ಕ್ರಮ ಸಂಖ್ಯೆ |
ಹುದ್ದೆ ಹೆಸರು |
5ನೇ ವೇತನ ಆಯೋಗ |
ಆರನೇ ವೇತನ ಆಯೋಗ |
ಏಳನೇ ವೇತನ ಆಯೋಗ |
8ನೇ ವೇತನ ಆಯೋಗ |
|
1 | ಅಡುಗೆ ಯವರು | 10400-16400 | 18600-32600 | 29600-52600 | ? | |
2 | ಅಡುಗೆ ಸಹಾಯಕರ | 9600-14550 | 17000-28950 | 27000-46675 | ? | |
3 | ರಾತ್ರಿ ಕಾವಲುಗಾರರು | 9600-14550 | 17000-28950 | 27000-46675 | ? | |
4 | ಜವಾನರು | 9600-14550 | 17000-28950 | 27000-46675 | ? | |
5 | ಪ್ರಥಮ ದರ್ಜೆ ಸಹಾಯಕರು | 14550-26700 | 27650-52650 | 44425-63700 | ? | |
6 | ದ್ವಿತೀಯ ದರ್ಜೆ ಸಹಾಯಕರು | 11600-21000 | 21400-42000 | 34100-67600 | ? |
ಭಾನುವಾರ, ಜನವರಿ 5, 2025
5ನೇ ವೇತನ ಆಯೋಗ.6ನೇ ವೇತನ ಆಯೋಗ 7ನೇ ವೇತನ ಆಯೋಗ ವೇತನ ಶ್ರೇಣಿ ಕುರಿತು ಮಾಹಿತಿ.
💫 *K-SET-2024 ಪರೀಕ್ಷೆ ತಾತ್ಕಾಲಿಕ ಫಲಿತಾಂಶ ಪ್ರಕಟ.*▪️ತಾತ್ಕಾಲಿಕ ಫಲಿತಾಂಶ ಪಟ್ಟಿ
Bank of Baroda jobs
Budget 2025: ಹೊಸ ತೆರಿಗೆ ಪದ್ಧತಿ Vs ಹಳೆಯ ತೆರಿಗೆ ಪದ್ಧತಿಯ ಪ್ರಸ್ತುತ ದರಗಳು, ವಿನಾಯಿತಿ ಹೀಗಿವೆ!
Budget 2025: ಹೊಸ ತೆರಿಗೆ ಪದ್ಧತಿ Vs ಹಳೆಯ ತೆರಿಗೆ ಪದ್ಧತಿಯ ಪ್ರಸ್ತುತ ದರಗಳು, ವಿನಾಯಿತಿ ಹೀಗಿವೆ!
ಬಜೆಟ್ 2025-26 ರ (Union Budget 2025-26) ಪ್ರಮುಖ ಘೋಷಣೆಗಾಗಿ ಕಾಯುತ್ತಿದೆ,. ಆದಾಯ ತೆರಿಗೆ (Income Tax) ಎಂಬುದು ಹೆಚ್ಚು ನಿರೀಕ್ಷಿತ ವಿಷಯಗಳಲ್ಲಿ ಒಂದಾಗಿದ್ದು, ಸರ್ಕಾರವು ತೆರಿಗೆ ಪ್ರಯೋಜನಗಳನ್ನು ಅಥವಾ ಪ್ರಸ್ತುತ ಆದಾಯ ತೆರಿಗೆ ರಚನೆಗೆ ಹೊಂದಾಣಿಕೆಗಳನ್ನು ಸಮಾನವಾಗಿ ಪರಿಚಯಿಸುತ್ತದೆಯೇ ಎಂಬುದನ್ನು ನೋಡಲು ಭಾರತೀಯರು ಉತ್ಸುಕರಾಗಿದ್ದಾರೆ.ಬಹು ನಿರೀಕ್ಷಿತ ಪ್ರಕಟಣೆಗಳಲ್ಲಿ ವಾರ್ಷಿಕವಾಗಿ ರೂ 15 ಲಕ್ಷದವರೆಗೆ ಗಳಿಸುವ ವ್ಯಕ್ತಿಗಳಿಗೆ ಆದಾಯ ತೆರಿಗೆಯಲ್ಲಿ ಸಂಭವನೀಯ ಕಡಿತವಾಗಿದೆ. ಹೊಸ ತೆರಿಗೆ ಪದ್ಧತಿ (New Tax Slabs) ಮತ್ತು ಹಳೆಯ ತೆರಿಗೆ ಪದ್ಧತಿಯ (Old Tax Slabs) ಅಡಿಯಲ್ಲಿ ಪ್ರಸ್ತುತ ಆದಾಯ ತೆರಿಗೆ ದರಗಳು, ಕಡಿತಗಳ ಮಾಹಿತಿ ಹೀಗಿದೆ
ಹೊಸ ತೆರಿಗೆ ಪದ್ಧತಿಯ ಅಡಿಯಲ್ಲಿ ಪ್ರಸ್ತುತ ತೆರಿಗೆ ಸ್ಲ್ಯಾಬ್‌ಗಳು (FY 2024-25 ಅನ್ವಯಿಸುತ್ತದೆ)
ಬಜೆಟ್ 2020 ರಲ್ಲಿ ಪರಿಚಯಿಸಲಾದ ಹೊಸ ತೆರಿಗೆ ವ್ಯವಸ್ಥೆಯು ಕಡಿಮೆ ತೆರಿಗೆ ದರಗಳನ್ನು ನೀಡುತ್ತದೆ ಆದರೆ ಕಡಿಮೆ ವಿನಾಯಿತಿಗಳು ಮತ್ತು ಕಡಿತಗಳನ್ನು ನೀಡುತ್ತದೆ.
ಪ್ರಸ್ತುತ ತೆರಿಗೆ ಸ್ಲ್ಯಾಬ್‌ಗಳು ಇಲ್ಲಿವೆ:
3,00,000 ರೂ.ವರೆಗಿನ ಆದಾಯ: ಶೂನ್ಯ
ರೂ 3,00,001 ರಿಂದ ರೂ 7,00,000 ವರೆಗೆ ಆದಾಯ: 5% (ಸೆಕ್ಷನ್ 87A ಅಡಿಯಲ್ಲಿ ತೆರಿಗೆ ರಿಯಾಯಿತಿ ರೂ 7 ಲಕ್ಷದವರೆಗೆ)
ರೂ 7,00,001 ರಿಂದ ರೂ 10,00,000 ವರೆಗೆ ಆದಾಯ: 10%
ರೂ 10,00,001 ರಿಂದ ರೂ 12,00,000 ವರೆಗೆ ಆದಾಯ: 15%
ರೂ 12,00,001 ರಿಂದ ರೂ 15,00,000 ವರೆಗೆ ಆದಾಯ: 20%
ರೂ 15,00,000 ಕ್ಕಿಂತ ಹೆಚ್ಚಿನ ಆದಾಯ: 30%
ಇದು ಡೀಫಾಲ್ಟ್ ತೆರಿಗೆ ಪದ್ಧತಿಯಾಗಿದೆ. ಈ ಆಡಳಿತದ ಅಡಿಯಲ್ಲಿ, ತೆರಿಗೆದಾರರು ಕಡಿಮೆ ದರಗಳನ್ನು ಆಯ್ಕೆ ಮಾಡಬಹುದು ಆದರೆ HRA, LTA, ಮತ್ತು ಸೆಕ್ಷನ್‌ಗಳು 80C, 80D ಮತ್ತು ಇತರರ ಅಡಿಯಲ್ಲಿ ಕಡಿತಗೊಳಿಸುವಿಕೆಯಂತಹ ವಿನಾಯಿತಿಗಳನ್ನು ಕೈಬಿಡಬೇಕಾಗುತ್ತದೆ.
