ಹೈದರಾಬಾದ್ ಕರ್ನಾಟಕ ಪ್ರದೇಶ

ಹೈದರಾಬಾದ್ ಕರ್ನಾಟಕ ಪ್ರದೇಶ
Hyderabad Karnataka

ಶನಿವಾರ, ಜನವರಿ 31, 2026

festival advance ಹಬ್ಬದ ಮುಂಗಡ

ಈ ಆದೇಶ ರಾಜ್ಯ ಸರ್ಕಾರಿ ನೌಕರರು ಹಬ್ಬದ ಮುಂಗಡ ಪಡೆಯಲು ಅಧಿಸೂಚಿಸಿರುವ ಹಬ್ಬಗಳೊಂದಿಗೆ ಹೆಚ್ಚುವರಿಯಾಗಿ ಕೆಲವು ಹಬ್ಬಗಳನ್ನು ಸೇರ್ಪಡೆಗೊಳಿಸುವ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ.

ಪ್ರಸ್ತಾವನೆ: ಸರ್ಕಾರದ ಆದೇಶಗಳ ಅನುಸಾರ ಹಬ್ಬಗಳಿಗಾಗಿ ಮುಂಗಡ ಹಣವನ್ನು ರಾಜ್ಯ ಸರ್ಕಾರಿ ನೌಕರರಿಗೆ ಮಂಜೂರು ಮಾಡಲು ನಿಗದಿಪಡಿಸಿದ ಅರ್ಜಿಯಲ್ಲಿ ಈ ಕೆಳಕಂಡ ಹಬ್ಬಗಳಿಗೆ ಮಾತ್ರ ಹಬ್ಬದ ಮುಂಗಡ ಹಣವನ್ನು ಮಂಜೂರು ಮಾಡಲಾಗುತ್ತಿದೆ.

  • ಸೌರಮಾನ/ ಚಂದ್ರಮಾನ ಯುಗಾದಿ
  • ಮಕರ ಸಂಕ್ರಾಂತಿ
  • ದೀಪಾವಳಿ
  • ಗಣೇಶ ಚತುರ್ಥಿ
  • ರಂಜಾನ್
  • ಬಕ್ರೀದ್
  • ಈದ್-ಎ-ಮಿಲಾದ್
  • ಈಸ್ಟರ್
  • ಗಣತಂತ್ರ ದಿನ
  • ಸ್ವಾತಂತ್ರ್ಯ ದಿನ
  • ದಸರಾ

ಪ್ರಸ್ತುತ ರಾಜ್ಯ ಸರ್ಕಾರಿ ನೌಕರರು ಹಬ್ಬದ ಮುಂಗಡವನ್ನು ಪಡೆಯಲು ಅಧಿಸೂಚಿಸಿರುವ ಹಬ್ಬಗಳೊಂದಿಗೆ ಈ ಕೆಳಕಂಡ ಹಬ್ಬಗಳನ್ನು ಹೆಚ್ಚುವರಿಯಾಗಿ ಸೇರ್ಪಡೆಗೊಳಿಸಲು ಸರ್ಕಾರವು ನಿರ್ಣಯಿಸಿರುತ್ತದೆ.

  • ಮಹಾ ಶಿವರಾತ್ರಿ
  • ಶ್ರೀರಾಮನವಮಿ
  • ವರಮಹಾಲಕ್ಮೀ ವ್ರತ
  • ಮಹಾಲಯ ಅಮಾವಾಸ್ಯೆ
  • ನಾಗರ ಪಂಚಮಿ
  • ಕನ್ನಡ ರಾಜ್ಯೋತ್ಸವ
  • ಹೋಳಿ ಹಬ್ಬ
  • ಬಸವ ಜಯಂತಿ

ಆರ್ಥಿಕ ಇಲಾಖೆಯು ಈ ಪ್ರಸ್ತಾವನೆಗೆ ಅನುಮೋದನೆ ನೀಡಿರುತ್ತದೆ. ಆದ್ದರಿಂದ ಈ ಕುರಿತು ಆದೇಶವನ್ನು ಹೊರಡಿಸಲಾಗಿದೆ.

