ಹೈದರಾಬಾದ್ ಕರ್ನಾಟಕ ಪ್ರದೇಶ

ಹೈದರಾಬಾದ್ ಕರ್ನಾಟಕ ಪ್ರದೇಶ
Hyderabad Karnataka

ಶನಿವಾರ, ಡಿಸೆಂಬರ್ 14, 2024

ರಾಜ್ಯದ ಪ್ರೌಢಶಾಲಾ ಸಹ ಶಿಕ್ಷಕರ ಹುದ್ದೆಗಳ ಬಡ್ತಿ : ಎಲ್ಲಾ ಶಾಲೆಗಳಿಗೆ 'ಶಿಕ್ಷಣ ಇಲಾಖೆ' ಮಹತ್ವದ ಆದೇಶ.!

ರಾಜ್ಯದ ಪ್ರೌಢಶಾಲಾ ಸಹ ಶಿಕ್ಷಕರ ಹುದ್ದೆಗಳ ಬಡ್ತಿ : ಎಲ್ಲಾ ಶಾಲೆಗಳಿಗೆ 'ಶಿಕ್ಷಣ ಇಲಾಖೆ' ಮಹತ್ವದ ಆದೇಶ.!

ಸಹ ಶಿಕ್ಷಕರ ಹುದ್ದೆಗಳ ಬಡ್ತಿ ಕುರಿತು ಶಿಕ್ಷಣ ಇಲಾಖೆ ಮಹತ್ವದ ಸುತ್ತೋಲೆ ಹೊರಡಿಸಿದೆ. ಶಾಲಾ ಶಿಕ್ಷಣ ಇಲಾಖೆಯ ಪ್ರೌಢಶಾಲಾ ಸಹ ಶಿಕ್ಷಕರುಗಳಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರ ಹುದ್ದೆಗೆ ಬಡ್ತಿ ನೀಡಲು ಸ್ನಾತಕೋತ್ತರ ವಿದ್ಯಾರ್ಹತೆ ಹೊಂದಿರುವ ಅರ್ಹಶಿಕ್ಷಕರ ಜೇಷ್ಠತಾ ಪಟ್ಟಿ ತಯಾರಿಸುವ ಬಗ್ಗೆ ಸುತ್ತೋಲೆ ಹೊರಡಿಸಲಾಗಿದೆ.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಉಲ್ಲೇಖ(1) ರೀತ್ಯಾ ಸ್ನಾತಕೋತ್ತರ ಪದವಿ ಪಡೆದಿರುವ ಶಾಲಾ ಶಿಕ್ಷಣ ಇಲಾಖೆಯ ಪ್ರೌಢಶಾಲಾ ಸಹ ಶಿಕ್ಷಕರುಗಳಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರ ಹುದ್ದೆಗೆ ಮುಂಬಡ್ತಿ ನೀಡಲು ಪ್ರೌಢಶಾಲಾ ಸಹ ಶಿಕ್ಷಕರ ರಾಜ್ಯ ಮಟ್ಟದ ಒಂದೇ ಪಟ್ಟಿಯನ್ನು ಕರ್ನಾಟಕ ಸರ್ಕಾರಿ ನೌಕರರ (ಜೇಷ್ಠತೆ) ನಿಯಮಗಳು 1957 ರ ನಿಯಮ 7-ಎ ರಡಿ ಸಿದ್ಧಪಡಿಸಲು ಸರ್ಕಾರದ ಪತ್ರದಲ್ಲಿ ಆದೇಶವಾಗಿರುತ್ತದೆ.

ಸದರಿ ಆದೇಶದ ಹಿನ್ನಲೆಯಲ್ಲಿ ಉಲ್ಲೇಖ-(2)ರ ದಿನಾಂಕ: 03/12/2024ರ ಸಭೆ ನಡವಳಿಯಂತೆ ಪ್ರೌಢಶಾಲಾ ಸಹ ಶಿಕ್ಷಕರ ಪಟ್ಟಿಯನ್ನು ವಿಭಾಗೀಯ ಸಹನಿರ್ದೇಶಕರು ಸಿದ್ಧಪಡಿಸಿ ಸಲ್ಲಿಸಲು ತಿಳಿಸಿದ್ದು, ಉಲ್ಲೇಖ(3) ರಲ್ಲಿ ನಮೂನೆ-1ರಲ್ಲಿ ಕೆಳಕಂಡ ಸೂಚನೆಗಳಂತೆ ಪಟ್ಟಿ ಸಿದ್ಧಪಡಿಸಿ ದಿನಾಂಕ: 26/12/2024 ರ ಒಳಗೆ ಸಲ್ಲಿಸಲು ತಿಳಿಸಲಾಗಿರುತ್ತದೆ.


1. ដ Excel format font-Times New Roman, All Caps, font size-12 ಸಿದ್ಧಪಡಿಸುವುದು.

2. ≈ 2, Date of Entry into previous cadre 있 Date of entry into present cadre ಗಳನ್ನು ದಿನಾಂಕ/ತಿಂಗಳು/ವರ್ಷ(dd/mm/yyyy) ಈ ಫಾರ್ಮಾಟ್ ನಲ್ಲೇ ನಮೂದಿಸುವುದು. ದಿನಾಂಕ, ತಿಂಗಳು ಮತ್ತು ವರ್ಷ ಇವುಗಳ ನಡುವೆ ಖಾಲಿ ಜಾಗ, ಚುಕ್ಕೆಗಳು ಮತ್ತು ಚಿಹ್ನೆಗಳಿದಲ್ಲಿ ಅವುಗಳನ್ನು ತೆಗೆದು ಕಡ್ಡಾಯವಾಗಿ ದಿನಾಂಕ/ತಿಂಗಳು/ವರ್ಷ ಈ ನಮೂನೆಯಲ್ಲೇ ಡೇಟಾ ನೀಡುವುದು.

3. Degree Subjects & Master Degree Subjects ಪದವಿಯ ವಿಷಯಗಳನ್ನು ಸರಿಯಾಗಿ ನಮೂದಿಸುವುದು.

4. ಆಯಾ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ನಾತಕೋತ್ತರ ಪದವಿ ಪಡೆದ ಪ್ರೌಢಶಾಲಾ ಸಹಶಿಕ್ಷಕರುಗಳ ಮಾಹಿತಿಯನ್ನು ತಪ್ಪದೇ ನಮೂದಿಸುವುದು ಎಂದು ಸೂಚನೆ ನೀಡಲಾಗಿದೆ.





ಗೂಗಲ್‌ ಪೇ, ಫೋನ್‌ ಪೇ ಮೂಲಕ ತಪ್ಪು ಸಂಖ್ಯೆಗೆ ಹಣ ಕಳುಹಿಸಿದ್ದೀರಾ? ಹಣ ಮರಳಿ ಪಡೆಯಲು ಹೀಗೆ ಮಾಡಿ

ಬಹುತೇಕ ಎಲ್ಲ ಕಡೆ ಡಿಜಿಟಲ್ ಪೇಮೆಂಟ್‌ ಮಾಡಬಹುದಾದ ಸೌಲಭ್ಯವಿದೆ. ಕೈಯಲ್ಲಿ ಹಣ ಇಟ್ಟುಕೊಂಡು ಓಡಾಡುವುದಕ್ಕಿಂತ ಸುಲಭವಾಗಿ ಫೋನ್‌ ಮೂಲಕ ಹಣದ ವ್ಯವಹಾರ ನಿರ್ವಹಿಸುವುದು ಹೆಚ್ಚಾಗುತ್ತಿದೆ. ದೊಡ್ಡ ದೊಡ್ಡ ಮಾಲ್‌ಗಳಿಂದ ಹಿಡಿದು ಹಾಲಿನ ಬೂತ್‌, ತರಕಾರಿ ಅಂಗಡಿಯವರೆಗೆ ಆನ್‌ಲೈನ್‌ ಪೇಮೆಂಟ್ ಬಳಸುವುದು ಅಭ್ಯಾಸವಾಗಿಬಿಟ್ಟಿದೆ.
ಆದರೆ ಕೆಲವೊಮ್ಮೆ ಆಕಸ್ಮಿಕವಾಗಿ ತಪ್ಪು ಸಂಖ್ಯೆಗಳಿಗೆ ಹಣ ಪಾವತಿ ಮಾಡಿಬಿಡುತ್ತೇವೆ. ನಂತರ ಆ ಹಣ ಮರಳಿ ಪಡೆಯುವುದು ಹೇಗೆ ಎಂಬ ಪ್ರಶ್ನೆಗಳು ಅವರನ್ನು ಕಾಡುತ್ತವೆ. ಜೊತೆಗೆ ಚಿಂತೆಗೂ ಒಳಗಾಗುತ್ತಾರೆ.

