ಹೈದರಾಬಾದ್ ಕರ್ನಾಟಕ ಪ್ರದೇಶ

ಹೈದರಾಬಾದ್ ಕರ್ನಾಟಕ ಪ್ರದೇಶ
Hyderabad Karnataka

ಮಂಗಳವಾರ, ಏಪ್ರಿಲ್ 22, 2025

'ರಾಜ್ಯ ಸರ್ಕಾರಿ' ನೌಕರರೇ ಗಮನಿಸಿ : 'ಆರೋಗ್ಯ ಸಂಜೀವಿನಿ' ಯೋಜನೆಯಡಿ ನೋಂದಣಿ ಕುರಿತು ಇಲ್ಲಿದೆ ಮಹತ್ವದ ಮಾಹಿತಿ

ಈ ಯೋಜನೆಯನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ ಎಂದಿದ್ದಾರೆ.

ಈ ಯೋಜನೆಯ ಕಾರ್ಯನೀತಿ ಸೂಚನೆಗಳನ್ನು ಸರ್ಕಾರದ ಆದೇಶ ಸಂಖ್ಯೆ:ಸಿಆಸುಇ 16 ಎಸ್ ಎಂಆರ್ 2020 ರ ದಿನಾಂಕ:17.08.2021, 05.09.2022, 09.03.2023 ಹಾಗೂ ದಿನಾಂಕ: 02.04.2025 ಗಳಲ್ಲಿ ನೀಡಲಾಗಿದೆ.

KASS ಯೋಜನೆಯು ರಾಜ್ಯ ಸರ್ಕಾರದ ನೌಕರರಿಗೆ ಐಚ್ಛಿಕವಾಗಿದ್ದು, ಯೋಜನೆಯಡಿ ಸರ್ಕಾರಿ ನೌಕರರು ವೈದ್ಯಕೀಯ ಸೌಲಭ್ಯ ಪಡೆಯಲು ಹೊರಗುಳಿಯಲು (Opt in / Opt out) ಆಯ್ಕೆ / ಇಚ್ಛೆ ವ್ಯಕ್ತಪಡಿಸುವ ಕುರಿತಂತೆ ಈ ಕೆಳಕಂಡ ಸೂಚನೆಗಳನ್ನು ಹೊರಡಿಸಲಾಗಿದೆ ಹಾಗೂ ಅನುಬಂಧಗಳನ್ನು ಲಗತ್ತಿಸಲಾಗಿದೆ ಎಂದಿದೆ.

1. ಯೋಜನೆಯಡಿ ಸರ್ಕಾರಿ ನೌಕರರು ಒಳಪಡುವ ಕಾರ್ಯವಿಧಾನದ ಬಗ್ಗೆ: ಈ ಯೋಜನೆಯು ಎಲ್ಲಾ ಅರ್ಹ ಸರ್ಕಾರಿ ನೌಕರರಿಗೆ ಅನ್ವಯವಾಗಲಿದ್ದು ಯೋಜನೆಯ ಸೌಲಭ್ಯ ಪಡೆಯುವುದು ಐಚ್ಛಿಕವಾಗಿದ್ದು (Optional), ಕಡ್ಡಾಯ(Mandatory) ಆಗಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಯಾವುದೇ ಸರ್ಕಾರಿ ನೌಕರರು ಯೋಜನೆಯ ಸದುಪಯೋಗ ಪಡೆಯಲು ಇಚ್ಚಿಸಿದಲ್ಲಿ ಮಾತ್ರ ತನ್ನ ಆಯ್ಕೆಯನ್ನು ಸೂಚಿಸಬಹುದಾಗಿದೆ. ಇಚ್ಛೆ ಇಲ್ಲದ ಪಕ್ಷದಲ್ಲಿಯೂ ಸಹ ನಿಗದಿತ ನಮೂನೆಯಲ್ಲಿ ತಿಳಿಸಬಹುದಾಗಿದೆ.

2. ನೋಂದಾವಣೆಗೆ ಸಂಬಂಧಿಸಿದಂತೆ ಉಲ್ಲೇಖಿತ ದಿನಾಂಕ:09.03.2023 ಆದೇಶದ ಅನುಬಂಧಗಳಲ್ಲಿ ನೋಂದಾವಣೆ ಅರ್ಜಿ ನಮೂನೆಗಳನ್ನು, ವಿವಿಧ ಘೋಷಣಾ ಪತ್ರಗಳನ್ನು ಹಾಗೂ ನೋಂದಾವಣೆ ಕಾರ್ಯವಿಧಾನಗಳನ್ನು ನಿರ್ಧಿಷ್ಟಪಡಿಸಲಾಗಿದೆ. ಇವುಗಳನ್ನು ಎಲ್ಲಾ ಸರ್ಕಾರಿ ನೌಕರರು ಹಾಗೂ ಡಿಡಿಓಗಳು (DDOs) ತಪ್ಪದೇ ಅನುಸರಿಸತಕ್ಕದ್ದು. HRMS ತಂತ್ರಜ್ಞಾನದಲ್ಲಿ ಡಿಡಿಓಗಳು ಅರ್ಜಿಗಳನ್ನು ಅಪ್ ಲೋಡ್ ಮಾಡಲು ಕ್ರಮವಹಿಸುವುದು. 3. ಯೋಜನೆಯಲ್ಲಿ ಸರ್ಕಾರಿ ನೌಕರರನ್ನು ನೋಂದಾಯಿಸುವ ಬಗ್ಗೆ HRMS ನಿರ್ದೇಶನಾಲಯವು ಸಹ ದಿನಾಂಕ: 30.05.2023 ಹಾಗೂ 05.06.2023 ರಂದು ವಿವರವಾದ ಮಾರ್ಗಸೂಚಿಗಳನ್ನು ಹಾಗೂ KASS-ಡಿಡಿಓ ಬಳಕೆದಾರರ ಕೈಪಿಡಿ, WEB APPLICATION ಮುಂತಾದ ವಿವರಗಳನ್ನು ನೀಡಿರುತ್ತದೆ. ಈ ಸೂಚನೆಗಳನ್ನು ಎಲ್ಲಾ ಇಲಾಖೆಗಳ ಡಿಡಿಓಗಳು ತಪ್ಪದೇ ಅನುಸರಿಸುವುದು ಹಾಗೂ ನೌಕರರ ನೋಂದಾವಣೆಯನ್ನು ಚುರುಕುಗೊಳಿಸುವುದು.