ಆದೇಶದ ವಿವರ: ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ ರಾಜ್ಯ ಸರ್ಕಾರಿ ನೌಕರರು ಹಬ್ಬದ ಮುಂಗಡವನ್ನು ಪಡೆಯಲು ಈಗಾಗಲೇ ಅಧಿಸೂಚಿಸಿರುವ ಹಬ್ಬಗಳೊಂದಿಗೆ ಈ ಕೆಳಕಂಡ ಹಬ್ಬಗಳನ್ನು ಹೆಚ್ಚುವರಿಯಾಗಿ ಸೇರ್ಪಡೆಗೊಳಿಸಿ ಆದೇಶಿಸಲಾಗಿದೆ.

  • ಮಹಾಶಿವರಾತ್ರಿ
  • ಶ್ರೀರಾಮನವಮಿ
  • ವರಮಹಾಲಕ್ಮೀ ವ್ರತ
  • ಮಹಾಲಯ ಅಮಾವಾಸ್ಯೆ
  • ನಾಗರ ಪಂಚಮಿ
  • ಕನ್ನಡ ರಾಜ್ಯೋತ್ಸವ
  • ಹೋಳಿ ಹಬ್ಬ
  • ಬಸವ ಜಯಂತಿ

ಕರ್ನಾಟಕ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ. ಸುಧಾಕರ್ ರಾವ್ ಅಧ್ಯಕ್ಷತೆಯಲ್ಲಿ ಕರ್ನಾಟಕ ಸರ್ಕಾರ ರಚನೆ ಮಾಡಿದ್ದ 7ನೇ ವೇತನ ಆಯೋಗ ತನ್ನ ವರದಿಯಲ್ಲಿ ಹಬ್ಬದ ಮುಂಗಡದ ಕುರಿತು ಪ್ರಸ್ತಾಪವನ್ನು ಮಾಡಿತ್ತು.

ವರದಿಯಲ್ಲಿ ಸರ್ಕಾರವು ಇತ್ತೀಚಿಗೆ ಹಬ್ಬದ ಮುಂಗಡವನ್ನು 10,000 ರೂ.ನಿಂದ 25,000 ರೂ.ಗಳಿಗೆ ಹೆಚ್ಚಿಸಿರುವುದನ್ನು ಆಯೋಗವು ಗಮನಿಸಿದೆ. ಈ ಮುಂಗಡವು ಬಡ್ಡಿ ರಹಿತವಾಗಿದ್ದು, 10 ತಿಂಗಳ ಕಂತುಗಳಲ್ಲಿ ಮರು ಪಾವತಿಸಬೇಕಾಗುತ್ತದೆ.

ಈ ಮುಂಗಡವನ್ನು ಇತ್ತೀಚಿಗಷ್ಟೆ ಪರಿಷ್ಕರಿಸಿರುವ ಅಂಶವನ್ನು ಪರಿಗಣಿಸಿ ಇದರಲ್ಲಿ ಯಾವುದೇ ಬದಲಾವಣೆಯ ಅಗತ್ಯವಿಲ್ಲವೆಂದು ಆಯೋಗವು ಅಭಿಪ್ರಾಯಪಡುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿತ್ತು.

