ಹೈದರಾಬಾದ್ ಕರ್ನಾಟಕ ಪ್ರದೇಶ

ಹೈದರಾಬಾದ್ ಕರ್ನಾಟಕ ಪ್ರದೇಶ
Hyderabad Karnataka

ಭಾನುವಾರ, ಸೆಪ್ಟೆಂಬರ್ 1, 2024

ರಾಜ್ಯ ಸರ್ಕಾರಿ ನೌಕರರಿಗೆ ಮತ್ತೊಂದು ಗುಡ್ ನ್ಯೂಸ್ : `ಗೃಹ ನಿರ್ಮಾಣ' ಮೊತ್ತ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ

ರಾಜ್ಯ ಸರ್ಕಾರಿ ನೌಕರರಿಗೆ ಮತ್ತೊಂದು ಗುಡ್ ನ್ಯೂಸ್ : `ಗೃಹ ನಿರ್ಮಾಣ' ಮೊತ್ತ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ರಾಜ್ಯ ಸಿವಿಲ್ ಸೇವೆಯ ಅಧಿಕಾರಿ ಮತ್ತು ನೌಕರರಿಗರ ಹಾಗೂ ಕರ್ನಾಟಕ ವೃಂದಕ್ಕೆ ಸೇರಿ ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಖಿಲ ಭಾರತ ಸೇವಾ ಅಧಿಕಾರಿಗಳಿಗೆ ಗೃಹ ನಿರ್ಮಾಣ ಮುಂಗಡದ ಮೊತ್ತವನ್ನು ಉಲ್ಲೇಖಿತ ಸರ್ಕಾರದ ಆದೇಶದಲ್ಲಿ ಈ ಕೆಳಕಂಡಂತೆ ಹೆಚ್ಚಿಸಿ ಆದೇಶಿಸಿದೆ.

L ರಾಜ್ಯ ಸಿವಿಲ್ ಸೇವೆಯ 'ಎ' ಗುಂಪಿನ ಅಧಿಕಾರಿಗಳಿಗೆ ಅವರು ಪಡೆಯುತ್ತಿರುವ 70 ತಿಂಗಳ (ಮೂಲ ವೇತನ + ತುಟ್ಟಿ ಭತ್ಯೆ) ಯನ್ನು ರೂ.65.00 ಲಕ್ಷಗಳ ಮಿತಿಯೊಳಗೆ ಮತ್ತು ರಾಜ್ಯ ಸಿವಿಲ್ ಸೇವೆಯ ಇತರೆ ಅಧಿಕಾರಿಗಳು ಮತ್ತು ನೌಕರರಿಗೆ 70 ತಿಂಗಳ (ಮೂಲ ವೇತನ + ತುಟ್ಟಿ ಭತ್ಯೆ) ಯನ್ನು ಗರಿಷ್ಠ ರೂ.40.00 ಲಕ್ಷಗಳ ಮಿತಿಯೊಳಗೆ ನಿಗಧಿಪಡಿಸಿ ಆದೇಶಿಸಲಾಗಿದೆ.

2. ಕರ್ನಾಟಕ ವೃಂದಕ್ಕೆ ಸೇರಿ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಖಿಲ ಭಾರತ ಸೇವೆ ಅಧಿಕಾರಿಗಳು ರಾಜ್ಯ ಸಿವಿಲ್ ಸೇವೆಯ 'ಎ' ಗುಂಪಿನ ಅಧಿಕಾರಿಗಳಂತೆ ಅವರ 70 ತಿಂಗಳ (ಮೂಲ ವೇತನ + ತುಟ್ಟಿ ಭತ್ಯೆ) ಯನ್ನು ಗರಿಷ್ಟ ರೂ.65.00 ಲಕ್ಷಗಳ ಮಿತಿಗೊಳಪಟ್ಟು ಗೃಹ ನಿರ್ಮಾಣ/ಗೃಹ ಖರೀದಿ ಮುಂಗಡದ ಸೌಲಭ್ಯವನ್ನು ಪಡೆಯಲು ಅರ್ಹರಿರುತ್ತಾರೆ.

