ಹೈದರಾಬಾದ್ ಕರ್ನಾಟಕ ಪ್ರದೇಶ

ಹೈದರಾಬಾದ್ ಕರ್ನಾಟಕ ಪ್ರದೇಶ
Hyderabad Karnataka

ಮಂಗಳವಾರ, ಮೇ 13, 2025

ವರ್ಗಾವಣೆ

ಅದರಲ್ಲಿ 2025-26 ಸಾಲಿನ ವರ್ಗಾವಣೆ ಮಾರ್ಗಸೂಚಿಗಳನ್ನು ಸರ್ಕಾರವು ಹೊರಡಿಸಲು ಇಚ್ಚಿಸುತ್ತದೆ. ಈ ವರ್ಗಾವಣೆ ಉದ್ದೇಶಕ್ಕಾಗಿ ಈಗಾಗಲೇ ಹೊರಡಿಸಲಾಗಿರುವ ಪ್ರತ್ಯೇಕ ಅಧಿನಿಯಮ / ನಿಯಮಗಳು ಅನ್ವಯವಾಗುವ ಸರ್ಕಾರಿ ನೌಕರರಿಗೆ ಈ ಮಾರ್ಗಸೂಚಿಗಳು ಅನ್ವಯವಾಗುವುದಿಲ್ಲ.

2. ವಿವರಣೆ:-ಈ ಆದೇಶದಲ್ಲಿ ಸಂದರ್ಭವು ಅನ್ಯಥಾ ಅಗತ್ಯಪಡಿಸದ ಹೊರತು,-
(1) "ಸಕ್ಷಮ ಪ್ರಾಧಿಕಾರ" ಎಂದರೆ ನೇಮಕಾತಿ ಪ್ರಾಧಿಕಾರ ಅಥವಾ ವರ್ಗಾವಣೆ/ ಚಲನವಲನ ಮಾಡಲು ಅಧಿಕಾರ ಹೊಂದಿರುವ ಪ್ರಾಧಿಕಾರ.
(2) "ವರ್ಗಾವಣೆ" ಎಂದರೆ ಒಬ್ಬ ಸರ್ಕಾರಿ ನೌಕರನನ್ನು ಒಂದು ಹುದ್ದೆಯಿಂದ ಮತ್ತೊಂದು ಹುದ್ದೆಯ ಕರ್ತವ್ಯಗಳನ್ನು ನಿರ್ವಹಿಸಲು ಒಂದು ಕೇಂದ್ರ ಸ್ಥಾನದಿಂದ ಮತ್ತೊಂದು ಕೇಂದ್ರ ಸ್ಥಾನಕ್ಕೆ ಅಥವಾ ಒಂದು ಇಲಾಖೆ/ಕ್ಷೇತ್ರ ಇಲಾಖೆ/ ಆಯುಕ್ತಾಲಯ/ನಿರ್ದೇಶನಾಲಯ, ಇತರೆ ಕಛೇರಿಯ ಪಸ್ತುತ ಇರುವ ಕೇಂದ್ರ ಸ್ನಾನವನ್ನು ಬದಲಾಯಿಸಿ ಬೇರೊಂದು ಕೇಂದ್ರ ಸ್ಥಾನಕ್ಕೆ ಕಛೇರಿಯನ್ನು ಬದಲಾಯಿಸಿದ ಸಂದರ್ಭದಲ್ಲಿ ಮಾಡುವ ಸ್ಥಳ ನಿಯುಕ್ತಿ.

(3) "ಚಲನವಲನ" ಎಂದರೆ ನಗರ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಒಂದೇ ಕೇಂದ್ರ ಸ್ಥಾನದಲ್ಲಿರುವ ಒಂದು ಕಛೇರಿಯಿಂದ ಇನ್ನೊಂದು ಕಛೇರಿಗೆ ಮಾಡುವ ಸ್ಥಳನಿಯುಕ್ತಿ. ಇದು ಕರ್ನಾಟಕ ಸರ್ಕಾರ ಸಚಿವಾಲಯ ಸೇವೆಗೆ ಸೇರಿದ ಸರ್ಕಾರಿ ನೌಕರರನ್ನು ಸಚಿವಾಲಯದ ಒಂದು ಇಲಾಖೆಯಿಂದ ಮತ್ತೊಂದು ಇಲಾಖೆಗೆ ಮಾಡುವ ಸ್ಥಳನಿಯುಕ್ತಿಯನ್ನು ಸಹ ಒಳಗೊಂಡಿರುತ್ತದೆ.

ವಿವರಣೆ: ಚಲನವಲನ ಪ್ರಕರಣಗಳನ್ನು ವರ್ಗಾವಣೆಯೆಂದು ಪರಿಗಣಿಸತಕ್ಕದ್ದಲ್ಲ. ಈ ವರ್ಗಾವಣೆ ಮಾರ್ಗಸೂಚಿಗಳು ಚಲನವಲನ ಪಕರಣಗಳಿಗೆ ಅನ್ವಯಿಸತಕ್ಕದ್ದಲ್ಲ.
(4) 'ಗುಂಪು-'ಎ', 'ಬಿ', 'ಸಿ', ಮತ್ತು 'ಡಿ' ವೃಂದದ ಹುದ್ದೆಗಳು ಎಂದರೆ ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957ರ ನಿಯಮ 5ರಡಿ ವರ್ಗೀಕರಿಸಲಾಗಿರುವ ಗುಂಪು-ಎ, ಬಿ, ಸಿ ಮತ್ತು ಡಿ ವೃಂದದ ಸರ್ಕಾರಿ ಹುದ್ದೆಗಳು ಮತ್ತು ಕ್ರಮವಾಗಿ ಅಧಿಕಾರ ಹೊಂದಿರುವ ನೇಮಕಾತಿ ಪ್ರಾಧಿಕಾರದ ವ್ಯಾಪ್ತಿ

3. ವರ್ಗಾವಣಾ ಪ್ರಕ್ರಿಯೆ:-

ವರ್ಗಾವಣೆ/ಚಲನವಲನಗಳನ್ನುಸಕ್ಷಮ ಪ್ರಾಧಿಕಾರವು ಮುಖ್ಯವಾಗಿ ಸಾರ್ವಜನಿಕ ಹಿತದೃಷ್ಟಿಯಲ್ಲಿ ಪಾರದರ್ಶಕವಾಗಿ ಮಾಡಬೇಕು.

4. ವರ್ಗಾವಣೆಯ ಬಗ್ಗೆ ನಿರ್ಬಂಧಗಳು :

ಪುಸಕ್ತ 2025-26ನೇ ಸಾಲಿನಲ್ಲಿ ಗ್ರೂಪ್-ಎ, ಗ್ರೂಪ್-ಬಿ, ಗ್ರೂಪ್-ಸಿ ಮತ್ತು ಗ್ರೂಪ್-ಡಿ ಹುದ್ದೆಗಳಿಗೆ ಮಾಡಲಾಗುವ ವರ್ಗಾವಣೆಗಳ ಸಂಖ್ಯೆಯು ಆಯಾ ವೃಂದಗಳ ಕಾರ್ಯನಿರತ ವೃಂದ ಬಲದ ಶೇ.6ನ್ನು ಮೀರದಂತೆ ದಿನಾಂಕ:15.05.2025 ರಿಂದ ದಿನಾಂಕ:14.06.2025 ರವರೆಗೆ ಸಾರ್ವತ್ರಿಕ ವರ್ಗಾವಣೆ ಕೈಗೊಳ್ಳಲು, ಗ್ರೂಪ್-ಎ ಮತ್ತು ಗ್ರೂಪ್-ಬಿ ವೃಂದದ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಆಯಾ ಇಲಾಖಾ ಸಚಿವರಿಗೆ ಹಾಗೂ ಗ್ರೂಪ್-ಸಿ ಮತ್ತು ಗ್ರೂಪ್-ಡಿ ವೃಂದದ ನೌಕರರಿಗೆ ಸಂಬಂಧಿಸಿದಂತೆ ಆಯಾ ನೇಮಕಾತಿ ಪ್ರಾಧಿಕಾರಗಳಿಗೆ ಅಧಿಕಾರ ಪ್ರತ್ಯಾಯೋಜಿಸಲಾಗಿದೆ.

5. ಸಕ್ಷಮ ಪ್ರಾಧಿಕಾರದ ಹಾಗೂ ನೌಕರನ ಜವಾಬ್ದಾರಿಗಳು:-

ಸಕ್ಷಮ ಪ್ರಾಧಿಕಾರವು ವರ್ಗಾವಣೆ | ಚಲನವಲನ ಮಾಡುವಾಗ ಈ ಕೆಳಗಿನ ಅಂಶಗಳನ್ನೂ ಸಹ ಖಚಿತಪಡಿಸಿಕೊಳ್ಳತಕ್ಕದ್ದು.
(1) ಯಾವುದೇ ಸರ್ಕಾರಿ ನೌಕರರ ವರ್ಗಾವಣೆಯಾದ ಸಂದರ್ಭಗಳಲ್ಲಿ ಯಾವುದೇ ನೌಕರರು ಸ್ಥಳ ನಿಯುಕ್ತಿಗಾಗಿ ಕಾಯದಂತೆ ಕಡ್ಡಾಯವಾಗಿ ಸ್ಥಳ ನಿಯುಕ್ತಿ ನೀಡತಕ್ಕದ್ದು. ಈ ರೀತಿ ಹಲವಾರು ಸರ್ಕಾರಿ ನೌಕರರು ಸ್ಥಳ ನಿಯುಕ್ತಿಗಾಗಿ ಕಾಯುವುದರಿಂದ ಸರ್ಕಾರಕ್ಕೆ ಅನವಶ್ಯಕ ಆರ್ಥಿಕ ಹೊರೆಯಾಗುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳತಕ್ಕದ್ದು.

(2) ಯಾವುದೇ ಸರ್ಕಾರಿ ನೌಕರನ ವಿರುದ್ಧ ಗಂಭೀರ ಸ್ವರೂಪದ ಆರೋಪಗಳ ಬಗ್ಗೆ ಆತನ ವಿರುದ್ಧ ಇಲಾಖಾ ವಿಚಾರಣೆ ಕ್ರಿಮಿನಲ್ ನಡವಳಿ ಪ್ರಾರಂಭಿಸಲಾಗಿದ್ದಲ್ಲಿ ಅಥವಾ ಬಾಕಿಯಿದ್ದಲ್ಲಿ ಅಥವಾ ಆತನನ್ನು ಅಭಿಯೋಜನೆಗೊಳಿಸಲು ಉದ್ದೇಶಿಸಲಾಗಿದ್ದಲ್ಲಿ ಅಂತಹವರಿಗೆ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ / ಇಲಾಖಾ ವಿಚಾರಣೆಯಲ್ಲಿ ಹಸ್ತಕ್ಷೇಪ ಮಾಡಬಹುದಾದ ಹುದ್ದೆಗಳಿಗೆ ನೇಮಿಸದೇ ಆಡಳಿತಾತ್ಮಕ ಅನುಕೂಲಕ್ಕೆ (Administrative exigency) ಅನುಗುಣವಾದ ಕಾರ್ಯಕಾರಿಯೇತರ (Non- Executive) ಹುದ್ದೆಗಳಿಗೆ ನೇಮಿಸತಕ್ಕದ್ದು. ಮುಂದುವರೆದು, ಇಲಾಖಾ ವಿಚಾರಣೆ / ಕ್ರಿಮಿನಲ್ ಮೊಕದ್ದಮೆ ಬಾಕಿಯಿರುವ ಸರ್ಕಾರಿ ನೌಕರರನ್ನು ಅವರು ಕೋರುವ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಬಾರದು.

(3) ವರ್ಗಾವಣೆಗೊಂಡ ಸರ್ಕಾರಿ ನೌಕರನು ವರ್ಗಾವಣೆ ಆದೇಶವನ್ನು ಹೊರಡಿಸುವ ಪೂರ್ವದಲ್ಲಿ ಅಥವಾ ಸೇರುವಿಕೆ ಕಾಲದಲ್ಲಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ (as inpatient) ಚಿಕಿತ್ಸೆಯನ್ನು ಪಡೆಯುವ ಸಂದರ್ಭದಲ್ಲಿ ಮಾತ್ರ, ಅಗತ್ಯ ದಾಖಲೆಗಳೊಂದಿಗೆ ಹಾಗೂ ವೈದ್ಯಕೀಯ ಮಂಡಳಿಯ ದೃಢೀಕರಣ ಪತ್ರದೊಂದಿಗೆ ರಜೆಯನ್ನು ಕೋರಿ ಅರ್ಜಿಯನ್ನು ಸಲ್ಲಿಸಿದಲ್ಲಿ, ವೈದ್ಯಕೀಯ ಕಾರಣಗಳ ಮೇಲೆ ರಜೆಯನ್ನು ಮಂಜೂರು ಮಾಡುವ ಬಗ್ಗೆ ಸಕ್ಷಮ ಪ್ರಾಧಿಕಾರ ಪರಿಶೀಲಿಸಿ ರಜೆಯನ್ನು ಮಂಜೂರು ಮಾಡುವ ಬಗ್ಗೆ ನಿರ್ಣಯಿಸಬಹುದಾಗಿದೆ.

(4) ಒಳರೋಗಿಯಾಗಿದ್ದವರು ಆಸ್ಪತ್ರೆಯಿಂದ ಬಿಡುಗಡೆಯಾಗಿ, ತದನಂತರ ಹೊರರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದರೆ ಅಥವಾ ವೈದ್ಯಕೀಯ ಸಲಹೆ ಮೇರೆಗೆ ಚಿಕಿತ್ಸೆ/ ವಿಶ್ರಾಂತಿ ಪಡೆಯುತ್ತಿದ್ದರೆ, ಅವರು ವರ್ಗಾವಣೆಗೊಂಡ ಸ್ಥಳದಲ್ಲಿ ಸೇರಿಕೆ ಕಾಲದೊಳಗೆ ಕರ್ತವ್ಯಕ್ಕೆ ಹಾಜರಾಗಿ, ರಜಾ ಅರ್ಜಿಯನ್ನು ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸಿ, ರಜೆ ಮಂಜೂರು ಮಾಡಿದ ನಂತರವೇ ರಜೆ ಮೇಲೆ ತೆರಳಬಹುದು. ಇಲ್ಲದಿದ್ದಲ್ಲಿ ಸೇರಿಕೆ ಕಾಲ ಮೀರಿದ ಅವಧಿಯನ್ನು ಅನಧಿಕೃತ ಗೈರು ಹಾಜರಿ ಎಂದು ಪರಿಗಣಿಸತಕ್ಕದ್ದು.

6. ಈ ಕೆಳಕಂಡ ಸಂದರ್ಭಗಳನ್ನು ಹೊರತುಪಡಿಸಿ ಸಕ್ಷಮ ಪ್ರಾಧಿಕಾರಗಳು ವರ್ಗಾವಣೆಗಳನ್ನು ಸಾರ್ವತ್ರಿಕ ವರ್ಗಾವಣೆ ಅವಧಿಯ ನಂತರದಲ್ಲಿ ಮಾಡತಕ್ಕದ್ದಲ್ಲ-
(1) ಒಬ್ಬ ಸರ್ಕಾರಿ ನೌಕರನನ್ನು ಸೇವೆಯಿಂದ ಅಮಾನತ್ತಿನಲ್ಲಿಡುವ ಬದಲು ವರ್ಗಾಯಿಸಲು/ ಚಲನವಲನಗೊಳಿಸಲು ಉದ್ದೇಶಿಸಿದಾಗ;

(2) ಹೊಸ ಕಛೇರಿ / ಹುದ್ದೆಗಳನ್ನು ಸೃಜಿಸಿದಾಗ ಅಥವಾ ನಿವೃತ್ತಿ, ಬಡ್ತಿ, ರಾಜೀನಾಮೆ, ಹಿಂಬಡ್ತಿ, ವಜಾಗೊಳಿಸುವುದರಿಂದ ಮರಣದಿಂದ, ಕಡ್ಡಾಯ ನಿವೃತ್ತಿಯ ಕಾರಣದಿಂದ ಹುದ್ದೆಗಳು ತೆರವಾದಾಗ ಅಥವಾ ನೇರ ನೇಮಕಾತಿ ಹೊಂದಿದವರನ್ನು ಮೊದಲು ನೇಮಿಸುವಾಗ ಅಥವಾ ಬಡ್ತಿ ಹೊಂದಿದವರನ್ನು ನೇಮಿಸುವಾಗ ಅಥವಾ ಯಾವುದೇ ಅನಿರೀಕ್ಷಿತ ಪರಿಸ್ಥಿತಿಯಿಂದ ಉದ್ಭವವಾದ ಹುದ್ದೆಗಳನ್ನು ತಕ್ಷಣ ತುಂಬಬೇಕಾದಾಗ;

(3) ವಿಶೇಷವಾದ ಅಥವಾ ಅಪವಾದಾತ್ಮಕ ಕಾರಣಗಳ ಮೇರೆಗೆ ಮಾಡುವ ವಾರ್ಷಿಕ ವರ್ಗಾವಣೆಗಳ ಸಂಖ್ಯೆಯನ್ನು ಕನಿಷ್ಠ ಮಟ್ಟಕ್ಕೆ ಸೀಮಿತಗೊಳಿಸಿ ನಿರ್ದಿಷ್ಟ ಪ್ರಕರಣಗಳಲ್ಲಿ ವರ್ಗಾವಣೆಯು ಅವಶ್ಯವೆನಿಸಿದಲ್ಲಿ ಇದಕ್ಕೆ ಕಾರಣಗಳನ್ನು ಲಿಖಿತ ಮೂಲಕ ದಾಖಲಿಸಿ ಇಂತಹ ಪ್ರಕರಣಗಳನ್ನು ಕಡ್ಡಾಯವಾಗಿ ಮಾನ್ಯ ಮುಖ್ಯಮಂತ್ರಿಗಳ ಅನುಮೋದನೆ ಪಡೆದು ವರ್ಗಾವಣೆ ಮಾಡತಕ್ಕದ್ದು.

