಲಭ್ಯಗಳು. ಉಚಿತ ವಿದ್ಯುತ್ ಮತ್ತು ಉಚಿತ ದೂರವಾಣಿ ಸೌಲಭ್ಯಗಳನ್ನು ಒಳಗೊಂಡಿದೆ.

ಡಿಜಿಪಿ ಜವಾಬ್ದಾರಿಗಳೇನು?

ಡಿಜಿಪಿಯ ಜವಾಬ್ದಾರಿಯು ಇಡೀ ರಾಜ್ಯದ ಪೊಲೀಸ್ ವ್ಯವಸ್ಥೆಯನ್ನು ಸರಿಯಾದ ದಿಕ್ಕಿನಲ್ಲಿ ನಡೆಸುವುದು, ಅಪರಾಧಗಳನ್ನು ತಡೆಯಲು ನೀತಿಗಳನ್ನು ರೂಪಿಸುವುದು, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದನ್ನು ಒಳಗೊಂಡಿದೆ. ರಾಜ್ಯದಲ್ಲಿ ಕಾನೂನನ್ನು ಅನುಸರಿಸಲಾಗಿದ್ಯಾ ಮತ್ತು ಯಾವುದೇ ರೀತಿಯ ಅವ್ಯವಸ್ಥೆಯನ್ನು ನಿಭಾಯಿಸಲಾಗಿದ್ಯಾ ಎಂಬುದನ್ನು ಡಿಜಿಪಿ ಖಚಿತಪಡಿಸಿಕೊಳ್ಳಬೇಕು.

ನೀವು ಏನಾದರೂ ಡಿಜಿಪಿ ಆಗುವ ಕನಸು ಹೊಂದಿದ್ದರೆ ಮೊದಲು ನಿಮ್ಮಲ್ಲಿ ಸೇವೆ, ಸಮರ್ಪಣಾ ಭಾವ, ಸಮತಾ ಭಾವ, ಕಠಿಣ ಪರಿಶ್ರಮ, ನಾಯಕತ್ವ ಗುಣ, ತಾಳ್ಮೆ, ಬುದ್ಧಿವಂತಿಕೆ ಇವೆಲ್ಲವೂ ಬೇಕಾಗುತ್ತದೆ. ನಂತರ ನೀವು ಪರೀಕ್ಷೆಗೆ ಸಿದ್ಧರಾಗಿ ನಿಮ್ಮ ಸೇವೆಯನ್ನು ನಾಡಿಗೆ ನೀಡಲು ತಯಾರು ಮಾಡಬೇಕಾಗುತ್ತದೆ.

ರಾಜ್ಯ ಸರ್ಕಾರಿ ನೌಕರರಿಗೆ

Medical Allowance of state government employees from Rs.200 to Rs.500 per month


ರಾಜ್ಯ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ವೈದ್ಯಕೀಯ ಭತ್ಯೆಯ ದರಗಳನ್ನು ಮಾಸಿಕ 200 ರೂ.ಗಳಿಂದ ಮಾಸಿಕ 500 ರೂ.ಗಳಿಗೆ ಹೆಚ್ಚಿಸಿ ಆದೇಶ ಹೊರಡಿಸಿದೆ.


ಗ್ರೂಪ್‌ ಸಿ ಮತ್ತು ಗ್ರೂಪ್‌ ಡಿ ವೃಂದದ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಾಜ್ಯ ಸರ್ಕಾರಿ ನೌಕರರುಗಳಿಗೆ ಲಭ್ಯವಿರುವ ವೈದ್ಯಕೀಯ ಭತ್ಯೆಯ ದರಗಳನ್ನು ಮಾಸಿಕ 200 ರೂ.ಗಳಿಂದ ಮಾಸಿಕ 500 ರೂ.ಗಳಿಗೆ ಏರಿಕೆ ಮಾಡಲಾಗಿದೆ. ಆಗಸ್ಟ್‌ 1, 2024ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಲಾಗಿದೆ.


5-09-2022ರ ಸರ್ಕಾರಿ ಆದೇಶದಲ್ಲಿ ನಗದುರಹಿತ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು (ಕೆಎಎಸ್‌‍ಎಸ್‌‍) ಅನುಷ್ಠಾನಗೊಳಿಸಲು ಆದೇಶ ಹೊರಡಿಸಲಾಗಿದೆ. 22-07-2024ರ ಸರ್ಕಾರಿ ಆದೇಶದಲ್ಲಿ ವೇತನ ಶ್ರೇಣಿಗಳ ಮತ್ತು ವೇತನಕ್ಕೆ ಹೊಂದಿಕೊಂಡಿರುವ ನಿರ್ದಿಷ್ಟ ಭತ್ಯೆಗಳ ಪರಿಷ್ಕರಣೆ ಮತ್ತು ಪಿಂಚಣಿ ಪರಿಷ್ಕರಣೆ ಕುರಿತಂತೆ 7ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸಿ ಆದೇಶ ಹೊರಡಿಸಲಾಗಿದೆ. 23-08-2024ರ ಸರ್ಕಾರಿ ಆದೇಶದಲ್ಲಿ ಪರಿಷ್ಕೃತ ವೇತನ ಶ್ರೇಣಿಗಳನ್ನು ಅನುಷ್ಠಾನಗೊಳಿಸಿ ವಿಸ್ತ್ರತವಾದ ಆದೇಶಿಸಲಾಗಿದೆ.

ಗ್ರೂಪ್‌ ಸಿ ಮತ್ತು ಗ್ರೂಪ್‌ ಡಿ ವೃಂದದ ರಾಜ್ಯ ಸರ್ಕಾರಿ ನೌಕರರಿಗೆ ಲಭ್ಯವಿರುವ ವೈದ್ಯಕೀಯ ಭತ್ಯೆ ದರಗಳ ಪರಿಷ್ಕರಣೆ ಕುರಿತಂತೆ 7ನೇ ರಾಜ್ಯ ವೇತನ ಆಯೋಗದ ಶಿಫಾರಸುಗಳನ್ನು ಸರ್ಕಾರ ಅಂಗೀಕರಿಸಿದೆ. ಅದರಂತೆ, ಸರ್ಕಾರ ದರ ಪರಿಷ್ಕರಿಸಿ ಆದೇಶ ಹೊರಡಿಸಿದೆ.

ನಗದು ರಹಿತ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯ (ಕೆಎಎಸ್‌‍ಎಸ್‌‍) ಸೌಲಭ್ಯ ಅನುಷ್ಠಾನ ಆಗುವವರೆಗೆ ಈ ವೈದ್ಯಕೀಯ ಸೌಲಭ್ಯ ಲಭ್ಯವಿರಲಿದೆ.

ನಗದು ರಹಿತ ವೈದ್ಯಕೀಯ ಸೌಲಭ್ಯ ಯೋಜನೆ ಅನುಷ್ಠಾನಗೊಂಡ ನಂತರದಲ್ಲಿ ವೈದ್ಯಕೀಯ ಭತ್ಯೆಯ ಮಂಜೂರಾತಿಯ ಈ ಆದೇಶ ಜಾರಿಯಲ್ಲಿರುವುದು ಕೊನೆಗೊಳ್ಳುತ್ತದೆ. ಹಾಗೂ ನಗದುರಹಿತ (ಕೆಎಎಸ್‌‍ಎಸ್‌‍) ಯೋಜನೆಯು ಅನುಷ್ಠಾನಗೊಂಡ ಬಳಿಕ ಯಾವುದೇ ಸರ್ಕಾರಿ ನೌಕರ ಈ ಸೌಲಭ್ಯವನ್ನು ಪಡೆಯಲು ಅರ್ಹವಿರುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.


╰┈➤ Please Follow https://whatsapp.com/channel/0029Va9sPs92ER6bR7mBuq1v Whatsapp Channel for more updates


ಭಾನುವಾರ, ಸೆಪ್ಟೆಂಬರ್ 8, 2024

7th Pay Commission: ತಾಲೂಕು ಕಛೇರಿ ಉಪ ತಹಶೀಲ್ದಾರ್ ವೇತನ ಎಷ್ಟು ಏರಿಕೆ?