4. ಸರ್ಕಾರಿ ನೌಕರ ಯೋಜನೆಗೆ ಒಳಪಡಲು ಆಯ್ಕೆಯನ್ನು ವ್ಯಕ್ತಪಡಿಸಲು ಉದ್ದೇಶಿಸಿದಲ್ಲಿ ದಿನಾಂಕ: 20.05.2025 ರ ಒಳಗಾಗಿ ಈ ಸಂಬಂಧ ಅನುಬಂಧ-2 ರ ನಮೂನೆ-1 ರಲ್ಲಿ ಘೋಷಣೆಯನ್ನು ತನ್ನ ಮೇಲಾಧಿಕಾರಿ ಮೂಲಕ ಡಿಡಿಓ ಗಳಿಗೆ ಸಲ್ಲಿಸತಕ್ಕದ್ದು. ಇಂತಹ ಘೋಷಣೆಯನ್ನು ಸಲ್ಲಿಸುವ ನೌಕರರಿಂದ ಯೋಜನೆಯ ವಂತಿಕೆಯನ್ನು ಮೇ 2025ರ ಮಾಹೆಯಿಂದ ಸ್ವಯಂಚಾಲಿತವಾಗಿ HRMS ನಲ್ಲಿ ಕಟಾಯಿಸಲಾಗುವುದು.
5. ನೌಕರರು ಈ ಯೋಜನೆಗೆ ಒಳಪಡದೇ ಇರಲು ಇಚ್ಚಿಸಿದಲ್ಲಿ ದಿನಾಂಕ: 20.05.2025 ರ ಒಳಗಾಗಿ ಈ ಸಂಬಂಧ ಅನುಬಂಧ-2 ರ ನಮೂನೆ-2 ರಲ್ಲಿ ಘೋಷಣೆಯನ್ನು ತನ್ನ ಮೇಲಾಧಿಕಾರಿ ಮೂಲಕ ಡಿಡಿಓ ಗಳಿಗೆ ಸಲ್ಲಿಸತಕ್ಕದ್ದು, ತಪ್ಪಿದಲ್ಲಿ ಇಂತಹ ನೌಕರರು ಯೋಜನೆಗೆ ಒಳಪಡಲು ಇಚ್ಚಿಸಿದ್ದಾರೆಂದು ಪರಿಗಣಿಸಿ ಅವರ ಮೇ 2025ರ ವೇತನದಿಂದ HRMS ಮುಖಾಂತರ ವಂತಿಕೆ ಕಟಾವಣೆ ಮಾಡಲಾಗುತ್ತದೆ.

6. ಯೋಜನೆಗೆ ನೌಕರರ ವಂತಿಕೆ: ಯೋಜನೆಗೆ ಒಳಪಡುವ ಸರ್ಕಾರಿ ನೌಕರ ಈ ಕೆಳಂಡಂತೆ ಮಾಸಿಕ ವಂತಿಕೆಯನ್ನು ನೀಡಬೇಕಾಗುತ್ತದೆ.

ಗ್ರೂಪ್ ಎ - ರೂ.1000/-
ಗ್ರೂಪ್ ಬಿ - ರೂ. 500-
ಗ್ರೂಪ್ ಸಿ - ರೂ. 350
ಗ್ರೂಪ್ ಡಿ - ರೂ.250

ಮಾಸಿಕ ವಂತಿಕೆಯನ್ನು HRMS ಮೂಲಕ ನೌಕರರ ಮೇ 2025 ರಿಂದ ಮಾಸಿಕ ವೇತನದಲ್ಲಿ ಕಡಿತಗೊಳಿಸಲು ಸಂಬಂಧ ಪಟ್ಟ ಡಿಡಿಓಗಳು ಕ್ರಮವಹಿಸತಕ್ಕದ್ದು, ಯಾವ ಲೆಕ್ಕ ಶೀರ್ಷಿಕೆಯಡಿ ಈ ಮೊತ್ತವನ್ನು ಜಮಾ ಮಾಡಬೇಕು ಹಾಗು ಇತರ ವಿಧಿ-ವಿಧಾನಗಳ ಬಗ್ಗೆ ಸರ್ಕಾರದಿಂದ ಶೀಘ್ರದಲ್ಲಿ ಮಾರ್ಗಸೂಚನೆಗಳನ್ನು (SOP) ಆರ್ಥಿಕ ಇಲಾಖೆಯಿಂದ ಹೊರಡಿಸಲಾಗುತ್ತದೆ.
7. ಮೇಲಿನ ಸೂಚನೆಗಳನ್ನು ಎಲ್ಲಾ ಸರ್ಕಾರಿ ನೌಕರರ ಹಾಗೂ ಗಮನಕ್ಕೆ ತರುವಂತೆ ಎಲ್ಲಾ ಇಲಾಖಾ ಮುಖ್ಯಸ್ಮರಿಗೆ ಡಿಡಿಓಗಳ ತಿಳಿಸಲಾಗಿದೆ ಎಂದಿದ್ದಾರೆ.