3. ಸದರಿ ಗೃಹ ನಿರ್ಮಾಣ/ಗೃಹ ಖರೀದಿ ಮುಂಗಡಕ್ಕೆ ಸಂಬಂಧಿಸಿದಂತೆ ಈ ಕೆಳಕಂಡಂತೆ ಷರತ್ತು ಮತ್ತು ನಿಬಂಧನೆಗಳು ಅನ್ವಯವಾಗುತ್ತವೆ.

1) ಗೃಹ ನಿರ್ಮಾಣ/ಗೃಹ ಖರೀದಿ ಮುಂಗಡದ ಮೇಲಿನ ಬಡ್ಡಿದರವನ್ನು ವಾರ್ಷಿಕ ಶೇ.8.5 ಏಕರೂಪ ಬಡ್ಡಿದರಕ್ಕೆ ನಿಗಧಿಪಡಿಸಿದೆ.

2) ಸರ್ಕಾರಿ ಆದೇಶ ಸಂಖ್ಯೆ: ಆಇ 48 ಮಕಮು 1994, ದಿನಾಂಕ:21-10-1994ರಲ್ಲಿ ಗೃಹ ನಿರ್ಮಾಣ/ಗೃಹ ಖರೀದಿ ಮುಂಗಡವನ್ನು ಮಂಜೂರು ಮಾಡಲು ಅನುಸರಿಸಲಾಗುತ್ತಿರುವ ಷರತ್ತು ಮತ್ತು ನಿಬಂಧನೆಗಳು ಮುಂದುವರೆದು ಅನ್ವಯಿಸುತ್ತವೆ.


ಶುಕ್ರವಾರ, ಆಗಸ್ಟ್ 30, 2024

ರಾಜ್ಯ ಸರ್ಕಾರಿ ನೌಕರರೇ ಗಮನಿಸಿ : ಹೊಸ ಹುದ್ದೆಗೆ ಹಾಜರಾಗುವ `ಸೇರಿಕೆ ಕಾಲ' (Joining Time) ದ ನಿಯಮಗಳು ಹೀಗಿವೆ!

ಕರ್ನಾಟಕ ರಾಜ್ಯ ಸೇವಾ ನಿಯಮಗಳು 1958 ರ ನಿಯಮ 8 (24)

ಸೇರಿಕೆ ಕಾಲ ಸರ್ಕಾರಿ ನೌಕರನಿಗೆ ಯಾವ ಸಂದರ್ಭದಲ್ಲಿ ಲಭಿಸುತ್ತದೆ?


ಯಾರೇ ಒಬ್ಬ ಸರ್ಕಾರಿ ನೌಕರನು ಸರ್ಕಾರದ ಹಿತಾಸಕ್ತಿ ಮೇರೆಗೆ ವರ್ಗಾವಣೆಯಾದಾಗ, ಆತನಿಗೆ ಆ ಹುದ್ದೆಗೆ ಹೋಗಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಸೇರಿಕೆ ಕಾಲ ಸಿಗುತ್ತದೆ.

3.ಯಾವ ಸಂದರ್ಭದಲ್ಲಿ ಒಬ್ಬ ಸರ್ಕಾರಿ ನೌಕರನಿಗೆ ಸೇರಿಕೆ ಕಾಲ ಲಭಿಸುವದಿಲ್ಲ?

