#Draft_rules_ಜನವರಿ_2025_ರಿಂದ_GIS_ನ್ನು
ಗ್ರೂಪ್ ಡಿ ನೌಕರರಿಗೆ ರೂ 240
ಗ್ರೂಪ್ 'C' ನೌಕರರಿಗೆ ರೂ 480
ಗ್ರೂಪ್ ಬಿ ನೌಕರರಿಗೆ ರೂ 540
ಗ್ರೂಪ್ ಎ ನೌಕರರಿಗೆ ರೂ 720
ಕಟಾವಣೆ ಮಾಡುವ ಬಗ್ಗೆ..
ದಿನದಲ್ಲಿ ಇಷ್ಟೇ ನಗದು ವಹಿವಾಟು ನಡೆಸಬೇಕು ಎಂಬ ನಿಯಮವಿದ್ದು, ಇದಕ್ಕಿಂತ ಹೆಚ್ಚಿನ ವಹಿವಾಟು ನಡೆಸಿದವರಿಗೆ ಮುಲಾಜಿಲ್ಲದೇ ಆದಾಯ ತೆರಿಗೆ ಇಲಾಖೆ ನೋಟಿಸ್ ಕಳುಹಿಸಿ ಕಾನೂನು ಕ್ರಮ ಜರುಗಿಸುತ್ತದೆ. ಹೌದು, ಇಂಥದ್ದೊಂದು ನಿಯಮ ಆದಾಯ ತೆರಿಗೆ ನಿಯಮಗಳಲಿದ್ದು, ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 269ST ಪ್ರಕಾರ ಒಂದೇ ಸಂದರ್ಭದಲ್ಲಿ ಒಂದೇ ವಹಿವಾಟು ಅಥವಾ ಸಂಬಂಧಿತ ವಹಿವಾಟುಗಳಿಗಾಗಿ ಒಂದೇ ದಿನದಲ್ಲಿ ₹2 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ನಗದು ಪಾವತಿಗಳನ್ನು ಸ್ವೀಕರಿಸುವುದನ್ನು ನಿಷೇಧಿಸುತ್ತದೆ
ಆದಾಯ ತೆರಿಗೆ ಇಲಾಖೆಯು ಹೆಚ್ಚಿನ ಮೌಲ್ಯದ ನಗದು ವಹಿವಾಟುಗಳನ್ನು ಎಚ್ಚರಿಕೆಯಿಂದ ಮೇಲ್ವಿಚಾರಣೆ ಮಾಡುತ್ತದೆ. ಹೀಗಾಗಿ ಈ ನಿಯಮದ ಬಗ್ಗೆ ತೆರಿಗೆದಾರರು ಜಾಗರೂಕರಾಗಿರಬೇಕು. ಈ ಮಿತಿಯನ್ನು ಉಲ್ಲಂಘಿಸಿದಲ್ಲಿ ದಂಡ ಅಥವಾ ಕಾನೂನು ಕ್ರಮವನ್ನು ನೀವು ಎದುರಿಸಬೇಕಾಗುತ್ತದೆ.
"ಆದಾಯ ತೆರಿಗೆ ಇಲಾಖೆಯು ಕೆಲವು ಮಿತಿಗಳನ್ನು ಮೀರಿದ ಹೆಚ್ಚಿನ ಮೌಲ್ಯದ ನಗದು ವಹಿವಾಟುಗಳನ್ನು ಮೇಲ್ವಿಚಾರಣೆ ಮಾಡುತ್ತದೆ ಮತ್ತು ತೆರಿಗೆ ಅಧಿಕಾರಿಗಳು ಅಂತಹ ವ್ಯಕ್ತಿಗಳಿಗೆ ನೋಟಿಸ್ ಕಳುಹಿಸಬಹುದು" ಎಂದು Tax2win ನ CEO ಮತ್ತು ಸಹ-ಸಂಸ್ಥಾಪಕ ಅಭಿಷೇಕ್ ಸೋನಿ ಹೇಳುತ್ತಾರೆ.
ಆದಾಯ ತೆರಿಗೆ ಕಾಯಿದೆಯ 269ST ಸೆಕ್ಷನ್ 269 ಎಸ್‌ಟಿಯು ಒಂದೇ ವಹಿವಾಟಿನಲ್ಲಿ ಅಥವಾ ಒಂದು ಘಟನೆ ಅಥವಾ ಸಂದರ್ಭಕ್ಕೆ ಸಂಬಂಧಿಸಿದ ವಹಿವಾಟಿಗೆ ಸಂಬಂಧಿಸಿದಂತೆ ಒಂದು ದಿನದಲ್ಲಿ ವ್ಯಕ್ತಿಯಿಂದ ಒಟ್ಟು ₹2 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ನಗದು ರೂಪದಲ್ಲಿ ಪಡೆಯುವಂತಿಲ್ಲ ಎಂದು ಹೇಳುತ್ತದೆ ಎಂದು ಸೋನಿ ಹೇಳಿದರು.
