ಪುಟಗಳು

ಪುಟಗಳು

ಪುಟಗಳು

ಪುಟಗಳು

ಭಾನುವಾರ, ಜನವರಿ 11, 2026

EPFO

ಅದೇ ನಿರೀಕ್ಷೆ, ಕುತೂಹಲಗಳು ಈ ಬಾರಿಯ ಬಜೆಟ್‌ನಲ್ಲೂ ಇದೆ. ಸಂಬಳ ಪಡೆಯುವ ಹಲವು ಉದ್ಯೋಗಿಗಳಿಗೆ, ಉದ್ಯೋಗಿಗಳ ಭವಿಷ್ಯ ನಿಧಿ (EPF) ನಿವೃತ್ತಿ ಉಳಿತಾಯಕ್ಕೆ ಬಹಳಷ್ಟು ಸಹಕಾರಿಯಾಗಿದೆ. ಉದ್ಯೋಗಿ ಮತ್ತು ಉದ್ಯೋಗದಾತ (ಕಂಪನಿ) ಇಬ್ಬರೂ ತಮ್ಮ ಸಂಬಳದ ಒಂದು ಭಾಗವನ್ನು ಈ ನಿಧಿಗೆ ಜಮಾ ಮಾಡುತ್ತಾರೆ, ಇದಕ್ಕೆ ವಾರ್ಷಿಕ ಬಡ್ಡಿ ಕೂಡಾ ಸಿಗುತ್ತದೆ. ಹಿಂದೆ ಸಂಪೂರ್ಣ ಬಡ್ಡಿ ತೆರಿಗೆ-ಮುಕ್ತವಾಗಿತ್ತು. ಆದರೆ, 2021ರ ಬಜೆಟ್‌ನಲ್ಲಿ ನಿಯಮಗಳು ಬದಲಾದ ನಂತರ ಹಲವರಲ್ಲಿ ಈ ಬಗ್ಗೆ ಗೊಂದಲ ಸೃಷ್ಟಿಯಾಗಿದೆ. ಅಂದರೆ, ಬಹುತೇಕರು EPF ಮೇಲಿನ ಎಲ್ಲಾ ಬಡ್ಡಿ ತೆರಿಗೆ-ಮುಕ್ತ ಎಂದು ಈಗಲೂ ಅನೇಕರು ತಪ್ಪಾಗಿ ಭಾವಿಸಿದ್ದಾರೆ, ಆದರೆ ವಾಸ್ತವ ಹಾಗಿಲ್ಲ. ಅದರಲ್ಲೂ ಒಂದು ಟ್ವಿಸ್ಟ್‌ ಇದೆ.

EPF ಆದಾಯ ಸಂಪೂರ್ಣವಾಗಿ ತೆರಿಗೆ-ಮುಕ್ತ ಎಂಬುದು ಕಲ್ಪನೆ ತಪ್ಪಾಗಿದೆ. ಏಕೆಂದರೆ ಅದಕ್ಕೆ ಕಾರಣವೂಇದೆ. ಕನಿಷ್ಠ ಎರಡು ಸಂದರ್ಭಗಳಲ್ಲಿ EPF ಸದಸ್ಯರು ಗಳಿಸಿದ ಬಡ್ಡಿಯ ಮೇಲೆ ತೆರಿಗೆ ಪಾವತಿಸಬೇಕಾಗುತ್ತದೆ. ಮೊದಲನೆಯದಾಗಿ, ವಾರ್ಷಿಕ ಕೊಡುಗೆ ₹2.5 ಲಕ್ಷವನ್ನು ಮೀರಿದರೆ, ಈ ಮಿತಿಯನ್ನು ಮೀರಿದ ಯಾವುದೇ ಕೊಡುಗೆಯಿಂದ ಗಳಿಸಿದ ಬಡ್ಡಿಯು ತೆರಿಗೆಗೆ ಒಳಪಡುತ್ತದೆ.

