ಹೈದರಾಬಾದ್ ಕರ್ನಾಟಕ ಪ್ರದೇಶ

ಹೈದರಾಬಾದ್ ಕರ್ನಾಟಕ ಪ್ರದೇಶ
Hyderabad Karnataka

ಭಾನುವಾರ, ಮಾರ್ಚ್ 16, 2025

ಮೈಲಿಗಲ್ಲುಗಳು

ರಸ್ತೆಯ ಉದ್ದಕ್ಕೂ ಇರಿಸಲಾದ ಸಣ್ಣ ಮೈಲಿಗಂಬದ ಮೇಲೆ ದೂರವನ್ನು ಕಿಲೋಮೀಟರ್‌ಗಳಲ್ಲಿ ಬರೆಯಲಾಗುತ್ತದೆ. 

ಹೌದು, ಇತ್ತೀಚಿನ ದಿನಗಳಲ್ಲಿ ಜಿಪಿಎಸ್-ಸಜ್ಜಿತ ಸ್ಮಾರ್ಟ್‌ಫೋನ್‌ಗಳ ವ್ಯಾಪಕತೆಯಿಂದಾಗಿ ಮೈಲಿಗಲ್ಲುಗಳನ್ನು ಹೆಚ್ಚಾಗಿ ಕಡೆಗಣಿಸಲಾಗುತ್ತದೆ. ಆದರೆ ಹಿಂದೆ, ಜನರು ತಮ್ಮ ಗಮ್ಯಸ್ಥಾನವನ್ನು ತಲುಪಲು ಎಷ್ಟು ಕಿಲೋಮೀಟರ್ ಪ್ರಯಾಣಿಸಬೇಕು ಎಂಬುದನ್ನು ಲೆಕ್ಕಾಚಾರ ಮಾಡಲು ಈ ಮೈಲಿ ಗುರುತುಗಳನ್ನು ಬಳಸುತ್ತಿದ್ದರು. ಆದರೆ ಈ 'ಮೈಲಿಗಲ್ಲುಗಳು' ವಿಭಿನ್ನ ಬಣ್ಣಗಳಲ್ಲಿರುವುದನ್ನು ನೀವು ಎಂದಾದರೂ ಗಮನಿಸಿದ್ದೀರಾ? ಅಂತಹ ಬಣ್ಣಗಳನ್ನು ದೂರದ ಬಗ್ಗೆ ಮಾಹಿತಿಯನ್ನು ಒದಗಿಸಲು ಮಾತ್ರವಲ್ಲದೆ ನಾವು ಯಾವ ರೀತಿಯ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದೇವೆ ಎಂಬುದನ್ನು ತಿಳಿಸಲು ಸಹ ಬಳಸಲಾಗುತ್ತದೆ.

ಭಾರತದ ರಸ್ತೆ ಜಾಲವು 5.6 ಮಿಲಿಯನ್ ಕಿಲೋಮೀಟರ್ ಉದ್ದವಾಗಿದೆ. ರಾಷ್ಟ್ರೀಯ ಹೆದ್ದಾರಿಗಳು, ರಾಜ್ಯ ಹೆದ್ದಾರಿಗಳು ಮತ್ತು ಗ್ರಾಮೀಣ ರಸ್ತೆಗಳ ನಡುವೆ ವ್ಯತ್ಯಾಸವನ್ನು ಗುರುತಿಸಲು ಮೈಲಿಗಲ್ಲುಗಳನ್ನು ಬಣ್ಣ ಸಂಕೇತಗೊಳಿಸಲಾಗಿತ್ತು. ವಿವಿಧ ಮಾರ್ಗಗಳಲ್ಲಿ ಮೈಲಿಗಲ್ಲುಗಳ ಬಣ್ಣವೂ ಬದಲಾಗುತ್ತದೆ. ಭಾರತೀಯ ರಸ್ತೆಗಳಲ್ಲಿ ಕಂಡುಬರುವ ಮೈಲಿಗಲ್ಲುಗಳ ಪ್ರಕಾರಗಳು ಮತ್ತು ಅವುಗಳ ಬಣ್ಣಗಳನ್ನು ತಿಳಿದುಕೊಳ್ಳೋಣ ಬನ್ನಿ.

ಕಿತ್ತಳೆ ಬಣ್ಣದ ಮೈಲಿಗಲ್ಲುಗಳು

ನೀವು ಗ್ರಾಮೀಣ ರಸ್ತೆಯಲ್ಲಿದ್ದೀರಿ ಎಂದು ಇದು ಸೂಚಿಸುತ್ತದೆ. ಈ ರಸ್ತೆಗಳನ್ನು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ (PMGSY) ಮತ್ತು ಜವಾಹರ್ ರೋಜ್‌ಗಾರ್ ಯೋಜನೆ (JRY) ನಂತಹ ಉಪಕ್ರಮಗಳ ಅಡಿಯಲ್ಲಿ ನಿರ್ಮಾಣ ಮಾಡಲಾಗುತ್ತದೆ.

ಹಸಿರು ಬಣ್ಣದ ಮೈಲಿಗಲ್ಲುಗಳು

ಇದು ನೀವು ರಾಜ್ಯ ಹೆದ್ದಾರಿಯಲ್ಲಿ (SH) ಪ್ರಯಾಣಿಸುತ್ತಿದ್ದೀರಿ ಎಂದು ಇದು ಸೂಚಿಸುತ್ತದೆ. ರಾಜ್ಯ ಹೆದ್ದಾರಿಗಳು ಮುಖ್ಯವಾಗಿ ಒಂದು ನಿರ್ದಿಷ್ಟ ರಾಜ್ಯದೊಳಗಿನ ಎರಡು ಪ್ರಮುಖ ನಗರಗಳು ಅಥವಾ ಸ್ಥಳಗಳನ್ನು ಸಂಪರ್ಕಿಸುತ್ತವೆ. ಈ ರಸ್ತೆಗಳನ್ನು ಆಯಾ ರಾಜ್ಯ ಸರ್ಕಾರಗಳು ನಿರ್ಮಿಸಿ ನಿರ್ವಹಿಸುತ್ತವೆ.

ಕಪ್ಪು ಬಣ್ಣದ ಮೈಲಿಗಲ್ಲು

ವಾಹನದಲ್ಲಿ ಪ್ರಯಾಣಿಸುವಾಗ ಯಾವುದೇ ರಸ್ತೆಯಲ್ಲಿ ಕಪ್ಪು ಅಥವಾ ನೀಲಿ ಮತ್ತು ಬಿಳಿ ಗೆರೆಗಳನ್ನು ಹೊಂದಿರುವ ಮೈಲಿಗಲ್ಲು ಕಂಡುಬಂದರೆ, ನೀವು ಜಿಲ್ಲಾ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದೀರಿ ಎಂದು ಅರ್ಥ. ಈ ರಸ್ತೆಗಳು ಜಿಲ್ಲೆಯ ಪ್ರಮುಖ ಪಟ್ಟಣಗಳು ಮತ್ತು ಹಳ್ಳಿಗಳನ್ನು ಸಂಪರ್ಕಿಸುತ್ತವೆ.

ನೀಲಿ ಬಣ್ಣದ ಮೈಲಿಗಲ್ಲುಗಳು

ನೀಲಿ ಮೈಲಿಗಲ್ಲುಗಳನ್ನು ಮುಖ್ಯವಾಗಿ ಎಕ್ಸ್‌ಪ್ರೆಸ್ ಹೆದ್ದಾರಿಗಳಿಗೆ ಒದಗಿಸಲಾಗುತ್ತದೆ. ನೀವು ಎಂದಾದರೂ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ಮತ್ತು ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ಪ್ರಯಾಣಿಸಿದ್ದರೆ ಇದನ್ನು ಕಾಣಬಹುದಾಗಿದೆ. ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸುಲಭವಾಗಿ ಹೋಗುವಂತೆ ಇಂತಹ ಎಕ್ಸ್‌ಪ್ರೆಸ್‌ವೇಗಳನ್ನು ಈ ಮೂಲಕ ತೋರಿಸಲಾಗಿತ್ತದೆ.

ಹಳದಿ ಬಣ್ಣದ ಮೈಲಿಗಲ್ಲುಗಳು

ರಾಷ್ಟ್ರೀಯ ಹೆದ್ದಾರಿಗಳಲ್ಲಿ ನೀವು ಹಳದಿ ಕಲರ್‌ನ ಮೈಲುಗಲ್ಲುಗಳನ್ನೂ ಸಹ ನೋಡಿರಬಹುದು. ಅಂದರೆ ನೀವು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದೀರಿ ಎಂದು ಅರ್ಥ. ಭಾರತದಲ್ಲಿ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸುವುದು ಮತ್ತು ನಿರ್ವಹಿಸುವುದು ಕೇಂದ್ರ ಸರ್ಕಾರ.

ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (Airports Authority of India) ದಲ್ಲಿ ಖಾಲಿ ಇರುವ ಜೂನಿಯರ್ ಅಸಿಸ್ಟೆಂಟ್ ಹುದ್ದೆಗೆ ಅಧಿಸೂಚನೆಯನ್ನು (Notification) ಹೊರಡಿಸಲಾಗಿದೆ. ಈ ಹುದ್ದೆಗಳಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

1 ಹುದ್ದೆಯ ಹೆಸರು :

ಜೂನಿಯರ್ ಅಸಿಸ್ಟೆಂಟ್

2 ಒಟ್ಟು ಹುದ್ದೆಗಳು :

89

ವಿದ್ಯಾರ್ಹತೆ :

ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ SSLC, PUC ಮತ್ತು ಡಿಪ್ಲೊಮಾ (Deploma) ವನ್ನು ಪೂರ್ಣಗೊಳಿಸಿರಬೇಕು. ವಯೋಮಿತಿ : ಅಭ್ಯರ್ಥಿಯು 01-11-2024 ರಂತೆ

ಕನಿಷ್ಠ 18 ವರ್ಷಗಳನ್ನು ಮತ್ತು

ಗರಿಷ್ಠ 30 ವರ್ಷಗಳನ್ನು ಹೊಂದಿರಬೇಕು.

OBC ಅಭ್ಯರ್ಥಿಗಳು : 3 ವರ್ಷಗಳು.

SC/ST ಅಭ್ಯರ್ಥಿಗಳು : 5 ವರ್ಷಗಳು.

ಅರ್ಜಿಶುಲ್ಕ :

ಸಾಮಾನ್ಯ/OBC/ಇಡಬ್ಲ್ಯೂಎಸ್ ಅಭ್ಯರ್ಥಿಗಳು : ರೂ. 1000/-

ಮಹಿಳೆಯರು/SC/ST/ಮಾಜಿ ಸೈನಿಕರ ಅಭ್ಯರ್ಥಿಗಳಿಗೆ : ಶುಲ್ಕ ಇರುವುದಿಲ್ಲ.

ಪಾವತಿ ವಿಧಾನ : ಆನ್‌ಲೈನ್ (Online).

ವೇತನ ಶ್ರೇಣಿ :

ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ನೇಮಕಾತಿ ಅಧಿಕೃತ ಅಧಿಸೂಚನೆಯ ಪ್ರಕಾರ, ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.31,000/- ರಿಂದ ರೂ.92,000/-ರವರೆಗೆ (ಪ್ರತಿ ತಿಂಗಳು) ವೇತನವನ್ನು ನಿಗದಿಪಡಿಸಲಾಗಿದೆ.

ಕಂಪ್ಯೂಟರ್ ಆಧಾರಿತ ಪರೀಕ್ಷೆ (Computer-based test) ಮತ್ತು ಸಂದರ್ಶನ (Interview) ಮೂಲಕ ಆಯ್ಕೆ ಮಾಡಲಾಗುತ್ತದೆ. ಹುದ್ದೆಯ ಸ್ಥಳ : ಅಖಿಲ ಭಾರತ.

ಅರ್ಜಿಸಲ್ಲಿಸುವ ಕ್ರಮಗಳು :

ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ನೀವು ಅರ್ಜಿ ಸಲ್ಲಿಸಲಿರುವ AAI ನೇಮಕಾತಿ ಅಥವಾ ವೃತ್ತಿಗಳನ್ನು ಪರಿಶೀಲಿಸಿ. Junior Assistant ಉದ್ಯೋಗಗಳ ಅಧಿಸೂಚನೆಯನ್ನು ತೆರೆಯಿರಿ ಮತ್ತು ಅರ್ಹತೆಯನ್ನು ಪರಿಶೀಲಿಸಿ. ಅರ್ಜಿ ನಮೂನೆಯ ಸಂಖ್ಯೆ/ಸ್ವೀಕಾರ ಸಂಖ್ಯೆ (Form number/Acceptance number) ಯನ್ನು ಸುರಕ್ಷಿತವಾಗಿಡಿ.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಅಧಿಕೃತ ವೆಬ್‌ಸೈಟ್‌ (Official website) ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ (Online) ನಲ್ಲಿ ಅರ್ಜಿ ಸಲ್ಲಿಸಬಹುದು.

ಪ್ರಮುಖ ದಿನಾಂಕಗಳು :

ಅರ್ಜಿ ಸಲ್ಲಿಕೆಯ ಆರಂಭಿಕ ದಿನಾಂಕ : 05 March 2025.

ಅರ್ಜಿ ಸಲ್ಲಿಕೆಯ ಅಂತಿಮ ದಿನಾಂಕ : 11 April 2025.

ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ `ಹಳೆಯ ಡಿಫೈನ್ ಪಿಂಚಣಿ' ಸೌಲಭ್ಯ : ಸರ್ಕಾರದಿಂದ ಮಹತ್ವದ ಆದೇಶ.

2005-06 ಮತ್ತು 2006-07 ನೇ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು ದಿನಾಂಕ: 01-04-2006 ರ ಪೂರ್ವದಲ್ಲಿ ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆ ಹೊಂದಿ ಆ ದಿನಾಂಕದಿಂದ ಅಥವಾ ನಂತರದಲ್ಲಿ ಸೇವೆಗೆ ಸೇರಿದ ಶಿಕ್ಷಕರರು ಹಳೆಯ ಡಿಫೈನ್ ಪಿಂಚಣಿ ಸೌಲಭ್ಯಕ್ಕೆ ಒಳಪಡಿಸುವ ಬಗ್ಗೆ ರಾಜ್ಯ ಸರ್ಕಾರವು ಮಹತ್ವದ ಆದೇಶ ಹೊರಡಿಸಿದೆ.

 ಸಂಬಂದಿಸಿದಂತೆ, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು ದಿನಾಂಕ: 01-04-2006 ರ ಪೂರ್ವದಲ್ಲಿ ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆ ಹೊಂದಿ, ಆ ದಿನಾಂಕದಿಂದ ಅಥವಾ ನಂತರದಲ್ಲಿ ಸೇವೆಗೆ ಸೇರಿದ ಶಿಕ್ಷಕರುಗಳನ್ನು ಹಳೆಯ ಡಿಫ್ರೆಂಡ್ ಪಿಂಚಣಿ ಸೌಲಭ್ಯಕ, ಒಳಪಡಿಸುವ ಸಂಬಂಧ, ಬೆಂಗಳೂರು ಮತ್ತು ಮೈಸೂರು ವಿಭಾಗದ ಎಲ್ಲಾ ಜಿಲ್ಲಾ ಉಪನಿರ್ದೇಶಕರು ಸಲ್ಲಿಸಿದ್ದ ವಸ್ತಾವನೆಗಳನ್ನು ಉಲ್ಲೇಖ-02 ರ ಪತ್ರದಲ್ಲಿ ಅಡಕಗೊಳಿಸಿ ಸಲ್ಲಿಸಲಾಗಿತ್ತು

ಈ ಸಂಬಂಧ ಉಲ್ಲೇಖ-03 ರ ಪತ್ರದಲ್ಲಿ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಗೆ ಸರ್ಕಾರದ ಆದೇಶ ಸಂಖ್ಯೆ ಅಇ-ಪಿಇಎನ್/99/2024 ದಿನಾಂಕ 24-01-2024 ರಸ್ತೆಯ ಎನ್.ಪಿ.ಎಸ್ ನಿಂದ ಒಪಿಎಸ್ ಗೆ ಒಳಪಡುವ ಎಲ್ಲಾ ಗ್ರೂಪ್ ಎ ಬಿ. ಸಿ ಮತ್ತು ಡಿ ನೌಕರರ ಇಲಾಖಾವಾರು ಕ್ರೋಡೀಕೃತ ನಮೂನೆ 01 & 02) ರಲ್ಲಿ ವಿವರಗಳನ್ನು ಇಲಾಖಾ ಮುಖ್ಯಸ್ಮರ ಸಹಿಯೊಂದಿಗೆ ದೃಢೀಕರಿಸಿ ಸಲ್ಲಿಸುವಂತಿ ಸೂಚಿಸಲಾಗಿದೆ.