ತಮ್ಮ ಹಣವನ್ನು ತಾವು ಹೇಗೆ ಮರಳಿ ಪಡೆದುಕೊಳ್ಳಬಹುದು ಎಂಬುದನ್ನು ತಿಳಿದುಕೊಂಡರೆ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಿಕೊಳ್ಳಬಹುದು. ಆರ್‌ಬಿಐ ನಿಯಮಗಳ ಪ್ರಕಾರ, ಡಿಜಿಟಲ್ ಸೇವೆಗಳ ಮೂಲಕ ತಪ್ಪು ವ್ಯಕ್ತಿಗೆ ಹಣ ಕಳುಹಿಸಿದ್ದರೆ, ಹಣ ಪಾವತಿಸಿದ ದಾಖಲೆಗಳನ್ನು ಬಳಸಿ ದೂರು ನೀಡಬಹುದಾಗಿದೆ. ಗೂಗಲ್‌ ಪೇ (Google Pay), ಫೋನ್‌ ಪೇ (Phone Pay), ಪೇಟಿಎಂ (Paytm) ಮತ್ತು ಇತರ ಯುಪಿಐ ಪ್ಲಾಟ್‌ಫಾರ್ಮ್‌ಗಳ ಮೂಲಕ ನೀವು ತಪ್ಪಾಗಿ ಇತರರಿಗೆ ಹಣವನ್ನು ಕಳುಹಿಸಿದ್ದರೆ, ಎನ್‌ಪಿಸಿಐ (NPCI - National Payments Corporation of India) ಪೋರ್ಟಲ್ ಮೂಲಕ ದೂರು ಸಲ್ಲಿಸಬಹುದಾಗಿದೆ. ಹಾಗಾದರೆ ಯಾವ ರೀತಿ ದೂರು ಸಲ್ಲಿಸಬಹುದು ಎಂಬುದನ್ನು ತಿಳಿಯೋಣ.

ಎನ್‌ಪಿಸಿಐನಲ್ಲಿ ದೂರು ಸಲ್ಲಿಸುವುದು ಹೇಗೆ?

ಆಕಸ್ಮಿಕವಾಗಿ ಯುಪಿಐ ಮೂಲಕ ತಪ್ಪು ಸಂಖ್ಯೆಗೆ ಹಣ ಕಳುಹಿಸಿದ್ದರೆ ಆಗ ಆ ವಹಿವಾಟಿನ ವಿರುದ್ಧ ದೂರು ದಾಖಲಿಸಬಹುದು. ನಿಧಿ ವರ್ಗಾವಣೆ ಅಥವಾ ವ್ಯಾಪಾರ ವಹಿವಾಟು ಈ ಎರಡೂ ಸಂದರ್ಭದಲ್ಲಿ ನೀವು ಎನ್‌ಪಿಸಿಐನಲ್ಲಿ ದೂರು ನೀಡಬಹುದು. ಅದಕ್ಕೆ ಮೊದಲು ಎನ್‌ಪಿಸಿಐನ ಅಧಿಕೃತ ವೆಬ್‌ಸೈಟ್‌ npci.org.in ಗೆ ಭೇಟಿ ಕೊಡಬೇಕು. ನಂತರ ಹೋಮ್‌ ಪೇಜ್‌ನಲ್ಲಿರುವ 'ವಾಟ್ ವಿ ಡು' ಟ್ಯಾಬ್‌ ಕ್ಲಿಕ್‌ ಮಾಡಬೇಕು. ಅಲ್ಲಿ ಯುಪಿಐ ಅಡಿಯಲ್ಲಿರುವ ಡಿಸ್ಪ್ಯೂಟ್‌ ರೆಡ್ರಿಸಲ್‌ ಮೆಕ್ಯಾನಿಸಂ (ವಿವಾದ ಪರಿಹಾರ ಕಾರ್ಯವಿಧಾನ) ಟ್ಯಾಬ್ ಆಯ್ದುಕೊಳ್ಳಬೇಕು. ಕಂಪ್ಲೇಂಟ್‌ನಲ್ಲಿರುವ ಟ್ರಾನ್ಸಾಕ್ಷನ್‌ ಆಯ್ಕೆಯ ಮೇಲೆ ಕ್ಲಿಕ್ ಮಾಡಿ, ಅಲ್ಲಿರುವ ಆನ್‌ಲೈನ್ ಫಾರ್ಮ್ ಅನ್ನು ಅಗತ್ಯ ಮಾಹಿತಿಗಳಾದ ಯುಪಿಐ ಐಡಿ, ವರ್ಚುವಲ್ ಪಾವತಿ ವಿಳಾಸ, ವರ್ಗಾವಣೆಯಾದ ಮೊತ್ತ, ವಹಿವಾಟು ದಿನಾಂಕ, ಇಮೇಲ್ ಐಡಿ, ಮೊಬೈಲ್ ಸಂಖ್ಯೆಯನ್ನು ನೀಡಿ ಭರ್ತಿ ಮಾಡಬೇಕು. ನಿಮ್ಮ ಖಾತೆಯಲ್ಲಿ ಹಣ ಕಡಿತವಾದ ವಿವರಗಳನ್ನು ನೀವು ಅಪ್‌ಲೋಡ್ ಮಾಡಬಹುದು. ಫಾರ್ಮ್ ಭರ್ತಿ ಮಾಡುವಾಗ 'ಇಶ್ಯೂ' ಅಡಿಯಲ್ಲಿ ನಿಮ್ಮ ದೂರಿನ ಕಾರಣವನ್ನು ಬರೆಯಬೇಕು. 'ಮತ್ತೊಂದು ಖಾತೆಗೆ ತಪ್ಪಾಗಿ ವರ್ಗಾಯಿಸಲಾಗಿದೆ' ಆಯ್ಕೆಯನ್ನು ಆಯ್ದುಕೊಳ್ಳುವ ಮೂಲಕ ದೂರು ಸಲ್ಲಿಸಬೇಕು.

ಎನ್‌ಪಿಸಿಐನಲ್ಲಿ ಯಾವಾಗ ದೂರು ಸಲ್ಲಿಸಬೇಕು?