ತೆರಿಗೆದಾರರಿಗೆ ಪ್ರಮಾಣಿತ ಕಡಿತ
ತೆರಿಗೆದಾರರು ಪ್ರಮಾಣಿತ ಕಡಿತವನ್ನು ಪಡೆಯಬಹುದು. 2024-25ರ ಬಜೆಟ್‌ನಲ್ಲಿ ಸಂಬಳ ಪಡೆಯುವ ಉದ್ಯೋಗಿಗಳಿಗೆ ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿಯನ್ನು 75,000 ರೂ.ಗೆ ಹೆಚ್ಚಿಸಲಾಗಿದೆ. ಕುಟುಂಬ ಪಿಂಚಣಿದಾರರಿಗೆ 25,000 ರೂ ಮೊತ್ತ ಏರಿಕೆ ಮಾಡಲಾಗಿದೆ.
ಹಳೆಯ ತೆರಿಗೆ ಪದ್ಧತಿಯ ಅಡಿಯಲ್ಲಿ ಪ್ರಸ್ತುತ ತೆರಿಗೆ ಸ್ಲ್ಯಾಬ್‌ಗಳು (FY 2024-25 ಅನ್ವಯಿಸುತ್ತದೆ)
ಹಳೆಯ ತೆರಿಗೆ ಪದ್ಧತಿ, ಹೆಚ್ಚಿನ ದರಗಳನ್ನು ಉಳಿಸಿಕೊಂಡು, ತೆರಿಗೆದಾರರಿಗೆ ವಿವಿಧ ವಿನಾಯಿತಿಗಳು ಮತ್ತು ಕಡಿತಗಳನ್ನು ಪಡೆಯಲು ಅನುಮತಿಸುತ್ತದೆ. ಮಾಹಿತಿ ಇಲ್ಲಿದೆ:
2,50,000 ರೂ.ವರೆಗಿನ ಆದಾಯ: ಶೂನ್ಯ
ರೂ 2,50,001 ರಿಂದ ರೂ 7,00,000 ವರೆಗೆ ಆದಾಯ: 5%
ರೂ 7,00,001 ರಿಂದ ರೂ 10,00,000 ವರೆಗೆ ಆದಾಯ: 10%
ರೂ 10,00,001 ರಿಂದ ರೂ 12,00,000 ವರೆಗೆ ಆದಾಯ: 15%
ರೂ 12,00,001 ರಿಂದ ರೂ 15,00,000 ವರೆಗೆ ಆದಾಯ: 20%
ರೂ 15,00,000 ಕ್ಕಿಂತ ಹೆಚ್ಚಿನ ಆದಾಯ: 30%
60-80 ವರ್ಷ ವಯಸ್ಸಿನ ಹಿರಿಯ ನಾಗರಿಕರಿಗೆ, ಮೂಲ ವಿನಾಯಿತಿ ಮಿತಿ 3,00,000 ರೂ. ಅತಿ ಹಿರಿಯ ನಾಗರಿಕರಿಗೆ (80 ವರ್ಷ ಮೇಲ್ಪಟ್ಟವರು) ಇದು 5,00,000 ರೂ ಆಗಿದೆ.
ಹಳೆಯ ತೆರಿಗೆ ಪದ್ಧತಿಯು ವಿವಿಧ ವಿಭಾಗಗಳ ಅಡಿಯಲ್ಲಿ ಕಡಿತಗಳನ್ನು ಅನುಮತಿಸುತ್ತದೆ, ಅವುಗಳೆಂದರೆ:
ಸೆಕ್ಷನ್ 80C: PPF, ELSS ಮತ್ತು LIC ಪ್ರೀಮಿಯಂಗಳಂತಹ ಹೂಡಿಕೆಗಳಿಗೆ ರೂ 1,50,000 ವರೆಗೆ.
ವಿಭಾಗ 80D: ಆರೋಗ್ಯ ವಿಮಾ ಕಂತುಗಳು.
ವಿಭಾಗ 24(ಬಿ): ರೂ 2,00,000 ವರೆಗಿನ ಗೃಹ ಸಾಲದ ಮೇಲಿನ ಬಡ್ಡಿ.
HRA ಮತ್ತು LTA ನಂತಹ ಇತರ ವಿನಾಯಿತಿಗಳು.
ಸರಿಯಾದ ತೆರಿಗೆ ಪದ್ಧತಿಯನ್ನು ಆರಿಸುವುದು
ಹೊಸ ಮತ್ತು ಹಳೆಯ ತೆರಿಗೆ ಪದ್ಧತಿಯ ನಡುವೆ ಆಯ್ಕೆಯು ವ್ಯಕ್ತಿಯ ಹಣಕಾಸಿನ ಪ್ರೊಫೈಲ್ ಅನ್ನು ಅವಲಂಬಿಸಿರುತ್ತದೆ. ಹೊಸ ತೆರಿಗೆ ಪದ್ಧತಿಯು ಸರಳತೆಗೆ ಆದ್ಯತೆ ನೀಡುವವರಿಗೆ ಮತ್ತು ಕನಿಷ್ಠ ಹೂಡಿಕೆಗಳನ್ನು ಹೊಂದಿರುವವರಿಗೆ ಹೆಚ್ಚು ಸೂಕ್ತವಾಗಿದೆ.
ಬಜೆಟ್ 2025 ಗಾಗಿ ನಿರೀಕ್ಷೆಗಳು
ಮಧ್ಯಮ-ಆದಾಯದ ಗುಂಪುಗಳಿಗೆ ಅನುಕೂಲವಾಗುವಂತೆ ಮೂಲ ವಿನಾಯಿತಿ ಮಿತಿಯನ್ನು ಹೆಚ್ಚಿಸಲು ಅಥವಾ ಹೆಚ್ಚುವರಿ ಸ್ಲ್ಯಾಬ್‌ಗಳನ್ನು ಪರಿಚಯಿಸಲು ಸರ್ಕಾರವು ಪರಿಗಣಿಸಬಹುದು. ವರದಿಗಳ ಪ್ರಕಾರ, 15 ಲಕ್ಷದವರೆಗೆ ಆದಾಯ ಹೊಂದಿರುವವರಿಗೆ ಸರ್ಕಾರ ತೆರಿಗೆ ವಿನಾಯಿತಿ ನೀಡುವ ಸಾಧ್ಯತೆಯಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜುಲೈನಲ್ಲಿ 2024-25ರ ಕೊನೆಯ ಬಜೆಟ್‌ನಲ್ಲಿ ಆದಾಯ ತೆರಿಗೆ ಕಾಯ್ದೆಯ ಸಮಗ್ರ ಪರಿಶೀಲನೆಯನ್ನು ಘೋಷಿಸಿದರು. ಇದರ ಬೆನ್ನಲ್ಲೇ ಆದಾಯ ತೆರಿಗೆ ಮುಖ್ಯ ಆಯುಕ್ತ ವಿ ಕೆ ಗುಪ್ತಾ ನೇತೃತ್ವದಲ್ಲಿ ಪರಿಶೀಲನಾ ಸಮಿತಿಯನ್ನು ರಚಿಸಲಾಗಿತ್ತು.
ಶುಕ್ರವಾರ, ಜನವರಿ 3, 2025
ಹುದ್ದೆ ವಿವರ: ಒಟ್ಟು 32 ಕಿರಿಯ ಸಹಾಯಕರ ಹುದ್ದೆ.