ಯಾರೇ ಒಬ್ಬ ಸರ್ಕಾರಿ ನೌಕರನನ್ನು ಯಾವುದೇ ಒಂದು ವಿಶೇಷ ಕರ್ತವ್ಯಕ್ಕೆ ತಾತ್ಕಾಲಿಕವಾಗಿ

ನಿಯೋಜಿಸಿದಾಗ ಮತ್ತು ಆತನ ಸ್ವಂತ ಕೋರಿಕೆಯ ಮೇಲೆ ವರ್ಗಾವಣೆಯಾದಾಗ ಆತನಿಗೆ ಆ

ಸ್ಥಳವನ್ನು ಹೋಗಿ ತಲುಪಲು ಬೇಕಾಗುವ ಪ್ರಯಾಣದ ಅವಧಿಯನ್ನು ಬಿಟ್ಟು ಆತನಿಗೆ ಯಾವುದೇ ಸೇರಿಕೆ ಕಾಲ ಲಭಿಸುವುವುದಿಲ್ಲ. ವಹಿಸಿಕೊಟ್ಟಿದ್ದರೆ, ಆತನು ತನ್ನ ಮುಂದಿನ ಕರ್ತವ್ಯದ ಕಾರ್ಯಾಭಾರವನ್ನು ಮುಂದಿನ ಕೆಲಸದ ದಿನದ ಪೂರ್ವಾಹ್ನದಲ್ಲಿಯೇ ತನ್ನ ಕರ್ತವ್ಯದ ಚಾರ್ಜನ್ನು ತೆಗೆದುಕೊಳ್ಳತಕ್ಕದ್ದು.

5.ಪೂರ್ವಾಹ್ನವೆಂದರೆ ಎಷ್ಟು ಗಂಟೆ?

12 ಗಂಟೆಯೊಳಗಿನ ಸಮಯವನ್ನು ಪೂರ್ವಾಹ್ನವೆಂದು ಕರೆಯುವರು.

6.ಯಾವುದೇ ಒಬ್ಬ ಸರ್ಕಾರಿ ನೌಕರನಿಗೆ ಸರ್ಕಾರದ ಹಿತಾಸಕ್ತಿಯಲ್ಲಿ ಅವನ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳ/ನಿವಾಸ ಬದಲಾವಣೆಯಾಗುವುಂತೆ ವರ್ಗಾವಣೆಯಾದಾಗ ಆತನಿಗೆ ಮುಂದಿನ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಲಭಿಸುವ ಸೇರಿಕೆ ಕಾಲಾವಧಿ ಎಷ್ಟು ತಿಳಿಸಿ?

ಯಾವುದೇ ಒಬ್ಬ ಸರ್ಕಾರಿ ನೌಕರನಿಗೆ ವರ್ಗಾವಣೆಯಿಂದ ಅವನ ಸ್ಥಳ/ನಿವಾಸ ಬದಲಾವಣೆಯಾದಾಗ ಆತನಿಗೆ ಮುಂದಿನ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಲಭಿಸುವ ಸೇರಿಕೆ ಕಾಲಾವಧಿ ಈ ಕೆಳಕಂಡಂತೆ ಇದೆ.

7.ಯಾವುದೇ ಒಬ್ಬ ಸರ್ಕಾರಿ ನೌಕರನಿಗೆ ಸರ್ಕಾರದ ಹಿತಾಸಕ್ತಿಯಲ್ಲಿ ಅವನ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳ/ನಿವಾಸ ಬದಲಾವಣೆಯಾಗುವುಂತೆ ವರ್ಗಾವಣೆಯಾದಾಗ ಆತನಿಗೆ ಮುಂದಿನ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಲಭಿಸುವ ಸೇರಿಕೆ ಕಾಲಾವಧಿ ಯಾವಾಗಿನಿಂದ ಪ್ರಾರಂಭವಾಗುತ್ತದೆ ತಿಳಿಸಿ?

ಯಾವುದೇ ಒಬ್ಬ ಸರ್ಕಾರಿ ನೌಕರನಿಗೆ ಸರ್ಕಾರದ ಹಿತಾಸಕ್ತಿಯಲ್ಲಿ ಅವನ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳ/ನಿವಾಸ ಬದಲಾವಣೆಯಾಗುವುಂತೆ ವರ್ಗಾವಣೆಯಾದಾಗ ಸೇರಿಕೆ ಕಾಲವು ಈ ಕೆಳಕಂಡಂತೆ ಪ್ರಾರಂಭವಾಗುತ್ತದೆ.