ಅದರಂತೆ, ಬೆಂಗಳೂರು ಮತ್ತು ಮೈಸೂರು ವಿಭಾಗದ ಶಾಲಾ ಶಿಕ್ಷಣ ಇಲಾಖೆಯ ಎಲ್ಲಾ ಉಪನಿರ್ದೇಶಕರು ತಮ್ಮ ಶಿಫಾರಸ್ಸಿನೊಂದಿಗೆ ಮಾಹಿತಿಯನ್ನು ಈ ಕಛೇರಿಗೆ ಸಲ್ಲಿಸಿದ್ದು ಸದರಿ ಮಾಹಿತಿಯನ್ನು ಅಗತ್ಯ ದೃಡೀಕರಣದೊಂದಿಗೆ ಸರ್ಕಾರದ ಮುಂದಿನ ಕ್ರಮಕ್ಕಾಗಿ ಸಲ್ಲಿಸಿದೆ.

ಶುಕ್ರವಾರ, ಮಾರ್ಚ್ 14, 2025

retirement plan

ನಿವೃತ್ತಿಯ ನಂತರ ನೆಮ್ಮದಿಯ ಜೀವನವನ್ನ ನಡೆಸಲು ನಮಗೆ ಹಣದ ಅಗತ್ಯ ಹೆಚ್ಚಿರುತ್ತದೆ. ನಿವೃತ್ತಿಯ ನಂತರ ಯಾವುದೇ ಸ್ಥಿರ ಆದಾಯವಿಲ್ಲದೇ ಹಣಕಾಸು ನಿರ್ವಹಣೆ ಮಾಡುವುದು ಕಷ್ಟವಾಗಬಹುದು.

ಹೀಗಾಗಿ ನೀವು ನಿಮ್ಮ ನಿವೃತ್ತಿಗಾಗಿ ಈಗಲೇ ಹಣವನ್ನ ಉಳಿತಾಯ ಮಾಡಲು ಆರಂಭ ಮಾಡುವುದು ಉತ್ತಮ. ಆದ್ರೆ ಹೇಗೆ ಆರಂಭ ಮಾಡುವುದು ಎಂಬ ಗೊಂದಲ ನಮಗೆ ಹೆಚ್ಚಿರುತ್ತದೆ. ಅದಕ್ಕಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ ಅವುಗಳು ಯಾವುವು ಎಂಬ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ...

ಅನೇಕ ಜನರು ಈಗಾಗಲೇ ನಿವೃತ್ತಿಗಾಗಿ ಹಣವನ್ನು ಕೂಡಿಡಲು ಆರಂಭ ಮಾಡುತ್ತಿದ್ದಾರೆ. ಜೊತೆಗೆ ನಿವೃತ್ತಿಗಾಗಿ ತಯಾರಿಗಳನ್ನ ಕೂಡ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಬ್ಯಾಂಕ್‌ಬಜಾರ್ ಮನಿಮೂಡ್ 2025ರ ಸಮೀಕ್ಷೆಯ ವರದಿ ಪ್ರಕಾರ ಈಗಾಗಲೇ ಶೇಕಡಾ 58 ರಷ್ಟು ಜನರು ನಿವೃತ್ತಿ ಕಾರ್ಪಸ್‌ ಅನ್ನು ಈಗಾಗಲೇ ಸಿದ್ಧಪಡಿಸಿದ್ದಾರೆ ಎಂದು ವರದಿ ತಿಳಿಸಿದೆ. ಅಲ್ಲದೆ ಇದು ಉತ್ತಮ ಸಭ್ಯಸವನ್ನ ಸೂಚಿಸುತ್ತದೆ. ಹಾಗೆ ಭಾರತದಲ್ಲಿ ಮೂರನೇ ಎರಡು ಭಾಗದಷ್ಟು ಜನರು ಸಧ್ಯದಲ್ಲೇ ನಿವೃತ್ತಯನ್ನ ಹೊಂದಲಿದ್ದಾರೆ ಎಂದು ವರದಿ ತಿಳಿಸಿದೆ. ಸಮಯ ಮತ್ತು ಹಣ ಮುಖ್ಯವಾಗುತ್ತದೆ ಈ ನಿವೃತ್ತಿ ಯೋಜನೆ ಎರಡು ಪ್ರಮುಖ ಅಂಶಗಳ ಮೇಲೆ ನಿಂತಿದೆ. ಒಂದು ಸಮಯ ಮತ್ತೊಂದು ಹಣ. ನಿವೃತ್ತಯ ವೇಳೆ ಉತ್ತಮ ಆಯೋಗ್ಯದ ಜೊತೆಜೊತೆಗೆ ಉತ್ತಮ ಆರ್ಥಿಕ ಸ್ಥಿರತೆಯನ್ನ ಕೂಡ ಕಾಪಾಡಿಕೊಳ್ಳಬೇಕು. ನಿವೃತ್ತಿಯ ಸಮಯದಲ್ಲಿ ನೆಮ್ಮದಿಯ ಜೀವನ ನಡೆಸಲು ನೀವು ನಿಮ್ಮ ಹಣವನ್ನ ಉಳಿತಾಯ ಮಾಡಲು ಬೇಗನೇ ಆರಂಭಿಸುವುದು ಮುಖ್ಯ.

ನಿಮ್ಮ ದಿನನಿತ್ಯದ ಜೀವನದಲ್ಲಿ ಸಾಕಷ್ಟು ತೊಂದರೆಗಳು ಎದುರಾಗಬಹುದು. ಅಲ್ಲದೆ ನಿಮ್ಮ ಖರ್ಚುಗಳು ಕೂಡ ಹೆಚ್ಚಾಗಬಹುದು. ಇದರಿಂದಾಗಿ ನೀವು ಹಣದುಬ್ಬರಕ್ಕೆ ತುತ್ತಾಗಬಹುದು. ಅಂತಹ ಸಮಯದಲ್ಲಿ ಜನರು ಸಾಲದ ಮೊರೆ ಹೋಗಬಹುದು. ಅಂತಹ ಪರಿಸ್ಥಿತಿಗಳನ್ನ ತಪ್ಪಿಸಲು ಸುರಕ್ಷಿತ ಭವಿಷ್ಯಕ್ಕಾಗಿ ಸರಿಯಾದ ಕ್ರಮಗಳನ್ನ ತೆಗೆದುಕೊಳ್ಳುವುದು ಬಹಳ ಮುಖ್ಯ. ಹೆಚ್ಚಿನ ಪ್ರಯೋಜನಗಳಿಗಾಗಿ ಬೇಗ ಆರಂಭಿಸಿ ನೀವು ನಿಮ್ಮ 20 ಮತ್ತು 30ರ ದಶಕದಲ್ಲಿ ನಿಮ್ಮ ನಿವೃತ್ತಿ ದೂರವಿದೆ ಎನ್ನಿಸಬಹುದು ಆದ್ರೂ ಕೂಡ ನೀವು ಆವಾಗ್ಲೆ ಆರಂಭ ಮಾಡುವುದು ಉತ್ತಮ. ಕೆಲವರು ನಿವೃತ್ತಿ ಉಳಿತಾಯವನ್ನ ವಿಳಂಬಗೊಳಿಸುತ್ತಾರೆ. ಆದ್ರೆ ನೀವು ಎಷ್ಟು ಬೇಗ ಆರಂಭ ಮಡುತ್ತೀರೋ ಅಷ್ಟು ಪ್ರಯೋಜನಗಳನ್ನ ಗಳಿಸಬಹುದು. ಬೇಗ ಆರಂಭ ಮಾಡುವ ಮೂಲಕ ನೀವು ಹೆಚ್ಚಿನ ಆದಾಯವನ್ನ ಕೂಡ ಗಳಿಸಬಹುದು.