ಎನ್‌ಪಿಸಿಐನ ವೆಬ್‌ಸೈಟ್ ಪ್ರಕಾರ, ಥರ್ಡ್ ಪಾರ್ಟಿ ಪ್ರೊವೈಡರ್ ಅಪ್ಲಿಕೇಶನ್ (TPAP) ಮೂಲಕ ಯುಪಿಐ ವಹಿವಾಟು ನಡೆಸಿದರೆ, ಮೊದಲು ಆಯಾ ಅಪ್ಲಿಕೇಶನ್‌ಗಳಿಗೆ ದೂರು ನೀಡಬೇಕು. ಯುಪಿಐಗೆ ಸಂಬಂಧಿಸಿದ ಎಲ್ಲಾ ದೂರುಗಳನ್ನು ಮೊದಲು ಸಾರ್ವಜನಿಕ ವಲಯದ ಬ್ಯಾಂಕ್ (ಪಿಎಸ್‌ಪಿ) ಅಥವಾ ಟಿಪಿಎಪಿ (TPAP) ಮೂಲಕ ಸಲ್ಲಿಸಬೇಕು. ಅಪ್ಲಿಕೇಶನ್ ನಿಮ್ಮ ಸಮಸ್ಯೆಯನ್ನು ಪರಿಹರಿಸದಿದ್ದರೆ, ಆಗ ನೀವು ಬ್ಯಾಂಕ್ ಮತ್ತು ಎನ್‌ಪಿಸಿಐ ಮೂಲಕ ದೂರು ಸಲ್ಲಿಸಬಹುದು. ಅದೇ ರೀತಿಯಲ್ಲಿ ಡಿಜಿಟಲ್ ದೂರುಗಳಿಗಾಗಿ ಆರ್‌ಬಿಐ ಓಂಬುಡ್ಸ್‌ಮನ್‌ಗೆ ದೂರು ಸಲ್ಲಿಸಬಹುದು. ಡಿಜಿಟಲ್ ಹಣಕಾಸು ವಹಿವಾಟುಗಳಿಗೆ ಸಂಬಂಧಿಸಿದ ದೂರುಗಳನ್ನು ಪರಿಹರಿಸಲು ಮತ್ತು ವಿವಾದಗಳನ್ನು ಬಗೆಹರಿಸಲು ಡಿಜಿಟಲ್ ವಹಿವಾಟುಗಳಿಗಾಗಿ ಆರ್‌ಬಿಐ ಒಂಬುಡ್ಸ್‌ಮನ್ ಅನ್ನು ಸ್ಥಾಪಿಸಲಾಗಿದೆ. ದೂರಿನ ಒಂದು ತಿಂಗಳೊಳಗೆ ಅಪ್ಲಿಕೇಶನ್‌ಗಳು ಉತ್ತರಿಸದಿದ್ದರೆ ಅಥವಾ ದೂರನ್ನು ತಿರಸ್ಕರಿಸಿದರೆ ಮಾತ್ರ ಗ್ರಾಹಕರು ಡಿಜಿಟಲ್ ವಹಿವಾಟುಗಳಿಗಾಗಿ ಓಂಬುಡ್ಸ್‌ಮನ್ ಅನ್ನು ಸಂಪರ್ಕಿಸಬೇಕು.

ಡಿಜಿಟಲ್‌ ವಹಿವಾಟುಗಳ ವಿವಾದ ಪರಿಹರಿಸಲು ಆರ್‌ಬಿಐ ಒಂಬುಡ್ಸ್‌ಮನ್‌

ಆರ್‌ಬಿಐ ಒಂಬುಡ್ಸ್‌ಮನ್‌ ಇದು ಡಿಜಿಟಲ್‌ ಹಣಕಾಸು ವಹಿವಾಟುಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಲು ಆರ್‌ಬಿಐ ಸ್ಥಾಪಿಸಿದ ಕುಂದುಕೊರತೆ ಪರಿಹಾರ ವಿಧಾನವಾಗಿದೆ. ಇದು ವಿಫಲ ವಹಿವಾಟುಗಳು, ಅನಧಿಕೃತ ಡೆಬಿಟ್‌ಗಳು, ವಂಚನೆಗಳು, ಮೊಬೈಲ್ ಬ್ಯಾಂಕಿಂಗ್‌ನಲ್ಲಿನ ಸಮಸ್ಯೆಗಳು, ಇಂಟರ್ನೆಟ್ ಬ್ಯಾಂಕಿಂಗ್, ಡಿಜಿಟಲ್ ವ್ಯಾಲೆಟ್‌ಗಳು ಮತ್ತು ಇತರ ಎಲೆಕ್ಟ್ರಾನಿಕ್ ಪಾವತಿಗಳಿಗೆ ಸಂಬಂಧಿಸಿದ ದೂರುಗಳನ್ನು ನಿರ್ವಹಿಸುತ್ತದೆ. ತಮ್ಮ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳೊಂದಿಗೆ ಸಮಸ್ಯೆಗಳನ್ನು ಎದುರಿಸುತ್ತಿರುವ ಗ್ರಾಹಕರು ತಮ್ಮ ಸಮಸ್ಯೆಗಳನ್ನು ನೇರವಾಗಿ ಸಂಬಂಧಪಟ್ಟ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯೊಂದಿಗೆ ಪರಿಹರಿಸಿಕೊಳ್ಳಲು ಸಾಧ್ಯವಾಗದಿದ್ದರೆ ಆರ್‌ಬಿಐ ಒಂಬುಡ್ಸ್‌ಮನ್ ಅನ್ನು ಸಂಪರ್ಕಿಸಬಹುದಾಗಿದೆ.

ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ


ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ


ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ (KSFES) ಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ (Eligible and interested) ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಇಲಾಖೆ ಹೆಸರು : ಕರ್ನಾಟಕ ರಾಜ್ಯ ಅಗ್ನಿಶಾಮಕ & ತುರ್ತು ಸೇವೆಗಳು (KSFES).

ಹುದ್ದೆಗಳ ಸಂಖ್ಯೆ : 1,488.

ಹುದ್ದೆಗಳ ಹೆಸರು : ಅಗ್ನಿಶಾಮಕ, ಅಗ್ನಿಶಾಮಕ ಇಂಜಿನ್ ಚಾಲಕ.

ಉದ್ಯೋಗ ಸ್ಥಳ : ಕರ್ನಾಟಕ(Karnataka) .

ಅಪ್ಲಿಕೇಶನ್ ಮೋಡ್ : ಆನ್‌ಲೈನ್‌ ಮೋಡ್.


ಅಗ್ನಿಶಾಮಕ ಠಾಣಾಧಿಕಾರಿ : 66

ಚಾಲಕ ತಂತ್ರಜ್ಞ : 27

ಅಗ್ನಿಶಾಮಕ ಇಂಜಿನ್ ಚಾಲಕ : 153

ಅಗ್ನಿಶಾಮಕ : 731


ಸಂಬಳದ ವಿವರ :

ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ.33,450 ರಿಂದ ರೂ.62,600/- ಸಂಬಳ ನೀಡಲಾಗುತ್ತದೆ.


ವಯೋಮಿತಿ :

ಅಧಿಕೃತ ಅಧಿಸೂಚನೆಗಳ ಪ್ರಕಾರ ಅಭ್ಯರ್ಥಿಯು, 18 ವರ್ಷದಿಂದ 28 ವರ್ಷಗಳನ್ನು ಹೊಂದಿರಬೇಕು.


ವಯೋಮಿತಿ ಸಡಿಲಿಕೆ :

• OBC/2A/2B/3A/3B ಅಭ್ಯರ್ಥಿಗಳು : 3 ವರ್ಷಗಳು.

• SC/ST ಅಭ್ಯರ್ಥಿಗಳು : 5 ವರ್ಷಗಳು.

• PWD ಅಭ್ಯರ್ಥಿಗಳು : 10 ವರ್ಷಗಳು.


ಅರ್ಜಿ ಶುಲ್ಕ :

• ಸಾಮಾನ್ಯ/2A/2B/3A/3B ಅಭ್ಯರ್ಥಿಗಳು : ರೂ.250/-

• SC/ST ಅಭ್ಯರ್ಥಿಗಳು : ರೂ.100/-


ಶೈಕ್ಷಣಿಕ ಅರ್ಹತೆ :

ಅಧಿಕೃತ ಅಧಿಸೂಚನೆಗಳ ಪ್ರಕಾರ ಅಭ್ಯರ್ಥಿಯು (ಹುದ್ದೆಗಳಿಗೆ ಅನುಸಾರ) SSLC,PUC ಮತ್ತು ರಸಾಯನಶಾಸ್ತ್ರದೊಂದಿಗೆ ವಿಜ್ಞಾನದಲ್ಲಿ ಪದವಿ ಹೊಂದಿರಬೇಕು.


ಆಯ್ಕೆ ವಿಧಾನ :

ಲಿಖಿತ ಪರೀಕ್ಷೆ ಮತ್ತು ಸಂದರ್ಶನ.