ಭಾನುವಾರ, ಜನವರಿ 11, 2026

EPFO

ಅದೇ ನಿರೀಕ್ಷೆ, ಕುತೂಹಲಗಳು ಈ ಬಾರಿಯ ಬಜೆಟ್‌ನಲ್ಲೂ ಇದೆ. ಸಂಬಳ ಪಡೆಯುವ ಹಲವು ಉದ್ಯೋಗಿಗಳಿಗೆ, ಉದ್ಯೋಗಿಗಳ ಭವಿಷ್ಯ ನಿಧಿ (EPF) ನಿವೃತ್ತಿ ಉಳಿತಾಯಕ್ಕೆ ಬಹಳಷ್ಟು ಸಹಕಾರಿಯಾಗಿದೆ. ಉದ್ಯೋಗಿ ಮತ್ತು ಉದ್ಯೋಗದಾತ (ಕಂಪನಿ) ಇಬ್ಬರೂ ತಮ್ಮ ಸಂಬಳದ ಒಂದು ಭಾಗವನ್ನು ಈ ನಿಧಿಗೆ ಜಮಾ ಮಾಡುತ್ತಾರೆ, ಇದಕ್ಕೆ ವಾರ್ಷಿಕ ಬಡ್ಡಿ ಕೂಡಾ ಸಿಗುತ್ತದೆ. ಹಿಂದೆ ಸಂಪೂರ್ಣ ಬಡ್ಡಿ ತೆರಿಗೆ-ಮುಕ್ತವಾಗಿತ್ತು. ಆದರೆ, 2021ರ ಬಜೆಟ್‌ನಲ್ಲಿ ನಿಯಮಗಳು ಬದಲಾದ ನಂತರ ಹಲವರಲ್ಲಿ ಈ ಬಗ್ಗೆ ಗೊಂದಲ ಸೃಷ್ಟಿಯಾಗಿದೆ. ಅಂದರೆ, ಬಹುತೇಕರು EPF ಮೇಲಿನ ಎಲ್ಲಾ ಬಡ್ಡಿ ತೆರಿಗೆ-ಮುಕ್ತ ಎಂದು ಈಗಲೂ ಅನೇಕರು ತಪ್ಪಾಗಿ ಭಾವಿಸಿದ್ದಾರೆ, ಆದರೆ ವಾಸ್ತವ ಹಾಗಿಲ್ಲ. ಅದರಲ್ಲೂ ಒಂದು ಟ್ವಿಸ್ಟ್‌ ಇದೆ.

EPF ಆದಾಯ ಸಂಪೂರ್ಣವಾಗಿ ತೆರಿಗೆ-ಮುಕ್ತ ಎಂಬುದು ಕಲ್ಪನೆ ತಪ್ಪಾಗಿದೆ. ಏಕೆಂದರೆ ಅದಕ್ಕೆ ಕಾರಣವೂಇದೆ. ಕನಿಷ್ಠ ಎರಡು ಸಂದರ್ಭಗಳಲ್ಲಿ EPF ಸದಸ್ಯರು ಗಳಿಸಿದ ಬಡ್ಡಿಯ ಮೇಲೆ ತೆರಿಗೆ ಪಾವತಿಸಬೇಕಾಗುತ್ತದೆ. ಮೊದಲನೆಯದಾಗಿ, ವಾರ್ಷಿಕ ಕೊಡುಗೆ ₹2.5 ಲಕ್ಷವನ್ನು ಮೀರಿದರೆ, ಈ ಮಿತಿಯನ್ನು ಮೀರಿದ ಯಾವುದೇ ಕೊಡುಗೆಯಿಂದ ಗಳಿಸಿದ ಬಡ್ಡಿಯು ತೆರಿಗೆಗೆ ಒಳಪಡುತ್ತದೆ.

ಎರಡನೆಯದಾಗಿ, ನಿವೃತ್ತಿಯ ನಂತರ ನಿಮ್ಮ ಭವಿಷ್ಯ ನಿಧಿ ಖಾತೆಯಲ್ಲಿನ ಬಾಕಿ ಮೊತ್ತದ ಮೇಲೆ ಬಡ್ಡಿ ಜಮಾ ಆದಾಗ ತೆರಿಗೆ ಅನ್ವಯಿಸುತ್ತದೆ. ಹಲವು ಸದಸ್ಯರು ನಿವೃತ್ತಿಯಾದ ತಕ್ಷಣ ತಮ್ಮ ಸಂಪೂರ್ಣ EPF ಬಾಕಿಯನ್ನು ಹಿಂಪಡೆಯುವುದಿಲ್ಲ. ನಿವೃತ್ತಿಯ ನಂತರ EPF ಬಾಕಿ ಹಣದ ಮೇಲೆ ತೆರಿಗೆ ಇಲ್ಲದಿರಬಹುದು, ಆದರೆ ಆ ಬಾಕಿ ಹಣದ ಮೇಲೆ ಬರುವ ಬಡ್ಡಿ ತೆರಿಗೆಗೆ ಒಳಪಡುತ್ತದೆ.

