ಹೈದರಾಬಾದ್ ಕರ್ನಾಟಕ ಪ್ರದೇಶ

ಹೈದರಾಬಾದ್ ಕರ್ನಾಟಕ ಪ್ರದೇಶ
Hyderabad Karnataka

ಶುಕ್ರವಾರ, ಆಗಸ್ಟ್ 30, 2024

ರಾಜ್ಯ ಸರ್ಕಾರಿ ನೌಕರರೇ ಗಮನಿಸಿ : ಹೊಸ ಹುದ್ದೆಗೆ ಹಾಜರಾಗುವ `ಸೇರಿಕೆ ಕಾಲ' (Joining Time) ದ ನಿಯಮಗಳು ಹೀಗಿವೆ!

ಕರ್ನಾಟಕ ರಾಜ್ಯ ಸೇವಾ ನಿಯಮಗಳು 1958 ರ ನಿಯಮ 8 (24)

ಸೇರಿಕೆ ಕಾಲ ಸರ್ಕಾರಿ ನೌಕರನಿಗೆ ಯಾವ ಸಂದರ್ಭದಲ್ಲಿ ಲಭಿಸುತ್ತದೆ?


ಯಾರೇ ಒಬ್ಬ ಸರ್ಕಾರಿ ನೌಕರನು ಸರ್ಕಾರದ ಹಿತಾಸಕ್ತಿ ಮೇರೆಗೆ ವರ್ಗಾವಣೆಯಾದಾಗ, ಆತನಿಗೆ ಆ ಹುದ್ದೆಗೆ ಹೋಗಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಸೇರಿಕೆ ಕಾಲ ಸಿಗುತ್ತದೆ.

3.ಯಾವ ಸಂದರ್ಭದಲ್ಲಿ ಒಬ್ಬ ಸರ್ಕಾರಿ ನೌಕರನಿಗೆ ಸೇರಿಕೆ ಕಾಲ ಲಭಿಸುವದಿಲ್ಲ?

ಯಾರೇ ಒಬ್ಬ ಸರ್ಕಾರಿ ನೌಕರನನ್ನು ಯಾವುದೇ ಒಂದು ವಿಶೇಷ ಕರ್ತವ್ಯಕ್ಕೆ ತಾತ್ಕಾಲಿಕವಾಗಿ

ನಿಯೋಜಿಸಿದಾಗ ಮತ್ತು ಆತನ ಸ್ವಂತ ಕೋರಿಕೆಯ ಮೇಲೆ ವರ್ಗಾವಣೆಯಾದಾಗ ಆತನಿಗೆ ಆ

ಸ್ಥಳವನ್ನು ಹೋಗಿ ತಲುಪಲು ಬೇಕಾಗುವ ಪ್ರಯಾಣದ ಅವಧಿಯನ್ನು ಬಿಟ್ಟು ಆತನಿಗೆ ಯಾವುದೇ ಸೇರಿಕೆ ಕಾಲ ಲಭಿಸುವುವುದಿಲ್ಲ. ವಹಿಸಿಕೊಟ್ಟಿದ್ದರೆ, ಆತನು ತನ್ನ ಮುಂದಿನ ಕರ್ತವ್ಯದ ಕಾರ್ಯಾಭಾರವನ್ನು ಮುಂದಿನ ಕೆಲಸದ ದಿನದ ಪೂರ್ವಾಹ್ನದಲ್ಲಿಯೇ ತನ್ನ ಕರ್ತವ್ಯದ ಚಾರ್ಜನ್ನು ತೆಗೆದುಕೊಳ್ಳತಕ್ಕದ್ದು.

5.ಪೂರ್ವಾಹ್ನವೆಂದರೆ ಎಷ್ಟು ಗಂಟೆ?

12 ಗಂಟೆಯೊಳಗಿನ ಸಮಯವನ್ನು ಪೂರ್ವಾಹ್ನವೆಂದು ಕರೆಯುವರು.

6.ಯಾವುದೇ ಒಬ್ಬ ಸರ್ಕಾರಿ ನೌಕರನಿಗೆ ಸರ್ಕಾರದ ಹಿತಾಸಕ್ತಿಯಲ್ಲಿ ಅವನ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳ/ನಿವಾಸ ಬದಲಾವಣೆಯಾಗುವುಂತೆ ವರ್ಗಾವಣೆಯಾದಾಗ ಆತನಿಗೆ ಮುಂದಿನ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಲಭಿಸುವ ಸೇರಿಕೆ ಕಾಲಾವಧಿ ಎಷ್ಟು ತಿಳಿಸಿ?

ಯಾವುದೇ ಒಬ್ಬ ಸರ್ಕಾರಿ ನೌಕರನಿಗೆ ವರ್ಗಾವಣೆಯಿಂದ ಅವನ ಸ್ಥಳ/ನಿವಾಸ ಬದಲಾವಣೆಯಾದಾಗ ಆತನಿಗೆ ಮುಂದಿನ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಲಭಿಸುವ ಸೇರಿಕೆ ಕಾಲಾವಧಿ ಈ ಕೆಳಕಂಡಂತೆ ಇದೆ.

7.ಯಾವುದೇ ಒಬ್ಬ ಸರ್ಕಾರಿ ನೌಕರನಿಗೆ ಸರ್ಕಾರದ ಹಿತಾಸಕ್ತಿಯಲ್ಲಿ ಅವನ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳ/ನಿವಾಸ ಬದಲಾವಣೆಯಾಗುವುಂತೆ ವರ್ಗಾವಣೆಯಾದಾಗ ಆತನಿಗೆ ಮುಂದಿನ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಲಭಿಸುವ ಸೇರಿಕೆ ಕಾಲಾವಧಿ ಯಾವಾಗಿನಿಂದ ಪ್ರಾರಂಭವಾಗುತ್ತದೆ ತಿಳಿಸಿ?

ಯಾವುದೇ ಒಬ್ಬ ಸರ್ಕಾರಿ ನೌಕರನಿಗೆ ಸರ್ಕಾರದ ಹಿತಾಸಕ್ತಿಯಲ್ಲಿ ಅವನ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳ/ನಿವಾಸ ಬದಲಾವಣೆಯಾಗುವುಂತೆ ವರ್ಗಾವಣೆಯಾದಾಗ ಸೇರಿಕೆ ಕಾಲವು ಈ ಕೆಳಕಂಡಂತೆ ಪ್ರಾರಂಭವಾಗುತ್ತದೆ.

1.ಆತನು ತನ್ನ ಕರ್ತವ್ಯದ ಪ್ರಭಾರವನ್ನು ಪೂರ್ವಾಹ್ನದಲ್ಲಿ ವಹಿಸಿಕೊಟ್ಟಿದ್ದರೆ ಹಳೆಯ ಹುದ್ದೆಯ ಪ್ರಭಾರವನ್ನು ತ್ಯಜಿಸಿದ ದಿನದಿಂದ ಪ್ರಾರಂಭವಾಗುತ್ತದೆ. ಆತನು ತನ್ನ ಕರ್ತವ್ಯದ ಪ್ರಭಾರವನ್ನು ಅಪರಾಹ್ನದಲ್ಲಿ ವಹಿಸಿಕೊಟ್ಟಿದ್ದರೆ ಮುಂದಿನ ದಿನದಿಂದ ಸೇರಿಕೆ ಕಾಲವು ಪ್ರಾರಂಭವಾಗುತ್ತದೆ.

8.ಯಾವನೇ ಒಬ್ಬ ಸರ್ಕಾರಿ ನೌಕರನು ವರ್ಗಾವಣೆಗೊಂಡು, ಸೇರಿಕೆ ಕಾಲವಧಿಯಲ್ಲಿದ್ದಾಗ, ಆತನನ್ನು ಮೊದಲು ವರ್ಗಾವಣೆಗೊಳಿಸಿದ ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವರ್ಗಾಯಿಸಿದಾಗ, ಆತನಿಗೆ ಲಭ್ಯವಾಗುವ ಸೇರಿಕೆ ಕಾಲವನ್ನು ತಿಳಿಸಿ.

ಆತನು ಪರಿಷ್ಕೃತ ಆದೇಶವನ್ನು ಪಡೆಯುವುದಕ್ಕಿಂತ ಮುಂಚೆ ಬಳಸಿಕೊಂಡಿದ್ದ ಸೇರಿಕೆ ಕಾಲವನ್ನು ಬಿಟ್ಟು ಆತನು ಹೊಸದಾಗಿ ಪರಿಷ್ಕೃತ ಆದೇಶವನ್ನು ಪಡೆದ ದಿನಾಂಕದಿಂದ ಹೊಸ ಸೇರಿಕೆ ಕಾಲವು ಬಳಸಿಕೊಳ್ಳಲು ಹಕ್ಕುಳ್ಳವನಾಗಿರುತ್ತಾನೆ.

9.ಯಾವನೇ ಒಬ್ಬ ಸರ್ಕಾರಿ ನೌಕರನು ವರ್ಗಾವಣೆಗೊಂಡು ಸೇರಿಕೆ ಕಾಲವಧಿಯಲ್ಲಿದ್ದಾಗ.ಆತನನ್ನು ಮೊದಲು ವರ್ಗಾವಣೆಗೊಳಿಸಿದ ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವರ್ಗಾಯಿಸಿದಾಗ,ಆತನಿಗೆ ಲಭ್ಯವಾಗುವ ಸೇರಿಕೆ ಕಾಲ ಯಾವತ್ತಿನಿಂದ ಅಥವಾ ಎಲ್ಲಿಂದ ಪ್ರಾರಂಭವಾಗುತ್ತದೆ ತಿಳಿಸಿ.

ಯಾವನೇ ఒబ్బ ನೌಕರನು ವರ್ಗಾವಣೆಗೊಂಡು ಸೇರಿಕೆ ಕಾಲವಧಿಯಲ್ಲಿದ್ದಾಗ,ಆತನನ್ನು ಮೊದಲು ವರ್ಗಾವಣೆಗೊಳಿಸಿದ ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವರ್ಗಾಯಿಸಿದಾಗ, ಆತನು ಪರಿಷ್ಕೃತ ಆದೇಶವನ್ನು ಸ್ವೀಕರಿಸಿದ ಸ್ಥಳದಿಂದಲೇ ಆತನಿಗೆ ಸೇರಿಕೆ ಕಾಲವು ಪ್ರಾರಂಭವಾಗುತ್ತದೆ

10.ಯಾವನೇ ಒಬ್ಬ ಸರ್ಕಾರಿ ನೌಕರನನ್ನು ಅಮಾನತ್ತಿನಿಂದ ಬಿಡುಗಡೆಗೊಳಿಸಿ ಅಮಾನತ್ತಿಗೆ ಮುಂಚೆ ಅಥವಾ ಅಮಾನತ್ತಿನ ಮುಂಚಿನ ರಜೆಯ ನಿಕಟಪೂರ್ವದಲ್ಲಿ ಕೆಲಸ ಮಾಡುತ್ತಿದ್ದ ಸ್ಥಳದಲ್ಲಿಯೇ ಪುನರ ನೇಮಿಸಿದಾಗ ಆತನಿಗೆ ಸೇರಿಕೆ ಕಾಲವು ಲಭ್ಯವಾಗುತ್ತದೆಯೇ? ಇಂತಹ ಸಂದರ್ಭದಲ್ಲಿ ಯಾವುದೇ ಸೇರಿಕೆ ಕಾಲವು ಲಭ್ಯವಾಗುವುದಿಲ್ಲ.