(4) ಯಾವುದೇ ಸರ್ಕಾರಿ ನೌಕರನ ವಿರುದ್ಧ ಮೇಲ್ನೋಟಕ್ಕೆ ಗಂಭೀರ ಸ್ವರೂಪದ ದೂರು ದಾಖಲಾಗಿರುವ ಪ್ರಕರಣಗಳಲ್ಲಿ ಮೇಲ್ನೋಟಕ್ಕೆ ಆರೋಪವಿದೆಯೆಂಬ ಬಗ್ಗೆ ಇಲಾಖಾ ಮುಖ್ಯಸ್ಥರು ಅಭಿಪ್ರಾಯಪಟ್ಟಿದ್ದಲ್ಲಿ ಅಂತಹ ಪಕರಣಗಳಲ್ಲಿ ಸರ್ಕಾರಿ ನೌಕರನಿಗೆ ದೋಷಾರೋಪಣೆ ಪಟ್ಟಿ/ಚಾರ್ಜ್‌ಶೀಟ್ ಜಾರಿಯಾಗಿರುವುದು ಅಥವಾ ಸಕ್ಷಮ ನ್ಯಾಯಾಲಯದಲ್ಲಿ ಅಧಿಕಾರಿಯನ್ನು ಅಭಿಯೋಜಿಸುವ ಬಗ್ಗೆ ಅನುಮತಿ ನೀಡಿರುವುದು ಖಚಿತವಾದ ಪ್ರಕರಣಗಳಲ್ಲಿ.


ಶನಿವಾರ, ಮೇ 10, 2025

Dhishank app


ಈ ಮೊಬೈಲ್ ಅಪ್ಲಿಕೇಷನ್‌ನಲ್ಲಿ ಜಿಪಿಎಸ್ ಮೂಲಕ ಯಾವುದೇ ಮೂಲೆಯಲ್ಲಿರುವ ಆಸ್ತಿ ಮತ್ತು ಜಮೀನಿನ ಬಗ್ಗೆ ತಕ್ಷಣ ಮಾಹಿತಿ ತಿಳಿದುಕೊಳ್ಳಬಹುದು. ದಿಶಾಂಕ್‌ ಆಯಪ್‌ ಅನ್ನು ಗ್ರಾಮ ಮಟ್ಟದಲ್ಲಿ ಪರಿಚಯಿಸಲು ಸರಕಾರ ನಿರ್ಧರಿಸಿದೆ. ಅದರಂತೆ ಗ್ರಾಮ ಠಾಣಾ ವ್ಯಾಪ್ತಿಯ ನಿವೇಶನ, ಭೂಮಿಯಲ್ಲಿ ಮನೆ ಕಟ್ಟಬೇಕೆಂದರೆ ಇ-ಖಾತೆಯನ್ನು ಶೀಘ್ರವಾಗಿ ಪಡೆಯಲು ಇದು ನೆರವಾಗಲಿದೆ. ಈವರೆಗೆ ಗ್ರಾಹಕರು ಅರ್ಜಿಯೊಂದಿಗೆ 800 ರೂ. ಶುಲ್ಕ ಪಾವತಿಸಬೇಕಿತ್ತು. ಇದೀಗ ದಿಶಾಂಕ್‌ನಿಂದಾಗಿ 200 ರೂ. ಪಾವತಿಸಿದರೆ ಸಾಕು.ರೈತರ ಜಮೀನಿನ ನೆರೆಹೊರೆಯ ಜಮೀನು ಕೆರೆ ಕಟ್ಟೆ, ಹಳ್ಳಕೊಳ್ಳ ಖರಾಬು ಜಮೀನಿದ್ದರೆ ರೈತರು ದಿಶಾಂಕ್ ಆಯಪ್ ಸಹಾಯದಿಂದ ಪಡೆಯಬಹುದು.

ಸಾರ್ವಜನಿಕರು ಭೂಮಿ, ನಿವೇಶನ ಅಥವಾ ಫ್ಲ್ಯಾಟ್ ಖರೀದಿ ವೇಳೆ ವಂಚನೆ ಗೊಳಗಾಗುವುದನ್ನು ತಪ್ಪಿಸಲು ರಾಜ್ಯ ಭೂಮಾಪನ, ಕಂದಾಯ ಮತ್ತು ಭೂದಾಖಲೆಗಳ ಇಲಾಖೆಯು ವಿನೂತನ ಆಯಪ್ ವೊಂದನ್ನು ಅಭಿವೃದ್ಧಿಪಡಿಸಿ ಬಿಡುಗಡೆ ಮಾಡಿದೆ.ಭೂಗಳ್ಳರು ಸರಕಾರಿ ಭೂಮಿ, ಖರಾಬು, ಗೋಮಾಳ, ಕೆರೆ ಅಂಗಳ, ಜಾಗವನ್ನು ಕಬಳಿಸಿ, ಇತರರಿಗೆ ಮಾರಾಟ ಮಾಡಿ ವಂಚಿಸಿರುವ ಪ್ರಕರಣಗಳು ಸಾಕಷ್ಟಿವೆ. ದಿಶಾಂಕ್ ಆಪ್ ಜಿಪಿಎಸ್ ಆಧರಿಸಿ ಕಾರ್ಯ ನಿರ್ವಹಿಸುತ್ತದೆ. ನೀವು ನಿಂತಿ ರುವ ಸ್ಥಳದಲ್ಲಿ ಅಪ್ ತೆರೆದರೆ, ಸ್ಯಾಟ ಲೈಟ್ ಅಥವಾ ಗೂಗಲ್ ಮ್ಯಾಪ್ ಸಹಿತ ವಾಗಿ ಸರ್ವೆ ಸಂಖ್ಯೆಯನ್ನು ತಿಳಿಸುತ್ತದೆ. ಹಾಗೆಯೇ, ಅದರಲ್ಲಿ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮವನ್ನು ಆಯ್ಕೆ ಮಾಡಿ ಸರ್ವೇ ಸಂಖ್ಯೆಯನ್ನು ನಮೂದಿಸಿದರೆ, ಅದರ ನಕಾಶೆ ಕಾಣ ಸಿಗುತ್ತದೆ.ದಿಶಾಂಕ್ ಆಯಪ್ ಒದಗಿಸುವ ಮಾಹಿತಿಯಿಂದ ಜನರು ನಿಶ್ಚಿಂತೆಯಿಂದ ನಿವೇಶನ, ಫ್ಲ್ಯಾಟ್ ಮಾಡಬಹುದು.

ದಿಶಾಂಕ್ ಆಯಪ್ ಉಪಯೋಗಗಳು

*ಯಾವುದಾದರೂ ಆಸ್ತಿಯ ನಿಖರ ಸರ್ವೇ ನಂಬರ್ ನ್ನು ಪಡೆಯಲು ಸಹಕಾರಿಯಾಗಿದೆ.

*ಎಲ್ಲಾ ಸಾರ್ವಜನಿಕರು, ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಅತಿ ಉಪಯುಕ್ತ ಆಯಪ್ ಇದು.

ಇ-ಸ್ವತ್ತು ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ?

ಗ್ರಾಮ ಪಂಚಾಯತಿಯಲ್ಲೇ ಇ-ಸ್ವತ್ತು ಪ್ರಮಾಣ ಪತ್ರದ ಸಂಪೂರ್ಣ ಅರ್ಜಿ ವಿಲೇವಾರಿಗೆ ಅವಕಾಶ ನೀಡಲಾಗಿದ್ದು ಸಾರ್ವಜನಿಕರು ತಮ್ಮ ಹಳ್ಳಿ ವ್ಯಾಪ್ತಿಯಲ್ಲಿರುವ ಗ್ರಾಮ ಪಂಚಾಯತಿಯನ್ನು ನೇರವಾಗಿ ಅಗತ್ಯ ದಾಖಲೆಗಳ ಸಮೇತ ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

ಅಗತ್ಯ ದಾಖಲೆಗಳು:

ಅರ್ಜಿದಾರರ ಆಧಾರ್ ಕಾರ್ಡ ಪ್ರತಿ

ಕುಟುಂಬದ ವಂಶವೃಕ್ಷ ಪ್ರಮಾಣ ಪತ್ರ

ಅರ್ಜಿದಾರರ ಪೋಟೋ

ಮನೆ ಅಥವಾ ಖಾಲಿ ಖಾಗದ ಪೋಟೋ ಕಾಪಿ

ಕಂದಾಯ ರಶೀದಿ

ವಿದ್ಯುತ್ ಬಿಲ್

ಕೈಬರಹದ ಅರ್ಜಿ

ಮಂಗಳವಾರ, ಏಪ್ರಿಲ್ 22, 2025

'ರಾಜ್ಯ ಸರ್ಕಾರಿ' ನೌಕರರೇ ಗಮನಿಸಿ : 'ಆರೋಗ್ಯ ಸಂಜೀವಿನಿ' ಯೋಜನೆಯಡಿ ನೋಂದಣಿ ಕುರಿತು ಇಲ್ಲಿದೆ ಮಹತ್ವದ ಮಾಹಿತಿ

ಈ ಯೋಜನೆಯನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ ಎಂದಿದ್ದಾರೆ.

ಈ ಯೋಜನೆಯ ಕಾರ್ಯನೀತಿ ಸೂಚನೆಗಳನ್ನು ಸರ್ಕಾರದ ಆದೇಶ ಸಂಖ್ಯೆ:ಸಿಆಸುಇ 16 ಎಸ್ ಎಂಆರ್ 2020 ರ ದಿನಾಂಕ:17.08.2021, 05.09.2022, 09.03.2023 ಹಾಗೂ ದಿನಾಂಕ: 02.04.2025 ಗಳಲ್ಲಿ ನೀಡಲಾಗಿದೆ.

KASS ಯೋಜನೆಯು ರಾಜ್ಯ ಸರ್ಕಾರದ ನೌಕರರಿಗೆ ಐಚ್ಛಿಕವಾಗಿದ್ದು, ಯೋಜನೆಯಡಿ ಸರ್ಕಾರಿ ನೌಕರರು ವೈದ್ಯಕೀಯ ಸೌಲಭ್ಯ ಪಡೆಯಲು ಹೊರಗುಳಿಯಲು (Opt in / Opt out) ಆಯ್ಕೆ / ಇಚ್ಛೆ ವ್ಯಕ್ತಪಡಿಸುವ ಕುರಿತಂತೆ ಈ ಕೆಳಕಂಡ ಸೂಚನೆಗಳನ್ನು ಹೊರಡಿಸಲಾಗಿದೆ ಹಾಗೂ ಅನುಬಂಧಗಳನ್ನು ಲಗತ್ತಿಸಲಾಗಿದೆ ಎಂದಿದೆ.

1. ಯೋಜನೆಯಡಿ ಸರ್ಕಾರಿ ನೌಕರರು ಒಳಪಡುವ ಕಾರ್ಯವಿಧಾನದ ಬಗ್ಗೆ: ಈ ಯೋಜನೆಯು ಎಲ್ಲಾ ಅರ್ಹ ಸರ್ಕಾರಿ ನೌಕರರಿಗೆ ಅನ್ವಯವಾಗಲಿದ್ದು ಯೋಜನೆಯ ಸೌಲಭ್ಯ ಪಡೆಯುವುದು ಐಚ್ಛಿಕವಾಗಿದ್ದು (Optional), ಕಡ್ಡಾಯ(Mandatory) ಆಗಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಯಾವುದೇ ಸರ್ಕಾರಿ ನೌಕರರು ಯೋಜನೆಯ ಸದುಪಯೋಗ ಪಡೆಯಲು ಇಚ್ಚಿಸಿದಲ್ಲಿ ಮಾತ್ರ ತನ್ನ ಆಯ್ಕೆಯನ್ನು ಸೂಚಿಸಬಹುದಾಗಿದೆ. ಇಚ್ಛೆ ಇಲ್ಲದ ಪಕ್ಷದಲ್ಲಿಯೂ ಸಹ ನಿಗದಿತ ನಮೂನೆಯಲ್ಲಿ ತಿಳಿಸಬಹುದಾಗಿದೆ.

2. ನೋಂದಾವಣೆಗೆ ಸಂಬಂಧಿಸಿದಂತೆ ಉಲ್ಲೇಖಿತ ದಿನಾಂಕ:09.03.2023 ಆದೇಶದ ಅನುಬಂಧಗಳಲ್ಲಿ ನೋಂದಾವಣೆ ಅರ್ಜಿ ನಮೂನೆಗಳನ್ನು, ವಿವಿಧ ಘೋಷಣಾ ಪತ್ರಗಳನ್ನು ಹಾಗೂ ನೋಂದಾವಣೆ ಕಾರ್ಯವಿಧಾನಗಳನ್ನು ನಿರ್ಧಿಷ್ಟಪಡಿಸಲಾಗಿದೆ. ಇವುಗಳನ್ನು ಎಲ್ಲಾ ಸರ್ಕಾರಿ ನೌಕರರು ಹಾಗೂ ಡಿಡಿಓಗಳು (DDOs) ತಪ್ಪದೇ ಅನುಸರಿಸತಕ್ಕದ್ದು. HRMS ತಂತ್ರಜ್ಞಾನದಲ್ಲಿ ಡಿಡಿಓಗಳು ಅರ್ಜಿಗಳನ್ನು ಅಪ್ ಲೋಡ್ ಮಾಡಲು ಕ್ರಮವಹಿಸುವುದು. 3. ಯೋಜನೆಯಲ್ಲಿ ಸರ್ಕಾರಿ ನೌಕರರನ್ನು ನೋಂದಾಯಿಸುವ ಬಗ್ಗೆ HRMS ನಿರ್ದೇಶನಾಲಯವು ಸಹ ದಿನಾಂಕ: 30.05.2023 ಹಾಗೂ 05.06.2023 ರಂದು ವಿವರವಾದ ಮಾರ್ಗಸೂಚಿಗಳನ್ನು ಹಾಗೂ KASS-ಡಿಡಿಓ ಬಳಕೆದಾರರ ಕೈಪಿಡಿ, WEB APPLICATION ಮುಂತಾದ ವಿವರಗಳನ್ನು ನೀಡಿರುತ್ತದೆ. ಈ ಸೂಚನೆಗಳನ್ನು ಎಲ್ಲಾ ಇಲಾಖೆಗಳ ಡಿಡಿಓಗಳು ತಪ್ಪದೇ ಅನುಸರಿಸುವುದು ಹಾಗೂ ನೌಕರರ ನೋಂದಾವಣೆಯನ್ನು ಚುರುಕುಗೊಳಿಸುವುದು.

4. ಸರ್ಕಾರಿ ನೌಕರ ಯೋಜನೆಗೆ ಒಳಪಡಲು ಆಯ್ಕೆಯನ್ನು ವ್ಯಕ್ತಪಡಿಸಲು ಉದ್ದೇಶಿಸಿದಲ್ಲಿ ದಿನಾಂಕ: 20.05.2025 ರ ಒಳಗಾಗಿ ಈ ಸಂಬಂಧ ಅನುಬಂಧ-2 ರ ನಮೂನೆ-1 ರಲ್ಲಿ ಘೋಷಣೆಯನ್ನು ತನ್ನ ಮೇಲಾಧಿಕಾರಿ ಮೂಲಕ ಡಿಡಿಓ ಗಳಿಗೆ ಸಲ್ಲಿಸತಕ್ಕದ್ದು. ಇಂತಹ ಘೋಷಣೆಯನ್ನು ಸಲ್ಲಿಸುವ ನೌಕರರಿಂದ ಯೋಜನೆಯ ವಂತಿಕೆಯನ್ನು ಮೇ 2025ರ ಮಾಹೆಯಿಂದ ಸ್ವಯಂಚಾಲಿತವಾಗಿ HRMS ನಲ್ಲಿ ಕಟಾಯಿಸಲಾಗುವುದು.
5. ನೌಕರರು ಈ ಯೋಜನೆಗೆ ಒಳಪಡದೇ ಇರಲು ಇಚ್ಚಿಸಿದಲ್ಲಿ ದಿನಾಂಕ: 20.05.2025 ರ ಒಳಗಾಗಿ ಈ ಸಂಬಂಧ ಅನುಬಂಧ-2 ರ ನಮೂನೆ-2 ರಲ್ಲಿ ಘೋಷಣೆಯನ್ನು ತನ್ನ ಮೇಲಾಧಿಕಾರಿ ಮೂಲಕ ಡಿಡಿಓ ಗಳಿಗೆ ಸಲ್ಲಿಸತಕ್ಕದ್ದು, ತಪ್ಪಿದಲ್ಲಿ ಇಂತಹ ನೌಕರರು ಯೋಜನೆಗೆ ಒಳಪಡಲು ಇಚ್ಚಿಸಿದ್ದಾರೆಂದು ಪರಿಗಣಿಸಿ ಅವರ ಮೇ 2025ರ ವೇತನದಿಂದ HRMS ಮುಖಾಂತರ ವಂತಿಕೆ ಕಟಾವಣೆ ಮಾಡಲಾಗುತ್ತದೆ.

6. ಯೋಜನೆಗೆ ನೌಕರರ ವಂತಿಕೆ: ಯೋಜನೆಗೆ ಒಳಪಡುವ ಸರ್ಕಾರಿ ನೌಕರ ಈ ಕೆಳಂಡಂತೆ ಮಾಸಿಕ ವಂತಿಕೆಯನ್ನು ನೀಡಬೇಕಾಗುತ್ತದೆ.