ಶುಕ್ರವಾರ, ಏಪ್ರಿಲ್ 4, 2025

ರಾಜ್ಯ ಸರ್ಕಾರಿ ನೌಕರ'ರಿಗೆ ಮತ್ತೊಂದು ಸಿಹಿಸುದ್ದಿ ನೀಡಲು ಮುಂದಾದ ಸರ್ಕಾರ

ಈ ಸಂಬಂಧ ರಾಜ್ಯ ಸರ್ಕಾರದಿಂದ ಸಭಾ ಸೂಚನಾ ಪತ್ರವನ್ನು ಹೊರಡಿಸಲಾಗಿದ್ದು, ರಾಜ್ಯ ಸಚಿವ ಸಂಪುಟದ ತೀರ್ಮಾನಿಸಿದಂತೆ ಅಧಿಕಾರಿ, ನೌಕರರು ಮತ್ತು ಅವಲಂಬಿತ ಕುಟುಂಬದ ಸದಸ್ಯರ ಹಿತಾಸಕ್ತಿಗಳನ್ನು ರಕ್ಷಿಸುವ ಸಲುವಾಗಿ ವಿವಿಧ ಬ್ಯಾಂಕುಗಳು ಒದಗಿಸುವ ವಿಶಿಷ್ಟ ಸೌಲಭ್ಯಗಳನ್ನು ಪಡೆಯಲು ಸಹಕಾರಿಯಾಗುವಂತೆ ಸಂಬಳ ಪ್ಯಾಕೇಜ್ ಗಳ ಅಡಿಯಲ್ಲಿ ಖಾತೆಗಳನ್ನು ತೆರೆಯುವುದು, ಆಯ್ಕೆ ಮಾಡಿಕೊಳ್ಳುವುದನ್ನು ರಾಜ್ಯ ಸರ್ಕಾರವು ಕಡ್ಡಾಯಗೊಳಿಸಿದೆ ಎಂದಿದೆ.

ಸದರಿ ಯೋಜನೆಯಡಿ ಸರ್ಕಾರದ ಎಲ್ಲಾ ಅಧಿಕಾರಿಗಳು/ನೌಕರರು ಬ್ಯಾಂಕುಗಳು ನೀಡುತ್ತಿರುವ ಸಂಬಳ ಪ್ಯಾಕೇಜು ಖಾತೆಯಾಗಿ ಪರಿವರ್ತಿಸಿಕೊಳ್ಳಲು ಬ್ಯಾಂಕುಗಳು ಅನುಕೂಲ ಮಾಡಿಕೊಡ ಬೇಕಾಗಿದ್ದು, ಸದರಿ ವಿಷಯದಲ್ಲಿ ಏನಾದರೂ ಸಮಸ್ಯೆಗಳಿದ್ದಲ್ಲಿ ಅವುಗಳನ್ನು ನಿವಾರಣೆ ಮಾಡುವುದು ಅವಶ್ಯಕವಾಗಿರುತ್ತದೆ ಎಂಬುದಾಗಿ ಹೇಳಿದೆ.

ಮುಂದುವರೆದು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರು ರಾಜ್ಯ ಸರ್ಕಾರಿ ನೌಕರರ ಪರವಾಗಿ ಬ್ಯಾಂಕುಗಳು ಸಂಬಳ ಪ್ಯಾಕೇಜು ಖಾತೆಯಾಗಿ ಪರಿವರ್ತಿಸಿಕೊಳ್ಳುವ ಅಧಿಕಾರಿ/ನೌಕರರಿಗೆ, ರಾಷ್ಟ್ರೀಕೃತ ಬ್ಯಾಂಕುಗಳು, ಗೃಹ ಸಾಲ, ವೈಯಕ್ತಿಕ ಸಾಲ ಮತ್ತು ವಾಹನ ಖರೀದಿ ಸಾಲಗಳನ್ನು ರಿಯಾಯಿತಿ ಬಡ್ಡಿ ದರದಲ್ಲಿ ನೀಡುವ ಸಂಬಂಧ ಮನವಿ ಮಾಡಿದ್ದಾರೆ ಎಂಬುದಾಗಿ ತಿಳಿಸಿದೆ.ಟ

ಈ ಹಿನ್ನೆಲೆಯಲ್ಲಿ, ಮೇಲಿನ ವಿಷಯಗಳನ್ನು ಚರ್ಚಿಸಲು ಪ್ರಮುಖ ರಾಷ್ಟ್ರೀಕೃತ ಬ್ಯಾಂಕುಗಳ ಅಧಿಕಾರಿಗಳೊಂದಿಗೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳೊಂದಿಗೆ ಸರ್ಕಾರದ ಕಾರ್ಯದರ್ಶಿ (ವಿತ್ತೀಯ ಸುಧಾರಣೆ) ರವರ ಅಧ್ಯಕ್ಷತೆಯಲ್ಲಿ ದಿನಾಂಕ 15.04.2025 ರಂದು ಮಧ್ಯಾಹ್ನ 4.00 ಗಂಟೆಗೆ, ಕೊಠಡಿ ಸಂಖ್ಯೆ: 701, 7ನೇ ಮಹಡಿ, ಬಹುಮಹಡಿ ಕಟ್ಟಡ, ಬೆಂಗಳೂರು ಇಲ್ಲಿ ಸಭೆಯನ್ನು ನಡೆಸಲು ತೀರ್ಮಾನಿಸಲಾಗಿದೆ. ಈ ಸಭೆಗೆ ಅಗತ್ಯ ಮಾಹಿತಿಯೊಂದಿಗೆ ತಪ್ಪದೇ ಹಾಜರಾಗುವಂತೆ ಕೋರಿದೆ.