ತಾಲ್ಲೂಕು ಕಛೇರಿಯಲ್ಲಿ ರಾಜಸ್ವ ನಿರೀಕ್ಷಕರ ಹುದ್ದೆಯಲ್ಲಿ ಕಾರ್ಯನಿವರ್ಹಿಸುತ್ತಿರುವ 'ಬಿ' ಎಂಬುವವರು ಹುದ್ದೆಗೆ ಅನ್ವಯಿಸುವ 2018ರ ಪರಿಷ್ಕೃತ ವೇತನ ಶ್ರೇಣಿಯ ಆಯ್ಕೆಕಾಲಿಕ ವೇತನ ಶ್ರೇಣಿ ರೂ. 30350- 50250 ರಲ್ಲಿ ವೇತನ ಪಡೆಯುತ್ತಿದ್ದು, ದಿನಾಂಕ 18.11.2022 ರಂದು 2018ರ ಪರಿಷ್ಕೃತ ವೇತನ ಶ್ರೇಣಿಯಲ್ಲಿ ರೂ. 37900-70850ರ ವೇತನ ಶ್ರೇಣಿಯ ಉಪ-ತಹಶೀಲ್ದಾರ್ ಹುದ್ದೆಗೆ ಪದೋನ್ನತಿ ಹೊಂದಿರುತ್ತಾರೆ. ನೌಕರನ ವೇತನ ವಿವರಗಳು ಈ ಕೆಳಕಂಡಂತಿದೆ.

1ನೇ ಜುಲೈ 2022 ರಂದು ಧಾರಣೆ ಮಾಡಿದ ಹುದ್ದೆಯ ಪದನಾಮ ಮತ್ತು ವಾರ್ಷಿಕ ವೇತನ ಬಡ್ತಿ ದಿನಾಂಕ. ರಾಜಸ್ವ ನಿರೀಕ್ಷಕರು, 1ನೇ ಜನವರಿ. ಹುದ್ದೆಗೆ ಅನ್ವಯಿಸುವ ಪ್ರಸಕ್ತ ಆಯ್ಕೆಕಾಲಿಕ ವೇತನ ಶ್ರೇಣಿ 30350-750-32600-850-36000-950-39800-1100-46400-1250-53900-1450-58250 ರೂ.ಗಳು.

1ನೇ ಜುಲೈ 2022ರಂದು ಇದ್ದಂತೆ ಪ್ರಸಕ್ತ ಆಯ್ಕೆಕಾಲಿಕ ವೇತನ ಶ್ರೇಣಿಯಲ್ಲಿ ಪಡೆಯುತ್ತಿರುವ ಮೂಲ ವೇತನ. ರೂ. 36,000. ಉಪತಹಶೀಲ್ದಾರ್ ಹುದ್ದೆಯ ಪ್ರಸಕ್ತ ವೇತನ ಶ್ರೇಣಿ ರೂ.37900-950-39800-1100-46400-1250-53900-1450-62600-1650-70850.

ದಿನಾಂಕ 18.11.2022ರಿಂದ ಅನ್ವಯವಾಗುವಂತೆ ಪದೋನ್ನತಿ ಹೊಂದಿದ ಉಪತಹಶೀಲ್ದಾರ್ ಹುದ್ದೆಯಲ್ಲಿ ನಿಗದಿಪಡಿಸಿದ ವೇತನ. ರೂ. 37,900. ಪ್ರಸಕ್ತ ವೇತನ ಶ್ರೇಣಿಯಲ್ಲಿ ಮುಂದಿನ ವೇತನ ಬಡ್ತಿಯ ದಿನಾಂಕ. 1ನೇ ಜುಲೈ, 2023.

2024ನೇ ಪರಿಷ್ಕೃತ ವೇತನ ಶ್ರೇಣಿಯಲ್ಲಿ ಸರ್ಕಾರಿ ನೌಕರನ ವೇತನವನ್ನು ಈ ಕೆಳಕಂಡಂತೆ ಪುನರ್ ನಿಗದಿಪಡಿಸಿದೆ.

* ಹುದ್ದೆಗೆ ಅನ್ವಯವಾಗುವ ಪರಿಷ್ಕೃತ ಆಯ್ಕೆಕಾಲಿಕ ವೇತನ ಶ್ರೇಣಿ. ರೂ. 49050-1250-52800-1375-58300-1500-64300-1650-74200-1900-85600-2300-92500.

* 1ನೇ ಜುಲೈ 2022 ರಿಂದ ಜಾರಿಗೆ ಬರುವಂತೆ ಪರಿಷ್ಕೃತ ಆಯ್ಕೆಕಾಲಿಕ ವೇತನ ಶ್ರೇಣಿಯಲ್ಲಿ ಕಾಲ್ಪನಿಕವಾಗಿ ನಿಗದಿಪಡಿಸಬೇಕಾದ ಮೂಲ ವೇತನ. ರೂ. 58,300.

* ಉಪ-ತಹಶೀಲ್ದಾರ್ ಹುದ್ದೆಗೆ ಅನ್ವಯಿಸುವ ಪರಿಷ್ಕೃತ ವೇತನ ಶ್ರೇಣಿ. ರೂ. 61300-1500-64300-1650-74200-1900-85600-2300-99400-2700-112900.

* ದಿನಾಂಕ 18.11.2022 ರಿಂದ ಅನ್ವಯವಾಗುವಂತೆಪದೋನ್ನತಿ ಹೊಂದಿದ ಉಪ-ತಹಶೀಲ್ದಾರ್ ವೃಂದದ ಹುದ್ದೆಯಲ್ಲಿ ಕಾಲ್ಪನಿಕವಾಗಿ ವೇತನ ನಿಗದಿ. ರೂ. 61,300.

* 01.07.2023 ರಂದು ವಾರ್ಷಿಕ ವೇತನ ಬಡ್ತಿಯನ್ನು ಬಿಡುಗಡೆ ಮಾಡಿ ಕಾಲ್ಪನಿಕವಾಗಿ ವೇತನ ನಿಗದಿ. ರೂ. 62,800.

* 01.07.2024ರಂದು ಲಭ್ಯವಿರುವ ವಾರ್ಷಿಕ ವೇತನ ಬಡ್ತಿಯನ್ನು ಬಿಡುಗಡೆ ಮಾಡಿ ಕಾಲ್ಪನಿಕವಾಗಿ ವೇತನ ನಿಗದಿ. ರೂ. 64,300. ಆರ್ಥಿಕ ಸೌಲಭ್ಯವು 01.08.2024 ರಿಂದ ಪ್ರಾಪ್ತವಾಗುತ್ತದೆ. ಮುಂದಿನ ವಾರ್ಷಿಕ ವೇತನ ಬಡ್ತಿ. 1ನೇ ಜುಲೈ 2025. 



ರಾಜ್ಯ `ನಿವೃತ್ತ ಸರ್ಕಾರಿ ನೌಕರ'ರ ಗಮನಕ್ಕೆ : `ನಿವೃತ್ತಿ ವೇತನ', `ತುಟ್ಟಿ ಭತ್ಯೆ' ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ!

1. ಕನಿಷ್ಠ ನಿವೃತ್ತಿ ವೇತನ:

ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳು ಮತ್ತು ಕರ್ನಾಟಕ ನಾಗರೀಕ ಸೇವಾ (ಅಸಾಧಾರಣ ನಿವೃತ್ತಿ ವೇತನ) ನಿಯಮಾವಳಿಗಳು, 2003ರ ಅವಕಾಶಗಳನ್ವಯ ಸಂದರ್ಭಾನುಸಾರ ಲಭ್ಯವಿರುವ ಈ ಕೆಳಕಂಡ ವಿವಿಧ ರೀತಿಯ ನಿವೃತ್ತಿ ವೇತನಗಳ ಕನಿಷ್ಠ ಮೊತ್ತವನ್ನು ಪ್ರಸ್ತುತ ಮಾಹೆಯಾನ ರೂ. 8,500/- ಗಳಿಂದ ಮಾಹೆಯಾನ ರೂ.13,500/-ಗಳಿಗೆ ಪರಿಷ್ಕರಿಸತಕ್ಕದ್ದು.

