ಹೈದರಾಬಾದ್ ಕರ್ನಾಟಕ ಪ್ರದೇಶ

ಹೈದರಾಬಾದ್ ಕರ್ನಾಟಕ ಪ್ರದೇಶ
Hyderabad Karnataka

ಬುಧವಾರ, ಆಗಸ್ಟ್ 27, 2025

OBC ಕೆನೆ ಪದರ ಮೀಸಲಾತಿ ರಾಜ್ಯದಲ್ಲಿ ಜಾರಿ ಯಾವಾಗ?

OBC ಕೆನೆ ಪದರ ಮೀಸಲಾತಿ ರಾಜ್ಯದಲ್ಲಿ ಜಾರಿ ಯಾವಾಗ?

ರಾಜ್ಯ ನೌಕರರ ಸಂಘ ಈ ಕುರಿತು ಹೆಚ್ಚಿನ ಗಮನಹರಿಸಿ.


1. ಎಸ್ ಸಿ / ಎಸ್ ಟಿ / ಓಬಿಸಿ ಎಂಬ ಮೀಸಲಾತಿ ವ್ಯವಸ್ಥೆಯು  ಸಾಮಾಜಿಕ ಸ್ತರವಿನ್ಯಾಸದ ಹಿನ್ನೆಲೆಯಲ್ಲಿ ರಚನೆಯಾಗಿರುವುದೇ ಹೊರತು ಆರ್ಥಿಕ ಆದಾಯದ ಮಿತಿಯ  ಅಂಶಗಳ ಮೇಲೆಲ್ಲಾ ಎಂಬ ಅಂಶವನ್ನು ಈಗಾಗಲೇ ಕೇಂದ್ರ ಸರ್ಕಾರ ಹಾಗೂ ದೇಶದ ಸರ್ವೋಚ್ಚ ನ್ಯಾಯಾಲಯವು ಪದೇ ಪದೇ ಹೇಳಿದೆ ಹಾಗೂ ಇದೇ ಅಂಶವನ್ನು ನಮ್ಮ ರಾಜ್ಯದಲ್ಲಿ ಅಳವಡಿಸಿಕೊಳ್ಳಲಾಗಿದೆ.

2. ನೌಕರರಿಗೆ ನೀಡುವ ಕೆನೆ ಪದರದ ಆದಾಯದ ಮಿತಿ ಯಲ್ಲಿ 🅲︎,🅳︎ ಮತ್ತುಕೆಲವರು 🅱︎ ದರ್ಜೆಯ ವೃಂದದ ಸರ್ಕಾರಿ, ಖಾಸಗಿ, ಅನುದಾನಿತ ನೌಕರರ ವೇತನ ಆದಾಯವನ್ನ ಮತ್ತು ಕೃಷಿ ಆದಾಯ ಪರಿಗಣಿಸದಿರುವುದು.

3. ವೆಲ್ತ್ ಟೆಸ್ಟ್ ಎಂಬುದು ಸರ್ಕಾರಿ, ಖಾಸಗಿ, ಹಾಗೂ ಅನುದಾನಿತ ನೌಕರರಗದವರಿಗೆ ಸಂಬಂಧಿಸಿರುವುದಿಲ್ಲ ಇದು ಉದ್ಯಮಿಗಳಿಗೆ, ಷೇರು ಮಾರುಕಟ್ಟೆಯ ವ್ಯವಹಾರಗಳನ್ನು ನಡೆಸುವವರಿಗೆ ಹಾಗೂ (Trade, Business, industrial list) ಅನ್ವಯಿಸುತ್ತದೆ.
 (ಇವರಿಗೂ ಆದಾಯದ ಲೆಕ್ಕಾಚಾರ ಮಾಡುವಾಗ ಕಳೆದ ಮೂರು ಹಣಕಾಸಿನ ವರ್ಷಗಳ   ಮಾಡುವಾಗ ಆದಾಯವನ್ನ ಲೆಕ್ಕಾಚಾರ ಮಾಡಲಾಗುತ್ತದೆ) 

4. ವೆಲ್ತ್ ಟೆಸ್ಟ್(𝘄𝗲𝗮𝗹𝘁𝗵 𝗧𝗲𝘀𝘁) ಸಂಪತ್ತಿನ ಪರೀಕ್ಷೆಯನ್ನು ಮಾಡುವಾಗ ಕಳೆದ ಮೂರು ವರ್ಷಗಳ(𝗳𝗶𝗻𝗮𝗻𝗰𝗶𝗮𝗹 𝘆𝗲𝗮𝗿𝘀) ಹಣಕಾಸಿನ ವರ್ಷದ ಆದಾಯವನ್ನು ಪರಿಗಣಿಸಿ ಯಾವುದಾದರೂ ಒಂದು ವರ್ಷದ ಆದಾಯ (ಪ್ರಸ್ತುತ 8 ಲಕ್ಷಕಿಂತ)  ಕಡಿಮೆ ಇದ್ದರೆ ಆ ವ್ಯಕ್ತಿಗೂ ಕೂಡ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಒದಗಿಸಲು ಅವಕಾಶ ಇದೆ.

5. ಗ್ರೂಪ್ ಬಿ ವೃಂದದ ಅಧಿಕಾರಿ ವರ್ಗದವರಿಗೂ, 40ವರ್ಷಗಳ ನಂತರದಲ್ಲಿ ಪದೋನ್ನತಿ ಹೊಂದಿದ ಗ್ರೂಪ್ 🅑︎ & 🅐︎ ವೃಂದದ  ಮಕ್ಕಳಿಗೂ ಮೀಸಲಾತಿ ಒಪ್ಪಿಸಿ ಪ್ರಮಾಣ ಪತ್ರವನ್ನು ನೀಡಲು ಅವಕಾಶವಿದೆ.