ಬೆಸ್ಕಾಂನಿಂದ 'ವಿದ್ಯುತ್ ಸಮಸ್ಯೆ'ಗಳಿಗೆ ದೂರು ದಾಖಲಿಸಲು 'ವಾಟ್ಸ್ ಆಪ್ ಸಹಾಯವಾಣಿ' ಆರಂಭ | BESCOM WhatsApp Helpline Number

ಸಾವರ್ಕರ್ ಬಗ್ಗೆ ಅವಹೇಳನಕಾರಿ ಹೇಳಿಕೆ: ರಾಹುಲ್ ಗಾಂಧಿಗೆ ನೀಡಿದ್ದ ಸಮನ್ಸ್ ರದ್ದತಿಗೆ ಕೋರ್ಟ್ ನಕಾರ

ಶಾಸಕ ಶಿವರಾಜ ಪಾಟೀಲ್ ಲೊಕೇಶನ್ ಟ್ರ್ಯಾಕ್ ಆರೋಪ: ಮಾಹಿತಿ ಪಡೆದು ಕ್ರಮ- ಗೃಹ ಸಚಿವ ಡಾ.ಜಿ ಪರಮೇಶ್ವರ್

ರಾಜ್ಯ ಸರ್ಕಾರಿ ನೌಕರರ 'ಆರೋಗ್ಯ ಸಂಜೀವಿನಿ ಯೋಜನೆ' ಪರಿಷ್ಕರಿಸಿ ಸರ್ಕಾರದಿಂದ ಮಹತ್ವದ ಆದೇಶ.

ರಾಜ್ಯ ಸರ್ಕಾರಿ ನೌಕರರ 'ಆರೋಗ್ಯ ಸಂಜೀವಿನಿ ಯೋಜನೆ' ಪರಿಷ್ಕರಿಸಿ ಸರ್ಕಾರದಿಂದ ಮಹತ್ವದ ಆದೇಶ.

ಈ ಕುರಿತಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ವಿಶೇಷ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಅವರ ಅವಲಂಬಿತ ಕುಟುಂಬದ ಸದಸ್ಯರಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸೆಗಳನ್ನು ಒದಗಿಸಲು ರಾಜ್ಯ ಸರ್ಕಾರದಿಂದ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು (KASS) ಅನುಷ್ಠಾನಗೊಳಿಸಲು ಮೇಲೆ ಕ್ರ.ಸಂ.(1) ರಿಂದ (3) ರಲ್ಲಿ ಓದಲಾದ ಸರ್ಕಾರದ ಆದೇಶಗಳಲ್ಲಿ ಕೆಲವು ಕಾರ್ಯನೀತಿ ಸೂಚನೆಗಳನ್ನು ನೀಡಲಾಗಿದೆ ಎಂದಿದ್ದಾರೆ.

ಮುಂದುವರೆದು, ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು (KASS) ಸಮರ್ಪಕವಾಗಿ ಅನುಷ್ಠಾನಗೊಳಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆರ್ಥಿಕ ಇಲಾಖೆ ಮತ್ತು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (SAST) ನೊಂದಿಗೆ ಚರ್ಚಿಸಿ, ಈ ಹಿಂದೆ ರೂಪಿಸಿರುವ ಯೋಜನೆಯಲ್ಲಿ ಕೆಲವು ಸೂಚನೆಗಳನ್ನು ಮಾರ್ಪಡಿಸುವುದು ಸೂಕ್ತವೆಂದು ತೀರ್ಮಾನಿಸಲಾಗಿದೆ. ಯೋಜನೆಗೆ ಸಂಬಂಧಿಸಿದಂತೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೇಲೆ ಓದಲಾದ (4) ರ ಪತ್ರಗಳಲ್ಲಿ ಸರ್ಕಾರಕ್ಕೆ ಪರಿಷ್ಕೃತ ಒಡಂಬಡಿಕೆಯನ್ನು ಸಿದ್ಧಪಡಿಸಿ ಸಲ್ಲಿಸಿರುತ್ತದೆ ಮೇಲೆ ಕ್ರ.ಸಂ. (5) ರಲ್ಲಿ ಓದಲಾದ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ದಿನಾಂಕ: 04.03.2025 ಮತ್ತು ದಿನಾಂಕ: 13.01.2025 ರಂದು ನಡೆದ ಸಭೆಗಳಲ್ಲಿ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೈಗೊಳ್ಳಬೇಕಾದ ಕೆಲವು ಅಂಶಗಳ ಬಗ್ಗೆ ಸೂಚನೆಗಳನ್ನು ನೀಡಲಾಗಿದೆ ಹಾಗೂ ಕೆಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದಿದ್ದಾರೆ.

ದಿನಾಂಕ: 13.01.2025 ರಂದು ನಡೆದ ಸಭೆಯ ತೀರ್ಮಾನದಂತೆ ಮೇಲೆ ಕ್ರ.ಸಂ. (6) ರಲ್ಲಿ ಓದಲಾದ, ಪ್ರಧಾನ ಕಾರ್ಯದರ್ಶಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರಿಂದ (ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನ ಏಕಕಡತದಲ್ಲಿ) ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯ ಪ್ಯಾಕೇಜ್ ದರಗಳು, ನಿಗದಿಪಡಿಸಿರದ ಚಿಕಿತ್ಸಾ ವಿಧಾನಗಳು (Unspecified procedures), ಇಂಪ್ಲಾಂಟ್ ದರಗಳು, ಆಸ್ಪತ್ರೆಗಳ ನೋಂದಾವಣೆ, ಒಡಂಬಡಿಕೆಯ ಷರತ್ತುಗಳು ಹಾಗೂ ಇತರೆ ಕೆಲವು ಅಂಶಗಳಿಗೆ ಸಂಬಂಧಿಸಿದಂತೆ ಪರಿಷ್ಕೃತ ಪುಸ್ತಾವನೆಯು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಲ್ಲಿ ಸ್ವೀಕೃತವಾಗಿದೆ.

ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನಿಂದ ಸ್ವೀಕೃತವಾದ ಪರಿಷ್ಕೃತ ಪ್ರಸ್ತಾವನೆಯಲ್ಲಿ ಈ ಕೆಳಕಂಡ ಪ್ರಮುಖ ಅಂಶಗಳನ್ನು ಪ್ರಸ್ತಾಪಿಸಲಾಗಿದೆ:-
1) ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯು ಪ್ಯಾಕೇಜ್ ದರಗಳನ್ನು ಆಧರಿಸಿದೆ. KASS ಯೋಜನೆಯಡಿ ఒట్టు 2000 ವೈದ್ಯಕೀಯ ಕಾರ್ಯವಿಧಾನಗಳನ್ನು ಅಳವಡಿಸಿಕೊಳ್ಳಲು ಪ್ರಸ್ತಾಪಿಸಲಾಗಿದೆ. ಈ ಕಾರ್ಯವಿಧಾನಗಳನ್ನು CGHS, HBP 2022 ಮತ್ತು ಪ್ರಸ್ತುತ AB-ArK ಪ್ಯಾಕೇಜ್‌ಗಳಲ್ಲಿ ಲಭ್ಯವಿರುವ ಪ್ಯಾಕೇಜ್‌ಗಳಿಂದ ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ.

KASS PACKAGE MASTER: ಯೋಜನೆಯ ಆರಂಭದ ಹಂತದಲ್ಲಿ ಈ ಕೆಳಕಂಡಂತೆ CGHS, AB-ARK, National Health Authority (NHA) 20 HBP 2022 da ಒಳಗೊಂಡ ಸಮ್ಮಿಶ್ರ ವೈದ್ಯಕೀಯ ಚಿಕಿತ್ಸಾ ವಿಧಾನಗಳು ಹಾಗೂ ದರಗಳನ್ನು ಒಳಗೊಂಡಿರುತ್ತವೆ ಎಂದು ತಿಳಿಸಿದ್ದಾರೆ.

ಗುರುವಾರ, ಏಪ್ರಿಲ್ 3, 2025

`ರಾಜ್ಯ ಸರ್ಕಾರಿ ನೌಕರರೇ' ಗಮನಿಸಿ : `ಸರ್ವೋತ್ತಮ ಸೇವಾ ಪ್ರಶಸ್ತಿ'ಗೆ ಅರ್ಜಿ ಆಹ್ವಾನ | Govt Employees

ಮುಂದುವರೆದು, ಸದರಿ ಸುತ್ತೋಲೆಯನ್ನು ಭಾಗಶ: ಪರಿಷ್ಕರಿಸಲು ತೀರ್ಮಾನಿಸಿ ಈ ಕೆಳಕಂಡಂತೆ ಕ್ರಮವಹಿಸುವಂತೆ ತಿಳಿಸಲಾಗಿದೆ.

1. 2024ನೇ ಸಾಲಿನ ಸರ್ವೋತ್ತಮ ಸೇವಾ ಪ್ರಶಸ್ತಿಗೆ ನಾಮ ನಿರ್ದೇಶನ ಸಲ್ಲಿಸಲು 2023ನೇ ಕ್ಯಾಲೆಂಡರ್ ವರ್ಷದಲ್ಲಿ ಮಾಡಿರುವ ಉಪ ಕ್ರಮ /ಸಾಧನೆಯನ್ನು ಪರಿಗಣಿಸಲಾಗುವುದು. ಹಾಗೆಯೇ, 2025ನೇ ಸಾಲಿನ ಸರ್ವೋತ್ತಮ ಸೇವಾ ಪ್ರಶಸ್ತಿಗೆ ನಾಮ ನಿರ್ದೇಶನ ಸಲ್ಲಿಸಲು 2024ನೇ ಕ್ಯಾಲೆಂಡರ್ ವರ್ಷದಲ್ಲಿ ಮಾಡಿರುವ ಉಪ ಕ್ರಮ /ಸಾಧನೆಯನ್ನು ಪರಿಗಣಿಸಲಾಗುವುದು.

2. 2024 ಹಾಗೂ 2025ನೇ ಸಾಲಿನ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಆನ್‌ಲೈನ್‌ನಲ್ಲಿ ನಾಮ ನಿರ್ದೇಶನವನ್ನು ಸಲ್ಲಿಸಲು ದಿನಾಂಕ: 14-04-2025 ಅಂತಿಮ ದಿನಾಂಕವನ್ನು ನಿಗದಿಪಡಿಸಲಾಗಿದೆ. ನಂತರ ಯಾವುದೇ ಕಾರಣಕ್ಕೂ ದಿನಾಂಕವನ್ನು ವಿಸ್ತರಿಸಲಾಗುವುದಿಲ್ಲ.

3. 2023ನೇ ಸಾಲಿನಲ್ಲಿ ಯಾವ ಜಿಲ್ಲೆಗಳು ಜಿಲ್ಲಾ ಮಟ್ಟದ ಆಯ್ಕೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿಲ್ಲವೋ ಅವರೂ ಸಹ ಪ್ರಕ್ರಿಯೆಯನ್ನು ದಿನಾಂಕ: 16-04-2025 ರೊಳಗೆ ಪೂರ್ಣಗೊಳಿಸುವುದು ಮತ್ತು ಆಯ್ಕೆ ಪೂರ್ಣಗೊಂಡ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸುವುದು.