ಗ್ರೂಪ್ ಎ - ರೂ.1000/-
ಗ್ರೂಪ್ ಬಿ - ರೂ. 500-
ಗ್ರೂಪ್ ಸಿ - ರೂ. 350
ಗ್ರೂಪ್ ಡಿ - ರೂ.250

ಮಾಸಿಕ ವಂತಿಕೆಯನ್ನು HRMS ಮೂಲಕ ನೌಕರರ ಮೇ 2025 ರಿಂದ ಮಾಸಿಕ ವೇತನದಲ್ಲಿ ಕಡಿತಗೊಳಿಸಲು ಸಂಬಂಧ ಪಟ್ಟ ಡಿಡಿಓಗಳು ಕ್ರಮವಹಿಸತಕ್ಕದ್ದು, ಯಾವ ಲೆಕ್ಕ ಶೀರ್ಷಿಕೆಯಡಿ ಈ ಮೊತ್ತವನ್ನು ಜಮಾ ಮಾಡಬೇಕು ಹಾಗು ಇತರ ವಿಧಿ-ವಿಧಾನಗಳ ಬಗ್ಗೆ ಸರ್ಕಾರದಿಂದ ಶೀಘ್ರದಲ್ಲಿ ಮಾರ್ಗಸೂಚನೆಗಳನ್ನು (SOP) ಆರ್ಥಿಕ ಇಲಾಖೆಯಿಂದ ಹೊರಡಿಸಲಾಗುತ್ತದೆ.
7. ಮೇಲಿನ ಸೂಚನೆಗಳನ್ನು ಎಲ್ಲಾ ಸರ್ಕಾರಿ ನೌಕರರ ಹಾಗೂ ಗಮನಕ್ಕೆ ತರುವಂತೆ ಎಲ್ಲಾ ಇಲಾಖಾ ಮುಖ್ಯಸ್ಮರಿಗೆ ಡಿಡಿಓಗಳ ತಿಳಿಸಲಾಗಿದೆ ಎಂದಿದ್ದಾರೆ.

ಶುಕ್ರವಾರ, ಏಪ್ರಿಲ್ 4, 2025

ರಾಜ್ಯ ಸರ್ಕಾರಿ ನೌಕರ'ರಿಗೆ ಮತ್ತೊಂದು ಸಿಹಿಸುದ್ದಿ ನೀಡಲು ಮುಂದಾದ ಸರ್ಕಾರ

ಈ ಸಂಬಂಧ ರಾಜ್ಯ ಸರ್ಕಾರದಿಂದ ಸಭಾ ಸೂಚನಾ ಪತ್ರವನ್ನು ಹೊರಡಿಸಲಾಗಿದ್ದು, ರಾಜ್ಯ ಸಚಿವ ಸಂಪುಟದ ತೀರ್ಮಾನಿಸಿದಂತೆ ಅಧಿಕಾರಿ, ನೌಕರರು ಮತ್ತು ಅವಲಂಬಿತ ಕುಟುಂಬದ ಸದಸ್ಯರ ಹಿತಾಸಕ್ತಿಗಳನ್ನು ರಕ್ಷಿಸುವ ಸಲುವಾಗಿ ವಿವಿಧ ಬ್ಯಾಂಕುಗಳು ಒದಗಿಸುವ ವಿಶಿಷ್ಟ ಸೌಲಭ್ಯಗಳನ್ನು ಪಡೆಯಲು ಸಹಕಾರಿಯಾಗುವಂತೆ ಸಂಬಳ ಪ್ಯಾಕೇಜ್ ಗಳ ಅಡಿಯಲ್ಲಿ ಖಾತೆಗಳನ್ನು ತೆರೆಯುವುದು, ಆಯ್ಕೆ ಮಾಡಿಕೊಳ್ಳುವುದನ್ನು ರಾಜ್ಯ ಸರ್ಕಾರವು ಕಡ್ಡಾಯಗೊಳಿಸಿದೆ ಎಂದಿದೆ.

ಸದರಿ ಯೋಜನೆಯಡಿ ಸರ್ಕಾರದ ಎಲ್ಲಾ ಅಧಿಕಾರಿಗಳು/ನೌಕರರು ಬ್ಯಾಂಕುಗಳು ನೀಡುತ್ತಿರುವ ಸಂಬಳ ಪ್ಯಾಕೇಜು ಖಾತೆಯಾಗಿ ಪರಿವರ್ತಿಸಿಕೊಳ್ಳಲು ಬ್ಯಾಂಕುಗಳು ಅನುಕೂಲ ಮಾಡಿಕೊಡ ಬೇಕಾಗಿದ್ದು, ಸದರಿ ವಿಷಯದಲ್ಲಿ ಏನಾದರೂ ಸಮಸ್ಯೆಗಳಿದ್ದಲ್ಲಿ ಅವುಗಳನ್ನು ನಿವಾರಣೆ ಮಾಡುವುದು ಅವಶ್ಯಕವಾಗಿರುತ್ತದೆ ಎಂಬುದಾಗಿ ಹೇಳಿದೆ.

ಮುಂದುವರೆದು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರು ರಾಜ್ಯ ಸರ್ಕಾರಿ ನೌಕರರ ಪರವಾಗಿ ಬ್ಯಾಂಕುಗಳು ಸಂಬಳ ಪ್ಯಾಕೇಜು ಖಾತೆಯಾಗಿ ಪರಿವರ್ತಿಸಿಕೊಳ್ಳುವ ಅಧಿಕಾರಿ/ನೌಕರರಿಗೆ, ರಾಷ್ಟ್ರೀಕೃತ ಬ್ಯಾಂಕುಗಳು, ಗೃಹ ಸಾಲ, ವೈಯಕ್ತಿಕ ಸಾಲ ಮತ್ತು ವಾಹನ ಖರೀದಿ ಸಾಲಗಳನ್ನು ರಿಯಾಯಿತಿ ಬಡ್ಡಿ ದರದಲ್ಲಿ ನೀಡುವ ಸಂಬಂಧ ಮನವಿ ಮಾಡಿದ್ದಾರೆ ಎಂಬುದಾಗಿ ತಿಳಿಸಿದೆ.ಟ

ಈ ಹಿನ್ನೆಲೆಯಲ್ಲಿ, ಮೇಲಿನ ವಿಷಯಗಳನ್ನು ಚರ್ಚಿಸಲು ಪ್ರಮುಖ ರಾಷ್ಟ್ರೀಕೃತ ಬ್ಯಾಂಕುಗಳ ಅಧಿಕಾರಿಗಳೊಂದಿಗೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳೊಂದಿಗೆ ಸರ್ಕಾರದ ಕಾರ್ಯದರ್ಶಿ (ವಿತ್ತೀಯ ಸುಧಾರಣೆ) ರವರ ಅಧ್ಯಕ್ಷತೆಯಲ್ಲಿ ದಿನಾಂಕ 15.04.2025 ರಂದು ಮಧ್ಯಾಹ್ನ 4.00 ಗಂಟೆಗೆ, ಕೊಠಡಿ ಸಂಖ್ಯೆ: 701, 7ನೇ ಮಹಡಿ, ಬಹುಮಹಡಿ ಕಟ್ಟಡ, ಬೆಂಗಳೂರು ಇಲ್ಲಿ ಸಭೆಯನ್ನು ನಡೆಸಲು ತೀರ್ಮಾನಿಸಲಾಗಿದೆ. ಈ ಸಭೆಗೆ ಅಗತ್ಯ ಮಾಹಿತಿಯೊಂದಿಗೆ ತಪ್ಪದೇ ಹಾಜರಾಗುವಂತೆ ಕೋರಿದೆ.

ಬೆಸ್ಕಾಂನಿಂದ 'ವಿದ್ಯುತ್ ಸಮಸ್ಯೆ'ಗಳಿಗೆ ದೂರು ದಾಖಲಿಸಲು 'ವಾಟ್ಸ್ ಆಪ್ ಸಹಾಯವಾಣಿ' ಆರಂಭ | BESCOM WhatsApp Helpline Number

ಸಾವರ್ಕರ್ ಬಗ್ಗೆ ಅವಹೇಳನಕಾರಿ ಹೇಳಿಕೆ: ರಾಹುಲ್ ಗಾಂಧಿಗೆ ನೀಡಿದ್ದ ಸಮನ್ಸ್ ರದ್ದತಿಗೆ ಕೋರ್ಟ್ ನಕಾರ

ಶಾಸಕ ಶಿವರಾಜ ಪಾಟೀಲ್ ಲೊಕೇಶನ್ ಟ್ರ್ಯಾಕ್ ಆರೋಪ: ಮಾಹಿತಿ ಪಡೆದು ಕ್ರಮ- ಗೃಹ ಸಚಿವ ಡಾ.ಜಿ ಪರಮೇಶ್ವರ್

ರಾಜ್ಯ ಸರ್ಕಾರಿ ನೌಕರರ 'ಆರೋಗ್ಯ ಸಂಜೀವಿನಿ ಯೋಜನೆ' ಪರಿಷ್ಕರಿಸಿ ಸರ್ಕಾರದಿಂದ ಮಹತ್ವದ ಆದೇಶ.

ರಾಜ್ಯ ಸರ್ಕಾರಿ ನೌಕರರ 'ಆರೋಗ್ಯ ಸಂಜೀವಿನಿ ಯೋಜನೆ' ಪರಿಷ್ಕರಿಸಿ ಸರ್ಕಾರದಿಂದ ಮಹತ್ವದ ಆದೇಶ.


ಈ ಕುರಿತಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ವಿಶೇಷ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಅವರ ಅವಲಂಬಿತ ಕುಟುಂಬದ ಸದಸ್ಯರಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸೆಗಳನ್ನು ಒದಗಿಸಲು ರಾಜ್ಯ ಸರ್ಕಾರದಿಂದ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು (KASS) ಅನುಷ್ಠಾನಗೊಳಿಸಲು ಮೇಲೆ ಕ್ರ.ಸಂ.(1) ರಿಂದ (3) ರಲ್ಲಿ ಓದಲಾದ ಸರ್ಕಾರದ ಆದೇಶಗಳಲ್ಲಿ ಕೆಲವು ಕಾರ್ಯನೀತಿ ಸೂಚನೆಗಳನ್ನು ನೀಡಲಾಗಿದೆ ಎಂದಿದ್ದಾರೆ.

ಮುಂದುವರೆದು, ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು (KASS) ಸಮರ್ಪಕವಾಗಿ ಅನುಷ್ಠಾನಗೊಳಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆರ್ಥಿಕ ಇಲಾಖೆ ಮತ್ತು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (SAST) ನೊಂದಿಗೆ ಚರ್ಚಿಸಿ, ಈ ಹಿಂದೆ ರೂಪಿಸಿರುವ ಯೋಜನೆಯಲ್ಲಿ ಕೆಲವು ಸೂಚನೆಗಳನ್ನು ಮಾರ್ಪಡಿಸುವುದು ಸೂಕ್ತವೆಂದು ತೀರ್ಮಾನಿಸಲಾಗಿದೆ. ಯೋಜನೆಗೆ ಸಂಬಂಧಿಸಿದಂತೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೇಲೆ ಓದಲಾದ (4) ರ ಪತ್ರಗಳಲ್ಲಿ ಸರ್ಕಾರಕ್ಕೆ ಪರಿಷ್ಕೃತ ಒಡಂಬಡಿಕೆಯನ್ನು ಸಿದ್ಧಪಡಿಸಿ ಸಲ್ಲಿಸಿರುತ್ತದೆ ಮೇಲೆ ಕ್ರ.ಸಂ. (5) ರಲ್ಲಿ ಓದಲಾದ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ದಿನಾಂಕ: 04.03.2025 ಮತ್ತು ದಿನಾಂಕ: 13.01.2025 ರಂದು ನಡೆದ ಸಭೆಗಳಲ್ಲಿ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೈಗೊಳ್ಳಬೇಕಾದ ಕೆಲವು ಅಂಶಗಳ ಬಗ್ಗೆ ಸೂಚನೆಗಳನ್ನು ನೀಡಲಾಗಿದೆ ಹಾಗೂ ಕೆಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದಿದ್ದಾರೆ.

ದಿನಾಂಕ: 13.01.2025 ರಂದು ನಡೆದ ಸಭೆಯ ತೀರ್ಮಾನದಂತೆ ಮೇಲೆ ಕ್ರ.ಸಂ. (6) ರಲ್ಲಿ ಓದಲಾದ, ಪ್ರಧಾನ ಕಾರ್ಯದರ್ಶಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರಿಂದ (ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನ ಏಕಕಡತದಲ್ಲಿ) ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯ ಪ್ಯಾಕೇಜ್ ದರಗಳು, ನಿಗದಿಪಡಿಸಿರದ ಚಿಕಿತ್ಸಾ ವಿಧಾನಗಳು (Unspecified procedures), ಇಂಪ್ಲಾಂಟ್ ದರಗಳು, ಆಸ್ಪತ್ರೆಗಳ ನೋಂದಾವಣೆ, ಒಡಂಬಡಿಕೆಯ ಷರತ್ತುಗಳು ಹಾಗೂ ಇತರೆ ಕೆಲವು ಅಂಶಗಳಿಗೆ ಸಂಬಂಧಿಸಿದಂತೆ ಪರಿಷ್ಕೃತ ಪುಸ್ತಾವನೆಯು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಲ್ಲಿ ಸ್ವೀಕೃತವಾಗಿದೆ.

ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನಿಂದ ಸ್ವೀಕೃತವಾದ ಪರಿಷ್ಕೃತ ಪ್ರಸ್ತಾವನೆಯಲ್ಲಿ ಈ ಕೆಳಕಂಡ ಪ್ರಮುಖ ಅಂಶಗಳನ್ನು ಪ್ರಸ್ತಾಪಿಸಲಾಗಿದೆ:-
1) ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯು ಪ್ಯಾಕೇಜ್ ದರಗಳನ್ನು ಆಧರಿಸಿದೆ. KASS ಯೋಜನೆಯಡಿ ఒట్టు 2000 ವೈದ್ಯಕೀಯ ಕಾರ್ಯವಿಧಾನಗಳನ್ನು ಅಳವಡಿಸಿಕೊಳ್ಳಲು ಪ್ರಸ್ತಾಪಿಸಲಾಗಿದೆ. ಈ ಕಾರ್ಯವಿಧಾನಗಳನ್ನು CGHS, HBP 2022 ಮತ್ತು ಪ್ರಸ್ತುತ AB-ArK ಪ್ಯಾಕೇಜ್‌ಗಳಲ್ಲಿ ಲಭ್ಯವಿರುವ ಪ್ಯಾಕೇಜ್‌ಗಳಿಂದ ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ.

KASS PACKAGE MASTER: ಯೋಜನೆಯ ಆರಂಭದ ಹಂತದಲ್ಲಿ ಈ ಕೆಳಕಂಡಂತೆ CGHS, AB-ARK, National Health Authority (NHA) 20 HBP 2022 da ಒಳಗೊಂಡ ಸಮ್ಮಿಶ್ರ ವೈದ್ಯಕೀಯ ಚಿಕಿತ್ಸಾ ವಿಧಾನಗಳು ಹಾಗೂ ದರಗಳನ್ನು ಒಳಗೊಂಡಿರುತ್ತವೆ ಎಂದು ತಿಳಿಸಿದ್ದಾರೆ.

ಗುರುವಾರ, ಏಪ್ರಿಲ್ 3, 2025

`ರಾಜ್ಯ ಸರ್ಕಾರಿ ನೌಕರರೇ' ಗಮನಿಸಿ : `ಸರ್ವೋತ್ತಮ ಸೇವಾ ಪ್ರಶಸ್ತಿ'ಗೆ ಅರ್ಜಿ ಆಹ್ವಾನ | Govt Employees

ಮುಂದುವರೆದು, ಸದರಿ ಸುತ್ತೋಲೆಯನ್ನು ಭಾಗಶ: ಪರಿಷ್ಕರಿಸಲು ತೀರ್ಮಾನಿಸಿ ಈ ಕೆಳಕಂಡಂತೆ ಕ್ರಮವಹಿಸುವಂತೆ ತಿಳಿಸಲಾಗಿದೆ.

1. 2024ನೇ ಸಾಲಿನ ಸರ್ವೋತ್ತಮ ಸೇವಾ ಪ್ರಶಸ್ತಿಗೆ ನಾಮ ನಿರ್ದೇಶನ ಸಲ್ಲಿಸಲು 2023ನೇ ಕ್ಯಾಲೆಂಡರ್ ವರ್ಷದಲ್ಲಿ ಮಾಡಿರುವ ಉಪ ಕ್ರಮ /ಸಾಧನೆಯನ್ನು ಪರಿಗಣಿಸಲಾಗುವುದು. ಹಾಗೆಯೇ, 2025ನೇ ಸಾಲಿನ ಸರ್ವೋತ್ತಮ ಸೇವಾ ಪ್ರಶಸ್ತಿಗೆ ನಾಮ ನಿರ್ದೇಶನ ಸಲ್ಲಿಸಲು 2024ನೇ ಕ್ಯಾಲೆಂಡರ್ ವರ್ಷದಲ್ಲಿ ಮಾಡಿರುವ ಉಪ ಕ್ರಮ /ಸಾಧನೆಯನ್ನು ಪರಿಗಣಿಸಲಾಗುವುದು.

2. 2024 ಹಾಗೂ 2025ನೇ ಸಾಲಿನ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಆನ್‌ಲೈನ್‌ನಲ್ಲಿ ನಾಮ ನಿರ್ದೇಶನವನ್ನು ಸಲ್ಲಿಸಲು ದಿನಾಂಕ: 14-04-2025 ಅಂತಿಮ ದಿನಾಂಕವನ್ನು ನಿಗದಿಪಡಿಸಲಾಗಿದೆ. ನಂತರ ಯಾವುದೇ ಕಾರಣಕ್ಕೂ ದಿನಾಂಕವನ್ನು ವಿಸ್ತರಿಸಲಾಗುವುದಿಲ್ಲ.

3. 2023ನೇ ಸಾಲಿನಲ್ಲಿ ಯಾವ ಜಿಲ್ಲೆಗಳು ಜಿಲ್ಲಾ ಮಟ್ಟದ ಆಯ್ಕೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿಲ್ಲವೋ ಅವರೂ ಸಹ ಪ್ರಕ್ರಿಯೆಯನ್ನು ದಿನಾಂಕ: 16-04-2025 ರೊಳಗೆ ಪೂರ್ಣಗೊಳಿಸುವುದು ಮತ್ತು ಆಯ್ಕೆ ಪೂರ್ಣಗೊಂಡ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸುವುದು.

4. 2024 ಹಾಗೂ 2025ನೇ ಸಾಲಿನ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಯ ಆಯ್ಕೆಯನ್ನು ಪೂರ್ಣಗೊಳಿಸಿ, ಪೂರ್ಣಗೊಂಡ ಎರಡು ವರ್ಷಗಳ ಆಯ್ಕೆ ಪಟ್ಟಿಯನ್ನು ದಿನಾಂಕ: 16-04-2025ರೊಳಗೆ ಸರ್ಕಾರಕ್ಕೆ ಸಲ್ಲಿಸುವುದು.