1.ಆತನು ತನ್ನ ಕರ್ತವ್ಯದ ಪ್ರಭಾರವನ್ನು ಪೂರ್ವಾಹ್ನದಲ್ಲಿ ವಹಿಸಿಕೊಟ್ಟಿದ್ದರೆ ಹಳೆಯ ಹುದ್ದೆಯ ಪ್ರಭಾರವನ್ನು ತ್ಯಜಿಸಿದ ದಿನದಿಂದ ಪ್ರಾರಂಭವಾಗುತ್ತದೆ. ಆತನು ತನ್ನ ಕರ್ತವ್ಯದ ಪ್ರಭಾರವನ್ನು ಅಪರಾಹ್ನದಲ್ಲಿ ವಹಿಸಿಕೊಟ್ಟಿದ್ದರೆ ಮುಂದಿನ ದಿನದಿಂದ ಸೇರಿಕೆ ಕಾಲವು ಪ್ರಾರಂಭವಾಗುತ್ತದೆ.

8.ಯಾವನೇ ಒಬ್ಬ ಸರ್ಕಾರಿ ನೌಕರನು ವರ್ಗಾವಣೆಗೊಂಡು, ಸೇರಿಕೆ ಕಾಲವಧಿಯಲ್ಲಿದ್ದಾಗ, ಆತನನ್ನು ಮೊದಲು ವರ್ಗಾವಣೆಗೊಳಿಸಿದ ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವರ್ಗಾಯಿಸಿದಾಗ, ಆತನಿಗೆ ಲಭ್ಯವಾಗುವ ಸೇರಿಕೆ ಕಾಲವನ್ನು ತಿಳಿಸಿ.

ಆತನು ಪರಿಷ್ಕೃತ ಆದೇಶವನ್ನು ಪಡೆಯುವುದಕ್ಕಿಂತ ಮುಂಚೆ ಬಳಸಿಕೊಂಡಿದ್ದ ಸೇರಿಕೆ ಕಾಲವನ್ನು ಬಿಟ್ಟು ಆತನು ಹೊಸದಾಗಿ ಪರಿಷ್ಕೃತ ಆದೇಶವನ್ನು ಪಡೆದ ದಿನಾಂಕದಿಂದ ಹೊಸ ಸೇರಿಕೆ ಕಾಲವು ಬಳಸಿಕೊಳ್ಳಲು ಹಕ್ಕುಳ್ಳವನಾಗಿರುತ್ತಾನೆ.

9.ಯಾವನೇ ಒಬ್ಬ ಸರ್ಕಾರಿ ನೌಕರನು ವರ್ಗಾವಣೆಗೊಂಡು ಸೇರಿಕೆ ಕಾಲವಧಿಯಲ್ಲಿದ್ದಾಗ.ಆತನನ್ನು ಮೊದಲು ವರ್ಗಾವಣೆಗೊಳಿಸಿದ ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವರ್ಗಾಯಿಸಿದಾಗ,ಆತನಿಗೆ ಲಭ್ಯವಾಗುವ ಸೇರಿಕೆ ಕಾಲ ಯಾವತ್ತಿನಿಂದ ಅಥವಾ ಎಲ್ಲಿಂದ ಪ್ರಾರಂಭವಾಗುತ್ತದೆ ತಿಳಿಸಿ.