ಹುದ್ದೆ ವಿವರ: ಒಟ್ಟು 32 ಕಿರಿಯ ಸಹಾಯಕರ ಹುದ್ದೆ.
ವಿದ್ಯಾರ್ಹತೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪೂರ್ಣಗೊಳಿಸಿರಬೇಕು. ಕನಿಷ್ಠ 6 ತಿಂಗಳ ಕಂಪ್ಯೂಟರ್ ತರಬೇತಿ ಕೋರ್ಸ್ ಮಾಡಿರಬೇಕು.
ವಯೋಮಿತಿ: ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ಆಗಿದ್ದು, ಗರಿಷ್ಠ ವಯೋಮಿತಿ 35 ವರ್ಷವಾಗಿದೆ. ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ವರ್ಗದ ಅಭ್ಯರ್ಥಿಗಳಿಗೆ 3 ಮತ್ತು ಪ.ಜಾ, ಪ.ಪಂ ಮತ್ತು ಪ್ರವರ್ಗ 1 ಅಭ್ಯರ್ಥಿಗಳಿಗೆ 5 ವರ್ಷದ ವಯೋಮಿತಿ ಸಡಿಲಿಕೆ ಮಾಡಲಾಗಿದೆ.
ವೇತನ: 30,350 - 58,250 ರೂ ಮಾಸಿಕ.
ಈ ಹುದ್ದೆಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ನಡೆಸಲಾಗುವುದು.
ಅರ್ಜಿ ಸಲ್ಲಿಕೆ: ಈ ಹುದ್ದೆಗೆ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಸಾಮಾನ್ಯ ಮತ್ತು ಹಿಂದುಳಿದ ಅಭ್ಯರ್ಥಿಗಳಿಗೆ 1750 ರೂ ಹಾಗೂ ಪ.ಜಾ, ಪ.ಪಂ, ಪ್ರವರ್ಗ 1, ಮಹಿಳೆಯರು ಮತ್ತು ಅಂಗವಿಕಲರಿಗೆ 1250 ರೂ ಅರ್ಜಿ ನಿಗದಿಸಲಾಗಿದೆ.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಜನವರಿ 16
ಈ ಹುದ್ದೆ ಕುರಿತ ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು kodagudccbank.comkodagudccbank.com ಇಲ್ಲಿಗೆ ಭೇಟಿ ನೀಡಿ.
kpsc ಕೃಷಿ ನಿರ್ದೇಶಕರು
ಗುರುವಾರ, ಜನವರಿ 2, 2025
ಕಂಪ್ಯೂಟರ್ ಶಾರ್ಟ್ ಕಟ್ ನಂಬರ್
ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ಮರುಪಾವತಿಗಳು
ಬುಧವಾರ, ಜನವರಿ 1, 2025
ugc net
Application Fee
| |
Important Dates
| |
Age Limit
| |
Qualification
| |
Vacancy Details | |
Post Name | Total |
UGC NET Dec 2024 (JRF & Asst Professor) | – |
Interested Candidates Can Read the Full Notification Before Apply Online | |
Important Links | |
Admit Card (30-12-2024) | Link | Notice |
Exam City Details (24-12-2024) | Link | Notice |
Exam Schedule(20-12-2024) | Click Here |
Last Date Extended (11-12-2024) | Click Here |
Apply Online | Click Here |
Information Brochure | Click Here |
Short Notification | Click Here |
Official Website | Click Here |
HRMS
KPSC Recruitment: ಕೃಷಿ ಅಧಿಕಾರಿ, ಸಹಾಯಕ ಕೃಷಿ ಅಧಿಕಾರಿ ನೇಮಕಾತಿ ಅಪ್‌ಡೇಟ್
KPSC Recruitment: ಕೃಷಿ ಅಧಿಕಾರಿ, ಸಹಾಯಕ ಕೃಷಿ ಅಧಿಕಾರಿ ನೇಮಕಾತಿ ಅಪ್‌ಡೇಟ್
ಈ ಕುರಿತು ರಮಣದೀಪ್ ಚೌಧರಿ ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ. ಈ ಹುದ್ದೆಗಳ ವಿದ್ಯಾರ್ಹತೆ ವಯೋಮಿತಿ, ಮೀಸಲಾತಿ ಅರ್ಜಿ ಶುಲ್ಕ ಇತ್ಯಾದಿ ವಿವರಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ದಿನಾಂಕ 20-09-2024ರ ಅಧಿಸೂಚನೆಯನ್ನು ನೋಡಬಹುದಾಗಿದೆ ಎಂದು ತಿಳಿಸಿದ್ದಾರೆ.
ಕೃಷಿ ಇಲಾಖೆ 'ಸಿ' ವೃಂದದ ನೇಮಕಾತಿ: ಸ್ಪಷ್ಟನೆಗಳು
ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ: ಕರ್ನಾಟಕ ಲೋಕಸೇವಾ ಆಯೋಗದ ದಿನಾಂಕ 20-09-2024ರ ಅಧಿಸೂಚನೆಯಲ್ಲಿ ಕೃಷಿ ಇಲಾಖೆಯಲ್ಲಿನ ಕೃಷಿ ಅಧಿಕಾರಿ 86 ಮತ್ತು ಸಹಾಯಕ ಕೃಷಿ ಅಧಿಕಾರಿ 586 ಉಳಿಕೆ ಮೂಲ ವೃಂದದ ಹುದ್ದೆಗಳ ಭರ್ತಿಗೆ ಅಧಿಸೂಚನೆ ಜಾರಿ ಮಾಡಿ ಅರ್ಜಿ ಸಲ್ಲಿಕೆಯ ದಿನಾಂಕವನ್ನು 07-10-2024 ರಿಂದ 07-11-2024ರವರೆಗೆ ನಿಗದಿಪಡಿಸಲಾಗಿತ್ತು.
ಆದರೆ ಸರ್ಕಾರವು ದಿನಾಂಕ 18-09-2024ರಂದು ಜಾರಿ ಮಾಡಿದ ಕ್ರೀಡಾ ಸಾಧಕ ಅಭ್ಯರ್ಥಿಗಳ ಮೀಸಲಾತಿಯನ್ನು ಸದರಿ ಹುದ್ದೆಗಳಿಗೂ ಅಳವಡಿಸಿಕೊಳ್ಳಬೇಕಾದ್ದರಿಂದ ಅರ್ಜಿ ಸ್ವೀಕಾರ ಪ್ರಕ್ರಿಯೆಯನ್ನು ಮುಂದೂಡಲಾಗಿರುತ್ತದೆ ಎಂದು ಕೆಪಿಎಸ್‌ಸಿ ಹೇಳಿದೆ.
ಪ್ರಸ್ತುತ ಸರ್ಕಾರದ ಸುತ್ತೋಲೆ ದಿನಾಂಕ 04-12-2024ರಲ್ಲಿ ಕ್ರೀಡಾ ಮೀಸಲಾತಿಗೆ ಸಂಬಂಧಿಸಿದಂತೆ ಸರ್ಕಾರವು ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 19770 ನಿಯಮ 098 ತಿದ್ದುಪಡಿ ಮಾಡಿರುವುದನ್ನು ಪುನರ್ ಪರಿಶೀಲಿಸಲಾಗುತ್ತಿರುವುದರಿಂದ ರಾಜ್ಯ ಸಿವಿಲ್ ಸೇವೆಯಲ್ಲಿನ ನೇರ ನೇಮಕಾತಿಯಲ್ಲಿ ಕ್ರೀಡಾ ಸಾಧಕರಿಗೆ ಶೇಕಡಾ 2ರಷ್ಟು ಹುದ್ದೆಗಳನ್ನು ಮೀಸಲಿರಿಸಿ ಹೊರಡಿಸಲಾಗಿರುವ ಅಧಿಸೂಚನೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ತಡೆಹಿಡಿಯಲಾಗಿದೆ ಎಂದು ಎಲ್ಲಾ ನೇಮಕಾತಿ ಪ್ರಾಧಿಕಾರಿಗಳಿಗೆ ಸೂಚಿಸಲಾಗಿರುತ್ತದೆ.