ನಿವೃತ್ತಿಯ ಅಗತ್ಯಗಳನ್ನ ಅಂದಾಜಿಸಿ ನೀವು ನಿಮ್ಮ ನಿವೃತ್ತಿ ಹಣವನ್ನ ಉಳಿತಾಯ ಮಾಡುವ ಮೊದಲು ನಿಮ್ಮ ನಿವೃತ್ತಿಯ ಅಗತ್ಯಗಳ ಬಗ್ಗೆ ತಿಳಿಯಿರಿ. ಉತ್ತಮ ಜೀವನಶೈಲಿಗಾಗಿ ಬೇಕಾಗುವ ಕಾರ್ಪಸ್‌ ಅನ್ನು ಅಂದಾಜು ಮಾಡಿ. ನಂತರ ಹಣವನ್ನ ಉಳಿತಾಯ ಮಾಡಲು ಆರಂಭಿಸಿ. ವೈದ್ಯಕೀಯ ವೆಚ್ಚಗಳು, ಸಾಲಗಳು, ಹಣದುಬ್ಬರ ಸೇರಿದಂತೆ ಎಲ್ಲಾ ಅಂಶಗಳನ್ನ ಗಮನದಲ್ಲಿಟ್ಟುಕೊಂಡು ನಿವೃತ್ತಿಯ ಅಗತ್ಯಗಳನ್ನ ಅಂದಾಜಿಸಬೇಕು. ನಿಮಗೆ ಈಗ 30 ವರ್ಷ ಆಗಿದ್ದರೆ ನೀವು ಈಗ 50,000ಗಳನ್ನ ಖರ್ಚು ಮಾಡುತ್ತಿದ್ದರೆ, ನಿಮಗೆ 60 ವರ್ಷಗಳಾದ ಮೇಲೆ ಆ ಖರ್ಚು 2.22 ಲಕ್ಷಕ್ಕೆ ಏರಿಕೆಯಾಗಬಹುದು. ಅಲ್ಲದೆ ನಿಮ್ಮ ನಿವೃತ್ತಿಯ ನಂತರ ನಿಮ್ಮ ಅಗತ್ಯಗಳು ಹೆಚ್ಚಾಗಬಹುದು. ಹೀಗಾಗಿ ಸರಿಯಾಗಿ ಅಂದಾಜಿಸಿ ಉಳಿತಾಯವನ್ನ ಮಾಡಬೇಕು.

ಸರಿಯಾದ ಹೂಡಿಕೆ ಆಯ್ಕೆಯನ್ನ ಆರಿಸಿ ನಿವೃತ್ತಿಗಾಗಿ ನಿಧಿಯನ್ನ ನಿರ್ಮಿಸುವಾಗ ಹೂಡಿಕೆಗಳನ್ನ ಆಯ್ಕೆ ಮಾಡುವುದು ಉತ್ತಮ ಅದರಲ್ಲೂ ನೀವು ಎಲ್ಲಿ ಹೂಡಿಕೆ ಮಾಡುತ್ತೀರಿ ಎನ್ನುವುದು ಕೂಡ ಮುಖ್ಯವಾಗುತ್ತದೆ. ಭವಿಷ್ಯ ನಿಧಿ(PF): ಇದು ವಿಶ್ವಾಸಾರ್ಹ ಹೂಡಿಕೆ ಯೋಜನೆ ಇದಾಗಿದೆ. ಅಲ್ಲದೆ ದಿರ್ಘಕಾಲದ ಉಳಿತಾಯವನ್ನ ನೀಡುತ್ತದೆ. ಇಕ್ವಿಟಿ ಹೂಡಿಕೆಗಳು (ಸ್ಟಾಕ್‌ಗಳು ಅಥವಾ SIPಗಳು): ಇದು ಕೂಡ ಹೂಡಿಕೆಗೆ ಉತ್ತಮ ಆಯ್ಕೆಯಾಗಿದೆ. ಅಲ್ಲದೆ ಇದು ಸಮಯಕಳೆದಂತೆ ಉತ್ತಮ ಆದಾಯವನ್ನ ನೀಡುತ್ತದೆ.

ರಾಷ್ಟ್ರೀಯ ಪಿಂಚಣಿ ಯೋಜನೆ (NPS): ಇದು ಸುರಕ್ಷಿತ ಹೂಡಿಕೆ ಯೋಜನೆಗಳಲ್ಲಿ ಒಂದಾಗಿದೆ. ತೆರಿಗೆ ಪ್ರಯೋಜನಗಳ ಜೊತೆಗೆ ಸರ್ಕಾರ ಬೆಂಬಲಿತ ಆಯ್ಕೆ ಇದಾಗಿದೆ. ಸಾರ್ವಜನಿಕ ಭವಿಷ್ಯ ನಿಧಿ (PPF): ಸುರಕ್ಷಿತ ಹೂಡಿಕೆ ಆಯ್ಕೆ ಇದಾಗಿದೆ. ನಿವೃತ್ತಿಗಾಗಿ ಉಳಿತಾಯ ಮಾಡುವವರಿಗೆ ಉತ್ತಮ ಆಯ್ಕೆಯಾಗಿದೆ. ನೀವು ಹೂಡಿಕೆ ಮಾಡುವ ಮೂನ್ನ ತಿಳಿದ ತಜ್ಞರ ಸಲಹೆ ಪಡೆಯುವುದು ಉತ್ತಮ. ನಿಮ್ಮ ಹಣಕಾಸಿನ ಗುರಿಗಳಿಗೆ ತಕ್ಕಂತೆ ನಿಮಗೆ ಹೂಡಿಕೆ ಮಾಡಲು ಸಹಾಯವಾಗುತ್ತದೆ. ನಿಯಮಿತ ಮತ್ತು ಸ್ಥಿರವಾದ ಹೂಡಿಕೆ ಯೋಜನೆಗಳನ್ನ ಆಯ್ಕೆ ಮಾಡಿಕೊಂಡು ಹೂಡಿಕೆಯನ್ನ ಆರಂಭಿಸಬೇಕು.

ಇದು ನಿಮಗೆ ಸಮಯ ಕಳೆದಂತೆ ಗಣನೀಯ ಕಾರ್ಪಸ್‌ ಅನ್ನು ಗಳಿಸಲು ಸಹಾಯ ಮಾಡುತ್ತದೆ. ಉತ್ತಮ ಯೋಜನೆಯೊಂದಿಗೆ ನೀವು ನಿಮ್ಮ ನಿವೃತ್ತಿಗಾಗಿ ಹಣವನ್ನ ಕೂಡಿಡುವ ಮೂಲಕ ನೀವು ನಿವೃತ್ತಿ ಸಮಯದಲ್ಲಿ ನೆಮ್ಮದಿಯ ಜೀವನವನ್ನ ಕಟ್ಟಿಕೊಳ್ಳಬಹುದು.

ಈಗ ಜಾರಿಯಲ್ಲಿ ಇರುವ ಪಿಂಚಣಿ ಯೋಜನೆಗಳು

ಭಾರತದಲ್ಲಿ ಎನ್ ಪಿಎಸ್ ಯೋಜನೆ ಜಾರಿಯಲ್ಲಿದೆ. ಇದಲ್ಲದೆ ಅಸಂಘಟಿತ ವಲಯಕ್ಕಾಗಿ ಸರ್ಕಾರಿ ಪಿಂಚಣಿ ಯೋಜನೆ ಜಾರಿಯಲ್ಲಿವೆ. ಇವುಗಳಲ್ಲಿ ಒಂದು ಅಟಲ್ ಪಿಂಚಣಿ ಯೋಜನೆಯಾಗಿದೆ.

ಅಟಲ್ ಪಿಂಚಣಿ ಯೋಜನೆ ಎಂದರೇನು?

ಅಟಲ್ ಪಿಂಚಣಿ ಯೋಜನೆ (Atal Pension Yojana) ಅತ್ಯಂತ ಉತ್ತಮ ಆಯ್ಕೆ. ಅದರಲ್ಲೂ ವಿಶೇಷವಾಗಿ ನಿವೃತ್ತಿಯ ನಂತರ ಪಿಂಚಣಿ ಆವಶ್ಯಕತೆ ಇರುವವರಿಗೆ ಹೆಚ್ಚಿನ ಅನುಕೂಲವಿದೆ.60 ವರ್ಷ ತುಂಬಿದ ವ್ಯಕ್ತಿಗೆ ಪ್ರತಿ ತಿಂಗಳು 1,000 ರಿಂದ 5,000 ರೂ.ಗಳವರೆಗೆ ಪಿಂಚಣಿ ಸಿಗುತ್ತದೆ.ಆದರೆ ಈ ಯೋಜನೆಯಲ್ಲಿ ಪ್ರತಿ ತಿಂಗಳು 210 ರೂಪಾಯಿ ಠೇವಣಿ ಇಡಬೇಕಾಗುತ್ತದೆ.

ಶ್ರಮ ಯೋಗಿ ಮಾನ್ ಧನ್ ಯೋಜನೆ

ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆ (SYM) ದೇಶದ ಬೀದಿ ಬದಿ ವ್ಯಾಪಾರಿಗಳು, ಮನೆ ಕೆಲಸಗಾರರು ಮತ್ತು ಕಾರ್ಮಿಕರಿಗೆ ಆರ್ಥಿಕ ಸುರಕ್ಷತೆ ಒದಗಿಸಲು ಇರುವಂತಹ ಯೋಜನೆ. ಈ ಯೋಜನೆಯು ದೇಶದ ಅಸಂಗತಿತ ಕ್ಷೇತ್ರದ ಕಾರ್ಮಿಕರಿಗೆ, ವಿಶೇಷವಾಗಿ ಅವಶ್ಯಕತೆಯಲ್ಲಿರುವವರಿಗೆ ನಿವೃತ್ತಿ ನಂತರದ ಪಿಂಚಣಿಯನ್ನು ನೀಡುತ್ತದೆ.