ಅರ್ಜಿ ಸಲ್ಲಿಸುವುದು ಹೇಗೆ.?

1. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ಸೂಚನೆಯನ್ನು ಡೌನ್‌ಲೋಡ್ (Download) ಮಾಡಿ.

2. ಅಧಿಕೃತ ಸೂಚನೆಯನ್ನು ಎಚ್ಚರಿಕೆಯಿಂದ ಓದಿ.

3. ಕೆಳಗಿನ ಆನ್‌ಲೈನ್ ಅಪ್ಲಿಕೇಶನ್‌ಗಳ ಲಿಂಕ್‌ನ್ನು ಅನ್ನು ಕ್ಲಿಕ್ ಮಾಡಿ.

4. ಕೊಟ್ಟಿರುವ ಫಾರ್ಮ್‌ನ್ನು ಸರಿಯಾಗಿ ಭರ್ತಿ ಮಾಡಿ.

5. ಅರ್ಜಿ ಶುಲ್ಕದ ಪಾವತಿ (ವಿನಂತಿಸಿದರೆ ಮಾತ್ರ)

6. ಸೂಕ್ತವಾದ ಫೋಟೋ ಮತ್ತು ಸಹಿಯನ್ನು ಲಗತ್ತಿಸಿ.

7. ಮತ್ತೊಮ್ಮೆ ಪರಿಶೀಲಿಸಿ ಮತ್ತು ಫಾರ್ಮ್‌ನ್ನು ಸಲ್ಲಿಸಿ.

8. ಅಂತಿಮವಾಗಿ, ಅದನ್ನು ಮುದ್ರಿಸಲು (Print) ಮರೆಯಬೇಡಿ.


ಅಧಿಕೃತ ವೆಬ್‌ಸೈಟ್ : ksfes.karnataka.gov.in





ವಿಧಾನ ಪರಿಷತ್ತಿನ ಸಚಿವಾಲಯದ (ಅಧಿಕಾರಿಗಳು ಮತ್ತು ನೌಕರರ ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಗಳು, 2021ರ ರೀತ್ಯಾ, ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ 12.03.2024 ರಂದು ಪ್ರಕಟಿಸಲಾಗಿದೆ. ಈ ಅಧಿಸೂಚನೆಯಲ್ಲಿನ ಕ್ರಮ ಸಂಖ್ಯೆ: 06ರಂತೆ ಕಿರಿಯ ಸಹಾಯಕರ ಹುದ್ದೆಗಳ ಕುರಿತು ಮಾಹಿತಿ ಹೀಗಿದೆ:

ವಿಧಾನ ಪರಿಷತ್ತಿನ ಸಚಿವಾಲಯದ (ಅಧಿಕಾರಿಗಳು ಮತ್ತು ನೌಕರರ ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಗಳು, 2021ರ ರೀತ್ಯಾ, ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ 12.03.2024 ರಂದು ಪ್ರಕಟಿಸಲಾಗಿದೆ. ಈ ಅಧಿಸೂಚನೆಯಲ್ಲಿನ ಕ್ರಮ ಸಂಖ್ಯೆ: 06ರಂತೆ ಕಿರಿಯ ಸಹಾಯಕರ ಹುದ್ದೆಗಳ ಕುರಿತು ಮಾಹಿತಿ ಹೀಗಿದೆ:


ಹುದ್ದೆಯ ಹೆಸರು: ಕಿರಿಯ ಸಹಾಯಕರು


ಒಟ್ಟು ಹುದ್ದೆಗಳ ಸಂಖ್ಯೆ: 07


ಉಳಿಕೆ ಮೂಲ ವೃಂದ: 06


ಕಲ್ಯಾಣ-ಕರ್ನಾಟಕ ವೃಂದ: 01


ವೇತನ ಶ್ರೇಣಿ: ₹34,100 - ₹67,600


ಪರಿಷ್ಕೃತ ದಿನಾಂಕಗಳು


ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ: 04.12.2024


ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 03.01.2025


ಶುಲ್ಕ ಪಾವತಿಸಲು ಕೊನೆಯ ದಿನಾಂಕ: 04.01.2025


ವಯೋಮಿತಿ ಸಡಿಲಿಕೆ ಬದಲಾವಣೆ


12.03.2024ರ ಅಧಿಸೂಚನೆಯ ಕ್ರಮ ಸಂಖ್ಯೆ: 3(1) ರಲ್ಲಿ ಗರಿಷ್ಠ ವಯೋಮಿತಿಗೆ 2 ವರ್ಷಗಳ ಸಡಿಲಿಕೆ ನೀಡಲಾಗಿದೆ ಎಂಬುದರ ಬದಲು, ಅದನ್ನು 3 ವರ್ಷಗಳ ಸಡಿಲಿಕೆ ಎಂದು ಪರಿಷ್ಕರಿಸಲಾಗಿದೆ.


ಮುಖ್ಯ ಸೂಚನೆಗಳು


12.03.2024ರ ಅಧಿಸೂಚನೆಯಲ್ಲಿ ನಿಗದಿಪಡಿಸಿದ ಅರ್ಹತೆ, ಮಾರ್ಗಸೂಚಿ ಮತ್ತು ನಿಬಂಧನೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.


ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಭೇಟಿ ನೀಡಿ:


KEA Website


CET Online Portal


ಅಭ್ಯರ್ಥಿಗಳು ಈ ಮಾಹಿತಿಯನ್ನು ಗಮನಿಸಿ, ಅರ್ಜಿ ಸಲ್ಲಿಕೆಯಲ್ಲಿ ತೊಂದರೆಯನ್ನು ತಪ್ಪಿಸಲು ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ.








ಶುಕ್ರವಾರ, ಡಿಸೆಂಬರ್ 13, 2024

ರಾಜ್ಯದಲ್ಲಿ ಲಕ್ಷಾಂತರ ಸರ್ಕಾರಿ ಹುದ್ದೆಗಳು ಖಾಲಿ ಖಾಲಿ, ಯಾವ ಇಲಾಖೆಯಲ್ಲಿ ಎಷ್ಟಿದೆ?

ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಹುದ್ದೆಗಳು ಭರ್ತಿಯಾಗದೆ ಉಳಿದಿವೆ ಎಂದು ತಿಳಿದುಬಂದಿದೆ. ಸರ್ಕಾರದ ಅಂಕಿ ಅಂಶಗಳ ಪ್ರಕಾರ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ 2.76 ಲಕ್ಷ ಹುದ್ದೆಗಳು ಖಾಲಿ ಇವೆ ಎಂಬ ವಿಚಾರದ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಚರ್ಚೆಯಾಗಿದೆ.

ಅದರಂತೆ ಶಾಲಾ ಶಿಕ್ಷಣ 70,727 ಹುದ್ದೆಗಳು, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ 37,069, ಗೃಹ ಇಲಾಖೆಯಲ್ಲಿ 26,168 ಉದ್ಯೋಗಗಳು, ಉನ್ನತ ಶಿಕ್ಷಣ ಇಲಾಖೆಯಲ್ಲಿ 13,227 ಹುದ್ದೆಗಳು, ಕಂದಾಯ ಇಲಾಖೆಯಲ್ಲಿ 11,145 ಹುದ್ದೆಗಳು, ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ 10,898 ಹುದ್ದೆಗಳು, ಪಶುಸಂಗೋಪನೆ ಇಲಾಖೆಯಲ್ಲಿ 10,755 ಹುದ್ದೆಗಳು ಸೇರಿದಂತೆ ಗುತ್ತಿಗೆ ಆಧಾರದ ಮೇಲೆ 96,000 ಜನರಿಗೆ ಕೆಲಸಗಳು ಖಾಲಿ ಇವೆ ಎನ್ನಲಾಗಿದೆ.

ಯಾವ ಇಲಾಖೆಗಳಲ್ಲಿ ಎಷ್ಟು ಹುದ್ದೆ ಖಾಲಿ?

1. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ-8334,

2. ಸಹಕಾರ ಇಲಾಖೆ-4885

3. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಗಳ ಇಲಾಖೆ-6191

4. ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ-6

5. ಇ-ಆಡಳಿತ ಇಲಾಖೆ-71

6. ಇಂಧನ ಇಲಾಖೆ-247

7. ಆರ್ಥಿಕ ಇಲಾಖೆ-9536

8. ಮೀನುಗಾರಿಕೆ ಇಲಾಖೆ-859

9. ಆಹಾರ ಮತ್ತು ನಾಗರಿಕ ಸರಬರಾಜು-1395

10. ಅರಣ್ಯ ಇಲಾಖೆ-6337

11. ಕೈಮಗ್ಗ ಮತ್ತು ಜವಳಿ ಇಲಾಖೆ-50

12. ಒಳಾಡಳಿತ ಇಲಾಖೆ-26168

13. ತೋಟಗಾರಿಕೆ ಇಲಾಖೆ-2969

14. ವಾರ್ತಾ ಇಲಾಖೆ-328

15. ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ-61

16. ಕನ್ನಡ ಮತ್ತು ಸಂಸ್ಕೃತಿ ಇಲಾಖೆ-432

17. ಕಾರ್ಮಿಕ ಇಲಾಖೆ-2613

18. ಕಾನೂನು, ನ್ಯಾಯ, ಮಾನವ ಹಕ್ಕುಗಳ ಇಲಾಖೆ-7853

19. ಭಾರಿ ಮತ್ತು ಮಧ್ಯಮ ಕೈಗಾರಿಕೆ-379

20. ಭಾರಿ ನೀರಾವರಿ-601

21. ಗಣಿ-653

22. ಸಣ್ಣ ನೀರಾವರಿ-1237

23. ಅಲ್ಪಸಂಖ್ಯಾತರ ಕಲ್ಯಾಣ-4159

24. ಸಂಸದೀಯ ವ್ಯವಹಾರಗಳು-508

25. ಕಂದಾಯ ಇಲಾಖೆ-11145

26. ಪರಿಶಿಷ್ಟ ಜಾತಿಗಳ ಕಲ್ಯಾಣ-9980

27. ಕೃಷಿ ಇಲಾಖೆ-6773 ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಕೆಲಸ ಖಾಲಿ ಇವೆ.

ವಿಧಾನಸಭೆಯಲ್ಲಿ ಅಧಿವೇಶನದಲ್ಲಿ ಈ ಖಾಲಿ ಹುದ್ದೆಗಳ ಬಗ್ಗೆ ಚರ್ಚೆಯಾಗಿದೆ. ಅದರಂತೆ ರಾಜ್ಯ ಸರ್ಕಾರವು ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳ ಮಾಹಿತಿಯನ್ನು ಹಂಚಿಕೊಂಡಿದೆ. ಅದರಂತೆ ವಿವಿಧ ಇಲಾಖೆಗಳಲ್ಲಿ ಸಾವಿರಾರು ಹುದ್ದೆಗಳು ಖಾಲಿ ಇದ್ದು, ಇದನ್ನು ಶೀಘ್ರವೇ ಭರ್ತಿ ಮಾಡುವಂತೆಯೂ ಸರ್ಕಾರಕ್ಕೆ ಮನವಿ ಮಾಡಲಾಗಿದೆ.


ವರ್ಷ ಸ್ವಾಗತ ಮಾಡಲು ಸಜ್ಜಾಗಿರುವವರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ. ಹೌದು, 2025 ರಲ್ಲಿ ಬರುವ ರಾಜ್ಯ ಸರ್ಕಾರಿ ನೌಕರರಿಗೆ ಸಾಮಾನ್ಯ ರಜಾದಿನಗಳು ಮತ್ತು ನಿರ್ಬಂಧಿತ ರಜಾದಿನಗಳು ಎರಡನ್ನೂ ವಿವರಿಸುವ ಕ್ಯಾಲೆಂಡರ್ ಅನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದೆ.

ವರ್ಷ ಸ್ವಾಗತ ಮಾಡಲು ಸಜ್ಜಾಗಿರುವವರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ. ಹೌದು, 2025 ರಲ್ಲಿ ಬರುವ ರಾಜ್ಯ ಸರ್ಕಾರಿ ನೌಕರರಿಗೆ ಸಾಮಾನ್ಯ ರಜಾದಿನಗಳು ಮತ್ತು ನಿರ್ಬಂಧಿತ ರಜಾದಿನಗಳು ಎರಡನ್ನೂ ವಿವರಿಸುವ ಕ್ಯಾಲೆಂಡರ್ ಅನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದೆ.



ಈ ದಿನಾಂಕಗಳು ಭಾರತದ ಅನೇಕ ಪ್ರಮುಖ ಹಬ್ಬಗಳು ಮತ್ತು ರಾಷ್ಟ್ರೀಯ ಆಚರಣೆಗಳನ್ನು ಒಳಗೊಂಡಿವೆ. ಹಾಗಿದ್ರೆ ಹೊಸ ವರ್ಷದಲ್ಲಿ ಕರ್ನಾಟಕದಲ್ಲಿ ಸಿಗುವ ಸರ್ಕಾರಿ ರಜೆ ದಿನಗಳೆಷ್ಟು..? ಇಲ್ಲಿದೆ ಹೆಚ್ಚಿನ ಮಾಹಿತಿ


ಈ ರಜಾದಿನಗಳನ್ನು ಕರ್ನಾಟಕದ ಬ್ಯಾಂಕ್‌ಗಳು, ಅಂಚೆ ಕಚೇರಿಗಳು ಮತ್ತು ಎಲ್ಲಾ ರಾಜ್ಯ ಸರ್ಕಾರದ ಆಡಳಿತ ಕಚೇರಿಗಳು ಆಚರಿಸುತ್ತವೆ. ಗಣರಾಜ್ಯೋತ್ಸವ (ಜನವರಿ 26), ಕಾರ್ಮಿಕರ ದಿನಾಚರಣೆ (ಮೇ 1), ಸ್ವಾತಂತ್ರ್ಯ ದಿನ (ಆಗಸ್ಟ್ 15), ಗಾಂಧಿ ಜಯಂತಿ (ಅಕ್ಟೋಬರ್ 2), ರಾಜ್ಯೋತ್ಸವ ದಿನ (ನವೆಂಬರ್ 1) ಸೇರಿದಂತೆ ಐದು ಕಡ್ಡಾಯ ರಜಾದಿನಗಳು ಇರುತ್ತವೆ.


ರಾಜ್ಯದ ನಿರ್ದಿಷ್ಟ ರಜಾ ಕನ್ನಡ ರಾಜ್ಯೋತ್ಸವ, ಮಹರ್ಷಿ ವಾಲ್ಮೀಕಿ ಜಯಂತಿ.


ಧಾರ್ಮಿಕ ಹಬ್ಬಗಳು


ಉತ್ತರಾಯಣ ಪುಣ್ಯಕಾಲ, ಮಹಾ ಶಿವರಾತ್ರಿ, ಖುತುಬ್-ಎ-ರಂಜಾನ್, ಮಹಾವೀರ ಜಯಂತಿ, ಶುಭ ಶುಕ್ರವಾರ, ಬಸವ ಜಯಂತಿ,ಅಕ್ಷಯ ತೃತೀಯ, ಬಕ್ರೀದ್, ಈದ್-ಮಿಲಾದ್, ಮಹಾನವಮಿ/ಆಯುಧಪೂಜೆ, ವಿಜಯದಶಮಿ, ನರಕ ಚತುರ್ದಶಿ, ಬಲಿಪಾಡ್ಯಮಿ, ದೀಪಾವಳಿ ಮತ್ತು ಕ್ರಿಸ್ಮಸ್.