ಹಣಕಾಸು ತಜ್ಞರ ಬೇಡಿಕೆಯೇನು?

2026ರ ಕೇಂದ್ರ ಬಜೆಟ್ ಸಮೀಪಿಸುತ್ತಿದ್ದಂತೆ, ಬಾಂಬೆ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (BCCI) ಯ ತೆರಿಗೆ ತಜ್ಞರು ಹಣಕಾಸು ಸಚಿವಾಲಯದಿಂದ ಒಂದು ಪ್ರಮುಖ ಬದಲಾವಣೆಯನ್ನು ನಿರೀಕ್ಷಿಸಿದ್ದಾರೆ. ನಿವೃತ್ತಿಯ ನಂತರ EPF ಖಾತೆಯಲ್ಲಿ ಸಂಗ್ರಹವಾಗುವ ಬಡ್ಡಿಯನ್ನು ತೆರಿಗೆ-ಮುಕ್ತಗೊಳಿಸುವಂತೆ ಸರ್ಕಾರಕ್ಕೆ ಮನವಿಯನ್ನೂ ಮಾಡಿದ್ದಾರೆ.

ಪ್ರಸ್ತುತ ನಿಯಮಗಳ ಪ್ರಕಾರ, ನಿವೃತ್ತಿಯ ನಂತರ EPF ಬಾಕಿ ಹಣದ ಮೇಲೆ ಗಳಿಸಿದ ಬಡ್ಡಿಯು ತೆರಿಗೆಗೆ ಒಳಪಡುತ್ತದೆ. EPFO ನಿಯಮಗಳ ಪ್ರಕಾರ, ನಿವೃತ್ತಿಯಲ್ಲಿ ಮಾನ್ಯತೆ ಪಡೆದ ಭವಿಷ್ಯ ನಿಧಿಯ ಜಮಾ ಬಾಕಿಯು ವಿಭಾಗ 10(12) ರ ಅಡಿಯಲ್ಲಿ ತೆರಿಗೆ-ಮುಕ್ತವಾಗಿದೆ.

ನಿವೃತ್ತಿಯ ನಂತರ ಮೂರು ವರ್ಷಗಳವರೆಗೆ ನಿಮ್ಮ EPF ಖಾತೆಯಲ್ಲಿ ಹಣವನ್ನು ಇಡಲು ಅನುಮತಿಯಿದೆ. ಆದರೆ, ಈ ಅವಧಿಯಲ್ಲಿ EPF ಬಾಕಿ ಹಣದ ಮೇಲೆ ಗಳಿಸಿದ ಬಡ್ಡಿಯು ಸಾಮಾನ್ಯ ಆದಾಯದಂತೆ ತೆರಿಗೆಗೆ ಒಳಪಡುತ್ತದೆ. ಆದ್ದರಿಂದ ಈಗ ಇರುವ ಪ್ರಶ್ನೆ ನಿವೃತ್ತಿ ನಂತರ ಇಪಿಎಫ್‌ ಖಾತೆಗೆ ಬರುವ ಬಡ್ಡಿಯ ಮೇಲೆ ತೆರಿಗೆ ಅನ್ವಯವಾಗುತ್ತಾ? ಅಥವಾ ಬಜೆಟ್‌ನಲ್ಲಿ ತೆರಿಗೆ ಮುಕ್ತ ಮಾಡುತ್ತಾ ಎಂಬುದು.

(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited ನ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).