11. ಯಾವನೇ ಒಬ್ಬ ಸರ್ಕಾರಿ ನೌಕರನನ್ನು ಅಮಾನತ್ತಿನಿಂದ ಬಿಡುಗಡೆಗೊಳಿಸಿ ಅಮಾನತ್ತಿಗೆ ಮುಂಚೆ ಅಥವಾ ಅಮಾನತ್ತಿನ ಮುಂಚಿನ ರಜೆಯ ನಿಕಟಪೂರ್ವದಲ್ಲಿ ಕೆಲಸ ಮಾಡುತ್ತಿದ್ದ ಸ್ಥಳವನ್ನು ಬಿಟ್ಟು ಬೇರೆ ಸ್ಥಳಕ್ಕೆ ನೇಮಿಸಿದಾಗ ಆತನಿಗೆ ಸೇರಿಕೆ ಕಾಲವು ಲಭ್ಯವಾಗುತ್ತದೆಯೇ? ಇಂತಹ ಸಂದರ್ಭದಲ್ಲಿ ಸೇರಿಕೆ ಕಾಲವು ಲಭ್ಯವಾಗುತ್ತದೆ. ಅಮಾನತ್ತಿನಿಂದ ಬಿಡುಗಡೆಗೊಳಿಸಿ ಪುನರ ನೇಮಕ ಮಾಡಿದ ಆದೇಶ ಸ್ವೀಕರಿಸಿದ ದಿನಾಂಕದ ನಂತರದ ದಿನದಿಂದ ಸೇರಿಕೆ ಕಾಲವು ಲಭ್ಯವಾಗುತ್ತದೆ.

12.ಯಾವನೇ ಒಬ್ಬ ಸರ್ಕಾರಿ ನೌಕರನನ್ನು ಅಮಾನತ್ತಿನಿಂದ ಬಿಡುಗಡೆಗೊಳಿಸಿ ಅಮಾನತ್ತಿನಲ್ಲಿದ್ದ ಅವಧಿಯಲ್ಲಿ ವಾಸಮಾಡಲು ಅನುಮತಿ ನೀಡಲಾಗಿದ್ದ ಸ್ಥಳವನ್ನು ಬಿಟ್ಟು ಬೇರೆ ಸ್ಥಳಕ್ಕೆ ನೇಮಕ ಮಾಡಿದಾಗ ಆತನಿಗೆ ಸೇರಿಕೆ ಕಾಲವು ಲಭ್ಯವಾಗುತ್ತದೆಯೇ? ಇಂತಹ ಸಂದರ್ಭದಲ್ಲಿ ಆತನಿಗೆ ಸೇರಿಕೆ ಕಾಲವು ಲಭ್ಯವಾಗುತ್ತದೆ.

ಗುರುವಾರ, ಆಗಸ್ಟ್ 29, 2024

NPS

ರಾಷ್ಟ್ರೀಯ ಪಿಂಚಣಿ ಯೋಜನೆ ಅಥವಾ ಎನ್‌ಪಿಎಸ್‌ (National Pension Scheme -NPS) ಮಧ್ಯಮ ವರ್ಗದ ಹೂಡಿಕೆದಾರರ ನೆಚ್ಚಿನ ಹೂಡಿಕೆ ಆಯ್ಕೆಯಾಗಿದೆ. ನಿವೃತ್ತಿ ನಂತರವೂ ಆದಾಯ ಗಳಿಸಲು ಇದೊಂದು ಉತ್ತಮ ಆಯ್ಕೆ. ಎನ್‌ಪಿಎಸ್‌ನಲ್ಲಿ ಹೂಡಿಕೆ ಮಾಡುವ ಮೂಲಕ ತೆರಿಗೆ ಪ್ರಯೋಜನಗಳ ಜೊತೆಗೆ ನಿವೃತ್ತಿ ಬದುಕಿಗಾಗಿ ಒಂದಷ್ಟು ಹಣಕಾಸಿನ ಭರವಸೆ ಉಳಿಸುವ ಅವಕಾಶವಿದೆ.

ನಿವೃತ್ತಿ ನಂತರವೂ ಪ್ರತಿ ತಿಂಗಳು 1 ಲಕ್ಷ ರೂಪಾಯಿ ಮಾಸಾಶನ ಬರುವಂತೆ ಮಾಡಬಹುದು. ಆನ್ಯುಟಿ ಸ್ಕೀಮ್‌ ಅಥವಾ ವಾರ್ಷಿಕ ಯೋಜನೆ ಖರೀದಿಸುವ ಮೂಲಕ ಸುಮಾರು 5 ಕೋಟಿ ರೂಪಾಯಿಗಳ ನಿವೃತ್ತಿ ಕಾರ್ಪಸ್ ಸಂಗ್ರಹಿಸಬಹುದು. ಅಲ್ಲದೆ 1 ಲಕ್ಷ ರೂಪಾಯಿಗಳ ಮಾಸಿಕ ಪಿಂಚಣಿ ಪಡೆದುಕೊಳ್ಳಬಹುದು. ಇದು ಹೇಗೆ ಎಂಬುದನ್ನು ತಿಳಿಯೋಣ.

ಪ್ರತಿ ತಿಂಗಳು 1 ಲಕ್ಷ ರೂಪಾಯಿ ಪಿಂಚಣಿ ಪಡೆಯುವಂತಾಗಲು ಎನ್‌ಪಿಎಸ್‌ನಲ್ಲಿ ಸ್ಥಿರವಾದ ಹೂಡಿಕೆ ಮಾಡುತ್ತಾ ಬರಬೇಕು. 27ನೇ ವಯಸ್ಸಿನಲ್ಲಿ ಹೂಡಿಕೆ ಆರಂಭಿಸಿ 60 ವರ್ಷದವರೆಗೂ ಮುಂದುವರೆಸಿಕೊಂಡು ಹೋಗಬೇಕು. ಆರ್ಥಿಕ ಶಿಸ್ತನ್ನು ಪಾಲಿಸುವ ಮೂಲಕ ನಿವೃತ್ತಿ ಬದುಕಿನಲ್ಲಿ ನಿರಂತರ ಆದಾಯ ಗಳಿಕೆ ಮಾಡಬಹುದು.

ಎನ್‌ಪಿಎಸ್‌ ವಆನ್ಯುಟಿ ಸ್ಕೀಮ್‌ ಲೆಕ್ಕ ಹಾಕುವುದು ಹೇಗೆ ?

ನಿವೃತ್ತಿಯ ವಯಸ್ಸು ಅಥವಾ 60 ವರ್ಷಗಳಾದ ನಂತರ, ಎನ್‌ಪಿಎಸ್‌ನಲ್ಲಿ ಸಂಗ್ರಹವಾದ ಕಾರ್ಪಸ್‌ನ ಕನಿಷ್ಠ 40 ಶೇಕಡವನ್ನು ವರ್ಷಾಶನವಾಗಿ (annuity) ಪರಿವರ್ತಿಸಬೇಕು. ಈ ವರ್ಷಾಶನವನ್ನು ಚಂದಾದಾರರು ತಮ್ಮ ಜೀವನದ ಉಳಿದ ಅವಧಿಗೆ ಪಿಂಚಣಿ ರೂಪದಲಲ್ಲಿ ನಿಯಮಿತವಾಗಿ ಪಡೆಯಬಹುದು. ಉಳಿದ 60 ಶೇ ಕಾರ್ಪಸ್ ಅನ್ನು ಚಂದಾದಾರರು ಒಂದು ದೊಡ್ಡ ಮೊತ್ತವಾಗಿ ಹಿಂಪಡೆಯಬಹುದು.

5 ಕೋಟಿ ರೂಪಾಯಿ ಕಾರ್ಪಸ್ ಮತ್ತು 1 ಲಕ್ಷ ಮಾಸಿಕ ಪಿಂಚಣಿ ಲೆಕ್ಕಾಚಾರ ನೋಡೋಣ

ಹೂಡಿಕೆ ಆರಂಭಿಸುವ ವಯಸ್ಸು: 27 ವರ್ಷಗಳು
ಹೂಡಿಕೆ ಮಾಡಬೇಕಾದ ಒಟ್ಟು ವರ್ಷಗಳು (Years of contribution): 33 ವರ್ಷಗಳು (60 ವರ್ಷ ವಯಸ್ಸಿನವರೆಗೆ)
ವಾರ್ಷಿಕ ಹೂಡಿಕೆ: 2,00,000 ರೂ
ನಿರೀಕ್ಷಿತ ಆದಾಯದ ಪ್ರಮಾಣ (rate of return): ವರ್ಷಕ್ಕೆ 10 ಶೇ
ಆನ್ಯುಟಿ ಖರೀದಿ (ಪಿಂಚಣಿಗೆ): ಸಂಗ್ರಹವಾದ ಕಾರ್ಪಸ್‌ನ 40 ಶೇ
ನಿರೀಕ್ಷಿತ ವರ್ಷಾಶನ ದರ: ವರ್ಷಕ್ಕೆ 6 ಶೇ
ಒಟ್ಟು ಹೂಡಿಕೆ(ವರ್ಷಕ್ಕೆ 2 ಲಕ್ಷದಂತೆ 33 ವರ್ಷಗಳಿಗೆ -65,99,736 ರೂ.
ಸಂಚಿತ ಕಾರ್ಪಸ್:

ಪ್ರತಿ ವರ್ಷಕ್ಕೆ 10 ಶೇಕಡದಷ್ಟು ಲಾಭದ ದರವನ್ನು ಬಳಸಿದರೆ, 33 ವರ್ಷಗಳ ನಂತರ ಸಂಗ್ರಹವಾಗುವ ಕಾರ್ಪಸ್ ಸರಿಸುಮಾರು 5,19,15,841 ರೂಪಾಯಿ.

ಒಟ್ಟು ಲಾಭ

ಒಟ್ಟು ಲಾಭ (ಸಂಚಿತ ಕಾರ್ಪಸ್‌ನಿಂದ ಒಟ್ಟು ಹೂಡಿಕೆಯನ್ನು ಕಳೆಯುವುದು)- 5,19,15,841 - 65,99,736 ರೂ = 4,53,16,105 ರೂಪಾಯಿ

ಒಟ್ಟು 33 ವರ್ಷಗಳಲ್ಲಿ ಎನ್‌ಪಿಎಸ್‌ ಕೊಡುಗೆಗಳನ್ನು ಎಚ್ಚರಿಕೆಯಿಂದ ಯೋಜಿಸುವ ಮೂಲಕ, 5 ಕೋಟಿ ರೂಪಾಯಿಗಿಂತಲೂ ಹೆಚ್ಚಿನ ನಿವೃತ್ತಿ ಕಾರ್ಪಸ್‌ ಪಡೆಯಬಹುದು. ಅಂದಾಜು 1 ಲಕ್ಷ ರೂಪಾಯಿ ಮಾಸಿಕ ಪಿಂಚಣಿ ಕೂಡಾ ಪಡೆಯಲು ಸಾಧ್ಯ.