5. 2024 ಹಾಗೂ 2025ನೇ ಸಾಲಿನ ಎರಡು ವರ್ಷಗಳಿಗೆ ಪ್ರತಿ ವರ್ಷಕ್ಕೆ ತಲಾ ಇಬ್ಬರಂತೆ ಒಟ್ಟು 4 ಜನ ಅರ್ಹ ಅಧಿಕಾರಿ / ನೌಕರರನ್ನು ಸರ್ವೋತ್ತಮ ಸೇವಾ ಪ್ರಶಸ್ತಿಗೆ ಪರಿಗಣಿಸಲು ಜಿಲ್ಲೆಯಿಂದ ರಾಜ್ಯಮಟ್ಟಕ್ಕೆ ನಾಮ ನಿರ್ದೇಶನಗಳನ್ನು ಸೂಕ್ತ ಶಿಫಾರಸ್ಸಿನೊಂದಿಗೆ ದಿನಾಂಕ: 16-04-2025 ರೊಳಗೆ ಸರ್ಕಾರಕ್ಕೆ ವಿಳಂಬವಿಲ್ಲದೇ ನಿಗದಿತ ನಮೂನೆಯಲ್ಲಿ ಕಡ್ಡಾಯವಾಗಿ ಸಲ್ಲಿಸುವುದು.


'ಕೇಂದ್ರ ಸರ್ಕಾರಿ ನೌಕರ'ರಿಗೆ ಶೇ.2ರಷ್ಟು 'ತುಟ್ಟಿಭತ್ಯೆ' ಹೆಚ್ಚಿಸಿ ಅಧಿಕೃತ ಆದೇಶ | Central govt employees DA hike

'ಕೇಂದ್ರ ಸರ್ಕಾರಿ ನೌಕರ'ರಿಗೆ ಶೇ.2ರಷ್ಟು 'ತುಟ್ಟಿಭತ್ಯೆ' ಹೆಚ್ಚಿಸಿ ಅಧಿಕೃತ ಆದೇಶ | Central govt employees DA hike

Job Alert: ಆದಾಯ ತೆರಿಗೆ ಇಲಾಖೆಯಲ್ಲಿ ಉದ್ಯೋಗ, ₹81000 ವೇತನ

ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಯುವಕ, ಯುವತಿಯರಿಗೆ ಇದೊಂದು ಉತ್ತಮ ಅವಕಾಶವಾಗಿದೆ.

ರಾಜ್ಯ ಆದಾಯ ತೆರಿಗೆ ಇಲಾಖೆ ಸ್ಟೆನೋಗ್ರಾಫರ್ ಗ್ರೇಡ್ II, ತೆರಿಗೆ ಸಹಾಯಕ, ಮತ್ತು ಮಲ್ಟಿ-ಟಾಸ್ಕಿಂಗ್ ಸ್ಟಾಫ್ (ಎಂಟಿಎಸ್) ಹುದ್ದೆಗಳ ಭರ್ತಿಗೆ ಪ್ರಕ್ರಿಯೆ ಆರಂಭಿಸಿದೆ. ಒಟ್ಟು ವಿವಿಧ 56 ಹುದ್ದೆಗಳಿಗಾಗಿ ನೇಮಕಾತಿ ನಡೆಸಲಾಗುತ್ತಿದೆ. ಆಸಕ್ತರು ಆನಲೈನ್‌ ಮೂಲಕ (incometax.gov.in) ಏಪ್ರಿಲ್ 5ರೊಳಗೆ ಅರ್ಜಿ ಸಲ್ಲಿಸಬೇಕಿದೆ. ನಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದು ಎಂದಿಲ್ಲ ತಿಳಿಸಲಾಗಿದೆ.

ನೇಮಕಾತಿ ಪೂರ್ಣ ವಿವರ

ನೇಮಕಾತಿ ಸಂಸ್ಥೆ: ಆದಾಯ ತೆರಿಗೆ ಇಲಾಖೆ

ಗರಿಷ್ಠ ವಯೋಮಿತಿ: 27 ವರ್ಷ

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್

ಅರ್ಜಿ ಸಲ್ಲಿಕೆ ಅಂತಿಮ ದಿನ: ಏಪ್ರಿಲ್ 05

ಸ್ಟೆನೋಗ್ರಾಫರ್ ಗ್ರೇಡ್ II: 2

ತೆರಿಗೆ ಸಹಾಯಕ: 28

ಮಲ್ಟಿ-ಟಾಸ್ಕಿಂಗ್ ಸ್ಟಾಫ್: 26 ಹುದ್ದೆ

ಒಟ್ಟು ಹುದ್ದೆಗಳು: 56

ವಿದ್ಯಾರ್ಹತೆ ಏನಿರಬೇಕು?

ಅರ್ಜಿ ಸಲ್ಲಿಸಬಯಸುವ ಯಾವುದೇ ಅಭ್ಯರ್ಥಿಗಳು ಕನಿಷ್ಠ ಪದವಿ ಪಡೆದಿರಬೇಕು. ಅವರು ಕನಿಷ್ಠ 18 ರಿಂದ ಗರಿಷ್ಠ 27 ವರ್ಷದವರಾಗಿರಬೇಕು. ಎಸ್‌ಎಸ್‌ಎಲ್‌ಸಿ ಉತ್ತೀರ್ಣ ಆದವರಿಗೂ ಇಲ್ಲಿ ಪೋಸ್ಟ್ ಖಾಲಿ ಇದೆ. ಆ ಅಭ್ಯರ್ಥಿಗೆ ಗರಿಷ್ಠ 25 ವರ್ಷ ವಯಸ್ಸಿನ ಮಿತಿ ನಿಗದಿಪಡಿಸಲಾಗಿದೆ. ಎಲ್ಲ ಹುದ್ದೆಗಳ ಆಯ್ಕೆಗೂ ಪ್ರತ್ಯೇಕ ವಿದ್ಯಾರ್ಹತೆ ಪರಿಗಣಿಸಲಾಗುತ್ತದೆ.

ಮಾಸಿಕ ವೇತನ ಎಷ್ಟು?

ಅಭ್ಯರ್ಥಿಗಳು ಸರ್ಕಾರಿ ಮಟ್ಟದಲ್ಲಿ ಉದ್ಯೋಗ ಹೊಂದಲು ಬಯಸಿದಲ್ಲಿ ಕೂಡಲೇ ಅರ್ಜಿ ಸಲ್ಲಿಸಬೇಕು. ಆಯ್ಕೆಯಾದವರಿಗೆ ಗರಿಷ್ಠ 81,100 ರೂಪಾಯಿ ಮಾಸಿಕ ವೇತನ ಇರಲಿದೆ. ಸ್ಟೆನೋಗ್ರಾಫರ್ ಗ್ರೇಡ್ II ಹಾಗೂ ತೆರಿಗೆ ಸಹಾಯಕ ಅಭ್ಯರ್ಥಿಗಳಿಗೆ ಮಾಸಿಕ 25,500 ರಿಂದ 81,100 ರೂಪಾಯಿ. ಮಲ್ಟಿ-ಟಾಸ್ಕಿಂಗ್ ಸ್ಟಾಫ್ ಹುದ್ದೆಗೆ ಆಯ್ಕೆ ಆದರೆ ಮಾಸಿಕ 18,000 ರಿಂದ ರೂ 56,900 ರೂಪಾಯಿ ವಿಧಿಸಲಾಗಿದೆ.

ಅರ್ಜಿ ಸಲ್ಲಿಕೆ ಹೇಗೆ?

ಅರ್ಹ ಅಭ್ಯರ್ಥಿಗಳು ಕೂಡಲೇ ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್ incometax.gov.in ಗೆ ಭೇಟಿ ನೀಡಬೇಕು. ಅಲ್ಲಿನ ಅರ್ಜಿ ವಿಭಾಗಕ್ಕೆ ತೆರಳಿ ಅರ್ಜಿ ಡೌಲ್‌ಲೋಡ್ ಮಡಿಕೊಂಡು ಏಪ್ರಿಲ್ 5ರ ರಾತ್ರಿ 12ರ ಒಳಗೆ ಸೂಕ್ತ ದಾಖಲೆಗಳ ಸಮೇತ ಅರ್ಜಿ ಸಲ್ಲಿಸುವಂತೆ ಕೋರಲಾಗಿದೆ. ಲಿಖಿತ ಪರೀಕ್ಷೆ ಇಲ್ಲದೇ ಆಯ್ಕೆ ಮಾಡಲಾಗುತ್ತದೆ.

'ರಾಜ್ಯ ಸರ್ಕಾರಿ ನೌಕರ'ರಿಗೆ 'ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ' ಕುರಿತು ಮಹತ್ವದ ಮಾಹಿತಿ

ಈ ಕುರಿತಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ವಿಶೇಷ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಅವರ ಅವಲಂಬಿತ ಕುಟುಂಬದ ಸದಸ್ಯರಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸೆಗಳನ್ನು ಒದಗಿಸಲು ರಾಜ್ಯ ಸರ್ಕಾರದಿಂದ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು (KASS) ಅನುಷ್ಠಾನಗೊಳಿಸಲು ಮೇಲೆ ಕ್ರ.ಸಂ.(1) ರಿಂದ (3) ರಲ್ಲಿ ಓದಲಾದ ಸರ್ಕಾರದ ಆದೇಶಗಳಲ್ಲಿ ಕೆಲವು ಕಾರ್ಯನೀತಿ ಸೂಚನೆಗಳನ್ನು ನೀಡಲಾಗಿದೆ ಎಂದಿದ್ದಾರೆ.

ಮುಂದುವರೆದು, ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು (KASS) ಸಮರ್ಪಕವಾಗಿ ಅನುಷ್ಠಾನಗೊಳಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆರ್ಥಿಕ ಇಲಾಖೆ ಮತ್ತು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (SAST) ನೊಂದಿಗೆ ಚರ್ಚಿಸಿ, ಈ ಹಿಂದೆ ರೂಪಿಸಿರುವ ಯೋಜನೆಯಲ್ಲಿ ಕೆಲವು ಸೂಚನೆಗಳನ್ನು ಮಾರ್ಪಡಿಸುವುದು ಸೂಕ್ತವೆಂದು ತೀರ್ಮಾನಿಸಲಾಗಿದೆ. ಯೋಜನೆಗೆ ಸಂಬಂಧಿಸಿದಂತೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೇಲೆ ಓದಲಾದ (4) ರ ಪತ್ರಗಳಲ್ಲಿ ಸರ್ಕಾರಕ್ಕೆ ಪರಿಷ್ಕೃತ ಒಡಂಬಡಿಕೆಯನ್ನು ಸಿದ್ಧಪಡಿಸಿ ಸಲ್ಲಿಸಿರುತ್ತದೆ ಮೇಲೆ ಕ್ರ.ಸಂ. (5) ರಲ್ಲಿ ಓದಲಾದ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ದಿನಾಂಕ: 04.03.2025 ಮತ್ತು ದಿನಾಂಕ: 13.01.2025 ರಂದು ನಡೆದ ಸಭೆಗಳಲ್ಲಿ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೈಗೊಳ್ಳಬೇಕಾದ ಕೆಲವು ಅಂಶಗಳ ಬಗ್ಗೆ ಸೂಚನೆಗಳನ್ನು ನೀಡಲಾಗಿದೆ ಹಾಗೂ ಕೆಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದಿದ್ದಾರೆ.

ದಿನಾಂಕ: 13.01.2025 ರಂದು ನಡೆದ ಸಭೆಯ ತೀರ್ಮಾನದಂತೆ ಮೇಲೆ ಕ್ರ.ಸಂ. (6) ರಲ್ಲಿ ಓದಲಾದ, ಪ್ರಧಾನ ಕಾರ್ಯದರ್ಶಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರಿಂದ (ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನ ಏಕಕಡತದಲ್ಲಿ) ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯ ಪ್ಯಾಕೇಜ್ ದರಗಳು, ನಿಗದಿಪಡಿಸಿರದ ಚಿಕಿತ್ಸಾ ವಿಧಾನಗಳು (Unspecified procedures), ಇಂಪ್ಲಾಂಟ್ ದರಗಳು, ಆಸ್ಪತ್ರೆಗಳ ನೋಂದಾವಣೆ, ಒಡಂಬಡಿಕೆಯ ಷರತ್ತುಗಳು ಹಾಗೂ ಇತರೆ ಕೆಲವು ಅಂಶಗಳಿಗೆ ಸಂಬಂಧಿಸಿದಂತೆ ಪರಿಷ್ಕೃತ ಪುಸ್ತಾವನೆಯು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಲ್ಲಿ ಸ್ವೀಕೃತವಾಗಿದೆ.

ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನಿಂದ ಸ್ವೀಕೃತವಾದ ಪರಿಷ್ಕೃತ ಪ್ರಸ್ತಾವನೆಯಲ್ಲಿ ಈ ಕೆಳಕಂಡ ಪ್ರಮುಖ ಅಂಶಗಳನ್ನು ಪ್ರಸ್ತಾಪಿಸಲಾಗಿದೆ:-
1) ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯು ಪ್ಯಾಕೇಜ್ ದರಗಳನ್ನು ಆಧರಿಸಿದೆ. KASS ಯೋಜನೆಯಡಿ ఒట్టు 2000 ವೈದ್ಯಕೀಯ ಕಾರ್ಯವಿಧಾನಗಳನ್ನು ಅಳವಡಿಸಿಕೊಳ್ಳಲು ಪ್ರಸ್ತಾಪಿಸಲಾಗಿದೆ. ಈ ಕಾರ್ಯವಿಧಾನಗಳನ್ನು CGHS, HBP 2022 ಮತ್ತು ಪ್ರಸ್ತುತ AB-ArK ಪ್ಯಾಕೇಜ್‌ಗಳಲ್ಲಿ ಲಭ್ಯವಿರುವ ಪ್ಯಾಕೇಜ್‌ಗಳಿಂದ ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ.

KASS PACKAGE MASTER: ಯೋಜನೆಯ ಆರಂಭದ ಹಂತದಲ್ಲಿ ಈ ಕೆಳಕಂಡಂತೆ CGHS, AB-ARK, National Health Authority (NHA) 20 HBP 2022 da ಒಳಗೊಂಡ ಸಮ್ಮಿಶ್ರ ವೈದ್ಯಕೀಯ ಚಿಕಿತ್ಸಾ ವಿಧಾನಗಳು ಹಾಗೂ ದರಗಳನ್ನು ಒಳಗೊಂಡಿರುತ್ತವೆ ಎಂದು ತಿಳಿಸಿದ್ದಾರೆ.

ಮನೆ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ಏಪ್ರಿಲ್.27ರಂದು 42,345 ಮನೆ ಹಂಚಿಕೆ

BIG NEWS: ಸಾಗರದಲ್ಲಿ ಬಹುಕೋಟಿ 'ಸೇಲ್ಸ್ ಸರ್ಟಿಫಿಕೇಟ್' ಹಗರಣ: ತನಿಖೆಗೆ ಸಚಿವರಿಗೆ 'ಶಾಸಕ ಗೋಪಾಕೃಷ್ಣ ಬೇಳೂರು' ಪತ್ರ

BREAKING: 2025-26ನೇ ಸಾಲಿನ 'ಶೈಕ್ಷಣಿಕ ವೇಳಾಪಟ್ಟಿ' ಪ್ರಕಟ: ಮೇ.29ರಿಂದ ರಾಜ್ಯದಲ್ಲಿ ಶಾಲೆಗಳು ಪುನರಾರಂಭ

ಸೋಮವಾರ, ಮಾರ್ಚ್ 31, 2025

ಏಕೀಕೃತ ಪಿಂಚಣಿ ಯೋಜನೆ ಜಾರಿ ಬಗ್ಗೆ ಕೇಂದ್ರ ಸರ್ಕಾರಿ ನೌಕರರಿಗೆ ಪ್ರಮುಖ ಮಾಹಿತಿ

ಈ ನಿಯಮಗಳು ಕೇಂದ್ರ ಸರ್ಕಾರಿ ನೌಕರರ ಮೂರು ಗುಂಪುಗಳಿಗೆ ಸಂಬಂಧಿಸಿವೆ. ಮೊದಲ ವರ್ಗವು ಏಪ್ರಿಲ್ 1, 2025 ರಂದು ಸೇವೆಯಲ್ಲಿರುವ ಅಸ್ತಿತ್ವದಲ್ಲಿರುವ ಕೇಂದ್ರ ಸರ್ಕಾರಿ ಉದ್ಯೋಗಿಯನ್ನು ಒಳಗೊಂಡಿದೆ, ಅವರು ಎನ್‌ಪಿಎಸ್ ವ್ಯಾಪ್ತಿಗೆ ಒಳಪಡುತ್ತಾರೆ.

ಆದರೆ, ಎರಡನೇ ವರ್ಗವು ಏಪ್ರಿಲ್ 1, 2025ರಂದು ಅಥವಾ ನಂತರ ಸೇವೆಗೆ ಸೇರುವ ಕೇಂದ್ರ ಸರ್ಕಾರಿ ಸೇವೆಗಳಲ್ಲಿ ಹೊಸದಾಗಿ ನೇಮಕಗೊಂಡವರನ್ನು ಒಳಗೊಂಡಿದೆ. ಮೂರನೇ ವರ್ಗವು ಎನ್‌ಪಿಎಸ್‌ನ ಭಾಗವಾಗಿದ್ದ ಮತ್ತು ಈ ತಿಂಗಳ 31ರಂದು ಅಥವಾ ಅದಕ್ಕೂ ಮೊದಲು ನಿವೃತ್ತರಾದ ಕೇಂದ್ರ ಸರ್ಕಾರಿ ನೌಕರರನ್ನು ಒಳಗೊಂಡಿದೆ.