ಶುಕ್ರವಾರ, ಜನವರಿ 9, 2026

HRMS 2.0

*ಎಲ್ಲ‌ ಸರ್ಕಾರಿ ನೌಕರರಿಗೆ ಅತ್ಯುಪಯುಕ್ತ ಮಾಹಿತಿ*

*HRMS 2.0 APPLICATION*

🙏💐 *ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ತಮ್ಮ ಎಲ್ಲಾ ಸೇವಾ ಮಾಹಿತಿ ಪರೀಕ್ಷಿಸಲು ಅನುಕೂಲವಾಗುವಂತೆ HRMS 2.0 Application ಬಿಡುಗಡೆ ಮಾಡಲಾಗಿದೆ.*

*https://www.ksge.in/2026/01/hrms-20-application-has-been-released.html*

👉 *ಎಲ್ಲ ನೌಕರರು ಈ ಕೆಳಗಿನ ಲಿಂಕ್ ಉಪಯೋಗಿಸಿ ‌APP ಡೌನ್‌ಲೋಡ್ ಮಾಡಿಕೊಳ್ಳಿ👇*

*https://www.ksge.in/2026/01/hrms-20-application-has-been-released.html*

👉 *Register ಮಾಡಕೊಳ್ಳಬೇಕು.*
👉 *ನಂತರ KGID ನಂಬರ್ ದಾಖಲಿಸಿ*
👉 *Password Create ಮಾಡಿಕೊಳ್ಳಿ*
👉 *ನಂತರ Login ಮಾಡಿಕೊಂಡು ತಮ್ಮ ಸೇವಾ ವಿವರ ಪರೀಕ್ಷಿಸಿ*👇

*https://www.ksge.in/2026/01/hrms-20-application-has-been-released.html*

🙏💐 *PLZ SHARE*💐🙏

ಸೋಮವಾರ, ಜನವರಿ 5, 2026

ಎಲ್ಲ‌ ಸರ್ಕಾರಿ ನೌಕರರಿಗೆ ಅತ್ಯುಪಯುಕ್ತ ಮಾಹಿತಿ*

*ಎಲ್ಲ‌ ಸರ್ಕಾರಿ ನೌಕರರಿಗೆ ಅತ್ಯುಪಯುಕ್ತ ಮಾಹಿತಿ*

*HRMS 2.0 APPLICATION*

🙏💐 *ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ತಮ್ಮ ಎಲ್ಲಾ ಸೇವಾ ಮಾಹಿತಿ ಪರೀಕ್ಷಿಸಲು ಅನುಕೂಲವಾಗುವಂತೆ HRMS 2.0 Application ಬಿಡುಗಡೆ ಮಾಡಲಾಗಿದೆ.*

*https://www.ksge.in/2026/01/hrms-20-application-has-been-released.html*

👉 *ಎಲ್ಲ ನೌಕರರು ಈ ಕೆಳಗಿನ ಲಿಂಕ್ ಉಪಯೋಗಿಸಿ ‌APP ಡೌನ್‌ಲೋಡ್ ಮಾಡಿಕೊಳ್ಳಿ👇*

*https://www.ksge.in/2026/01/hrms-20-application-has-been-released.html*

👉 *Register ಮಾಡಕೊಳ್ಳಬೇಕು.*
👉 *ನಂತರ KGID ನಂಬರ್ ದಾಖಲಿಸಿ*
👉 *Password Create ಮಾಡಿಕೊಳ್ಳಿ*
👉 *ನಂತರ Login ಮಾಡಿಕೊಂಡು ತಮ್ಮ ಸೇವಾ ವಿವರ ಪರೀಕ್ಷಿಸಿ*👇

*https://www.ksge.in/2026/01/hrms-20-application-has-been-released.html*

🙏💐 *PLZ SHARE*💐🙏

ಭಾನುವಾರ, ಜನವರಿ 4, 2026

ರಾಜ್ಯ ಸರ್ಕಾರಿ ನೌಕರರೇ' ಗಮನಿಸಿ : `HRMS2.0' ವೇತನಪಟ್ಟಿ ಬದಲಾವಣೆ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ

ರಾಜ್ಯ ಸರ್ಕಾರಿ ನೌಕರರೇ' ಗಮನಿಸಿ : `HRMS2.0' ವೇತನಪಟ್ಟಿ ಬದಲಾವಣೆ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ

HRMS-2.0 ವ್ಯವಸ್ಥೆಯಲ್ಲಿ ಇನಿಶಿಯೇಟರ್ ಮತ್ತು ಅನುಮೋದಕರು ಯಾವ ಪ್ರಕ್ರಿಯೆಯನ್ನು ಕೈಗೊಳ್ಳಬೇಕು ಎಂಬುದನ್ನು ಅರ್ಥಮಾಡಿಕೊಳ್ಳಲು ಈ ಕೆಳಗಿನ ಮಾರ್ಗದರ್ಶಿ ಸಹಾಯ ಮಾಡುತ್ತದೆ, ಮಾರ್ಪಾಡು ಮಾಡಲು ಲಭ್ಯವಿರುವ ವೇತನ ಪಟ್ಟಿಯ ಅಂಶಗಳನ್ನು ಬದಲಾಯಿಸುವ ಅಗತ್ಯವಿದ್ದಾಗ, DDOಗಳು ಮತ್ತು ಬಳಕೆದಾರರು ಇಲ್ಲಿ ಉಲ್ಲೇಖಿಸಲಾದ ಬಳಕೆದಾರರಿಗಾಗಿ ಈ ಮಾರ್ಗದರ್ಶಿಯನ್ನು ಬಳಸುವಂತೆ ವಿನಂತಿಸಲಾಗಿದೆ.

HRMS-2.0 ನಲ್ಲಿನ ವೇತನದಾರರ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಅನುಮೋದಕ ಲಾಗಿನ್‌ನಲ್ಲಿ ಮಾಡಬಹುದಾದ ಬದಲಾವಣೆಗಳು / ಮಾರ್ಪಾಡುಗಳು.

ಲಾಗಿನ್ ಮತ್ತು ನ್ಯಾವಿಗೇಷನ್: HRMS ಪೋರ್ಟಲ್ ಪ್ರವೇಶಿಸಿ: https://hrms2.karnataka.gov.in ಅನುಮೋದಕರು ರುಜುವಾತುಗಳನ್ನು ಬಳಸಿಕೊಂಡು HRMS-2 ಗೆ ಲಾಗಿನ್ ಆಗುತ್ತಾರೆ.

LIC ಸಂಪಾದನೆ:- ವಿಮಾ ಮೆನು → ವಿಮೆ → LIC ಸಂಪಾದನೆ ಉದ್ಯೋಗಿಯನ್ನು ಆಯ್ಕೆ ಮಾಡಿ ಉದ್ಯೋಗಿಯನ್ನು ಸಂಪಾದಿಸಿ LIC ಪಾಲಿಸಿ ಅಂತಿಮ ದಿನಾಂಕ → ಪ್ರೀಮಿಯಂ ಮೊತ್ತ → ಟಿಪ್ಪಣಿಗಳು → ಇನಿಶಿಯೇಟರ್ ಲಾಗಿನ್‌ನಲ್ಲಿ ಡ್ರಾಫ್ಟ್ ಬಿಲ್ ಅನ್ನು ಮರುಪ್ರಕ್ರಿಯೆಗೊಳಿಸಲು ಸಲ್ಲಿಸಿ ವಿರುದ್ಧ ಕ್ರಿಯೆ ಬಟನ್ ಕ್ಲಿಕ್ ಮಾಡಿ.

ಕೆಜಿಐಡಿ ಕಂತುಗಳು ಸಂಪಾದನೆ:- ಸಾಲಗಳು ಮತ್ತು ಮುಂಗಡಗಳು ಮೆನು ಸಾಲಗಳು ಮತ್ತು ಮುಂಗಡಗಳು → ಕೆಜಿಐಡಿ ಸಾಲ ಸಂಪಾದನೆ ಉದ್ಯೋಗಿ ಪಾವತಿಸಿದ ಅಸಲು ಕಂತು/ಪಾವತಿಸಿದ ಬಡ್ಡಿ ಕಂತು ಟಿಪ್ಪಣಿಗಳ ವಿರುದ್ಧ ಕ್ರಿಯೆ ಬಟನ್ ಕ್ಲಿಕ್ ಮಾಡಿ ಮರುಪ್ರಕ್ರಿಯೆ ಕರಡು ಬಿಲ್ ಸಲ್ಲಿಸಿ ಇನಿಶಿಯೇಟರ್ ಲಾಗಿನ್ → (ಪ್ರತಿ ಪಾಲಿಸಿಗೆ ಒಮ್ಮೆ ಮಾತ್ರ ಕೆಜಿಐಡಿ ಕಂತು ಸಂಪಾದನೆ).