ಹಣ ಸ್ವೀಕರಿಸುವವರಿಗೆ ಮಾತ್ರ ರೂಲ್ಸ್ ಅಪ್ಲೈ
ಈ ನಿರ್ಬಂಧವು ವ್ಯಕ್ತಿಗಳು ಮತ್ತು ಘಟಕಗಳಿಗೆ ಸಮಾನವಾಗಿ ಅನ್ವಯಿಸುತ್ತದೆ, ಪಾವತಿಸುವವರ ಬದಲಿಗೆ ನಗದು ಸ್ವೀಕರಿಸುವವರ ಮೇಲೆ ಇದು ಪರಿಣಾಮ ಬೀರುತ್ತದೆ. ಅಂದರೆ ಹಣ ಪಾವತಿಸುವವರಿಗೆ ಇದು ಅನ್ವಯವಾಗುವುದಿಲ್ಲ, ಬದಲಿಗೆ ಸ್ವೀಕರಿಸುವವರೆಗೆ ಅನ್ವಯವಾಗುತ್ತದೆ
₹2 ಲಕ್ಷಕ್ಕಿಂತ ಹೆಚ್ಚಿನ ನಗದು ವಹಿವಾಟುಗಳಿಗೆ ದಂಡ
ನೀವು ₹2 ಲಕ್ಷಕ್ಕಿಂತ ಹೆಚ್ಚು ನಗದು ವಹಿವಾಟು ನಡೆಸಿದರೆ ಅಥವಾ ಒಂದೇ ದಿನದಲ್ಲಿ ಹಣವನ್ನು ಪಡೆದರೆ ನಿಮಗೆ ದಂಡ ಕೂಡ ಹಾಕಬಹುದು. ಮುಂಬೈ ಮೂಲದ ತೆರಿಗೆ ತಜ್ಞ ಬಲ್ವಂತ್ ಜೈನ್ "ನೀವು ₹ 5 ಲಕ್ಷ ನಗದು ವಹಿವಾಟು ನಡೆಸಿದರೆ, ಲೆಕ್ಕಪರಿಶೋಧನೆಯ ಸಮಯದಲ್ಲಿ ಆದಾಯ ತೆರಿಗೆ ಇಲಾಖೆಯು ಉಲ್ಲಂಘನೆಯನ್ನು ಕಂಡುಕೊಂಡರೆ ನೀವು ಅದೇ ಮೊತ್ತದ ದಂಡವನ್ನು ಪಾವತಿಸಬೇಕಾಗಬಹುದು" ಎಂದು ತಿಳಿಸುತ್ತಾರೆ.
"ಈ ನಿಬಂಧನೆಗೆ ವಿರುದ್ಧವಾಗಿ ಎರಡು ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಸ್ವೀಕರಿಸುವವರು ಸ್ವೀಕರಿಸಿದ ನಗದುಗೆ ಸಮಾನವಾದ ದಂಡವನ್ನು ಕಟ್ಟಬೇಕಾಗಬಹುದು. ಈ ನಿಬಂಧನೆಗಳ ಅಡಿಯಲ್ಲಿ ಪಾವತಿ ಮಾಡುವವರಿಗೆ ಯಾವುದೇ ದಂಡ ಬೀಳುವುಇಲ್ಲ" ಎಂದು ಬಲವಂತ್ ಜೈನ್ ಹೇಳಿದರು.
ಏನಿದು ಸೆಕ್ಷನ್ 269ST ?
ಯಾವುದೇ ಸಂದರ್ಭಗಳಲ್ಲಿ ವ್ಯಕ್ತಿಯಿಂದ ₹2 ಲಕ್ಷಕ್ಕಿಂತ ಹೆಚ್ಚು (ನಗದು ಸ್ವೀಕೃತಿ ಮಿತಿ) ಸ್ವೀಕರಿಸುವಂತಿಲ್ಲ ಎನ್ನುತ್ತದೆ ಸೆಕ್ಷನ್ 269ST. "ಆದಾಗ್ಯೂ, ಈ ನಿಯಮಕ್ಕೆ ಕೆಲವು ವಿನಾಯಿತಿಗಳಿವೆ. ಉದಾಹರಣೆಗೆ ಬ್ಯಾಂಕಿಂಗ್ ಕಂಪನಿಗಳು ಈ ನಿಯಮದಿಂದ ವಿನಾಯಿತಿ ಪಡೆದಿವೆ. ಆದ್ದರಿಂದ, ಅನ್ವಯಿಸುವಿಕೆಯು ಸಾಮಾನ್ಯವಾಗಿ ವಹಿವಾಟಿನ ಸ್ವರೂಪವನ್ನು ಅವಲಂಬಿಸಿರುತ್ತದೆ.
ಆದ್ದರಿಂದ, ಉದ್ದೇಶಿಸಲಾದ ವಹಿವಾಟಿನ ಸ್ವರೂಪವನ್ನು ಅವಲಂಬಿಸಿ ವಹಿವಾಟು (ಅಥವಾ ನಗದು ರಶೀದಿ) ಅನ್ವಯವಾಗುವ ಮಿತಿಯಲ್ಲಿದೆ ಎಂದು ಖಚಿತಪಡಿಸಿಕೊಳ್ಳಬೇಕು, ಇದರಿಂದ ದಂಡ, ನೋಟಿಸ್ ಅಥವಾ ಶಿಕ್ಷೆ ಎದುರಿಸಬೇಕಾಗುವುದಿಲ್ಲ" ಎಂದು JSA ವಕೀಲರು ಮತ್ತು ಸಾಲಿಸಿಟರ್‌ಗಳ ಪಾಲುದಾರ ಸೂರಜ್‌ಕುಮಾರ್ ಶೆಟ್ಟಿ ಹೇಳಿದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