ಎರಡನೆಯದಾಗಿ, ನಿವೃತ್ತಿಯ ನಂತರ ನಿಮ್ಮ ಭವಿಷ್ಯ ನಿಧಿ ಖಾತೆಯಲ್ಲಿನ ಬಾಕಿ ಮೊತ್ತದ ಮೇಲೆ ಬಡ್ಡಿ ಜಮಾ ಆದಾಗ ತೆರಿಗೆ ಅನ್ವಯಿಸುತ್ತದೆ. ಹಲವು ಸದಸ್ಯರು ನಿವೃತ್ತಿಯಾದ ತಕ್ಷಣ ತಮ್ಮ ಸಂಪೂರ್ಣ EPF ಬಾಕಿಯನ್ನು ಹಿಂಪಡೆಯುವುದಿಲ್ಲ. ನಿವೃತ್ತಿಯ ನಂತರ EPF ಬಾಕಿ ಹಣದ ಮೇಲೆ ತೆರಿಗೆ ಇಲ್ಲದಿರಬಹುದು, ಆದರೆ ಆ ಬಾಕಿ ಹಣದ ಮೇಲೆ ಬರುವ ಬಡ್ಡಿ ತೆರಿಗೆಗೆ ಒಳಪಡುತ್ತದೆ.

ಹಣಕಾಸು ತಜ್ಞರ ಬೇಡಿಕೆಯೇನು?

2026ರ ಕೇಂದ್ರ ಬಜೆಟ್ ಸಮೀಪಿಸುತ್ತಿದ್ದಂತೆ, ಬಾಂಬೆ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (BCCI) ಯ ತೆರಿಗೆ ತಜ್ಞರು ಹಣಕಾಸು ಸಚಿವಾಲಯದಿಂದ ಒಂದು ಪ್ರಮುಖ ಬದಲಾವಣೆಯನ್ನು ನಿರೀಕ್ಷಿಸಿದ್ದಾರೆ. ನಿವೃತ್ತಿಯ ನಂತರ EPF ಖಾತೆಯಲ್ಲಿ ಸಂಗ್ರಹವಾಗುವ ಬಡ್ಡಿಯನ್ನು ತೆರಿಗೆ-ಮುಕ್ತಗೊಳಿಸುವಂತೆ ಸರ್ಕಾರಕ್ಕೆ ಮನವಿಯನ್ನೂ ಮಾಡಿದ್ದಾರೆ.

ಪ್ರಸ್ತುತ ನಿಯಮಗಳ ಪ್ರಕಾರ, ನಿವೃತ್ತಿಯ ನಂತರ EPF ಬಾಕಿ ಹಣದ ಮೇಲೆ ಗಳಿಸಿದ ಬಡ್ಡಿಯು ತೆರಿಗೆಗೆ ಒಳಪಡುತ್ತದೆ. EPFO ನಿಯಮಗಳ ಪ್ರಕಾರ, ನಿವೃತ್ತಿಯಲ್ಲಿ ಮಾನ್ಯತೆ ಪಡೆದ ಭವಿಷ್ಯ ನಿಧಿಯ ಜಮಾ ಬಾಕಿಯು ವಿಭಾಗ 10(12) ರ ಅಡಿಯಲ್ಲಿ ತೆರಿಗೆ-ಮುಕ್ತವಾಗಿದೆ.

ನಿವೃತ್ತಿಯ ನಂತರ ಮೂರು ವರ್ಷಗಳವರೆಗೆ ನಿಮ್ಮ EPF ಖಾತೆಯಲ್ಲಿ ಹಣವನ್ನು ಇಡಲು ಅನುಮತಿಯಿದೆ. ಆದರೆ, ಈ ಅವಧಿಯಲ್ಲಿ EPF ಬಾಕಿ ಹಣದ ಮೇಲೆ ಗಳಿಸಿದ ಬಡ್ಡಿಯು ಸಾಮಾನ್ಯ ಆದಾಯದಂತೆ ತೆರಿಗೆಗೆ ಒಳಪಡುತ್ತದೆ. ಆದ್ದರಿಂದ ಈಗ ಇರುವ ಪ್ರಶ್ನೆ ನಿವೃತ್ತಿ ನಂತರ ಇಪಿಎಫ್‌ ಖಾತೆಗೆ ಬರುವ ಬಡ್ಡಿಯ ಮೇಲೆ ತೆರಿಗೆ ಅನ್ವಯವಾಗುತ್ತಾ? ಅಥವಾ ಬಜೆಟ್‌ನಲ್ಲಿ ತೆರಿಗೆ ಮುಕ್ತ ಮಾಡುತ್ತಾ ಎಂಬುದು.

(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited ನ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

thanks for comment