GPF ಸಾಲ 3. GPF-ಸಾಲ ಸಂಪಾದನೆ:- ಸಾಲಗಳು ಮತ್ತು ಮುಂಗಡಗಳು → ಮೆನು ಸಾಲಗಳು ಮತ್ತು ಮುಂಗಡಗಳು ಸಂಪಾದನೆ ನೌಕರರ ಒಟ್ಟು ಅಸಲು ಕಂತು ಮತ್ತು ಮೊತ್ತದ ವಿರುದ್ಧ ಕ್ರಿಯೆಯ ಬಟನ್ ಅನ್ನು ಕ್ಲಿಕ್ ಮಾಡಿ ಟಿಪ್ಪಣಿಗಳನ್ನು ಇನಿಶಿಯೇಟರ್ ಲಾಗಿನ್‌ನಲ್ಲಿ ಮರುಪ್ರಕ್ರಿಯೆ ಕರಡು ಬಿಲ್ ಅನ್ನು ಸಲ್ಲಿಸಿ.

ಹಬ್ಬದ ಮುಂಗಡ ಸಂಪಾದನೆ:- ಸಾಲಗಳು ಮತ್ತು ಮುಂಗಡಗಳ ಮೆನು.

ಹಬ್ಬದ ಮುಂಗಡ ಬಿಲ್ ಉದ್ಯೋಗಿಯ ವಿರುದ್ಧ ಕ್ರಮ ಬಟನ್ ಕ್ಲಿಕ್ ಮಾಡಿ → ಟೀಕೆಗಳು ಇನಿಶಿಯೇಟರ್ ಲಾಗಿನ್‌ನಲ್ಲಿ ಮರುಪ್ರಕ್ರಿಯೆ ಕರಡು ಬಿಲ್ ಅನ್ನು ಸಲ್ಲಿಸಿ. ಸಾಲಗಳು ಮತ್ತು ಮುಂಗಡಗಳು → ಪಾವತಿಸಿದ ಕಂತುಗಳ ಸಂಖ್ಯೆ

ಉದ್ಯೋಗಿ ಸ್ಥಾಪನೆ ಬದಲಾವಣೆ:- ಸೇವಾ ನೋಂದಣಿ ಮೆನು ಸೇವಾ ನೋಂದಣಿ ಉದ್ಯೋಗಿ ಸ್ಥಾಪನೆ ಇನಿಶಿಯೇಟರ್ ಲಾಗಿನ್‌ನಲ್ಲಿ ಉದ್ಯೋಗಿ ಸ್ಥಾಪನೆಯ ವಿರುದ್ಧ ಕ್ರಿಯೆ ಬಟನ್ ಕ್ಲಿಕ್ ಮಾಡಿ ಮರುಪ್ರಕ್ರಿಯೆ ಕರಡು ಮಸೂದೆಯನ್ನು ಸಲ್ಲಿಸಿ. ಆಯ್ಕೆಮಾಡಿ.


festival advance ಹಬ್ಬದ ಮುಂಗಡ

ಈ ಆದೇಶ ರಾಜ್ಯ ಸರ್ಕಾರಿ ನೌಕರರು ಹಬ್ಬದ ಮುಂಗಡ ಪಡೆಯಲು ಅಧಿಸೂಚಿಸಿರುವ ಹಬ್ಬಗಳೊಂದಿಗೆ ಹೆಚ್ಚುವರಿಯಾಗಿ ಕೆಲವು ಹಬ್ಬಗಳನ್ನು ಸೇರ್ಪಡೆಗೊಳಿಸುವ ಬಗ್ಗೆ ಎಂಬ ವಿಷಯವನ್ನು ಒ...