ನಿಯಮಿತ ನಿವೃತ್ತಿ ಅಥವಾ ಸ್ವಯಂಪ್ರೇರಿತ ನಿವೃತ್ತಿಯ ಮೂಲಕ ಯುಪಿಎಸ್‌ಗೆ ಅರ್ಹರಾಗಿರುತ್ತಾರೆ. ಸುಮಾರು 23 ಲಕ್ಷ ಕೇಂದ್ರ ಸರ್ಕಾರಿ ನೌಕರರು ಈ ಯೋಜನೆಯ ಪ್ರಯೋಜನ ಪಡೆಯುತ್ತಾರೆ ಎಂದು ಹೇಳಲಾಗಿದೆ. ಜನವರಿ 1, 2004ರಂದು ಅಥವಾ ನಂತರ ಸೇವೆಗೆ ಸೇರಿದ ಸರ್ಕಾರಿ ನೌಕರರು ಹಾಗೂ ಭವಿಷ್ಯದಲ್ಲಿ ಸೇರಲಿರುವವರಿಗೆ ಯುಪಿಎಸ್ ಮುಕ್ತವಾಗಿದೆ. NPSನಿಂದ UPSಗೆ ಬದಲಾಯಿಸುವ ಆಯ್ಕೆಯೊಂದಿಗೆ.

ಕೇಂದ್ರ ಸರ್ಕಾರಿ ನೌಕರರಿಗೆ ಹೊಸ ಪಿಂಚಣಿ ಚೌಕಟ್ಟಿಗೆ ಸೇರಲು, ಅರ್ಹ ಉದ್ಯೋಗಿಗಳು ಏಪ್ರಿಲ್ 1ರಿಂದ ಪ್ರೋಟೀನ್ CRA ಪೋರ್ಟಲ್ ಮೂಲಕ ತಮ್ಮ ದಾಖಲಾತಿ ಮತ್ತು ಕ್ಲೇಮ್ ಫಾರ್ಮ್‌ಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸಬಹುದು. ಈ ಯೋಜನೆಯು 25 ವರ್ಷಗಳ ಕನಿಷ್ಠ ಅರ್ಹತಾ ಸೇವೆಗಾಗಿ ನಿವೃತ್ತಿಗೆ ಮೊದಲು ಕಳೆದ ಹನ್ನೆರಡು ತಿಂಗಳುಗಳಲ್ಲಿ ಪಡೆದ ಸರಾಸರಿ ಮೂಲ ವೇತನದ 50 ಪ್ರತಿಶತದಷ್ಟು ಪಿಂಚಣಿಯನ್ನು ಖಚಿತಪಡಿಸುತ್ತದೆ.

ಉದ್ಯೋಗಿ ನಿಧನರಾದ ಸಂದರ್ಭದಲ್ಲಿ ಕುಟುಂಬವು ಪಿಂಚಣಿಯ 60 ಪ್ರತಿಶತವನ್ನು ಪಡೆಯುತ್ತದೆ. ಯುಪಿಎಸ್ ಯೋಜನೆಯಡಿಯಲ್ಲಿ, ಕನಿಷ್ಠ 10 ವರ್ಷಗಳ ಸೇವೆಯ ನಂತರ ತಿಂಗಳಿಗೆ ಕನಿಷ್ಠ 10,000 ರೂಪಾಯಿಗಳ ಪಿಂಚಣಿಯನ್ನು ಸಹ ಖಾತರಿಪಡಿಸಲಾಗುತ್ತದೆ.

'ರಾಜ್ಯ ಸರ್ಕಾರಿ' ನೌಕರರೇ ಗಮನಿಸಿ : ಗಳಿಕೆ ರಜೆ ಸೇರಿ ವಿವಿಧ ರಜೆ & ನಿಯಮಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

ಸತತವಾಗಿ 4 ತಿಂಗಳಿಗಿಂತಲೂ ಹೆಚ್ಚಾಗಿ ಅನಧಿಕೃತ ಗೈರು ಹಾಜರಾದಲ್ಲಿ ಅಂತಹ ಸರ್ಕಾರಿ ನೌಕರನನ್ನು ವಿಚಾರಣೆಗೆ ಒಳಪಡಿಸಿ (ಸಿಸಿಎ) ಪ್ರಕಾರ ಸೇವೆಯಿಂದ ವಜಾ ಮಾಡಬಹುದು.

ಅನುಮತಿ ಇಲ್ಲದೆ ಗೈರು ಹಾಜರಾದಲ್ಲಿ 'ಅನಧಿಕೃತ ಗೈರು ಹಾಜರಿ' ಎಂದು ಪರಿಗಣಿಸಿ ಸಂಬಳವನ್ನು ಕಟಾವು ಮಾಡಲಾಗುವುದು.106ಬಿ ಮುಷ್ಕರದಲ್ಲಿ ಭಾಗವಹಿಸಿದರೆ - ಹಿಂದಿನ ಸೇವಾ ಸೌಲಭ್ಯಗಳು
ದೊರೆಯುವುದಿಲ್ಲ.

ಏಕೀಕೃತ ಪಿಂಚಣಿ ಯೋಜನೆ ಜಾರಿ; ಯಾರು ಅರ್ಹರು, ಎಷ್ಟು ಪಿಂಚಣಿ ಬರಲಿದೆ? ಇಲ್ಲಿದೆ ಲೆಕ್ಕಾಚಾರ!

ಏಕೀಕೃತ ಪಿಂಚಣಿ ಯೋಜನೆ ಜಾರಿ; ಯಾರು ಅರ್ಹರು, ಎಷ್ಟು ಪಿಂಚಣಿ ಬರಲಿದೆ? ಇಲ್ಲಿದೆ ಲೆಕ್ಕಾಚಾರ!


ನಮ್ಮ ದೇಶದಲ್ಲಿ ನಾಳೆ ಅಂದರೆ (ಏ.1 2025ರಿಂದ) ಏಕೀಕೃತ ಪಿಂಚಣಿ ಯೋಜನೆ (Unified Pension Scheme-UPS) ಜಾರಿಗೆ ಬರಲಿದೆ. ಇದನ್ನು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ಇದನ್ನು ಸೂಚಿಸಲು ಅಧಿಸೂಚನೆ ಹೊರಡಿಸಿದೆ.


ಹೊಸ ಯುಪಿಎಸ್ ಆಯ್ಕೆ ಮಾಡಿಕೊಳ್ಳಲು ಎಲ್ಲಾ ಕೇಂದ್ರ ನೌಕರರಿಗೆ ಏಪ್ರಿಲ್ 1 ರಿಂದ ಯೋಜನೆ ತೆರೆದಿರುತ್ತದೆ. ಈ ಯೋಜನೆಯನ್ನು ವಿಸ್ತರಿಸಿ ರಾಜ್ಯ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವ ನೌಕರರನ್ನು ಸಹ ಇದರಲ್ಲಿ ಸೇರಿಸಿಕೊಳ್ಳಬಹುದು. ಇದಕ್ಕೆ ಆಯಾ ರಾಜ್ಯ ಸರ್ಕಾರಗಳ ತೀರ್ಮಾನಕ್ಕೆ ಬಿಡಲಾಗಿದೆ.

ಯುಪಿಎಸ್‌ ಉದ್ದೇಶವೇನು?
ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವ ನೌಕರರಿಗೆ ನಿರ್ದಿಷ್ಟ ಪಿಂಚಣಿ ಭದ್ರತೆಯನ್ನು ನೀಡುವುದು ಮೋದಿ ಸರ್ಕಾರ ಕಳೆದ ವರ್ಷ ಘೋಷಿಸಿದ ಯುಪಿಎಸ್‌ನ ಉದ್ದೇಶವಾಗಿದೆ. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಅಡಿಯಲ್ಲಿ ಈ ಯೋಜನೆ ಮುಖ್ಯವಾಗಿ ಕೇಂದ್ರ ಸರ್ಕಾರಿ ನೌಕರರಿಗೆ ಆಗಿದೆ. ಸರ್ಕಾರಿ ನೌಕರಿಯಲ್ಲಿರುವ ಮತ್ತು ಈಗಾಗಲೇ ಎನ್‌ಪಿಎಸ್‌ನಲ್ಲಿ ನೋಂದಾಯಿಸಿಕೊಂಡಿರುವವರಿಗೆ ಯುಪಿಎಸ್ ಆಯ್ಕೆ ಮಾಡುವ ಅವಕಾಶ ಸಿಗಲಿದೆ ಎಂಬುದನ್ನು ನೆನಪಿಡಿ.

UPS ನಲ್ಲಿ 50% ಪಿಂಚಣಿ ಖಾತರಿ ಯಾರಿಗೆ?
ಯುಪಿಎಸ್ ಅಡಿಯಲ್ಲಿ, ಕನಿಷ್ಠ 25 ವರ್ಷಗಳ ಕಾಲ ಕೆಲಸ ಮಾಡಿದ ವ್ಯಕ್ತಿಗೆ ನಿವೃತ್ತಿಗೆ ಮುಂಚೆ ಕೊನೆಯ 12 ತಿಂಗಳ ಸರಾಸರಿ ಮೂಲ ವೇತನದ 50% ಗೆ ಸಮಾನವಾದ ಪಿಂಚಣಿ ಸಿಗುತ್ತದೆ. ಯಾರಾದರೂ 10 ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದ್ದರೆ, ಅವರಿಗೆ ತಿಂಗಳಿಗೆ ಕನಿಷ್ಠ 10,000 ರೂಪಾಯಿ ಪಿಂಚಣಿ ಸಿಗುತ್ತದೆ.

ಪಿಂಚಣಿ ಲೆಕ್ಕಾಚಾರದ ಸೂತ್ರವೇನು?
ಪಿಂಚಣಿ=50% (ಕಳೆದ 12 ತಿಂಗಳ ಮೂಲ ವೇತನದ ಒಟ್ಟು/12)
ಸೇವೆ 25 ವರ್ಷ ಅಥವಾ ಅದಕ್ಕಿಂತ ಹೆಚ್ಚಿದ್ದರೆ ಪೂರ್ಣ ಪಿಂಚಣಿ ಸಿಗುತ್ತದೆ.
ಸೇವೆ 25 ವರ್ಷಕ್ಕಿಂತ ಕಡಿಮೆಯಿದ್ದರೆ, ಪಿಂಚಣಿ ಅದೇ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ.

ಏಕೀಕೃತ ಪಿಂಚಣಿ ಯೋಜನೆ ಲಾಭಾನಾ?ನಷ್ಟನಾ? ಆರ್ಥಿಕ ತಜ್ಞರು ಹೇಳೋದೇನು?

ಉದಾಹರಣೆ-
ನಿಮ್ಮ 25 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಸೇವೆಯಲ್ಲಿ ಸರಾಸರಿ ಮೂಲ ವೇತನ 1,00,000 ರೂಪಾಯಿ ಆಗಿದ್ದರೆ, ಪಿಂಚಣಿ ತಿಂಗಳಿಗೆ 50,000 ರೂಪಾಯಿ ಆಗುತ್ತದೆ.
ನಿಮ್ಮ 20 ವರ್ಷಗಳ ಸೇವೆಯಲ್ಲಿ ಸರಾಸರಿ ವೇತನ 1,00,000 ರೂಪಾಯಿ ಆಗಿದ್ದರೆ, ಪಿಂಚಣಿ ತಿಂಗಳಿಗೆ 40,000 ರೂಪಾಯಿ ಆಗುತ್ತದೆ.
ನಿಮ್ಮ ಮೂಲ ವೇತನ 15000 ರೂಪಾಯಿ ಆಗಿದ್ದರೆ, ಪಿಂಚಣಿ ತಿಂಗಳಿಗೆ 10,000 ರೂಪಾಯಿ ಆಗುತ್ತದೆ. ಮೊತ್ತವು ಸೂತ್ರಕ್ಕಿಂತ ಕಡಿಮೆಯಿದ್ದರೂ ಸಹ.

UPS ಗೆ ಯಾರು ಅರ್ಹರು?
1- ಏಪ್ರಿಲ್ 1, 2025 ರಂದು ಸೇವೆಯಲ್ಲಿರುವ ಮತ್ತು ಈಗಾಗಲೇ ಎನ್‌ಪಿಎಸ್ ಅಡಿಯಲ್ಲಿ ಬರುವ ಕೇಂದ್ರ ಸರ್ಕಾರಿ ನೌಕರರು.
2- ಇದರ ಜೊತೆಗೆ ಏಪ್ರಿಲ್ 1, 2025 ರಂದು ಅಥವಾ ನಂತರ ಕೇಂದ್ರ ಸರ್ಕಾರದ ಸೇವೆಯಲ್ಲಿ ಬರುವ ಹೊಸ ನೌಕರರು ಸಹ ಇದಕ್ಕೆ ಅರ್ಹರಾಗಿರುತ್ತಾರೆ, ಆದರೆ ಅವರು ಸೇರುವ 30 ದಿನಗಳ ಒಳಗೆ UPS ಅನ್ನು ಆಯ್ಕೆ ಮಾಡಬೇಕು.
3- ಎನ್‌ಪಿಎಸ್ ಅಡಿಯಲ್ಲಿ ಇದ್ದು 31 ಮಾರ್ಚ್ 2025 ರಂದು ಅಥವಾ ಅದಕ್ಕಿಂತ ಮೊದಲು ನಿವೃತ್ತರಾದ ನೌಕರರು
4- ಇದರ ಜೊತೆಗೆ ಎನ್‌ಪಿಎಸ್ ಅಡಿಯಲ್ಲಿ ನಿವೃತ್ತರಾದ ನೌಕರನು ಮರಣ ಹೊಂದಿದರೆ ಮತ್ತು ಅವರು ಯುಪಿಎಸ್ ಆಯ್ಕೆಯನ್ನು ಆರಿಸದಿದ್ದರೆ, ಕಾನೂನು ಪ್ರಕಾರ ಅವರ ಪತ್ನಿ ಅಥವಾ ಪತಿ ಈ ಯೋಜನೆಯಲ್ಲಿ ಸೇರಲು ಅರ್ಹರಾಗಿರುತ್ತಾರೆ.

ಎನ್‌ಪಿಎಸ್‌ ವಿರೋಧಕ್ಕೆ ಮಣಿದ ಮೋದಿ ಸರ್ಕಾರ: ಹೊಸ ಯೋಜನೆಯಲ್ಲಿ 50% ಪಿಂಚಣಿ ಖಚಿತ..!

ಒಮ್ಮೆ ಆಯ್ಕೆ ಮಾಡಿದ ನಂತರ ಬದಲಾಯಿಸಲು ಸಾಧ್ಯವಿಲ್ಲ: UPS ಗೆ ಅರ್ಹರಾದ ಈಗಿನ ಮತ್ತು ಮಾಜಿ ನೌಕರರು ಏಪ್ರಿಲ್ 1, 2025 ರಿಂದ ಮೂರು ತಿಂಗಳ ಒಳಗೆ ಈ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ. ಒಮ್ಮೆ ಯುಪಿಎಸ್ ಆಯ್ಕೆ ಮಾಡಿದ ನಂತರ ಅದು ಅಂತಿಮವಾಗುತ್ತದೆ ಮತ್ತು ಅದರಲ್ಲಿ ಬದಲಾವಣೆ ಮಾಡಲು ಸಾಧ್ಯವಿಲ್ಲ.

ಶನಿವಾರ, ಮಾರ್ಚ್ 29, 2025

Tax changes: ಏಪ್ರಿಲ್‌ 1ರಿಂದ ತೆರಿಗೆ ಬದಲಾವಣೆ ಯಾವುದು ದುಬಾರಿ-ಅಗ್ಗ? ಕಂಪ್ಲೀಟ್‌ ಡಿಟೇಲ್ಸ್‌

Tax changes: ಏಪ್ರಿಲ್‌ 1ರಿಂದ ತೆರಿಗೆ ಬದಲಾವಣೆ ಯಾವುದು ದುಬಾರಿ-ಅಗ್ಗ? ಕಂಪ್ಲೀಟ್‌ ಡಿಟೇಲ್ಸ್‌


ಏಪ್ರಿಲ್‌ 1ರಿಂದ ಹೊಸ ಆರ್ಥಿಕ ವರ್ಷ ಅಥವಾ ಫೈನಾನ್ಷಿಯಲ್‌ ಇಯರ್‌ ಆಗಿರುವ 2025-26 ಆರಂಭವಾಗುತ್ತದೆ. ಏಪ್ರಿಲ್‌ 1ಕ್ಕೆ ಆರಂಭವಾಗುವ ಆರ್ಥಿಕ ವರ್ಷವು ಮಾರ್ಚ್‌ 31ಕ್ಕೆ ಮುಕ್ತಾಯವಾಗುತ್ತದೆ. ತೆರಿಗೆದಾರರು, ಬಿಸಿನೆಸ್‌ ಮಾಡುವವರು, ಸರಕಾರಕ್ಕೆ ಇದು ಮಹತ್ವದ ದಿನವಾಗಿರುತ್ತದೆ.

ಹಣಕಾಸು ಲೆಕ್ಕಾಚಾರಗಳು, ತೆರಿಗೆಗೆ ಸಂಬಂಧಿಸಿ ಮಹತ್ವದ ಬದಲಾವಣೆಗಳು ಏಪ್ರಿಲ್‌ನಿಂದ ಅನ್ವಯವಾಗುತ್ತವೆ(Tax changes). ಕೇಂದ್ರ ಸರಕಾರದ ಬಜೆಟ್‌ ಕೂಡ ಈದೇ ದಿನದಿಂದ ಜಾರಿಯಾಗುತ್ತದೆ. ಹಾಗಾದ್ರೆ ಯಾವೆಲ್ಲ ಹೊಸ ಬದಲಾವಣೆಗಳು ಬರುತ್ತಿವೆ ಎಂಬುದನ್ನು ತಿಳಿಯೋಣ.

