ಹೈದರಾಬಾದ್ ಕರ್ನಾಟಕ ಪ್ರದೇಶ

ಹೈದರಾಬಾದ್ ಕರ್ನಾಟಕ ಪ್ರದೇಶ
Hyderabad Karnataka

ಶನಿವಾರ, ಫೆಬ್ರವರಿ 1, 2025

ಹೊಸ ತೆರಿಗೆ ಪದ್ಧತಿ ಸ್ಲ್ಯಾಬ್ ಹೀಗಿದೆ 2025/26

 ಹೊಸ ಆದಾಯ ತೆರಿಗೆ ಸ್ಲ್ಯಾಬ್‌ ಅಡಿಯಲ್ಲಿ ವಾರ್ಷಿಕ 12.75 ಲಕ್ಷ ರೂಪಾಯಿವರೆಗೆ ಆದಾಯ ಹೊಂದಿರುವವರು ಯಾವುದೇ ತೆರಿಗೆ ಪಾವತಿಸುವಂತಿಲ್ಲ ಎಂದು ಹೇಳಿದೆ. ಈ ಮೊದಲು ಇದು 7 ಲಕ್ಷ ರೂಪಾಯಿವರೆಗೆ ಇತ್ತು, ಈಗ ಅದನ್ನು 12 ಲಕ್ಷಕ್ಕೆ ಹೆಚ್ಚಿಸಲಾಗಿದೆ.


ಹೊಸ ತೆರಿಗೆ ಪದ್ಧತಿ ಸ್ಲ್ಯಾಬ್ ಹೀಗಿದೆ


₹ 4 ಲಕ್ಷದವರೆಗೆ ಆದಾಯ ಇದ್ದರೆ ಯಾವುದೇ ತೆರಿಗೆ ಇಲ್ಲ.

₹4 ರಿಂದ ₹8 ಲಕ್ಷ ಆದಾಯ ಹೊಂದಿದ್ದರೆ 5% ತೆರಿಗೆ

₹8 ರಿಂದ ₹12 ಲಕ್ಷ ಆದಾಯ ಹೊಂದಿದ್ದರೆ 10% ತೆರಿಗೆ

₹12 ರಿಂದ ₹16 ಲಕ್ಷ ಆದಾಯ ಹೊಂದಿದ್ದರೆ 20% ತೆರಿಗೆ

₹20 ರಿಂದ ₹24 ಲಕ್ಷ ಆದಾಯ ಹೊಂದಿದ್ದರೆ 25% ತೆರಿಗೆ

₹24 ಲಕ್ಷಕ್ಕಿಂತ ಹೆಚ್ಚು ಆದಾಯ ಹೊಂದಿದ್ದ- 30% ತೆರಿಗೆ

ಹೊಸ ಪದ್ಧತಿಯಿಂದ ಎಷ್ಟು ಉಳಿತಾಯ


12 ಲಕ್ಷ ರೂಪಾಯಿವರೆಗೆ ಆದಾಯ ಹೊಂದಿರುವವರಿಗೆ ತೆರಿಗೆ ವಿನಾಯಿತಿ ನೀಡಲಾಗುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ. ಹೊಸ ತೆರಿಗೆ ಪದ್ಧತಿಯಲ್ಲಿ 12 ಲಕ್ಷ ರೂ.ಗಳ ಆದಾಯ ಹೊಂದಿರುವ ತೆರಿಗೆದಾರರು 80,000 ರೂಪಾಯಿಗಳಷ್ಟು ತೆರಿಗೆ ಪ್ರಯೋಜನವನ್ನು ಪಡೆಯುತ್ತಾರೆ. ಅಂದರೆ ಬರೋಬ್ಬರಿ 80,000 ರೂಪಾಯಿ ತೆರಿಗೆ ಹಣ ಉಳಿತಾಯವಾಗಲಿದೆ.



₹18 ಲಕ್ಷ ಆದಾಯ ಹೊಂದಿರುವ ವ್ಯಕ್ತಿಯು ಹೊಸ ತೆರಿಗೆ ಸ್ಲ್ಯಾಬ್‌ನಿಂದಾಗಿ 70,000 ರೂ.ಗಳ ತೆರಿಗೆ ಉಳಿತಾಯ ಮಾಡುತ್ತಾರೆ. ₹25 ಲಕ್ಷ ರೂಪಾಯಿವರೆಗೆ ವಾರ್ಷಿಕ ಆದಾಯ ಹೊಂದಿರುವವರಿಗೆ ಹೊಸ ತೆರಿಗೆ ಸ್ಲ್ಯಾಬ್‌ನಿಂದಾಗಿ 1,10,000 ರೂ.ಗಳ ತೆರಿಗೆ ಉಳಿತಾಯವಾಗಲಿದೆ.


10 ಲಕ್ಷ ರೂಪಾಯಿವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ನೀಡಬಹುದು ಎಂದು ನಿರೀಕ್ಷೆ ಮಾಡಲಾಗಿತ್ತಾದರೂ ಕೇಂದ್ರ ಸರ್ಕಾರ 12 ಲಕ್ಷ ರೂಪಾಯಿವರೆಗೆ ತೆರಿಗೆ ವಿನಾಯಿತಿ ಘೋಷಣೆ ಮಾಡುವ ಮೂಲಕ ಸಂಬಳದಾರರಿಗೆ, ನೌಕರರಿಗೆ, ಮಧ್ಯಮವರ್ಗದವರಿಗೆ ಭರ್ಜರಿ ಕೊಡುಗೆ ನೀಡಿದೆ.


Naveen Kumar N Oneindia

source: oneindia.com

Pension Scheme: 210 ರೂ. ಹೂಡಿಕೆ ಮಾಡಿ ತಿಂಗಳಿಗೆ 5000 ಪಡೆಯಿರಿ! 8 ಕೋಟಿ ಜನರು ನೋಂದಾಯಿಸಿಕೊಂಡಿರುವ ಬೆಸ್ಟ್‌ ಯೋಜನೆ

ಇನ್ನು ಈ ಅಟಲ್‌ ಪಿಂಚಣಿ ಯೋಜನೆಯನ್ನು (Atal Pension Yojana) ಭಾರತೀಯ ಪಿಂಚಣಿ ನಿಧಿಗಳ ನಿಯಂತ್ರಣ ಪ್ರಾಧಿಕಾರವು (PFRDA) ನಿಯಂತ್ರಿಸುತ್ತದೆ. ನಿವೃತ್ತಿ ಸಮಯದಲ್ಲಿ ಉ...