ವರ್ಷಾಶನ ಖರೀದಿ: 60ನೇ ವಯಸ್ಸಿನಲ್ಲಿ, ಸಂಗ್ರಹವಾದ ಒಟ್ಟು ಕಾರ್ಪಸ್‌ನ 40 ಪ್ರತಿಶತವನ್ನು ವರ್ಷಾಶನವಾಗಿ ಪರಿವರ್ತಿಸಬೇಕು. ಇದನ್ನು ಪಿಂಚಣಿ ರೂಪದಲ್ಲಿ ಪ್ರತಿ ತಿಂಗಳು ಪಡೆಯಬಹುದು.

ವರ್ಷಾಶನ ಕಾರ್ಪಸ್ = 5,19,15,841 ರೂಪಾಯಿಯಲ್ಲಿ 40 ಶೇ ಎಂದರೆ 2,07,66,336 ರೂಪಾಯಿ ಆಗುತ್ತದೆ. ಉಳಿದ ಶೇ.60ರಷ್ಟು ಮೊತ್ತವನ್ನು ದೊಡ್ಡ ಮೊತ್ತವಾಗಿ (lump sum) ಹಿಂಪಡೆಯಬಹುದು.

ಮಾಸಿಕ ಪಿಂಚಣಿ

6 ಶೇ ವರ್ಷಾಶನ ದರವನ್ನು ಊಹಿಸಿದರೆ, ಮಾಸಿಕ ಪಿಂಚಣಿಯನ್ನು ಈ ಕೆಳಗಿನಂತೆ ಲೆಕ್ಕಹಾಕಬಹುದು.

ವಾರ್ಷಿಕ ಪಿಂಚಣಿ = ರೂ 2,07,66,336 ಗುಣಿಸು 6ಶೇ = ರೂ 12,45,980.

ಮಾಸಿಕ ಪಿಂಚಣಿ = ರೂ 12,45,980 ಭಾಗಿಸು 12 = ರೂ 1,03,832.

ನಿವೃತ್ತ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ : `ನಿವೃತ್ತಿ ವೇತನ', ಇತರೆ ಭತ್ಯೆ ಪರಿಷ್ಕರಿಸಿ ರಾಜ್ಯ ಸರ್ಕಾರ ಆದೇಶ


ನಿವೃತ್ತ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ : `ನಿವೃತ್ತಿ ವೇತನ', ಇತರೆ ಭತ್ಯೆ ಪರಿಷ್ಕರಿಸಿ ರಾಜ್ಯ ಸರ್ಕಾರ ಆದೇಶ

ರಾಜ್ಯ ಸರ್ಕಾರದ ನೀತಿ ನಿರ್ಣಯದಂತೆ, ಮೇಲೆ (2)ರಲ್ಲಿ ಓದಲಾದ ದಿನಾಂಕ: 22.07.2024ರ ಆದೇಶದಲ್ಲಿ 7ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸಿನಂತೆ ರಾಜ್ಯ ಸರ್ಕಾರಿ ನೌಕರರ ವೇತನ ಶ್ರೇಣಿಗಳು ಮತ್ತು ಪಿಂಚಣಿಯನ್ನು ಪರಿಷ್ಕರಿಸಿ ಅನುಷ್ಠಾನಗೊಳಿಸಲು ಆದೇಶಗಳನ್ನು ಹೊರಡಿಸಲಾಗಿರುತ್ತದೆ.

ಮುಂದುವರೆದು, ಕರ್ನಾಟಕ ನಾಗರೀಕ ಸೇವಾ (ಪರಿಷ್ಕೃತ ವೇತನ) ನಿಯಮಗಳು, 2024ರ ಅವಕಾಶಗಳಂತೆ ಪರಿಷ್ಕೃತ ವೇತನ ಶ್ರೇಣಿಗಳು ಮತ್ತು ಪರಿಷ್ಕೃತ ಪಿಂಚಣಿಯನ್ನು ಅನುಷ್ಠಾನಗೊಳಿಸಲು ಮೇಲೆ (4)ರಲ್ಲಿ ಓದಲಾದ ದಿನಾಂಕ: 23.08.2024ರಲ್ಲಿ ವಿಸ್ತ್ರತವಾದ ಆದೇಶಗಳನ್ನು ಹೊರಡಿಸಲಾಗಿರುತ್ತದೆ.

ರಾಜ್ಯ ಸರ್ಕಾರವು ರಚಿಸಿದ 7ನೇ ರಾಜ್ಯ ವೇತನ ಆಯೋಗವು ಶಿಫಾರಸ್ಸು ಮಾಡಿರುವಂತೆ ರಾಜ್ಯ ಸರ್ಕಾರಿ ನೌಕರರಿಗೆ ಲಭ್ಯವಿರುವ ಕನಿಷ್ಠ ಮತ್ತು ಗರಿಷ್ಠ ಪಿಂಚಣಿಯನ್ನು ಈ ಕೆಳಕಂಡಂತೆ ಪರಿಷ್ಕರಿಸಲು ಸರ್ಕಾರವು ಹರ್ಷಿಸುತ್ತದೆ.

1. ಕನಿಷ್ಠ ನಿವೃತ್ತಿ ವೇತನ:

ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳು ಮತ್ತು ಕರ್ನಾಟಕ ನಾಗರೀಕ ಸೇವಾ (ಅಸಾಧಾರಣ ನಿವೃತ್ತಿ ವೇತನ) ನಿಯಮಾವಳಿಗಳು, 2003ರ ಅವಕಾಶಗಳನ್ವಯ ಸಂದರ್ಭಾನುಸಾರ ಲಭ್ಯವಿರುವ ಈ ಕೆಳಕಂಡ ವಿವಿಧ ರೀತಿಯ ನಿವೃತ್ತಿ ವೇತನಗಳ ಕನಿಷ್ಠ ಮೊತ್ತವನ್ನು ಪ್ರಸ್ತುತ ಮಾಹೆಯಾನ ರೂ. 8,500/- ಗಳಿಂದ ಮಾಹೆಯಾನ ರೂ.13,500/-ಗಳಿಗೆ ಪರಿಷ್ಕರಿಸತಕ್ಕದ್ದು.

ಅ) ವಯೋ ನಿವೃತ್ತಿ ವೇತನ
ಆ) ವಿಶ್ರಾಂತಿ ನಿವೃತ್ತಿ ವೇತನ

ಇ) ಅಶಕ್ತತಾ ನಿವೃತ್ತಿ ವೇತನ

ಈ) ಪರಿಹಾರ ನಿವೃತ್ತಿ ವೇತನ

ಉ) ಅನುಕಂಪ ಭತ್ಯೆ

2. ಗರಿಷ್ಠ ನಿವೃತ್ತಿ ವೇತನ:

2.1 ಮೇಲಿನ ಕಂಡಿಕೆ-1 ರಲ್ಲಿ ನಿರ್ಧಿಷ್ಟಪಡಿಸಿರುವ ವಿವಿಧ ರೀತಿಯ ನಿವೃತ್ತಿ ವೇತನಗಳ ಗರಿಷ್ಠ ಮೊತ್ತದ ಪರಿಮಿತಿಯನ್ನು ಪ್ರಸ್ತುತ ಮಾಹೆಯಾನ ರೂ. 75,300/- ಗಳಿಂದ ಮಾಹೆಯಾನ ರೂ.1,20,600/-ಗಳಿಗೆ ಪರಿಷ್ಕರಿಸತಕ್ಕದ್ದು.

2.2 ಕೆಲವು ಅತ್ಯಂತ ಅಸಾಧಾರಣ ಸಂದರ್ಭಗಳನ್ನು ಹೊರತುಪಡಿಸಿ ಕರ್ನಾಟಕ ನಾಗರೀಕ ಸೇವಾ ನಿಯಮಗಳ ನಿಯಮ 210 ರಡಿ ಮಂಜೂರು ಮಾಡಲಾಗುವ ತಾರ್ತಿಕ (ಅಡ್ ಹಾಕ್) ನಿವೃತ್ತಿ ವೇತನದ ಪರಿಮಿತಿಯು ಮಾಹೆಯಾನ ರೂ.13,500/-ಗಳನ್ನು ಮೀರತಕ್ಕದ್ದಲ್ಲ.

3. ಕುಟುಂಬ ನಿವೃತ್ತಿ ವೇತನ:

3.1 ಸರ್ಕಾರಿ ನೌಕರರ ಅವಲಂಬಿತರಿಗೆ ಲಭ್ಯವಿರುವ ಕುಟುಂಬ ನಿವೃತ್ತಿ ವೇತನದ ಕನಿಷ್ಠ ಮೊತ್ತವು ಪ್ರಸ್ತುತ ಮಾಹೆಯಾನ ರೂ. 8,500/- ಗಳಿಂದ ಮಾಹೆಯಾನ ರೂ. 13,500/- ಗಳಿಗೆ ಪರಿಷ್ಕರಿಸತಕ್ಕದ್ದು.

3.2 ಕುಟುಂಬ ನಿವೃತ್ತಿ ವೇತನದ ಗರಿಷ್ಠ ಪರಿಮಿತಿಯು ಪ್ರಸ್ತುತ ಮಾಹೆಯಾನ ರೂ. 45,180/- ರಿಂದ ಮಾಹೆಯಾನ ರೂ. 80,400/-ಗಳಿಗೆ ಪರಿಷ್ಕರಿಸತಕ್ಕದ್ದು.

3.3 ಈ ಮೇಲಿನ ಪರಿಮಿತಿಯ ಮಿತಿಗೊಳಪಟ್ಟು ಲಭ್ಯವಿರುವ ಕುಟುಂಬ ನಿವೃತ್ತಿ ವೇತನದ ಮೊತ್ತವು ಕರ್ನಾಟಕ ಸರ್ಕಾರಿ ನೌಕರರ (ಕುಟುಂಬ ನಿವೃತ್ತಿ ವೇತನ) ನಿಯಮಗಳು, 2002ರಡಿ ಲಭ್ಯವಾಗುವ ಕುಟುಂಬ ನಿವೃತ್ತಿ ವೇತನದ ಉಪಲಬ್ದಗಳ ಶೇ. 30ರಷ್ಟು ಇರತಕ್ಕದ್ದು.