ಮೊದಲನೆಯದಾಗಿ ನಿಶ್ಚಿತ ಠೇವಣಿ ಅಥವಾ ಫಿಕ್ಸೆಡ್‌ ಡೆಪಾಸಿಟ್‌ಗೆ ಸಿಗುವ ಬಡ್ಡಿ ಆದಾಯದ ಮೇಲೆ ಟಿಡಿಎಸ್ ತೆರಿಗೆ ಕಡಿತಕ್ಕೆ ಇರುವ ಮಿತಿಯಲ್ಲಿ ಬದಲಾವಣೆಯಾಗಲಿದೆ. ಇದರಿಂದಾಗಿ ಮುಖ್ಯವಾಗಿ ಹಿರಿಯ ನಾಗರಿಕರಿಗೆ ಲಾಭವಾಲಿದೆ. ಹಿರಿಯ ನಾಗರಿಕರಿಗೆ ಫಿಕ್ಸೆಡ್‌ ಡೆಪಾಸಿಟ್‌, ಆರ್‌ಡಿ ಮತ್ತು ಅದೇ ರೀತಿಯ ಹೂಡಿಕೆಯ ಯೋಜನೆಗಳಲ್ಲಿ ಸಿಗುವ ಆದಾಯದಲ್ಲಿ 1 ಲಕ್ಷ ರುಪಾಯಿ ತನಕ ಟಿಡಿಎಸ್‌ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ. ಒಂದು ಲಕ್ಷ ದಾಟಿದ ಬಳಿಕ ತೆರಿಗೆ ಅನ್ವಯವಾಗಲಿದೆ. ಷೇರುದಾರರಿಗೆ 10,000 ರುಪಾಯಿ ತನಕದ ಡಿವಿಡೆಂಡ್‌ಗೆ ಟಿಡಿಎಸ್‌ ಇರುವುದಿಲ್ಲ. ಮ್ಯೂಚುವಲ್‌ ಫಂಡ್‌ ಯುನಿಟ್‌ಗಳ ಆದಾಯಕ್ಕೆ 10,000 ರುಪಾಯಿ ತನಕ ಟಿಡಿಎಸ್‌ನಿಂದ ವಿನಾಯಿತಿ ನೀಡಲಾಗಿದೆ. ವಿಮೆ ಕಮಿಶನ್‌ನಲ್ಲಿ 20,000 ರುಪಾಯಿ ತನಕ ಟಿಡಿಎಸ್‌ ಇರುವುದಿಲ್ಲ. 20,000 ರುಪಾಯಿ ತನಕ ಬ್ರೋಕರೇಜ್‌ ಶುಲ್ಕದ ಮೇಲೆ ಟಿಡಿಎಸ್‌ ಇರುವುದಿಲ್ಲ.

ಏಪ್ರಿಲ್‌ 1ರಿಂದ 10 ಲಕ್ಷ ರುಪಾಯಿ ತನಕ ವಿದೇಶಿ ಮೂಲದ ಹಣ ಅಥವಾ ರೆಮಿಟೆನ್ಸ್‌ ಮೇಲೆ ಟಿಸಿಎಸ್‌ ತೆರಿಗೆ ಇರುವುದಿಲ್ಲ. 2025ರ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಈ ಘೋಷಣೆಯನ್ನು ಮಾಡಿದ್ದರು. ಇಲ್ಲಿಯತನಕ 50,000 ರುಪಾಯಿ ತನಕ ಬಡ್ಡಿ ಆದಾಯ ಮಿತಿ ಇತ್ತು. ಇತರ ಹೂಡಿಕೆದಾರರಿಗೆ ಬಡ್ಡಿ ಆದಾಯ ಮಿತಿಯನ್ನು 40,000 ರುಪಾಯಿಗಳಿಂದ 50,000 ರುಪಾಯಿಗೆ ಏರಿಸಲಾಗಿದೆ. ಬಾಡಿಗೆ ಆದಾಯದ ಮೇಲಿನ ಟಿಡಿಎಸ್‌ ಕಡಿತಕ್ಕೆ ಆದಾಯದ ಮಿತಿಯನ್ನೂ ಈಗಿನ ವಾರ್ಷಿಕ 2.4 ಲಕ್ಷ ರುಪಾಯಿಗಳಿಂದ 6 ಲಕ್ಷ ರುಪಾಯಿಗೆ ಏರಿಸಲಾಗಿದೆ.

ಕಳೆದ ಫೆಬ್ರವರಿ 1ರಂದು ಮಂಡನೆಯಾದ ಕೇಂದ್ರ ಬಜೆಟ್‌ನಲ್ಲಿ ಹೊಸ ಆದಾಯ ತೆರಿಗೆ ದರಗಳ ಶ್ರೇಣಿ ಅಥವಾ ಸ್ಲ್ಯಾಬ್‌ಗಳನ್ನು ಘೋಷಿಸಲಾಗಿದೆ. ಇದರಿಂದ ಮಧ್ಯಮ ವರ್ಷದ ಜನರಿಗೆ ತೆರಿಗೆಯಲ್ಲಿ ಉಳಿತಾಯವಾಗಲಿದೆ. ಪರಿಷ್ಕೃತ ತೆರಿಗೆ ಪದ್ಧತಿಯು 2025-26ರಲ್ಲಿ ಜನರು ಗಳಿಸುವ ಆದಾಯಕ್ಕೆ ಅನ್ವಯವಾಗಲಿದೆ. ವೈಯಕ್ತಿಕ ಆದಾಯ ತೆರಿಗೆಯಲ್ಲಿ ಟ್ಯಾಕ್ಸ್‌ ರಿಬೇಟ್‌ ಅನ್ನು 25,000 ರುಪಾಯಿಗಳಿಂದ 60,000 ರುಪಾಯಿಗೆ ಹೆಚ್ಚಿಸಿರುವುದರಿಂದ ವಾರ್ಷಿಕ 12 ಲಕ್ಷ ರುಪಾಯಿ ತನಕ ಆದಾಯ ಇರುವವರಿಗೆ ಆದಾಯ ತೆರಿಗೆ ಇರುವುದಿಲ್ಲ. ವೇತನದಾರರಿಗೆ 75,000 ರುಪಾಯಿಗಳ ಸ್ಟ್ಯಾಂಡರ್ಡ್‌ ಡಿಡಕ್ಷನ್‌ ಕೂಡ ಇರುವುದರಿಂದ ಅವರಿಗೆ 12 ಲಕ್ಷದ 75 ಸಾವಿರ ರುಪಾಯಿ ತನಕ ಇನ್‌ಕಮ್‌ ಟ್ಯಾಕ್ಸ್‌ ಇರುವುದಿಲ್ಲ. ಇದು ದೇಶದ ಕೋಟ್ಯಂತರ ಮಧ್ಯಮ ವರ್ಗದ ಜನರಿಗೆ ಬಹು ದೊಡ್ಡ ರಿಲೀಫ್‌ ಆಗಿದೆ.

2025-26ಕ್ಕೆ ಹೊಸ ಆದಾಯ ತೆರಿಗೆಯ ಶ್ರೇಣಿ ಹೀಗಿದೆ:

ವಾರ್ಷಿಕ 4 ಲಕ್ಷ ರುಪಾಯಿ ತನಕ ಆದಾಯಕ್ಕೆ, ಆದಾಯ ತೆರಿಗೆ ಇರುವುದಿಲ್ಲ.

4 ಲಕ್ಷದಿಂದ 8 ಲಕ್ಷ ರುಪಾಯಿ ಆದಾಯಕ್ಕೆ ತೆರಿಗೆ : 5%

8 ಲಕ್ಷದಿಂದ 12 ಲಕ್ಷ ರುಪಾಯಿ ಆದಾಯಕ್ಕೆ ತೆರಿಗೆ : 10%

12 ಲಕ್ಷದಿಂದ 16 ಲಕ್ಷ ರುಪಾಯಿ ಆದಾಯಕ್ಕೆ ತೆರಿಗೆ : 15%

20 ಲಕ್ಷದಿಂದ 24 ಲಕ್ಷ ರುಪಾಯಿ ಆದಾಯಕ್ಕೆ ತೆರಿಗೆ : 25%

24 ಲಕ್ಷ ರುಪಾಯಿ ಮೇಲಿನ ಆದಾಯಕ್ಕೆ ತೆರಿಗೆ : 30%

( ಹಳೆಯ ತೆರಿಗೆ ಪದ್ಧತಿಯಲ್ಲಿ ಹಳೆಯ ತೆರಿಗೆಯ ಶ್ರೇಣಿಯೇ ಇರಲಿದೆ)

ಜಿಎಸ್‌ಟಿ ಅಡಿಯಲ್ಲಿಯೂ ಏಪ್ರಿಲ್‌ 1ರಿಂದ ಬಿಸಿನೆಸ್‌ದಾರರಿಗೆ ಹೊಸ ಬದಲಾವಣೆ ಅನ್ವಯವಾಗಲಿದೆ. ಮುಖ್ಯವಾಗಿ ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ ಕ್ಲೇಮ್‌ ಮಾಡಿಕೊಳ್ಳಲು, ಇನ್‌ಪುಟ್‌ ಸರ್ವೀಸ್‌ ಡಿಸ್ಟ್ರಿಬ್ಯೂಟರ್‌ ಮೆಕಾನಿಸಮ್‌ ಅನ್ನು ಕಡ್ಡಾಯ ಮಾಡಲಾಗಿದೆ. ಏಪ್ರಿಲ್‌ 1ರಿಂದ ಎಟಿಎಂನಿಂದ ಕ್ಯಾಶ್‌ ವಿತ್‌ ಡ್ರಾವಲ್ಸ್‌ಗೆ ಸಂಬಂಧಿಸಿಯೂ ಹೊಸ ಬದಲಾವಣೆ ಜಾರಿಯಾಗಲಿದೆ.ಆರ್‌ಬಿಐ ಮತ್ತು ನ್ಯಾಶನಲ್‌ ಪೇಮೆಂಟ್ಸ್‌ ಬ್ಯಾಂಕ್‌ ಆಫ್‌ ಇಂಡಿಯಾ, ಎಟಿಎಂ ಇಂಟರ್‌ಚೇಂಜ್‌ ಶುಲ್ಕದಲ್ಲಿ 2 ರುಪಾಯಿ ಏರಿಕೆಗೆ ಅನುಮೋದಿಸಿದೆ. ಉಚಿತ ಟ್ರಾನ್ಸಕ್ಷಗಳ ಮಿತಿ ದಾಟಿದ ಬಳಿಕ ಪ್ರತಿ ಒಂದು ಕ್ಯಾಶ್‌ ವಿತ್‌ ಡ್ರಾವಲ್ಸ್‌ಗೆ 19 ರುಪಾಯಿ ಶುಲ್ಕವಾಗಲಿದೆ. ಹಣಕಾಸೇತರ ಟ್ರಾನ್ಸಕ್ಷನ್‌ಗಳಿಗೆ 7 ರುಪಾಯಿ ಶುಲ್ಕ ಅನ್ವಯವಾಗಲಿದೆ. ಆದರೆ ಈ ಬದಲಾವಣೆಯು ಮೈಕ್ರೊ-ಎಟಿಎಂಗಳಿಗೆ ಮತ್ತು ಕ್ಯಾಶ್‌ ಡೆಪಾಸಿಟ್‌ ಟ್ರಾನ್ಸಕ್ಷನ್‌ಗಳಿಗೆ ಇರುವುದಿಲ್ಲ. ಪ್ರತಿ ತಿಂಗಳು ಮೂರು ಸಲ ಮಾತ್ರ ಎಟಿಎಂನಿಂದ ಉಚಿತವಾಗಿ ನಗದು ಹಿಂಪಡೆಯಬಹುದು.

ಎಸ್‌ಬಿಐ, ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌ ಮತ್ತು ಕೆನರಾ ಬ್ಯಾಂಕ್‌ ಏಪ್ರಿಲ್‌ 1ರಿಂದ ಮಿನಿಮಮ್‌ ಬ್ಯಾಲೆನ್ಸ್‌ ರೂಲ್ಸ್‌ಗಳನ್ನು ಬದಲಿಸುತ್ತಿದ್ದು, ನಗರ ಪ್ರದೇಶಗಳಲ್ಲಿ ಕನಿಷ್ಠ ಬ್ಯಾಲೆನ್ಸ್‌ ಮೊತ್ತದಲ್ಲಿ ಏರಿಕೆಯಾಗಲಿದೆ.

ಪ್ರಾಪರ್ಟಿ ಮಾರಾಟ ಏಪ್ರಿಲ್‌ 1ರ ಬಳಿಕ ಮಾಡಿ

ನೀವು ನಿಮ್ಮ ಪ್ರಾಪರ್ಟಿಯನ್ನು ಮಾರಾಟ ಮಾಡುವ ಪ್ಲಾನ್‌ ಮಾಡುತ್ತಿದ್ದರೆ, ಏಪ್ರಿಲ್‌ 1ರ ಬಳಿಕ ಮಾಡುವುದು ಉತ್ತಮ. ಏಕೆಂದರೆ ಕ್ಯಾಪಿಟಲ್‌ ಗೇನ್ಸ್‌ ಟ್ಯಾಕ್ಸ್‌ ಅನ್ನು ಮುಂದಿನ 2025-26ರ ಆರ್ಥಿಕ ವರ್ಷದ ಆಧಾರದಲ್ಲಿ ಲೆಕ್ಕಾಚಾರ ಮಾಡಲಾಗುತ್ತದೆ. ಇದರಿಂದಾಗಿ ಟ್ಯಾಕ್ಸ್‌ ಸೇವಿಂಗ್‌ ಇನ್ವೆಸ್ಟ್‌ಮೆಂಟ್‌ ಸಲುವಾಗಿ ಒಂದು ಇಡೀ ವರ್ಷದ ಸಮಯ ಸಿಗುತ್ತದೆ. ತೆರಿಗೆ ಪಾವತಿಸಲು ಒಂದು ವರ್ಷದ ಸಮಯ ಸಿಗುತ್ತದೆ.

ಬಜೆಟ್‌ ಪ್ರಕಾರ ಏಪ್ರಿಲ್‌ 1ರ ಬಳಿಕ ಎಲೆಕ್ಟ್ರಾನಿಕ್ಸ್‌ ಮತ್ತು ಮೊಬೈಲ್‌ ದರಗಳಲ್ಲಿ ಇಳಿಕೆಯಾಗಲಿದೆ. ಏಕೆಂದರೆ ಮೊಬೈಲ್‌ ಫೋನ್‌ ಉತ್ಪಾದನೆಯಲ್ಲಿ ಬಳಕೆಯಾಗುವ 28 ವಸ್ತುಗಳ ಸುಂಕ ಇಳಿಕೆಯಾಗಲಿದೆ. ಎಲ್‌ಇಡಿ, ಎಲ್‌ಸಿಡಿ ಟಿವಿ ಉತ್ಪಾದನೆ ಕುಸಿತ ಬಿಡಿ ಭಾಗಗಳ ಮೇಲಿನ ಸುಂಕ ತಗ್ಗಲಿದೆ. ಇವಿ ಬ್ಯಾಟರಿಗಳು ಮತ್ತು ಬಿಡಿ ಭಾಗಗಳ ಮೇಲಿನ ತೆರಿಗೆ ಇಳಿಯಲಿದೆ. ಬಜೆಟ್‌ ಪ್ರಕಾರ 36 ಕ್ರಿಟಿಕಲ್‌ ಔಷಧಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ.

ಏಪ್ರಿಲ್‌ 1ರಿಂದ ಬಹುತೇಕ ಬ್ರಾಂಡ್‌ಗಳ ಕಾರುಗಳ ದರದಲ್ಲಿ ಏರಿಕೆಯಾಗಲಿದೆ. ಕೇವಲ ಕಾರುಗಳು ಮಾತ್ರವಲ್ಲದೆ, ರಾಜ್ಯದಲ್ಲಿ ದ್ವಿ ಚಕ್ರ ವಾಹನ, ಆಟೊ ರಿಕ್ಷಾ ಖರೀದಿ ಕೂಡ ದುಬಾರಿಯಾಗಲಿದೆ.

ಕಾರು ಉತ್ಪಾದಕ- ದರ ಏರಿಕೆ ಎಷ್ಟು?

ಮಾರುತಿ ಸುಜುಕಿ- 4%

ಕಿಯಾ- 3%

ಹುಂಡೈ-3%

ಮಹೀಂದ್ರಾ-3%

ರೆನಾಲ್ಟ್‌ - 2%

ಕರ್ನಾಟಕದಲ್ಲಿ ಏಪ್ರಿಲ್‌ 1ರಿಂದ ಟೋಲ್‌ ದರಗಳಲ್ಲೂ 3-5% ಏರಿಕೆಯಾಗಲಿದೆ. ರಾಜ್ಯದಲ್ಲಿ 66 ಟೋಲ್‌ ಪ್ಲಾಜಾಗಳಿದ್ದು, ಬಹುತೇಕ ಎಲ್ಲ ಕಡೆಗಳಲ್ಲಿ 3ರಿಂದ 5% ತನಕ ಟೋಲ್‌ ಶುಲ್ಕ ಏರಿಕೆಯಾಗಲಿದೆ.

ರಾಜ್ಯ ಸರ್ಕಾರಿ' ನೌಕರರೇ ಗಮನಿಸಿ : ಸರ್ವೋತ್ತಮ ಸೇವಾ ಪ್ರಶಸ್ತಿಗೆ ನಾಮ ನಿರ್ದೇಶನ ಸಲ್ಲಿಕೆ ಬಗ್ಗೆ ಇಲ್ಲಿದೆ ಮುಖ್ಯ ಮಾಹಿತಿ

ರಾಜ್ಯ ಸರ್ಕಾರಿ' ನೌಕರರೇ ಗಮನಿಸಿ : ಸರ್ವೋತ್ತಮ ಸೇವಾ ಪ್ರಶಸ್ತಿಗೆ ನಾಮ ನಿರ್ದೇಶನ ಸಲ್ಲಿಕೆ ಬಗ್ಗೆ ಇಲ್ಲಿದೆ ಮುಖ್ಯ ಮಾಹಿತಿ

2024 ಮತ್ತು 2025ನೇ ಸಾಲಿನ ರಾಜ್ಯ ಸರ್ಕಾರದ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಉಲ್ಲೇಖಿತ ಸುತ್ತೋಲೆಯಲ್ಲಿ ನಾಮ ನಿರ್ದೇಶನಗಳನ್ನು ದಿನಾಂಕ: 28-04-2025 ರೊಳಗಾಗಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು.

ಮುಂದುವರೆದು, ಸದರಿ ಸುತ್ತೋಲೆಯನ್ನು ಭಾಗಶ: ಪರಿಷ್ಕರಿಸಲು ತೀರ್ಮಾನಿಸಿ ಈ ಕೆಳಕಂಡಂತೆ ಕ್ರಮವಹಿಸುವಂತೆ ತಿಳಿಸಲಾಗಿದೆ.