ಈ ಹಿನ್ನೆಲೆಯಲ್ಲಿ ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ ಈಗಾಗಲೇ ದಿನಾಂಕ 20-09-2024ರಂದು ಜಾರಿ ಮಾಡಲಾಗಿರುವ ಅಧಿಸೂಚನೆಯಲ್ಲಿನ ಮೀಸಲಾತಿ ವರ್ಗೀಕರಣದ ಅನ್ವಯ ಆಯ್ಕೆ ಪ್ರಕ್ರಿಯೆಯನ್ನು ಮುಂದುವರೆಸಲಾಗುತ್ತಿದೆ. ಅರ್ಜಿ ಸಲ್ಲಿಕೆಯ ಪ್ರಾರಂಭಿಕ ದಿನಾಂಕ ಮತ್ತು ಕೊನೆಯ ದಿನಾಂಕಗಳನ್ನು ಕೆಳಕಂಡಂತೆ ಮರು ನಿಗದಿಪಡಿಸಲಾಗಿದೆ.
ಅರ್ಜಿ ಸಲ್ಲಿಸುವ ಪ್ರಾರಂಭಿಕ ದಿನಾಂಕ 03-01-2025, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 01-02-2025. ದಿನಾಂಕ 20-09-2024ರ ಅಧಿಸೂಚನೆಯಂತೆ ಕೃಷಿ ಅಧಿಕಾರಿ ಹುದ್ದೆಗೆ 43,100-83,900 ರೂ. ವೇತನ ನಿಗದಿ ಮಾಡಲಾಗಿದೆ. ಸಹಾಯಕ ಕೃಷಿ ಅಧಿಕಾರಿ ಹುದ್ದೆಗೆ ವೇತನ 40,900-78,200 ರೂ.ಗಳು.
ಅರ್ಜಿ ಸಲ್ಲಿಕೆ ಮಾಡಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಕನಿಷ್ಠ ವಯೋಮಿತಿ 18 ವರ್ಷಗಳು. ರಾಜ್ಯ ಸರ್ಕಾರದ ದಿನಾಂಕ 10/9/2024ರಂದು ಜಾರಿ ಮಾಡಿರುವ ಆದೇಶದಲ್ಲಿ ಎಲ್ಲಾ ಪ್ರವರ್ಗಗಳಿಗೆ ಒಂದು ಬಾರಿಗೆ ಅನ್ವಯವಾಗುವಂತೆ ವಯೋಮಿತಿಯಲ್ಲಿ 3 ವರ್ಷದ ಸಡಿಲಿಕೆ ನೀಡಲಾಗಿದೆ. ಅದನ್ನು ಅಳವಡಿಸಿಕೊಂಡ ನಂತರ ಗರಿಷ್ಠ ವಯೋಮಿತಿ ಸಾಮಾನ್ಯ ಅರ್ಹತೆ 38 ವರ್ಷಗಳು, ಪ್ರವರ್ಗ 2ಎ/ 2ಬಿ/ 3ಎ/ 3ಬಿ 41 ವರ್ಷಗಳು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1 43 ವರ್ಷಗಳು.
ಆನ್‌ಲೈನ್ ಮೂಲಕ ಅಭ್ಯರ್ಥಿಗಳು ಅರ್ಜಿಯನ್ನು ಭರ್ತಿ ಮಾಡುವ ಮೊದಲು ಎಲ್ಲಾ ವಿವರಗಳನ್ನು ಓದಿ ಅರ್ಥೈಸಿಕೊಂಡು ಆ ನಂತರವೇ ತಮಗೆ ಅನ್ವಯವಾಗುವ ವಿವರಗಳನ್ನು ಭರ್ತಿ ಮಾಡಬೇಕು. ಒಮ್ಮೆ ಅರ್ಜಿ ಸಲ್ಲಿಸಿದ ನಂತರ ಅರ್ಜಿಯಲ್ಲಿ ವಿವರಗಳನ್ನು ತಿದ್ದುಪಡಿ/ ಸೇರ್ಪಡೆ ಮಾಡುವಂತೆ ನೀಡುವ ಯಾವುದೇ ಮನವಿಗಳನ್ನು ತಿರಸ್ಕರಿಸಲಾಗುವುದು ಎಂದು ಅಧಿಸೂಚನೆ ಹೇಳಿದೆ.
ಅಭ್ಯರ್ಥಿಗಳು ವಯೋಮಿತಿ, ವಿದ್ಯಾರ್ಹತೆಗೆ ಸಂಬಂಧಿಸಿದ ಪ್ರಮಾಣ ಪತ್ರಗಳನ್ನು ಹಾಗೂ ಅರ್ಜಿಯಲ್ಲಿ, ಕೋರಿರುವ ಎಲ್ಲಾ ಮೀಸಲಾತಿ ಪ್ರಮಾಣ ಪತ್ರ ಇತರೆ ಪ್ರಮಾಣ ಪತ್ರಗಳನ್ನು ತಮ್ಮ ಹೆಸರಿನಲ್ಲಿಯೇ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಚಾಲ್ತಿಯಲ್ಲಿರುವಂತೆ ಸೂಚಿಸಿರುವ ನಮೂನೆಗಳಲ್ಲಿಯೇ ಕಡ್ಡಾಯವಾಗಿ ಪಡೆದಿಟ್ಟುಕೊಂಡು ಸದರಿ ದಾಖಲೆಗಳನ್ನು ಅರ್ಜಿ ಸಲ್ಲಿಸುವಾಗ ಅಪ್‌ಲೋಡ್ ಮಾಡತಕ್ಕದ್ದು.
ಅರ್ಜಿ ಸಲ್ಲಿಸುವ ಸಮಯದಲ್ಲಿ, ಮೀಸಲಾತಿಯನ್ನು ಕೋರದೆ ತದನಂತರದಲ್ಲಿ, ಮೀಸಲಾತಿಯನ್ನು ಪರಿಗಣಿಸುವಂತೆ ಕೋರಿ ಸಲ್ಲಿಸುವ ಮನವಿ/ ದಾಖಲೆಗಳನ್ನು ಪರಿಗಣಿಸಲಾಗುವುದಿಲ್ಲ. ಅರ್ಜಿಗಳನ್ನು Online ಮೂಲಕವೇ ಭರ್ತಿ ಮಾಡಿ, ಭಾವಚಿತ್ರ/ ಸಹಿ/ ವಯೋಮಿತಿ/ ವಿದ್ಯಾರ್ಹತೆ ಹಾಗೂ ಕೋರಿದ ಮೀಸಲಾತಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಅಪ್‌ಲೋಡ್ ಮಾಡಿದ ನಂತರ ಶುಲ್ಕವನ್ನು ಪಾವತಿಸಬೇಕು. ಶುಲ್ಕ ಪಾವತಿಸದ ದಾಖಲೆಗಳನ್ನು/ ಭಾವಚಿತ್ರ ಸಹಿಯನ್ನು ಅಪ್‌ಲೋಡ್ ಮಾಡದೇ ಇರುವ/ ಅಸ್ಪಷ್ಟ ದಾಖಲೆ ಅಪ್‌ಲೋಡ್ ಮಾಡಿರುವ ಅಭ್ಯರ್ಥಿಗಳ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ.