6. *ವಿಶೇಷವಾಗಿ  ಜಾತಿ ಮತ್ತು ಪ್ರಮಾಣ ಪತ್ರ ವಿತರಿಸುವ ತಾಲೂಕು ಮಟ್ಟದ ಅಧಿಕಾರಿಗಳಾದ ತಹಶೀಲ್ದಾರ್, ಓರ್ವ ವ್ಯಕ್ತಿಗೆ ಸಂಬಂಧಿಸಿದಂತೆ ಆದಾಯವನ್ನು ಲೆಕ್ಕಾಚಾರ ಮಾಡುವಾಗ ಒಬಿಸಿ ಪ್ರಮಾಣ ಪತ್ರ ನೀಡವಲ್ಲಿ ಕೇಂದ್ರದ ನಿಯಮಗಳಂತೆ ಪ್ರಮಾಣ ಪತ್ರ ನೀಡುವರು ಆದರೆ ಅದೇ ವ್ಯಕ್ತಿಗೆ ಅದೇ ತಾಸಿಲ್ದಾರ್ ರಾಜ್ಯದ ಪ್ರಮಾಣ ಪತ್ರವನ್ನು ವಿತರಿಸುವಾಗ Form-F ನಲ್ಲಿ (cat-2A, 2B, 3A, 3B) ನೀಡದೆ ಇರುವುದರಿಂದ ತಾರತಮ್ಯ ಉಂಟಾಗಿರುತ್ತದೆ*

7. ಪ್ರಸ್ತುತ ರಾಜ್ಯ ಸರ್ಕಾರವು 2002ರಲ್ಲಿ ಇದ್ದಂತ ಆದೇಶವನ್ನು 2025 ಮೇ ತಿಂಗಳಲ್ಲಿ ನೌಕರನಿಗೆ ಅವನ ವೇತನ  ವಾರ್ಷಿಕ 8 ಲಕ್ಷಕ್ಕಿಂತ ಮೀರಿದರು ಅದನ್ನು ಪರಿಗಣಿಸದೆ, form-H ನಲ್ಲಿ ಜಾತಿ ಆದಾಯ ಪ್ರಮಾಣ ಪತ್ರಗಳನ್ನು ನೀಡಲು ( ನಿರ್ದಿಷ್ಟ ಸೇವಾ ನಿಯಮಗಳ ಆಧಾರದ ಮೇಲೆ) ತಿಳಿಸಿದೆ ಆದರೆ ಇಲ್ಲಿ ಕುಟುಂಬ ಸದಸ್ಯರಿಗೆ ಮತ್ತು ಮಕ್ಕಳಿಗೆ ಅವಕಾಶವನ್ನು ನೀಡಿಲ್ಲ.

8. ಕೆಲ ಸಮುದಾಯಗಳು (Caste) ಕೇಂದ್ರದಲ್ಲಿ ಸಾಮಾನ್ಯ ವರ್ಗದಲ್ಲಿದ್ದು ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿವೆ . ಈ ನಿಯಮಗಳಿಂದಾಗಿ ಅತ್ತ ಕೇಂದ್ರದಲ್ಲೂ ಅವಕಾಶವಿಲ್ಲದೆ ಇತ್ತ ರಾಜ್ಯದಲ್ಲೂ ಅವಕಾಶವಿಲ್ಲದೆ ಅನೌಕರ ಮಕ್ಕಳು ತುಂಬಾ ಸದಸ್ಯರು ಅವಕಾಶಗಳಿಂದ ವಂಚಿತರಗಿರುವುದನ್ನ ಗಮನಿಸಬಹುದು.

9. ಈ ವಿಷಯಗಳನ್ನು ಕುರಿತಂತೆ ಕೆಲವರು ನ್ಯಾಯಾಲಯದ ಮೂಲಕ ಈಗಾಗಲೇ ಹಲವು ವಿಷಯಗಳಲ್ಲಿ ನ್ಯಾಯದ ಮೊರೆ ಹೋಗಿ ಅವಕಾಶಗಳನ್ನ ಪಡೆದಿರುವ ಉದಾರಣೆಗಳಿದೆ ಆದರೆ ಇದು ಎಲ್ಲರಿಗೂ ಅನ್ವಯಿಸುವಂತಾಗಬೇಕು.


ಕೇಂದ್ರ ಮಾದರಿಯಲ್ಲಿ ರಾಜ್ಯದಲ್ಲಿ ಜಾತಿ ಆದಾಯ ಪ್ರಮಾಣ ಪತ್ರ ನೀಡಲು ಹಕ್ಕೋತ್ತಾಯ....

ಕಾಮೆಂಟ್‌ಗಳಿಲ್ಲ:

ರಾಜ್ಯ `ಸರ್ಕಾರಿ ನೌಕರರೇ' ಗಮನಿಸಿ : `ಆರೋಗ್ಯ ಸಂಜೀವಿನಿ ಯೋಜನೆ' ನೋಂದಣಿ ಕುರಿತು ಸರ್ಕಾರದಿಂದ ಮಹತ್ವದ ಆದೇಶ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಸದಸ್ಯರಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸೆಗಳನ್ನು ಒದಗಿಸಲು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ...