ಈ ಆದೇಶ ರಾಜ್ಯ ಸರ್ಕಾರಿ ನೌಕರರು ಹಬ್ಬದ ಮುಂಗಡ ಪಡೆಯಲು ಅಧಿಸೂಚಿಸಿರುವ ಹಬ್ಬಗಳೊಂದಿಗೆ ಹೆಚ್ಚುವರಿಯಾಗಿ ಕೆಲವು ಹಬ್ಬಗಳನ್ನು ಸೇರ್ಪಡೆಗೊಳಿಸುವ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ.
ಪ್ರಸ್ತಾವನೆ: ಸರ್ಕಾರದ ಆದೇಶಗಳ ಅನುಸಾರ ಹಬ್ಬಗಳಿಗಾಗಿ ಮುಂಗಡ ಹಣವನ್ನು ರಾಜ್ಯ ಸರ್ಕಾರಿ ನೌಕರರಿಗೆ ಮಂಜೂರು ಮಾಡಲು ನಿಗದಿಪಡಿಸಿದ ಅರ್ಜಿಯಲ್ಲಿ ಈ ಕೆಳಕಂಡ ಹಬ್ಬಗಳಿಗೆ ಮಾತ್ರ ಹಬ್ಬದ ಮುಂಗಡ ಹಣವನ್ನು ಮಂಜೂರು ಮಾಡಲಾಗುತ್ತಿದೆ.
- ಸೌರಮಾನ/ ಚಂದ್ರಮಾನ ಯುಗಾದಿ
- ಮಕರ ಸಂಕ್ರಾಂತಿ
- ದೀಪಾವಳಿ
- ಗಣೇಶ ಚತುರ್ಥಿ
- ರಂಜಾನ್
- ಬಕ್ರೀದ್
- ಈದ್-ಎ-ಮಿಲಾದ್
- ಈಸ್ಟರ್
- ಗಣತಂತ್ರ ದಿನ
- ಸ್ವಾತಂತ್ರ್ಯ ದಿನ
- ದಸರಾ
ಪ್ರಸ್ತುತ ರಾಜ್ಯ ಸರ್ಕಾರಿ ನೌಕರರು ಹಬ್ಬದ ಮುಂಗಡವನ್ನು ಪಡೆಯಲು ಅಧಿಸೂಚಿಸಿರುವ ಹಬ್ಬಗಳೊಂದಿಗೆ ಈ ಕೆಳಕಂಡ ಹಬ್ಬಗಳನ್ನು ಹೆಚ್ಚುವರಿಯಾಗಿ ಸೇರ್ಪಡೆಗೊಳಿಸಲು ಸರ್ಕಾರವು ನಿರ್ಣಯಿಸಿರುತ್ತದೆ.
- ಮಹಾ ಶಿವರಾತ್ರಿ
- ಶ್ರೀರಾಮನವಮಿ
- ವರಮಹಾಲಕ್ಮೀ ವ್ರತ
- ಮಹಾಲಯ ಅಮಾವಾಸ್ಯೆ
- ನಾಗರ ಪಂಚಮಿ
- ಕನ್ನಡ ರಾಜ್ಯೋತ್ಸವ
- ಹೋಳಿ ಹಬ್ಬ
- ಬಸವ ಜಯಂತಿ
ಆರ್ಥಿಕ ಇಲಾಖೆಯು ಈ ಪ್ರಸ್ತಾವನೆಗೆ ಅನುಮೋದನೆ ನೀಡಿರುತ್ತದೆ. ಆದ್ದರಿಂದ ಈ ಕುರಿತು ಆದೇಶವನ್ನು ಹೊರಡಿಸಲಾಗಿದೆ.
ಆದೇಶದ ವಿವರ: ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ ರಾಜ್ಯ ಸರ್ಕಾರಿ ನೌಕರರು ಹಬ್ಬದ ಮುಂಗಡವನ್ನು ಪಡೆಯಲು ಈಗಾಗಲೇ ಅಧಿಸೂಚಿಸಿರುವ ಹಬ್ಬಗಳೊಂದಿಗೆ ಈ ಕೆಳಕಂಡ ಹಬ್ಬಗಳನ್ನು ಹೆಚ್ಚುವರಿಯಾಗಿ ಸೇರ್ಪಡೆಗೊಳಿಸಿ ಆದೇಶಿಸಲಾಗಿದೆ.
- ಮಹಾಶಿವರಾತ್ರಿ
- ಶ್ರೀರಾಮನವಮಿ
- ವರಮಹಾಲಕ್ಮೀ ವ್ರತ
- ಮಹಾಲಯ ಅಮಾವಾಸ್ಯೆ
- ನಾಗರ ಪಂಚಮಿ
- ಕನ್ನಡ ರಾಜ್ಯೋತ್ಸವ
- ಹೋಳಿ ಹಬ್ಬ
- ಬಸವ ಜಯಂತಿ
ಕರ್ನಾಟಕ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ. ಸುಧಾಕರ್ ರಾವ್ ಅಧ್ಯಕ್ಷತೆಯಲ್ಲಿ ಕರ್ನಾಟಕ ಸರ್ಕಾರ ರಚನೆ ಮಾಡಿದ್ದ 7ನೇ ವೇತನ ಆಯೋಗ ತನ್ನ ವರದಿಯಲ್ಲಿ ಹಬ್ಬದ ಮುಂಗಡದ ಕುರಿತು ಪ್ರಸ್ತಾಪವನ್ನು ಮಾಡಿತ್ತು.
ವರದಿಯಲ್ಲಿ ಸರ್ಕಾರವು ಇತ್ತೀಚಿಗೆ ಹಬ್ಬದ ಮುಂಗಡವನ್ನು 10,000 ರೂ.ನಿಂದ 25,000 ರೂ.ಗಳಿಗೆ ಹೆಚ್ಚಿಸಿರುವುದನ್ನು ಆಯೋಗವು ಗಮನಿಸಿದೆ. ಈ ಮುಂಗಡವು ಬಡ್ಡಿ ರಹಿತವಾಗಿದ್ದು, 10 ತಿಂಗಳ ಕಂತುಗಳಲ್ಲಿ ಮರು ಪಾವತಿಸಬೇಕಾಗುತ್ತದೆ.
ಈ ಮುಂಗಡವನ್ನು ಇತ್ತೀಚಿಗಷ್ಟೆ ಪರಿಷ್ಕರಿಸಿರುವ ಅಂಶವನ್ನು ಪರಿಗಣಿಸಿ ಇದರಲ್ಲಿ ಯಾವುದೇ ಬದಲಾವಣೆಯ ಅಗತ್ಯವಿಲ್ಲವೆಂದು ಆಯೋಗವು ಅಭಿಪ್ರಾಯಪಡುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿತ್ತು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
thanks for comment