Gururaj S Oneindia
source: oneindia.com
ರಾಜ್ಯದ 'ಅಡುಗೆ ಸಿಬ್ಬಂದಿ'ಗಳಿಗೆ ಮಹತ್ವದ ಮಾಹಿತಿ: ಒಂದು ಬಾರಿ 'ಇಡಿಗಂಟು' ಸೌಲಭ್ಯಕ್ಕೆ ಈ ದಾಖಲೆಗಳು ಕಡ್ಡಾಯ
ಈ ಕುರಿತಂತೆ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತ ಡಾ.ಕೆವಿ ತ್ರಿಲೋಕ ಚಂದ್ರ ಅವರು ಸುತ್ತೋಲೆ ಹೊರಡಿಸಿದ್ದು, ಪ್ರಧಾನಮಂತ್ರಿ ಪೋಷಣೆ ಶಕ್ತಿ ನಿರ್ಮಾಣ (ಮಧ್ಯಾಹ್ನ ಉಪಹಾರ ಯೋಜನೆ) ಕಾರ್ಯಕ್ರಮದಡಿ ಆಯ್ಕೆಗೊಂಡು ಶಾಲೆಗಳಲ್ಲಿ ಅಡುಗೆ ಕೆಲಸ ನಿರ್ವಹಿಸುತ್ತಿದ್ದು, ದಿನಾಂಕ:31.03.2022 ರಂದು 60 ವರ್ಷಗಳ ವಯೋಮಿತಿಯನ್ನು ಪೂರೈಸಿ ಕೆಲಸದಿಂದ ಬಿಡುಗಡೆ ಹೊಂದಿರುವ ಮತ್ತು ಈ ದಿನಾಂಕದ ನಂತರದ ಅವಧಿಯಲ್ಲಿ 60 ವರ್ಷ ವಯೋಮಾನ ಪೂರೈಸಿ ಕೆಲಸದಿಂದ ಬಿಡುಗಡೆ ಹೊಂದುವ ಅಡುಗೆ ಸಿಬ್ಬಂದಿಗೆ ಒಂದು ಬಾರಿಯ ಇಡಿಗಂಟು ಸೌಲಭ್ಯವನ್ನು ಸರ್ಕಾರವು ಮಂಜೂರು ಮಾಡಿ ಆದೇಶವನ್ನು ಉಲ್ಲೇಖದ ರೀತ್ಯಾ ನೀಡಿರುತ್ತದೆ.
ಉಲ್ಲೇಖಿತ ಸರ್ಕಾರದ ಆದೇಶದಲ್ಲಿ ನೀಡಿರುವ ಷರತ್ತುಗಳನ್ನು ಮತ್ತು ಕೆಳಕಂಡ ಸೂಚನೆಗಳನ್ನು ಅನ್ವಯಿಸಿಕೊಂಡು ಅಡುಗೆ ಸಿಬ್ಬಂದಿಗೆ ಅವರು ಸಲ್ಲಿಸಿರುವ ತಾತ್ಕಾಲಿಕ ಸೇವೆಯ ಅವಧಿಯ ಹಿನ್ನೆಲೆಯಲ್ಲಿ, ಒಂದು ಬಾರಿಗೆ ಇಡಿಗಂಟು ಸೌಲಭ್ಯವನ್ನು ನೀಡಲು . ಸರ್ಕಾರವು ನಿಗಧಿಪಡಿಸಿ ಆದೇಶಿಸಿರುವ ಮೊತ್ತವನ್ನು ಮಂಜೂರು ಮಾಡುವಂತೆ ಸೂಚಿಸಿದೆ.
ಅಡುಗೆ ಸಿಬ್ಬಂದಿಯು ಸಲ್ಲಿಸಿದ ಸೇವೆಯನ್ನು ಆಧರಿಸಿ ಒಂದು ಬಾರಿಗೆ ನೀಡಲು ಸರ್ಕಾರ ನಿಗಧಿಪಡಿಸಿ ಆದೇಶಿಸಿರುವ ಅಂತಿಮ ಇಡಿಗಂಟಿನ ಅಡುಗೆ ಸಿಬ್ಬಂದಿಯವರು ಸಲ್ಲಿಸಿರುವ ಸೇವೆಯ ಒಟ್ಟು ಅವಧಿ 5 ವರ್ಷಕ್ಕೂ ಮೇಲ್ಪಟ್ಟು ಹಾಗೂ 15 ವರ್ಷಕ್ಕಿಂತ ಕಡಿಮೆ ಸೇವೆ ಸಲ್ಲಿಸಿದ್ದಲ್ಲಿ ರೂ. 30,000/-(ರೂಪಾಯಿ. ಮೂವತ್ತು ಸಾವಿರ ಮಾತ್ರ).
15 ವರ್ಷ ಹಾಗೂ ಅದಕ್ಕೂ ಹೆಚ್ಚು ಸೇವೆ ಸಲ್ಲಿಸಿದ್ದಲ್ಲಿ ರೂ.40,000/- (ರೂಪಾಯಿ, ನಲವತ್ತು ಸಾವಿರ ಮಾತ್ರ).
ಅರ್ಹ ಅಡುಗೆ ಸಿಬ್ಬಂದಿಗಳಿಗೆ ಇಡಿಗಂಟಿನ ಮೊತ್ತವನ್ನು ಮಂಜೂರು ಮಾಡಲು ಸಲ್ಲಿಸಬೇಕಾದ ಮತ್ತು ಪರಿಶೀಲಿಸಬೇಕಾದ ದಾಖಲೆಗಳು ಮತ್ತು ಈ ಸಂಬಂಧ ಸರ್ಕಾರವು ವಿಧಿಸಿರುವ ಷರತ್ತುಗಳು:-
1. ಅರ್ಹ ಅಡುಗೆ ಸಿಬ್ಬಂದಿಗೆ ಇಡಿಗಂಟು ನೀಡುವ ಸಂದರ್ಭದಲ್ಲಿ ಉಲ್ಲೇಖದ ಸರ್ಕಾರಿ ಆದೇಶದಲ್ಲಿನ ಹಾಗೂ ಈ ಸುತ್ತೋಲೆಯಲ್ಲಿ ನಮೂದಿಸಿರುವ ಎಲ್ಲಾ ಷರತ್ತುಗಳನ್ನು ಜಿಲ್ಲಾ ಮತ್ತು ತಾಲ್ಲೂಕು ಹಂತಗಳಲ್ಲಿನ ಅನುಷ್ಠಾನಾಧಿಕಾರಿಗಳು ಕಡ್ಡಾಯವಾಗಿ ಪಾಲಿಸತಕ್ಕದ್ದು.
2. ಇಡಿಗಂಟು ನೀಡಬೇಕಾಗಿರುವ ಅರ್ಹ ಪ್ರಕರಣಗಳಲ್ಲಿ ಅಡುಗೆ ಸಿಬ್ಬಂದಿ ಅಥವಾ ಅರ್ಹ ಕಾನೂನುಬದ್ದ ಅವಲಂಬಿತರು ಇಡಿಗಂಟಿಗೆ ಬೇಡಿಕೆ ಪ್ರಸ್ತಾವನೆಯನ್ನು ಸೇವೆ ಸಲ್ಲಿಸಿರುವ ಶಾಲೆಯ ಮುಖ್ಯ ಶಿಕ್ಷಕರಿಗೆ ಸಲ್ಲಿಸುವುದು.