ಕಿಸಾನ್ ಮಾನ್ ಧನ್ ಯೋಜನೆ

ಕಿಸಾನ್ ಮಾನ್ ಧನ್ ಯೋಜನೆ (Kisan Mandhan Yojana) ಕರ್ನಾಟಕ ಸೇರಿದಂತೆ ದೇಶಾದ್ಯಾಂತ ಕೃಷಿಕರಿಗೆ ಆರ್ಥಿಕತೆಯನ್ನು ಒದಗಿಸಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯೋಜನೆ. ಈ ಯೋಜನೆಯು ಕೃಷಿಕರ ನಿವೃತ್ತಿ ನಂತರದ ಆರ್ಥಿಕ ಬೆಂಬಲ ನೀಡಿದ ಸಾಲದ ಭಾರವನ್ನು ಕಡಿಮೆ ಮಾಡಲು ಸಹಾಯಗವಾಗುತ್ತದೆ.

ಇದರಲ್ಲಿ, ಹೂಡಿಕೆದಾರರಿಗೆ 60 ವರ್ಷ ತುಂಬಿದ ನಂತರ, ಸರ್ಕಾರ ಪ್ರತಿ ತಿಂಗಳು 3000 ರೂಪಾಯಿ ಪಿಂಚಣಿ ನೀಡುತ್ತದೆ.

ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್)

ಏಕೀಕೃತ ಪಿಂಚಣಿ ಯೋಜನೆ (Unified Pension Scheme)ಯು ಏಪ್ರಿಲ್ 1, 2025 ರಿಂದ ಜಾರಿಗೆ ಬರಲಿರುವಂತಿದ್ದು, ಇದು ದೇಶಾದ್ಯಾಂತ ಉದ್ಯೋಗಿಗಳಿಗೆ ಪಿಂಚಣಿಯ ವ್ಯವಸ್ಥೆಯನ್ನು ಸುಧಾರಿಸಲು ಮತ್ತು ನಿವೃತ್ತಿ ನಂತರವೂ ಆರ್ಥಿಕ ಸುರಕ್ಷತೆ ಒದಗಿಸಲು ಮಹತ್ವದ ಯೋಜನೆ ಆಗಿದೆ. ಈ ಯೋಜನೆಯಡಿಯಲ್ಲಿ, ಒಬ್ಬ ಉದ್ಯೋಗಿ 25 ವರ್ಷಗಳ ಕಾಲ ಕೆಲಸ ಮಾಡಿದ್ದರೆ, ನಿವೃತ್ತಿಯ ಮೊದಲು, ಕೆಲಸದ ಕೊನೆಯ 12 ತಿಂಗಳ ಮೂಲ ವೇತನದ ಶೇಕಡಾ 50ರಷ್ಟು ಹಣ ಪಿಂಚಣಿ ರೂಪದಲ್ಲಿ ಅವರಿಗೆ ಸಿಗುತ್ತದೆ.

ಹೀಗೆ ಹಲವಾರು ಸರ್ಕಾರಿ ಪಿಂಚಣಿ ವ್ಯವಸ್ಥೆ ನಮ್ಮ ದೇಶದಲ್ಲಿ ಜಾರಿಯಲ್ಲಿ ಇವೆ. ಇದರಿಂದ ಕೋಟ್ಯಾಂತರ ಜನ ಇದರ ಅನುಕೂಲ ಪಡೆದುಕೊಂಡ ಆರ್ಥಿಕವಾಗಿ ಸಬಲರಾಗಿದ್ದಾರೆ.

ಗುರುವಾರ, ಮಾರ್ಚ್ 13, 2025

NPS Calculator: ನಿವೃತ್ತಿ ನಂತರ ನೀವೆಷ್ಟು ಪೆನ್ಷನ್ ಪಡೆಯುತ್ತೀರಿ ಎಂದು ತಿಳಿಯಬೇಕೆ? ಈ ರೀತಿ ಲೆಕ್ಕ ಹಾಕಿ..!

NPS Calculator: ನಿವೃತ್ತಿ ನಂತರ ನೀವೆಷ್ಟು ಪೆನ್ಷನ್ ಪಡೆಯುತ್ತೀರಿ ಎಂದು ತಿಳಿಯಬೇಕೆ? ಈ ರೀತಿ ಲೆಕ್ಕ ಹಾಕಿ..!

ನ್ಯಾಷನಲ್ ಪೆನ್ಷನ್ ಸಿಸ್ಟಮ್‌ ಒಂದು ಮಹತ್ವದ ಯೋಜನೆಯಾಗಿದೆ. ಭಾರತ ಸರ್ಕಾರದಿಂದ ಪ್ರಾಯೋಜಿತವಾದ ಈ ಯೋಜನೆ, ನಿವೃತ್ತಿ ಹೂಡಿಕೆಯನ್ನು ಪ್ರತಿನಿಧಿಸುತ್ತದೆ. ನಿವೃತ್ತಿ ನಂತರದ ಬದುಕಿಗೆ ಇದೊಂದು ಉಪಯೋಗಕರ ಯೋಜನೆಯಾಗಿದ್ದು, ಇದರ ಮುಖ್ಯ ಉದ್ದೇಶ ನಿವೃತ್ತಿ ಬಳಿಕ ಹಣಕಾಸು ಭದ್ರತೆ ಒದಗಿಸುವುದಾಗಿದೆ.

ಅಲ್ಲದೇ ಇದೊಂದು ಕಾಂಟ್ರಿಬ್ಯೂಷನ್‌ ಆಧಾತಿತ ಯೋಜನೆಯಾಗಿದೆ. ಈಗ ಇಂತಿಷ್ಟು ಮೊತ್ತವನ್ನು ಹೂಡಿಕೆ ಮಾಡಿದರೆ, ಈ ಹೂಡಿಕೆಗೆ ಲಭ್ಯವಾಗುವ ಲಾಭದ ಆಧಾರದಲ್ಲಿ ನಿವೃತ್ತಿ ವೇಳೆಗೆ ಪೆನ್ಷನ್‌ ಲಭಿಸುವ ಒಂದು ಯೋಜನೆಯಾಗಿದೆ.

ನಿವೃತ್ತಿ ನಂತರದ ಬದುಕಿಗೆ ಆರ್ಥಿಕ ಭದ್ರತೆ ಒದಗಿಸುವ ಈ ಯೋಜನೆಯನ್ನು ಕ್ಯಾಲ್ಕುಲೇಟ್‌ ಮಾಡುವುದು ಉತ್ತಮ..ಅಂದರೆ ಎನ್‌ಪಿಎಸ್‌ ಕ್ಯಾಲ್ಕುಲೇಟರ್‍‌ ಮೂಲಕ ನಿಮ್ಮ ನಿವೃತ್ತಿ ನಂತರದ ಪೆನ್ಷನ್‌ ಲೆಕ್ಕಹಾಕುವುದು. ನೀವು ನಿವೃತ್ತಿ ಸಮಯದಲ್ಲಿ ಸಂಗ್ರಹಿಸಿಕೊಳ್ಳುವ ಒಟ್ಟು ಮೊತ್ತ, ಹಾಗೂ ಪ್ರ್‍ತಿ ಪ್ರತಿ ತಿಂಗಳ ಪೆನ್ಷನ್ ಎಷ್ಟು ಸಿಗಬಹುದು ಎಂಬುದರ ಅಂದಾಜು ಲಭಿಸುತ್ತದೆ. ನಿಮ್ಮ ನಿವೃತ್ತಿಯ ವೇಳೆಗೆ ಸಂಗ್ರಹಿಸಲಾದ ಮೊತ್ತವು ನಿಮ್ಮ ಹೂಡಿಕೆಯ ಮೊತ್ತ, ನಿಮ್ಮ ಹೂಡಿಕೆಯ ಅವಧಿ, ಯೋಜನೆಯಿಂದ ಲಭ್ಯವಿರುವ ವಾರ್ಷಿಕ ಲಾಭದ ಶೇಕಡ ಪ್ರಮಾಣದ ಮೇಲೆ ಅವಲಂಬಿತವಾಗಿರುತ್ತದೆ.

NPS ಕ್ಯಾಲ್ಕುಲೇಟರ್ ಹೇಗೆ ಕಾರ್ಯನಿರ್ವಹಿಸುತ್ತದೆ?