1. 2024ನೇ ಸಾಲಿನ ಸರ್ವೋತ್ತಮ ಸೇವಾ ಪ್ರಶಸ್ತಿಗೆ ನಾಮ ನಿರ್ದೇಶನ ಸಲ್ಲಿಸಲು 2023ನೇ ಕ್ಯಾಲೆಂಡರ್ ವರ್ಷದಲ್ಲಿ ಮಾಡಿರುವ ಉಪ ಕ್ರಮ / ಸಾಧನೆಯನ್ನು ಪರಿಗಣಿಸಲಾಗುವುದು. ಹಾಗೆಯೇ, 2025ನೇ ಸಾಲಿನ ಸರ್ವೋತ್ತಮ ಸೇವಾ ಪ್ರಶಸ್ತಿಗೆ ನಾಮ ನಿರ್ದೇಶನ ಸಲ್ಲಿಸಲು 2024ನೇ ಕ್ಯಾಲೆಂಡರ್ ವರ್ಷದಲ್ಲಿ ಮಾಡಿರುವ ಉಪ ಕ್ರಮ /ಸಾಧನೆಯನ್ನು ಪರಿಗಣಿಸಲಾಗುವುದು.

2. 2024 ಹಾಗೂ 2025ನೇ ಸಾಲಿನ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಆನ್ಲೈನ್ನಲ್ಲಿ ನಾಮ ನಿರ್ದೇಶನವನ್ನು ಸಲ್ಲಿಸಲು ದಿನಾಂಕ: 14-04-2025 ಅಂತಿಮ ದಿನಾಂಕವನ್ನು ನಿಗದಿಪಡಿಸಲಾಗಿದೆ. ನಂತರ ಯಾವುದೇ ಕಾರಣಕ್ಕೂ ದಿನಾಂಕವನ್ನು ವಿಸ್ತರಿಸಲಾಗುವುದಿಲ್ಲ.

3. 2023ನೇ ಸಾಲಿನಲ್ಲಿ ಯಾವ ಜಿಲ್ಲೆಗಳು ಜಿಲ್ಲಾ ಮಟ್ಟದ ಆಯ್ಕೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿಲ್ಲವೋ ಅವರೂ ಸಹ ಪ್ರಕ್ರಿಯೆಯನ್ನು ದಿನಾಂಕ: 16-04-2025 ರೊಳಗೆ ಪೂರ್ಣಗೊಳಿಸುವುದು ಮತ್ತು ಆಯ್ಕೆ ಪೂರ್ಣಗೊಂಡ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸುವುದು.

4. 2024 ಹಾಗೂ 2025ನೇ ಸಾಲಿನ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಯ ಆಯ್ಕೆಯನ್ನು ಪೂರ್ಣಗೊಳಿಸಿ, ಪೂರ್ಣಗೊಂಡ ಎರಡು ವರ್ಷಗಳ ಆಯ್ಕೆ ಪಟ್ಟಿಯನ್ನು ದಿನಾಂಕ: 16-04-2025ರೊಳಗೆ ಸರ್ಕಾರಕ್ಕೆ ಸಲ್ಲಿಸುವುದು.

5. 2024 ಹಾಗೂ 2025ನೇ ಸಾಲಿನ ಎರಡು ವರ್ಷಗಳಿಗೆ ಪ್ರತಿ ವರ್ಷಕ್ಕೆ ತಲಾ ಇಬ್ಬರಂತೆ ಒಟ್ಟು 4 ಜನ ಅರ್ಹ ಅಧಿಕಾರಿ / ನೌಕರರನ್ನು ಸರ್ವೋತ್ತಮ ಸೇವಾ ಪ್ರಶಸ್ತಿಗೆ ಪರಿಗಣಿಸಲು ಜಿಲ್ಲೆಯಿಂದ ರಾಜ್ಯಮಟ್ಟಕ್ಕೆ ನಾಮ ನಿರ್ದೇಶನಗಳನ್ನು ಸೂಕ್ತ ಶಿಫಾರಸ್ಸಿನೊಂದಿಗೆ ದಿನಾಂಕ: 16-04-2025 ರೊಳಗೆ ಸರ್ಕಾರಕ್ಕೆ ವಿಳಂಬವಿಲ್ಲದೇ ನಿಗದಿತ ನಮೂನೆಯಲ್ಲಿ ಕಡ್ಡಾಯವಾಗಿ ಸಲ್ಲಿಸುವುದು.

ಬೆಂಗಳೂರು ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಇಲಾಖಾ ಹಂತ / ನಿರ್ದೇಶಕರ ಹಂತ ಮತ್ತು ಸಚಿವಾಲಯ ಹಂತದ ಅರ್ಹ ಅಧಿಕಾರಿ / ನೌಕರರು ಸಹ ಆನ್ಲೈನ್ ಮೂಲಕ ರಾಜ್ಯ ಮಟ್ಟದ ಪ್ರಶಸ್ತಿಗೆ ದಿನಾಂಕ:14-04-2025 ರೊಳಗೆ ನಾಮ ನಿರ್ದೇಶನಗಳನ್ನು ಸಲ್ಲಿಸಬಹುದು.

7. ಸರ್ವೋತ್ತಮ ಸೇವಾ ಪ್ರಶಸ್ತಿಗೆ ನಾಮ ನಿರ್ದೇಶನವನ್ನು ಆನ್ಲೈನ್ ಮೂಲಕ ಸಲ್ಲಿಸುವ ಬಗ್ಗೆ ತಮ್ಮ ಜಿಲ್ಲೆಯಲ್ಲಿ ವ್ಯಾಪಕ ಪ್ರಚಾರ ಕೈಗೊಳ್ಳುವುದು.

8. ಮೇಲ್ಕಂಡ ಆಯ್ಕೆ ಪ್ರಕ್ರಿಯೆಯನ್ನು ಈ ಹಿಂದಿನ ಸುತ್ತೋಲೆಯಲ್ಲಿ ತಿಳಿಸಿರುವಂತೆ ಜಿಲ್ಲಾವಾರು ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಅನುಮೋದನೆಯೊಂದಿಗೆ ಸರ್ಕಾರದ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಆಡಳಿತ ಸುಧಾರಣೆ)ಗೆ ಸಲ್ಲಿಸುವುದು.

9. ಸರ್ಕಾರದ ಆದೇಶ ಸಂ: ಸಿಆಸುಇ (ಆಸು) 11 ಇಆಸು 2022, ದಿನಾಂಕ: 19-03-2022ರ ಮಾರ್ಗಸೂಚಿಗಳನ್ನು ಅನುಸರಿಸತಕ್ಕದ್ದು.

ಶುಕ್ರವಾರ, ಮಾರ್ಚ್ 28, 2025

ಯುಗಾದಿ ಹಬ್ಬಕ್ಕೆ ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ ನ್ಯೂಸ್ : 'ತುಟ್ಟಿ ಭತ್ಯೆ' ಶೇ.53ರಿಂದ 55ಕ್ಕೆ ಏರಿಕೆ | DA Hike ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿ ಸುದ್ದಿ: 'ತುಟ್ಟಿಭತ್ಯೆ(DA)' ಶೇ.2ರಷ್ಟು ಹೆಚ್ಚಳ | Central Government Employees

ಕೇಂದ್ರ ಸರ್ಕಾರ ತನ್ನ ನೌಕರರ ವೇತನವನ್ನು ಶೇಕಡಾ 2 ರಷ್ಟು ಹೆಚ್ಚಿಸಿದೆ. ಈ ಹೆಚ್ಚಳವನ್ನು ತುಟ್ಟಿ ಭತ್ಯೆ (ಡಿಎ) ರೂಪದಲ್ಲಿ ಮಾಡಲಾಗಿದೆ. ಕೇಂದ್ರ ನೌಕರರ ತುಟ್ಟಿ ಭತ್ಯೆಯನ್ನು ವರ್ಷಕ್ಕೆ ಎರಡು ಬಾರಿ ಹೆಚ್ಚಿಸಲು ಸರ್ಕಾರ ಪರಿಗಣಿಸುತ್ತಿದೆ.


ಈ ಹೆಚ್ಚಳದೊಂದಿಗೆ, ಡಿಎ 53 ರಿಂದ 55 ಪ್ರತಿಶತಕ್ಕೆ ಹೆಚ್ಚಾಗುತ್ತದೆ.


ಈ ಹೆಚ್ಚಳವನ್ನು ಮೂಲ ವೇತನಕ್ಕೆ ಅನುಗುಣವಾಗಿ ಮಾಡಲಾಗುತ್ತದೆ. ಉದಾಹರಣೆಗೆ, ಒಬ್ಬ ಉದ್ಯೋಗಿಯ ಮೂಲ ವೇತನ 30,000 ರೂ. ಆಗಿದ್ದರೆ, ಅವರ ವೇತನವು ಶೇಕಡಾ 600 ರಷ್ಟು ಹೆಚ್ಚಾಗುತ್ತದೆ. ಒಬ್ಬರ ಸಂಬಳ 50,000 ರೂ.ಗಳಿದ್ದರೆ, ಅವರ ಸಂಬಳ 1000 ರೂ.ಗಳಷ್ಟು ಹೆಚ್ಚಾಗುತ್ತದೆ ಮತ್ತು 1 ಲಕ್ಷ ರೂ.ಗಳಷ್ಟು ಗಳಿಸುವವರ ಸಂಬಳ 2000 ರೂ.ಗಳಷ್ಟು ಹೆಚ್ಚಾಗುತ್ತದೆ.

ಸಂಬಳ ಎಷ್ಟು?
ಒಬ್ಬ ವ್ಯಕ್ತಿಯ ಮೂಲ ವೇತನ 50,000 ರೂ. ಎಂದು ಭಾವಿಸೋಣ. ಇಲ್ಲಿಯವರೆಗೆ ಅವರಿಗೆ ಶೇ. 53 ರಷ್ಟು ಡಿಎ ಸಿಗುತ್ತಿತ್ತು. 50,000 ರಲ್ಲಿ 53% ರೂ. 26,500 ಆಗಿದೆ. ಈಗ HRA ಆಗಿ 10,000 ರೂ.ಗಳನ್ನು ಊಹಿಸೋಣ. HRA ಹಲವು ಅಂಶಗಳನ್ನು ಅವಲಂಬಿಸಿರುತ್ತದೆ ಎಂದು ನಾವು ನಿಮಗೆ ಹೇಳೋಣ. ಅದನ್ನು ಇಲ್ಲಿ ಉದಾಹರಣೆಯಾಗಿ ಮಾತ್ರ ಹೇಳಲಾಗುತ್ತಿದೆ. ಆದ್ದರಿಂದ ಈ ಲೆಕ್ಕಾಚಾರದ ಪ್ರಕಾರ, ಇಲ್ಲಿಯವರೆಗೆ ಕೇಂದ್ರ ಸರ್ಕಾರಿ ನೌಕರರು 86500 ರೂ.ಗಳ ಸಂಬಳ ಪಡೆಯುತ್ತಿದ್ದರು.

ಈಗ ಡಿಎ ಶೇಕಡಾ 55 ಆಗಿದ್ದರೆ ಒಟ್ಟು ಸಂಬಳ 1000 ರೂ. ಹೆಚ್ಚಾಗುತ್ತದೆ. ಅಂದರೆ ಹೊಸ ಸಂಬಳ 87500 ರೂ. ಅದೇ ರೀತಿ, ಪಿಂಚಣಿದಾರರ ಪಿಂಚಣಿ ಕೂಡ ಹೆಚ್ಚಾಗುತ್ತದೆ.

ಡಿಎ ಎಂದರೇನು?
ಡಿಎ ಎಂದರೆ ಸರ್ಕಾರವು ತನ್ನ ಉದ್ಯೋಗಿಗಳಿಗೆ ನೀಡುವ ತುಟ್ಟಿ ಭತ್ಯೆ. ಹೆಚ್ಚುತ್ತಿರುವ ಹಣದುಬ್ಬರವನ್ನು ಗಮನದಲ್ಲಿಟ್ಟುಕೊಂಡು, ಸರ್ಕಾರವು ವರ್ಷಕ್ಕೆ ಎರಡು ಬಾರಿ ಇದನ್ನು ಪರಿಗಣಿಸುತ್ತದೆ. ಸಾಮಾನ್ಯವಾಗಿ ಇದನ್ನು ಶೇಕಡಾ 3-4 ರಷ್ಟು ಹೆಚ್ಚಿಸಲಾಗುತ್ತದೆ. ಆದ್ದರಿಂದ, ಈ ಬಾರಿ ಸರ್ಕಾರ ನಿರೀಕ್ಷೆಗಿಂತ ಕಡಿಮೆ ಡಿಎ ಹೆಚ್ಚಿಸಿದೆ ಎಂದು ಹೇಳಲಾಗುತ್ತಿದೆ. ಡಿಎ ಜೊತೆಗೆ, ಡಿಆರ್ ಅಂದರೆ ತುಟ್ಟಿ ಪರಿಹಾರವನ್ನು ಸಹ ಹೆಚ್ಚಿಸಲಾಗಿದೆ. ನಿವೃತ್ತ ನೌಕರರಿಗೆ ಡಿಆರ್ ನೀಡಲಾಗುತ್ತದೆ. ವೇತನ ಹೆಚ್ಚಳದಿಂದ ಸರ್ಕಾರಕ್ಕೆ 3622 ಕೋಟಿ ರೂಪಾಯಿಗಳ ಹೆಚ್ಚುವರಿ ಆರ್ಥಿಕ ಹೊರೆ ಬೀಳಲಿದೆ ಎಂದು ಸರ್ಕಾರ ಹೇಳಿದೆ. ಅದೇ ಸಮಯದಲ್ಲಿ, ಪಿಂಚಣಿ ಹೆಚ್ಚಳವು 2992 ಕೋಟಿ ರೂ.ಗಳ ಹೆಚ್ಚುವರಿ ಆರ್ಥಿಕ ಹೊರೆಗೆ ಕಾರಣವಾಗುತ್ತದೆ.

ಗುರುವಾರ, ಮಾರ್ಚ್ 27, 2025

8th Pay Commission: 8ನೇ ವೇತನ ಆಯೋಗ ಜಾರಿಯಾದ್ರೆ ನೌಕರರ ಸಂಬಳ ಎಷ್ಟು ಹೆಚ್ಚಳ? ಇಲ್ಲಿದೆ ಮಾಹಿತಿ

8th Pay Commission: 8ನೇ ವೇತನ ಆಯೋಗ ಜಾರಿಯಾದ್ರೆ ನೌಕರರ ಸಂಬಳ ಎಷ್ಟು ಹೆಚ್ಚಳ? ಇಲ್ಲಿದೆ ಮಾಹಿತಿ

ಕೇಂದ್ರ ಸರ್ಕಾರಿ ನೌಕರರಿಗೆ 8ನೇ ವೇತನ ಆಯೋಗ ರಚಿಸುವ ದಿಸೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಎಂಟನೇ ವೇತನ ಆಯೋಗ (8th Pay Commission) ರಚನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ಮುಂದಿನ ವರ್ಷದ ಏಪ್ರಿಲ್ 1ರಿಂದ ಶಿಫಾರಸುಗಳು ಜಾರಿಗೆ ಬರಲಿವೆ.

ಇನ್ನು, 8ನೇ ವೇತನ ಆಯೋಗದ ಶಿಫಾರಸುಗಳು ಜಾರಿಗೆ ಬಂದರೆ ನೌಕರರ ಮಾಸಿಕ ಸಂಬಳ ಎಷ್ಟು ಜಾಸ್ತಿಯಾಗಬಹುದು ಎಂಬ ಚರ್ಚೆಗಳು ನಡೆಯುತ್ತಿವೆ.

ಇದರ ಬೆನ್ನಲ್ಲೇ, 8ನೇ ವೇತನ ಆಯೋಗದ ಕುರಿತು ಅಮೆರಿಕದ ಹೂಡಿಕೆ ಬ್ಯಾಂಕ್ ಆಗಿರುವ ಗೋಲ್ಡ್ ಮನ್ ಸಾಚ್ಸ್ ವರದಿ ಮಾಡಿದೆ. "8ನೇ ವೇತನ ಆಯೋಗದ ಶಿಫಾರಸುಗಳು ಜಾರಿಗೆ ಬಂದರೆ ಕೇಂದ್ರ ಸರ್ಕಾರಿ ನೌಕರರ ಮಾಸಿಕ ಸಂಬಳವು 19 ಸಾವಿರ ರೂ. ಹೆಚ್ಚಾಗಲಿದೆ" ಎಂದು ವರದಿ ತಿಳಿಸಿದೆ. ಇದರಿಂದ ಕೇಂದ್ರದ 50 ಲಕ್ಷ ನೌಕರರು ಹಾಗೂ 65 ಲಕ್ಷ ಪಿಂಚಣಿದಾರರಿಗೆ ಅನುಕೂಲವಾಗಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಪ್ರಸ್ತುತ, ಮಧ್ಯಮ ಮಟ್ಟದ ಸರ್ಕಾರಿ ನೌಕರರ ವೇತನವು ತಿಂಗಳಿಗೆ ಸರಾಸರಿ 1 ಲಕ್ಷ ರೂ. (ತೆರಿಗೆ ಪೂರ್ವ) ಇದೆ. ಬಜೆಟ್ನಲ್ಲಿ 8ನೇ ವೇತನ ಆಯೋಗದ ಶಿಫಾರಸ್ಸುಗಳಿಗೆ ಮೀಸಲಿಡುವ ಹಣದ ಆಧಾರದ ಮೇಲೆ, ಕೇಂದ್ರ ಸರ್ಕಾರಿ ನೌಕರರ ಸಂಬಳ ಎಷ್ಟು ಪ್ರಮಾಣದಲ್ಲಿ ಹೆಚ್ಚಳವಾಗಲಿದೆ ಎಂಬುದನ್ನು ಗೋಲ್ಡ್ಮನ್ ಸಾಚ್ಸ್ ಅಂದಾಜಿಸಿದೆ.