ಯಾವನೇ ఒబ్బ ನೌಕರನು ವರ್ಗಾವಣೆಗೊಂಡು ಸೇರಿಕೆ ಕಾಲವಧಿಯಲ್ಲಿದ್ದಾಗ,ಆತನನ್ನು ಮೊದಲು ವರ್ಗಾವಣೆಗೊಳಿಸಿದ ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವರ್ಗಾಯಿಸಿದಾಗ, ಆತನು ಪರಿಷ್ಕೃತ ಆದೇಶವನ್ನು ಸ್ವೀಕರಿಸಿದ ಸ್ಥಳದಿಂದಲೇ ಆತನಿಗೆ ಸೇರಿಕೆ ಕಾಲವು ಪ್ರಾರಂಭವಾಗುತ್ತದೆ

10.ಯಾವನೇ ಒಬ್ಬ ಸರ್ಕಾರಿ ನೌಕರನನ್ನು ಅಮಾನತ್ತಿನಿಂದ ಬಿಡುಗಡೆಗೊಳಿಸಿ ಅಮಾನತ್ತಿಗೆ ಮುಂಚೆ ಅಥವಾ ಅಮಾನತ್ತಿನ ಮುಂಚಿನ ರಜೆಯ ನಿಕಟಪೂರ್ವದಲ್ಲಿ ಕೆಲಸ ಮಾಡುತ್ತಿದ್ದ ಸ್ಥಳದಲ್ಲಿಯೇ ಪುನರ ನೇಮಿಸಿದಾಗ ಆತನಿಗೆ ಸೇರಿಕೆ ಕಾಲವು ಲಭ್ಯವಾಗುತ್ತದೆಯೇ? ಇಂತಹ ಸಂದರ್ಭದಲ್ಲಿ ಯಾವುದೇ ಸೇರಿಕೆ ಕಾಲವು ಲಭ್ಯವಾಗುವುದಿಲ್ಲ.

11. ಯಾವನೇ ಒಬ್ಬ ಸರ್ಕಾರಿ ನೌಕರನನ್ನು ಅಮಾನತ್ತಿನಿಂದ ಬಿಡುಗಡೆಗೊಳಿಸಿ ಅಮಾನತ್ತಿಗೆ ಮುಂಚೆ ಅಥವಾ ಅಮಾನತ್ತಿನ ಮುಂಚಿನ ರಜೆಯ ನಿಕಟಪೂರ್ವದಲ್ಲಿ ಕೆಲಸ ಮಾಡುತ್ತಿದ್ದ ಸ್ಥಳವನ್ನು ಬಿಟ್ಟು ಬೇರೆ ಸ್ಥಳಕ್ಕೆ ನೇಮಿಸಿದಾಗ ಆತನಿಗೆ ಸೇರಿಕೆ ಕಾಲವು ಲಭ್ಯವಾಗುತ್ತದೆಯೇ? ಇಂತಹ ಸಂದರ್ಭದಲ್ಲಿ ಸೇರಿಕೆ ಕಾಲವು ಲಭ್ಯವಾಗುತ್ತದೆ. ಅಮಾನತ್ತಿನಿಂದ ಬಿಡುಗಡೆಗೊಳಿಸಿ ಪುನರ ನೇಮಕ ಮಾಡಿದ ಆದೇಶ ಸ್ವೀಕರಿಸಿದ ದಿನಾಂಕದ ನಂತರದ ದಿನದಿಂದ ಸೇರಿಕೆ ಕಾಲವು ಲಭ್ಯವಾಗುತ್ತದೆ.

12.ಯಾವನೇ ಒಬ್ಬ ಸರ್ಕಾರಿ ನೌಕರನನ್ನು ಅಮಾನತ್ತಿನಿಂದ ಬಿಡುಗಡೆಗೊಳಿಸಿ ಅಮಾನತ್ತಿನಲ್ಲಿದ್ದ ಅವಧಿಯಲ್ಲಿ ವಾಸಮಾಡಲು ಅನುಮತಿ ನೀಡಲಾಗಿದ್ದ ಸ್ಥಳವನ್ನು ಬಿಟ್ಟು ಬೇರೆ ಸ್ಥಳಕ್ಕೆ ನೇಮಕ ಮಾಡಿದಾಗ ಆತನಿಗೆ ಸೇರಿಕೆ ಕಾಲವು ಲಭ್ಯವಾಗುತ್ತದೆಯೇ? ಇಂತಹ ಸಂದರ್ಭದಲ್ಲಿ ಆತನಿಗೆ ಸೇರಿಕೆ ಕಾಲವು ಲಭ್ಯವಾಗುತ್ತದೆ.

