ಹೈದರಾಬಾದ್ ಕರ್ನಾಟಕ ಪ್ರದೇಶ

ಹೈದರಾಬಾದ್ ಕರ್ನಾಟಕ ಪ್ರದೇಶ
Hyderabad Karnataka

ಭಾನುವಾರ, ಸೆಪ್ಟೆಂಬರ್ 1, 2024

ರಾಜ್ಯ ಸರ್ಕಾರಿ ನೌಕರರಿಗೆ ಮತ್ತೊಂದು ಗುಡ್ ನ್ಯೂಸ್ : `ಗೃಹ ನಿರ್ಮಾಣ' ಮೊತ್ತ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ

ರಾಜ್ಯ ಸರ್ಕಾರಿ ನೌಕರರಿಗೆ ಮತ್ತೊಂದು ಗುಡ್ ನ್ಯೂಸ್ : `ಗೃಹ ನಿರ್ಮಾಣ' ಮೊತ್ತ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ರಾಜ್ಯ ಸಿವಿಲ್ ಸೇವೆಯ ಅಧಿಕಾರಿ ಮತ್ತು ನೌಕರರಿಗರ ಹಾಗೂ ಕರ್ನಾಟಕ ವೃಂದಕ್ಕೆ ಸೇರಿ ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಖಿಲ ಭಾರತ ಸೇವಾ ಅಧಿಕಾರಿಗಳಿಗೆ ಗೃಹ ನಿರ್ಮಾಣ ಮುಂಗಡದ ಮೊತ್ತವನ್ನು ಉಲ್ಲೇಖಿತ ಸರ್ಕಾರದ ಆದೇಶದಲ್ಲಿ ಈ ಕೆಳಕಂಡಂತೆ ಹೆಚ್ಚಿಸಿ ಆದೇಶಿಸಿದೆ.

L ರಾಜ್ಯ ಸಿವಿಲ್ ಸೇವೆಯ 'ಎ' ಗುಂಪಿನ ಅಧಿಕಾರಿಗಳಿಗೆ ಅವರು ಪಡೆಯುತ್ತಿರುವ 70 ತಿಂಗಳ (ಮೂಲ ವೇತನ + ತುಟ್ಟಿ ಭತ್ಯೆ) ಯನ್ನು ರೂ.65.00 ಲಕ್ಷಗಳ ಮಿತಿಯೊಳಗೆ ಮತ್ತು ರಾಜ್ಯ ಸಿವಿಲ್ ಸೇವೆಯ ಇತರೆ ಅಧಿಕಾರಿಗಳು ಮತ್ತು ನೌಕರರಿಗೆ 70 ತಿಂಗಳ (ಮೂಲ ವೇತನ + ತುಟ್ಟಿ ಭತ್ಯೆ) ಯನ್ನು ಗರಿಷ್ಠ ರೂ.40.00 ಲಕ್ಷಗಳ ಮಿತಿಯೊಳಗೆ ನಿಗಧಿಪಡಿಸಿ ಆದೇಶಿಸಲಾಗಿದೆ.

2. ಕರ್ನಾಟಕ ವೃಂದಕ್ಕೆ ಸೇರಿ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಖಿಲ ಭಾರತ ಸೇವೆ ಅಧಿಕಾರಿಗಳು ರಾಜ್ಯ ಸಿವಿಲ್ ಸೇವೆಯ 'ಎ' ಗುಂಪಿನ ಅಧಿಕಾರಿಗಳಂತೆ ಅವರ 70 ತಿಂಗಳ (ಮೂಲ ವೇತನ + ತುಟ್ಟಿ ಭತ್ಯೆ) ಯನ್ನು ಗರಿಷ್ಟ ರೂ.65.00 ಲಕ್ಷಗಳ ಮಿತಿಗೊಳಪಟ್ಟು ಗೃಹ ನಿರ್ಮಾಣ/ಗೃಹ ಖರೀದಿ ಮುಂಗಡದ ಸೌಲಭ್ಯವನ್ನು ಪಡೆಯಲು ಅರ್ಹರಿರುತ್ತಾರೆ.

3. ಸದರಿ ಗೃಹ ನಿರ್ಮಾಣ/ಗೃಹ ಖರೀದಿ ಮುಂಗಡಕ್ಕೆ ಸಂಬಂಧಿಸಿದಂತೆ ಈ ಕೆಳಕಂಡಂತೆ ಷರತ್ತು ಮತ್ತು ನಿಬಂಧನೆಗಳು ಅನ್ವಯವಾಗುತ್ತವೆ.

1) ಗೃಹ ನಿರ್ಮಾಣ/ಗೃಹ ಖರೀದಿ ಮುಂಗಡದ ಮೇಲಿನ ಬಡ್ಡಿದರವನ್ನು ವಾರ್ಷಿಕ ಶೇ.8.5 ಏಕರೂಪ ಬಡ್ಡಿದರಕ್ಕೆ ನಿಗಧಿಪಡಿಸಿದೆ.

2) ಸರ್ಕಾರಿ ಆದೇಶ ಸಂಖ್ಯೆ: ಆಇ 48 ಮಕಮು 1994, ದಿನಾಂಕ:21-10-1994ರಲ್ಲಿ ಗೃಹ ನಿರ್ಮಾಣ/ಗೃಹ ಖರೀದಿ ಮುಂಗಡವನ್ನು ಮಂಜೂರು ಮಾಡಲು ಅನುಸರಿಸಲಾಗುತ್ತಿರುವ ಷರತ್ತು ಮತ್ತು ನಿಬಂಧನೆಗಳು ಮುಂದುವರೆದು ಅನ್ವಯಿಸುತ್ತವೆ.


festival advance ಹಬ್ಬದ ಮುಂಗಡ

ಈ ಆದೇಶ ರಾಜ್ಯ ಸರ್ಕಾರಿ ನೌಕರರು ಹಬ್ಬದ ಮುಂಗಡ ಪಡೆಯಲು ಅಧಿಸೂಚಿಸಿರುವ ಹಬ್ಬಗಳೊಂದಿಗೆ ಹೆಚ್ಚುವರಿಯಾಗಿ ಕೆಲವು ಹಬ್ಬಗಳನ್ನು ಸೇರ್ಪಡೆಗೊಳಿಸುವ ಬಗ್ಗೆ ಎಂಬ ವಿಷಯವನ್ನು ಒ...