ಇದರ ಪ್ರಕಾರ ಬಜೆಟ್ ನಲ್ಲಿ ಸರ್ಕಾರ 1.75 ಲಕ್ಷ ಕೋಟಿ ರೂ. ಮೀಸಲಿಟ್ಟರೆ, ಮಧ್ಯಮ ಮಟ್ಟದ ಕೇಂದ್ರ ಸರ್ಕಾರಿ ನೌಕರರ ಸಂಬಳ ತಿಂಗಳಿಗೆ 1,14,600 ರೂ.ಗೆ ಏರಿಕೆಯಾಗಬಹುದು. ಅದೇ ರೀತಿ 2 ಲಕ್ಷ ಕೋಟಿ ರೂ. ಮೀಸಲಿಟ್ಟರೆ, ಸಂಬಳವು ತಿಂಗಳಿಗೆ 1,16,700 ರೂ.ಗೆ ಹೆಚ್ಚಾಗಬಹುದು. ಇನ್ನು ಬಜೆಟ್ ನಲ್ಲಿ 2.25 ಲಕ್ಷ ಕೋಟಿ ರೂ. ಮೀಸಲಿಟ್ಟರೆ, ಕೇಂದ್ರ ನೌಕರರ ಸಂಬಳವು ತಿಂಗಳಿಗೆ 1,18,800 ರೂ. ಹೆಚ್ಚಾಗಬಹುದು ಎಂದು ವರದಿಯಲ್ಲಿ ಉಲ್ಲೇಖಿಸಿದೆ.

Government Employee: ಸಂಬಳ ಪ್ಯಾಕೇಜ್ ಖಾತೆ ಕಡ್ಡಾಯ, ಸರ್ಕಾರಿ ನೌಕರರ ಬೇಡಿಕೆಗಳು

'ಸಂಬಳ ಪ್ಯಾಕೇಜ್ ಖಾತೆಯನ್ನು ತೆರೆಯುವ ಸರ್ಕಾರಿ ನೌಕರರು ಸರ್ಕಾರದ ಮುಂದೆ ಹಲವು ಬೇಡಿಕೆಯನ್ನು ಇಟ್ಟಿದ್ದಾರೆ. ಇದಕ್ಕಾಗಿ ಬ್ಯಾಂಕ್‌ಗಳ ಜೊತೆ ಸಭೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಈ ಕುರಿತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್. ಷಡಾಕ್ಷರಿ ಸರ್ಕಾರದ ಕಾರ್ಯದರ್ಶಿಗಳು, (ವಿತ್ತೀಯ ಸುಧಾರಣೆ) ಆರ್ಥಿಕ ಇಲಾಖೆ ಇವರಿಗೆ ಪತ್ರವನ್ನು ಬರೆದಿದ್ದಾರೆ. ಕರ್ನಾಟಕ ಸರ್ಕಾರ ಬ್ಯಾಂಕುಗಳ ಜೊತೆ ಸಭೆಯನ್ನು ಆಯೋಜಿಸಬೇಕು, ನೌಕರರ ಬೇಡಿಕೆಯನ್ನು ಪರಿಗಣಿಸಬೇಕು ಎಂದು ಮನವಿ ಮಾಡಿದ್ದಾರೆ.

ಸರ್ಕಾರಿ ನೌಕರರ ಬೇಡಿಕೆಗಳೇನು?: ಸರ್ಕಾರಿ ನೌಕರರ ಸಂಘದ ಪತ್ರವು ರಾಜ್ಯ ಸರ್ಕಾರಿ ನೌಕರರಿಗೆ ಸಂಬಳ ಪ್ಯಾಕೇಜ್‌ ಖಾತೆಯಡಿ ಬ್ಯಾಂಕ್‌ಗಳು ನೀಡುತ್ತಿರುವ ಸೌಲಭ್ಯಗಳ ಜೊತೆಗೆ ಗೃಹ ಸಾಲ, ವೈಯಕ್ತಿಕ ಸಾಲಗಳನ್ನು ಕಡಿಮೆ ಬಡ್ಡಿ ದರದಲ್ಲಿ ನೀಡುವ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ.

ಪತ್ರದಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ, ರಾಜ್ಯ ಸಚಿವ ಸಂಪುಟದ ತೀರ್ಮಾನದಂತೆ ರಾಜ್ಯ ಸರ್ಕಾರಿ ನೌಕರರು ಮತ್ತು ಅವಲಂಬಿತ ಕುಟುಂಬ ಸದಸ್ಯರ ಹಿತಾಸಕ್ತಿಗಳನ್ನು ರಕ್ಷಿಸುವ ಸಲುವಾಗಿ ವಿವಿಧ ಬ್ಯಾಂಕುಗಳು ಒದಗಿಸುವ ವಿಶಿಷ್ಟ ಸೌಲಭ್ಯಗಳನ್ನು ಪಡೆಯಲು ಸಹಕಾರಿಯಾಗುವಂತೆ ಸಂಬಳ ಪ್ಯಾಕೇಜ್‌ಗಳ ಅಡಿಯಲ್ಲಿ ಖಾತೆಗಳನ್ನು ತೆರೆಯುವುದು/ ಆಯ್ಕೆ ಮಾಡಿಕೊಳ್ಳುವುದನ್ನು ಎಲ್ಲಾ ಅಧಿಕಾರಿ ನೌಕರರಿಗೆ ಕಡ್ಡಾಯಗೊಳಿಸಲಾಗಿದೆ, ಇದು ಸ್ವಾಗತಾರ್ಹ.

ಮುಂದುವರೆದು, ಸಂಬಳ ಪ್ಯಾಕೇಜ್ ಖಾತೆಯಾಗಿ ಪರಿವರ್ತಿಸಿಕೊಳ್ಳುವ ಅಧಿಕಾರಿ/ ನೌಕರರಿಗೆ ಈ ಕೆಳಕಂಡ ಸಾಲಗಳನ್ನು ಕಡಿಮೆ ಬಡ್ಡಿ ದರದಲ್ಲಿ ನೀಡುವ ಸಂಬಂಧ ಚರ್ಚಿಸಲು ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್‌ಗಳ ಮುಖ್ಯಸ್ಥರೊಂದಿಗೆ ಹಾಗೂ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ಏರ್ಪಡಿಸಲು ತಮ್ಮಲ್ಲಿ ಕೋರಿದೆ ಎಂದು ಪತ್ರದಲ್ಲಿ ಹೇಳಿದ್ದಾರೆ.

ರಾಜ್ಯ ಸರ್ಕಾರಿ ನೌಕರರಿಗೆ ನೀಡುವ ಗೃಹ ಸಾಲ, ವೈಯಕ್ತಿಕ ಸಾಲ ಮತ್ತು ವಾಹನ ಖರೀದಿ ಸಾಲದ ಮೇಲೆ ಕಡಿಮೆ ಬಡ್ಡಿದರಗಳನ್ನು ನೀಡಬೇಕು ಎಂದು ಪತ್ರದಲ್ಲಿ ಬೇಡಿಕೆ ಸಲ್ಲಿಕೆ ಮಾಡಲಾಗಿದೆ. ಸರ್ಕಾರ ಬ್ಯಾಂಕುಗಳ ಜೊತೆ ಯಾವಾಗ ಸಭೆಯನ್ನು ಕರೆಯಲಿದೆ ಎಂದು ಕಾದು ನೋಡಬೇಕಿದೆ.

ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆ ಕಲಾಪದಲ್ಲಿ ಸರ್ಕಾರಿ ನೌಕರರ ಸಂಬಳ ಪ್ಯಾಕೇಜ್ ಕುರಿತು ಮಾಹಿತಿಯನ್ನು ನೀಡಿದ್ದರು. ಸರ್ಕಾರಿ ನೌಕರರ ಸಾಮಾಜಿಕ ಭದ್ರತೆಯು ಸರ್ಕಾರದ ಪ್ರಮುಖ ವಿಷಯವಾಗಿದ್ದು, ಈ ಕುರಿತು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ. ಮುಂದಿನ ಮೂರು ತಿಂಗಳಿನಲ್ಲಿ ಎಲ್ಲಾ ಸರ್ಕಾರಿ ಅಧಿಕಾರಿ/ ನೌಕರರು ಸಂಬಳ ಪ್ಯಾಕೇಜ್ ಖಾತೆ ಕಡ್ಡಾಯವಾಗಿ ತೆರೆಯಬೇಕು ಎಂದು ಸೂಚನೆ ನೀಡಲಾಗಿತ್ತು.

ಸಂಬಳ ಪ್ಯಾಕೇಜ್ ಖಾತೆ ತೆರೆಯುವ ಸರ್ಕಾರಿ ನೌಕರ/ ಅಧಿಕಾರಿಗಳಿಗೆ ಬ್ಯಾಂಕುಗಳು ವಿವಿಧ ಸೌಲಭ್ಯವನ್ನು ನೀಡಲಿವೆ. ಸರ್ಕಾರದ ಎಲ್ಲಾ ನೌಕರರು/ ಅಧಿಕಾರಿಗಳು ಬ್ಯಾಂಕ್ ಮತ್ತು ಅಂಚೆ ಕಛೇರಿಗಳಲ್ಲಿ 'ಸಂಬಳ ಪ್ಯಾಕೇಜ್ ಖಾತೆ' ಕಡ್ಡಾಯವಾಗಿ ತೆರೆಯಬೇಕು. ಎಲ್ಲರೂ ಖಾತೆ ತೆರೆಯುವ ಕುರಿತು ಇಲಾಖೆಗಳ ಮುಖ್ಯಸ್ಥರು ಸಹ ನೋಡಿಕೊಳ್ಳಬೇಕು ಎಂದು ಆರ್ಥಿಕ ಇಲಾಖೆ ಆದೇಶದಲ್ಲಿ ತಿಳಿಸಿತ್ತು.

ವಿವಿಧ ಬ್ಯಾಂಕ್‌ಗಳು ಈಗಾಗಲೇ ಸಂಬಳ ಪ್ಯಾಕೇಜ್ ಖಾತೆಯ ಅಡಿಯಲ್ಲಿ ನೀಡುವ ಸೌಲಭ್ಯಗಳ ಕುರಿತು ಮಾಹಿತಿಯನ್ನು ನೀಡಿವೆ. ಸಂಬಳ ಪ್ಯಾಕೇಜ್‌ಗಳ ಅಡಿಯಲ್ಲಿ ಎಲ್ಲಾ ನೌಕರರು. (ಖಾಯಂ/ ಗುತ್ತಿಗೆ/ ಹೊರಗುತ್ತಿಗೆ ಇತ್ಯಾದಿ) ಖಾತೆಗಳನ್ನು ತೆರೆಯಲು/ ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

ರಾಜ್ಯ ಸರ್ಕಾರಿ' ನೌಕರರೇ ಗಮನಿಸಿ : ಪರಿಷ್ಕೃತ 'ಆರೋಗ್ಯ ಸಂಜೀವಿನಿ' ಯೋಜನೆ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ.!

ರಾಜ್ಯ ಸರ್ಕಾರಿ' ನೌಕರರೇ ಗಮನಿಸಿ : ಪರಿಷ್ಕೃತ 'ಆರೋಗ್ಯ ಸಂಜೀವಿನಿ' ಯೋಜನೆ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ.!

ಬುಧವಾರ, ಮಾರ್ಚ್ 26, 2025

`ರಾಜ್ಯ ಸರ್ಕಾರಿ ನೌಕರರೇ' ಗಮನಿಸಿ : `ಹಳೆಯ ಡಿಫೈನ್ಸ್ ಪಿಂಚಣಿ ಯೋಜನೆ' ಬಗ್ಗೆ ಸರ್ಕಾರದಿಂದ ಮತ್ತೊಂದು ಆದೇಶ.

ದಿನಾಂಕ:01.04.2006ರ ಪೂರ್ವದಲ್ಲಿನ ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆ ಹೊಂದಿ ಆ ದಿನಾಂಕದಂದು ಅಥವಾ ತದನಂತರದಲ್ಲಿ ರಾಜ್ಯ ಸರ್ಕಾರದ ಸೇವೆಗೆ ಸೇರಿದ ನೌಕರರನ್ನು ಡಿಫೈನ್ಸ್ ಪಿಂಚಣಿ ಯೋಜನೆ ವ್ಯಾಪ್ತಿಗೆ ಒಳಪಡಿಸಲು ಸರ್ಕಾರವು ಒಪ್ಪಿಗೆಯನ್ನು ನೀಡಿ ಮೇಲೆ ಓದಲಾದ ಕ್ರಮ ಸಂಖ್ಯೆ (1)ರ ಸರ್ಕಾರಿ ಆದೇಶವನ್ನು ಹೊರಡಿಸಲಾಗಿರುತ್ತದೆ. ಈ ಆದೇಶದ ವ್ಯಾಪ್ತಿಗೊಳಪಡುವ ಸರ್ಕಾರಿ ನೌಕರರಿಂದ ದಿನಾಂಕ:30.06.2024ರೊಳಗ ಅಭಿಮತವನ್ನು ಪಡೆದು ಕ್ರೋಢೀಕೃತ ಪ್ರಸ್ತಾವನೆಯನ್ನು ಸರ್ಕಾರದ ಪರಿಶೀಲನೆಗಾಗಿ ಸಲ್ಲಿಸುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ನಿರ್ದೇಶನ ನೀಡಲಾಗಿತ್ತು.

ಮುಂದುವರೆದು, ದಿನಾಂಕ:24.01.2024ರ ಸರ್ಕಾರಿ ಆದೇಶದನ್ವಯ ಡಿಫೈನ್ಸ್ ಪಿಂಚಣಿ ಯೋಜನೆ ವ್ಯಾಪ್ತಿಗೆ ಒಳಪಡುವ ಸರ್ಕಾರಿ ಅಧಿಕಾರಿ/ನೌಕರರ ಎನ್‌.ಪಿ.ಎಸ್. ಪ್ರಾನ್ ಖಾತೆಯಲ್ಲಿ ಜಮೆಯಾಗಿರುವ ಸರ್ಕಾರದ ಹಾಗೂ ನೌಕರರ ವಂತಿಗೆಗಳನ್ನು ಹಿಂಪಡೆದು ಇತ್ಯರ್ಥಪಡಿಸಲು ಮೇಲೆ ಓದಲಾದ ಕ್ರಮ ಸಂಖ್ಯೆ (2)ರ ಸರ್ಕಾರಿ ಆದೇಶದಲ್ಲಿ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.

ಅದರಂತೆ, ದಿನಾಂಕ: 24.01.2024ರ ಸರ್ಕಾರಿ ಆದೇಶದನ್ವಯ ಸಂಬಂಧಿತ ಅಧಿಕಾರಿ/ನೌಕರರು ಚಲಾಯಿಸಿದ ಅಭಿಮತವನ್ನು ಪರಿಶೀಲಿಸಿದ ಸರ್ಕಾರವು ದಿನಾಂಕ:01.04.2006ರ ಪೂರ್ವದಲ್ಲಿನ ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆ ಹೊಂದಿ ಆ ದಿನಾಂಕದಂದು ಅಥವಾ ನಂತರದಲ್ಲಿ ರಾಜ್ಯ ಸರ್ಕಾರದ ಸೇವೆಗೆ ಸೇರಿದ ಕರ್ನಾಟಕ ಸರ್ಕಾರ ಸಚಿವಾಲಯ ಸೇವೆಗೆ ಸೇರಿದ ರಾಷ್ಟ್ರೀಯ ಪಿಂಚಣಿ ಯೋಜನೆಗೊಳಪಟ್ಟ ಅಧಿಕಾರಿ/ನೌಕರರನ್ನು ಹಳೆಯ ಡಿಫೈನ್ಸ್ ಪಿಂಚಣಿ ಯೋಜನೆಗೆ ಒಳಪಡಿಸಲು ತೀರ್ಮಾನಿಸಿ ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 38 ಎಎಬಿ 2024, ಬೆಂಗಳೂರು, ದಿನಾಂಕ:20ನೇ ಮಾರ್ಚ್ 2025.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರ ಸಚಿವಾಲಯದ ಈ ಕೆಳಕಂಡ ಅಧಿಕಾರಿ / ನೌಕರರು ದಿನಾಂಕ:01.04.2006ರ ಪೂರ್ವದಲ್ಲಿನ ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆ ಹೊಂದಿ ಆ ದಿನಾಂಕದಂದು ಅಥವಾ ನಂತರದಲ್ಲಿ ರಾಜ್ಯ ಸರ್ಕಾರದ ಸೇವೆಗೆ ಸೇರಿರುವುದರಿಂದ ದಿನಾಂಕ:24.01.2024ರ ಸರ್ಕಾರಿ ಆದೇಶ ಸಂಖ್ಯೆ: ಆಇ-ಪಿಇಎನ್/99/2023ರನ್ವಯ ಅವರನ್ನು ಡಿಫೈನ್ಸ್ ಪಿಂಚಣಿ ಯೋಜನೆಯ ವ್ಯಾಪ್ತಿಗೊಳಪಡಿಸಿ ಆದೇಶಿಸಿದೆ. ಸದರಿ ಅಧಿಕಾರಿ/ನೌಕರರಿಗೆ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯ ನಿಯಮ 2-C ಅನ್ವಯವಾಗುವುದಿಲ್ಲ ಮತ್ತು ಇವರಿಗೆ ಅದೇ ನಿಯಮಾವಳಿಯ ನಾಲ್ಕನೇಯ ಭಾಗ ಅನ್ವಯವಾಗತಕ್ಕದ್ದು.

Tax-free Income Sources: ಈ ರೀತಿ ಹಣ ಗಳಿಸಿದ್ರೆ ಟ್ಯಾಕ್ಸ್ ಕಟ್ಬೇಕಾಗಿಲ್ಲ, ತೆರಿಗೆ ಮುಕ್ತ ಆದಾಯದ ಮೂಲಗಳಿವು

ಕೆಲ ಆದಾಯಗಳು ತೆರಿಗೆ ಮುಕ್ತವಾಗಿವೆ. ತೆರಿಗೆ ಪಾವತಿಗೆ ಮುನ್ನ ಯಾವೆಲ್ಲ ಆದಾಯ, ತೆರಿಗೆ ಮುಕ್ತವಾಗಿದೆ ಎಂಬುದನ್ನು ತಿಳಿದುಕೊಳ್ಳಿ. ಯಾವ ಆದಾಯ ತೆರಿಗೆ ಮುಕ್ತ? : ಕೃಷಿ ...