ಗುರುವಾರ, ಆಗಸ್ಟ್ 29, 2024

NPS

ರಾಷ್ಟ್ರೀಯ ಪಿಂಚಣಿ ಯೋಜನೆ ಅಥವಾ ಎನ್‌ಪಿಎಸ್‌ (National Pension Scheme -NPS) ಮಧ್ಯಮ ವರ್ಗದ ಹೂಡಿಕೆದಾರರ ನೆಚ್ಚಿನ ಹೂಡಿಕೆ ಆಯ್ಕೆಯಾಗಿದೆ. ನಿವೃತ್ತಿ ನಂತರವೂ ಆದಾಯ ಗಳಿಸಲು ಇದೊಂದು ಉತ್ತಮ ಆಯ್ಕೆ. ಎನ್‌ಪಿಎಸ್‌ನಲ್ಲಿ ಹೂಡಿಕೆ ಮಾಡುವ ಮೂಲಕ ತೆರಿಗೆ ಪ್ರಯೋಜನಗಳ ಜೊತೆಗೆ ನಿವೃತ್ತಿ ಬದುಕಿಗಾಗಿ ಒಂದಷ್ಟು ಹಣಕಾಸಿನ ಭರವಸೆ ಉಳಿಸುವ ಅವಕಾಶವಿದೆ.

ನಿವೃತ್ತಿ ನಂತರವೂ ಪ್ರತಿ ತಿಂಗಳು 1 ಲಕ್ಷ ರೂಪಾಯಿ ಮಾಸಾಶನ ಬರುವಂತೆ ಮಾಡಬಹುದು. ಆನ್ಯುಟಿ ಸ್ಕೀಮ್‌ ಅಥವಾ ವಾರ್ಷಿಕ ಯೋಜನೆ ಖರೀದಿಸುವ ಮೂಲಕ ಸುಮಾರು 5 ಕೋಟಿ ರೂಪಾಯಿಗಳ ನಿವೃತ್ತಿ ಕಾರ್ಪಸ್ ಸಂಗ್ರಹಿಸಬಹುದು. ಅಲ್ಲದೆ 1 ಲಕ್ಷ ರೂಪಾಯಿಗಳ ಮಾಸಿಕ ಪಿಂಚಣಿ ಪಡೆದುಕೊಳ್ಳಬಹುದು. ಇದು ಹೇಗೆ ಎಂಬುದನ್ನು ತಿಳಿಯೋಣ.

ಪ್ರತಿ ತಿಂಗಳು 1 ಲಕ್ಷ ರೂಪಾಯಿ ಪಿಂಚಣಿ ಪಡೆಯುವಂತಾಗಲು ಎನ್‌ಪಿಎಸ್‌ನಲ್ಲಿ ಸ್ಥಿರವಾದ ಹೂಡಿಕೆ ಮಾಡುತ್ತಾ ಬರಬೇಕು. 27ನೇ ವಯಸ್ಸಿನಲ್ಲಿ ಹೂಡಿಕೆ ಆರಂಭಿಸಿ 60 ವರ್ಷದವರೆಗೂ ಮುಂದುವರೆಸಿಕೊಂಡು ಹೋಗಬೇಕು. ಆರ್ಥಿಕ ಶಿಸ್ತನ್ನು ಪಾಲಿಸುವ ಮೂಲಕ ನಿವೃತ್ತಿ ಬದುಕಿನಲ್ಲಿ ನಿರಂತರ ಆದಾಯ ಗಳಿಕೆ ಮಾಡಬಹುದು.