4. 2024 ಹಾಗೂ 2025ನೇ ಸಾಲಿನ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಯ ಆಯ್ಕೆಯನ್ನು ಪೂರ್ಣಗೊಳಿಸಿ, ಪೂರ್ಣಗೊಂಡ ಎರಡು ವರ್ಷಗಳ ಆಯ್ಕೆ ಪಟ್ಟಿಯನ್ನು ದಿನಾಂಕ: 16-04-2025ರೊಳಗೆ ಸರ್ಕಾರಕ್ಕೆ ಸಲ್ಲಿಸುವುದು.

5. 2024 ಹಾಗೂ 2025ನೇ ಸಾಲಿನ ಎರಡು ವರ್ಷಗಳಿಗೆ ಪ್ರತಿ ವರ್ಷಕ್ಕೆ ತಲಾ ಇಬ್ಬರಂತೆ ಒಟ್ಟು 4 ಜನ ಅರ್ಹ ಅಧಿಕಾರಿ / ನೌಕರರನ್ನು ಸರ್ವೋತ್ತಮ ಸೇವಾ ಪ್ರಶಸ್ತಿಗೆ ಪರಿಗಣಿಸಲು ಜಿಲ್ಲೆಯಿಂದ ರಾಜ್ಯಮಟ್ಟಕ್ಕೆ ನಾಮ ನಿರ್ದೇಶನಗಳನ್ನು ಸೂಕ್ತ ಶಿಫಾರಸ್ಸಿನೊಂದಿಗೆ ದಿನಾಂಕ: 16-04-2025 ರೊಳಗೆ ಸರ್ಕಾರಕ್ಕೆ ವಿಳಂಬವಿಲ್ಲದೇ ನಿಗದಿತ ನಮೂನೆಯಲ್ಲಿ ಕಡ್ಡಾಯವಾಗಿ ಸಲ್ಲಿಸುವುದು.

'ಕೇಂದ್ರ ಸರ್ಕಾರಿ ನೌಕರ'ರಿಗೆ ಶೇ.2ರಷ್ಟು 'ತುಟ್ಟಿಭತ್ಯೆ' ಹೆಚ್ಚಿಸಿ ಅಧಿಕೃತ ಆದೇಶ | Central govt employees DA hike

'ಕೇಂದ್ರ ಸರ್ಕಾರಿ ನೌಕರ'ರಿಗೆ ಶೇ.2ರಷ್ಟು 'ತುಟ್ಟಿಭತ್ಯೆ' ಹೆಚ್ಚಿಸಿ ಅಧಿಕೃತ ಆದೇಶ | Central govt employees DA hike

Job Alert: ಆದಾಯ ತೆರಿಗೆ ಇಲಾಖೆಯಲ್ಲಿ ಉದ್ಯೋಗ, ₹81000 ವೇತನ

ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಯುವಕ, ಯುವತಿಯರಿಗೆ ಇದೊಂದು ಉತ್ತಮ ಅವಕಾಶವಾಗಿದೆ.

ರಾಜ್ಯ ಆದಾಯ ತೆರಿಗೆ ಇಲಾಖೆ ಸ್ಟೆನೋಗ್ರಾಫರ್ ಗ್ರೇಡ್ II, ತೆರಿಗೆ ಸಹಾಯಕ, ಮತ್ತು ಮಲ್ಟಿ-ಟಾಸ್ಕಿಂಗ್ ಸ್ಟಾಫ್ (ಎಂಟಿಎಸ್) ಹುದ್ದೆಗಳ ಭರ್ತಿಗೆ ಪ್ರಕ್ರಿಯೆ ಆರಂಭಿಸಿದೆ. ಒಟ್ಟು ವಿವಿಧ 56 ಹುದ್ದೆಗಳಿಗಾಗಿ ನೇಮಕಾತಿ ನಡೆಸಲಾಗುತ್ತಿದೆ. ಆಸಕ್ತರು ಆನಲೈನ್‌ ಮೂಲಕ (incometax.gov.in) ಏಪ್ರಿಲ್ 5ರೊಳಗೆ ಅರ್ಜಿ ಸಲ್ಲಿಸಬೇಕಿದೆ. ನಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದು ಎಂದಿಲ್ಲ ತಿಳಿಸಲಾಗಿದೆ.

ನೇಮಕಾತಿ ಪೂರ್ಣ ವಿವರ

ನೇಮಕಾತಿ ಸಂಸ್ಥೆ: ಆದಾಯ ತೆರಿಗೆ ಇಲಾಖೆ

ಗರಿಷ್ಠ ವಯೋಮಿತಿ: 27 ವರ್ಷ

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್

ಅರ್ಜಿ ಸಲ್ಲಿಕೆ ಅಂತಿಮ ದಿನ: ಏಪ್ರಿಲ್ 05

ಸ್ಟೆನೋಗ್ರಾಫರ್ ಗ್ರೇಡ್ II: 2

ತೆರಿಗೆ ಸಹಾಯಕ: 28

ಮಲ್ಟಿ-ಟಾಸ್ಕಿಂಗ್ ಸ್ಟಾಫ್: 26 ಹುದ್ದೆ

ಒಟ್ಟು ಹುದ್ದೆಗಳು: 56

ವಿದ್ಯಾರ್ಹತೆ ಏನಿರಬೇಕು?