3. ಸಂಬಂಧಿಸಿದ ಶಾಲೆಗಳ ಮುಖ್ಯಶಿಕ್ಷಕರು ಶಾಲೆಯಲ್ಲಿರುವ ಅಡುಗೆ ಸಿಬ್ಬಂದಿಯ ಸೇವಾವಧಿಯ ಹಾಜರಾತಿ ದಾಖಲೆಗಳನ್ನು ಆಧರಿಸಿ, ಪರಿಶೀಲಿಸಿ, ಪ್ರಸ್ತಾವನ ಕ್ರಮಬದ್ಧವಾಗಿದ್ದಲ್ಲಿ, ಮಾಹಿತಿಗಳನ್ನು ದೃಢೀಕರಿಸಿ ಸೂಕ್ತ ಶಿಫಾರಸ್ಸಿನೊಂದಿಗೆ ಪ್ರಸ್ತಾವನೆಯನ್ನು ಸಂಬಂಧಿಸಿದ ತಾಲ್ಲೂಕು ಪಂಚಾಯತ್‌ನ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪರಿಶೀಲನೆಗಾಗಿ ಹಾಗೂ ಇಡಿಗಂಟು ಮಂಜೂರಾತಿಯ ಮುಂದಿನ ಕ್ರಮಕ್ಕಾಗಿ ಸಲ್ಲಿಸುವುದು.
4. ಬೇಡಿಕೆ ಪ್ರಸ್ತಾವನೆಯನ್ನು ಸ್ವೀಕರಿಸಿದ ತಾಲ್ಲೂಕು ಪಂಚಾಯತ್‌ನ ಕಾರ್ಯನಿರ್ವಾಹಕ ಅಧಿಕಾರಿಯವರು ಪಿಎಂ ಪೋಷಣ್ ಯೋಜನೆಯ ತಾಲ್ಲೂಕು ಸಹಾಯಕ ನಿರ್ದೇಶಕರವರಿಂದ ಸ್ಪಷ್ಟವಾದ ಅಭಿಪ್ರಾಯ ಮತ್ತು ಸಂಬಂಧಿಸಿದ ಅಗತ್ಯ ದಾಖಲೆಗಳ ದೃಢೀಕರಣವನ್ನು ಪಡೆದು ಶಿಫಾರಸ್ಸಿನೊಂದಿಗೆ ಪ್ರಸ್ತಾವನೆಯನ್ನು ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಇಡಿಗಂಟು ಬೇಡಿಕೆಯ ಪರಿಶೀಲನೆಗಾಗಿ ಹಾಗೂ ಹಣ ಮಂಜೂರಾತಿಯ ಮುಂದಿನ ಕ್ರಮಕ್ಕಾಗಿ ಜಿಲ್ಲಾ ಪಂಚಾಯತ್‌ಗೆ ಸಲ್ಲಿಸುವುದು.
5. ಜಿಲ್ಲಾ ಪಂಚಾಯತ್ ಹಂತದಲ್ಲಿ ಸ್ವೀಕೃತಗೊಂಡ ಪ್ರಸ್ತಾವನೆಗಳನ್ನು ಈ ಕೆಳಕಂಡಂತೆ ಜಿಲ್ಲೆಗಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಂದ ರಚಿಸಲ್ಪಟ್ಟಿರುವ ತ್ರಿಸದಸ್ಯ ಸಮಿತಿಯಿಂದ ಪರಿಶೀಲನೆಗೆ ಒಳಪಡಿಸುವುದು, ಸಲ್ಲಿಸಿರುವ ದಾಖಲೆಗಳ ನೈಜತೆ ಬಗ್ಗೆ ಮತ್ತು ಪರಿಶೀಲನೆಯ ನಂತರ ಅರ್ಹ ಪ್ರಸ್ತಾವನೆಗಳಿಗೆ ಇಡಿಗಂಟು ನೀಡುವ ಸಂಬಂಧ ಫಲಾನುಭವಿಗೆ ನಿಗಧಿಪಡಿಸಿದ ಅರ್ಹ ಇಡಿಗಂಟಿನ ಮೊತ್ತಕ್ಕೆ ಮಂಜೂರಾತಿಯ ಆದೇಶವನ್ನು ನೀಡುವಂತೆ ತ್ರಿಸದಸ್ಯ ಸಮಿತಿಯು ತನ್ನ ಅಭಿಪ್ರಾಯವನ್ನು ನಡವಳಿಯೊಂದಿಗೆ ಸಲ್ಲಿಸಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅನುಮೊದನೆ ಪಡೆದು ಜಿಲ್ಲಾ ಪಂಚಾಯತಿಯಿಂದ ಇಡಿಗಂಟು ಮಂಜೂರಾತಿ ಆದೇಶವನ್ನು ಹೊರಡಿಸತಕ್ಕದ್ದು.
6. ಇಡಿಗಂಟು ಪ್ರಸ್ತಾವನೆಗಳನ್ನು ಜಿಲ್ಲಾ ಹಂತದಲ್ಲಿ ಸ್ವೀಕೃತಗೊಂಡ ನಂತರ ತ್ರಿಸದಸ್ಯ ಸಮಿತಿಯು ಪರಿಶೀಲಿಸತಕ್ಕದ್ದು, ಇದಕ್ಕಾಗಿ ಸದರಿ ಸಮತಿಯು ಈ ಕೆಳಕಂಡ ಅಧಿಕಾರಿಗಳನ್ನು ಒಳಗೊಂಡು
6.1 ಆಯಾ ಜಿಲ್ಲೆಗಳ ಜಿಲ್ಲಾ ಪಂಚಾಯತ್‌ನ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು,
6.2 ಆಯಾ ಜಿಲ್ಲೆಗಳ ಉಪನಿರ್ದೇಶಕರು (ಆಡಳಿತ) ಶಾಲಾ ಶಿಕ್ಷಣ ಇಲಾಖೆ.
6.3 ಆಯಾ ಜಿಲ್ಲೆಗಳ ಜಿಲ್ಲಾ ಪಂಚಾಯತ್‌ನ ಪಿಎಂ ಪೋಷಣ್ ಯೋಜನೆಯ ಶಿಕ್ಷಣಾಧಿಕಾರಿಗಳು.
7. ಸಂಬಂಧಿಸಿದ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಮಂಜೂರಾತಿ ಆದೇಶವನ್ನು ಆಧರಿಸಿ, ಅಡುಗೆ ಸಿಬ್ಬಂದಿಗಳಿಗೆ ಅಥವಾ ಅರ್ಹ ಕಾನೂನುಬದ್ಧ ಅವಲಂಬಿತರ ಬ್ಯಾಂಕ್ ಖಾತೆಗೆ ನೇರವಾಗಿ ಮಂಜೂರಾದ ನಿಗಧಿತ ಇಡಿಗಂಟಿನ ಮೊತ್ತವನ್ನು ತಾಲ್ಲೂಕು ಪಂಚಾಯತ್ ಹಂತದಲ್ಲಿ ಖಜಾನೆ ಮೂಲಕ ಬಿಡುಗಡೆಗೊಳಿಸುವುದು.