ಎನ್‌ಪಿಎಸ್‌ ವಆನ್ಯುಟಿ ಸ್ಕೀಮ್‌ ಲೆಕ್ಕ ಹಾಕುವುದು ಹೇಗೆ ?

ನಿವೃತ್ತಿಯ ವಯಸ್ಸು ಅಥವಾ 60 ವರ್ಷಗಳಾದ ನಂತರ, ಎನ್‌ಪಿಎಸ್‌ನಲ್ಲಿ ಸಂಗ್ರಹವಾದ ಕಾರ್ಪಸ್‌ನ ಕನಿಷ್ಠ 40 ಶೇಕಡವನ್ನು ವರ್ಷಾಶನವಾಗಿ (annuity) ಪರಿವರ್ತಿಸಬೇಕು. ಈ ವರ್ಷಾಶನವನ್ನು ಚಂದಾದಾರರು ತಮ್ಮ ಜೀವನದ ಉಳಿದ ಅವಧಿಗೆ ಪಿಂಚಣಿ ರೂಪದಲಲ್ಲಿ ನಿಯಮಿತವಾಗಿ ಪಡೆಯಬಹುದು. ಉಳಿದ 60 ಶೇ ಕಾರ್ಪಸ್ ಅನ್ನು ಚಂದಾದಾರರು ಒಂದು ದೊಡ್ಡ ಮೊತ್ತವಾಗಿ ಹಿಂಪಡೆಯಬಹುದು.

5 ಕೋಟಿ ರೂಪಾಯಿ ಕಾರ್ಪಸ್ ಮತ್ತು 1 ಲಕ್ಷ ಮಾಸಿಕ ಪಿಂಚಣಿ ಲೆಕ್ಕಾಚಾರ ನೋಡೋಣ

ಹೂಡಿಕೆ ಆರಂಭಿಸುವ ವಯಸ್ಸು: 27 ವರ್ಷಗಳು
ಹೂಡಿಕೆ ಮಾಡಬೇಕಾದ ಒಟ್ಟು ವರ್ಷಗಳು (Years of contribution): 33 ವರ್ಷಗಳು (60 ವರ್ಷ ವಯಸ್ಸಿನವರೆಗೆ)
ವಾರ್ಷಿಕ ಹೂಡಿಕೆ: 2,00,000 ರೂ
ನಿರೀಕ್ಷಿತ ಆದಾಯದ ಪ್ರಮಾಣ (rate of return): ವರ್ಷಕ್ಕೆ 10 ಶೇ
ಆನ್ಯುಟಿ ಖರೀದಿ (ಪಿಂಚಣಿಗೆ): ಸಂಗ್ರಹವಾದ ಕಾರ್ಪಸ್‌ನ 40 ಶೇ
ನಿರೀಕ್ಷಿತ ವರ್ಷಾಶನ ದರ: ವರ್ಷಕ್ಕೆ 6 ಶೇ
ಒಟ್ಟು ಹೂಡಿಕೆ(ವರ್ಷಕ್ಕೆ 2 ಲಕ್ಷದಂತೆ 33 ವರ್ಷಗಳಿಗೆ -65,99,736 ರೂ.
ಸಂಚಿತ ಕಾರ್ಪಸ್:

ಪ್ರತಿ ವರ್ಷಕ್ಕೆ 10 ಶೇಕಡದಷ್ಟು ಲಾಭದ ದರವನ್ನು ಬಳಸಿದರೆ, 33 ವರ್ಷಗಳ ನಂತರ ಸಂಗ್ರಹವಾಗುವ ಕಾರ್ಪಸ್ ಸರಿಸುಮಾರು 5,19,15,841 ರೂಪಾಯಿ.