3.4 ಕರ್ನಾಟಕ ಸರ್ಕಾರಿ ನೌಕರರ (ಕುಟುಂಬ ನಿವೃತ್ತಿ ವೇತನ) ನಿಯಮಗಳು, 2002ರ ಅವಕಾಶಗಳಂತೆ, ದಿನಾಂಕ: 01.07.2022 ರಂದು ಮತ್ತು ತದನಂತರ ಸೇವೆಯಲ್ಲಿರುವಾಗಲೇ ಮರಣ ಹೊಂದಿದ ಸರ್ಕಾರಿ ನೌಕರರ ಪ್ರಕರಣಗಳಲ್ಲಿ, ಮೃತ ಸರ್ಕಾರಿ ನೌಕರನ ಅವಲಂಬಿತರು ಕುಟುಂಬ ನಿವೃತ್ತಿ ವೇತನದ ಪರಿಷ್ಕೃತ ಮೊತ್ತವನ್ನು ದಿನಾಂಕ: 01.08.2024ರಿಂದ ಪಡೆಯಲು ಅರ್ಹರಿರುತ್ತಾರೆ.

3.5 ದಿನಾಂಕ: 01.07.2022ರ ಪೂರ್ವದಲ್ಲಿ ಕುಟುಂಬ ನಿವೃತ್ತಿ ವೇತನ ಪಡೆಯುತ್ತಿದ್ದ ಮೃತ ಸರ್ಕಾರಿ ನೌಕರನ ಅವಲಂಬಿತರಿಗೆ ಈ ಆದೇಶದ ಅನುಬಂಧದಲ್ಲಿ ತೋರಿಸಿರುವಂತೆ ಪರಿಷ್ಕೃತ ಕುಟುಂಬ ನಿವೃತ್ತಿ ವೇತನವು ಲಭ್ಯವಿರುತ್ತದೆ.

4. ತುಟ್ಟಿ ಭತ್ಯೆ:

4.1 ಅಖಿಲ ಭಾರತ ಸರಾಸರಿ ಗ್ರಾಹಕ ಬೆಲೆ ಸೂಚ್ಯಂಕ (ಸಾಮಾನ್ಯ) 361.704 ಅಂಶಗಳವರೆಗಿನ (ಆಧಾರ ವರ್ಷ 2001=100) ತುಟ್ಟಿ ಭತ್ಯೆಯನ್ನು ದಿನಾಂಕ: 1ನೇ ಜುಲೈ 2022 ರಂದು ಲಭ್ಯವಿದ್ದ ಪ್ರಸ್ತುತ ಮೂಲ ಪಿಂಚಣಿ/ಕುಟುಂಬ ಪಿಂಚಣಿಯೊಂದಿಗೆ ವಿಲೀನಗೊಳಿಸಿ ರಾಜ್ಯ ಸರ್ಕಾರಿ ನೌಕರರ ಪರಿಷ್ಕೃತ ಪಿಂಚಣಿ/ಕುಟುಂಬ ಪಿಂಚಣಿ ಮೊತ್ತವನ್ನು ನಿರ್ಧರಿಸಲಾಗಿರುತ್ತದೆ. ಆದುದರಿಂದ, ಪರಿಷ್ಕೃತ ನಿವೃತ್ತಿ ವೇತನ / ಕುಟುಂಬ ನಿವೃತ್ತಿ ವೇತನ ಮೇಲಿನ ತುಟ್ಟಿ ಭತ್ಯೆಯ ಮೊದಲನೇ ಕಂತನ್ನು ದಿನಾಂಕ: 1ನೇ ಜನವರಿ 2023ರಿಂದ ಲೆಕ್ಕಹಾಕಿ ಈ ಕೆಳಗೆ ತಿಳಿಸಿರುವ ದಿನಾಂಕದಿಂದ ಮಂಜೂರು ಮಾಡತಕ್ಕದ್ದು.

4.2 ಕಾರ್ಯನಿರತ ಸರ್ಕಾರಿ ನೌಕರರಿಗೆ ಕಾಲ ಕಾಲಕ್ಕೆ ಮಂಜೂರು ಮಾಡುವ ತುಟ್ಟಿ ಭತ್ಯೆ ಆದೇಶಗಳನ್ನು ಅನ್ವಯಿಸಿ ನಿವೃತ್ತಿ ವೇತನದಾರರು ಮತ್ತು ಕುಟುಂಬ ನಿವೃತ್ತಿ ವೇತನದಾರರಿಗೆ ತುಟ್ಟಿ ಭತ್ಯೆಯನ್ನು ಕ್ರಮಬದ್ಧಗೊಳಿಸಿ ಮಂಜೂರು ಮಾಡುವುದನ್ನು ಮುಂದುವರೆಸತಕ್ಕದ್ದು. ಅದರಂತೆ, ಪರಿಷ್ಕೃತ ನಿವೃತ್ತಿ ವೇತನ/ ಪರಿಷ್ಕೃತ ಕುಟುಂಬ ನಿವೃತ್ತಿ ವೇತನದ ಮೇಲೆ ತುಟ್ಟಿ ಭತ್ಯೆಯನ್ನು ಈ ಕೆಳಕಂಡಂತೆ ಕಾಲ್ಪನಿಕವಾಗಿ ಕ್ರಮಬದ್ಧಗೊಳಿಸತಕ್ಕದ್ದು:

01.07.2023 - ಶೂನ್ಯ

01.01.2023 -2.75% ಪರಿಷ್ಕೃತ ಮೂಲ ನಿವೃತ್ತಿ ವೇತನ/ಕುಟುಂಬ ನಿವೃತ್ತಿ ವೇತನ 01.07.2023 - 5.5% ಪರಿಷ್ಕೃತ ಮೂಲ ನಿವೃತ್ತಿ ವೇತನ/ಕುಟುಂಬ ನಿವೃತ್ತಿ ವೇತನ

01.01.2024 8.5% ಪರಿಷ್ಕೃತ ಮೂಲ ನಿವೃತ್ತಿ ವೇತನ/ಕುಟುಂಬ ನಿವೃತ್ತಿ ವೇತನ

4.3 ಮುಂದಿನ ತುಟ್ಟಿ ಭತ್ಯೆಯ ಮಂಜೂರಾತಿಯು ಈ ಸಂಬಂಧ ರಾಜ್ಯ ಸರ್ಕಾರವು ಹೊರಡಿಸುವ ಆದೇಶಗಳಲ್ಲಿ ಕ್ರಮಬದ್ಧಗೊಳಿಸಿದಂತೆ ಇರತಕ್ಕದ್ದು.

4.4 ತುಟ್ಟಿ ಭತ್ಯೆಯನ್ನು 1ನೇ ಜನವರಿ ಮತ್ತು 1ನೇ ಜುಲೈರಿಂದ ಅನ್ವಯಿಸುವಂತೆ ವರ್ಷಕ್ಕೆ ಎರಡು ಬಾರಿ ಪಾವತಿಸುವುದು.

5. ನಿವೃತ್ತಿ ಉಪದಾನ / ಮರಣ ಉಪದಾನ :

5.1 ದಿನಾಂಕ: 01.07.2022ರಂದು ಮತ್ತು ನಂತರದಲ್ಲಿ ಹಾಗೂ ದಿನಾಂಕ: 01.08.2024ಕ್ಕೂ ಮುಂಚಿತವಾಗಿ ಸೇವೆಯಿಂದ ನಿವೃತ್ತನಾದ ಕಾರಣದಿಂದ ಸೇವೆಯಲ್ಲಿರುವುದು ಕೊನೆಗೊಂಡ ಸರ್ಕಾರಿ ನೌಕರನ ಪ್ರಕರಣದಲ್ಲಿ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ಅವಕಾಶಗಳನ್ವಯ ಪಾವತಿಸಲಾಗುವ ನಿವೃತ್ತಿ ಉಪದಾನವು ಪೂರ್ಣಗೊಳಿಸಲಾದ ಪ್ರತಿ ಆರು ಮಾಸಿಕ ಅರ್ಹತಾ ಸೇವೆಗೆ ಪ್ರಸ್ತುತ ಉಪಲಬ್ದಗಳ ಗರಿಷ್ಠ ಮಿತಿ 16 1/2 ಕ್ಕೆ ಸೀಮಿತಗೊಳಿಸಿ, ಪ್ರಸ್ತುತ ಉಪಲಬ್ಬಗಳ 1/4 ನೇ ಭಾಗಕ್ಕೆ ಸಮನಾಗತಕ್ಕದು. ಈ ರೀತಿ ಲೆಕ್ಕ ಹಾಕಲಾದ ನಿವೃತ್ತಿ ಉಪದಾನದ ಗರಿಷ್ಠ ಮಿತಿಯು ರೂ.20.00 ಲಕ್ಷಗಳಾಗಿರುತ್ತದೆ.

5.2 ದಿನಾಂಕ: 01.07.2022 ರಂದು ಅಥವಾ ತದನಂತರ ಆದರೆ ದಿನಾಂಕ: 01.08.2024ರೊಳಗೆ ಸೇವೆಯಲ್ಲಿರುವಾಗಲೇ ಮರಣ ಹೊಂದಿದ ಸರ್ಕಾರಿ ನೌಕರನ ಪ್ರಕರಣದಲ್ಲಿ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳಡಿ ಲಭ್ಯವಿರುವ ಮರಣ ಉಪದಾನವು ಈ ಕೆಳಕಂಡ ದರಗಳಲ್ಲಿ ಲಭ್ಯವಾಗುತ್ತದೆ.

ಬುಧವಾರ, ಆಗಸ್ಟ್ 28, 2024

PF Withdrawal Process

 PF Withdrawal Process: ಭವಿಷ್ಯ ನಿಧಿ (ಇಪಿಎಫ್) ಎನ್ನುವುದು ಉದ್ಯೋಗಿಗಳು ಸ್ವಲ್ಪ ಮೊತ್ತದ ವೇತನ ಉಳಿಸುವ ಪ್ರಕ್ರಿಯೆ. ಇಪಿಎಫ್ ನಿಯಮದ ಪ್ರಕಾರ, ಉದ್ಯೋಗಿಗಳು ತಮ್ಮ ಸಂಬಳದ ಶೇಕಡಾ 12 ರಷ್ಟು ಹಣವನ್ನು ಪ್ರತಿ ತಿಂಗಳು ಪಿಎಫ್​​ನಲ್ಲಿ ಠೇವಣಿ ಇಡಬೇಕು. ಇಲ್ಲಿ ಉದ್ಯೋಗಿಯ ಪಾಲಿನಷ್ಟೇ ಮೊತ್ತವನ್ನು ಕಂಪನಿಯು ಸಹ ಪಿಎಫ್ ಖಾತೆಗೆ ವರ್ಗಾವಣೆ ಮಾಡುತ್ತದನ್ ಉದ್ಯೋಗಿಗಳು ಕೆಲಸದಿಂದ ನಿವೃತ್ತಿಯಾದ ಬಳಿಕ ಪಿಎಫ್ ಮೊತ್ತ ತೆಗೆದುಕೊಳ್ಳಬಹುದು. ಅದಾಗ್ಯೂ ಕೆಲವು ತುರ್ತು ಸಂದರ್ಭಗಳಲ್ಲಿ ಪಿಎಫ್ ವಿತ್ರಾ ಮಾಡಲು ಕೇಂದ್ರ ಸರ್ಕಾರ ಅವಕಾಶ ನೀಡಿದೆ. ಆದರೆ ನಿವೃತ್ತಿಗೂ ಮುನ್ನ ಪೂರ್ಣ ಪ್ರಮಾಣದ ಮೊತ್ತ ವಿತ್​ಡ್ರಾ ಮಾಡಲು ಸಾಧ್ಯವಿಲ್ಲ. ಶೇ 75ರಷ್ಟು ಮೊತ್ತವನ್ನು ಡ್ರಾ ಮಾಡಿಕೊಳ್ಳಬಹುದು. 2023-24ರ ಆರ್ಥಿಕ ವರ್ಷದಲ್ಲಿ ಶೇ.8.25ಕ್ಕೆ ಬಡ್ಡಿ ಹೆಚ್ಚಾಗಿದ್ದು, ಈ ವರ್ಷ ಏಪ್ರಿಲ್ 16ರಂದು ವೈದ್ಯಕೀಯ ಚಿಕಿತ್ಸೆಗೆ ವಿತ್​ಡ್ರಾ ಮಾಡುವ ಮೊತ್ತವನ್ನು 50 ಸಾವಿರದಿಂದ 1 ಲಕ್ಷಕ್ಕೆ ಏರಿಸಲಾಗಿದೆ.