ಅ) ವಯೋ ನಿವೃತ್ತಿ ವೇತನ
ಆ) ವಿಶ್ರಾಂತಿ ನಿವೃತ್ತಿ ವೇತನ
ಇ) ಅಶಕ್ತತಾ ನಿವೃತ್ತಿ ವೇತನ
ಈ) ಪರಿಹಾರ ನಿವೃತ್ತಿ ವೇತನ
ಉ) ಅನುಕಂಪ ಭತ್ಯೆ

2. ಗರಿಷ್ಠ ನಿವೃತ್ತಿ ವೇತನ:

2.1 ಮೇಲಿನ ಕಂಡಿಕೆ-1 ರಲ್ಲಿ ನಿರ್ಧಿಷ್ಟಪಡಿಸಿರುವ ವಿವಿಧ ರೀತಿಯ ನಿವೃತ್ತಿ ವೇತನಗಳ ಗರಿಷ್ಠ ಮೊತ್ತದ ಪರಿಮಿತಿಯನ್ನು ಪ್ರಸ್ತುತ ಮಾಹೆಯಾನ ರೂ. 75,300/- ಗಳಿಂದ ಮಾಹೆಯಾನ ರೂ.1,20,600/-ಗಳಿಗೆ ಪರಿಷ್ಕರಿಸತಕ್ಕದ್ದು.

2.2 ಕೆಲವು ಅತ್ಯಂತ ಅಸಾಧಾರಣ ಸಂದರ್ಭಗಳನ್ನು ಹೊರತುಪಡಿಸಿ ಕರ್ನಾಟಕ ನಾಗರೀಕ ಸೇವಾ ನಿಯಮಗಳ ನಿಯಮ 210 ರಡಿ ಮಂಜೂರು ಮಾಡಲಾಗುವ ತಾರ್ತಿಕ (ಅಡ್ ಹಾಕ್) ನಿವೃತ್ತಿ ವೇತನದ ಪರಿಮಿತಿಯು ಮಾಹೆಯಾನ ರೂ.13,500/-ಗಳನ್ನು ಮೀರತಕ್ಕದ್ದಲ್ಲ.

3. ಕುಟುಂಬ ನಿವೃತ್ತಿ ವೇತನ:

3.1 ಸರ್ಕಾರಿ ನೌಕರರ ಅವಲಂಬಿತರಿಗೆ ಲಭ್ಯವಿರುವ ಕುಟುಂಬ ನಿವೃತ್ತಿ ವೇತನದ ಕನಿಷ್ಠ ಮೊತ್ತವು ಪ್ರಸ್ತುತ ಮಾಹೆಯಾನ ರೂ. 8,500/- ಗಳಿಂದ ಮಾಹೆಯಾನ ರೂ. 13,500/- ಗಳಿಗೆ ಪರಿಷ್ಕರಿಸತಕ್ಕದ್ದು.

3.2 ಕುಟುಂಬ ನಿವೃತ್ತಿ ವೇತನದ ಗರಿಷ್ಠ ಪರಿಮಿತಿಯು ಪ್ರಸ್ತುತ ಮಾಹೆಯಾನ ರೂ. 45,180/- ರಿಂದ ಮಾಹೆಯಾನ ರೂ. 80,400/-ಗಳಿಗೆ ಪರಿಷ್ಕರಿಸತಕ್ಕದ್ದು.

3.3 ಈ ಮೇಲಿನ ಪರಿಮಿತಿಯ ಮಿತಿಗೊಳಪಟ್ಟು ಲಭ್ಯವಿರುವ ಕುಟುಂಬ ನಿವೃತ್ತಿ ವೇತನದ ಮೊತ್ತವು ಕರ್ನಾಟಕ ಸರ್ಕಾರಿ ನೌಕರರ (ಕುಟುಂಬ ನಿವೃತ್ತಿ ವೇತನ) ನಿಯಮಗಳು, 2002ರಡಿ ಲಭ್ಯವಾಗುವ ಕುಟುಂಬ ನಿವೃತ್ತಿ ವೇತನದ ಉಪಲಬ್ದಗಳ ಶೇ. 30ರಷ್ಟು ಇರತಕ್ಕದ್ದು.

3.4 ಕರ್ನಾಟಕ ಸರ್ಕಾರಿ ನೌಕರರ (ಕುಟುಂಬ ನಿವೃತ್ತಿ ವೇತನ) ನಿಯಮಗಳು, 2002ರ ಅವಕಾಶಗಳಂತೆ, ದಿನಾಂಕ: 01.07.2022 ರಂದು ಮತ್ತು ತದನಂತರ ಸೇವೆಯಲ್ಲಿರುವಾಗಲೇ ಮರಣ ಹೊಂದಿದ ಸರ್ಕಾರಿ ನೌಕರರ ಪ್ರಕರಣಗಳಲ್ಲಿ, ಮೃತ ಸರ್ಕಾರಿ ನೌಕರನ ಅವಲಂಬಿತರು ಕುಟುಂಬ ನಿವೃತ್ತಿ ವೇತನದ ಪರಿಷ್ಕೃತ ಮೊತ್ತವನ್ನು ದಿನಾಂಕ: 01.08.2024ರಿಂದ ಪಡೆಯಲು ಅರ್ಹರಿರುತ್ತಾರೆ.

3.5 ದಿನಾಂಕ: 01.07.2022ರ ಪೂರ್ವದಲ್ಲಿ ಕುಟುಂಬ ನಿವೃತ್ತಿ ವೇತನ ಪಡೆಯುತ್ತಿದ್ದ ಮೃತ ಸರ್ಕಾರಿ ನೌಕರನ ಅವಲಂಬಿತರಿಗೆ ಈ ಆದೇಶದ ಅನುಬಂಧದಲ್ಲಿ ತೋರಿಸಿರುವಂತೆ ಪರಿಷ್ಕೃತ ಕುಟುಂಬ ನಿವೃತ್ತಿ ವೇತನವು ಲಭ್ಯವಿರುತ್ತದೆ.

4. ತುಟ್ಟಿ ಭತ್ಯೆ:

4.1 ಅಖಿಲ ಭಾರತ ಸರಾಸರಿ ಗ್ರಾಹಕ ಬೆಲೆ ಸೂಚ್ಯಂಕ (ಸಾಮಾನ್ಯ) 361.704 ಅಂಶಗಳವರೆಗಿನ (ಆಧಾರ ವರ್ಷ 2001=100) ತುಟ್ಟಿ ಭತ್ಯೆಯನ್ನು ದಿನಾಂಕ: 1ನೇ ಜುಲೈ 2022 ರಂದು ಲಭ್ಯವಿದ್ದ ಪ್ರಸ್ತುತ ಮೂಲ ಪಿಂಚಣಿ/ಕುಟುಂಬ ಪಿಂಚಣಿಯೊಂದಿಗೆ ವಿಲೀನಗೊಳಿಸಿ ರಾಜ್ಯ ಸರ್ಕಾರಿ ನೌಕರರ ಪರಿಷ್ಕೃತ ಪಿಂಚಣಿ/ಕುಟುಂಬ ಪಿಂಚಣಿ ಮೊತ್ತವನ್ನು ನಿರ್ಧರಿಸಲಾಗಿರುತ್ತದೆ. ಆದುದರಿಂದ, ಪರಿಷ್ಕೃತ ನಿವೃತ್ತಿ ವೇತನ / ಕುಟುಂಬ ನಿವೃತ್ತಿ ವೇತನ ಮೇಲಿನ ತುಟ್ಟಿ ಭತ್ಯೆಯ ಮೊದಲನೇ ಕಂತನ್ನು ದಿನಾಂಕ: 1ನೇ ಜನವರಿ 2023ರಿಂದ ಲೆಕ್ಕಹಾಕಿ ಈ ಕೆಳಗೆ ತಿಳಿಸಿರುವ ದಿನಾಂಕದಿಂದ ಮಂಜೂರು ಮಾಡತಕ್ಕದ್ದು.