NPS ಕ್ಯಾಲ್ಕುಲೇಟರ್ ಚಕ್ರಬಡ್ಡಿ ಲೆಕ್ಕಾಚಾರದ ಆಧಾರದಲ್ಲಿ ನಿಮ್ಮ ಹೂಡಿಕೆ ಮೊತ್ತವನ್ನು ಲೆಕ್ಕ ಹಾಕುತ್ತದೆ. ಉದಾಹರಣೆಗೆ ಒಬ್ಬ ವ್ಯಕ್ತಿಯ ವಯಸ್ಸು 30 ವರ್ಷ ಆಗಿದ್ದರೆ, ನಿವೃತ್ತಿ ವಯಸ್ಸು 60 ವರ್ಷಕ್ಕೆ ಲೆಕ್ಕ ಹಾಕಬೇಕಾಗುತ್ತದೆ. ಆ ವ್ಯಕ್ತಿಯ ಮಾಸಿಕ ಹೂಡಿಕೆ ₹5,000 ಎಂದರೆ, ನಿರೀಕ್ಷಿತ ಲಾಭದ ಶೇಕಡ ಪ್ರಮಾಣ ವರ್ಷಕ್ಕೆ 10% ಆಗಿರುತ್ತದೆ. ಹಾಗೆಯೇ ಪೆನ್ಷನ್‌ ಪ್ಲಾನ್‌ಗೆ ಹೂಡಿಕೆ ಮಾಡಬೇಕಾದ ಶೇಕಡ ಪ್ರಮಾಣ 40% ಆಗಿರುತ್ತದೆ. ನಿರೀಕ್ಷಿತ ಆನುಯಿಟಿ ಲಾಭದ ಶೇಕಡ ಪ್ರಮಾಣ 6% ಆಗಿರುತ್ತದೆ. ನಿವೃತ್ತಿ ಸಮಯದಲ್ಲಿ ಸಿಗುವ ಒಟ್ಟು ಮೊತ್ತ ಸುಮಾರು ₹1.14 ಕೋಟಿಗಳಾಗಿದ್ದರೆ, ಪ್ರತಿ ತಿಂಗಳ ನಿರೀಕ್ಷಿತ ಪೆನ್ಷನ್ ಮೊತ್ತ ಸುಮಾರು ₹22,800 ಆಗಿರಬಹುದು ಎಂದು ಅಂದಾಜಿಸಬಹುದಾಗಿದೆ.

NPS ಕ್ಯಾಲ್ಕುಲೇಟರ್ ಬಳಸಲು ಏನು ಅರ್ಹತೆ ಇರಬೇಕು..?

ಎನ್‌ಪಿಎಸ್‌ ಕ್ಯಾಲ್ಕುಲೇಟರ್‍‌ನ ಯಾರು ಬೇಕಾದರೂ ಬಳಸಬಹುದು. ಆದರೆ ಈ ಯೋಜನೆಯಲ್ಲಿ ಹೂಡಿಕೆ ಮಾಡಬೇಕೆಂದರೆ ಒಂದಷ್ಟು ಅರ್ಹತೆಗಳಿರಬೇಕು. ಅಂದರೆ ಇಲ್ಲಿ ಹೂಡಿಕೆ ಮಾಡುವ ವ್ಯಕ್ತಿಯು ಭಾರತೀಯ ನಾಗರಿಕರಾಗಿರಬೇಕು. ಆ ವ್ಯಕ್ತಿಗೆ 18 ರಿಂದ 60 ವರ್ಷಗಳ ನಡುವೆ ವಯಸ್ಸು ಇರಬೇಕು. KYC ದಾಖಲೆಗಳ ಮಾನ್ಯತೆ ಇರಬೇಕು.

ಈ ಅರ್ಹತೆಗಳಿದ್ದರೆ ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ನಿಮ್ಮ ಭವಿಷ್ಯದ ನಿವೃತ್ತಿ ಭದ್ರತೆಯನ್ನು ಸುಸ್ಥಿರಗೊಳಿಸಬಹುದು. ಹಾಗೂ ಎನ್‌ಪಿಎಸ್‌ ಉತ್ತಮ ಆಯ್ಕೆಯಾಗಿದ್ದು ಇದು ಉದ್ದೀರ್ಘ ಅವಧಿಯ ವೃದ್ಧಿಗೆ ಸಹಕಾರಿಯಾಗುತ್ತದೆ.

NPS ಕ್ಯಾಲ್ಕುಲೇಟರ್ ಬಳಸುವ ವಿಧಾನ:

ಎನ್‌ಪಿಎಸ್‌ ಕ್ಯಾಲ್ಕುಲೇಟರ್‍‌ ಬಳಸಲು ಒಂದಷ್ಟು ವಿವರಗಳನ್ನು ಒದಗಿಸಬೇಕಾಗುತ್ತದೆ. ಅವುಗಳಲ್ಲಿ ಪ್ರಮುಖವಾಗಿ..

- ನಿಮ್ಮ ಪ್ರಸ್ತುತ ವಯಸ್ಸು ಮತ್ತು ನಿವೃತ್ತಿ ವಯಸ್ಸು

- ನೀವು ಪ್ರತಿ ತಿಂಗಳು ಹೂಡಿಸುವ ಮೊತ್ತ

- NPS ಹೂಡಿಕೆಯಿಂದ ನೀವು ನಿರೀಕ್ಷಿಸುವ ವಾರ್ಷಿಕ ಲಾಭದ ಶೇಕಡ ಪ್ರಮಾಣ

- ನಿವೃತ್ತಿಯ ನಂತರ ನೀವು ಎಷ್ಟು ವರ್ಷ ಪೆನ್ಷನ್ ಪಡೆಯಲು ಬಯಸುತ್ತೀರಿ

- ನಿವೃತ್ತಿಯ ನಂತರ ನೀವು ಪೆನ್ಷನ್ ಯೋಜನೆಗೆ ಮರುಹೂಡಿಕೆ ಮಾಡುವ ಮೊತ್ತ

NPS ಕ್ಯಾಲ್ಕುಲೇಟರ್ ನಿಮಗೆ ಏನು ತೋರಿಸುತ್ತದೆ?

- ನೀವು ಹೂಡಿಕೆ ಮಾಡಿದ ಮೊತ್ತ ಮತ್ತು ಅದರಿಂದ ಬಂದ ಲಾಭ

- ನಿವೃತ್ತಿ ಸಮಯದಲ್ಲಿ ಒಟ್ಟು ಸಂಗ್ರಹಿಸಿದ ಮೊತ್ತ

- ಪೆನ್ಷನ್ ಪಡೆಯಲು ಮರುಹೂಡಿಕೆ ಮಾಡಿದ ಮೊತ್ತ

- ನೀವು ಪ್ರತಿಮಾಸ ಪಡೆಯುವ ಪೆನ್ಷನ್ ಮೊತ್ತ

ಹೀಗೆ ನಿವೃತ್ತಿ ಬಳಿಕ ನಿಮಗೆ ಸಿಗುವ ಮೊತ್ತ ಎಷ್ಟು ಎಂಬುದನ್ನು, ಈಗಿನಿಂದಲೇ ಲೆಕ್ಕ ಹಾಕಿ ಹೂಡಿಕೆ ಮಾಡಿದರೆ ಉತ್ತಮ. ಎಲ್ಲೋ ಹಣ ಪೋಲಾಗುವ ಬದಲು ಮುಂದೊಂದು ದಿನ ಒಟ್ಟು ದೊಡ್ಡ ಮೊತ್ತ ಸಿಗುತ್ತದೆ ಎಂದಾದರೂ, ಸ್ವಲ್ಪ ಹೆಚ್ಚು ಪ್ರಮಾಣದ ಹಣ ಹೂಡಿಕೆ ಮಾಡಬಹುದು. ಇಂದಿನ ಲೆಕ್ಕಾಚಾರ ಮುಂದಿನ ಭದ್ರತೆಯಾಗಿರುತ್ತದೆ.

state government employees insurance

ಮುಂದಿನ ಮೂರು ತಿಂಗಳ ಅವಧಿಯಲ್ಲಿ ಎಲ್ಲಾ ಸರ್ಕಾರಿ ನೌಕರರು ಈ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ ಎಂದು ಹೇಳಿದ್ದಾರೆ.