ಇಪಿಎಫ್ ಯಾವಾಗ ವಿತ್ ಡ್ರಾ ಮಾಡಬಹುದು?

ಎರಡು ಬಾರಿ ಪೂರ್ತಿಯಾಗಿ ಇಪಿಎಫ್ ಮೊತ್ತವನ್ನು ವಿತ್​ಡ್ರಾ ಮಾಡಿಕೊಳ್ಳಲು ಅವಕಾಶ ಇದೆ. ಈ ಪೈಕಿ ಒಂದು ಬಾರಿ ಉದ್ಯೋಗಿಯೊಬ್ಬರು ಸಂಪೂರ್ಣ ನಿವೃತ್ತರಾದಾಗ. ಮತ್ತೊಂದು ಬಾರಿ ಉದ್ಯೋಗಿ ಒಂದು ತಿಂಗಳ ಕಾಲ ನಿರುದ್ಯೋಗಿಯಾದಾಗ ಶೇ 75ರಷ್ಟು ಮತ್ತು 2 ತಿಂಗಳಿಗೂ ಹೆಚ್ಚು ಕಾಲ ನಿರುದ್ಯೋಗಿಯಾದರೆ ಉಳಿದ ಶೇ.25 ರಷ್ಟನ್ನು ವಿತ್​ ಡ್ರಾ ಮಾಡಬಹುದು.
 ಭಾಗಶಃ ವಿತ್ ಡ್ರಾ

ಕೆಲವು ನಿರ್ದಿಷ್ಟ ಪರಿಸ್ಥಿತಿಗಳಲ್ಲಿ ಇಪಿಎಫ್ ಮೊತ್ತದಲ್ಲಿ ಭಾಗಶಃ ವಿತ್ ಡ್ರಾ ಮಾಡಿಕೊಳ್ಳಬಹುದು. ನಿವೃತ್ತಿಗೂ ಮೊದಲು ವೈದ್ಯಕೀಯ ಚಿಕಿತ್ಸೆ, ಮದುವೆ, ಶಿಕ್ಷಣ, ಭೂಮಿ ಅಥವಾ ಮನೆ ಖರೀದಿ ಅಥವಾ ಮನೆ ನಿರ್ಮಾಣ ಅಥವಾ ನವೀಕರಣ, ಗೃಹ ಸಾಲದ ಮರುಪಾವತಿಗೆ ಸಂಬಂಧಿಸಿ ಭಾಗಶಃ ಪಿಎಫ್ ಹಿಂಪಡೆಯಬಹುದು.

ಪಿಎಫ್ ವಿತ್ ​ಡ್ರಾ ಮಾಡುವುದೇಗೆ?

ಆಫ್​ಲೈನ್ ಅಪ್ಲಿಕೇಶನ್: ಇಪಿಎಫ್ ವಿತ್​ಡ್ರಾಗೆ ಕಾಂಪೋಸಿಟ್ ಕ್ಲೈಮ್ ಫಾರ್ಮ್ (ಆಧಾರ್)/ಕಾಂಪೋಸಿಟ್ ಕ್ಲೈಮ್ ಫಾರ್ಮ್ (ಆಧಾರ್ ಅಲ್ಲದ) ಡೌನ್‌ಲೋಡ್ ಮಾಡಿ. (Composite Claim Form)

ಕಾಂಪೋಸಿಟ್ ಕ್ಲೈಮ್ ಫಾರ್ಮ್ (ಆಧಾರ್): ಯುಎಎನ್​ (UAN) ಪೋರ್ಟಲ್‌ನಲ್ಲಿ ನಿಮ್ಮ ಆಧಾರ್ ಮತ್ತು ಬ್ಯಾಂಕ್ ಖಾತೆಯ ವಿವರಗಳನ್ನು ನೀವು ಲಿಂಕ್ ಮಾಡಿದ್ದರೆ ಕಾಂಪೋಸಿಟ್ ಕ್ಲೈಮ್ ಫಾರ್ಮ್ (ಆಧಾರ್) ಭರ್ತಿ ಮಾಡಬೇಕು. ಈ ಫಾರಂನೊಂದಿಗೆ ನಿಮ್ಮ ಕಂಪನಿಯ ದೃಢೀಕರಣ ಇಲ್ಲದೆಯೇ ಸಂಬಂಧಿಸಿದ ಇಪಿಎಫ್​ ಆಫೀಸ್​ನಲ್ಲಿ ಸಲ್ಲಿಸಬೇಕು.
 ಕಾಂಪೋಸಿಟ್ ಕ್ಲೈಮ್ ಫಾರ್ಮ್ (ಆಧಾರ್ ಅಲ್ಲದ): ಯುಎಎನ್​ ಪೋರ್ಟಲ್‌ನಲ್ಲಿ ಆಧಾರ್ ಮತ್ತು ಬ್ಯಾಂಕ್ ವಿವರ ಲಿಂಕ್ ಮಾಡದಿದ್ದರೆ ಕಾಂಪೋಸಿಟ್ ಕ್ಲೈಮ್ ಫಾರ್ಮ್ (ಆಧಾರ್ ಅಲ್ಲದ) ಬಳಸಬಹುದು. ಆದರೆ ನೀವು ಕೆಲಸ ಮಾಡುತ್ತಿರುವ ಕಂಪನಿಯ ದೃಢೀಕರಣದೊಂದಿಗೆ ನೀವು ಈ ಫಾರ್ಮ್ ಭರ್ತಿಗೊಳಿಸಬೇಕು. ಅದರ ನಂತರ ಅದನ್ನು ಇಪಿಎಫ್‌ಒ ಕಚೇರಿಯಲ್ಲಿ ಸಲ್ಲಿಸಬೇಕು. ಭಾಗಶಃ ವಿತ್​ಡ್ರಾಗೆ ಸೂಕ್ತ ದಾಖಲೆಗಳನ್ನು ಸಲ್ಲಿಸುವ ಅಗತ್ಯವಿದೆ.

ಆನ್‌ಲೈನ್ ಪಿಎಫ್ ಹಿಂಪಡೆಯುವ ವಿಧಾನ

ಆನ್​ಲೈನ್​ ಮೂಲಕವೂ ಪಿಎಫ್ ವಿತ್ ಡ್ರಾ ಮಾಡಿಕೊಳ್ಳಬಹುದು. ಅದಕ್ಕಾಗಿ ಯುಎಎನ್​ ನಂಬರ್ ಆಯಕ್ಟಿವೇಟ್ ಮಾಡಬೇಕು. ಯುಎಎನ್​ಗೆ ಲಿಂಕ್​ ಆಗಿರುವ ಮೊಬೈಲ್ ಸಂಖ್ಯೆ ಕಾರ್ಯನಿರ್ವಹಿಸುತ್ತಿರಬೇಕು. ಯುಎಎನ್​ ಕೆವೈಸಿ ಅಪ್ಡೇಟ್ ಮಾಡಬೇಕು. ಅಂದರೆ ಆಧಾರ್, ಪಾನ್​, ಬ್ಯಾಂಕ್ ಖಾತೆ, ಐಎಫ್​ಎಸ್​ಸಿ ಅನ್ನು ಯುಎಎನ್​ಗೆ ಲಿಂಕ್ ಮಾಡಿರಬೇಕು. ಈ ವಿವರಗಳೊಂದಿಗೆ ನಿಮ್ಮ ಖಾತೆಯನ್ನು ಲಿಂಕ್ ಮಾಡಿದ್ದರೆ ಪಿಎಫ್ ಹಿಂಪಡೆಯಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
 ಆನ್‌ಲೈನ್‌ನಲ್ಲಿ ಪಿಎಫ್ ಡ್ರಾ ಮಾಡುವುದು ಹೇಗೆ?

ಹಂತ 1: ಯುಎಎನ್​ ಪೋರ್ಟಲ್​ಗೆ https://passbook.epfindia.gov.in/ ಭೇಟಿ ನೀಡಿ. ಮುಖಪುಟ ಓಪನ್ ಆದ ಬೆನ್ನಲ್ಲೇ ಸರ್ವೀಸ್​ ಮೇಲೆ ಕ್ಲಿಕ್ ಮಾಡಿ. ಅಲ್ಲಿ ಫಾರ್ ಎಂಪ್ಲಾಯೀಸ್ (For_Employees) ಮೇಲೆ ಒತ್ತಿ.

ಹಂತ 2: ನಿಮ್ಮ ಯುಎಎನ್, ಪಾಸ್‌ವರ್ಡ್‌ನೊಂದಿಗೆ ಲಾಗಿನ್ ಮಾಡಿ.

ಹಂತ 3 : 'ಮ್ಯಾನೇಜ್' ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ನಿಮ್ಮ ಕೆವೈಸಿ ವಿವರಗಳಾದ ಆಧಾರ್, ಪ್ಯಾನ್, ಬ್ಯಾಂಕ್ ವಿವರಗಳನ್ನು ಲಿಂಕ್ ಮಾಡಲಾಗಿದೆಯೇ ಎಂದು ಪರಿಶೀಲಿಸಿ.

ಹಂತ 4: ಕೆವೈಸಿ ವಿವರ ಪರಿಶೀಲಿಸಿದ ನಂತರ, 'ಆನ್‌ಲೈನ್ ಸರ್ವೀಸಸನ್' ಟ್ಯಾಬ್‌ ಮೇಲೆ ಕ್ಲಿಕ್ ಮಾಡಿ. ಅಲ್ಲಿ 'ಕ್ಲೈಮ್ (ಫಾರ್ಮ್-31,19,10C&10D)' ಸೆಲೆಕ್ಟ್ ಮಾಡಿ.