4.2 ಕಾರ್ಯನಿರತ ಸರ್ಕಾರಿ ನೌಕರರಿಗೆ ಕಾಲ ಕಾಲಕ್ಕೆ ಮಂಜೂರು ಮಾಡುವ ತುಟ್ಟಿ ಭತ್ಯೆ ಆದೇಶಗಳನ್ನು ಅನ್ವಯಿಸಿ ನಿವೃತ್ತಿ ವೇತನದಾರರು ಮತ್ತು ಕುಟುಂಬ ನಿವೃತ್ತಿ ವೇತನದಾರರಿಗೆ ತುಟ್ಟಿ ಭತ್ಯೆಯನ್ನು ಕ್ರಮಬದ್ಧಗೊಳಿಸಿ ಮಂಜೂರು ಮಾಡುವುದನ್ನು ಮುಂದುವರೆಸತಕ್ಕದ್ದು. ಅದರಂತೆ, ಪರಿಷ್ಕೃತ ನಿವೃತ್ತಿ ವೇತನ/ ಪರಿಷ್ಕೃತ ಕುಟುಂಬ ನಿವೃತ್ತಿ ವೇತನದ ಮೇಲೆ ತುಟ್ಟಿ ಭತ್ಯೆಯನ್ನು ಈ ಕೆಳಕಂಡಂತೆ ಕಾಲ್ಪನಿಕವಾಗಿ ಕ್ರಮಬದ್ಧಗೊಳಿಸತಕ್ಕದ್ದು:

ಪರಿಷ್ಕೃತ ಮೂಲ ನಿವೃತ್ತಿ ವೇತನ/ಕುಟುಂಬ ನಿವೃತ್ತಿ ವೇತನ 01.07.2023 - 5.5% ಪರಿಷ್ಕೃತ ಮೂಲ ನಿವೃತ್ತಿ ವೇತನ/ಕುಟುಂಬ ನಿವೃತ್ತಿ ವೇತನ 01.01.2024 8.5% ಪರಿಷ್ಕೃತ ಮೂಲ ನಿವೃತ್ತಿ ವೇತನ/ಕುಟುಂಬ ನಿವೃತ್ತಿ ವೇತನ 4.3 ಮುಂದಿನ ತುಟ್ಟಿ ಭತ್ಯೆಯ ಮಂಜೂರಾತಿಯು ಈ ಸಂಬಂಧ ರಾಜ್ಯ ಸರ್ಕಾರವು ಹೊರಡಿಸುವ ಆದೇಶಗಳಲ್ಲಿ ಕ್ರಮಬದ್ಧಗೊಳಿಸಿದಂತೆ ಇರತಕ್ಕದ್ದು. 4.4 ತುಟ್ಟಿ ಭತ್ಯೆಯನ್ನು 1ನೇ ಜನವರಿ ಮತ್ತು 1ನೇ ಜುಲೈರಿಂದ ಅನ್ವಯಿಸುವಂತೆ ವರ್ಷಕ್ಕೆ ಎರಡು ಬಾರಿ ಪಾವತಿಸುವುದು.

5. ನಿವೃತ್ತಿ ಉಪದಾನ / ಮರಣ ಉಪದಾನ :

5.1 ದಿನಾಂಕ: 01.07.2022ರಂದು ಮತ್ತು ನಂತರದಲ್ಲಿ ಹಾಗೂ ದಿನಾಂಕ: 01.08.2024ಕ್ಕೂ ಮುಂಚಿತವಾಗಿ ಸೇವೆಯಿಂದ ನಿವೃತ್ತನಾದ ಕಾರಣದಿಂದ ಸೇವೆಯಲ್ಲಿರುವುದು ಕೊನೆಗೊಂಡ ಸರ್ಕಾರಿ ನೌಕರನ ಪ್ರಕರಣದಲ್ಲಿ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ಅವಕಾಶಗಳನ್ವಯ ಪಾವತಿಸಲಾಗುವ ನಿವೃತ್ತಿ ಉಪದಾನವು ಪೂರ್ಣಗೊಳಿಸಲಾದ ಪ್ರತಿ ಆರು ಮಾಸಿಕ ಅರ್ಹತಾ ಸೇವೆಗೆ ಪ್ರಸ್ತುತ ಉಪಲಬ್ದಗಳ ಗರಿಷ್ಠ ಮಿತಿ 16 1/2 ಕ್ಕೆ ಸೀಮಿತಗೊಳಿಸಿ, ಪ್ರಸ್ತುತ ಉಪಲಬ್ಬಗಳ 1/4 ನೇ ಭಾಗಕ್ಕೆ ಸಮನಾಗತಕ್ಕದು. ಈ ರೀತಿ ಲೆಕ್ಕ ಹಾಕಲಾದ ನಿವೃತ್ತಿ ಉಪದಾನದ ಗರಿಷ್ಠ ಮಿತಿಯು ರೂ.20.00 ಲಕ್ಷಗಳಾಗಿರುತ್ತದೆ.

5.2 ದಿನಾಂಕ: 01.07.2022 ರಂದು ಅಥವಾ ತದನಂತರ ಆದರೆ ದಿನಾಂಕ: 01.08.2024ರೊಳಗೆ ಸೇವೆಯಲ್ಲಿರುವಾಗಲೇ ಮರಣ ಹೊಂದಿದ ಸರ್ಕಾರಿ ನೌಕರನ ಪ್ರಕರಣದಲ್ಲಿ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳಡಿ ಲಭ್ಯವಿರುವ ಮರಣ ಉಪದಾನವು ಈ ಕೆಳಕಂಡ ದರಗಳಲ್ಲಿ ಲಭ್ಯವಾಗುತ್ತದೆ.

Important Alert to All Employees & DDO’s

 1. ಎಲ್ಲಾ ಪ್ರಮುಖ ಬ್ಯಾಂಕ್‌ಗಳಲ್ಲಿ ಒದಗಿಸುತ್ತಿರುವ ವೇತನ ಖಾತೆಯ ಯೋಜನೆಯ ಲಾಭವನ್ನು ಪಡೆಯಲು ನಿಮ್ಮ ಬ್ಯಾಂಕ್‌ ಖಾತೆಯನ್ನು ವೇತನ ಖಾತೆ ಯೋಜನೆಯಡಿ ಮಾರ್ಪಡಿಸಲು ಈ ಮೂಲಕ ತಿಳಿಸಿದೆ.

2. ಆರ್ಥಿಕ ಇಲಾಖೆ ಪತ್ರ ಸಂಖ್ಯೆ: FD-CAM/160/2023 ದಿನಾಂಕ:06/09/2023 ರನ್ವಯ, ಪ್ರತಿ ಉದ್ಯೋಗಿಗಳಿಗೆ ಎರಡು ಅಮೂಲ್ಯವಾದ ವಿಮಾ ಯೋಜನೆಗಳಾದ - ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (PMJJBY) ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ಯನ್ನು ತೆರೆಯಲು ಕೋರಲಾಗಿದೆ. ಈ ಯೋಜನೆಯನ್ನು ತಮ್ಮ ವೇತನ ಖಾತೆ ಬ್ಯಾಂಕ್‌ ಮುಖಾಂತರ ಪಡೆಯಬಹುದಾಗಿದೆ. ಹೆಚ್ಚಿನ ವಿವರಕ್ಕಾಗಿ https://www.jansuraksha.gov.in/ ಲಿಂಕ್‌ ಅನ್ನು ಪ್ರವೇಶಿಸಿ.

ಪ್ರಧಾನ ಮಂತ್ರಿ ಜೀವನ ಜ್ಯೋತಿ ಬೀಮ ಯೋಜನೆ (ಪಿಎಂಜೆಜೆಬಿವೈ)

ಪ್ರಧಾನಮಂತ್ರಿ ಜೀವನ್‌ ಜ್ಯೋತಿ ಬಿಮಾ ಯೋಜನೆ (ಪಿಎಂಜೆಜೆಬಿವೈ) ವಾರ್ಷಿಕ ರೂ.436/-ಗಳ ಪ್ರೀಮಿಯಂ ಪಾವತಿಸುವುದು (ಪ್ರೀಮಿಯಂ ವಿಮಾದಾರರ ಬ್ಯಾಂಕ್‌ ಖಾತೆಯ ಮೂಲಕ ಪಾವತಿಸಲ್ಪಡುತ್ತದೆ) ಯಾವುದೇ ಕಾರಣದಿಂದ ಮರಣ ಸಂಭವಿಸಿದರೆ ಅವಲಂಬಿತ ಕುಟುಂಬ ಸದಸ್ಯರಿಗೆ ರೂ. 2.00 ಲಕ್ಷಗಳ ವಿಮಾ ಮೊತ್ತದ ನರೆವು. ಈ ಯೋಜನೆಯು 18 ರಿಂದ 50 ವರ್ಷದೊಳಗಿನ ಜನರಿಗೆ ಮಾತ್ರ ಲಭ್ಯವಿರುತ್ತದೆ.

ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಎಸ್‌ಬಿವೈ)

ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಎಸ್‌ಬಿವೈ) ಇದು ಅಪಘಾತ ವಿಮಾ ಯೋಜನೆಯಾಗಿದ್ದು, ವಾರ್ಷಿಕ ರೂ. 20/-ಗಳ ಪ್ರೀಮಿಯಂ ಪಾವತಿಸುವುದು (ಪ್ರೀಮಿಯಂ ವಿಮಾದಾರರ ಬ್ಯಾಂಕ್‌ ಖಾತೆಯ ಮೂಲಕ ಪಾವತಿಸಲ್ಪಡುತ್ತದೆ). ಒಂದು ವೇಳೆ ಅಪಘಾತವಾಗಿ ಮೃತಪಟ್ಟರೆ ಅಥವಾ ಶಾಶ್ವತ ಒಟ್ಟು ಅಂಗವೈಕಲ್ಯಕ್ಕೆ ರೂ. 2.00ಲಕ್ಷಗಳು ಹಾಗೂ ಶಾಶ್ವತ ಭಾಗಶಃ ಅಂಗವೈಕಲ್ಯಕ್ಕೆ ರೂ.1.00 ಲಕ್ಷಗಳ ವಿಮಾ ಮೊತ್ತದ ನರೆವು ಈ ಯೋಜನೆಯು 18 ರಿಂದ 70 ವರ್ಷದೊಳಗಿನ ಜನರಿಗೆ ಮಾತ್ರ ಲಭ್ಯವಿರುತ್ತದೆ. ಇವೆರಡು ಭಿಮಾ ಯೋಜನೆಗಳು ನಿಮ್ಮ ಕುಟುಂಬಕ್ಕೆ ಬಹಳ ಉಪಯುಕ್ತವಾಗುವುದು.


3. ಆರ್ಥಿಕ ಇಲಾಖೆ ಪತ್ರ ಸಂಖ್ಯೆ: FD-CAM/160/2023 ದಿನಾಂಕ:02/11/2023 ರನ್ವಯ, ಪಿಎಂಜೆಜೆಬಿವೈ ಮತ್ತು ಪಿಎಂಎಸ್‌ಬಿವೈ ವಿಮಾ ವಿವರಗಳನ್ನು ಹೆಚ್‌ಆರ್‌ಎಂಎಸ್‌ ಇಎಸ್‌ಎಸ್‌ ಲಾಗಿನ್‌ https://hrmsess.karnataka.gov.in ನ ಪೋರ್ಟಲ್‌ನಲ್ಲಿ ದಾಖಲಿಸಲು ಸೂಚಿಸಲಾಗಿದೆ. ಅದರಂತೆ ಪ್ರತಿ ಸಿಬ್ಬಂದಿಗಳು ಹಾಗೂ ಡಿಡಿಓಗಳು ಈ ಯೋಜನೆಯನ್ನು ಖಚಿತವಾಗಿ ಪಡೆದುಕೊಳ್ಳುವುದು ಹಾಗು ಇಎಸ್‌ಎಸ್‌ ಪೋರ್ಟಲ್‌ನಲ್ಲಿ ಈ ದಾಖಲೆಯನ್ನು ನವೀಕರಿಸುವುದು ಅವರ ಜವಾಬ್ದಾರಿಯಾಗಿರುತ್ತದೆ. ಸದರಿ ಪ್ರಗತಿಯನ್ನು ಅಪರ ಮುಖ್ಯ ಕಾರ್ಯದರ್ಶಿಗಳು, ಆರ್ಥಿಕ ಇಲಾಖೆರವರು ವೀಕ್ಷಿಸುತ್ತಿರುತ್ತಾರೆ.

4. ದಯವಿಟ್ಟು ತಮ್ಮ ನಗದು ರಹಿತ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯ ಫಲಾನುಭವಿಗಳನ್ನು ಅಪ್‌ಡೇಟ್‌ ಮಾಡಿದ್ದಲ್ಲಿ ಮಾತ್ರ ಯೋಜನೆಯ ಸದುಪಯೋಗವನ್ನು ಸಿಬ್ಬಂದಿಗಳು ಹಾಗೂ ಅವರ ಕುಟುಂಬವು ಪಡೆಯಬಹುದು.

5. ಎಲ್ಲಾ ಉದ್ಯೋಗಿಗಳು ESS ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡು, ತಮ್ಮದೇ ಆದ ಪಾವತಿ ಚೀಟಿ, ರಜೆ ವಿವರಗಳು ಮತ್ತು ಕಡಿತದ ಸಾರಾಂಶವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾದ ಸೌಲಭ್ಯವನ್ನು ಪಡೆಯುತ್ತಿರುವ ಬಗ್ಗೆ ಡಿಡಿಓರವರು ಖಚಿತಪಡಿಸಿಕೊಳ್ಳಬೇಕು. ತಮ್ಮ ಎಲ್ಲಾ ಉದ್ಯೋಗಿಗಳು 1ನೇ ಜನವರಿ 2024 ರ ಮೊದಲು ಈ ಪೋರ್ಟಲ್‌ನಲ್ಲಿ ನೋಂದಾಯಿಸಲು ಅನುವು ಮಾಡಿಕೊಡುವ ಜವಾಬ್ದಾರಿ ಡಿಡಿಓರವರದಾಗಿರುತ್ತದೆ.

Important Alert to All Employees & DDO’s

1. All employees are informed to take benefit of salary account plan offered by all major bank and set your salary account under this plan in your respective banks.

2. As per FD letter no: FD-CAM/160/2023 Dated:06/09/2023 . Request every employees to opt for these two beneficial insurance schemes – Pradhan Mantri Jeevan Jyoti Bima Yojana (PMJJBY) and Pradhan Mantri Suraksha Bima Yojana (PMSBY) –through your Salary bank accounts. For more information please visit https://www.jansuraksha.gov.in/

Pradhan Mantri Jeevan Jyoti Bima Yojana(PMJJBY)

The PMJJBY is available to people in the age group of 18 to 50 years having a bank account who give their consent to join / enable auto-debit. Aadhar would be the primary KYC for the bank account. The life cover of Rs. 2 lakhs shall be for the one year period Stretching from 1st June to 31st May and will be renewable. Risk coverage under this scheme is for Rs. 2 Lakh in case of death of the insured, due to any reason. The premium is Rs. 436 per annum which is to be auto- debited in one installment from the subscriber's bank account as per the option given by him on or before 31st May of each annual coverage period under the scheme. The scheme is being offered by Life Insurance Corporation and all other life insurers who are willing to offer the product on similar terms with necessary approvals and tie up with banks for this purpose.

Pradhan Mantri Suraksha BimaYojana(PMSBY)

The Scheme is available to people in the age group 18 to 70 years with a bank account who give their consent to join / enable auto-debit on or before 31st May for the coverage period 1st June to 31st May on an annual renewal basis. Aadhar would- be the primary KYC for the bank account. The risk coverage under the scheme is Rs.2 lakh for accidental death and full disability and Rs. 1 lakh for partial disability. The premium of Rs.20 per annum is to be deducted from the account holder's bank account through 'auto-debit' facility in one instalment. The scheme is being offered by Public Sector General Insurance Companies or any Other General Insurance Company who are willing to offer the product on similar terms with necessary approvals and tie up with banks for this purpose.


3. As per FD Circular no: FD-CAM/160/2023 Dated:02/11/2023 , PMJJBY and PMSBY Insurance details need to be updated in ESS Portal https://hrmsess.karnataka.gov.in/. Additional Chief Secretary, Finance Department is following up the progress and it is the responsibility of all employees and DDO’s to ensure they avail these schemes and also update ESS accordingly.

4. Please also update your KASS beneficiaries immediately so that the cashless medical/health scheme benefits can be availed by employees and their family.

5. DDO should ensure that, all Employees register in ESS Portal, and use the services like downloading their own payslip, leave title and deduction summary. DDO’s are responsible for enabling all their employees to be registered before 1 st January 2024 in this portal.

https://hrmsess.karnataka.gov.in/login/loadLoginPage

Government Employee: ಸರ್ಕಾರಿ ನೌಕರರ KGID ನಿಯಮಗಳನ್ನು ತಿಳಿಯಿರಿ

Government Employee: ಸರ್ಕಾರಿ ನೌಕರರ KGID ನಿಯಮಗಳನ್ನು ತಿಳಿಯಿರಿ


ಸೆಪ್ಟೆಂಬರ್ 02: ರಾಜ್ಯ ಸರ್ಕಾರಿ ನೌಕರರಿಗೆ ಅನೇಕ ಸೌಲಭ್ಯಗಳಿವೆ. ಅದರಲ್ಲೂ ಕಡ್ಡಾಯ ಜೀವ ವಿಮಾ ಯೋಜನೆಗೆ ನೌಕರರು ಒಳಪಡುತ್ತಾರೆ. ಆದರೆ ಇದಕ್ಕೆ ಸಹ ಅನೇಕ ನಿಯಮಗಳಿವೆ. ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಯೊಂದನ್ನು ಹಾಕಲಾಗಿದೆ. ಕಡ್ಡಾಯ ಜೀವ ವಿಮಾ ಯೋಜನೆಗೆ ಒಳಪಡುವ ವಿಧಾನವು ಈ ಕೆಳಕಂಡಂತಿದೆ ಎಂದು ನೌಕರರಿಗೆ ಮಾಹಿತಿ ನೀಡಲಾಗಿದೆ.

ಕರ್ನಾಟಕ ಸರ್ಕಾರದ ಸೇವೆಗೆ ಸೇರ್ಪಡೆಯಾಗುವ ಎಲ್ಲಾ ಶ್ರೇಣಿಯ ಅಧಿಕಾರಿ/ ನೌಕರರು ಕಡ್ಡಾಯವಾಗಿ ಹಾಗೂ ಭಾರತೀಯ ಆಡಳಿತ ಸೇವೆ, ಭಾರತೀಯ ಪೊಲೀಸ್ ಸೇವೆ ಮತ್ತು ಭಾರತೀಯ ಅರಣ್ಯ ಸೇವೆಯಲ್ಲಿನ ಕರ್ನಾಟಕ ವೃಂದಕ್ಕೆ ಸೇರಿದವರು ಐಚ್ಛಿಕವಾಗಿ ಕಡ್ಡಾಯ ಜೀವ ವಿಮಾ ಯೋಜನೆಗೆ ಒಳಪಡಲು ಅರ್ಹರಾಗಿರುತ್ತಾರೆ.

ಯೋಜನೆಗೆ ಒಳಪಡುವವರಿಗೆ 18 ವರ್ಷ ವಯಸ್ಸಾಗಿರಬೇಕು. 50 ವರ್ಷ ಮೀರಿರಬಾರದು. ಪ್ರಥಮ ಮಾಸಿಕ ವೇತನ ಪಡೆಯುವ ಮುನ್ನ ವಿಮೆಗೆ ಒಳಪಡಬೇಕು. ಧಾರಣ ಮಾಡಿದ ಹುದ್ದೆಗೆ ಅನ್ವಯವಾಗುವ ವೇತನ ಶ್ರೇಣಿಯ ಸರಾಸರಿ ವೇತನದ ಶೇ. 6.25 ಭಾಗಕ್ಕಿಂತ ಕಡಿಮೆ ಇಲ್ಲದಂತೆ ಮಾಸಿಕ ದರದ ವಿಮಾ ಕಂತನ್ನು ಪಾವತಿಸಬೇಕು.

education department

education department

ಬುಧವಾರ, ಸೆಪ್ಟೆಂಬರ್ 4, 2024

ಕರ್ನಾಟಕ ರಾಜ್ಯ ಸರಕಾರಿ ನೌಕರರಿಗೆ 7 ನೇ ವೇತನ ಆಯೋಗದ ಅನುಸಾರ ಲಭಿಸುವ ಹೊಸವೇತನವನ್ನು ಕಂಡುಕೊಳ್ಳಲು ಈಗಾಗಲೇ https://karpay.calculator.cafe ವೆಬ್‌ ಚಾಲನೆಗೊಳಿಸಲಾಗಿತ್ತು. 🏆🏆 ಈಗ ಅತಿ ಸರಳಿಕರಣಗೋಳಿಸಿ ಈ ಮೇಲೆ ತೋರಿಸಲಾದ ಚಿತ್ರದಲ್ಲಿ Tabular Format ನಲ್ಲಿ ತಮ್ಮ ವೇತನವನ್ನು 01.07.2022 , 01.07.2024, 01.08.2024 6ನೇ ಮತ್ತು 7ನೇ ವೇತನಗಳ ವ್ಯತ್ಯಾಸವನ್ನು ಕಂಡುಕೋಳ್ಳಲು ಬದಲಾವಣೆಯನ್ನು ಮಾಡಲಾಗಿದೆ.

🏆🏆  ಕರ್ನಾಟಕ ರಾಜ್ಯ ಸರಕಾರಿ ನೌಕರರಿಗೆ 7 ನೇ ವೇತನ ಆಯೋಗದ ಅನುಸಾರ ಲಭಿಸುವ ಹೊಸವೇತನವನ್ನು ಕಂಡುಕೊಳ್ಳಲು ಈಗಾಗಲೇ https://karpay.calculator.cafe ವೆಬ್‌ ಚಾಲನೆಗೊಳಿಸಲಾಗಿತ್ತು.                            🏆🏆 ಈಗ ಅತಿ ಸರಳಿಕರಣಗೋಳಿಸಿ ಈ ಮೇಲೆ ತೋರಿಸಲಾದ ಚಿತ್ರದಲ್ಲಿ Tabular Format ನಲ್ಲಿ ತಮ್ಮ ವೇತನವನ್ನು 01.07.2022 , 01.07.2024, 01.08.2024 6ನೇ ಮತ್ತು 7ನೇ ವೇತನಗಳ ವ್ಯತ್ಯಾಸವನ್ನು ಕಂಡುಕೋಳ್ಳಲು ಬದಲಾವಣೆಯನ್ನು ಮಾಡಲಾಗಿದೆ.                                                                                                   
🏆🏆 ಇದರ ಜೋತೆಗೆ Print ತೆಗೆಯುವ ಸೌಲಭ್ಯವನ್ನು ನೀಡಲಾಗಿದೆ.
🏆🏆 ಆದ್ದರಿಂದ ಎಲ್ಲಾ ನೌಕರರು ಈ ಮಾಹಿತಿಯನ್ನು ತಮ್ಮ ಇಲಾಖೆಯ ಸಿಬ್ಬಂದಿಯೊಂದಿಗೆ ಹಂಚಿಕೋಳ್ಳಲು ಕೋರಲಾಗಿದೆ. ಮತ್ತು ಎಲ್ಲಾ ನೌಕರರು ತಮ್ಮ WhatsApp ಮತ್ತು  Telegram Group ಗಳಿಗೆ ಕಳುಹಿಸಲು ಕೋರಿದೆ.                       🏆🏆 ನಮ್ಮ ಅಧಿಕೃತ Telegram Channel ನ್ನು Follow ಮಾಡಲು ಕೋರಲಾಗಿದೆ.   https://t.me/ksgesangh

ಭಾನುವಾರ, ಸೆಪ್ಟೆಂಬರ್ 1, 2024

ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ

ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆ

ಸಣ್ಣ ಮತ್ತು ಅತಿ ಸಣ್ಣ ರೈತರಾಗಿರಬೇಕು.

ಹಾಲಿ ಜಮೀನುಗಳು ಕೃಷಿ ಚಟುವಟಿಕೆಯಲ್ಲಿರಬೇಕು.

ಯಾವುದೇ ಮೂಲದಿಂದ ನೀರಾವರಿ ಸೌಲಭ್ಯ ಹೊಂದಿರಬಾರದು.

ಫಲಾನುಭವಿಯು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.

ವಯಸ್ಸು 18 ರಿಂದ 60 ವರ್ಷದೊಳಗಿರಬೇಕು.

ಕುಟುಂಬ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ ರೂ. 98 ಸಾವಿರ ಹಾಗೂ ಪಟ್ಟಣ ಪ್ರದೇಶದವರಿಗೆ ರೂ. 1.20 ಲಕ್ಷಗಳು ಒಳಗಿರಬೇಕು.

ಒಂದೇ ಸ್ಥಳದಲ್ಲಿ ಹೊಂದಿಕೊಂಡಂತೆ ಕನಿಷ್ಠ 02 ಎಕರೆ ಜಮೀನು ಹೊಂದಿರಬೇಕು.

ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ 4 ಲಕ್ಷ ಸಬ್ಸಿಡಿಯನ್ನು ನೀಡುವ ಮೂಲಕ ರಾಜ್ಯದ ರೈತರಿಗೆ ಬೋರ್ವೆಲ್ ಕೊರಸಿಕೊಳ್ಳುವ ಅವಕಾಶವನ್ನು ನೀಡಿದೆ.

ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ

ರೈತರು ಆಧಾರ್ ಜೋಡಣೆಯಾದ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಹೊಂದಿರಬೇಕು.

ಆಧಾರ್ ಕಾರ್ಡ್

ಬ್ಯಾಂಕ್ ಪಾಸ್ ಬುಕ್

ಜಾತಿ ಮತ್ತು ಆದಾಯ ಪ್ರಮಾಣ ಪತ್ರ

ಸ್ವಂತ ಜಮೀನಿನ ಪಹಣಿ

ಅರ್ಜಿದಾರರ ಭಾವಚಿತ್ರ

ಬಿಪಿಎಲ್ ರೇಷನ್ ಕಾರ್ಡ್

ಮೊಬೈಲ್ ಸಂಖ್ಯೆ

ಅರ್ಜಿದಾರರು ಸೇವಾಸಿಂಧು ಪೋರ್ಟಲ್ ಮುಖಾಂತರ ಗ್ರಾಮ ಒನ್, ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ ಆನ್ಲೈನ್ ಮೂಲಕ ಅರ್ಜಿಯನ್ನು ಸೆ.15 ರೊಳಗಾಗಿ ಸಲ್ಲಿಸಬಹುದು.

ರಾಜ್ಯ ಸರ್ಕಾರಿ ಶಿಕ್ಷಕರಿಗೆ 7ನೇ ವೇತನ ಆಯೋಗದಂತೆ ಪರಿಷ್ಕೃತ ವೇತನ ಸರಣಿಗಳು

ರಾಜ್ಯ ಸರ್ಕಾರಿ ಶಾಲಾ ಶಿಕ್ಷಕರೇ ಗಮನಿಸಿ : ಇಲ್ಲಿದೆ `DA, HRA' ಸೇರಿ ಇತರೆ ಭತ್ಯೆಗಳ ಸಂಪೂರ್ಣ ವಿವರ


ರಾಜ್ಯ ಸರ್ಕಾರದಿಂದ ಸರ್ಕಾರಿ ನೌಕರರಿಗೆ 7ನೇ ವೇತನ ಶ್ರೇಣಿಯನ್ನು ಜಾರಿಗೊಳಿಸಲಾಗಿತ್ತು.ಈ ಬೆನ್ನಲ್ಲೇ 2024ರ ಹೊಸ ವೇತನ ಶ್ರೇಣಿಯ ಪರಿಷ್ಕೃತ ನಿಯಮಗಳನ್ನು ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ.


ರಾಜ್ಯ ಸರ್ಕಾರವು ಶಿಕ್ಷಕರಿಗೆ 7 ನೇ ವೇತನ ಪರಿಷ್ಕರಣೆ ಮಾಡಿದ್ದು, ನೇಮಕಾತಿ ವರ್ಷವಾರು ಈ ಕೆಳಗಿನ ವೇತನ ಪರಿಷ್ಕರಣೆಯ ದಿನಾಂಕ 01-08-2024 ರಂದು ಪಡೆಯುವ ಒಟ್ಟು ಅಂದಾಜು ಮಾಡಲಾಗಿದೆ.


ರಾಜ್ಯ ಸರ್ಕಾರಿ ಶಿಕ್ಷಕರಿಗೆ 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ಡಿಎ, ಹೆಚ್‌ಆರ್ ಎ ಸೇರಿದಂತೆ ಇತರೆ ವೇತನ ಶ್ರೇಣಿಯನ್ನು ಪರಿಷ್ಕರಿಸಲಾಗಿದೆ. ಹಾಗಾದ್ರೇ ವೇತನ ಶ್ರೇಣಿ ಪರಿಷ್ಕರಣೆಯ DA,HRA, MA ಸೇರಿ ವಿಸ್ತ್ರುತವಾದ ಇತರೆ ಸಂಪೂರ್ಣ ಮಾಹಿತಿ ಈ ಕೆಳಕಂಡಂತೆ ಇದೆ.


ಹೀಗಿದೆ ರಾಜ್ಯ ಸರ್ಕಾರಿ ಶಿಕ್ಷಕರಿಗೆ 7ನೇ ವೇತನ ಆಯೋಗದಂತೆ ಪರಿಷ್ಕೃತ ವೇತನ ಸರಣಿಗಳು



ಸೌಲಭ್ಯಕ್ಕೆ ಅರ್ಜಿ ಸಲ್ಲಿಕೆ

ರಾಜ್ಯ ಸರ್ಕಾರದಿಂದ ವಿವಿಧ ಸಮುದಾಯವರಿಗೆ ಗುಡ್ ನ್ಯೂಸ್ : ಸಾಲ ಸೌಲಭ್ಯಕ್ಕೆ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

ಸ್ವಯಂ ಉದ್ಯೋಗ ವೈಯಕ್ತಿಕ ಸಾಲ ಯೋಜನೆ, ಗಂಗಾ ಕಲ್ಯಾಣ ನೀರಾವರಿ ಯೋಜನೆ, ಅರಿವು-ಶೈಕ್ಷಣಿಕ ಸಾಲ ಯೋಜನೆ, ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ ಸಾಲ ಯೋಜನೆ, ಸ್ವಾವಲಂಬಿ ಸಾರಥಿ ಯೋಜನೆ, ಸ್ವಯಂ ಉದ್ಯೋಗ ಸಾಲ ಯೋಜನೆ (ವಾಣಿಜ್ಯ ಬ್ಯಾಂಕುಗಳ ಸಹಯೋಗದೊಂದಿಗೆ), ಸ್ವಾತಂತ್ರ್ಯ ಅಮೃತ ಮಹೋತ್ಸವದ ಮುನ್ನಡೆ ಯೋಜನೆ, ಹೊಲಿಗೆ ಯಂತ್ರ ವಿತರಣೆ ಯೋಜನೆ ಈ ಯೋಜನೆಗಳಿಗೆ ಸೇವಾ ಸಿಂಧು ತಂತ್ರಾಂಶದ ಮುಖಾಂತರ ಆನ್ಲೈನ್ ಮೂಲಕ ಅಜರ್ಿ ಆಹ್ವಾನಿಸಲಾಗಿದೆ.

ಈ ಎಲ್ಲಾ ಯೋಜನೆಗಳು ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ವಿಶ್ವಕರ್ಮ, ಉಪ್ಪಾರ, ಅಂಬಿಗ, ಸವಿತಾ, ಮಡಿವಾಳ, ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯ, ಒಕ್ಕಲಿಗ, ಲಿಂಗಾಯತ, ಕಾಡುಗೊಲ್ಲ, ಹಟ್ಟಿಗೊಲ್ಲ, ಮರಾಠ, ಮತ್ತು ಇದರ ಉಪ ಸಮುದಾಯಗಳು ಹೊರತುಪಡಿಸಿ ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿ ನಲ್ಲಿ ಉಳಿದ ಸಮುದಾಯಗಳಿಗೆ ಅನ್ವಯವಾಗುತ್ತದೆ.

ಈ ಸೌಲಭ್ಯ ಒದಗಿಸಲು ಸೇವಾ ಸಿಂಧು ತಂತ್ರಾಂಶದಲ್ಲಿ ಆನ್ಲೈನ್ ಮೂಲಕ ಅಜರ್ಿ ಸಲ್ಲಿಸಬಹುದು. ಅಜರ್ಿ ಸಲ್ಲಿಸುವಾಗ ಅಜರ್ಿದಾರರು ಆಧಾರ್ ಜೋಡಣೆಯಾದ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಹೊಂದಿರಬೇಕು. ಆಧಾರ್ ಕಾಡರ್್ ನಲ್ಲಿರುವಂತೆ ಅಜರ್ಿದಾರರ ಹೆಸರು, (ಶ್ರೀ/ಶ್ರೀಮತಿ ಕುಮಾರಿ ಮುಂತಾದ ಮಾಹಿತಿಗಳೆಲ್ಲವು) ಇತರೆ ದಾಖಲಾತಿಗಳಾದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಬ್ಯಾಂಕ್ ಪಾಸ್ ಪುಸ್ತಕದಲ್ಲಿಯೂ ಇದ್ದು ಹೊಂದಾಣಿಕೆಯಾಗಬೇಕು.