ವಿಧಾನಸಭೆಯಲ್ಲಿ ಕಾಗವಾಡ ಶಾಸಕ ಭರಮಗೌಡ ಅಲಗೌಡ ಕಾಗೆ ಕೇಳಿದ್ದ ಪ್ರಶ್ನೆಗೆ ಮುಖ್ಯಮಂತ್ರಿಗಳು ಉತ್ತರ ಕೊಟ್ಟಿದ್ದಾರೆ. ಶಾಸಕರು ರಾಜ್ಯದ ಸರ್ಕಾರಿ ನೌಕರರಿಗೆ ರೂ. 1 ಕೋಟಿಗಳ ಅಪಘಾತ ವಿಮೆಯನ್ನು ಮಾಡಲು ಸರ್ಕಾರ ಯೋಚಿಸಿದೆಯೇ?, ಹಾಗಿದ್ದಲ್ಲಿ, ಎಂದಿನಿಂದ ಜಾರಿಗೆ ತರಲಾಗುವುದು? ಎಂದು ಪ್ರಶ್ನಿಸಿದ್ದರು.

ಸಿದ್ದರಾಮಯ್ಯ ಉತ್ತರ: ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಉತ್ತರದಲ್ಲಿ ರಾಜ್ಯ ಸರ್ಕಾರಿ ನೌಕರರ ಸಾಮಾಜಿಕ ಭದ್ರತೆಯು ಸರ್ಕಾರದ ಪ್ರಮುಖ ವಿಷಯವಾಗಿರುವುದರಿಂದ ಸಾಮಾಜಿಕ ಭದ್ರತೆ ಇದ್ದಲ್ಲಿ, ನೌಕರರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ, ಕಾರ್ಯನಿರ್ವಹಿಸುತ್ತಾರೆ ಎಂದು ಹೇಳಿದ್ದಾರೆ.

ಈಗಾಗಲೇ ಜಾರಿಯಲ್ಲಿರುವ ಸಾಮಾಜಿಕ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಮತ್ತು ಸುಗಮಗೊಳಿಸಲು, ಈ ಕೆಳಕಂಡ ಅಂಶಗಳನ್ನು ಒಳಗೊಂಡ ಪ್ರಸ್ತಾವನೆಗೆ ಸಚಿವ ಸಂಪುಟ ಸಭೆಯು ದಿನಾಂಕ 30.01.2025ರಂದು ಈ ಕೆಳಗಿನಂತೆ ಆದೇಶಿಸಿದೆ ಎಂದು ಹೇಳಿದ್ದಾರೆ.

* ವಿವಿಧ ಬ್ಯಾಂಕುಗಳು ಒದಗಿಸುವ ಸಂಬಳ ಪ್ಯಾಕೇಜ್‌ಗಳ ಅಡಿಯಲ್ಲಿ ಎಲ್ಲಾ ನೌಕರರು. (ಖಾಯಂ/ ಗುತ್ತಿಗೆ/ ಹೊರಗುತ್ತಿಗೆ ಇತ್ಯಾದಿ) ಖಾತೆಗಳನ್ನು ತೆರೆಯಲು/ ಆಯ್ಕೆ ಮಾಡಿಕೊಳ್ಳಲು ಕಡ್ಡಾಯಗೊಳಿಸುವುದು.

* ಬ್ಯಾಂಕ್‌ಗಳು/ ಅಂಚೆ ಕಚೇರಿಗಳು ನೀಡುವ PMJJBY ಮತ್ತು PMSBY ಯೋಜನೆಗಳ ಅಡಿಯಲ್ಲಿ ಸ್ವಯಂಪ್ರೇರಿತವಾಗಿ ವಿಮಾ ರಕ್ಷಣೆಯನ್ನು ಪಡೆಯಲು ಉದ್ಯೋಗಿಗಳನ್ನು ಪ್ರೋತ್ಸಾಹಿಸುವುದು.

* ಬ್ಯಾಂಕ್‌ಗಳು ನೀಡುವ ವಿವಿಧ ಯೋಜನೆಗಳ ಅಡಿಯಲ್ಲಿ ಸ್ವಯಂ ಪ್ರೇರಿತವಾಗಿ ವೈಯಕ್ತಿಕ ಅಪಘಾತ ವಿಮಾ ರಕ್ಷಣೆಯನ್ನು ಪಡೆಯಲು ಉದ್ಯೋಗಿಗಳನ್ನು ಪ್ರೋತ್ಸಾಹಿಸುವುದು.

ಭಾರತೀಯ ಸ್ಟೇಟ್ ಬ್ಯಾಂಕ್‌ ರಾಜ್ಯ ಸರ್ಕಾರಿ ನೌಕರರಿಗೆ ಸಂಬಳ ಪ್ಯಾಕೇಜ್‌ನಲ್ಲಿ ರೂ. 10 ಸಾವಿರಕ್ಕಿಂತ ಮೇಲ್ಪಟ್ಟು ನಿವ್ವಳ ಸಂಬಳ ಪಡೆಯುತ್ತಿರುವ ಅಧಿಕಾರಿ/ ನೌಕರರಿಗೆ ರೂ. 1 ಕೋಟಿ ವೈಯಕ್ತಿಕ ಅಪಘಾತ ವಿಮೆಯನ್ನು ನೀಡುತ್ತದೆ ಹಾಗೂ ರೂ. 1,60 ಕೋಟಿ ವರೆಗೆ ವಿಮಾನ ಅಪಘಾತ ವಿಮೆ ರಕ್ಷಣೆಯನ್ನು ಪೂರಕ ಕೊಡುಗೆಯಾಗಿ ನೀಡುತ್ತದೆ.

ಅದೇ ರೀತಿ ಕೆನರಾ ಬ್ಯಾಂಕ್‌, ರಾಜ್ಯ ಸರ್ಕಾರಿ ನೌಕರರಿಗೆ ಸಂಬಳ ಪ್ಯಾಕೇಜ್‌ನಲ್ಲಿ ರೂ. 50 ಸಾವಿರದ ವರೆಗೆ ನಿವ್ವಳ ಸಂಬಳ ಪಡೆಯುತ್ತಿರುವ ಅಧಿಕಾರಿ/ ನೌಕರರಿಗೆ ರೂ. 50 ಲಕ್ಷಗಳ ವೈಯಕ್ತಿಕ ಅಪಘಾತ ವಿಮೆ ರಕ್ಷಣೆಯನ್ನು ಪೂರಕ ಕೊಡುಗೆಯಾಗಿ ನೀಡುತ್ತದೆ.

ಅಲ್ಲದೆ, ರೂ. 50 ಸಾವಿರಕ್ಕೆ ಮೆಲ್ಪಟ್ಟು ನಿವ್ವಳ ಸಂಬಳ ಪಡೆಯುತ್ತಿರುವ ಅಧಿಕಾರಿ/ ನೌಕರರಿಗೆ ರೂ. 1 ಕೋಟಿ ವೈಯಕ್ತಿಕ ಅಪಘಾತ ವಿಮೆ ರಕ್ಷಣೆಯನ್ನು ಪೂರಕ ಕೊಡುಗೆಯಾಗಿ ನೀಡುತ್ತದೆ.

ಅದೇ ರೀತಿ ವಿವಿಧ ಬ್ಯಾಂಕುಗಳು ತಮ್ಮ ಸಂಬಳ ಪ್ಯಾಕೇಜ್‌ಗಳಲ್ಲಿ ವಿವಿಧ ಮೊತ್ತದ ವೈಯಕ್ತಿಕ ಅಪಘಾತ ವಿಮೆ ರಕ್ಷಣೆಯ ಕೊಡುಗೆಯಾಗಿ ನೀಡುತ್ತಿವೆ. ಮುಂದಿನ ಮೂರು ತಿಂಗಳ ಅವಧಿಯಲ್ಲಿ ಅಧಿಕಾರಿಗಳು/ ನೌಕರರು ತಮ್ಮ ಇಚ್ಛಾನುಸಾರ ಯಾವುದೇ ಬ್ಯಾಂಕಿನ ಸಂಬಳ ಪ್ಯಾಕೇಜಿನಲ್ಲಿ ನೋಂದಾಯಿಸಿಕೊಳ್ಳಲು ಸರ್ಕಾರದ ಆದೇಶ ದಿನಾಂಕ 21/2/2025ರಲ್ಲಿ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.

ಶಾಸಕರು ಈ ಅಪಘಾತ ವಿಮೆ ಯೋಜನೆಯು ನಿಗಮ/ ಮಂಡಳಿಯ ನೌಕರರಿಗೂ ಅನ್ವವಾಗುವುದೇ? ಮತ್ತು ಈ ಯೋಜನೆಯು ಸರ್ಕಾರಿ ನೌಕರರು ಹಾಗೂ ಅಧಿಕಾರಿಗಳಿಗೂ ಅನ್ವಯವಾಗುತ್ತದೆಯೇ?, ವಿಮೆ ಯೋಜನೆಗೆ ಇರುವ ನಿಯಮಗಳೇನು? ಎಂದು ಪ್ರಶ್ನೆ ಮಾಡಿದ್ದರು.