ಕರ್ನಾಟಕ ಸರ್ಕಾರದ ಸುತ್ತೋಲೆ ಪ್ರಕಾರ, "ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆಕ್ಟ್ 1881 (l88l ನ ಕಾಯಿದೆ No.XXVI) ಸೆಕ್ಷನ್ 25 ರ ವಿವರಣೆಯ ಅಡಿಯಲ್ಲಿ, ಅಧಿಸೂಚನೆ ಸಂಖ್ಯೆ. 20l25l26lPub-1, ದಿನಾಂಕ:15-06.1957 ರ ಭಾರತ ಸರ್ಕಾರದ ಸಚಿವಾಲಯ, ಸಚಿವಾಲಯ ಗೃಹ ವ್ಯವಹಾರಗಳು 2025 ರಲ್ಲಿ ಕರ್ನಾಟಕ ರಾಜ್ಯದಾದ್ಯಂತ ಸಾರ್ವಜನಿಕ ರಜಾ ದಿನಗಳಿರಬೇಕು ಎಂದು ಘೋಷಣೆ ಮಾಡಿದೆ.


ಕರ್ನಾಟಕ ಸಾರ್ವಜನಿಕ ರಜಾದಿನಗಳು 2025


ಜವರಿಯಲ್ಲಿ ಇರುವ ರಜೆ ದಿನಗಳು:


ಜನವರಿ 14 ಮಕರ ಸಂಕ್ರಾಂತಿಯಂದು ಸಾರ್ವಜನಿಕ ರಜಾದಿನವಾಗಿದೆ. ಈ ಬಾರಿ ಗಣರಾಜ್ಯೋತ್ಸವ ಭಾನುವಾರದಂದು ಬರುತ್ತದೆ.


ಫೆಬ್ರವರಿಯಲ್ಲಿ ಇರುವ ರಜೆ ದಿನಗಳು


ಫೆಬ್ರವರಿಯಲ್ಲಿ, ಫೆಬ್ರವರಿ 26 ರಂದು ಮಹಾ ಶಿವರಾತ್ರಿಗೆ ಸಾರ್ವಜನಿಕ ರಜಾದಿನವಾಗಿದೆ ಮತ್ತು ಮಾರ್ಚ್ 31 ಖುತುಬ್-ಎ-ರಂಜನ್ ನಿಮಿತ್ತ ರಜಾದಿನವಾಗಿದೆ.


ಏಪ್ರಿಲ್‌ನಲ್ಲಿ ನಾಲ್ಕು ದಿನ ಸಾರ್ವಜನಿಕ ರಜೆಗಳು:


ಏಪ್ರಿಲ್ 10 ರಂದು ಮಹಾವೀರ ಜಯಂತಿ, 14 ರಂದು ಡಾ. ಅಂಬೇಡ್ಕರ್ ಜಯಂತಿ, 18 ರಂದು ಶುಭ ಶುಕ್ರವಾರ ಮತ್ತು ಬಸವ ಜಯಂತಿ,


ಮೇ ತಿಂಗಳ ರಜೆ ದಿನಗಳು


ಮೇ 1 ರಂದು ಕಾರ್ಮಿಕ ದಿನಾಚರಣೆಯಂದು ರಜೆ ಇರುತ್ತದೆ.


ಜೂನ್ ತಿಂಗಳ ರಜೆ ದಿನ


ಜೂನ್ 7 ರಂದು ಸಾರ್ವಜನಿಕ ರಜೆ ಇರುತ್ತದೆ. ಬಕ್ರೀದ್ ಹಬ್ಬಕ್ಕೆ ರಜೆ ಇರುತ್ತದೆ.


ಆಗಸ್ಟ್ ತಿಂಗಳಲ್ಲಿ ಬರುವ ರಜೆ ದಿನಗಳು


ಆಗಸ್ಟ್ 15 ಸ್ವಾತಂತ್ರ್ಯ ದಿನದ ರಾಷ್ಟ್ರೀಯ ರಜಾದಿನವಾಗಿದೆ. ಆಗಸ್ಟ್ 17 ರಂದು ಗಣೇಶ ಚತುರ್ಥಿ ರಜಾದಿನವಾಗಿದೆ.


ಅಕ್ಟೋಬರ್ 1 ರಂದು ಮಹಾನವಮಿ, ಆಯುಧಪೂಜೆ ಮತ್ತು ವಿಜಯದಶಮಿ, ಅಕ್ಟೋಬರ್ 2 ರಂದು ಗಾಂಧಿ ಜಯಂತಿ ಮತ್ತು ಅಕ್ಟೋಬರ್ 20 (ನರಕ ಚತುರ್ದಶಿ) ಮತ್ತು 22 (ಬಲಿಪಾಡ್ಯಮಿ) ರಿಂದ ದೀಪಾವಳಿ ಆಚರಣೆಗಳು, ಅಕ್ಟೋಬರ್ ವಿಶೇಷವಾಗಿ ಹಬ್ಬಗಳಿಗೆ ಬಿಡುವಿಲ್ಲದ ತಿಂಗಲಾಗಿದೆ.


ನವೆಂಬರ್‌ನಲ್ಲಿ ಇರುವ ರಜೆ ದಿನಗಳು


ನವೆಂಬರ್ 1 ರಂದು ಕರ್ನಾಟಕ ರಾಜ್ಯೋತ್ಸವದಂದು ರಜೆ ಇರುತ್ತದೆ.


ಡಿಸೆಂಬರ್‌ನಲ್ಲಿ ಬರುವಂತಹ ರಜೆ ದಿನ


ವರ್ಷದ ಕೊನೆಯ ತಿಂಗಳು ಬರುವಂತಹ ರಜೆ ದಿನಗಳೆಂದರೆ ಡಿಸೆಂಬರ್ 25 ರಂದು ಬರುವ ಕ್ರಿಸ್‌ಮಸ್ ವರ್ಷಾಂತ್ಯದ ಸಂಕೇತವಾಗಿದೆ.