ಹಂತ 5: ಉದ್ಯೋಗಿ ವಿವರ, ಕೆವೈಸಿ ಮತ್ತು ಇತರ ವಿವರಗಳನ್ನು ಒಮ್ಮೆ ಪರಿಶೀಲಿಸಿ. ಅಲ್ಲಿ ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆಯನ್ನು ಎಂಟರ್ ಮಾಡಿದ ಬಳಿಕ 'ವೆರಿಫೈ' ಮೇಲೆ ಕ್ಲಿಕ್ ಮಾಡಿ.
ಹಂತ 6: ಅಂಡರ್‌ಟೇಕಿಂಗ್ ಸರ್ಟಿಫಿಕೇಟ್​ಗೆ ಸಹಿ ಮಾಡಲು ಯೆಸ್​ (Yes) ಕ್ಲಿಕ್ ಮಾಡಿ. ನಂತರ ಕಂಟಿನ್ಯೂ ಮಾಡಿ.

ಹಂತ 7: ಈಗ 'ಪ್ರೊಸೀಡ್ ಫಾರ್ ಆನ್‌ಲೈನ್ ಕ್ಲೈಮ್' (Proceed for online claim) ಮೇಲೆ ಕ್ಲಿಕ್ ಮಾಡಿ.

ಹಂತ 8: ಕ್ಲೈಮ್ ಫಾರ್ಮ್‌ನಲ್ಲಿ, 'ಐ ವಾಂಟ್ ಟು ಅಪ್ಲೈ ಫಾರ್' (I Want To Apply For) ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ಮತ್ತು ನಿಮಗೆ ಅಗತ್ಯವಿರುವ ಕ್ಲೈಮ್ ಅನ್ನು ಆಯ್ಕೆ ಮಾಡಿ. ಅಂದರೆ ಇಪಿಎಫ್ ಸೆಟಲ್ಮೆಂಟ್, ಇಪಿಎಫ್ ಭಾಗ ವಿತ್ ಡ್ರಾ (ಸಾಲ/ಮುಂಗಡ) ಅಥವಾ ಪಿಂಚಣಿ ವಿತ್ ಡ್ರಾ ಆಯ್ಕೆಯನ್ನು ಆರಿಸುವುದು.

ಹಂತ 9: ನಿಮ್ಮ ನಿಧಿಯನ್ನು ಹಿಂಪಡೆಯಲು 'ಪಿಎಫ್ ಅಡ್ವಾನ್ಸ್ (ಫಾರ್ಮ್ 31)' ಆಯ್ಕೆ ಮಾಡಿ. ಇದರಲ್ಲಿ ಮುಂಗಡ ಪ್ರಯೋಜನ, ಅಗತ್ಯವಿರುವ ಮೊತ್ತ, ಉದ್ಯೋಗಿ ವಿವರಗಳನ್ನು ನಮೂದಿಸಬೇಕು.

ಹಂತ 10: ನಿಮ್ಮ ಅರ್ಜಿಯನ್ನು ಸಲ್ಲಿಸಿ. ಫಾರ್ಮ್ ಭರ್ತಿ ಮಾಡುವಾಗ ಯಾವ ಕಾರಣ ಹಾಗೂ ಉದ್ದೇಶಕ್ಕೆ ಪಿಎಫ್​ ವಿತ್ ಡ್ರಾ ಮಾಡುತ್ತಿದ್ದೀರಿ ಎಂಬುದಕ್ಕೆ ಸಂಬಂಧಿಸಿ ಸರ್ಟಿಫಿಕೇಟ್ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಸಲ್ಲಿಸಬೇಕು.

ಭಾನುವಾರ, ಆಗಸ್ಟ್ 25, 2024

ಯುಪಿಎಸ್‌ ವೈಶಿಷ್ಟ್ಯಗಳೇನು?

 ಯುಪಿಎಸ್‌ ವೈಶಿಷ್ಟ್ಯಗಳೇನು?


1. ಖಚಿತ ಪಿಂಚಣಿ


ಕನಿಷ್ಠ 25 ವರ್ಷಗಳ ಕಾಲ ಸೇವೆ ಸಲ್ಲಿಸಿದ ಉದ್ಯೋಗಿಗಳು ನಿವೃತ್ತಿಯ ಹಿಂದಿನ 12 ತಿಂಗಳುಗಳಲ್ಲಿ ಪಡೆದ ಸರಾಸರಿ ಮೂಲ ವೇತನದ ಶೇ. 50ರಷ್ಟು ಖಚಿತವಾದ ಪಿಂಚಣಿಯನ್ನು ಪಡೆಯುತ್ತಾರೆ. 25 ವರ್ಷಕ್ಕಿಂತ ಕಡಿಮೆ ಸೇವೆ ಸಲ್ಲಿಸಿದವರ ಪಿಂಚಣಿಯು ಅವರ ಅವಧಿಗೆ ಅನುಗುಣವಾಗಿರುತ್ತದೆ. ಕನಿಷ್ಠ ಅರ್ಹತಾ ಸೇವಾ ಅವಧಿಯನ್ನು 10 ವರ್ಷಗಳಿಗೆ ನಿಗದಿಪಡಿಸಲಾಗಿದೆ.


2. ಖಚಿತವಾದ ಕುಟುಂಬ ಪಿಂಚಣಿ


ಅಪಘಾತದಿಂದ ನೌಕರ ಮರಣ ಹೊಂದಿದರೆ ಅವರ ಸಂಗಾತಿಯು ಅಥವಾ ಅವಲಂಬಿತರು ಕುಟುಂಬ ಪಿಂಚಣಿ ಪಡೆಯಲು ಅರ್ಹರಾಗಿರುತ್ತಾರೆ. ಮರಣದ ಮೊದಲು ಉದ್ಯೋಗಿ ಪಡೆಯುತ್ತಿದ್ದ ಪಿಂಚಣಿಯ ಶೇ. 60ರಷ್ಟು ಅವರ ಸಂಗಾತಿಗೆ ಕುಟುಂಬ ಪಿಂಚಣಿಯಾಗಿ ದೊರೆಯುತ್ತದೆ.


3. ಖಚಿತವಾದ ಕನಿಷ್ಠ ಪಿಂಚಣಿ


ಕನಿಷ್ಠ 10 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ನೌಕರರಿಗೆ ನಿವೃತ್ತಿಯ ಅನಂತರ ತಿಂಗಳಿಗೆ 10,000 ರೂ. ಕನಿಷ್ಠ ಪಿಂಚಣಿಯ ಖಾತರಿ ಇದೆ.


4. ಹಣದುಬ್ಬರ ಸೂಚ್ಯಂಕ


ಖಚಿತ ಮತ್ತು ಕುಟುಂಬ ಪಿಂಚಣಿ ಎರಡೂ ಹಣದುಬ್ಬರ ಸೂಚ್ಯಂಕಕ್ಕೆ ಒಳಪಟ್ಟಿರುತ್ತವೆ. ಈ ಹೊಂದಾಣಿಕೆಯು ಪಿಂಚಣಿಗಳು ಹಣದುಬ್ಬರಕ್ಕೆ ಅನುಗುಣವಾಗಿರುವುದನ್ನು ಖಚಿತಪಡಿಸುತ್ತದೆ.


5. ದರ ಏರಿಕೆ ಪರಿಹಾರ


ಸೇವೆಯಲ್ಲಿರುವ ಉದ್ಯೋಗಿಗಳಂತೆಯೇ ಯುಪಿಎಸ್ ಅಡಿಯಲ್ಲಿ ನಿವೃತ್ತರಾದ ಕೈಗಾರಿಕಾ ಕಾರ್ಮಿಕರಿಗೆ (AICPI-IW) ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕವನ್ನು ಆಧರಿಸಿ ದರ ಏರಿಕೆ ಪರಿಹಾರವನ್ನು ಪಡೆಯುತ್ತಾರೆ.


Unified Pension Scheme


6. ನಿವೃತ್ತಿಯ ಮೇಲೆ ಒಟ್ಟು ಮೊತ್ತ


ಗ್ರಾಚ್ಯುಟಿ ಜೊತೆಗೆ ಉದ್ಯೋಗಿಗಳು ನಿವೃತ್ತಿಯ ಸಮಯದಲ್ಲಿ ಒಂದು ದೊಡ್ಡ ಮೊತ್ತದ ಪಾವತಿಯನ್ನು ಸ್ವೀಕರಿಸುತ್ತಾರೆ. ಈ ಪಾವತಿಯು ವೇತನ ಮತ್ತು ತುಟ್ಟಿ ಭತ್ಯೆ ಸೇರಿ ನಿವೃತ್ತಿಯ ದಿನಾಂಕ ಪೂರ್ಣಗೊಂಡ ಪ್ರತಿ ಆರು ತಿಂಗಳ ಸೇವೆಗೆ ಉದ್ಯೋಗಿಯ ಮಾಸಿಕ ವೇತನದ 1/10 ಭಾಗವಾಗಿರುತ್ತದೆ. ಈ ಒಟ್ಟು ಮೊತ್ತದ ಪಾವತಿಯು ಖಚಿತವಾದ ಪಿಂಚಣಿಯ ಪ್ರಮಾಣವನ್ನು ಕಡಿಮೆ ಮಾಡುವುದಿಲ್ಲ.


7. ಸರ್ಕಾರದ ಕೊಡುಗೆ


ಈ ಪಿಂಚಣಿ ಯೋಜನೆಯಡಿ ಸರ್ಕಾರವು ತನ್ನ ಕೊಡುಗೆಯನ್ನು ಶೇ. 14ರಿಂದ ಶೇ.18.5ಕ್ಕೆ ಹೆಚ್ಚಿಸುತ್ತಿದೆ. ಆದರೆ ನೌಕರರ ಕೈಯಿಂದ ಈಗಿರುವ ಪ್ರಮಾಣದಷ್ಟೇ ಹಣ ಈ ಯೋಜನೆಗೆ ಸಂದಾಯವಾಗುತ್ತದೆ. ಹಾಗಾಗಿ ಇದರಿಂದ ನೌಕರರಿಗೆ ಹೆಚ್ಚು ಪ್ರಯೋಜನ ಸಿಗುವಂತಾಗುತ್ತದೆ.

8. ನಿವೃತ್ತಿ ಹೊಂದಿದವರಿಗೂ ಅನ್ವಯ


ಏಕೀಕೃತ ಪಿಂಚಣಿ ಯೋಜನೆಯ ನಿಬಂಧನೆಗಳು ರಾಷ್ಟ್ರೀಯ ಪಿಂಚಣಿ ಯೋಜನೆ ಹೊಂದಿರುವ ಹಿಂದಿನ ನಿವೃತ್ತರಿಗೆ ಅಂದರೆ ಈಗಾಗಲೇ ನಿವೃತ್ತಿ ಹೊಂದಿದವರಿಗೂ ಅನ್ವಯಿಸುತ್ತದೆ. ಹಿಂದಿನ ಅವಧಿಯ ಬಾಕಿಯನ್ನು ಪಿಪಿಎಫ್ ದರಗಳಲ್ಲಿ ಬಡ್ಡಿಯೊಂದಿಗೆ ಪಾವತಿಸಲಾಗುತ್ತದೆ.