ಸಿದ್ದರಾಮಯ್ಯ ಉತ್ತರದಲ್ಲಿ ವಿವಿಧ ಬ್ಯಾಂಕುಗಳು ತಮ್ಮ ಸಂಬಳ ಪ್ಯಾಕೇಜ್‌ಗಳಲ್ಲಿ ಪೂರಕ ಕೊಡುಗೆಯಾಗಿ ನೀಡುತ್ತಿರುವ ವೈಯಕ್ತಿಕ ಅಪಘಾತ ವಿಮೆ ರಕ್ಷಣೆ ಯೋಜನೆಗಳು ನಿಗಮ/ ಮಂಡಳಿ ನೌಕರರಿಗೂ ಅನ್ವಯವಾಗುತ್ತದೆ.

ವಿವಿಧ ಬ್ಯಾಂಕುಗಳು ತಮ್ಮ ಸಂಬಳ ಪ್ಯಾಕೇಜ್‌ಗಳಲ್ಲಿ ಪೂರಕವಾಗಿ ಕೊಡುಗೆಯಾಗಿ ನೀಡುತ್ತಿರುವ ವೈಯಕ್ತಿಕ ಅಪಘಾತ ವಿಮೆ ಯೋಜನೆಗಳು ಸರ್ಕಾರಿ ನೌಕರರು ಹಾಗೂ ಅಧಿಕಾರಿಗಳಿಗೂ ಅನ್ವಯವಾಗುತ್ತದೆ. ವಿಮೆ ಯೋಜನೆಗೆ ಇರುವ ನಿಯಮಗಳು ಬ್ಯಾಂಕಿನಿಂದ ಬ್ಯಾಂಕಿಗೆ ಭಿನ್ನವಾಗಿರುತ್ತವೆ. ಸದರಿ ವಿಮೆ ಯೋಜನೆಯ ನಿಯಮಗಳನ್ನು ಅಧಿಕಾರಿ/ ನೌಕರರು ಸಂಬಂಧಪಟ್ಟ ಬ್ಯಾಂಕಿನಿಂದ ಪಡೆಯಬಹುದಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ

ಶನಿವಾರ, ಫೆಬ್ರವರಿ 1, 2025

ಹೊಸ ತೆರಿಗೆ ಪದ್ಧತಿ ಸ್ಲ್ಯಾಬ್ ಹೀಗಿದೆ 2025/26

 ಹೊಸ ಆದಾಯ ತೆರಿಗೆ ಸ್ಲ್ಯಾಬ್‌ ಅಡಿಯಲ್ಲಿ ವಾರ್ಷಿಕ 12.75 ಲಕ್ಷ ರೂಪಾಯಿವರೆಗೆ ಆದಾಯ ಹೊಂದಿರುವವರು ಯಾವುದೇ ತೆರಿಗೆ ಪಾವತಿಸುವಂತಿಲ್ಲ ಎಂದು ಹೇಳಿದೆ. ಈ ಮೊದಲು ಇದು 7 ಲಕ್ಷ ರೂಪಾಯಿವರೆಗೆ ಇತ್ತು, ಈಗ ಅದನ್ನು 12 ಲಕ್ಷಕ್ಕೆ ಹೆಚ್ಚಿಸಲಾಗಿದೆ.

ಹೊಸ ತೆರಿಗೆ ಪದ್ಧತಿ ಸ್ಲ್ಯಾಬ್ ಹೀಗಿದೆ

₹ 4 ಲಕ್ಷದವರೆಗೆ ಆದಾಯ ಇದ್ದರೆ ಯಾವುದೇ ತೆರಿಗೆ ಇಲ್ಲ.

₹4 ರಿಂದ ₹8 ಲಕ್ಷ ಆದಾಯ ಹೊಂದಿದ್ದರೆ 5% ತೆರಿಗೆ

₹8 ರಿಂದ ₹12 ಲಕ್ಷ ಆದಾಯ ಹೊಂದಿದ್ದರೆ 10% ತೆರಿಗೆ

₹12 ರಿಂದ ₹16 ಲಕ್ಷ ಆದಾಯ ಹೊಂದಿದ್ದರೆ 20% ತೆರಿಗೆ

₹20 ರಿಂದ ₹24 ಲಕ್ಷ ಆದಾಯ ಹೊಂದಿದ್ದರೆ 25% ತೆರಿಗೆ

₹24 ಲಕ್ಷಕ್ಕಿಂತ ಹೆಚ್ಚು ಆದಾಯ ಹೊಂದಿದ್ದ- 30% ತೆರಿಗೆ

ಹೊಸ ಪದ್ಧತಿಯಿಂದ ಎಷ್ಟು ಉಳಿತಾಯ

12 ಲಕ್ಷ ರೂಪಾಯಿವರೆಗೆ ಆದಾಯ ಹೊಂದಿರುವವರಿಗೆ ತೆರಿಗೆ ವಿನಾಯಿತಿ ನೀಡಲಾಗುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ. ಹೊಸ ತೆರಿಗೆ ಪದ್ಧತಿಯಲ್ಲಿ 12 ಲಕ್ಷ ರೂ.ಗಳ ಆದಾಯ ಹೊಂದಿರುವ ತೆರಿಗೆದಾರರು 80,000 ರೂಪಾಯಿಗಳಷ್ಟು ತೆರಿಗೆ ಪ್ರಯೋಜನವನ್ನು ಪಡೆಯುತ್ತಾರೆ. ಅಂದರೆ ಬರೋಬ್ಬರಿ 80,000 ರೂಪಾಯಿ ತೆರಿಗೆ ಹಣ ಉಳಿತಾಯವಾಗಲಿದೆ.

₹18 ಲಕ್ಷ ಆದಾಯ ಹೊಂದಿರುವ ವ್ಯಕ್ತಿಯು ಹೊಸ ತೆರಿಗೆ ಸ್ಲ್ಯಾಬ್‌ನಿಂದಾಗಿ 70,000 ರೂ.ಗಳ ತೆರಿಗೆ ಉಳಿತಾಯ ಮಾಡುತ್ತಾರೆ. ₹25 ಲಕ್ಷ ರೂಪಾಯಿವರೆಗೆ ವಾರ್ಷಿಕ ಆದಾಯ ಹೊಂದಿರುವವರಿಗೆ ಹೊಸ ತೆರಿಗೆ ಸ್ಲ್ಯಾಬ್‌ನಿಂದಾಗಿ 1,10,000 ರೂ.ಗಳ ತೆರಿಗೆ ಉಳಿತಾಯವಾಗಲಿದೆ.

10 ಲಕ್ಷ ರೂಪಾಯಿವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ನೀಡಬಹುದು ಎಂದು ನಿರೀಕ್ಷೆ ಮಾಡಲಾಗಿತ್ತಾದರೂ ಕೇಂದ್ರ ಸರ್ಕಾರ 12 ಲಕ್ಷ ರೂಪಾಯಿವರೆಗೆ ತೆರಿಗೆ ವಿನಾಯಿತಿ ಘೋಷಣೆ ಮಾಡುವ ಮೂಲಕ ಸಂಬಳದಾರರಿಗೆ, ನೌಕರರಿಗೆ, ಮಧ್ಯಮವರ್ಗದವರಿಗೆ ಭರ್ಜರಿ ಕೊಡುಗೆ ನೀಡಿದೆ.

Naveen Kumar N Oneindia

source: oneindia.com

Tax-free Income Sources: ಈ ರೀತಿ ಹಣ ಗಳಿಸಿದ್ರೆ ಟ್ಯಾಕ್ಸ್ ಕಟ್ಬೇಕಾಗಿಲ್ಲ, ತೆರಿಗೆ ಮುಕ್ತ ಆದಾಯದ ಮೂಲಗಳಿವು

ಕೆಲ ಆದಾಯಗಳು ತೆರಿಗೆ ಮುಕ್ತವಾಗಿವೆ. ತೆರಿಗೆ ಪಾವತಿಗೆ ಮುನ್ನ ಯಾವೆಲ್ಲ ಆದಾಯ, ತೆರಿಗೆ ಮುಕ್ತವಾಗಿದೆ ಎಂಬುದನ್ನು ತಿಳಿದುಕೊಳ್ಳಿ. ಯಾವ ಆದಾಯ ತೆರಿಗೆ ಮುಕ್ತ? : ಕೃಷಿ ...