ಕರ್ನಾಟಕ ಸಾರ್ವಜನಿಕ ರಜೆ ಪಟ್ಟಿ 2025

ದಿನಾಂಕ ದಿನ ರಜಾದಿನಗಳು

​14-ಜ ಮಂಗಳವಾರ ​ಮಕರ ಸಂಕ್ರಾಂತಿ

​26-ಫೆ ಬುಧವಾರ ​ಮಹಾ ಶಿವರಾತ್ರಿ

31-ಮಾರ್ಚ್ ಸೋಮವಾರ ಕುತುಬ್-ಎ-ರಂಜಾನ್

​10-ಏಪ್ರಿಲ್ ಗುರುವಾರ ​ಮಹಾವೀರ ಜಯಂತಿ

​14-ಏಪ್ರಿಲ್ ಸೋಮವಾರ ​ಡಾ.ಅಂಬೇಡ್ಕರ್ ಜಯಂತಿ

​18-ಏಪ್ರಿಲ್ ಶುಕ್ರವಾರ ​ಶುಭ ಶುಕ್ರವಾರ

​30-ಏಪ್ರಿಲ್ ಬುಧವಾರ ಬಸವ ಜಯಂತಿ

​1-ಮೇ ಗುರುವಾರ ​

1-ಜೂನ್ ಶನಿವಾರ ​ ಬಕ್ರೀದ್

15-ಆಗಸ್ಟ್ ಶುಕ್ರವಾರ ​ಸ್ವಾತಂತ್ರ್ಯ ದಿನಾಚರಣೆ

​27-ಆಗಸ್ಟ್ ಬುಧವಾರ ​ಗಣೇಶ ಚತುರ್ಥ

5-ಸೆ ಶುಕ್ರವಾರ ​ಈದ್-ಮೀಲಾದ್

​1-ಅಕ್ಟೋಬರ್ ಬುಧವಾರ ​ಆಯುಧ ಪೂಜೆ/ ಮಹಾನವಮಿ

​2-ಅಕ್ಟೋಬರ್ ಗುರುವಾರ ಗಾಂಧಿ ಜಯಂತಿ/ ವಿಜಯದಶಮಿ

7-ಅಕ್ಟೋಬರ್ ಮಂಗಳವಾರ ​ಮಹರ್ಷಿ ವಾಲ್ಮೀಕಿ ಜಯಂತಿ

​20-ಅಕ್ಟೋಬರ್ ಸೋಮವಾರ ​ನರಕ ಚತುರ್ದಶಿ

​22-ಅಕ್ಟೋಬರ್ ಬುಧವಾರ ​ಬಲಿಪಾಡ್ಯಮಿ

​1-ನವೆಂಬರ್ ಶನಿವಾರ ​ಕನ್ನಡ ರಾಜ್ಯೋತ್ಸವ

25-ಡಿಸೆಂಬರ್ ಗುರುವಾರ ​ ಕ್ರಿಸ್ಮಸ್

ಕರ್ನಾಟಕ ನಿರ್ಬಂಧಿತ ರಜೆ ಪಟ್ಟಿ 2025


ಕರ್ನಾಟಕ ನಿರ್ಬಂಧಿತ ರಜೆ ಪಟ್ಟಿ 2025 ​

ದಿನಾಂಕ ದಿನ ರಜಾದಿನಗಳು

1-ಜ ಬುಧವಾರ ​ಹೊಸ ವರ್ಷ

6-ಫೆ ಗುರುವಾರ ​ ಶ್ರೀ ಮದ್ವನವಮಿ

14-ಫೆ ಶುಕ್ರವಾರ ಶಬ್-ಎ-ಬಾರತ್​

13-ಮಾರ್ಚ್ ಗುರುವಾರ ​ಹೋಳಿ ಹಬ್ಬ

28-ಮಾರ್ಚ್ ಗುರುವಾರ ಶಾಬ್-ಎ-ಖಾದರ್​

27-ಮಾರ್ಚ್ ಶುಕ್ರವಾರ ಜುಮಾತ್-ಉಲ್-ವಿದಾ​

2-ಏಪ್ರಿಲ್ ಬುಧವಾರ ​ದೇವರ ದಾಸೀಮಯ್ಯ ಜಯಂತಿ

19-ಏಪ್ರಿಲ್ ಶನಿವಾರ ​ಪವಿತ್ರ ಶನಿವಾರ

2-ಮೇ ಶುಕ್ರವಾರ ​ಶ್ರೀ ಶಂಕರ್ ಆಯ್ ಆಚಾರ್ಯ ಜಯಂತಿ, ಶ್ರೀ ರಾಮಜಯಂತಿ

12-ಮೇ ಸೋಮವಾರ ​ಬುದ್ಧ ಪೂಮಿಮಾ

8-ಆಗಸ್ಟ್ ಶುಕ್ರವಾರ ​ವರಮಹಾಲಕ್ಷ್ಮಿ ವ್ರತ

16-ಆಗಸ್ಟ್ ಶನಿವಾರ ಶ್ರೀ ಕೃಷ್ಣ ಜನ್ಮಾಷ್ಟಮಿ​

26-ಆಗಸ್ಟ್ ಮಂಗಳವಾರ ​ಸ್ವರ್ಣ ಗೌರಿ ವ್ರತ

6-ಸೆ ಶನಿವಾರ ​ಅನಂತ ಪದ್ಮನಾಭ ವ್ರತ

8-ಸೆ ಸೋಮವಾರ ​ಕನ್ಯಾ ಮರಿಯಮ್ಮ ಜಯಂತಿ

17-ಸೆ ಬುಧವಾರ ವಿಶ್ವಕರ್ಮ ಜಯಂತಿ​

18-ಅಕ್ಟೋಬರ್ ಶನಿವಾರ ತುಲಾ ಸಂಕ್ರಮಣ​

5-ನವೆಂಬರ್ ಬುಧವಾರ ​ಗುರುನಾನಕ್ ಜಯಂತಿ

5-ಡಿಸೆಂಬರ್ ಶುಕ್ರವಾರ ಹುತ್ತರಿ ಹಬ್ಬ​

24-ಡಿಸೆಂಬರ್ ಬುಧವಾರ ​ ಕ್ರಿಸ್ಮಸ್ ಈವ್

Savitha G Goodreturns

income tax department Rules

#Draft_rules_ಜನವರಿ_2025_ರಿಂದ_GIS_ನ್ನು

ಗ್ರೂಪ್ ಡಿ ನೌಕರರಿಗೆ ರೂ 240
ಗ್ರೂಪ್ 'C' ನೌಕರರಿಗೆ ರೂ 480
ಗ್ರೂಪ್ ಬಿ ನೌಕರರಿಗೆ ರೂ 540
ಗ್ರೂಪ್ ಎ ನೌಕರರಿಗೆ ರೂ 720

ಕಟಾವಣೆ ಮಾಡುವ ಬಗ್ಗೆ..

ದಿನದಲ್ಲಿ ಇಷ್ಟೇ ನಗದು ವಹಿವಾಟು ನಡೆಸಬೇಕು ಎಂಬ ನಿಯಮವಿದ್ದು, ಇದಕ್ಕಿಂತ ಹೆಚ್ಚಿನ ವಹಿವಾಟು ನಡೆಸಿದವರಿಗೆ ಮುಲಾಜಿಲ್ಲದೇ ಆದಾಯ ತೆರಿಗೆ ಇಲಾಖೆ ನೋಟಿಸ್ ಕಳುಹಿಸಿ ಕಾನೂನು ಕ್ರಮ ಜರುಗಿಸುತ್ತದೆ. ಹೌದು, ಇಂಥದ್ದೊಂದು ನಿಯಮ ಆದಾಯ ತೆರಿಗೆ ನಿಯಮಗಳಲಿದ್ದು, ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 269ST ಪ್ರಕಾರ ಒಂದೇ ಸಂದರ್ಭದಲ್ಲಿ ಒಂದೇ ವಹಿವಾಟು ಅಥವಾ ಸಂಬಂಧಿತ ವಹಿವಾಟುಗಳಿಗಾಗಿ ಒಂದೇ ದಿನದಲ್ಲಿ ₹2 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ನಗದು ಪಾವತಿಗಳನ್ನು ಸ್ವೀಕರಿಸುವುದನ್ನು ನಿಷೇಧಿಸುತ್ತದೆ

ಆದಾಯ ತೆರಿಗೆ ಇಲಾಖೆಯು ಹೆಚ್ಚಿನ ಮೌಲ್ಯದ ನಗದು ವಹಿವಾಟುಗಳನ್ನು ಎಚ್ಚರಿಕೆಯಿಂದ ಮೇಲ್ವಿಚಾರಣೆ ಮಾಡುತ್ತದೆ. ಹೀಗಾಗಿ ಈ ನಿಯಮದ ಬಗ್ಗೆ ತೆರಿಗೆದಾರರು ಜಾಗರೂಕರಾಗಿರಬೇಕು. ಈ ಮಿತಿಯನ್ನು ಉಲ್ಲಂಘಿಸಿದಲ್ಲಿ ದಂಡ ಅಥವಾ ಕಾನೂನು ಕ್ರಮವನ್ನು ನೀವು ಎದುರಿಸಬೇಕಾಗುತ್ತದೆ.

"ಆದಾಯ ತೆರಿಗೆ ಇಲಾಖೆಯು ಕೆಲವು ಮಿತಿಗಳನ್ನು ಮೀರಿದ ಹೆಚ್ಚಿನ ಮೌಲ್ಯದ ನಗದು ವಹಿವಾಟುಗಳನ್ನು ಮೇಲ್ವಿಚಾರಣೆ ಮಾಡುತ್ತದೆ ಮತ್ತು ತೆರಿಗೆ ಅಧಿಕಾರಿಗಳು ಅಂತಹ ವ್ಯಕ್ತಿಗಳಿಗೆ ನೋಟಿಸ್‌ ಕಳುಹಿಸಬಹುದು" ಎಂದು Tax2win ನ CEO ಮತ್ತು ಸಹ-ಸಂಸ್ಥಾಪಕ ಅಭಿಷೇಕ್ ಸೋನಿ ಹೇಳುತ್ತಾರೆ.