9. ಏಕೀಕೃತ ಪಿಂಚಣಿ ಯೋಜನೆಗೆ ಸೇರುವ ಆಯ್ಕೆ


ಅಸ್ತಿತ್ವದಲ್ಲಿರುವ ಎನ್‌ಪಿಎಸ್, ವಿಆರ್‌ಎಸ್ ಜೊತೆಗೆ ಎನ್‌ಪಿಎಸ್ ಜೊತೆಗೆ ಭವಿಷ್ಯದ ಉದ್ಯೋಗಿಗಳು ಯುಪಿಎಸ್‌ಗೆ ಸೇರುವ ಆಯ್ಕೆಯನ್ನು ಹೊಂದಿರುತ್ತಾರೆ. ಈ ಆಯ್ಕೆಯನ್ನು ಒಮ್ಮೆ ಮಾಡಿಕೊಂಡರೆ ಅದೇ ಅಂತಿಮವಾಗಿರುತ್ತದೆ. ಕೇಂದ್ರ ಸರ್ಕಾರದಿಂದ ಯುಪಿಎಸ್ ಅನ್ನು ಜಾರಿಗೊಳಿಸಲಾಗುತ್ತಿದೆ. ಇದನ್ನು ರಾಜ್ಯ ಸರ್ಕಾರಗಳೂ ಅಳವಡಿಸಿಕೊಳ್ಳಬಹುದಾಗಿದೆ. ಆದರೆ ಕೇಂದ್ರದಂತೆ ರಾಜ್ಯ ಸರ್ಕಾರವೂ ಹೆಚ್ಚುವರಿ ಮೊತ್ತ ಪಾವತಿಸಬೇಕಾಗುತ್ತದೆ.




25 ವರ್ಷ ಕೆಲಸ ಮಾಡುವ ನೌಕರರಿಗೆ ಪೂರ್ಣ ಪಿಂಚಣಿ ಸಿಗಲಿದೆ ಎಂದು ಸರ್ಕಾರ ಹೇಳಿದೆ. ಯುಪಿಎಸ್ ಯೋಜನೆಯಿಂದ 23 ಲಕ್ಷ ಕೇಂದ್ರ ನೌಕರರು ಪ್ರಯೋಜನ ಪಡೆಯಲಿದ್ದಾರೆ. ಈ ಯೋಜನೆಯು ಏಪ್ರಿಲ್ 1, 2025 ರಿಂದ ಜಾರಿಗೆ ಬರಲಿದೆ.


ಸಂಪುಟ ಸಭೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್, 10 ವರ್ಷ ಸೇವೆ ಸಲ್ಲಿಸಿದವರಿಗೆ 10 ಸಾವಿರ ಪಿಂಚಣಿ ಸಿಗಲಿದೆ. ನೌಕರರು ಸೇವೆಯಲ್ಲಿರುವಾಗಲೇ ಮೃತಪಟ್ಟರೆ ಅವರ ಪತ್ನಿಯರಿಗೆ ಶೇ.60ರಷ್ಟು ಪಿಂಚಣಿ ನೀಡಲಾಗುವುದು.


ನೌಕರನು ಕನಿಷ್ಠ 25 ವರ್ಷಗಳ ಕಾಲ ಕೆಲಸ ಮಾಡುತ್ತಿದ್ದರೆ, ನಿವೃತ್ತಿಗೆ ಹಿಂದಿನ 12 ತಿಂಗಳ ಹಿಂದಿನ ಸರಾಸರಿ ವೇತನದ ಕನಿಷ್ಠ 50 ಪ್ರತಿಶತವನ್ನ ಪಿಂಚಣಿಯಾಗಿ ಪಡೆಯುತ್ತಾನೆ ಎಂದು ಸರ್ಕಾರ ಹೇಳಿದೆ. ಒಬ್ಬ ಪಿಂಚಣಿದಾರನು ಮರಣ ಹೊಂದಿದರೆ, ಅವನ ಕುಟುಂಬವು ಮರಣದ ಸಮಯದಲ್ಲಿ ಪಡೆದ ಪಿಂಚಣಿಯ ಶೇಕಡಾ 60 ರಷ್ಟು ಪಡೆಯುತ್ತದೆ.


ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಪ್ರಕಟಿಸಿದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್‌, ಏಕೀಕೃತ ಪಿಂಚಣಿ ಯೋಜನೆಯಡಿ (ಯುಪಿಎಸ್) ಸರ್ಕಾರಿ ನೌಕರರು ನಿವೃತ್ತಿಯ ಹಿಂದಿನ 12 ತಿಂಗಳ ಸರಾಸರಿ ಮೂಲ ವೇತನದ ಕನಿಷ್ಠ ಶೇ 50ರಷ್ಟನ್ನು ಪಿಂಚಣಿಯಾಗಿ ಪಡೆಯಲು ಅರ್ಹರಾಗಿರುತ್ತಾರೆ ಎಂದು ಹೇಳಿದರು.


ಎನ್‌ಪಿಎಸ್‌ ಆಯ್ಕೆ ಮಾಡಿಕೊಂಡಿರುವ ನೌಕರರಿಗೆ ಈಗ ಏಕೀಕೃತ ಪಿಂಚಣಿ ಯೋಜನೆಯ ಆಯ್ಕೆಗೆ ಅವಕಾಶ ಸಿಗಲಿದೆ. ಕನಿಷ್ಠ 25 ವರ್ಷ ಕೆಲಸ ಮಾಡಿದವರಿಗೆ ಮೂಲ ವೇತನದ ಶೇ 50ರಷ್ಟು ಪಿಂಚಣಿಯಾಗಿ ಸಿಗಲಿದೆ. ಅದಕ್ಕಿಂತ ಕಡಿಮೆ ವರ್ಷ ಕೆಲಸ ಮಾಡಿದವರಿಗೆ ಸಿಗುವ ಪಿಂಚಣಿಯ ಮೊತ್ತ ಕಡಿಮೆಯಾಗಲಿದೆ.


ಸರ್ಕಾರಿ ನೌಕರರ ಪಿಂಚಣಿ ಯೋಜನೆಯನ್ನು ಪರಿಶೀಲಿಸಲು ಹಣಕಾಸು ಸಚಿವಾಲಯವು ಕಳೆದ ವರ್ಷ ಹಣಕಾಸು ಕಾರ್ಯದರ್ಶಿ ಟಿ.ವಿ ಸೋಮನಾಥನ್ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತ್ತು. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ ಈಗಿನ ನಿಯಮಗಳಲ್ಲಿ ಅಗತ್ಯವಿದ್ದರೆ ಬದಲಾವಣೆಗಳನ್ನು ತರುವಂತೆ ಸೂಚಿಸಿತ್ತು.


ಬಿಜೆಪಿಯೇತರ ಪಕ್ಷಗಳ ಆಡಳಿತವಿರುವ ಹಲವು ರಾಜ್ಯಗಳು ಹಳೆಯ ಪಿಂಚಣಿ ಯೋಜನೆಗೆ (ಒಪಿಎಸ್‌) ವಾಪಸಾಗಲು ನಿರ್ಧರಿಸಿದ್ದವು. ಕೆಲವು ರಾಜ್ಯಗಳಲ್ಲಿ ನೌಕರರ ಸಂಘಟನೆಗಳು ಕೂಡಾ ಒಪಿಎಸ್‌ ಜಾರಿಗೆ ಒತ್ತಾಯಿಸುತ್ತಾ ಬಂದಿವೆ.


ಯುಪಿಎಸ್‌ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ನಿಯೋಜಿತ ಸಂಪುಟ ಕಾರ್ಯದರ್ಶಿ ಟಿ.ವಿ ಸೋಮನಾಥನ್, ಹೊಸ ಯೋಜನೆಯು 2025ರ ಏಪ್ರಿಲ್‌ 1ರಿಂದ ಅನ್ವಯವಾಗಲಿದೆ ಎಂದು ಹೇಳಿದರು.


ಏಕೀಕೃತ ಪಿಂಚಣಿ ಯೋಜನೆಯ ಪ್ರಯೋಜನಗಳು ನಿವೃತ್ತಿ ಹೊಂದಿದವರಿಗೆ ಮತ್ತು 2025ರ ಮಾರ್ಚ್ 31ರವರೆಗಿನ ಅವಧಿಯಲ್ಲಿ ನಿವೃತ್ತಿ ಹೊಂದಲಿರುವರಿಗೆ ಅನ್ವಯವಾಗಲಿದೆ ಎಂದು ತಿಳಿಸಿದರು.


ಏಕೀಕೃತ ಪಿಂಚಣಿ ಯೋಜನೆಯ ಪ್ರಮುಖ ಅಂಶಗಳು

ಕನಿಷ್ಠ 10 ವರ್ಷಗಳ ಸೇವೆಯ ಬಳಿಕ ನಿವೃತ್ತಿಯಾಗುವ ಸರ್ಕಾರಿ ನೌಕರರಿಗೆ ತಿಂಗಳಿಗೆ ₹ 10,000 ಪಿಂಚಣಿಯ ಭರವಸೆಯನ್ನು ಇದು ನೀಡುತ್ತದೆ


ಪಿಂಚಣಿದಾರರ ಸಾವಿನ ಬಳಿಕ ಅವರ ಕುಟುಂಬಕ್ಕೆ ಶೇ 60ರಷ್ಟು (ಪಿಂಚಣಿದಾರ ಪಡೆದ ಕೊನೆಯ ತಿಂಗಳ ಪಿಂಚಣಿ ಮೊತ್ತದಲ್ಲಿ) ಕುಟುಂಬ ಪಿಂಚಣಿ ದೊರೆಯಲಿದೆ


ಪ್ರಸ್ತುತ ಚಾಲ್ತಿಯಲ್ಲಿರುವ ಎನ್‌ಪಿಎಸ್‌ನಲ್ಲಿ ನೌಕರರು ಶೇ 10ರಷ್ಟು ಕೊಡುಗೆ ನೀಡುತ್ತಿದ್ದರೆ, ಕೇಂದ್ರ ಸರ್ಕಾರ ಶೇ 14ರಷ್ಟು ಕೊಡುಗೆ ನೀಡುತ್ತಿದೆ. ಯುಪಿಎಸ್‌ನಲ್ಲಿ ಕೇಂದ್ರದ ಕೊಡುಗೆ ಶೇ 18.5ಕ್ಕೆ ಏರಲಿದ್ದು, ನೌಕರರ ಕೊಡುಗೆಯಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ


ಪಿಂಚಣಿಯ ಬಾಕಿ ಪಾವತಿಗೆ ₹ 800 ಕೋಟಿ ಖರ್ಚಾಗುತ್ತದೆ. ಅಲ್ಲದೆ ಕೇಂದ್ರದ ಕೊಡುಗೆಯ ಪಾಲು ಏರುವುದರಿಂದ ಹೆಚ್ಚುವರಿಯಾಗಿ ₹6,250 ಕೋಟಿ ಹೊರೆಯಾಗುತ್ತದೆ