ಒಂದು ಬಾರಿ ನಿಗಮದ ಯಾವುದಾದರೂ ಯೋಜನೆಯಲ್ಲಿ ಪ್ರಯೋಜನ ಪಡೆದಿದ್ದಲ್ಲಿ ಅಂತಹವರು ಹಾಗೂ ಅವರ ಕುಟುಂಬದವರು ಮತ್ತೊಮ್ಮೆ ಸೌಲಭ್ಯ ಕೋರಿ ಅಜರ್ಿ ಸಲ್ಲಿಸಲು ಅರ್ಹರಿರುವುದಿಲ್ಲ.

2023-24 ನೇ ಸಾಲಿನಲ್ಲಿ ಅಜರ್ಿ ಸಲ್ಲಿಸಿ ಸೌಲಭ್ಯ ಪಡೆಯದೇ ಇರುವ ಫಲಾಪೇಕ್ಷಿಗಳು ಮತ್ತೊಮ್ಮೆ ಅಜರ್ಿ ಸಲ್ಲಿಸಬೇಕಾದ ಅವಶ್ಯಕತೆ ಇರುವುದಿಲ್ಲ. ಈ ಸೌಲಭ್ಯ ಪಡೆಯಲು ಇಚ್ಚಿಸುವ ಅರ್ಜಿದಾರರು ಅರ್ಜಿಗಳನ್ನು ಸೇವಾಸಿಂಧು ಪೋರ್ಟಲ್ https://sevasindhu.karnataka.gov.in ಮುಖಾಂತರ ಗ್ರಾಮ ಒನ್, ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ ಆನ್ಲೈನ್ ಮೂಲಕ ಅಜರ್ಿ ಸಲ್ಲಿಸಬಹುದು. ನಿಗಮದ ವೆಬ್ಸೈಟ್ www.dbcdc.karnataka.gov.in ಇಲ್ಲಿ ಸಂಪಕರ್ಿಸಿ ಹೆಚ್ಚಿನ ಮಾಹಿತಿ ಪಡೆಯಬಹುದು.

ರಾಜ್ಯ ಸರ್ಕಾರಿ ನೌಕರರಿಗೆ ಮತ್ತೊಂದು ಗುಡ್ ನ್ಯೂಸ್ : `ಗೃಹ ನಿರ್ಮಾಣ' ಮೊತ್ತ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ

ರಾಜ್ಯ ಸರ್ಕಾರಿ ನೌಕರರಿಗೆ ಮತ್ತೊಂದು ಗುಡ್ ನ್ಯೂಸ್ : `ಗೃಹ ನಿರ್ಮಾಣ' ಮೊತ್ತ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ರಾಜ್ಯ ಸಿವಿಲ್ ಸೇವೆಯ ಅಧಿಕಾರಿ ಮತ್ತು ನೌಕರರಿಗರ ಹಾಗೂ ಕರ್ನಾಟಕ ವೃಂದಕ್ಕೆ ಸೇರಿ ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಖಿಲ ಭಾರತ ಸೇವಾ ಅಧಿಕಾರಿಗಳಿಗೆ ಗೃಹ ನಿರ್ಮಾಣ ಮುಂಗಡದ ಮೊತ್ತವನ್ನು ಉಲ್ಲೇಖಿತ ಸರ್ಕಾರದ ಆದೇಶದಲ್ಲಿ ಈ ಕೆಳಕಂಡಂತೆ ಹೆಚ್ಚಿಸಿ ಆದೇಶಿಸಿದೆ.

L ರಾಜ್ಯ ಸಿವಿಲ್ ಸೇವೆಯ 'ಎ' ಗುಂಪಿನ ಅಧಿಕಾರಿಗಳಿಗೆ ಅವರು ಪಡೆಯುತ್ತಿರುವ 70 ತಿಂಗಳ (ಮೂಲ ವೇತನ + ತುಟ್ಟಿ ಭತ್ಯೆ) ಯನ್ನು ರೂ.65.00 ಲಕ್ಷಗಳ ಮಿತಿಯೊಳಗೆ ಮತ್ತು ರಾಜ್ಯ ಸಿವಿಲ್ ಸೇವೆಯ ಇತರೆ ಅಧಿಕಾರಿಗಳು ಮತ್ತು ನೌಕರರಿಗೆ 70 ತಿಂಗಳ (ಮೂಲ ವೇತನ + ತುಟ್ಟಿ ಭತ್ಯೆ) ಯನ್ನು ಗರಿಷ್ಠ ರೂ.40.00 ಲಕ್ಷಗಳ ಮಿತಿಯೊಳಗೆ ನಿಗಧಿಪಡಿಸಿ ಆದೇಶಿಸಲಾಗಿದೆ.

2. ಕರ್ನಾಟಕ ವೃಂದಕ್ಕೆ ಸೇರಿ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಖಿಲ ಭಾರತ ಸೇವೆ ಅಧಿಕಾರಿಗಳು ರಾಜ್ಯ ಸಿವಿಲ್ ಸೇವೆಯ 'ಎ' ಗುಂಪಿನ ಅಧಿಕಾರಿಗಳಂತೆ ಅವರ 70 ತಿಂಗಳ (ಮೂಲ ವೇತನ + ತುಟ್ಟಿ ಭತ್ಯೆ) ಯನ್ನು ಗರಿಷ್ಟ ರೂ.65.00 ಲಕ್ಷಗಳ ಮಿತಿಗೊಳಪಟ್ಟು ಗೃಹ ನಿರ್ಮಾಣ/ಗೃಹ ಖರೀದಿ ಮುಂಗಡದ ಸೌಲಭ್ಯವನ್ನು ಪಡೆಯಲು ಅರ್ಹರಿರುತ್ತಾರೆ.

3. ಸದರಿ ಗೃಹ ನಿರ್ಮಾಣ/ಗೃಹ ಖರೀದಿ ಮುಂಗಡಕ್ಕೆ ಸಂಬಂಧಿಸಿದಂತೆ ಈ ಕೆಳಕಂಡಂತೆ ಷರತ್ತು ಮತ್ತು ನಿಬಂಧನೆಗಳು ಅನ್ವಯವಾಗುತ್ತವೆ.

1) ಗೃಹ ನಿರ್ಮಾಣ/ಗೃಹ ಖರೀದಿ ಮುಂಗಡದ ಮೇಲಿನ ಬಡ್ಡಿದರವನ್ನು ವಾರ್ಷಿಕ ಶೇ.8.5 ಏಕರೂಪ ಬಡ್ಡಿದರಕ್ಕೆ ನಿಗಧಿಪಡಿಸಿದೆ.

2) ಸರ್ಕಾರಿ ಆದೇಶ ಸಂಖ್ಯೆ: ಆಇ 48 ಮಕಮು 1994, ದಿನಾಂಕ:21-10-1994ರಲ್ಲಿ ಗೃಹ ನಿರ್ಮಾಣ/ಗೃಹ ಖರೀದಿ ಮುಂಗಡವನ್ನು ಮಂಜೂರು ಮಾಡಲು ಅನುಸರಿಸಲಾಗುತ್ತಿರುವ ಷರತ್ತು ಮತ್ತು ನಿಬಂಧನೆಗಳು ಮುಂದುವರೆದು ಅನ್ವಯಿಸುತ್ತವೆ.


7th Pay Commission: ಸರ್ಕಾರಿ ನೌಕರರ ಸಾಮೂಹಿಕ ವಿಮಾ ಯೋಜನೆ ಎಷ್ಟು ಏರಿಕೆ

ಆಯೋಗ ತನ್ನ ವರದಿಯಲ್ಲಿ ನೌಕರರಿಗೆ ಸಾಮೂಹಿಕ ವಿಮಾ ಯೋಜನೆ (ಜಿಐಎಸ್) ಎಂದು ಉಲ್ಲೇಖಿಸಿ ವಿವರಣೆ ನೀಡಿದೆ. ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ (ಕೆಜಿಐಡಿ) ಮೂಲಕ ಕರ್ನಾಟಕ ಸರ...