ಆದಾಯ ತೆರಿಗೆ ಕಾಯಿದೆಯ 269ST ಸೆಕ್ಷನ್ 269 ಎಸ್‌ಟಿಯು ಒಂದೇ ವಹಿವಾಟಿನಲ್ಲಿ ಅಥವಾ ಒಂದು ಘಟನೆ ಅಥವಾ ಸಂದರ್ಭಕ್ಕೆ ಸಂಬಂಧಿಸಿದ ವಹಿವಾಟಿಗೆ ಸಂಬಂಧಿಸಿದಂತೆ ಒಂದು ದಿನದಲ್ಲಿ ವ್ಯಕ್ತಿಯಿಂದ ಒಟ್ಟು ₹2 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ನಗದು ರೂಪದಲ್ಲಿ ಪಡೆಯುವಂತಿಲ್ಲ ಎಂದು ಹೇಳುತ್ತದೆ ಎಂದು ಸೋನಿ ಹೇಳಿದರು.

ಹಣ ಸ್ವೀಕರಿಸುವವರಿಗೆ ಮಾತ್ರ ರೂಲ್ಸ್‌ ಅಪ್ಲೈ

ಈ ನಿರ್ಬಂಧವು ವ್ಯಕ್ತಿಗಳು ಮತ್ತು ಘಟಕಗಳಿಗೆ ಸಮಾನವಾಗಿ ಅನ್ವಯಿಸುತ್ತದೆ, ಪಾವತಿಸುವವರ ಬದಲಿಗೆ ನಗದು ಸ್ವೀಕರಿಸುವವರ ಮೇಲೆ ಇದು ಪರಿಣಾಮ ಬೀರುತ್ತದೆ. ಅಂದರೆ ಹಣ ಪಾವತಿಸುವವರಿಗೆ ಇದು ಅನ್ವಯವಾಗುವುದಿಲ್ಲ, ಬದಲಿಗೆ ಸ್ವೀಕರಿಸುವವರೆಗೆ ಅನ್ವಯವಾಗುತ್ತದೆ

₹2 ಲಕ್ಷಕ್ಕಿಂತ ಹೆಚ್ಚಿನ ನಗದು ವಹಿವಾಟುಗಳಿಗೆ ದಂಡ

ನೀವು ₹2 ಲಕ್ಷಕ್ಕಿಂತ ಹೆಚ್ಚು ನಗದು ವಹಿವಾಟು ನಡೆಸಿದರೆ ಅಥವಾ ಒಂದೇ ದಿನದಲ್ಲಿ ಹಣವನ್ನು ಪಡೆದರೆ ನಿಮಗೆ ದಂಡ ಕೂಡ ಹಾಕಬಹುದು. ಮುಂಬೈ ಮೂಲದ ತೆರಿಗೆ ತಜ್ಞ ಬಲ್ವಂತ್ ಜೈನ್ "ನೀವು ₹ 5 ಲಕ್ಷ ನಗದು ವಹಿವಾಟು ನಡೆಸಿದರೆ, ಲೆಕ್ಕಪರಿಶೋಧನೆಯ ಸಮಯದಲ್ಲಿ ಆದಾಯ ತೆರಿಗೆ ಇಲಾಖೆಯು ಉಲ್ಲಂಘನೆಯನ್ನು ಕಂಡುಕೊಂಡರೆ ನೀವು ಅದೇ ಮೊತ್ತದ ದಂಡವನ್ನು ಪಾವತಿಸಬೇಕಾಗಬಹುದು" ಎಂದು ತಿಳಿಸುತ್ತಾರೆ.

"ಈ ನಿಬಂಧನೆಗೆ ವಿರುದ್ಧವಾಗಿ ಎರಡು ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಸ್ವೀಕರಿಸುವವರು ಸ್ವೀಕರಿಸಿದ ನಗದುಗೆ ಸಮಾನವಾದ ದಂಡವನ್ನು ಕಟ್ಟಬೇಕಾಗಬಹುದು. ಈ ನಿಬಂಧನೆಗಳ ಅಡಿಯಲ್ಲಿ ಪಾವತಿ ಮಾಡುವವರಿಗೆ ಯಾವುದೇ ದಂಡ ಬೀಳುವುಇಲ್ಲ" ಎಂದು ಬಲವಂತ್ ಜೈನ್ ಹೇಳಿದರು.

ಏನಿದು ಸೆಕ್ಷನ್ 269ST ?

ಯಾವುದೇ ಸಂದರ್ಭಗಳಲ್ಲಿ ವ್ಯಕ್ತಿಯಿಂದ ₹2 ಲಕ್ಷಕ್ಕಿಂತ ಹೆಚ್ಚು (ನಗದು ಸ್ವೀಕೃತಿ ಮಿತಿ) ಸ್ವೀಕರಿಸುವಂತಿಲ್ಲ ಎನ್ನುತ್ತದೆ ಸೆಕ್ಷನ್ 269ST. "ಆದಾಗ್ಯೂ, ಈ ನಿಯಮಕ್ಕೆ ಕೆಲವು ವಿನಾಯಿತಿಗಳಿವೆ. ಉದಾಹರಣೆಗೆ ಬ್ಯಾಂಕಿಂಗ್ ಕಂಪನಿಗಳು ಈ ನಿಯಮದಿಂದ ವಿನಾಯಿತಿ ಪಡೆದಿವೆ. ಆದ್ದರಿಂದ, ಅನ್ವಯಿಸುವಿಕೆಯು ಸಾಮಾನ್ಯವಾಗಿ ವಹಿವಾಟಿನ ಸ್ವರೂಪವನ್ನು ಅವಲಂಬಿಸಿರುತ್ತದೆ.

ಆದ್ದರಿಂದ, ಉದ್ದೇಶಿಸಲಾದ ವಹಿವಾಟಿನ ಸ್ವರೂಪವನ್ನು ಅವಲಂಬಿಸಿ ವಹಿವಾಟು (ಅಥವಾ ನಗದು ರಶೀದಿ) ಅನ್ವಯವಾಗುವ ಮಿತಿಯಲ್ಲಿದೆ ಎಂದು ಖಚಿತಪಡಿಸಿಕೊಳ್ಳಬೇಕು, ಇದರಿಂದ ದಂಡ, ನೋಟಿಸ್ ಅಥವಾ ಶಿಕ್ಷೆ ‌ಎದುರಿಸಬೇಕಾಗುವುದಿಲ್ಲ" ಎಂದು JSA ವಕೀಲರು ಮತ್ತು ಸಾಲಿಸಿಟರ್‌ಗಳ ಪಾಲುದಾರ ಸೂರಜ್‌ಕುಮಾರ್ ಶೆಟ್ಟಿ ಹೇಳಿದರು.

GIS 2025

#Draft_rules_ಜನವರಿ_2025_ರಿಂದ_GIS_ನ್ನು

ಗ್ರೂಪ್ ಡಿ ನೌಕರರಿಗೆ ರೂ 240
ಗ್ರೂಪ್ 'C' ನೌಕರರಿಗೆ ರೂ 480
ಗ್ರೂಪ್ ಬಿ ನೌಕರರಿಗೆ ರೂ 540
ಗ್ರೂಪ್ ಎ ನೌಕರರಿಗೆ ರೂ 720

ಕಟಾವಣೆ ಮಾಡುವ ಬಗ್ಗೆ..

ಸರಕಾರಕ್ಕೆ ತೆರಿಗೆ ಕಟ್ಟಬೇಕಿಲ್ಲದಿದ್ದರೂ ನೀವು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿ: ಯಾಕೆ ಗೊತ್ತಾ..? ಇಲ್ಲಿದೆ ವಿವರ..

2024-25ರ ಹಣಕಾಸು ವರ್ಷ (FY) ಗಾಗಿ ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಸುವ ಗಡುವು (ವಿಸ್ತರಣೆ ನಂತರ ಸೆಪ್ಟೆಂಬರ್ 15) ಸಮೀಪಿಸುತ್ತಿದ್ದಂತೆ, ತೆರಿಗೆ ವಿಧಿಸಬಹುದಾ...