ಅರ್ಜಿ ಸಲ್ಲಿಸಬಯಸುವ ಯಾವುದೇ ಅಭ್ಯರ್ಥಿಗಳು ಕನಿಷ್ಠ ಪದವಿ ಪಡೆದಿರಬೇಕು. ಅವರು ಕನಿಷ್ಠ 18 ರಿಂದ ಗರಿಷ್ಠ 27 ವರ್ಷದವರಾಗಿರಬೇಕು. ಎಸ್‌ಎಸ್‌ಎಲ್‌ಸಿ ಉತ್ತೀರ್ಣ ಆದವರಿಗೂ ಇಲ್ಲಿ ಪೋಸ್ಟ್ ಖಾಲಿ ಇದೆ. ಆ ಅಭ್ಯರ್ಥಿಗೆ ಗರಿಷ್ಠ 25 ವರ್ಷ ವಯಸ್ಸಿನ ಮಿತಿ ನಿಗದಿಪಡಿಸಲಾಗಿದೆ. ಎಲ್ಲ ಹುದ್ದೆಗಳ ಆಯ್ಕೆಗೂ ಪ್ರತ್ಯೇಕ ವಿದ್ಯಾರ್ಹತೆ ಪರಿಗಣಿಸಲಾಗುತ್ತದೆ.

ಮಾಸಿಕ ವೇತನ ಎಷ್ಟು?

ಅಭ್ಯರ್ಥಿಗಳು ಸರ್ಕಾರಿ ಮಟ್ಟದಲ್ಲಿ ಉದ್ಯೋಗ ಹೊಂದಲು ಬಯಸಿದಲ್ಲಿ ಕೂಡಲೇ ಅರ್ಜಿ ಸಲ್ಲಿಸಬೇಕು. ಆಯ್ಕೆಯಾದವರಿಗೆ ಗರಿಷ್ಠ 81,100 ರೂಪಾಯಿ ಮಾಸಿಕ ವೇತನ ಇರಲಿದೆ. ಸ್ಟೆನೋಗ್ರಾಫರ್ ಗ್ರೇಡ್ II ಹಾಗೂ ತೆರಿಗೆ ಸಹಾಯಕ ಅಭ್ಯರ್ಥಿಗಳಿಗೆ ಮಾಸಿಕ 25,500 ರಿಂದ 81,100 ರೂಪಾಯಿ. ಮಲ್ಟಿ-ಟಾಸ್ಕಿಂಗ್ ಸ್ಟಾಫ್ ಹುದ್ದೆಗೆ ಆಯ್ಕೆ ಆದರೆ ಮಾಸಿಕ 18,000 ರಿಂದ ರೂ 56,900 ರೂಪಾಯಿ ವಿಧಿಸಲಾಗಿದೆ.

ಅರ್ಜಿ ಸಲ್ಲಿಕೆ ಹೇಗೆ?

ಅರ್ಹ ಅಭ್ಯರ್ಥಿಗಳು ಕೂಡಲೇ ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್ incometax.gov.in ಗೆ ಭೇಟಿ ನೀಡಬೇಕು. ಅಲ್ಲಿನ ಅರ್ಜಿ ವಿಭಾಗಕ್ಕೆ ತೆರಳಿ ಅರ್ಜಿ ಡೌಲ್‌ಲೋಡ್ ಮಡಿಕೊಂಡು ಏಪ್ರಿಲ್ 5ರ ರಾತ್ರಿ 12ರ ಒಳಗೆ ಸೂಕ್ತ ದಾಖಲೆಗಳ ಸಮೇತ ಅರ್ಜಿ ಸಲ್ಲಿಸುವಂತೆ ಕೋರಲಾಗಿದೆ. ಲಿಖಿತ ಪರೀಕ್ಷೆ ಇಲ್ಲದೇ ಆಯ್ಕೆ ಮಾಡಲಾಗುತ್ತದೆ.

'ರಾಜ್ಯ ಸರ್ಕಾರಿ ನೌಕರ'ರಿಗೆ 'ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ' ಕುರಿತು ಮಹತ್ವದ ಮಾಹಿತಿ

ಈ ಕುರಿತಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ವಿಶೇಷ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಅವರ ಅವಲಂಬಿತ ಕುಟುಂಬದ ಸದಸ್ಯರಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸೆಗಳನ್ನು ಒದಗಿಸಲು ರಾಜ್ಯ ಸರ್ಕಾರದಿಂದ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು (KASS) ಅನುಷ್ಠಾನಗೊಳಿಸಲು ಮೇಲೆ ಕ್ರ.ಸಂ.(1) ರಿಂದ (3) ರಲ್ಲಿ ಓದಲಾದ ಸರ್ಕಾರದ ಆದೇಶಗಳಲ್ಲಿ ಕೆಲವು ಕಾರ್ಯನೀತಿ ಸೂಚನೆಗಳನ್ನು ನೀಡಲಾಗಿದೆ ಎಂದಿದ್ದಾರೆ.

ಮುಂದುವರೆದು, ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು (KASS) ಸಮರ್ಪಕವಾಗಿ ಅನುಷ್ಠಾನಗೊಳಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆರ್ಥಿಕ ಇಲಾಖೆ ಮತ್ತು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (SAST) ನೊಂದಿಗೆ ಚರ್ಚಿಸಿ, ಈ ಹಿಂದೆ ರೂಪಿಸಿರುವ ಯೋಜನೆಯಲ್ಲಿ ಕೆಲವು ಸೂಚನೆಗಳನ್ನು ಮಾರ್ಪಡಿಸುವುದು ಸೂಕ್ತವೆಂದು ತೀರ್ಮಾನಿಸಲಾಗಿದೆ. ಯೋಜನೆಗೆ ಸಂಬಂಧಿಸಿದಂತೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೇಲೆ ಓದಲಾದ (4) ರ ಪತ್ರಗಳಲ್ಲಿ ಸರ್ಕಾರಕ್ಕೆ ಪರಿಷ್ಕೃತ ಒಡಂಬಡಿಕೆಯನ್ನು ಸಿದ್ಧಪಡಿಸಿ ಸಲ್ಲಿಸಿರುತ್ತದೆ ಮೇಲೆ ಕ್ರ.ಸಂ. (5) ರಲ್ಲಿ ಓದಲಾದ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ದಿನಾಂಕ: 04.03.2025 ಮತ್ತು ದಿನಾಂಕ: 13.01.2025 ರಂದು ನಡೆದ ಸಭೆಗಳಲ್ಲಿ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೈಗೊಳ್ಳಬೇಕಾದ ಕೆಲವು ಅಂಶಗಳ ಬಗ್ಗೆ ಸೂಚನೆಗಳನ್ನು ನೀಡಲಾಗಿದೆ ಹಾಗೂ ಕೆಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದಿದ್ದಾರೆ.

ದಿನಾಂಕ: 13.01.2025 ರಂದು ನಡೆದ ಸಭೆಯ ತೀರ್ಮಾನದಂತೆ ಮೇಲೆ ಕ್ರ.ಸಂ. (6) ರಲ್ಲಿ ಓದಲಾದ, ಪ್ರಧಾನ ಕಾರ್ಯದರ್ಶಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರಿಂದ (ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನ ಏಕಕಡತದಲ್ಲಿ) ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯ ಪ್ಯಾಕೇಜ್ ದರಗಳು, ನಿಗದಿಪಡಿಸಿರದ ಚಿಕಿತ್ಸಾ ವಿಧಾನಗಳು (Unspecified procedures), ಇಂಪ್ಲಾಂಟ್ ದರಗಳು, ಆಸ್ಪತ್ರೆಗಳ ನೋಂದಾವಣೆ, ಒಡಂಬಡಿಕೆಯ ಷರತ್ತುಗಳು ಹಾಗೂ ಇತರೆ ಕೆಲವು ಅಂಶಗಳಿಗೆ ಸಂಬಂಧಿಸಿದಂತೆ ಪರಿಷ್ಕೃತ ಪುಸ್ತಾವನೆಯು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಲ್ಲಿ ಸ್ವೀಕೃತವಾಗಿದೆ.

ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನಿಂದ ಸ್ವೀಕೃತವಾದ ಪರಿಷ್ಕೃತ ಪ್ರಸ್ತಾವನೆಯಲ್ಲಿ ಈ ಕೆಳಕಂಡ ಪ್ರಮುಖ ಅಂಶಗಳನ್ನು ಪ್ರಸ್ತಾಪಿಸಲಾಗಿದೆ:-
1) ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯು ಪ್ಯಾಕೇಜ್ ದರಗಳನ್ನು ಆಧರಿಸಿದೆ. KASS ಯೋಜನೆಯಡಿ ఒట్టు 2000 ವೈದ್ಯಕೀಯ ಕಾರ್ಯವಿಧಾನಗಳನ್ನು ಅಳವಡಿಸಿಕೊಳ್ಳಲು ಪ್ರಸ್ತಾಪಿಸಲಾಗಿದೆ. ಈ ಕಾರ್ಯವಿಧಾನಗಳನ್ನು CGHS, HBP 2022 ಮತ್ತು ಪ್ರಸ್ತುತ AB-ArK ಪ್ಯಾಕೇಜ್‌ಗಳಲ್ಲಿ ಲಭ್ಯವಿರುವ ಪ್ಯಾಕೇಜ್‌ಗಳಿಂದ ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ.

KASS PACKAGE MASTER: ಯೋಜನೆಯ ಆರಂಭದ ಹಂತದಲ್ಲಿ ಈ ಕೆಳಕಂಡಂತೆ CGHS, AB-ARK, National Health Authority (NHA) 20 HBP 2022 da ಒಳಗೊಂಡ ಸಮ್ಮಿಶ್ರ ವೈದ್ಯಕೀಯ ಚಿಕಿತ್ಸಾ ವಿಧಾನಗಳು ಹಾಗೂ ದರಗಳನ್ನು ಒಳಗೊಂಡಿರುತ್ತವೆ ಎಂದು ತಿಳಿಸಿದ್ದಾರೆ.

ಮನೆ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ಏಪ್ರಿಲ್.27ರಂದು 42,345 ಮನೆ ಹಂಚಿಕೆ

BIG NEWS: ಸಾಗರದಲ್ಲಿ ಬಹುಕೋಟಿ 'ಸೇಲ್ಸ್ ಸರ್ಟಿಫಿಕೇಟ್' ಹಗರಣ: ತನಿಖೆಗೆ ಸಚಿವರಿಗೆ 'ಶಾಸಕ ಗೋಪಾಕೃಷ್ಣ ಬೇಳೂರು' ಪತ್ರ

BREAKING: 2025-26ನೇ ಸಾಲಿನ 'ಶೈಕ್ಷಣಿಕ ವೇಳಾಪಟ್ಟಿ' ಪ್ರಕಟ: ಮೇ.29ರಿಂದ ರಾಜ್ಯದಲ್ಲಿ ಶಾಲೆಗಳು ಪುನರಾರಂಭ

Tax-free Income Sources: ಈ ರೀತಿ ಹಣ ಗಳಿಸಿದ್ರೆ ಟ್ಯಾಕ್ಸ್ ಕಟ್ಬೇಕಾಗಿಲ್ಲ, ತೆರಿಗೆ ಮುಕ್ತ ಆದಾಯದ ಮೂಲಗಳಿವು

ಕೆಲ ಆದಾಯಗಳು ತೆರಿಗೆ ಮುಕ್ತವಾಗಿವೆ. ತೆರಿಗೆ ಪಾವತಿಗೆ ಮುನ್ನ ಯಾವೆಲ್ಲ ಆದಾಯ, ತೆರಿಗೆ ಮುಕ್ತವಾಗಿದೆ ಎಂಬುದನ್ನು ತಿಳಿದುಕೊಳ್ಳಿ. ಯಾವ ಆದಾಯ ತೆರಿಗೆ ಮುಕ್ತ? : ಕೃಷಿ ...