8. ಅರ್ಹ ಅಡುಗೆ ಸಿಬ್ಬಂದಿಗೆ ಪಾವತಿಸುವ ಇಡಿಗಂಟೆಗೆ ಸಂಬಂಧಿಸಿದ ವೆಚ್ಚಗಳನ್ನು ರಾಜ್ಯ ಕ್ಷೀರಭಾಗ್ಯ ಯೋಜನೆ (ಎಂ.ಡಿ.ಎಂ) ಕಾರ್ಯಕ್ರಮದ ಲೆಕ್ಕ ಶೀರ್ಷಿಕೆ 2202-00-101-018 (2202-01-196-1-02) ರ ಉಪ ಶೀರ್ಷಿಕೆ 090 ರಡಿ ಆಯವ್ಯಯದಲ್ಲಿ ನಿಗದಿಯಾಗಿರುವ ಅನುದಾನದಿಂದ ತಾಲ್ಲೂಕು ಪಂಚಾಯತ್‌ನಿಂದ ಭರಿಸತಕ್ಕದ್ದು, ಈ ವೆಚ್ಚ ಭರಿಸಲು ಈಗಾಗಲೇ ಬಿಡುಗಡೆ ಆಗಿರುವ ಮತ್ತು ಮುಂದಿನ ಪ್ರತಿ ತ್ರೈಮಾಸಿಕದಲ್ಲಿ ಬಿಡುಗಡೆ ಆಗುವ ರಾಜ್ಯ ಸರ್ಕಾರದ ಅನುದಾನದಲ್ಲಿಯೇ ಇಡಿಗಂಟಿನ ವೆಚ್ಚವನ್ನು ಭರಿಸಿ ಜಿಲ್ಲಾ ಮತ್ತು ತಾಲ್ಲೂಕು ಹಂತದಲ್ಲಿ ಸೂಕ್ತ ಲೆಕ್ಕ ವಿವರವನ್ನು ಇಡುವುದು.
9. ಇಡಿಗಂಟು ನೀಡಬೇಕಾಗಿರುವ ಅರ್ಹ ಪ್ರಕರಣಗಳಲ್ಲಿ ಒಂದು ವೇಳೆ ಅಡುಗೆ ಸಿಬ್ಬಂದಿಯವರು ಮರಣ ಹೊಂದಿದ್ದರೆ, ಅಂತಹ ಅಡುಗೆ ಸಿಬ್ಬಂದಿಯ ಕಾನೂನುಬದ್ಧ ಅರ್ಹ ಅವಲಂಬಿತರಿಗೆ ಇಡಿಗಂಟು ಮೊತ್ತವನ್ನು ಪಾವತಿಸಲು ಅವರ ಅರ್ಹ ಕುಟುಂಬ ಸದಸ್ಯರಿಂದ ದೃಢೀಕರಿಸಿದ ಪ್ರಸ್ತಾವನೆಯೊಂದಿಗೆ ಸಲ್ಲಿಸಬೇಕಾಗಿರುವ ಅರ್ಜಿಯ ನಮೂನೆ, ಸಂಬಂಧಿಸಿದ ಶಾಲೆಯ ಮುಖ್ಯಶಿಕ್ಷಕರಿಂದ ಸೇವಾ ದೃಢೀಕರಣ ಪತ್ರ, ಅಡುಗೆ ಸಿಬ್ಬಂದಿಯ ಮರಣ ಸಮರ್ಥನಾ ಪ್ರಮಾಣ ಪತ್ರ, ಅವಲಂಬಿತರ ವಂಶವೃಕ್ಷ ಪ್ರಮಾಣ ಪತ್ರ. ಅವಲಂಬಿತರ ಆಧಾರ್ ಕಾರ್ಡ್, ಅವಲಂಬಿತರ ಬ್ಯಾಂಕ್ ಉಳಿತಾಯ ಖಾತೆಯ ಪುಸ್ತಕದ ಮುಖಪುಟ ಮತ್ತು ಇತರೆ ಅಗತ್ಯ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿದ್ದು, ಇದಕ್ಕಾಗಿ ನಮೂನಗಳನ್ನು ಈ ಸುತ್ತೋಲೆಯೊಂದಿಗೆ (ಅನುಬಂಧ-1, 2 ಮತ್ತು 3 ರಲ್ಲಿ) ಅಡಕವಿರಿಸಿದೆ.
10. ಅರ್ಹ ಅಡುಗೆ ಸಿಬ್ಬಂದಿ/ ಅವರ ಕಾನೂನು ಬದ್ದ ಅವಲಂಬಿತರು ಮೇಲ್ಕಂಡ ನಮೂನೆಗಳಲ್ಲಿ ಮಾಹಿತಿಯನ್ನು ಸಂಬಂಧಿಸಿದ ಪ್ರಾಧಿಕಾರಿಗಳಿಂದ ದೃಢೀಕರಣ ಪಡೆದು ಪೂರ್ಣ ದಾಖಲೆ ಮತ್ತು ಮಾಹಿತಿಯೊಂದಿಗೆ ಶಾಲೆಗೆ ಸಲ್ಲಿಸಿ ಇಡಿಗಂಟು ಬೇಡಿಕೆ ಪ್ರಸ್ತಾವನೆಯನ್ನು ಅಡುಗೆ ಕೆಲಸ ನಿರ್ವಹಿಸಿದ್ದ ಶಾಲೆಯ ಮುಖ್ಯಶಿಕ್ಷಕರಿಗೆ ನೇರವಾಗಿ ಸಲ್ಲಿಸುವುದು.
11. ಪ್ರತಿ ವರ್ಷ ಸಲ್ಲಿಸುವ ಮುಂದಿನ ವರ್ಷದ ಮುಂಗಡ ಆಯವ್ಯಯದ ಬೇಡಿಕೆಯಲ್ಲಿ ಆಯಾ ವರ್ಷದಲ್ಲಿ 60 ವರ್ಷ ವಯೋಮಾನ ಪೂರೈಸುವ ಅರ್ಹ ಅಡುಗೆ ಸಿಬ್ಬಂದಿಗಳಿಗೆ (ಮರಣ ಹೊಂದಿದವರನ್ನು ಸೇರಿಸಿಕೊಂಡು) ಇಡಿಗಂಟು ಪಾವತಿಸಲು ಅಗತ್ಯವಿರಬಹುದಾದ ಅಂದಾಜು ಅನುದಾನ ಬೇಡಿಕೆಯನ್ನು ತಾಲ್ಲೂಕು ಹಂತದಿಂದ ಲೆಕ್ಕಿಸಿ, ಜಿಲ್ಲಾ ಹಂತದಲ್ಲಿ ತಾಲ್ಲೂಕುವಾರು ಕ್ರೂಢೀಕರಣ ಮಾಡಿ, ರಾಜ್ಯ ಕಛೇರಿಗೆ ಎಲ್ಲಾ ಜಿಲ್ಲೆಗಳಿಂದ ಅಗತ್ಯ ಮಾಹಿತಿಯನ್ನು ಪ್ರತಿ ವರ್ಷ 20ನೇ ಆಗಸ್ಟ್ ಮಾಹೆಯೊಳಗೆ ಸಲ್ಲಿಸತಕ್ಕದ್ದು.