ರಾಜ್ಯ ಸರ್ಕಾರಗಳು ಯುಪಿಎಸ್‌ ಸೇರಲು ಬಯಸಿದರೆ, ಈ ಯೋಜನೆಯಿಂದ ಪ್ರಯೋಜನ ಪಡೆಯುವ ನೌಕರರ ಸಂಖ್ಯೆ 90 ಲಕ್ಷಕ್ಕೆ ಏರಲಿದೆ. ಆಗ, ಆಯಾ ರಾಜ್ಯ ಸರ್ಕಾರಗಳು ಹೆಚ್ಚುವರಿ ಹೊರೆಯನ್ನು ಭರಿಸಬೇಕಾಗುತ್ತದೆ


ಗ್ರಾಚ್ಯುಟಿಯ ಜತೆಗೆ ನಿವೃತ್ತಿ ವೇಳೆಯಲ್ಲಿ ನೌಕರರಿಗೆ ಇಡುಗಂಟು ಸಿಗಲಿದೆ. ನೌಕರ ಪೂರ್ಣಗೊಳಿಸಿದ ಪ್ರತಿ 6 ತಿಂಗಳ ಸೇವೆಗೆ ಅನ್ವಯವಾಗುವಂತೆ ಒಂದು ತಿಂಗಳ ಮೂಲ ವೇತನ ಮತ್ತು ಡಿ.ಎಯ 10ನೇ 1 ಭಾಗವನ್ನು ಇದು ಒಳಗೊಂಡಿರುತ್ತದೆ


-ನರೇಂದ್ರ ಮೋದಿ, ಪ್ರಧಾನಿಏಕೀಕೃತ ಪಿಂಚಣಿ ಯೋಜನೆಯು ಸರ್ಕಾರಿ ನೌಕರರಿಗೆ ಘನತೆ ಮತ್ತು ಆರ್ಥಿಕ ಭದ್ರತೆಯನ್ನು ಖಾತರಿಗೊಳಿಸುತ್ತದೆ. ಸಿ.ಎಸ್‌.ಷಡಾಕ್ಷರಿ, ಅಧ್ಯಕ್ಷ ,ರಾಜ್ಯ ಸರ್ಕಾರಿ ನೌಕರರ ಸಂಘಕೇಂದ್ರ ಸಂಪುಟದ ನಿರ್ಧಾರ ತೃಪ್ತಿ ತಂದಿ‌ಲ್ಲ. ರಾಜ್ಯ ಸರ್ಕಾರಿ ನೌಕರರು ಇದನ್ನು ಒಪ್ಪುವುದಿಲ್ಲ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪರಸ್ಪರ ಚರ್ಚಿಸಿ ಹಳೆ ಪಿಂಚಣಿ ಯೋಜನೆಯನ್ನೇ ಮರು ಜಾರಿ ಮಾಡಬೇಕು


UPS ಈ ಸಂಪೂರ್ಣ ಮಾಹಿತಿಯನ್ನು ಒಮ್ಮೆ ಅಧ್ಯಯನ ಮಾಡಿ ಮತ್ತು ನಿಮ್ಮ ವೃದ್ಧಾಪ್ಯವೇತನ ಅರ್ಥಮಾಡಿಕೊಳ್ಳಿ💥💥💥💥💥💥👇👇👇


ನೀವು ನಿವೃತ್ತಿ ವಯಸ್ಸನ್ನು ತಲುಪಿದಾಗ ಅಂದರೆ 60 ವರ್ಷಗಳು, ಆ ವರ್ಷದಲ್ಲಿ ನಿಮ್ಮ 12 ತಿಂಗಳ ಮೂಲ ವೇತನವು ಮೂಲ ವೇತನದ ಸರಾಸರಿಯಾಗಿರುತ್ತದೆ, ನೀವು ಆ 12 ತಿಂಗಳ ಮೂಲ ವೇತನದ ಸರಾಸರಿ 50% ಪಿಂಚಣಿ ಪಡೆಯುತ್ತೀರಿ


ಉದಾಹರಣೆಗೆ, ಹೊಸ ಪಿಂಚಣಿ ನಿಯಮಗಳ ಪ್ರಕಾರ, ಸರ್ಕಾರಿ ನೌಕರನು 25 ವರ್ಷ ಸೇವೆ ಸಲ್ಲಿಸಿದ ನಂತರ ನಿವೃತ್ತನಾಗುತ್ತಾನೆ ಮತ್ತು ಹಳೆಯ ಪಿಂಚಣಿಯಲ್ಲಿರುವ ಉದ್ಯೋಗಿ ನಿವೃತ್ತನಾಗುತ್ತಾನೆ, ಆಗ ಅವನ ಪಿಂಚಣಿಯ ನಿರ್ಣಯದಲ್ಲಿನ ವ್ಯತ್ಯಾಸವು ಈ ಕೆಳಗಿನಂತಿರುತ್ತದೆ

 

ಉದಾಹರಣೆಗೆ, ಆ ವ್ಯಕ್ತಿಯ ಮೂಲ ವೇತನವು ಜನವರಿಯಿಂದ ಜೂನ್‌ವರೆಗೆ 70000 ₹ ಎಂದು ಭಾವಿಸೋಣ, ನಂತರ ಜುಲೈನಲ್ಲಿ ಇಂಕ್ರಿಮೆಂಟ್ ಪಡೆದ ನಂತರ ಅದು ಜುಲೈನಿಂದ ಡಿಸೆಂಬರ್‌ವರೆಗೆ 72000 ₹ ಆಗುತ್ತದೆ 


ಹಳೆಯ ಪಿಂಚಣಿ ಅಡಿಯಲ್ಲಿ, ಉದ್ಯೋಗಿಯ ಮೂಲ ವೇತನ ರೂ 72000 + ಜೊತೆಗೆ ಡಿಎ, ಪ್ರಸ್ತುತ 50% ರೂ 36000 ಆಗಿದೆ


ಹೀಗೆ, ಹಳೆಯ ಪಿಂಚಣಿ ನಿಯಮಗಳ ಪ್ರಕಾರ, ಉದ್ಯೋಗಿ ಪಡೆದ ಪಿಂಚಣಿಗೆ ನಿವೃತ್ತಿಯ ಸಮಯದಲ್ಲಿ ಅಂತಿಮ ವೇತನ 72000+36000=108000

ಹಳೆಯ ನಿಯಮಗಳ ಪ್ರಕಾರ ಅಂದರೆ OPS ನಲ್ಲಿನ ಕೊನೆಯ ಸಂಬಳದ 50% (1/2) ಪಿಂಚಣಿಯಾಗಿದೆ


ಅಂತಿಮ ವೇತನ 108000÷2=54000, ಆದ್ದರಿಂದ ಹಳೆಯ ನಿಯಮಗಳ ಪ್ರಕಾರ, ವ್ಯಕ್ತಿಗೆ 54000 ತಿಂಗಳ ಪಿಂಚಣಿ ನೀಡಲಾಗುತ್ತದೆ


*ಈಗ ನಾವು ಹೊಸ ಪಿಂಚಣಿ ಯೋಜನೆ ಯುಪಿಎಸ್ ಅಡಿಯಲ್ಲಿ ಪಿಂಚಣಿ ನಿರ್ಧರಿಸುವ ಸೂತ್ರವನ್ನು ಅರ್ಥಮಾಡಿಕೊಳ್ಳೋಣ

ಮೊದಲ 6 ತಿಂಗಳ ಸಂಬಳ*


70000×6=420000


ಮತ್ತು ಜುಲೈನಲ್ಲಿ ಹೆಚ್ಚಳದ ನಂತರ ಕಳೆದ 6 ತಿಂಗಳ ಸಂಬಳ 


72000×6=432000


12 ತಿಂಗಳ ಮೂಲ ವೇತನದ ಮೊತ್ತ <=852000>


 12 ತಿಂಗಳ ಮೂಲ ವೇತನ

ಸರಾಸರಿ

852000÷12=74000


ಈಗ UPS ಅಡಿಯಲ್ಲಿ ಪಿಂಚಣಿ ಮೊತ್ತವು ಸರಾಸರಿ 12 ತಿಂಗಳ ಮೂಲ ವೇತನದ 50% ಅಂದರೆ 1/2

 74000÷2=37000


 ಆದ್ದರಿಂದ, ಹೊಸ ಪಿಂಚಣಿ ಯೋಜನೆ ಯುಪಿಎಸ್ ಅಡಿಯಲ್ಲಿ, ಪಿಂಚಣಿಯನ್ನು ರೂ 37000 ನಲ್ಲಿ ನಿರ್ಧರಿಸಲಾಗುತ್ತದೆ


 ಈಗ ಹಳೆಯ ಪಿಂಚಣಿ ಯೋಜನೆ (OPS) ಮತ್ತು ಹೊಸ ಪಿಂಚಣಿ ಯೋಜನೆ (UPS) ನಲ್ಲಿ ಪಡೆದ ಪಿಂಚಣಿ ಮೊತ್ತದಲ್ಲಿನ ವ್ಯತ್ಯಾಸ

   ಒಪಿಎಸ್‌ನಲ್ಲಿ ಪಡೆದ ಪಿಂಚಣಿ - ಯುಪಿಎಸ್‌ನಲ್ಲಿ ಪಡೆದ ಪಿಂಚಣಿ


   54000-37000=17000     


ಹೊಸ ನಿಯಮಗಳ ಪ್ರಕಾರ ನೀವು ಪ್ರತಿ ತಿಂಗಳು ₹ 17000 ಕಡಿಮೆ ಪಿಂಚಣಿ ಪಡೆಯುತ್ತೀರಿ


 ಗಮನಿಸಿ:- ಈ ಪಿಂಚಣಿ ಯುಪಿಎಸ್ ಪಡೆಯಲು, ನಾವು ಪ್ರತಿ ತಿಂಗಳು ನಮ್ಮ ಸಂಬಳದಿಂದ 10% ಕೊಡುಗೆ ಮೊತ್ತವನ್ನು ಕಡಿತಗೊಳಿಸಬೇಕಾಗುತ್ತದೆ ಆದರೆ OPS ನಲ್ಲಿ ಯಾವುದೇ ಮೊತ್ತವನ್ನು ಕಡಿತಗೊಳಿಸಬೇಕಾಗಿಲ್ಲ




UPS

7th Pay Commission: ಸರ್ಕಾರಿ ನೌಕರರ ಸಾಮೂಹಿಕ ವಿಮಾ ಯೋಜನೆ ಎಷ್ಟು ಏರಿಕೆ

ಆಯೋಗ ತನ್ನ ವರದಿಯಲ್ಲಿ ನೌಕರರಿಗೆ ಸಾಮೂಹಿಕ ವಿಮಾ ಯೋಜನೆ (ಜಿಐಎಸ್) ಎಂದು ಉಲ್ಲೇಖಿಸಿ ವಿವರಣೆ ನೀಡಿದೆ. ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ (ಕೆಜಿಐಡಿ) ಮೂಲಕ ಕರ್ನಾಟಕ ಸರ...