ಒಟ್ಟು ಲಾಭ

ಒಟ್ಟು ಲಾಭ (ಸಂಚಿತ ಕಾರ್ಪಸ್‌ನಿಂದ ಒಟ್ಟು ಹೂಡಿಕೆಯನ್ನು ಕಳೆಯುವುದು)- 5,19,15,841 - 65,99,736 ರೂ = 4,53,16,105 ರೂಪಾಯಿ

ಒಟ್ಟು 33 ವರ್ಷಗಳಲ್ಲಿ ಎನ್‌ಪಿಎಸ್‌ ಕೊಡುಗೆಗಳನ್ನು ಎಚ್ಚರಿಕೆಯಿಂದ ಯೋಜಿಸುವ ಮೂಲಕ, 5 ಕೋಟಿ ರೂಪಾಯಿಗಿಂತಲೂ ಹೆಚ್ಚಿನ ನಿವೃತ್ತಿ ಕಾರ್ಪಸ್‌ ಪಡೆಯಬಹುದು. ಅಂದಾಜು 1 ಲಕ್ಷ ರೂಪಾಯಿ ಮಾಸಿಕ ಪಿಂಚಣಿ ಕೂಡಾ ಪಡೆಯಲು ಸಾಧ್ಯ.

ವರ್ಷಾಶನ ಖರೀದಿ: 60ನೇ ವಯಸ್ಸಿನಲ್ಲಿ, ಸಂಗ್ರಹವಾದ ಒಟ್ಟು ಕಾರ್ಪಸ್‌ನ 40 ಪ್ರತಿಶತವನ್ನು ವರ್ಷಾಶನವಾಗಿ ಪರಿವರ್ತಿಸಬೇಕು. ಇದನ್ನು ಪಿಂಚಣಿ ರೂಪದಲ್ಲಿ ಪ್ರತಿ ತಿಂಗಳು ಪಡೆಯಬಹುದು.

ವರ್ಷಾಶನ ಕಾರ್ಪಸ್ = 5,19,15,841 ರೂಪಾಯಿಯಲ್ಲಿ 40 ಶೇ ಎಂದರೆ 2,07,66,336 ರೂಪಾಯಿ ಆಗುತ್ತದೆ. ಉಳಿದ ಶೇ.60ರಷ್ಟು ಮೊತ್ತವನ್ನು ದೊಡ್ಡ ಮೊತ್ತವಾಗಿ (lump sum) ಹಿಂಪಡೆಯಬಹುದು.

ಮಾಸಿಕ ಪಿಂಚಣಿ

6 ಶೇ ವರ್ಷಾಶನ ದರವನ್ನು ಊಹಿಸಿದರೆ, ಮಾಸಿಕ ಪಿಂಚಣಿಯನ್ನು ಈ ಕೆಳಗಿನಂತೆ ಲೆಕ್ಕಹಾಕಬಹುದು.

ವಾರ್ಷಿಕ ಪಿಂಚಣಿ = ರೂ 2,07,66,336 ಗುಣಿಸು 6ಶೇ = ರೂ 12,45,980.

ಮಾಸಿಕ ಪಿಂಚಣಿ = ರೂ 12,45,980 ಭಾಗಿಸು 12 = ರೂ 1,03,832.

Tax-free Income Sources: ಈ ರೀತಿ ಹಣ ಗಳಿಸಿದ್ರೆ ಟ್ಯಾಕ್ಸ್ ಕಟ್ಬೇಕಾಗಿಲ್ಲ, ತೆರಿಗೆ ಮುಕ್ತ ಆದಾಯದ ಮೂಲಗಳಿವು

ಕೆಲ ಆದಾಯಗಳು ತೆರಿಗೆ ಮುಕ್ತವಾಗಿವೆ. ತೆರಿಗೆ ಪಾವತಿಗೆ ಮುನ್ನ ಯಾವೆಲ್ಲ ಆದಾಯ, ತೆರಿಗೆ ಮುಕ್ತವಾಗಿದೆ ಎಂಬುದನ್ನು ತಿಳಿದುಕೊಳ್ಳಿ. ಯಾವ ಆದಾಯ ತೆರಿಗೆ ಮುಕ್ತ? : ಕೃಷಿ ...