ಒಂದು ಬಾರಿಗೆ ಇಡುಗಂಟು ಪಡೆಯಲು ಈ ದಾಖಲೆಗಳು ಕಡ್ಡಾಯ
ಅರ್ಜಿದಾರರ ಆಧಾರ್ ಕಾರ್ಡ್ ನ ನಕಲು ಪ್ರತಿ
ಬ್ಯಾಂಕ್ ಖಾತೆಯ ಮುಖಪುಟದ ದಾಖಲೆಯ ಪ್ರತಿ
ಅಡುಗೆ ಸಿಬ್ಬಂದಿ ಮರಣ ಹೊಂದಿದ್ದಲ್ಲಿ ಅವಲಂಬಿತರಿಂದ ವಂಶವೃಕ್ಷ ಪ್ರತಿ
ಅಡುಗೆ ಸಿಬ್ಬಂದಿ ಮರಣ ಹೊಂದಿದ್ದಲ್ಲಿ ಮರಣ ಸಮರ್ಥನಾ ಪತ್ರ
ಅಡುಗೆ ಸಿಬ್ಬಂದಿಯ ತಾತ್ಕಾಲಿಕ ಸೇವಾ ಅವಧಿಯ ದೃಢೀಕರಣ ಪತ್ರ
ಜನ್ಮ ದಿನಾಂಕವನ್ನು ದೃಢೀಕರಿಸುವ ಪತ್ರ ( ಆಧಾರ್, ಶಾಲಾ ದಾಖಲೆ)
ಮತ್ತಿತರ ಪೂರಕ ದಾಖಲೆಗಳು
ಮಂಗಳವಾರ, ಡಿಸೆಂಬರ್ 31, 2024
Tax-free Income Sources: ಈ ರೀತಿ ಹಣ ಗಳಿಸಿದ್ರೆ ಟ್ಯಾಕ್ಸ್ ಕಟ್ಬೇಕಾಗಿಲ್ಲ, ತೆರಿಗೆ ಮುಕ್ತ ಆದಾಯದ ಮೂಲಗಳಿವು
ಕೆಲ ಆದಾಯಗಳು ತೆರಿಗೆ ಮುಕ್ತವಾಗಿವೆ. ತೆರಿಗೆ ಪಾವತಿಗೆ ಮುನ್ನ ಯಾವೆಲ್ಲ ಆದಾಯ, ತೆರಿಗೆ ಮುಕ್ತವಾಗಿದೆ ಎಂಬುದನ್ನು ತಿಳಿದುಕೊಳ್ಳಿ. ಯಾವ ಆದಾಯ ತೆರಿಗೆ ಮುಕ್ತ? : ಕೃಷಿ ...
-
ರಾಜ್ಯ ಸರ್ಕಾರಿ' ನೌಕರರೇ ಗಮನಿಸಿ : ವಿವಿಧ ರಜೆಗಳು ಮತ್ತು ನಿಯಮಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ |GOVT EMPLOYEEಸತತವಾಗಿ 4 ತಿಂಗಳಿಗಿಂತಲೂ ಹೆಚ್ಚಾಗಿ ಅನಧಿಕೃತ ಗೈರು ಹಾಜರಾದಲ್ಲಿ ಅಂತಹ ಸರ್ಕಾರಿ ನೌಕರನನ್ನು ವಿಚಾರಣೆಗೆ ಒಳಪಡಿಸಿ (ಸಿಸಿಎ) ಪ್ರಕಾರ ಸೇವೆಯಿಂದ ವಜಾ ಮಾಡಬಹುದು. ಅನುಮತ...
-
ವೇತನ, ಭತ್ಯೆ ಹೆಚ್ಚಳಕ್ಕೆ ತಿದ್ದುಪಡಿ ಮಸೂದೆ ಸಿದ್ಧ: ಸಚಿವರು,ಶಾಸಕರ ವೇತನ ಇಮ್ಮಡಿ ಮುಖ್ಯಮಂತ್ರಿ, ಸಚಿವರು, ಶಾಸಕರು ಈಗ ಪಡೆಯುತ್ತಿರುವ ವೇತನ ಮತ್ತು ಭತ್ಯೆಯನ್ನು ಭಾರ...
-
7th Pay Commission: ಸರ್ಕಾರಿ ನೌಕರರ ರಜೆ ಸೌಲಭ್ಯಗಳ ಶಿಫಾರಸುಗಳು ರಾಜ್ಯ ಸರ್ಕಾರಿ ನೌಕರರಿಗೆ ಪ್ರತಿ ವರ್ಷ 30 ದಿನಗಳ ಗಳಿಕೆ ರಜೆಯನ್ನು ಮಂಜೂರು ಮಾಡಲಾಗುತ್ತದೆ. ಅವರ...
-
ಯೋಜನೆಗೆ ಅರ್ಹ ಅವಲಂಬಿತರು ಯಾರು? ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು 1963 ರ ನಿಯಮ 2ರಲ್ಲಿನ "ಕುಟುಂಬ" (Family) ಅಂದರೆ, ಸರ್ಕಾರಿ...
-
🏆🏆 ಕರ್ನಾಟಕ ರಾಜ್ಯ ಸರಕಾರಿ ನೌಕರರಿಗೆ 7 ನೇ ವೇತನ ಆಯೋಗದ ಅನುಸಾರ ಲಭಿಸುವ ಹೊಸವೇತನವನ್ನು ಕಂಡುಕೊಳ್ಳಲು ಈಗಾಗಲೇ https://karpay.calculator.cafe ವೆಬ್ ಚಾಲನೆ...
-
ನಿವೃತ್ತಿಯ ನಂತರ ನೆಮ್ಮದಿಯ ಜೀವನವನ್ನ ನಡೆಸಲು ನಮಗೆ ಹಣದ ಅಗತ್ಯ ಹೆಚ್ಚಿರುತ್ತದೆ. ನಿವೃತ್ತಿಯ ನಂತರ ಯಾವುದೇ ಸ್ಥಿರ ಆದಾಯವಿಲ್ಲದೇ ಹಣಕಾಸು ನಿರ್ವಹಣೆ ಮಾಡುವುದು ಕಷ್ಟವ...
-
ಈ ಯೋಜನೆಯನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ ಎಂದಿದ್ದಾರೆ. ಈ ಯೋಜನೆಯ ಕಾರ್ಯನೀತಿ ಸೂಚನೆಗಳನ್ನು ಸರ್ಕಾರದ ಆದೇಶ ಸಂಖ್ಯೆ:ಸಿಆಸು...
-
ಕರ್ನಾಟಕ ಸರ್ಕಾರಿ ನೌಕರರ (ಕಡ್ಡಾಯ ಜೀವ ವಿಮಾ ತಿದ್ದುಪಡಿ ) ನೇಮಗಳು 2024 ರಂದು ತೆರೆಯಲ್ಪಟ್ಟಿದೆ ಕ್ರಮ ಸಂಖ್ಯೆ ವೇತನ ಶ್ರೇಣಿ ರೂಪಾಯಿಗಳಲ್ಲಿ...
-
ಕರ್ನಾಟಕ ರಾಜ್ಯ ಸೇವಾ ನಿಯಮಗಳು 1958 ರ ನಿಯಮ 8 (24) ಸೇರಿಕೆ ಕಾಲ ಸರ್ಕಾರಿ ನೌಕರನಿಗೆ ಯಾವ ಸಂದರ್ಭದಲ್ಲಿ ಲಭಿಸುತ್ತದೆ ಯಾರೇ ಒಬ್ಬ ಸರ್ಕಾರಿ ನೌಕರನು ಸರ್ಕಾರದ ಹಿತಾ...
-
ಈ ಸಂಬಂಧ ರಾಜ್ಯ ಸರ್ಕಾರದಿಂದ ಸಭಾ ಸೂಚನಾ ಪತ್ರವನ್ನು ಹೊರಡಿಸಲಾಗಿದ್ದು, ರಾಜ್ಯ ಸಚಿವ ಸಂಪುಟದ ತೀರ್ಮಾನಿಸಿದಂತೆ ಅಧಿಕಾರಿ, ನೌಕರರು ಮತ್ತು ಅವಲಂಬಿತ ಕುಟುಂಬದ ಸದಸ್ಯರ ಹ...