ಈ ಮೊಬೈಲ್ ಅಪ್ಲಿಕೇಷನ್‌ನಲ್ಲಿ ಜಿಪಿಎಸ್ ಮೂಲಕ ಯಾವುದೇ ಮೂಲೆಯಲ್ಲಿರುವ ಆಸ್ತಿ ಮತ್ತು ಜಮೀನಿನ ಬಗ್ಗೆ ತಕ್ಷಣ ಮಾಹಿತಿ ತಿಳಿದುಕೊಳ್ಳಬಹುದು. ದಿಶಾಂಕ್ ಆಯಪ್ ಅನ್ನು ಗ್ರಾಮ ಮಟ್ಟದಲ್ಲಿ ಪರಿಚಯಿಸಲು ಸರಕಾರ ನಿರ್ಧರಿಸಿದೆ. ಅದರಂತೆ ಗ್ರಾಮ ಠಾಣಾ ವ್ಯಾಪ್ತಿಯ ನಿವೇಶನ, ಭೂಮಿಯಲ್ಲಿ ಮನೆ ಕಟ್ಟಬೇಕೆಂದರೆ ಇ-ಖಾತೆಯನ್ನು ಶೀಘ್ರವಾಗಿ ಪಡೆಯಲು ಇದು ನೆರವಾಗಲಿದೆ. ಈವರೆಗೆ ಗ್ರಾಹಕರು ಅರ್ಜಿಯೊಂದಿಗೆ 800 ರೂ. ಶುಲ್ಕ ಪಾವತಿಸಬೇಕಿತ್ತು. ಇದೀಗ ದಿಶಾಂಕ್‌ನಿಂದಾಗಿ 200 ರೂ. ಪಾವತಿಸಿದರೆ ಸಾಕು.ರೈತರ ಜಮೀನಿನ ನೆರೆಹೊರೆಯ ಜಮೀನು ಕೆರೆ ಕಟ್ಟೆ, ಹಳ್ಳಕೊಳ್ಳ ಖರಾಬು ಜಮೀನಿದ್ದರೆ ರೈತರು ದಿಶಾಂಕ್ ಆಯಪ್ ಸಹಾಯದಿಂದ ಪಡೆಯಬಹುದು.
ಸಾರ್ವಜನಿಕರು ಭೂಮಿ, ನಿವೇಶನ ಅಥವಾ ಫ್ಲ್ಯಾಟ್ ಖರೀದಿ ವೇಳೆ ವಂಚನೆ ಗೊಳಗಾಗುವುದನ್ನು ತಪ್ಪಿಸಲು ರಾಜ್ಯ ಭೂಮಾಪನ, ಕಂದಾಯ ಮತ್ತು ಭೂದಾಖಲೆಗಳ ಇಲಾಖೆಯು ವಿನೂತನ ಆಯಪ್ ವೊಂದನ್ನು ಅಭಿವೃದ್ಧಿಪಡಿಸಿ ಬಿಡುಗಡೆ ಮಾಡಿದೆ.ಭೂಗಳ್ಳರು ಸರಕಾರಿ ಭೂಮಿ, ಖರಾಬು, ಗೋಮಾಳ, ಕೆರೆ ಅಂಗಳ, ಜಾಗವನ್ನು ಕಬಳಿಸಿ, ಇತರರಿಗೆ ಮಾರಾಟ ಮಾಡಿ ವಂಚಿಸಿರುವ ಪ್ರಕರಣಗಳು ಸಾಕಷ್ಟಿವೆ. ದಿಶಾಂಕ್ ಆಪ್ ಜಿಪಿಎಸ್ ಆಧರಿಸಿ ಕಾರ್ಯ ನಿರ್ವಹಿಸುತ್ತದೆ. ನೀವು ನಿಂತಿ ರುವ ಸ್ಥಳದಲ್ಲಿ ಅಪ್ ತೆರೆದರೆ, ಸ್ಯಾಟ ಲೈಟ್ ಅಥವಾ ಗೂಗಲ್ ಮ್ಯಾಪ್ ಸಹಿತ ವಾಗಿ ಸರ್ವೆ ಸಂಖ್ಯೆಯನ್ನು ತಿಳಿಸುತ್ತದೆ. ಹಾಗೆಯೇ, ಅದರಲ್ಲಿ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮವನ್ನು ಆಯ್ಕೆ ಮಾಡಿ ಸರ್ವೇ ಸಂಖ್ಯೆಯನ್ನು ನಮೂದಿಸಿದರೆ, ಅದರ ನಕಾಶೆ ಕಾಣ ಸಿಗುತ್ತದೆ.ದಿಶಾಂಕ್ ಆಯಪ್ ಒದಗಿಸುವ ಮಾಹಿತಿಯಿಂದ ಜನರು ನಿಶ್ಚಿಂತೆಯಿಂದ ನಿವೇಶನ, ಫ್ಲ್ಯಾಟ್ ಮಾಡಬಹುದು.
ದಿಶಾಂಕ್ ಆಯಪ್ ಉಪಯೋಗಗಳು
*ಯಾವುದಾದರೂ ಆಸ್ತಿಯ ನಿಖರ ಸರ್ವೇ ನಂಬರ್ ನ್ನು ಪಡೆಯಲು ಸಹಕಾರಿಯಾಗಿದೆ.
*ಎಲ್ಲಾ ಸಾರ್ವಜನಿಕರು, ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಅತಿ ಉಪಯುಕ್ತ ಆಯಪ್ ಇದು.
ಇ-ಸ್ವತ್ತು ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ?
ಗ್ರಾಮ ಪಂಚಾಯತಿಯಲ್ಲೇ ಇ-ಸ್ವತ್ತು ಪ್ರಮಾಣ ಪತ್ರದ ಸಂಪೂರ್ಣ ಅರ್ಜಿ ವಿಲೇವಾರಿಗೆ ಅವಕಾಶ ನೀಡಲಾಗಿದ್ದು ಸಾರ್ವಜನಿಕರು ತಮ್ಮ ಹಳ್ಳಿ ವ್ಯಾಪ್ತಿಯಲ್ಲಿರುವ ಗ್ರಾಮ ಪಂಚಾಯತಿಯನ್ನು ನೇರವಾಗಿ ಅಗತ್ಯ ದಾಖಲೆಗಳ ಸಮೇತ ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.
ಅಗತ್ಯ ದಾಖಲೆಗಳು:
ಅರ್ಜಿದಾರರ ಆಧಾರ್ ಕಾರ್ಡ ಪ್ರತಿ
ಕುಟುಂಬದ ವಂಶವೃಕ್ಷ ಪ್ರಮಾಣ ಪತ್ರ
ಅರ್ಜಿದಾರರ ಪೋಟೋ
ಮನೆ ಅಥವಾ ಖಾಲಿ ಖಾಗದ ಪೋಟೋ ಕಾಪಿ
ಕಂದಾಯ ರಶೀದಿ
ವಿದ್ಯುತ್ ಬಿಲ್
ಕೈಬರಹದ ಅರ್ಜಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